ಒಂದು ಕಡೆ ವಿಲನ್, ಮತ್ತೊಂದು ಕಡೆ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರಗಳಲ್ಲಿ ಬ್ಯುಸಿಯಾಗಿದ್ದ ಸುದೀಪ್, ಆಗಲೇ ಪೈಲ್ವಾನ್ ಚಿತ್ರತಂಡದಿಂದಲೂ ಗುಡ್‍ನ್ಯೂಸ್ ಕೊಟ್ಟಿದ್ದಾರೆ. ಸುದೀಪ್ ಬಾಕ್ಸರ್ ಆಗಿ ನಟಿಸುತ್ತಿರುವ ಚಿತ್ರದ ಮೊದಲ ಹಂತದ ಶೂಟಿಂಗ್ ಮುಗಿದಿದೆ.
ಮೇ 18ರಂದು ಚೆನ್ನೈನಲ್ಲಿ ಚಿತ್ರದ ಮೊದಲ ಹಂತದ ಶೂಟಿಂಗ್ ಶುರುವಾಗಿತ್ತು. ಕೃಷ್ಣ ನಿರ್ದೇಶನದ ಸಿನಿಮಾದ ಪ್ರತಿ ಕ್ಷಣವನ್ನೂ ಎಂಜಾಯ್ ಮಾಡುತ್ತಿದ್ದೇನೆ ಎಂದು ಖುಷಿ ಹಂಚಿಕೊಂಡಿದ್ದಾರೆ ಸುದೀಪ್.
ಅಂದಹಾಗೆ ಪೈಲ್ವಾನ್ ಚಿತ್ರದ 2ನೇ ಹಂತದ ಚಿತ್ರೀಕರಣ ಶೀಘ್ರದಲ್ಲೇ ಶುರುವಾಗಲಿದೆ. 2ನೇ ಹಂತದ ಚಿತ್ರೀಕರಣದಲ್ಲಿ ಸುನಿಲ್ ಶೆಟ್ಟಿ, ಸುದೀಪ್ ಜೊತೆ ನಟಿಸಲಿದ್ದಾರೆ.