ಬಾಲಿವುಡ್‍ನಲ್ಲಿ ಇಮ್ರಾನ್ ಹಶ್ಮಿ ಕಿಸ್ಸರ್ ಬಾಯ್ ಎಂದೇ ಫೇಮಸ್. ಹಶ್ಮಿ ಚಿತ್ರಗಳಲ್ಲಿ ರೊಮ್ಯಾನ್ಸ್, ಬೆಡ್‍ರೂಂ ಸೀನ್‍ಗಳು ಕಾಮನ್ ಆಗಿರ್ತವೆ. ಈಗ.. ಕನ್ನಡದಲ್ಲಿ ಸಂಚಾರಿ ವಿಜಯ್, ಇಮ್ರಾನ್ ಹಶ್ಮಿ ಆಗುತ್ತಿದ್ದಾರಾ..? ಅಂಥದ್ದೊಂದು ಇಮೇಜ್ ಪಡೆಯುವತ್ತ ಮುತ್ತಿನ ಹೆಜ್ಜೆಯಿಟ್ಟಿದ್ದಾರೆ ಸಂಚಾರಿ ವಿಜಯ್. ಅದು ಪಾದರಸ ಚಿತ್ರದಲ್ಲಿ.
ಪಾದರಸ ಚಿತ್ರದಲ್ಲಿ ಇಬ್ಬರು ನಾಯಕಿಯರು. ಆದರೆ, ಚಿತ್ರದಲ್ಲಿ ವಿಜಯ್, ಡಜನ್ ಹುಡುಗಿಯರ ಜೊತೆ ರೊಮ್ಯಾನ್ಸ್ ಮಾಡ್ತಾರಂತೆ. ರೇಖಾ, ಪೂರ್ಣಿಮಾ, ಆಶಾ, ಸಲ್ಮಾ, ನರ್ಗಿಸ್, ರೀಟಾ.. ಲಿಸ್ಟು ದೊಡ್ಡದಿದೆ. ಚಿತ್ರದ ಕಥೆ ಏನು.. ಅಂದ್ರೆ, ಥಿಯೇಟರ್‍ನಲ್ಲೇ ನೋಡಿ ಅನ್ನೋ ಉತ್ತರ ಬರುತ್ತೆ. ಇದುವರೆಗೆ ಸೀರಿಯಸ್ ರೋಲ್‍ಗಳನ್ನೇ ಮಾಡಿರುವ ಸಂಚಾರಿ ವಿಜಯ್‍ಗೆ ಕಾಮಿಡಿ ಹಾಗೂ ಪ್ಲೇಬಾಯ್ ಆಗಿ ನಟಿಸಿರುವುದು ಹೊಸ ಅನುಭವ.
ವಿಜಯ್ ಜೊತೆಗೆ ಜೈ ಜಗದೀಶ್, ಚಿ.ಗುರುದತ್, ಶೋಭರಾಜ್, ಭವ್ಯ.. ಹೀಗೆ ಸೀನಿಯರ್ ಕಲಾವಿದರ ದಂಡೇ ಇದೆ. ಹೃಷಿಕೇಶ್ ಜಂಬಗಿ ನಿರ್ದೇಶನದ ಚಿತ್ರವನ್ನು ಆರ್ಟ್ & ಸೋಲ್ ಬ್ಯಾನರ್‍ನಲ್ಲಿ ತೆರೆಗೆ ತರುತ್ತಿರುವುದು ನಿರ್ಮಾಪಕ ಕೃಷ್ಣ ರೇವಣ್‍ಕರ್.