` aa karala ratri, - chitraloka.com | Kannada Movie News, Reviews | Image

aa karala ratri,

  • 'Karaala Ratri' on July 13th

    aa karala ratri on july 13th

    Dayal Padmanabhan's 'Karaala Ratri' is all set for release and director-producer Dayal is planning to release the film on the 13th of July.

     'Karaala Ratri' is based on a play of Mohan Habbu. Based on the play, Dayal has scripted the film. Naveen Krishna has written the dialogues for the film. The film is being jointly produced by Dayal and Avinash Shetty.

    'Karaala Ratri' stars Dayal's fellow contestants JK and Anupama Gowda along with Naveen Krishna, Rangayana Raghu, Jaya Srinivasan, Veena Sundar, Navarasan and others, P K H Doss is the cameraman, while Ganesh Narayan is the music director.

  • Aa Karala Ratri Review, Chitraloka Rating 4/5

    aa karala ratri review

    The movie stars Karthik Jayaram, Anupama Gowda, Rangayana Raghu, Veena Sundar and a host of other prominent actors playing small yet important roles. 

    For everyone that complains about the usual “masala” in movies, this is definitely a different genre and a brilliant one at that. 

    If you’ve always thought movies come with a certain template or formula, this will definitely break that and give you a new perspective, and it’s very refreshing to see an engaging plot and interesting screenplay.

    The movie starts off with some brilliant camera work by PKH Das, excellent cinematography. Most of the movie is shot at night, so the DOP has had a tough and critical role to play, but the state award winner has done an extraordinary job in the movie. 

    Brilliant performances by Anupama Gowda, Rangayana Raghu and Veena Sundar. Such captivating performances are rare in today’s cinema. 

    JK has done a very good job and him accepting such an interesting character itself is a testimony to his love for interesting scripts. Definitely hope he continues to choose roles that will bring out his skills. 

    Anupama for a small screen actress has done such a wonderful job and play a very critical role in the movie, she has given a huge competition to stalwarts like Mr. Raghu and Mrs. Veena Sundar. Her timing, her sarcasm and her natural action were a treat to watch. Naveen Krishna’s dialogues specifically for Anupama were pure gold. 

    The Music Director has done an extraordinary job. The Re-recording was wonderful. The music all through the movie had the thrilling and racy feel. The songs are great. The background score will keep ringing in your head. 

    One would think that the editor must have had a task when such performances, editing such wonderful performances is quite a challenge but not for CrazyMindzz Sri. His long time association with Dayal itself is a proof of his excellent work. 

    Coming to the Producer and Director Dayal Padmanabhan. His way of looking at a play and turning that into a feature film is commendable. He has done a wonderful job in terms of star cast, screen play, and Naveen Krishna’s dialogues are very colloquial yet quirky. His performance in a such role was so brilliant, excellent dialogue delivert.

    A movie to be kept always in your library.

    Chitraloka Rating 4/5

  • Six Films To Release On July 13th

    six films to release on july 13th

    The 06th of July saw six Kannada films getting released and this is the first time in the year that so many films are getting in a single day this year. The 13th of July will be witnessing another six films getting released.

    Dayal Padmanabhan's 'Aa Karala Ratri', Mussanje Mahesh's 'MMCH', Chikkanna starrer 'Double Engine', Pavan Teja's 'Atharva', well known poet H S Venkatesh Murthy's 'Hasiru Ribbon' and Rishika Sharma's 'Trunk' will be getting released tomorrow across Karnataka. Of the six, 'Aa Karala Ratri' has already been premiered and critics are raving about the film.

    Which among the six films will be able woo the audience is yet to be seen in the coming days.

  • Sudeep Reviews Aa Karala Ratri

    aa karala ratri is reviewd by sudeep

    ಒಂದು ಅಚ್ಚುಕಟ್ಟಾದ ದೋಷಗಳೇ ಇಲ್ಲದ "ಆ ಕರಾಳ ರಾತ್ರಿ" ಎಂಬ ಚಿತ್ರವನ್ನು ನೋಡಿದೆ. ಈ ಚಿತ್ರ ನೊಡೋಕೆ ನಟ ಜೆ.ಕೆ. ಬಹಳ ದಿನಗಳಿಂದ ನನಗೆ ಒತ್ತಾಯ ಮಾಡ್ತಾ ಇದ್ದ. ಸಮಯದ ಅಭಾವ ನೋಡೋಕೆ ಆಗಿರ್ಲಿಲ್ಲಾ. ಆದರೆ ನಿಜ ಹೇಳ್ತೀನಿ ಸಮಯ ಮಾಡ್ಕೊಂಡು ಸಿನಿಮಾ ನೋಡಿದ್ದಕ್ಕೂ ಸಾರ್ಥಕವಾಯ್ತು. ಯಾಕೆ ಅಂದ್ರೇ ಒಂದು ಚಿಕ್ಕ ಕಥೆಯನ್ನು ಬಹಳ ಪರಿಣಾಮಕಾರಿಯಾಗಿ ತೆರೆಗೆ ತಂದಿರುವ ಚಿತ್ರ ಇದು. 

    ಒಂದೇ ಜಾಗದಲ್ಲಿ ಕಥೆ ನಡೆದರೂ ಚಿತ್ರಕಥೆ ಮತ್ತು ಪಾತ್ರಗಳು ನಿಮ್ಮನ್ನು ಒಂದು ರೋಮಾಂಚಕಾರಿ ಪ್ರಯಾಣದ ಅನುಭವ ನೀಡುತ್ತದೆ. ಹೌದು ಆ ಪ್ರಯಾಣ ಕುರ್ಚಿಯ ಹಿಂದೆ ಕೂತಿರುವ ನಿಮ್ಮನ್ನು ಕುರ್ಚಿಯ ತುತ್ತ-ತುದಿಗೆ ತಂದು ಕೂರಿಸುವಷ್ಟು ಪರಿಣಾಮಕಾರಿಯಾಗಿದೆ. ಪ್ರತೀ ಕ್ಷಣ ನೀವು ಕಥೆಯ ಒಂದು ಭಾಗವಾಗಿ ನಿಮ್ಮ ಮುಂದೆಯೇ ಕಥೆ ನಡೆಯುತ್ತಿದೆ ಅನ್ನುವಷ್ಟರ ಮಟ್ಟಿಗೆ ನಿಮ್ಮನ್ನು ಒಳಗೆ ಸೆಳೆಯುತ್ತದೆ. ಇದು ಸಾಧ್ಯವಾಗಿದ್ದು ಚಿತ್ರಕಥೆ, ಸಂಭಾಷಣೆ, ಪಾತ್ರಗಳು, ಅಭಿನಯ ಮತ್ತು ತಂತ್ರಜ್ಞರ ಪರಿಪೂರ್ಣ ಶ್ರಮದಿಂದ.

    ಪ್ರತಿಯೊಬ್ಬ ಕಲಾವಿದನೂ ಎಲ್ಲಿಯೂ ಅಭಿನಯಿಸಿಲ್ಲ... ಜೀವಿಸಿದ್ದಾರೆ! ತಾವೇ ಪಾತ್ರವಾಗಿ ವಿಜೃಂಭಿಸಿದ್ದಾರೆ. ಯಾವೊಬ್ಬ ಕಲಾವಿದನೂ ವಿನಾಕಾರಣ ತನ್ನ ಅಸ್ತಿತ್ವವನ್ನು ಹೇರಲು ಪ್ರಯತ್ನಿಸಿಲ್ಲ. 

    ರಂಗಾಯಣ ರಘು... ಕನ್ನಡ ಚಿತ್ರರಂಗ ಕಂಡ ಅದ್ಭುತ ಕಲಾವಿದ ಹಾಗೂ ನನ್ನ ನೆಚ್ಚಿನ ಕ್ರಿಯಾಶೀಲ ಕಲಾವಿದ. ತಮ್ಮ ನೈಜ ಅಭಿನಯದಿಂದ ಮತ್ತೊಮ್ಮೆ ಅದನ್ನು ಸಾಬೀತುಪಡಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಇವರು ಅತಿದೊಡ್ಡ ಉಡುಗೊರೆ. 

    ಎಂಥಹ ಪಾತ್ರಗಳೇ ಆದರೂ ಅದನ್ನು ಲೀಲಾಜಾಲವಾಗಿ ಅಭಿನಯಿಸುವ ಕಲಾವಿದೆ ವೀಣಾ ಸುಂದರ್. ಮಾಣಿಕ್ಯ ಚಿತ್ರದಲ್ಲೇ ಒಂದು ಸಣ್ಣ ಪಾತ್ರಕ್ಕೆ ಆಕೆ ಜೀವ ತುಂಬಿದ್ದು ನೋಡಿ ನಾನು ಬೆರಗಾಗಿದ್ದೆ. ನಿಜವಾಗಲೂ ಅತ್ಯುತ್ತಮ ಕಲಾವಿದೆ. 

    ಅನುಪಮ ತಿಂದು ಬಿಸಾಕಿದ್ದಾರೆ....ಅಬ್ಬಾ....100 ಚಿತ್ರಗಳ ಅನುಭವ ಇರುವ ನಟಿಯಂತೆ ಅಮೋಘ ಅಭಿನಯ ನೀಡಿದ್ದಾರೆ...ಒಂದು ಕಷ್ಟಕರವಾದ ಪಾತ್ರವನ್ನು ನಾಜೂಕಾಗಿ ನಿಭಾಯಿಸಿದ್ದಾರೆ...ಆಕೆಯ ಪ್ರತಿಭೆಗೆ ಇನ್ನಷ್ಟು ಪ್ರೋತ್ಸಾಹ ಖಂಡಿತವಾಗಲೂ ಸಿಗಲೆ ಬೇಕೂ...ಆಕೆಗೆ ನನ್ನ ಅಭಿನಂದನೆಗಳು

    ಜೆ.ಕೆ....ನೋಡಿ ನಿಜವಾಗಲೂ ಆಶ್ಚರ್ಯವಾಯಿತು...ಆತ ಮಾಡಿರುವ ಸುಮಾರು ಪತ್ರಗಳನ್ನು ನಾನು ನೋಡಿದ್ದೇನೆ...ಆದರೆ ಇದು ತನ್ನ ವೃತ್ತಿ ಜೀವನದ ಬೆಸ್ಟ್....ಆತನ ನೋಟ...ದೇಹ....ಪಾತ್ರಕ್ಕೆ ನ್ಯಾಯ ಒದಗಿಸಿದೆ....ಕನ್ನಡಕದಿಂದ ಹಿಡಿದು ಆತ ಹಾಕಿರುವ ಗೋಲ್ಡ್ ಚೆಯ್ನ್... ಆತನ ಉಡುಗೆ....ನನಗೆ ನನ್ನ ನಿರ್ಮಾಪಕ ಮಿತ್ರರೊಬ್ಬರನ್ನು ನೆನಪಿಸಿತು....ಬಹುಷಹ ಈ ಚಿತ್ರಕ್ಕೆ ಅವರ "ಅರ್ಪಣೆ" ಪಾತ್ರಕ್ಕೂ "ಅರ್ಪಿತ" ವಾಗಿದೆ....ಹ ಹ ಹ....

    ಆತನ ಪಾತ್ರವು ನಮಗೆ ಕುತೂಹಲ ಮೂಡಿಸಿರುವುದರ ಜೊತೆಗೆ ಥ್ರಿಲ್ ಅನ್ನು ನೀಡುತ್ತದೆ....ಕೊನೆಯ ಹಂತ ತಲುಪುವಷ್ಟರಲ್ಲೀ ಈ ಪಾತ್ರದ ಮೇಲೆ ನಿಮಗೆ ಲವ್ ಆಗಿರುತ್ತದೆ....ಕಮ್ಮರ್ಷಿಯಲ್ ಪಾತ್ರವಲ್ಲದಿದ್ದರೂ ಇಂಥ ಪಾತ್ರ ಒಪ್ಪಿ ನಿಭಯಿಸಿರುವುದಕ್ಕೆ ಜೆ.ಕೆ....ಅಭಿನಂದನಾರ್ಹ... ಇನ್ನೂ ಬೆಳೆಯುತ್ತೀರೀ ಜೆ.ಕೆ....

    ಒಂದು ಮಾತು ದಯಾಳ್ ಬಗ್ಗೆ...... ಈ ಚಿತ್ರದಲ್ಲಿ ನನಗೆ ಅತಿದೊಡ್ಡ ಆಶ್ಚರ್ಯ ಎಂದರೆ ಅದು ದಯಾಳ್... ನಿರ್ದೇಶನದಲ್ಲಿ ಈ ಬಾರಿ ಈತ ಅತ್ಯುತ್ತಮ. ತಪ್ಪುಗಳು ಕಾಣಿಸುತ್ತೆ ಅಂತಾನೇ "ಮೈಕ್ರೋಸ್ಕೋಪ್ ಝೂಮ್" ಹಾಕಿ ಕುಳಿತೆ, ಆದರೆ ನನ್ನ "ಮೈಕ್ರೊಸ್ಕೋಪ್" ಕಾಣಿಸಲೇ ಇಲ್ಲಾ... ಅಷ್ಟು ಅಚ್ಚುಕಟ್ಟು.

    ಶುಭಾಶಯಗಳು ದಯಾಳ್, ಒಬ್ಬ ತಂತ್ರಜ್ಞನಾಗಿ ನಿಮ್ಮ ತಾಂತ್ರಿಕತೆಯ ಮೇಲೆ ನನ್ನ ಗೌರವ ಅಪಾರವಾಗಿ ಇಮ್ಮಡಿಗೊಳಿಸಿದೆ.

    ಸಂಗೀತ ನಿರ್ದೇಶಕ ನಾರಾಯಣ್ ಹಿನ್ನೆಲೆ ಸಂಗೀತದ ಮುಖಾಂತರ ಚಿತ್ರ ಮುಕ್ತಾಯಗೊಳ್ಳುವಷ್ಟರಲ್ಲಿ ತಾವೇ ಚಿತ್ರದ ನಾಯಕನಾಗಿ ವಿಜೃಂಭಿಸುತ್ತಾರೆ.

    ಪಿ.ಕೆ.ಹೆಚ್. ದಾಸ್ ಅವರ ಬಗ್ಗೆ ನಾನೇನೂ ಹೇಳಬೇಕಿಲ್ಲಾ. ಆತ ಈ ಚಿತ್ರದ ಬಹು ದೊಡ್ಡ ಶಕ್ತಿ. ಚಿಕ್ಕ ಬಡ್ಜೆಟ್ ನಿರ್ಧಿಷ್ಟ ದಿನಗಳು ಒಂದೇ ಲೊಕೇಷನ್ ಆದರೂ ತೆರೆಯ ಮೇಲೆ ಅವರ ಕೈಚಳಕ ಅದ್ಭುತ.

    ಸ್ವಲ್ಪವೂ ನಿರೀಕ್ಷೆಯಿಲ್ಲದೇ ಕುಳಿತುಕೊಂಡೆ ಚಿತ್ರ ಮುಗಿದ ಮೇಲೆ ಪರಿಪೂರ್ಣತೆಯ ಭಾವದಿಂದ ಹೊರಗೆ ಬಂದೆ. 

    ಎಲ್ಲರೂ ಈ ಚಿತ್ರವನ್ನು ನೋಡಿ ನನ್ನ ಅನುಭವವನ್ನು ನಿಮ್ಮ ಅನುಭವವಾಗಿಸಿಕೊಳ್ಳಿ ಎಂದು ಕೇಳಿಕೊಳ್ಳುತ್ತೇನೆ.

    ನಿಮಗೆ ಸಂತೃಪ್ತ ಅನುಭವ ಈ ಚಿತ್ರವು ನೀಡುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲಾ. 

    "ಅಬ್ಭಾ ಎಂಥಹ ಅದ್ಭುತ ಚಿತ್ರ"

    ನಿಮ್ಮ ಕಿಚ್ಚ ಸುದೀಪ್

  • Upendra Releases The Songs Of 'Karaala Ratri'

    aa karala ratri songs released

    Dayal Padmanabhan's 'Karaala Ratri' is all set to release soon and before that the songs of the film was released by actor-director Upendra in Bangalore. R Chandru, K Manju, Pratham and others were also present at the occasion.

     'Karaala Ratri' is based on a play of Mohan Habbu. Based on the play, Dayal has scripted the film. Naveen Krishna has written the dialogues for the film. The film is being jointly produced by Dayal and Avinash Shetty.

    'Karaala Ratri' stars Dayal's fellow contestants JK and Anupama Gowda along with Naveen Krishna, Rangayana Raghu, Jaya Srinivasan, Veena Sundar, Navarasan and others, P K H Doss is the cameraman, while Ganesh Narayan is the music director.

     

  • ಅನುಪಮಾ ಗೌಡ.. ಬೋಲ್ಡ್ & ಬ್ಯೂಟಿಫುಲ್

    aa karala ratri team

    ಆ ಕರಾಳ ರಾತ್ರಿ. ಮುಂದಿನ ವಾರ ತೆರೆಗೆ ಬರುತ್ತಿರುವ ಸಿನಿಮಾ. ಚಿತ್ರದ ನಾಯಕಿ ಅನುಪಮಾ ಗೌಡ. ಅಕ್ಕ ಸೀರಿಯಲ್ ಖ್ಯಾತಿಯಿಂದ ಬಿಗ್‍ಬಾಸ್ ಮನೆ ಸೇರಿದ್ದ ಅನುಪಮಾ ಗೌಡಗೆ, ಬಿಗ್‍ಬಾಸ್ ಮನೆಯಲ್ಲಿಯೇ ಈ ಚಿತ್ರದ ಆಫರ್ ಸಿಕ್ಕಿತ್ತು. ಆಗ ಬಿಗ್‍ಬಾಸ್ ಮನೆಯಲ್ಲಿಯೇ ಇದ್ದ ದಯಾಳ್, ಅಲ್ಲಿಯೇ ಕಥೆ ಹೇಳಿ ಅನುಪಮಾ ಗೌಡ ಹಾಗೂ ಜೆಕೆ ಅವರನ್ನು ಕಮಿಟ್ ಮಾಡಿಸಿದ್ದರು. ಅದರಂತೆಯೇ ಎಲ್ಲರೂ ಬಿಗ್‍ಬಾಸ್ ಮನೆಯಿಂದ ಹೊರಬಂದ ಮೇಲೆ ಶುರುವಾದ ಸಿನಿಮಾ ಆ ಕರಾಳ ರಾತ್ರಿ.

    ಚಿತ್ರದಲ್ಲಿ ನನ್ನದು ಸಿಕ್ಕಾಪಟ್ಟೆ ಬೋಲ್ಡ್ ಕ್ಯಾರೆಕ್ಟರ್. ಪಾತ್ರದ ಸಂಭಾಷಣೆಯೂ ಸಿಕ್ಕಾಪಟ್ಟೆ ಖಡಕ್. ಡೈರೆಕ್ಟ್ ಹಿಟ್. ಸಿನಿಮಾದ ನಟನೆಯನ್ನೇ ಬಿಡಬೇಕು ಎಂದುಕೊಂಡಿದ್ದವಳಿಗೆ `ಆ ಕರಾಳ ರಾತ್ರಿ'ಯ ಸ್ಕ್ರಿಪ್ಟ್ ತುಂಬಾ ಹಿಡಿಸಿತು. ಮುಂದೆ ನನಗೆ ಇಂಥಾ ಪಾತ್ರ ಸಿಗುವುದೋ ಇಲ್ಲವೋ ಗೊತ್ತಿಲ್ಲ ಎಂದು ಹೇಳಿಕೊಂಡಿದ್ಧಾರೆ ಅನುಪಮಾ ಗೌಡ.

    ಚಿತ್ರದಲ್ಲಿರುವುದು ನಾಲ್ಕೇ ಪಾತ್ರ. ಆದರೆ, ಪ್ರೇಕ್ಷಕ ಆ ಪಾತ್ರಗಳ ಜೊತೆಯಲ್ಲೇ ತಾನೂ ಸಾಗುತ್ತಾನೆ. ದಯಾಳ್ ಆ ರೀತಿ ಕಥೆ ಹೇಳಿದ್ದಾರೆ ಅನ್ನೋದು ಅನುಪಮಾ ಅವರು ದಯಾಳ್ ಅವರಿಗೆ ಕೊಡೋ ಸರ್ಟಿಫಿಕೇಟ್.

     

  • ಕರಾಳ ರಾತ್ರಿ ಸೈಲೆಂಟ್ ಸಕ್ಸಸ್

    karala ratri is a silent hit movie

    ಆ ಕರಾಳ ರಾತ್ರಿ. ಇದೇ ವಾರ ಬಿಡುಗಡೆಯಾದ ದಯಾಳ್ ಪದ್ಮನಾಭನ್‍ರ ಸಿನಿಮಾ, ಸದ್ದಿಲ್ಲದೆ ಹಿಟ್ ಆಗಿಬಿಟ್ಟಿದೆ. ಕಥೆ, ಚಿತ್ರಕಥೆಯೇ ಬಂಡವಾಳವಾಗಿರುವ ಸಸ್ಪೆನ್ಸ್, ಥ್ರಿಲ್ಲರ್ ಕತೆ ಪ್ರೇಕ್ಷಕರಿಗೆ ಇಷ್ಟವಾಗಿಹೋಗಿದೆ. ಚಿತ್ರದ ಬಗ್ಗೆ ಬಹುತೇಕ ಎಲ್ಲ ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಒಳ್ಳೆಯ ವಿಮರ್ಶೆಗಳೇ ಬಂದವು. ಇದೂ ಕೂಡಾ ಚಿತ್ರಕ್ಕೆ ನೆರವಾಗಿದೆ.

    ಮೊದಲ ವಾರದ ಕಲೆಕ್ಷನ್ 1 ಕೋಟಿಯ ಸಮೀಪ ಇದೆ. ಅಷ್ಟೇ ಅಲ್ಲ, ಚಿತ್ರಮಂದಿರಗಳ ಸಂಖ್ಯೆಯೂ ಹೆಚ್ಚುತ್ತಿದೆ. ಒಂದು ಚಿತ್ರ ಹಿಟ್ ಎನ್ನೋಕೆ ಇವಿಷ್ಟೇ ಕಾರಣಗಳು ಸಾಕೇನೋ..

    ನನ್ನ ಇದುವರೆಗಿನ ಸಿನಿಮಾಗಳಲ್ಲಿಯೇ ಅತೀ ಹೆಚ್ಚು ಮೊತ್ತದ ಟಿವಿ ರೈಟ್ಸ್ ಬರುತ್ತಿರುವ ಸಿನಿಮಾ ಇದು. ಈಗಾಗಲೇ ತಮಿಳು ಹಾಗೂ ತೆಲುಗಿಗೆ ರೀಮೇಕ್ ಹಕ್ಕುಗಳಿಗೆ ಬೇಡಿಕೆ ಬಂದಿದೆ. ರೀಮೇಕ್ ಯಾರೇ ಮಾಡಲಿ, ಅದನ್ನು ಕನ್ನಡದ ಕಥೆ ಎಂದು ಅವರ ಟೈಟಲ್ ಕಾರ್ಡ್‍ನಲ್ಲಿ ತೋರಿಸಬೇಕು. ಕಥೆ ಚಿತ್ರಕಥೆ ಬರೆದವರ ಹೆಸರು ಹಾಕಲೇಬೇಕು ಎನ್ನುವುದು ನನ್ನ ಕಂಡೀಷನ್. ಮಾತುಕತೆ ನಡೆಯುತ್ತಿವೆ ಎಂದಿದ್ದಾರೆ ದಯಾಳ್.

    ಜೆಕೆ, ಅನುಪಮಾ ಗೌಡ, ರಂಗಾಯಣ ರಘು, ವೀಣಾ ಸುಂದರ್, ನವೀನ್ ಕೃಷ್ಣ ಎಲ್ಲರಿಗೂ ಈಗ ಅಪರೂಪದ ಸಂಭ್ರಮ. ಸಿನಿಮಾ ರಿಲೀಸ್ ಆದ ಮೇಲೆ ಚಿತ್ರವನ್ನು ಪ್ರೇಕ್ಷಕರೇ ಪ್ರಚಾರ ಮಾಡುತ್ತಿರುವುದು ಚಿತ್ರತಂಡದ ಖುಷಿ ಇಮ್ಮಡಿಗೊಳ್ಳೋಕೆ ಕಾರಣ.

  • ಕರಾಳ ರಾತ್ರಿಯ ದಯಾಳ್‍ಗೆ ಜೆಕೆ ಥ್ಯಾಂಕ್ಸ್

    karala ratri actors praise dayal

    ಆ ಕರಾಳ ರಾತ್ರಿ. ಚಿತ್ರದ ಬಗ್ಗೆ ವ್ಯಕ್ತವಾಗುತ್ತಿರುವ ವಿಮರ್ಶೆಗಳನ್ನ ನೋಡಿ, ಥ್ರಿಲ್ಲಾಗಿರೋದು ಜೆಕೆ ಅಲಿಯಾಸ್ ಜಯ ಕಾರ್ತಿಕ್. ಈ ಚಿತ್ರದಲ್ಲಿ ತಾವು ನಟಿಸಿದ್ದರೂ, ಚಿತ್ರದ ಆತ್ಮ, ಹೃದಯ ಎಲ್ಲವೂ ದಯಾಳ್ ಅನ್ನೋದು ನಾಯಕ ನಟ ಜೆಕೆ ಸರ್ಟಿಫಿಕೇಟ್. ನಿರ್ದೇಶಕರಾಗಿ ದಯಾಳ್ ನನ್ನನ್ನೇ ಏಕೆ ಆಯ್ಕೆ ಮಾಡಿಕೊಂಡರು ಅನ್ನೋದು ಪಾತ್ರ ನೋಡಿದ ಮೇಲೆ ಗೊತ್ತಾಯ್ತು. ದಯಾಳ್‍ಗೆ ಅಂತಾದ್ದೊಂದು ದೃಷ್ಟಿಕೋನವಿದೆ ಅಂತಾರೆ ಜೆಕೆ.

    ಒಬ್ಬ ನಟನಾಗಿ ನಮಗೆ ಏನೇ ಕ್ರೆಡಿಟ್ ಸಿಕ್ಕರೂ, ಅದು ಸಲ್ಲಬೇಕಿರೋದು ನಿರ್ದೇಶಕರಿಗೆ. ಧಾರಾವಾಹಿಗಳಾದ ಅಶ್ವಿನಿ ನಕ್ಷತ್ರ, ಹಿಂದಿಯ ಸಿಯಾ ಕೆ ರಾಮ್, ಕೆಂಪೇಗೌಡ ಚಿತ್ರದ ಪುಟ್ಟ ಪಾತ್ರ.. ಹೀಗೆ ನಾನು ಮೆಚ್ಚುಗೆ ಗಳಿಸಿದ ಪ್ರತಿ ಚಿತ್ರದ ಹಿಂದೆಯೂ ಇರೋದು ನಿರ್ದೇಶಕರೇ. ಈ ಚಿತ್ರದಲ್ಲಂತೂ ದಯಾಳ್ ಅದ್ಭುತವಾಗಿ ಸಿನಿಮಾ ತೆರೆಗೆ ತಂದಿದ್ದಾರೆ ಅನ್ನೋದು ಜೆಕೆ ಮಾತು.

    ಚಿತ್ರದಲ್ಲಿ ಜೆಕೆಯವರದ್ದು ಶ್ರೀಮಂತನ ಪಾತ್ರ. ಸಿಕ್ಕಾಪಟ್ಟೆ ದುಡ್ಡಿರೋ, ಟ್ರಾವೆಲಿಂಗ್ ಮಾಡುತ್ತಾ ಜೀವನವನ್ನು ಎಂಜಾಯ್ ಮಾಡುವ ವ್ಯಕ್ತಿ. ಆಕಸ್ಮಿಕವಾಗಿ ಒಂದು ರಾತ್ರಿಯನ್ನು ರಂಗಾಯಣ ರಘು, ವೀಣಾ ಸುಂದರ್ ಹಾಗೂ ಅನುಪಮಾ ಗೌಡ ಅವರ ಮನೆಯಲ್ಲಿ ಕಳೆಯುತ್ತಾನೆ.ಆದರೆ, ಅದು ಕರಾಳ ರಾತ್ರಿಯಾಗುತ್ತೆ. ಹೇಗೆ... ಅದನ್ನು ದಯಾಳ್ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಸಿನಿಮಾ ಥಿಯೇಟರ್‍ನಲ್ಲಿದೆ.

  • ಕರಾಳ ರಾತ್ರಿಯನ್ನು ಮೆಚ್ಚಿದ ಕಿಚ್ಚ, ಗೋಲ್ಡನ್ ಸ್ಟಾರ್

    aa karala ratri

    ಆ ಕರಾಳ ರಾತ್ರಿ. ದಯಾಳ್ ಪದ್ಮನಾಭನ್ ನಿರ್ದೇಶನದ ಚಿತ್ರ. ಚಿತ್ರವನ್ನು ಪ್ರೀಮಿಯರ್ ಶೋನಲ್ಲಿ ನೋಡಿದವರು ಚಿತ್ರದ ಬಗ್ಗೆ ಒಳ್ಳೆಯ ಮಾತನಾಡುತ್ತಿದ್ದಾರೆ. ದಯಾಳ್ ನಿರ್ದೇಶನದಲ್ಲಿ ಇದು ಅತ್ಯುತ್ತಮ ಸಿನಿಮಾ ಎನ್ನುತ್ತಿದ್ದಾರೆ. ಆ್ಯಕ್ಟರ್, ಹಗ್ಗದ ಕೊನೆ ಮೊದಲಾದ ಚಿತ್ರಗಳ ಮೂಲಕ ಅರ್ಟ್ ಮತ್ತು ಕಮರ್ಷಿಯಲ್ ಚಿತ್ರಗಳ ನಡುವೆ ಬ್ರಿಡ್ಜ್ ಕಟ್ಟುವ ಪ್ರಯತ್ನ ಮಾಡಿದ್ದ ದಯಾಳ್, ಈ ಚಿತ್ರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಕ್ರೈಂ ಥ್ರಿಲ್ಲರ್ ಕಥೆಯನ್ನು ಭಾವನೆಗಳೊಂದಿಗೆ ಹೆಣೆದಿದ್ದಾರೆ.

    ಸಿನಿಮಾ ದೊಡ್ಡದಲ್ಲ. 101 ನಿಮಿಷದ ಸಿನಿಮಾ. ಒಂದೇ ರಾತ್ರಿಯಲ್ಲಿ ನಡೆಯುವ ಕಥೆ. ಚಿತ್ರ ನೋಡುತ್ತಿರುವಷ್ಟೂ ನಿಮ್ಮ ಎದೆಬಡಿತದ ಸದ್ದು ನಿಮಗೆ ಕೇಳಿಸುತ್ತೆ ಅನ್ನೊದು ಚಿತ್ರದ ಥ್ರಿಲ್ಲರ್ ಕಸುಬುದಾರಿಕೆಗೆ ಸಾಕ್ಷಿ. ಚಿತ್ರವನ್ನ ಕಿಚ್ಚ ಸುದೀಪ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಮೆಚ್ಚಿಕೊಂಡಿದ್ದಾರೆ.

    ದಯಾಳ್ ನಿರ್ದೇಶನ, ಜೆಕೆ, ಅನುಪಮಾ ಗೌಡ, ರಂಗಾಯಣ ರಘು, ವೀಣಾ ಸುಂದರ್ ಅಭಿನಯ, ಬಿಗಿಯಾದ ಚಿತ್ರಕಥೆ.. ಎಲ್ಲವೂ ಇಷ್ಟವಾಗಿದೆ. ಪ್ರೇಕ್ಷಕರಿಗೂ ಅದು ಮೆಚ್ಚುಗೆಯಾದರೆ, ದಯಾಳ್ ಗೆದ್ದಂತೆ. ಗೆಲ್ಲಲಿ.

     

  • ಗುರು ಶಿಷ್ಯರ ಜೊತೆ ಕರಾಳ ರಾತ್ರಿ

    aa karala ratri

    ಆ ಕರಾಳ ರಾತ್ರಿ.. ದಯಾಳ್ ಪದ್ಮನಾಭನ್ ನಿರ್ದೇಶನದ ಸಿನಿಮಾ. ಸಖಸಖಿ, ಆ್ಯಕ್ಟರ್ ಮೊದಲಾದ ವಿಭಿನ್ನ ಸಿನಿಮಾಗಳ ಮೂಲಕ ಹೆಸರಾಗಿರುವ ದಯಾಳ್ ಪದ್ಮನಾಭ್, ಈಗ ಆ ಕರಾಳ ರಾತ್ರಿ ಸಿನಿಮಾ ಮಾಡಿದ್ದಾರೆ. ಚಿತ್ರದ ಆಡಿಯೋ ಬಿಡುಗಡೆ ಮಾಡಿ ಸಂಭ್ರಮಿಸಿದ್ದಾರೆ. ಈ ಸಂಭ್ರಮದಲ್ಲಿ ದಯಾಳ್, ಗುರು ಶಿಷ್ಯರ ನಡುವೆ ಮಿನುಗಿದ್ದು ವಿಶೇಷ.

    ದಯಾಳ್ ಅವರ ಗುರು ಬೇರ್ಯೂರೂ ಅಲ್ಲ, ರಿಯಲ್ ಸ್ಟಾರ್ ಉಪೇಂದ್ರ. ಉಪೇಂದ್ರ ಅವರ ಜೊತೆ ಹೆಚ್2ಒನಲ್ಲಿ ಕೆಲಸ ಮಾಡುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು ದಯಾಳ್. ಇನ್ನು ನಿರ್ದೇಶಕ ಆರ್.ಚಂದ್ರು, ದಯಾಳ್ ಅವರ ಶಿಷ್ಯ. ದಯಾಳ್ ಅವರ ಸಖಸಖಿ ಚಿತ್ರದಲ್ಲಿ ಸಹ ನಿರ್ದೇಶಕರಾಗಿದ್ದವರು. 

    ಹೀಗೆ ಗುರು ಮತ್ತು ಶಿಷ್ಯರ ಪ್ರೀತಿಯ ನಡುವೆ ತಮ್ಮ ಆ ಕರಾಳ ರಾತ್ರಿಯ ಹಾಡು ಬಿಡುಗಡೆ ಸಂಭ್ರಮಿಸಿದರು ದಯಾಳ್

  • ತೆಲುಗಿಗೆ ಆ ಕರಾಳ ರಾತ್ರಿ..!

    aa karala rathri goes to hollywood

    ದಯಾಳ್ ಪದ್ಮನಾಭನ್ ನಿರ್ದೇಶನದ ಆ ಕರಾಳ ರಾತ್ರಿ ಕನ್ನಡ ಪ್ರೇಕ್ಷಕರ ಮನಸ್ಸು ಕದ್ದಿದ್ದ ಸಿನಿಮಾ. ಬೇರೆಯದ್ದೇ ವರ್ಗದ ಪ್ರೇಕ್ಷಕರನ್ನು ಥಿಯೇಟರಿಗೆ ಎಳೆದು ತಂದಿದ್ದ ಸಿನಿಮಾ, ವಿಭಿನ್ನ ಕಥೆ, ಕಾನ್ಸೆಪ್ಟ್‍ನಿಂದಾಗಿ ಗಮನ ಸೆಳೆದಿತ್ತು. ರಂಗಾಯಣ ರಘು, ಅನುಪಮಾ ಗೌಡ, ಕಾರ್ತಿಕ್ ಜಯರಾಮ್, ವೀಣಾ ಸುಂದರ್ ನಟಿಸಿದ್ದ ಚಿತ್ರವದು. 2018ರಲ್ಲಿ ರಿಲೀಸ್ ಆಗಿದ್ದ ಸಿನಿಮಾ ಹಿಟ್ ಎನಿಸಿಕೊಂಡಿತ್ತು.

    ಈಗ ಆ ಸಿನಿಮಾ ತೆಲುಗಿನತ್ತ ಹೊರಟಿದೆ. ತೆಲುಗಿನಲ್ಲಿ ಹಲವು ನಿರ್ಮಾಪಕರು ಮುಂದೆ ಬಂದಿದ್ದರು. ಈಗ ತೆಲುಗಿಗೆ ದೊಡ್ಡ ಮೊತ್ತಕ್ಕೇ ಸಿನಿಮಾ ರೀಮೇಕ್ ರೈಟ್ಸ್ ಮಾರಾಟವಾಗಿದೆ. ಕೊರೋನಾ ಎಫೆಕ್ಟ್ ಸೈಲೆಂಟ್ ಆದ ನಂತರ ತೆಲುಗಿನಲ್ಲಿ ಆ ಕರಾಳ ರಾತ್ರಿ ಶುರುವಾಗಲಿದೆ.

  • ಬಿಗ್‍ಬಾಸ್ ಮನೆಯಲ್ಲಿ ಬಿತ್ತಿದ ಬೀಜ ಕರಾಳ ರಾತ್ರಿ

    karala ratri started in big boss house

    ಆ ಕರಾಳ ರಾತ್ರಿ. ಈ ಚಿತ್ರ ಮೊಳಕೆಯೊಡೆದಿದ್ದೇ ಬಿಗ್‍ಬಾಸ್ ಮನೆಯಲ್ಲಿ. ಬಿಗ್‍ಬಾಸ್ ಮನೆಯಲ್ಲಿದ್ದಾಗ ದಯಾಳ್, ತಮ್ಮೊಂದಿಗಿದದ ಅನುಪಮಾ ಮತ್ತು ಜಯಕೀರ್ತಿಗೆ ಈ ಕಥೆ ಹೇಳಿದ್ದರಂತೆ. ಬಿಗ್‍ಬಾಸ್ ಮನೆಯಿಂದ ಹೊರಬಂದ ಮೇಲೆ ಚಿತ್ರಕ್ಕೆ ನೀವೇ ಹೀರೋ, ಹೀರೋಯಿನ್ ಎಂದಿದ್ದರಂತೆ. ಜೆಕೆಗೆ ಇಷ್ಟವಾಗಿದ್ದುದು ಆ ಕರಾಳ ರಾತ್ರಿ ಕಥೆ.

    ಕಥೆ ಡಿಫರೆಂಟ್ ಆಗಿತ್ತು. ಆದರೆ, ದಯಾಳ್ ಸಿನಿಮಾ ಮಾಡ್ತಾರಾ ಅನ್ನೋ ಅನುಮಾನವೂ ಇತ್ತು. ಆದರೆ, ಬಿಗ್‍ಬಾಸ್‍ನಿಂದ ಬಂದ ಮೇಲೆ ನನಗೇ ಗೊತ್ತಿಲ್ಲದಂತೆ ಸಿನಿಮಾ ಅನೌನ್ಸ್ ಮಾಡಿ ಸರ್‍ಪ್ರೈಸ್ ಕೊಟ್ಟರು ಎಂದಿದ್ದಾರೆ ಜೆಕೆ.

    ಚಿತ್ರಕ್ಕಾಗಿ ಇದೇ ಮೊದಲ ಬಾರಿಗೆ ಜೆಕೆ ಗೆಟಪ್ ಬದಲಾಗಿದೆ. ರೆಟ್ರೊ ಲುಕ್‍ನಲ್ಲಿ ಲಾಂಗ್ ಹೇರ್, ದಪ್ಪ ಮೀಸೆ, ಕಾಸ್ಟ್ಯೂಮ್ ಬದಲಿಸಿಕೊಂಡಿದ್ದಾರೆ. ಚಿತ್ರದ ಪ್ರತಿ ಡೈಲಾಗ್‍ನ್ನೂ ಎಂಜಾಯ್ ಮಾಡಿದ್ದೇನೆ. ಡೈಲಾಗುಗಳು ವಿಭಿನ್ನವಾಗಿವೆ. ದಯಾಳ್ ಚಿತ್ರದ ಸ್ಕ್ರಿಪ್ಟ್ ಕೊಟ್ಟಾಗ ನನ್ನಿಂದ ಇಂಥ ಸಿನಿಮಾ ಸಾಧ್ಯವಾ ಎಂಬ ಅನುಮಾನ ಮೂಡಿತ್ತು. ಆದರೆ, ಚಿತ್ರವನ್ನು ತುಂಬಾ ಇಷ್ಟಪಟ್ಟು ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಕಿರುತೆರೆಯ ಸೂಪರ್‍ಸ್ಟಾರ್ ಜೆಕೆ ಅಲಿಯಾಸ್ ಜಯಕೀರ್ತಿ.

  • ವ್ಹಾವ್.. ವಾಟ್ ಎ ಫಿಲಂ.. ಇದು ಕಿಚ್ಚನ ಕರಾಳ ರಾತ್ರಿ ವಿಮರ್ಶೆ

    kiccha sudeep appreciates karala ratri

    ಕರಾಳ ರಾತ್ರಿ. ದಯಾಳ್ ಪದ್ಮನಾಭ್ ನಿರ್ದೇಶನದ ಸಿನಿಮಾ ಸೈಲೆಂಟ್ ಆಗಿ ಹಿಟ್ ಆದ ಚಿತ್ರ. ಜಯಕೀರ್ತಿ, ಅನುಪಮಾ ಗೌಡ, ರಂಗಾಯಣ ರಘು ನಟಿಸಿದ್ದ ಚಿತ್ರ, ಬಿಡುಗಡೆಯಾದ ಮೇಲೆ ಹಂತ ಹಂತವಾಗಿ ಪ್ರೇಕ್ಷಕರ ಹೃದಯ ಗೆಲ್ಲುತ್ತಾ ಹೋಯ್ತು. ಈಗ 25 ದಿನಗಳ ಯಶಸ್ವೀ ಪ್ರದರ್ಶನ ಮುಗಿಸಿ ಮುನ್ನುಗ್ಗುತ್ತಿದೆ.

    ಜೆಕೆ, ಕಿಚ್ಚ ಸುದೀಪ್‍ರ ಆತ್ಮೀಯ ಗೆಳೆಯ. ಗೆಳೆಯನ ಚಿತ್ರವೊಂದು ಸಕ್ಸಸ್ ಕಾಣುತ್ತಿರುವ ಖುಷಿಗೆ, ಚಿತ್ರವನ್ನು ನೋಡಿರುವ ಸುದೀಪ್, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. 

    ಜೆಕೆ, ಸಿನಿಮಾವನ್ನು ನನಗೆ ತೋರಿಸಲು ಇಷ್ಟಪಟ್ಟಿದ್ದರು. ಸಮಯ ಹೊಂದಿಸಿಕೊಳ್ಳೋಕೆ ಆಗಲಿಲ್ಲ. ಚಿತ್ರವನ್ನು ನೋಡಿದಾಗ ಥ್ರಿಲ್ ಆಗಿ ಹೋದೆ. ಅತ್ಯಂತ ಕಡಿಮೆ ಪಾತ್ರಗಳು, ಪ್ರತಿಕ್ಷಣವೂ ನಮ್ಮನ್ನು ಚಿತ್ರದೊಳಗೆ ಕೂರಿಸಿಕೊಳ್ಳುವ ಚಿತ್ರಕಥೆ, ಸತ್ಯ ಗೊತ್ತಾದಾಗ ನಮ್ಮನ್ನು ಬೆಚ್ಚಿಬೀಳಿಸುತ್ತೆ. ಸೀಟ್‍ನ ತುದಿಗೆ ಕೂರುವಂತೆ ಮಾಡುತ್ತೆ.ಇಂಥಾದ್ದೊಂದು ಚಿತ್ರದಲ್ಲಿ ನಟಿಸಿದ ಕಲಾವಿದರು, ನಿರ್ದೇಶಕರು, ತಂತ್ರಜ್ಞರು ಎಲ್ಲರಿಗೂ ಹ್ಯಾಟ್ಸಾಫ್.

    ರಂಗಾಯಣ ರಘು, ಕನ್ನಡ ಚಿತ್ರರಂಗಕ್ಕೆ ದೊಡ್ಡದೊಂದು ಉಡುಗೊರೆ. ಅದು ಈ ಚಿತ್ರದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ವೀಣಾ ಸುಂದರ್ ಅಭಿನಯವಂತೂ ವಂಡರ್‍ಫುಲ್. ಅನುಪಮಾ ಅವರದ್ದಂತೂ 100 ಚಿತ್ರಗಳಲ್ಲಿ ನಟಿಸಿರುವ ಕಲಾವಿದರಂತೆ ಪ್ರಬುದ್ಧರಾಗಿ ನಟಿಸಿದ್ದಾರೆ. ಮೊದಲ ಚಿತ್ರದಲ್ಲೇ ಕಠಿಣ ಸವಾಲು ಸ್ವೀಕರಿಸಿ ಗೆದ್ದಿದ್ದಾರೆ. ಆಕೆಗೆ ಅತ್ಯುತ್ತಮ ಭವಿಷ್ಯವಿದೆ. ಇನ್ನು ಜೆಕೆ, ಈ ಚಿತ್ರದಲ್ಲಿ ನನಗೂ ಸರ್‍ಪ್ರೈಸ್ ಕೊಟ್ಟಿದ್ದಾರೆ. ಅವರ ಇನ್‍ವಾಲ್ವ್‍ಮೆಂಟ್, ಪಾತ್ರಕ್ಕೆ ತಮ್ಮನ್ನು ಒಗ್ಗಿಸಿಕೊಂಡಿರುವ ರೀತಿ ಅಮೋಘ.

    ನಿರ್ದೇಶಕ ದಯಾಳ್.. ಅವರಂತೂ ಎಕ್ಸಲೆಂಟ್. ಬೂದುಗನ್ನಡಿ ಹಾಕಿಕೊಂಡು ತಪ್ಪು ಹುಡುಕೋಣ ಎಂದು ಕೊಂಡೆ. ಝೂಮ್ ಲೆನ್ಸ್ ಫೇಲ್ ಆಯ್ತು. ಕಂಗ್ರಾಟ್ಸ್ ದಯಾಳ್. ನಾರಾಯಣ್ ಅವರ ಹಿನ್ನೆಲೆ ಸಂಗೀತವಂತೂ ಅದ್ಭುತ.

    ಯಾವುದೇ ಸಿನಿಮಾ ನೋಡಿದಾಗ ಅದು ಕಂಪ್ಲೀಟ್ ಎನಿಸುವುದಿಲ್ಲ. ಯಾವುದಾದರೊಂದು ಸಣ್ಣ ತಪ್ಪಾದರೂ ಕಾಣಿಸುತ್ತೆ. ಆದರೆ, ಈ ಚಿತ್ರವನ್ನು ನೋಡಿ. ವ್ಹಾವ್.. ವ್ಹಾಟ್ ಎ ಫಿಲ್ಮ್ ಅಂತೀರಿ.

    ಇದು ಕಿಚ್ಚ ಸುದೀಪ್ ಕರಾಳ ರಾತ್ರಿಗೆ ಬರೆದಿರುವ ವಿಮರ್ಶೆ. ಸಿನಿಮಾ ನಿಜಕ್ಕೂ ಥ್ರಿಲ್ಲಿಂಗ್ ಆಗಿದೆ ಅನ್ನೋದು ಸುದೀಪ್ ಮಾತು. 

  • ಶೂಟಿಂಗ್‍ಗಿಂತ ಮ್ಯೂಸಿಕ್ಕಿಗೇ ಹೆಚ್ಚು ಸಮಯ

    dayal is dedicationg more time to music

    ಆ ಕರಾಳ ರಾತ್ರಿ.. ದಯಾಳ್ ಪದ್ಮನಾಭ್ ನಿರ್ದೇಶನದ ಚಿತ್ರ. ಶೂಟಿಂಗ್‍ಗೆ ಹೋಗುವಾಗಲೇ ಮನಸ್ಸಿನಲ್ಲಿ ಇಡೀ ಸಿನಿಮಾವನ್ನು ಎಡಿಟಿಂಗ್ ಮಾಡಿಕೊಂಡಂತೆ ಪ್ಲಾನ್ ಮಾಡಿಕೊಳ್ಳುವ ದಯಾಳ್, ಇಡೀ ಚಿತ್ರದ ಶೂಟಿಂಗ್‍ನ್ನು 13 ದಿನಗಳಲ್ಲೇ ಮುಗಿಸಿಬಿಟ್ಟಿದ್ದಾರೆ. ಆದರೆ, ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡೋಕೆ ಶೂಟಿಂಗ್‍ಗಿಂತ ಹೆಚ್ಚು ಸಮಯ ತೆಗೆದುಕೊಂಡಿದ್ದಾರೆ. ಏಕೆಂದರೆ, ಇದು ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ. ನಡು ನಡುವೆ ಭಾವನಾತ್ಮಕ ದೃಶ್ಯಗಳೂ ಇವೆಯಂತೆ.

    ಜೆಕೆ ಮತ್ತು ಅನುಪಮಾ ಗೌಡ ಪ್ರಧಾನ ಪಾತ್ರದಲ್ಲಿರುವ ಚಿತ್ರದಲ್ಲಿ ರಂಗಾಯಣ ರಘು ಹಾಗೂ ವೀಣಾ ಸುಂದರ್ ಕೂಡಾ ನಟಿಸಿದ್ದಾರೆ. 4 ಪಾತ್ರಗಳ ಸುತ್ತಲೇ ಸುತ್ತುವ ಸಿನಿಮಾ, ನಾಟಕವೊಂದರನ್ನು ಆಧರಿಸಿ ಸಿದ್ಧವಾಗಿರೋದು ವಿಶೇಷ.