` d/o parvathamma, - chitraloka.com | Kannada Movie News, Reviews | Image

d/o parvathamma,

  • D/o ಪಾರ್ವತಮ್ಮ ಹರಿಪ್ರಿಯಾ ಖದರ್ ನೋಡಿದಿರಾ..?

    d/o paravathamma first look released

    ಹರಿಪ್ರಿಯಾಗೆ ಇತ್ತೀಚೆಗೆ ಅದೃಷ್ಟ ಖುಲಾಯಿಸಿಬಿಟ್ಟಿದೆ. ಚಿತ್ರಗಳ ಸಂಖ್ಯೆಯ ದೃಷ್ಟಿಯಲ್ಲಷ್ಟೇ ಅಲ್ಲ, ವಿಭಿನ್ನ ಪಾತ್ರಗಳಲ್ಲೂ ಅಷ್ಟೆ.. ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳು. ಡಾಟರ್ ಆಫ್ ಪಾರ್ವತಮ್ಮ ಚಿತ್ರದಲ್ಲಿ ತನಿಖಾಧಿಕಾರಿಯ ಪಾತ್ರ ಮಾಡುತ್ತಿರುವ ಹರಿಪ್ರಿಯಾ, ರಗಡ್ ಸ್ಟೈಲ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಪೊಲೀಸ್ ಜೀಪ್ ಮೇಲೆ ಕುಳಿತಿರುವ ಹರಿಪ್ರಿಯಾ ಅವರ ಲುಕ್ ಮತ್ತು ಸ್ಟೈಲ್ ಡಿಫರೆಂಟ್ ಆಗಿದೆ.

    ಅಂದಹಾಗೆ ಈ ಚಿತ್ರದ ಕಾಸ್ಟ್ಯೂಮ್ ಡಿಸೈನರ್ ಕೂಡಾ ಪ್ರಗತಿ ಶೆಟ್ಟಿ. ಬೆಲ್‍ಬಾಟಂ ಚಿತ್ರದಲ್ಲಿನ ಕಾಸ್ಟ್ಯೂಮ್ ಡಿಸೈನ್ ಇಷ್ಟವಾಗಿ ಈ ಚಿತ್ರದಲ್ಲೂ ಅವರೇ ಕಂಟಿನ್ಯೂ ಆಗಿದ್ದಾರೆ. ಶಂಕರ್ ಎಂಬ ಹೊಸ ಹುಡುಗನ ನಿರ್ದೇಶನದ ಚಿತ್ರದಲ್ಲಿ ಪಾರ್ವತಮ್ಮನಾಗಿ ನಟಿಸುತ್ತಿರುವುದು ಸುಮಲತಾ.

    ಈಗಾಗಲೇ 15 ದಿನಗಳ ಚಿತ್ರೀಕರಣ ಮುಗಿದಿದೆ. ಅಂದಹಾಗೆ ಇದು ಹರಿಪ್ರಿಯಾ ಅಭಿನಯದ 25ನೇ ಸಿನಿಮಾ.

  • Haripriya's 25th Film Is 'D/O Parvathamma'

    haripriya's 25th film

    Actress Haripriya who is one of the most wanted actresses of Kannada film industry has signed her 25th film called 'D/O Parvathamma'. The film has already been launched and the shooting is under progress.

    Haripriya's new film stars Sumalatha, Tara and others and Sumalatha Ambarish will be seen in the role of Parvathamma in the film. Haripriya plays the role of an investigating officer in this thriller.

    'D/O Parvathamma' is being written and directed by Shankar J. Shashidhar, Vijayalakshmi Krishnegowda, Sandeep Shimoga and Shwetha Madhusudhan are the producers. Mithun Mukundan is the music director, while Arul K Somasundaram is the cinematographer.

    Related Articles :-

    ಪಾರ್ವತಮ್ಮನ ಮಗಳಾಗಿ ಹರಿಪ್ರಿಯಾ @25

  • ಡಾಟರ್ ಆಫ್ ಪಾರ್ವತಮ್ಮ ಟೀಸರ್, ಮೊಮ್ಮಗನಿಂದ ಲಾಂಚ್

    d/o parvathamma teaser launched by vinay rajkumar

    ಡಾಟರ್ ಆಫ್ ಪಾರ್ವತಮ್ಮ. ಹರಿಪ್ರಿಯಾ ಅಭಿನಯದ 25ನೇ ಸಿನಿಮಾ. ಪಾರ್ವತಮ್ಮನ ಮಗಳಾಗಿ ಹರಿಪ್ರಿಯಾ ನಟಿಸಿದ್ದರೆ, ಪಾರ್ವತಮ್ಮನಾಗಿರೋದು ಸುಮಲತಾ ಅಂಬರೀಷ್. ಟೈಟಲ್‍ನಿಂದಲೇ ಗಮನ ಸೆಳೆದಿದ್ದ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಡಾಟರ್ ಆಫ್ ಪಾರ್ವತಮ್ಮ ಚಿತ್ರದ ಟೀಸರ್ ಲಾಂಚ್ ಮಾಡಿರೋದು ಮೊಮ್ಮಗ ಆಫ್ ಪಾರ್ವತಮ್ಮ.

    ರಾಘವೇಂದ್ರ ರಾಜ್‍ಕುಮಾರ್ ಅವರ ಪುತ್ರ ವಿನಯ್ ರಾಜ್‍ಕುಮಾರ್, ಚಿತ್ರದ ಟೀಸರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಶಶಿಧರ್ ಕೆ ನಿರ್ಮಾಪಕರಾಗಿದ್ದು, ಚಿತ್ರಕ್ಕೆ ಶಂಕರ್ ಜೆ. ನಿರ್ದೇಶಕರು.ಸೂರಜ್ ಗೌಡ ಹರಿಪ್ರಿಯಾಗೆ ಜೋಡಿಯಾಗಿದ್ದಾರೆ.

    ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೊಂದಿರುವ ಚಿತ್ರದಲ್ಲಿ ಹರಿಪ್ರಿಯಾ ಇನ್ವೆಸ್ಟಿಗೇಷನ್ ಆಫೀಸರ್ ಆಗಿ ನಟಿಸಿದ್ದಾರೆ.