ಚಿತ್ರರಂಗದಲ್ಲಿ ಇರುವವರೆಗೆ ಸ್ಯಾಂಡಲ್‍ವುಡ್ ಕ್ವೀನ್ ಆಗಿಯೇ ಇದ್ದ ರಮ್ಯಾ, ರಾಜಕೀಯಕ್ಕೆ ಹೋದ ಮೇಲೆ ಚಿತ್ರರಂಗವನ್ನ ಹೆಚ್ಚೂ ಕಡಿಮೆ ಮರೆತೇಬಿಟ್ಟಿದ್ದಾರೆ. ಸಂಸದೆಯಾದ ಮೇಲೆ ರಮ್ಯಾ ಅಭಿನಯದಿಂದ ಸಂಪೂರ್ಣ ದೂರವೇ ಇದ್ದಾರೆ. ಸಂಸದೆಯಾದ ಮೇಲೆ ಬಿಡುಗಡೆಯಾದ ನಾಗರಹಾವು ಚಿತ್ರ ಕೂಡಾ, ರಾಜಕೀಯ ಪ್ರವೇಶಕ್ಕೆ ಮುನ್ನವೇ ಶೂಟಿಂಗ್ ಮುಗಿಸಿದ್ದ ಸಿನಿಮಾ.
ಈಗ ರಮ್ಯಾ, ಮತ್ತೊಮ್ಮೆ ಸಿನಿಮಾ ರಂಗ ಪ್ರವೇಶಿಸ್ತಾರಾ..? ಅಂಥಾದ್ದೊಂದು ಕುತೂಹಲ ಹುಟ್ಟಿಸಿರುವುದು ರಕ್ಷಿತ್ ಶೆಟ್ಟಿಯವರ ಅವನೇ ಶ್ರೀಮನ್ನಾರಾಯಣ ಚಿತ್ರದ ಟೀಸರ್‍ಗೆ ರಮ್ಯಾ ಕೊಟ್ಟ ಮೆಚ್ಚುಗೆ, ನಂತರ ರಕ್ಷಿತ್ ಶೆಟ್ಟಿ ಕೇಳಿದ ಪ್ರಶ್ನೆ ಹಾಗೂ ಆ ಪ್ರಶ್ನೆಗೆ ರಕ್ಷಿತ್ ಶೆಟ್ಟಿ ನೀಡಿರುವ ಉತ್ತರ.
ಅವನೇ ಶ್ರೀಮನ್ನಾರಾಯಣ ಚಿತ್ರದ ಟೀಸರ್ ಚೆನ್ನಾಗಿದೆ. ನೀವು ಕನ್ನಡ ಚಿತ್ರರಂಗದಲ್ಲಿ ಹೊಸತೇನನ್ನೋ ಮಾಡಲು ಹೊರಟಿದ್ದೀರಿ. ನಾನು ಚಿತ್ರರಂಗವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಹುಟ್ಟುಹಬ್ಬದ ಶುಭಾಶಯಗಳು ಎಂದು ರಮ್ಯಾ ರಕ್ಷಿತ್ ಶೆಟ್ಟಿಗೆ ಶುಭ ಹಾರೈಸಿದ್ದಾರೆ.
ರಮ್ಯಾಗೆ ಥ್ಯಾಂಕ್ಸ್ ಹೇಳಿದ ರಕ್ಷಿತ್ ಶೆಟ್ಟಿ, ನೀವು ಯಾವತ್ತಿಗೂ ಸ್ಯಾಂಡಲ್‍ವುಡ್ ಕ್ವೀನ್. ನಿಮ್ಮನ್ನು ಮತ್ತೊಮ್ಮೆ ಬೆಳ್ಳಿತೆರೆಯಲ್ಲಿ ನೋಡಲು ಬಯಸುತ್ತೇನೆ ಎಂದಿದ್ದಾರೆ.
ಅದಕ್ಕೆ ರಮ್ಯಾ ನೀಡಿರುವ ಉತ್ತರ.. 2019ರ ನಂತರ.
2019ಕ್ಕೆ ಲೋಕಸಭಾ ಚುನಾವಣೆ ಇದೆ. ಚುನಾವಣೆಯ ಫಲಿತಾಂಶದ ನಂತರ ಕಾಂಗ್ರೆಸ್ ಸ್ಥಿತಿಗತಿ, ಸಾಧನೆ ನೋಡಿ ರಮ್ಯಾ ಡಿಸೈಡ್ ಮಾಡಬಹುದೇನೋ..