` triveni rao, - chitraloka.com | Kannada Movie News, Reviews | Image

triveni rao,

 • ಗೌರಿ ಲಂಕೇಶ್ ಆಗ್ತಾರಾ ಟಗರು ಸರೋಜಾ..?

  is triveni rao acting as gauri lankesh

  ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನೆನಪಿದೆಯಲ್ಲವೇ..? ಮನೆಯ ಬಳಿ ಹಂತಕರ ಗುಂಡಿಗೆ ಬಲಿಯಾದ ಗೌರಿ, ಹತ್ಯೆಯಾದ ಮೇಲೆ ಜಗತ್ತಿನಾದ್ಯಂತ ಸುದ್ದಿಯಾದರು. ಈಗ ಅವರ ಹತ್ಯೆ ದೃಶ್ಯವನ್ನೇ ಹೋಲುವ ಸೀನ್ ಮಿಸ್ಟರ್ ನಟ್ವರ್‍ಲಾಲ್ ಅನ್ನೋ ಚಿತ್ರದಲ್ಲಿ ಚಿತ್ರೀಕರಣವಾಗಿದೆ. ಹಾಗೆ ಕೊಲೆಯಾಗುವ ಪಾತ್ರದಲ್ಲಿ ನಟಿಸಿರೋದು ಟಗರು ಚಿತ್ರದ ಕಾನ್‍ಸ್ಟೇಬಲ್ ಸರೋಜಾ ಖ್ಯಾತಿಯ ತ್ರಿವೇಣಿ ರಾವ್.

  ಗೌರಿ ಲಂಕೇಶ್ ಘಟನೆಗೂ, ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಚಿತ್ರದ ಕಥೆಗೆ ಪತ್ರಕರ್ತೆಯನ್ನು ಕೊಲ್ಲುವ ದೃಶ್ಯ ಸೂಕ್ತವೆನಿಸಿದ ಕಾರಣ, ಚಿತ್ರೀಕರಿಸಲಾಗಿದೆ ಎಂದಿದ್ದಾರೆ ನಟ, ನಿರ್ಮಾಪಕ ತನುಷ್. ಲವ ನಿರ್ದೇಶನದ ಚಿತ್ರದಲ್ಲಿ ತ್ರಿವೇಣಿ ರಾವ್ ಅವರಿಗೆ ಪ್ರಮುಖ ಪಾತ್ರವಿದೆ.

 • ದೆವ್ವ ಬಂದಿದ್ದು ನಿಜಾನಾ..? - ತ್ರಿವೇಣಿ ಹೇಳಿದ್ದೇ ಸತ್ಯ..!

  actress triveni's ghost story

  ಕಾನ್‍ಸ್ಟೇಬಲ್ ಸರೋಜ ಖ್ಯಾತಿಯ ತ್ರಿವೇಣಿ ನಾಯಕಿಯಾಗಿ ನಟಿಸಿರುವ ಅಲ್ಲೇ ಡ್ರಾ ಅಲ್ಲೇ ಬಹುಮಾನ, ಚಿತ್ರದ ಶೂಟಿಂಗ್ ವೇಳೆ ಪ್ರಜ್ಞೆ ತಪ್ಪಿ ಬಿದ್ದಿದ್ದು, ಅರೆ ಪ್ರಜ್ಞಾವಸ್ಥೆಯಲ್ಲಿ ನಂಗೆ ಅರಿಶಿಣ, ಕುಂಕುಮ ಬಳೆ ಬೇಕು ಎನ್ನುತ್ತಿರುವ ವಿಡಿಯೋ ವೈರಲ್ ಆಗಿದ್ದೇ ತಡ, ನಿಜಾನ..? ದೆವ್ ಬಂದಿದ್ದು ಸತ್ಯಾನಾ..? ಎಂಬ ಪ್ರಶ್ನೆಗಳು ಉದ್ಭವವಾದವು. ಇವುಗಳಿಗೆಲ್ಲ ಫುಲ್‍ಸ್ಟಾಪ್ ಇಟ್ಟಿದ್ದಾರೆ ತ್ರಿವೇಣಿ.

  ನಾನು ದೆವ್ವದ ಪಾತ್ರಕ್ಕೆ ತಯಾರಿ ಮಾಡಿಕೊಂಡಿದ್ದೆ. ಬಹುಶಃ ಪಾತ್ರದೊಳಗೆ ಹೊಕ್ಕು ಆ ರೀತಿಯಾಗಿರಬಹುದು. ಇನ್ನು ವಿಡಿಯೋದಲ್ಲಿರುವ ಡೈಲಾಗುಗಳು, ಚಿತ್ರದ ಡೈಲಾಗುಗಳೇ. ಹೊಸದೇನೂ ಇಲ್ಲ. ಪ್ರಜ್ಞೆ ತಪ್ಪಿ ಬಿದ್ದ ಮೇಲೆ ಏನಾಯ್ತು ಎಂಬುದು ನನಗೂ ಗೊತ್ತಿಲ್ಲ. ನಾನು ದೆವ್ವ ಇದೆ ಅನ್ನೋದನ್ನ ನಂಬೋದಿಲ್ಲ ಎಂದಿದ್ದಾರೆ ತ್ರಿವೇಣಿ.

  ಆದರೆ, ಮನೆಯವರ ಒತ್ತಾಯಕ್ಕೆ ಮಣಿದು ಘಟನೆಯ ನಂತರ ದೇವಸ್ಥಾನಕ್ಕೂ ಹೋಗಿ ಬಂದಿದ್ದಾರೆ.

 • ಪುನೀತ್ ಜೊತೆ ಸರೋಜಾ ಫೈಟ್

  triveni rao joins yuvaratna team

  ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್‍ಗೆ ಕಾನ್‍ಸ್ಟೇಬಲ್ ಸರೋಜಾ ಖ್ಯಾತಿಯ ತ್ರಿವೇಣಿ ಜೊತೆಯಾಗುತ್ತಿದ್ದಾರೆ. ಅದೂ ಯುವರತ್ನ ಚಿತ್ರದಲ್ಲಿ. ಸಂತೋಷ್ ಆನಂದರಾಮ್ ನಿರ್ದೇಶನದ ಯುವರತ್ನ ಚಿತ್ರದ ಕ್ಯಾಂಪ್‍ಗೆ ಹೊಸದಾಗಿ ಸೇರಿರುವ ತ್ರಿವೇಣಿ, ಪುನೀತ್ ಜೊತೆ ನಟಿಸಲು ಎಕ್ಸೈಟ್ ಆಗಿದ್ದಾರೆ.

  ಚಿತ್ರದಲ್ಲಿ ನನಗೆ ಪುನೀತ್ ಜೊತೆ ಒಂದು ಫೈಟಿಂಗ್ ಕೂಡಾ ಇದೆ. ಪಾತ್ರದ ವಿವರಗಳ ಬಗ್ಗೆ ಈಗಲೇ ಹೇಳೋಕಾಗಲ್ಲ. ನಾನಂತೂ ಎಕ್ಸೈಟ್ ಆಗಿದ್ದೇನೆ ಎಂದಿದ್ದಾರೆ ತ್ರಿವೇಣಿ.

  ಯುವರತ್ನ ಚಿತ್ರದಲ್ಲಿ ಸರೋಜಾ ಡಾರ್ಲಿಂಗ್ ಡಾಲಿ ಧನಂಜಯ್ ಕೂಡಾ ಪ್ರಮುಖ ಪಾತ್ರದಲ್ಲಿದ್ದು, ಧನಂಜಯ್‍ಗೆ ತ್ರಿವೇಣಿ ಜೋಡಿಯಾ ಎನ್ನುವ ಕುತೂಹಲ ಮೂಡಿದೆ.

 • ಸುದೀಪ್ ಜೊತೆ ಕಾನ್‍ಸ್ಟೇಬಲ್ ಸರೋಜ..?

  triveni rao to act with sudeep?

  ಕಿಚ್ಚ ಸುದೀಪ್ ಮತ್ತು ತ್ರಿವೇಣಿ ಒಂದೇ ಸಿನಿಮಾದಲ್ಲಿ ನಟಿಸ್ತಾರಾ..? ಸದ್ಯಕ್ಕೆ ಫೈನಲ್ ಆಗಿಲ್ಲ. ಮಾತುಕತೆಯಂತೂ ನಡೆಯುತ್ತಿದೆ. ಈ ಖುಷಿ ಹೇಳಿಕೊಂಡಿರೋದು ತ್ರಿವೇಣಿ.. ಅರ್ಥಾತ್ ಕಾನ್‍ಸ್ಟೇಬಲ್ ಸರೋಜ.

  ಟಗರು ಚಿತ್ರದಲ್ಲಿನ ಕೆಲವೇ ನಿಮಿಷಗಳ ಪಾತ್ರದಲ್ಲಿಯೇ ಪ್ರೇಕ್ಷಕರನ್ನು ಆಕ್ರಮಿಸಿಕೊಂಡ ಸರೋಜಾ, ಈಗ ಬ್ಯುಸಿಯಾಗಿಬಿಟ್ಟಿದ್ದಾರೆ. ನೆಗೆಟಿವ್ ಶೇಡ್ ಇರುವ ಆ ಪುಟ್ಟ ಪಾತ್ರವನ್ನು ಕೇವಲ ಶಿವರಾಜ್ ಕುಮಾರ್ ಜೊತೆ ಹಾಗೂ ಸೂರಿ ನಿರ್ದೇಶನದಲ್ಲಿ ನಟಿಸುವ ಚಾನ್ಸ್‍ಗಾಗಿ ಒಪ್ಪಿಕೊಂಡ ತ್ರಿವೇಣಿಗೆ ಈಗ ಅದೇ ಪುಟ್ಟ ಪಾತ್ರ ಅವಕಾಶಗಳ ಸುರಿಮಳೆ ಸುರಿಸುತ್ತಿದೆ.

  ಈ ಪಾತ್ರದಿಂದಾಗಿ ತೆಲುಗಿನಲ್ಲಿ ಬೆಲ್ಲಂಕೊಂಡ ಶ್ರೀನಿವಾಸ್ ಸಿನಿಮಾದಲ್ಲಿ ಸಿಬಿಐ ಆಫೀಸರ್ ಪಾತ್ರ ಮಾಡುತ್ತಿದ್ಧಾರೆ. ಚಿರು ಸರ್ಜಾರ ರಾಜಮಾರ್ತಾಂಡ ಚಿತ್ರದಲ್ಲಿ ಮಾಡೆಲ್ ಆಗಿ ನಟಿಸುತ್ತಿದ್ದು, ಚಿರುಗೆ ಜೋಡಿಯಾಗಿದ್ದಾರೆ. ನಾಯಕಿಯ ಪಾತ್ರವೇ ಆಗಬೇಕೆಂದೇನೂ ಇಲ್ಲ, ಅಭಿನಯಕ್ಕೆ ಅವಕಾಶ ಇರಬೇಕು ಅಂತಾರೆ ತ್ರಿವೇಣಿ.

  ಸುದೀಪ್ ಮತ್ತು ದರ್ಶನ್ ಜೊತೆ ನಟಿಸುವ ಕನಸಿದೆ. ಅವರ ಹೈಟು ನನ್ನ ಹೈಟ್‍ಗೆ ಮ್ಯಾಚ್ ಆಗುತ್ತೆ. ಸದ್ಯಕ್ಕೆ ಸುದೀಪ್ ಅವರ ಸಿನಿಮಾದ ಮಾತುಕತೆ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಕನ್‍ಫರ್ಮ್ ಆಗಲಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ ತ್ರಿವೇಣಿ.

#

Ayushmanbhava Movie Gallery

Kaurya Song Release Gallery