ಮೈಸೂರು ಮಸಾಲ. ಅನಂತ್‍ನಾಗ್, ಶರ್ಮಿಳಾ ಮಾಂಡ್ರೆ ಅಭಿನಯಿಸುತ್ತಿರುವ ಸೈನ್ಸ್ ಫಿಕ್ಷನ್. ಕನ್ನಡದಲ್ಲಿ ಸೈನ್ಸ್ ಫಿಕ್ಷನ್ ಸಿನಿಮಾಗಳು ಬಂದಿರುವುದೇ ಅಪರೂಪ. ಅಂತಾದ್ದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ ನಿರ್ದೇಶಕ ಅಜಯ್ ಸರ್ಪೇಶ್ವರ್.
ಚಿತ್ರದಲ್ಲಿ ಹಾರುವ ತಟ್ಟೆಗಳೂ ಇರುತ್ತವಂತೆ. ಹಾರುವ ತಟ್ಟೆಗಳ ಬಗ್ಗೆ ವಿಜ್ಞಾನದ ಬಗ್ಗೆ ಕುತೂಹಲ ಹೊಂದಿರುವ ಪ್ರತಿಯೊಬ್ಬರಿಗೂ ಅರಿವಿದೆ. ಅವು ನಿಜವೋ ಸುಳ್ಳೋ ಎನ್ನುವುದೇ ಗೊತ್ತಿಲ್ಲ. ಹೀಗಿರುವಾಗ ಅದನ್ನಿಟ್ಟುಕೊಂಡು ಸಿನಿಮಾ ಮಾಡೊಕೆ ಹೊರಟಿದ್ದಾರೆ ಅಜಯ್.
ಅಮೆರಿಕದಲ್ಲಿ ಇಂಜಿನಿಯರ್ ಆಗಿರುವ ಅಜಯ್ ಸರ್ಪೇಶ್ವರ್, ಈ ಸಿನಿಮಾ ಮಾಡಲೆಂದೇ ಕರ್ನಾಟಕಕ್ಕೆ ಬಂದಿಳಿದಿರುವುದು ವಿಶೇಷ. ಚಿತ್ರಕ್ಕೆ ಅಮೆರಿಕದವರೇ ಆದ ಜೆಸ್ಸಿ ಕ್ಲಿಂಟನ್ ಎಂಬುವವರು ಸಂಗೀತ ನೀಡುತ್ತಿದ್ದಾರೆ. ನಮ್ಮ ಸಿನಿಮಾಗೆ ಪಾಶ್ಚಾತ್ಯ ಶೈಲಿಯ ಮ್ಯೂಸಿಕ್ ಬೇಕು ಎಂದಿದ್ದಾರೆ ಅಜಯ್. ಚಿತ್ರದಲ್ಲಿ ಸೈನ್ಸ್, ಫಿಕ್ಷನ್, ಡ್ರಾಮಾ, ಅಡ್ವೆಂಚರ್ ಹಾಗೂ ಥ್ರಿಲ್ಲರ್ ಎಲ್ಲವೂ ಇರುತ್ತದಂತೆ.