` tharun sudhir, - chitraloka.com | Kannada Movie News, Reviews | Image

tharun sudhir,

  • ರಾಬರ್ಟ್ ವಿಜಯಯಾತ್ರೆಗೆ ಕೊರೊನಾ ಬ್ರೇಕ್

    ರಾಬರ್ಟ್ ವಿಜಯಯಾತ್ರೆಗೆ ಕೊರೊನಾ ಬ್ರೇಕ್

    ಎಲ್ಲವೂ ಪ್ಲಾನ್ ಪ್ರಕಾರವೇ ಆಗಿದ್ದರೆ, ಇಂದಿನಿಂದ ರಾಬರ್ಟ್ ವಿಜಯಯಾತ್ರೆ ಶುರುವಾಗಬೇಕಿತ್ತು. ಬಾಕ್ಸಾಫೀಸ್‍ನಲ್ಲಿ ದೂಳೆಬ್ಬಿಸಿರುವ ರಾಬರ್ಟ್ ವಿಜಯಯಾತ್ರೆಗೆ ಎಲ್ಲ ತಯಾರಿಯನ್ನೂ ಮಾಡಿಕೊಂಡಿದ್ದ ಚಿತ್ರತಂಡ, ಕಡೆಯ ಗಳಿಗೆಯಲ್ಲಿ ವಿಜಯಯಾತ್ರೆಯನ್ನು ರದ್ದು ಮಾಡಿದೆ.

    ಹೆಚ್ಚು ಜನ ಸೇರಬಾರದು, ಕೊರೊನಾ ಹೆಚ್ಚುತ್ತಿದೆ. ದಯವಿಟ್ಟು ಜಾಗ್ರತೆಯಿಂದಿರಿ ಎಂಬ ಸರ್ಕಾರದ ಮನವಿಯೇ ಈ ವಿಜಯಯಾತ್ರೆ ನಿಲ್ಲಲು ಕಾರಣ. ಕೊರೊನಾ 2ನೇ ಅಲೆಯ ತೀವ್ರತೆ ಕಡಿಮೆಯಾದ ಮೇಲೆ ವಿಜಯಯಾತ್ರೆ ಮಾಡೋಣ ಎಂದು ಹೇಳಿದ್ದಾರೆ ದರ್ಶನ್. ಯಾವಾಗ ಮಾಡಿದರೇನು.. ದರ್ಶನ್ ಎಂಟ್ರಿ ಕೊಟ್ಟ ಕ್ಷಣ.. ಜಾತ್ರೆ ಶುರು. ವೇಯ್ಟಿಂಗ್ ಎನ್ನುತ್ತಿದ್ದಾರೆ ಡಿ ಫ್ಯಾನ್ಸ್.

  • ರಾಬರ್ಟ್ ಸಾಂಗ್ ಶೂಟಿಂಗ್ ಈಗ ಎಲ್ಲಿ ಗೊತ್ತಾ..?

    roberrt song shoot location hunt in india itself

    2020ರ ಸೆನ್ಸೇಷನ್ ಆಗಲಿರುವ ಸಿನಿಮಾ ರಾಬರ್ಟ್. ಏಪ್ರಿಲ್ 9ಕ್ಕೆ ರಿಲೀಸ್ ಡೇಟ್ ಅನೌನ್ಸ್ ಮಾಡಿರುವ ರಾಬರ್ಟ್ ಟೀಂ, ಈಗ ಚಿತ್ರದ ಬಹುಮುಖ್ಯ ಹಾಡಿನ ಶೂಟಿಂಗ್‍ಗೆ ಗುಜರಾತ್‍ನತ್ತ ಹೊರಟಿದೆ.

    ಹಾಡಿಗಾಗಿ ವಿದೇಶಕ್ಕೆ ಹೋಗಬೇಕಿದ್ದ ರಾಬರ್ಟ್ ಟೀಂ, ಕೊರೋನಾ ವೈರಸ್ ಕಾರಣದಿಂದಾಗಿ ಶೂಟಿಂಗ್ ಕ್ಯಾನ್ಸಲ್ ಮಾಡಿತ್ತು. ಸದ್ಯಕ್ಕೆ ಕೊರೋನಾ ರಿಲ್ಯಾಕ್ಸ್ ನೀಡದ ಹಿನ್ನೆಲೆ ಲೊಕೇಷನ್ ಶಿಫ್ಟ್ ಮಾಡಿದ್ದಾರೆ ನಿರ್ದೇಶಕ ತರುಣ್ ಸುಧೀರ್.


    ರಾಬರ್ಟ್ ಚಿತ್ರದ ರೊಮ್ಯಾಂಟಿಕ್ ಸಾಂಗ್ ಶೂಟಿಂಗ್ ಗುಜರಾತ್‍ನ ಕಛ್ ಪ್ರದೇಶದಲ್ಲ ನಡೆಯಲಿದೆಯಂತೆ. ದರ್ಶನ್ ಎದುರು ಆಶಾ ಭಟ್ ನಾಯಕಿ. ಸೋನಲ್ ಮಂಥೆರೋ ಕೂಡಾ ಚಿತ್ರದಲ್ಲಿದ್ದಾರೆ. ರೊಮ್ಯಾಂಟಿಕ್ ಸಾಂಗ್ ಜೋಡಿ ಯಾರು..? ಸಸ್ಪೆನ್ಸ್.. ಸಸ್ಪೆನ್ಸ್..

  • ರಾಬರ್ಟ್ ಸೀಕ್ರೆಟ್ ಹಿಂದೆ ಉಪ್ಪಿ ಟೆಕ್ನಿಕ್..!

    uppi's trick in roberrt movie

    ರಾಬರ್ಟ್ ಸಿನಿಮಾದ ಟಾಕಿ ಪೋರ್ಷನ್ ಶೂಟಿಂಗ್ ಮುಗಿದಿದೆ. ಇದು ತರುಣ್ ಸುಧೀರ್ ನಿರ್ದೇಶನದ 2ನೇ ಸಿನಿಮಾ. ಚೌಕ ಚಿತ್ರದ ನಂತರ ತರುಣ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ದರ್ಶನ್ ಅವರೇ ಹೀರೋ. ಮೊದಲ ಚಿತ್ರದಲ್ಲಿ ರಾಬರ್ಟ್ ಎಂಬ ಪಾತ್ರದ ಮೂಲಕವೇ ಅತಿಥಿ ನಟರಾಗಿದ್ದ ದರ್ಶನ್, ಈಗ ಅದೇ ಹೆಸರಿನ ಚಿತ್ರದಲ್ಲಿ ಹೀರೋ ಆಗಿರುವುದು ವಿಶೇಷ. ಆದರೆ, ಎಲ್ಲದಕ್ಕಿಂತ ಕುತೂಹಲ ಹುಟ್ಟಿಸಿರುವುದು ಚಿತ್ರದ ಕಥೆ ಏನಿರಬಹುದು ಅನ್ನೋದು.

    ಏಕೆಂದರೆ ಇದುವರೆಗೆ ತರುಣ್ ಹೊರಬಿಟ್ಟಿರೋದು ಎರಡೇ ಎರಡು ಪೋಸ್ಟರ್. ಕಳೆದ ದೀಪಾವಳಿಗೆ ಆಂಜನೇಯ ರಾಮಲಕ್ಷ್ಮಣರನ್ನು ಹೊತ್ತುಕೊಂಡು ಹೋಗುತ್ತಿದ್ದ ಪೋಸ್ಟರ್ ಇದ್ದರೆ, 2ನೇ ಪೋಸ್ಟರ್‍ನಲ್ಲಿ ಬೈಕ್ ಮೇಲೆ ಹೋಗುತ್ತಿದ್ದ ದರ್ಶನ್ ಫೋಟೋ ಇತ್ತು. ಅಲ್ಲಿಯೂ ಅಷ್ಟೆ, ದರ್ಶನ್ ಮುಖ ದರ್ಶನ ಮಾಡಿಸಿಲ್ಲ. ಸಿಂಪಲ್ಲಾಗ್ ಹೇಳ್ಬೇಕಂದ್ರೆ, ರಾಬರ್ಟ್‍ನಲ್ಲಿ ದರ್ಶನ್ ಹೇಗಿದ್ದಾರೆ ಅನ್ನೋದು ತಾಜಾ ತಾಜಾ ಸೀಕ್ರೆಟ್ ಆಗಿಯೇ ಇದೆ. ಇದರ ಹಿಂದಿರೋದು ಏನು ಎಂದರೆ ತರುಣ್ ಸುಧೀರ್ ಉಪೇಂದ್ರ ಸ್ಟೈಲ್ ನೆನಪಿಸಿಕೊಳ್ತಾರೆ.

    ಉಪೇಂದ್ರ ಚಿತ್ರಗಳಲ್ಲಿ ಟೈಟಲ್ ಮತ್ತು ಪೋಸ್ಟರ್‍ಗಳು ಅತ್ಯಂತ ಪ್ರಧಾನ ಪಾತ್ರ ವಹಿಸಿದ್ದವು. ನಮಗೆ ಅದು ಕುತೂಹಲ ಹೆಚ್ಚಿಸುತ್ತಿತ್ತು. ಪೋಸ್ಟರ್ ನೋಡಿದ ಒಬ್ಬ ವ್ಯಕ್ತಿ, ಅ ಪೋಸ್ಟರ್ ಬಗ್ಗೆ 10 ಸೆಕೆಂಡ್ ತಲೆಕೆಡಿಸಿಕೊಂಡರೆ ಸಾಕು, ನಮ್ಮ ಶ್ರಮ ಮತ್ತು ಉದ್ದೇಶ ಸಾಥಕ ಎನ್ನುತ್ತಾರೆ ತರುಣ್.

    ಅಂದಹಾಗೆ.. ಉಪೇಂದ್ರ ಅವರ ಎ, ಉಪೇಂದ್ರ, ಸೂಪರ್, ಉಪ್ಪಿ 2 ಚಿತ್ರಗಳ ಪೋಸ್ಟರ್ ಅದೆಷ್ಟು ಕುತೂಹಲ ಹುಟ್ಟಿಸಿದ್ದವು ಎನ್ನುವುದು ಕನ್ನಡ ಚಿತ್ರರಸಿಕರಿಗೆ ಅರಿವಿದೆ. ಈಗ ಆ ಹಾದಿಯಲ್ಲಿ ರಾಬರ್ಟ್ ಮುನ್ನುಗ್ಗುತ್ತಿದೆ. ನಿಗೂಢಗಳ ಗಂಟುಮೂಟೆಗಳೊಂದಿಗೆ..

  • ರಾಬರ್ಟ್ ಸೃಷ್ಟಿಸಿದ ಹೊಸ ದಾಖಲೆ 78 ಕೋಟಿ..!

    ರಾಬರ್ಟ್ ಸೃಷ್ಟಿಸಿದ ಹೊಸ ದಾಖಲೆ 78 ಕೋಟಿ..!

    ರಾಬರ್ಟ್ ರಿಲೀಸ್ ಆಗೋಕು ಮುನ್ನವೇ ಹೊಸ ಹೊಸ ದಾಖಲೆಗಳನ್ನು ಬರೆದು ಮುನ್ನುಗ್ಗುತ್ತಿದೆ. ರಾಬರ್ಟ್ ಚಿತ್ರದ ಟ್ರೇಲರ್, ಹಾಡುಗಳು ಕನ್ನಡ ಮತ್ತು ತೆಲುಗಿನಲ್ಲಿ ಹೊಸ ಚರಿತ್ರೆಯನ್ನೇ ಬರೆಯುತ್ತಿವೆ. ಹೆಚ್ಚೂ ಕಡಿಮೆ 2 ಸಾವಿರ ಥಿಯೇಟರ್ಗಳಲ್ಲಿ ರಿಲೀಸ್ ಆಗೋಕೆ ಸಿದ್ಧವಾಗಿರುವ ರಾಬರ್ಟ್, ಈಗ ಬಿಡುಗಡೆಗೂ ಮೊದಲೇ ಹೊಸ ದಾಖಲೆ ಬರೆದಿದೆ.

    ರಾಬರ್ಟ್ ಚಿತ್ರದ ಕರ್ನಾಟಕದ ಡಿಸ್ಟ್ರಿಬ್ಯೂಷನ್ ರೈಟ್ಸ್ 78 ಕೋಟಿಗೆ ಮಾರಾಟವಾಗಿದೆಯಂತೆ. ಕೆಜಿಎಫ್ ನಂತರ ಅತೀ ಹೆಚ್ಚು ಮೊತ್ತಕ್ಕೆ ಮಾರಾಟವಾದ ದಾಖಲೆಗೀಗ ದರ್ಶನ್ ಅವರ ರಾಬರ್ಟ್ ಪಾತ್ರವಾಗಿದೆ. ದರ್ಶನ್ ಅವರ ಈ ಹಿಂದಿನ ಕುರುಕ್ಷೇತ್ರದ ದಾಖಲೆಯನ್ನೂ ರಾಬರ್ಟ್ ಬ್ರೇಕ್ ಮಾಡಿದೆ.

    ನಿರ್ಮಾಪಕ ಉಮಾಪತಿ ನಮ್ಮ ಚಿತ್ರದ ಹೀರೋ ಎನ್ನುತ್ತಿದ್ದರು ದರ್ಶನ್. ನಿರ್ದೇಶಕ ತರುಣ್ ಸುಧೀರ್ ಕೂಡಾ ಇದೇ ಮಾತು ಹೇಳಿದ್ದರು. ಹೀಗಾಗಿ ರಾಬರ್ಟ್ ಚಿತ್ರದ ರಿಯಲ್ ಹೀರೋ ಬಿಡಗಡೆಗೂ ಮೊದಲೇ ಫುಲ್ ಹ್ಯಾಪಿ.

  • ರಾಬರ್ಟ್‍ಗಾಗಿ ಅನ್ನ ಬಿಟ್ಟ ದರ್ಶನ್

    darshan on strict diet for robert

    ರಾಬರ್ಟ್ ಚಿತ್ರ ಶುರುವಾಗಿದೆ. ದರ್ಶನ್, ತರುಣ್ ಸುಧೀರ್, ಉಮಾಪತಿ ಕಾಂಬಿನೇಷನ್ನಿನ ಸಿನಿಮಾ ಇದು. ಒಂದೇ ಒಂದು ಪೋಸ್ಟರ್‍ನಿಂದ ಸಂಚಲನ ಸೃಷ್ಟಿಸಿದ್ದ ತರುಣ್, ಚಿತ್ರದ ಚಿತ್ರೀಕರಣಕ್ಕೆ ಭರ್ಜರಿಯಾಗಿ ರೆಡಿಯಾಗಿದ್ದಾರೆ.

    ಕಥೆ, ದರ್ಶನ್ ಅವರಿಗೆ ಹೇಳಿ ಮಾಡಿಸಿದ ಹಾಗಿದೆ ಎಂದಿರೋ ತರುಣ್, ಚಿತ್ರದ ಕಥೆ, ಚಿತ್ರಕಥೆಗಾಗಿ 2 ವರ್ಷ ಸಮಯ ತೆಗೆದುಕೊಂಡಿದ್ದಾರೆ. ದರ್ಶನ್ ಕೂಡಾ ಪಾತ್ರಕ್ಕಾಗಿ ತಯಾರಿ ಆರಂಭಿಸಿದ್ದು, ಅದರ ಮೊದಲ ಹಂತವಾಗಿ ಅನ್ನವನ್ನು ತ್ಯಾಗ ಮಾಡಿದ್ದಾರೆ. ಫಿಟ್‍ನೆಸ್ ಮುಖ್ಯ.

    ಇನ್ನು ಚಿತ್ರಕ್ಕೆ ಹೀರೋಯಿನ್ ಐಶ್ವರ್ಯಾ ರೈ ಎಂಬ ಅಂತೆಕಂತೆಗಳನ್ನೆಲ್ಲ ಒಂದೇ ಏಟಿಗೆ ತಳ್ಳಿ ಹಾಕಿದೆ ಚಿತ್ರತಂಡ. 

  • ರಾಬರ್ಟ್‍ಗೆ ತೊಂದರೆ ಇಲ್ಲ ; ದ.ಭಾ. ಫಿಲಂ ಚೇಂಬರ್

    ರಾಬರ್ಟ್‍ಗೆ ತೊಂದರೆ ಇಲ್ಲ ; ದ.ಭಾ. ಫಿಲಂ ಚೇಂಬರ್

    ರಾಬರ್ಟ್ ಚಿತ್ರವನ್ನು ಮಾರ್ಚ್ 11ರಂದು ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ರಿಲೀಸ್ ಮಾಡಬೇಕು. ಆದರೆ ಡೇಟ್ ಘೋಷಿಸಿದ ನಂತರ ತೆಲುಗು ಚಿತ್ರಗಳಿಗಾಗಿ ರಾಬರ್ಟ್ ಮುಂದೂಡಲು ಹೇಳುತ್ತಿದ್ದಾರೆ. ಕನ್ನಡದಲ್ಲಿ ರಿಲೀಸ್ ಆದ ಒಂದು ವಾರದ ನಂತರ ಅಂಧ್ರ, ತೆಲಂಗಾಣದಲ್ಲಿ ರಿಲೀಸ್ ಮಾಡಬೇಕು. ಇದು ರಾಬರ್ಟ್ ಚಿತ್ರಕ್ಕೆ ಆಗುತ್ತಿರುವ ಅನ್ಯಾಯ ಎಂದು ರಾಬರ್ಟ್ ಚಿತ್ರತಂಡ ಸಿಡಿದೆದ್ದಿತ್ತು.

    ಹೆಚ್ಚೂ ಕಡಿಮೆ ಒಂದು ದಶಕದ ನಂತರ ಚೇಂಬರ್`ಗೆ ಭೇಟಿ ಕೊಟ್ಟಿದ್ದ ದರ್ಶನ್, ರಾಬರ್ಟ್ ಬಿಡುಗಡೆ ವಿವಾದ ಇತ್ಯರ್ಥಕ್ಕೆ ಮನವಿ ಮಾಡಿದ್ದರು. ಭಾನುವಾರ ಚೆನ್ನೈನಲ್ಲಿ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯಕಾರಿ ಸಮಿತಿ ಸಭೆ ಇತ್ತು. ಸಭೆಯಲ್ಲಿ ಭಾಗವಹಿಸಿದ್ದ ಕರ್ನಾಟಕ ಫಿಲಂ ಚೇಂಬರ್ ಅಧ್ಯಕ್ಷ ಜೈರಾಜ್, ಕಾರ್ಯದರ್ಶಿ ಎನ್.ಎಂ.ಸುರೇಶ್  ಹಾಗೂ ಥಾಮಸ್ ಡಿಸೋಜಾ ವಿವಾದವನ್ನು ತೆಲುಗು ವಾಣಿಜ್ಯ ಮಂಡಳಿ ಅಧ್ಯಕ್ಷರ ಗಮನಕ್ಕೆ ತಂದರು. ಮನವಿ ಸ್ವೀಕರಿಸಿದ ತೆಲುಗು ಚೇಂಬರ್ ಅಧ್ಯಕ್ಷ ಸಿ. ಕಲ್ಯಾಣ್ ರಾಬರ್ಟ್ ಚಿತ್ರಕ್ಕೆ ಯಾವುದೇ ತೊಂದರೆಯಾಗದಂತೆ ಬಿಡುಗಡೆಗೆ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ.

  • ರಾಮನವಮಿಗೆ ರಾಬರ್ಟ್ ಜೈ ಶ್ರೀರಾಮ ಹಾಡು ರಿಲೀಸ್

    roberrt song release for ramnavami

    ಈ ಕೊರೋನಾ ಒಂದು ಬರದೇ ಹೋಗಿದ್ದರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಇಷ್ಟು ಹೊತ್ತಿಗೆ ಹಬ್ಬದ ಸಿದ್ಧತೆಯಲ್ಲಿರ್ತಾ ಇದ್ರು. ಆದರೆ, ಕೊರೋನಾದಿಂದಾಗಿ ಏ.9ಕ್ಕೆ ರಿಲೀಸ್ ಆಗಬೇಕಿದ್ದ ರಾಬರ್ಟ್ ರಿಲೀಸ್ ಮುಂದಕ್ಕೆ ಹೋಗಿದೆ. ಮೇ ತಿಂಗಳಿಗೆ ರಿಲೀಸ್ ಎನ್ನುತ್ತಿದ್ದರೂ, ಅಧಿಕೃತವಾಗಿ ಘೋಷಿಸುವ ಸ್ಥಿತಿಯಲ್ಲಿ ಯಾರೂ ಇಲ್ಲ. ಇದರ ನಡುವೆಯೇ ರಾಮನವಮಿಗೆ ಭರ್ಜರಿ ಗಿಫ್ಟ್ ಕೊಡೋಕೆ ರಾಬರ್ಟ್ ಟೀಂ ರೆಡಿ.

    ಏ.1ರಂದು ರಾಬರ್ಟ್ ಚಿತ್ರದ ರಾಮ ರಾಮ ಹಾಡಿನ ಇನ್ನೊಂದು ವರ್ಷನ್ ವಿಡಿಯೋ ಸಾಂಗ್ ರಿಲೀಸ್ ಆಗುತ್ತಿದೆ. ಈಗಾಗಲೇ ಒಂದು ವರ್ಷನ್ ಹಾಡು ಬಂದಿದೆ. ಇದು ಇನ್ನೊಂದು ತುಣುಕು. ಇದರಲ್ಲಿ ಅಂಥಾ ಸ್ಪೆಷಲ್ ಏನಿದೆ..? ನಿರ್ದೇಶಕ ತರುಣ್ ಸುಧೀರ್ ಗುಟ್ಟು ಬಿಟ್ಟುಕೊಡಲ್ಲ.

    ಸ್ಸೋ.. ಏ.1ರಂದು ಕೂಡಾ ಮನೆಯಲ್ಲೇ ಇರಿ, ಯೂಟ್ಯೂಬಲ್ಲಿ ಹಾಡು ನೋಡಿ. ಜೈ ಶ್ರೀರಾಮ್ ಎಂದು ಹಾಡಿ.. ಕುಣಿದು ಕುಪ್ಪಳಿಸಿ.

  • ರಿಷಬ್ ಶೆಟ್ಟಿಗೆ ಕಾಡಿದ್ದ ಖಳನಾಯಕರಿಂದಲೇ ರಾಬರ್ಟ್‍ಗೂ  ಕಾಟ..!

    ರಿಷಬ್ ಶೆಟ್ಟಿಗೆ ಕಾಡಿದ್ದ ಖಳನಾಯಕರಿಂದಲೇ ರಾಬರ್ಟ್‍ಗೂ  ಕಾಟ..!

    ಇತ್ತೀಚೆಗಷ್ಟೇ ರಿಲೀಸ್ ಆಗಿದ್ದ ರಿಷಬ್ ಶೆಟ್ಟಿ ಅವರ ಹೀರೋ ಚಿತ್ರಕ್ಕೆ ಪೈರಸಿ ಕ್ರಿಮಿನಲ್ಸ್ ಕಾಟ ಎದುರಾಗಿತ್ತು. ಒಂದು ಲಿಂಕ್ ಡಿಲೀಟ್ ಮಾಡಿದರೆ ಮತ್ತೊಂದು ಲಿಂಕ್ನಲ್ಲಿ ಸಿನಿಮಾ ಅಪ್ಲೋಡ್ ಆಗುತ್ತಿತ್ತು.ಈ ಬಗ್ಗೆ ತಮ್ಮ ಅಸಹಾಯಕತೆ ತೋಡಿಕೊಂಡಿದ್ದರು ರಿಷಬ್ ಶೆಟ್ಟಿ. ಇದರ ನಡುವೆಯೂ ಹೀರೋ ಸಿನಿಮಾ ಥಿಯೇಟರುಗಳಲ್ಲಿ ಒಳ್ಳೆಯ ಕಲೆಕ್ಷನ್ ಕಾಣುತ್ತಿದೆ. ಆ ಪೈರಸಿ ಕ್ರಿಮಿನಲ್ಸ್ ದರ್ಶನ್ ಅಭಿನಯದ ರಾಬರ್ಟ್ ತಂಡವನ್ನೂ ಬಿಟ್ಟಿಲ್ಲ.

    ನಂಬಿದ್ರೆ ನಂಬಿ.. ಬಿಟ್ರೆ ಬಿಡಿ.. ಕೇವಲ ಒಂದೇ ದಿನದಲ್ಲಿ ರಾಬರ್ಟ್ ಟೀಂ ಡಿಲೀಟ್ ಮಾಡಿರುವ ಪೈರಸಿ ವಿಡಿಯೋ ಲಿಂಕ್ಗಳ ಸಂಖ್ಯೆ 3 ಸಾವಿರಕ್ಕೂ ಹೆಚ್ಚು. ಅತ್ತ ಥಿಯೇಟರುಗಳಲ್ಲಿ ಫಸ್ಟ್ ಡೇ ದಾಖಲೆ ಬರೆದಿರೋ ರಾಬರ್ಟ್ ಸಿನಿಮಾ ಈಗ ಪೈರಸಿ ವಿರುದ್ಧ ಸಮರವನ್ನೇ ಸಾರಿದೆ.

    ನಿರ್ಮಾಪಕ ಉಮಾಪತಿ ಒಂದು ಕಡೆ ಸಿನಿಮಾ ಸೂಪರ್ ಸಕ್ಸಸ್ ಕಂಡಿರುವ ಖುಷಿಯಲ್ಲಿದ್ದರೆ, ಮತ್ತೊಂದು ಕಡೆ ಆ ಖುಷಿಯನ್ನೂ ಮರೆತು ಪೈರಸಿ ವಿರುದ್ಧ ಹೋರಾಡಬೇಕಾಗಿ ಬಂದಿದೆ. ಆರಂಭದಲ್ಲೇ ನಿರ್ಮಾಪಕ ಉಮಾಪತಿ ಇಂತಹ ಪೈರಸಿ ಮಾಡುವವರ ವಿರುದ್ಧ ಖಡಕ್ ವಾರ್ನಿಂಗ್ ಕೊಟ್ಟಿದ್ದರು. ಆ ಎಚ್ಚರಿಕೆಗೂ ಜಗ್ಗದೆ ದುರ್ಮಾರ್ಗಕ್ಕಿಳಿದಿದ್ದಾರೆ ಪೈರಸಿ ವೀರರು.

    ಚಿತ್ರಲೋಕದ ಮನವಿಯೂ ಇಷ್ಟೆ, ಚಿತ್ರಮಂದಿರಗಳನ್ನು ಚಿತ್ರಮಂದಿರದಲ್ಲೇ ನೋಡಿ. ಆಗ ಮಾತ್ರ ಕನ್ನಡ ಚಿತ್ರರಂಗ, ಕನ್ನಡ, ಕೋಟಿ ಕೋಟಿ ಸುರಿದ ನಿರ್ಮಾಪಕ ಎಲ್ಲರೂ ಉಳಿಯುತ್ತಾರೆ. ಪೈರಸಿಯಲ್ಲಿ ನೋಡಿದರೆ ಅದರ ಲಾಭ ಯಾವನೋ ಕಣ್ಣಿಗೆ ಕಾಣದ ಕ್ರಿಮಿನಲ್ ಜೇಬು ಸೇರುತ್ತದೆ. ಅಂತಹ ತಪ್ಪು ಮಾಡಬೇಡಿ.

  • ಲಡ್ಡು ಕಾಣಿಕೆ ಗುರು ಶಿಷ್ಯರು..!

    ಲಡ್ಡು ಕಾಣಿಕೆ ಗುರು ಶಿಷ್ಯರು..!

    ಗುರು ಶಿಷ್ಯರು. ಈ ಹೆಸರು ಕೇಳಿದರೆ ಸಾಕು, ಕನ್ನಡದ ಕ್ಲಾಸಿಕ್ ಸಿನಿಮಾ ನೆನಪಾಗುತ್ತೆ. ವಿಷ್ಣುವರ್ಧನ್, ಮಂಜುಳಾ, ದ್ವಾರಕೀಶ್ ಅಭಿನಯದ ಸಿನಿಮಾ. ದೊಡ್ಡವರೆಲ್ಲ ಜಾಣರಲ್ಲ ಹಾಡು, ಪೆದ್ದು ಶಿಷ್ಯರ ತರಲೆ ಆಟ.. ಎಲ್ಲವೂ ಈಗಲೂ ನಗು ಬರಿಸುತ್ತವೆ. ಅದೇ ಟೈಟಲ್ ಈಗ ಮತ್ತೊಮ್ಮೆ ಸಿನಿಮಾ ಆಗುತ್ತಿದೆ.

    ಇತ್ತೀಚೆಗೆ ಡಿ.21ಕ್ಕೆ ಲಡ್ಡು ಕೊಡ್ತೇನೆ ಎಂದು ವಿಜಿಲ್ ಊದಿದ್ದ ತರುಣ್ ಸುಧೀರ್ ಮತ್ತು ಶರಣ್ ಊದಿರುವ ವಿಜಲ್ ಇದು, ಗುರು ಶಿಷ್ಯರು. ಇದು ಲಡ್ಡು ಬ್ಯಾನರ್‍ನ ಹೊಸ ಸಿನಿಮಾ.

    ತರುಣ್ ಮತ್ತು ಶರಣ್ ನಿರ್ಮಾಪಕರಾಗಿರುವ ಚಿತ್ರಕ್ಕೆ ಶರಣ್ ಅವರೇ ಹೀರೋ. ಜಡೇಶ್ ಕುಮಾರ್ ಹಂಪಿ ನಿರ್ದೇಶಕ. ಜಂಟಲ್‍ಮನ್ ಮತ್ತು ರಾಜಹಂಸ ಚಿತ್ರಗಳ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ಜಡೇಶ್, ಈ ಬಾರಿ ಕಾಮಿಡಿ ಸಬ್ಜೆಕ್ಟ್‍ಗೆ ಕೈ ಹಾಕಿದ್ದಾರೆ.

  • ಶಂಕರ್ ನಾಗ್ ಥಿಯೇಟರಿನಿಂದ ಶುರುವಾಯ್ತು ರಾಬರ್ಟ್ ಹವಾ

    ಶಂಕರ್ ನಾಗ್ ಥಿಯೇಟರಿನಿಂದ ಶುರುವಾಯ್ತು ರಾಬರ್ಟ್ ಹವಾ

    ರಾಬರ್ಟ್ ರಿಲೀಸ್ ಹತ್ತಿರವಾಗುತ್ತಿದ್ದಂತೆಯೇ ಹವಾ ಎದ್ದಿದೆ. ಇದು ಹವಾನೋ.. ಬಿರುಗಾಳಿಯೋ.. ಸುನಾಮಿನೋ.. ಹೇಳೋಕಾಗಲ್ಲ. ಏಕೆಂದರೆ ಈ ಹವಾ ಎಬ್ಬಿಸಿರೋದು ದರ್ಶನ್ ಫ್ಯಾನ್ಸ್. ಈ ಬಾರಿ ರಾಬರ್ಟ್ ಹವಾ ಶುರುವಾಗಿರೋದು ಎಂಜಿ ರಸ್ತೆಯ ಶಂಕರ್ ನಾಗ್ ಟಾಕೀಸಿನಿಂದ.

    ಶಂಕರ್ ನಾಗ್ ಥಿಯೇಟರ್ ಎದುರು ರಾಬರ್ಟ್ ದರ್ಶನ್ರ ಕಟೌಟ್ ತಲೆಯೆತ್ತಿ ನಿಂತಿದೆ. ಈ ರೋಡಿನಲ್ಲಿ ಕನ್ನಡ ಚಿತ್ರರಂಗದ ಕಟೌಟ್ ಎದ್ದು ನಿಂತಿರೋದು ಇದೇ ಮೊದಲು. ಇನ್ನೊಂದು ಥಿಯೇಟರಿನಲ್ಲಿ ದರ್ಶನ್ ಅವರ 13 ಕಟೌಟ್ ನಿಲ್ಲಿಸಲಾಗುತ್ತಿದೆ. ಅತ್ತ ಹೈದರಾಬಾದ್ ಕಡೆ ಹೊರಟರೆ, ಹೈವೇಗಳಲ್ಲಿ ಹೆಜ್ಜೆ ಹೆಜ್ಜೆಗೂ ದರ್ಶನ್ ಚಿತ್ರದ ಪೋಸ್ಟರ್, ಕಟೌಟ್ಗಳು ರಾರಾಜಿಸುತ್ತಿವೆ.

    ತರುಣ್ ಸುಧೀರ್ ನಿರ್ದೇಶನದ ಚಿತ್ರವಿದು. ಉಮಾಪತಿ ಬ್ಯಾನರಿನಲ್ಲಿ ಬರುತ್ತಿರೋ ದರ್ಶನ್ ಅವರ ಮೊದಲ ಸಿನಿಮಾ. ಶಿವರಾತ್ರಿಗೆ ಮೊದಲೇ ದರ್ಶನ್ ಅಭಿಮಾನಿಗಳು ಚಿತ್ರದ ಪ್ರಚಾರವನ್ನು ಭರ್ಜರಿಯಾಗಿ ಮಾಡುತ್ತಿದ್ದಾರೆ. ದರ್ಶನ್ ಫ್ಯಾನ್ಸ್ ಉತ್ಸಾಹ ಚಿತ್ರತಂಡದವರಿಗಿಂತ ಡಬಲ್ ಇರೋದೇ ಸ್ಪೆಷಲ್.

  • ಶಂಕರ್ ಮಹದೇವನ್ ಕಂಠದಲ್ಲಿ ಜೈ ಶ್ರೀರಾಮ್

    shankar mahadevan's magic for jai shri ram song

    ಜೈ ಶ್ರೀರಾಮ್ ಎಂಬ ರಾಬರ್ಟ್ ಚಿತ್ರದ ಹಾಡು ಸೃಷ್ಟಿಸಿದ್ದ ಕ್ರೇಜ್ ಗೊತ್ತಿದೆಯಲ್ಲ, ಈಗ ಅದೇ ಹಾಡಿನ ಹೊಸ ವರ್ಷನ್ ಬಂದಿದೆ. ಈಗ ಆ ಹಾಡಿನ ಶಕ್ತಿ ಹೆಚ್ಚಿಸಿರುವುದು ಶಂಕರ್ ಮಹಾದೇವನ್. ರಾಮನವಮಿಗಾಗಿ ಹಾಡನ್ನು ಮತ್ತೊಮ್ಮೆ ಶಂಕರ್ ಮಹದೇವನ್ ಧ್ವನಿಯಲ್ಲಿ ರಿಲೀಸ್ ಮಾಡಿದ್ದಾರೆ ನಿರ್ದೇಶಕ ತರುಣ್ ಸುಧೀರ್.

    ದಿವ್ಯ ಕುಮಾರ್ ಧ್ವನಿಯಲ್ಲಿದ್ದ ಹಾಡಿನಲ್ಲೇ ಕುಣಿದು ಕುಪ್ಪಳಿಸಿದ್ದ ಅಭಿಮಾನಿಗಳಿಗೆ ಶಂಕರ್ ಮಹದೇವನ್ ದೈವೀಕ ಕಂಠದ ಧ್ವನಿ ಇನ್ನಷ್ಟು ರೋಮಾಂಚನ ಹುಟ್ಟಿಸಿದೆ. ನಟ ದರ್ಶನ್ ಶ್ರೀರಾಮ ಶ್ಲೋಕವನ್ನು ಪಠಿಸಿ ಹಾಡನ್ನು ಅಭಿಮಾನಿಗಳಿಗೆ ಅರ್ಪಿಸಿದ್ದಾರೆ.

    ಉಮಾಪತಿ ನಿರ್ಮಾಣದ ರಾಬರ್ಟ್ ಚಿತ್ರ, ಕೊರೋನಾ ಶಾಕ್ ಇಲ್ಲದೇ ಹೋಗಿದ್ದರೆ ಇದೇ ವಾರ ರಿಲೀಸ್ ಆಗಬೇಕಿತ್ತು. ಸದ್ಯಕ್ಕೆ ರಾಬರ್ಟ್ ಸೇರಿದಂತೆ ಯಾವುದೇ ಚಿತ್ರಗಳಿಗೆ ಏಪ್ರಿಲ್ ತಿಂಗಳಲ್ಲಿ ಥಿಯೇಟರು ಭಾಗ್ಯ ದೊರೆಯುವ ಲಕ್ಷಣಗಳಿಲ್ಲ.

  • ಸುದೀಪ್, ರಕ್ಷಿತ್ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾದ ತರುಣ್ ಸುಧೀರ್

    tharun sudhir in poster controversy

    ಕನ್ನಡದ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರಾಗಿರುವ ತರುಣ್ ಸುಧೀರ್, ವಿವಾದದ ಸುಳಿಗೆ ಸಿಲುಕಿದ್ದಾರೆ. ದರ್ಶನ್ ಅಭಿನಯದ ರಾಬರ್ಟ್ ಚಿತ್ರದಲ್ಲಿ ಬ್ಯುಸಿಯಾಗಿರುವ ತರುಣ್, ಏನೋ ಮಾಡಲು ಹೋಗಿ, ಇನ್ನೇನೋ ಮಾಡಿಕೊಂಡುಬಿಟ್ಟಿದ್ದಾರೆ. ಆಗಿರೋದಿಷ್ಟೆ, ಅವನೇ ಶ್ರೀಮನ್ನಾರಾಯಣ ಚಿತ್ರದ ಪೋಸ್ಟರ್ ರಿಲೀಸ್ ಆದಾಗ, ತರುಣ್ ಸುಧೀರ್ ವಿಶ್ ಮಾಡಿದ್ದರು. ಆದರೆ, ವಿಶ್ ಮಾಡುವಾಗ ಫಟಾಪೋಸ್ಟರ್ ನಿಕ್ಲಾ ಹೀರೋ ಎನ್ನುತ್ತಾ ರಕ್ಷಿತ್‍ರನ್ನು ಕಾಲೆಳೆದರು. ಆ ಮೂಲಕ ಅವನೇ ಶ್ರೀಮನ್ನಾರಾಯಣದ ಪೋಸ್ಟರ್ ನಕಲಿ ಎಂದು ಕೆಣಕಿದರು. 

    ಇದಾದ ಬೆನ್ನಲ್ಲೇ ತರುಣ್ ಸುಧೀರ್ ಅವರ ರಾಬರ್ಟ್ ಪೋಸ್ಟರ್ ನಕಲಿ ಎಂದು ಅಭಿಮಾನಿಗಳು ಟ್ರೋಲ್ ಶುರು ಮಾಡಿದ್ರು. ಏಕೆಂದರೆ, ರಾಬರ್ಟ್ ಚಿತ್ರದ ಪೋಸ್ಟರ್‍ಗೂ, ಹಾಲಿವುಡ್ ನಟ ಡ್ವೇಯ್ಸ ಜಾನ್ಸನ್ ಹಂಚಿಕೊಂಡಿದ್ದ ಫೋಟೋಗೂ ಹೋಲಿಕೆಗಳಿದ್ದವು. 

    ಇದಷ್ಟೇ ಅಲ್ಲ, ಇದರ ಜೊತೆಗೆ ಕಿಚ್ಚ ಸುದೀಪ್‍ರ ಪೈಲ್ವಾನ್‍ಗೆ ವಿಶ್ ಮಾಡಲಿಲ್ಲ, ಬಂದ ದಾರಿಯನ್ನು ಮರೆತುಬಿಟ್ರಾ ಎಂದು ಸುದೀಪ್ ಅಭಿಮಾನಿಗಳು ತರುಣ್ ವಿರುದ್ಧ ಮುಗಿಬಿದ್ದರು.

    ಒಟ್ಟಿನಲ್ಲಿ ಕನ್ನಡದ ಸ್ಟಾರ್ ನಿರ್ದೇಶಕರಾಗಿರುವ ತರುಣ್ ಸುಧೀರ್, ಏಕಕಾಲಕ್ಕೆ ಇಬ್ಬರು ಸ್ಟಾರ್‍ಗಳ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

  • ಹುಬ್ಬಳ್ಳಿಯಲ್ಲಿ ರಾಬರ್ಟ್ ಹವಾ

    ಹುಬ್ಬಳ್ಳಿಯಲ್ಲಿ ರಾಬರ್ಟ್ ಹವಾ

    ದರ್ಶನ್ ಎಲ್ಲಿದ್ದರೂ.. ಹೇಗಿದ್ದರೂ ಅಭಿಮಾನಿಗಳು ಮುತ್ತಿಕೊಳ್ಳೋದು ಸಹಜ. ಹುಬ್ಬಳ್ಳಿಯಲ್ಲಿ ಬಹಳ ದಿನಗಳ ನಂತರ ದರ್ಶನ್ ಒಂದು ದೊಡ್ಡ ವೇದಿಕೆಯಲ್ಲಿ ಕಾಣಿಸಿಕೊಂಡಾಗ ಅಭಿಮಾನಿಗಳ ಕ್ರೇಜ್ ದೊಡ್ಡದಾಗಿಯೇ ಇತ್ತು. ಅಭಿಮಾನಿಗಳನ್ನು ಕಂಟ್ರೋಲ್ ಮಾಡೋಕೆ ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯ್ತು. ಅಭಿಮಾನಿಗಳ ಕುರಿತೇ ಮಾತನಾಡಿದ ದರ್ಶನ್

    ಅಭಿಮಾನಿಗಳನ್ನು ಗದರಿಸಿದರು. ಜೊತೆಯಲ್ಲಿಯೇ ಪರೋಕ್ಷವಾಗಿ ಇತ್ತೀಚಿನ ಜಗ್ಗೇಶ್ ವಿವಾದವನ್ನು ನೆನಪಿಸುವಂತೆ ಮಾತನಾಡಿದ ದರ್ಶನ್ `ಕನ್ನಡ ಚಿತ್ರರಂಗದಲ್ಲಿ ಎಲ್ಲ ಕಲಾವಿದರದ್ದೂ ಒಂದೇ ಜಾತಿ. ನಾವು ಯಾವ ಜಾತಿಗಾಗಿಯೂ ಹುಟ್ಟಿಲ್ಲ. ಯಾರೊಬ್ಬರ ಸ್ವತ್ತೂ ಅಲ್ಲ. ಅಭಿಮಾನಿಗಳೊಂದೇ ನಮ್ಮ ಜಾತಿ' ಎಂದರಷ್ಟೇ ಅಲ್ಲ `ದರ್ಶನ್ ಅಭಿಮಾನಿಗಳಿಗೆ ಕಾಕಾ ಹೊಡೀತಾನೆ ಅಂತಾರೆ. ನಾನು ಹಾಗೆಲ್ಲ ಮಾಡಲ್ಲ. ಅಭಿಮಾನಿಗಳಿಗೆ ನಾನು ಉಗಿದಿದ್ದೂ ಇದೆ. ತಲೆ ಮೇಲೆ ನಾಲ್ಕು  ಬಾರಿಸಿ ಬೈದಿದ್ದೂ ಇದೆ' ಎಂದರು.

    ಇದೇ ವೇಳೆ ನಾವು ಗಾಡಿ ಓಡಿಸುವಾಗ ಹತ್ತಿರ ಬರಬೇಡಿ. ಓವರ್ ಟೇಕ್ ಮಾಡೋಕೆ ಹೋಗಬೇಡಿ. ನನ್ನನ್ನು ನೋಡದೇ ಇದ್ದರೂ ಪರವಾಗಿಲ್ಲ. ಮನೆಯಲ್ಲಿ ಅಪ್ಪ, ಅಮ್ಮ, ಹೆಂಡತಿ, ಮಕ್ಕಳು ಇರ್ತಾರೆ ಅನ್ನೋದನ್ನು ಮರೆಯಬೇಡಿ ಎಂದು ಬುದ್ದಿವಾದ ಹೇಳಿದರು. ಅಂದಹಾಗೆ ದರ್ಶನ್ ಇಷ್ಟೆಲ್ಲ ಹೇಳಿದ್ದು ರಾಬರ್ಟ್ ಬಿಡಗಡೆಗೆ ಮುನ್ನ ನಡೆದ ಕಾರ್ಯಕ್ರಮದಲ್ಲಿ.