` anupama parameshwara, - chitraloka.com | Kannada Movie News, Reviews | Image

anupama parameshwara,

 • ಅಪ್ಪುಗೆ ರಚಿತಾ ಜೊತೆ ಅನುಪಮಾ ಕೂಡಾ ಜೋಡಿ..!

  natasarvabhowma gets his second heroine

  ಪುನೀತ್ ರಾಜ್‍ಕುಮಾರ್, ಪವನ್ ಒಡೆಯರ್ ಹಾಗೂ ರಾಕ್‍ಲೈನ್ ವೆಂಕಟೇಶ್ ಕಾಂಬಿನೇಷನ್‍ನ ಸಿನಿಮಾ ನಟಸಾರ್ವಭೌಮ. ಚಿತ್ರದ ಶೂಟಿಂಗ್ ಈಗಾಗಲೇ ಬಿರುಸಿನಿಂದ ನಡೆಯುತ್ತಿದೆ. ಚಿತ್ರದ ನಾಯಕಿ ರಚಿತಾ ರಾಮ್. ಚಿತ್ರಕ್ಕೆ ಇನ್ನೊಬ್ಬ ನಾಯಕಿ ಬರಲಿದ್ದಾರೆ ಎಂಬ ಸುದ್ದಿಯಿತ್ತು. ಅದೀಗ ಅಧಿಕೃತ. ಅಪ್ಪುಗೆ ಜೋಡಿಯಾಗುತ್ತಿರುವ ಇನ್ನೊಬ್ಬ ಹುಡುಗಿ ಮಲೆಯಾಳಿ ಅನುಪಮಾ ಪರಮೇಶ್ವರನ್.

  ಮಲಯಾಳಂನ ಸೂಪರ್ ಡ್ಯೂಪರ್ ಹಿಟ್ ಸಿನಿಮಾ ಪ್ರೇಮಂ ಖ್ಯಾತಿಯ ಹುಡುಗಿ. ಚಿತ್ರದಲ್ಲಿ ಅವರದ್ದು ಜೂನಿಯರ್ ಲಾಯರ್ ಪಾತ್ರವಂತೆ. ಚಿತ್ರದ ಕಥೆ ಕೇಳಿ ಇಷ್ಟಪಟ್ಟಿದ್ದಾರಂತೆ. ರಚಿತಾ ರಾಮ್ ಇದ್ದರೂ, ಇಬ್ಬರ ಪಾತ್ರಗಳಿಗೂ ಅಭಿನಯಕ್ಕೆ ಅವಕಾಶವಿದೆ. ಪ್ರಾಧಾನ್ಯತೆಯೂ ಇದೆ ಎಂದಿದ್ದಾರೆ ಪವನ್ ಒಡೆಯರ್.

  ಪುನೀತ್ ರಾಜ್‍ಕುಮಾರ್ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿಯಾಗುತ್ತಿದ್ದೇನೆ. ಪುನೀತ್ ಅವರ ಬಗ್ಗೆ ಕೇಳಿ ತಿಳಿದಿದ್ದೇನೆ. ಅವಾರ್ಡ್ ಫಂಕ್ಷನ್‍ಗಳಲ್ಲಿ ನೋಡಿದ್ದೇನೆ. ಸದ್ಯಕ್ಕಂತೂ ಥ್ರಿಲ್ ಆಗಿದ್ದೇನೆ ಎಂದು ಹೇಳಿಕೊಂಡಿರೋದು ಅನುಪಮಾ.

  ಅಗ್ರಿಮೆಂಟ್‍ಗೆ ಇನ್ನೂ ಸೈನ್ ಆಗಿಲ್ಲ. ಆದರೆ, ನಟಿಸೋದು ಹೆಚ್ಚೂ ಕಡಿಮೆ ಪಕ್ಕಾ ಆಗಿದೆ. 

 • ನಟಸಾರ್ವಭೌಮನ ನಾಯಕಿಗೆ ಇದೆಂಥಾ ಚಿತ್ರಹಿಂಸೆ..?

  anupama parameswaran slams hackers

  ಅನುಪಮಾ ಪರಮೇಶ್ವರನ್, ಪುನೀತ್ ರಾಜ್ ಕುಮಾರ್‍ಗೆ ನಟಸಾರ್ವಭೌಮ ಚಿತ್ರದಲ್ಲಿ ಜೋಡಿಯಾಗಿದ್ದವರು. ಕನ್ನಡಿಗರು ಆಕೆಯ ನಗು, ಕನ್ನಡಕದೊಳಗಿನ ಗಾಂಭೀರ್ಯಕ್ಕೇ ಶರಣಾಗಿಬಿಟ್ಟಿದ್ದರು. ಈಗ ಆ ನಟಿ ತಮ್ಮ ಮಾನ ರಕ್ಷಣೆಗಾಗಿ ಪೊಲೀಸರ ಮೊರೆ ಹೋಗುವಂತಾಗಿದೆ. ಆಗಿರೋದು ಇಷ್ಟು..

  ಯಾರೋ ಒಂದಿಷ್ಟು ವಿಕೃತ ಮನಸ್ಸಿನ ವ್ಯಕ್ತಿಗಳು ಅನುಪಮಾ ಪರಮೇಶ್ವರನ್ ಅವರ ಸೋಷಿಯಲ್ ಮೀಡಿಯಾ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ. ಅಷ್ಟೇ ಅಲ್ಲ, ಯಾವ್ಯಾವುದೋ ನಗ್ನ, ಅರೆನಗ್ನ ಫೋಟೋಗಳಿಗೆ ಅನುಪಮಾ ಅವರ ಮುಖವನ್ನು ಹೊಂದಿಸಿ ಪೋಸ್ಟ್ ಕೂಡಾ ಮಾಡಿದ್ದಾರೆ. ಸಹಜವಾಗಿಯೇ ಅನುಪಮಾ ಆತಂಕಕ್ಕೊಳಗಾಗಿದ್ದಾರೆ.

  ನೇರವಾಗಿ ಪೊಲೀಸರಿಗೆ ದೂರು ಕೊಟ್ಟು, ತಮ್ಮ ಖಾತೆಯಲ್ಲಿ ತಮ್ಮ ಅಕೌಂಟ್ ಹ್ಯಾಕ್ ಆಗಿತ್ತು ಎನ್ನುವುದನ್ನೂ ತಿಳಿಸಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery