` vasu nan pakka commercial, - chitraloka.com | Kannada Movie News, Reviews | Image

vasu nan pakka commercial,

  • 'Vasu - Naan Pakka Commercial' To Release On August 3rd

    vasu nan pakka commercial to release on aug 3rd

    Anish Tejeshwar's new film 'Vasu - Naan Pakka Commercial' is complete and the film is all set to be released on the 03rd of August.

    Recently, the pre-release event of the film was held at the Ambedkar Bhavan in Bangalore and actor Darshan announced the release date of the film. Rishabh Shetty, Pramod Shetty, Krishi Tapanda and others were present at the occasion.

    'Vasu - Naan Pakka Commercial' is being directed by debutante Ajithvasan. Anish is not only acting in the film, but also is producing the film under his new banner called Winkwhistle Studios. Nishvika Naidu is the heroine of the film.

  • Anish Turns Singer With 'Vasu - Naan Pakka Commercial'

    anish tejeshwar sings for vasu nan pakka commercial

    Anish Tejeshwar is all set to release his latest film 'Vasu - Naan Pakka Commercial'. The film is currently in the Censor Board and Anish is waiting for the green signal from the censor Board.

    Meanwhile, the actor-producer has turned singer with the film. Anish has sung a dance number and Ajaneesh Lokanath has composed the song. Recently, the song was recorded in Anish's voice in Bangalore.

    'Vasu - Naan Pakka Commercial' is being directed by debutante Ajithvasan. Anish is not only acting in the film, but also is producing the film under his new banner called Winkwhistle Studios. Nishvika Naidu is the heroine of the film.

  • Anish's 'Vasu - Naan Pakka Commercial' Trailer Released

    vasu naan pakka commercial trailer released

    Anish Tejeshwar who was last seen in 'Akira' which was released last year, is back with a new film called 'Vasu - Naan Pakka Commercial'. Rakshith Shetty released the trailer of the film recently. Meghana Gaonkar, Sindhu Lokanath and others were present at the occasion.

    Anish has not only acted in the film, but also has produced the film under his new banner called Winkwhistle Studios. The film is directed by debutante Ajithvasan.

    Nishvika Naidu who is acted in 'Amma I Love You' and is the heroine of the film. Ajaneesh Lokanath is the music director.

  • Darshan To Release The Songs Of 'Vasu - Naan Pakka Commercial'

    darshan to release vasu nan pakka commercial audio

    Anish Tejeshwar is all set to release his latest film 'Vasu - Naan Pakka Commercial'. The film is currently in the Censor Board and Anish is waiting for the green signal from the censor Board.

    Meanwhile, the songs of the film is all set to be released by Darshan today evening. The audio release programme is scheduled at the Dr Ambedkar Bhavan in Vasanth Nagar in Bangalore. 

    'Vasu - Naan Pakka Commercial' is being directed by debutante Ajithvasan. Anish is not only acting in the film, but also is producing the film under his new banner called Winkwhistle Studios. Nishvika Naidu is the heroine of the film.

     

  • Murali Releases The Songs Of 'Vasu - Naan Pakka Commercial'

    murali releases vasu nan pakka commercial video song

    The trailer of Anish Tejeshwar's new film 'Vasu - Naan Pakka Commercial' was released by actor-director Rakshith Shetty. Now the songs of the film was released by actor Murali in Bangalore.

    Actor Murali appreciated the making of the songs and wished Anish and the film a huge success.The songs of the film has been shot in Bangalore, Norway and England.

    Anish has not only acted in the film, but also has produced the film under his new banner called Winkwhistle Studios. The film is directed by debutante Ajithvasan. Nishvika Naidu who is acted in 'Amma I Love You' and is the heroine of the film. Ajaneesh Lokanath is the music director.

  • Vasu Naan Pakka Commercial Review - Chitraloka Rating - 3.5/5

    vasu nan pakka commercial review

    Anish Tejeshwar is one actor who was thriving for success for the last one decade. Despite proving his acting skills the actor could not get the necessary break in Sandalwood. His debut production as well as his latest venture 'Vasu Naan Pakka Commercial' is one film, which is sure to give him the much needed success.

    As the title itself suggests, the film is an out and out commercial film with lots of mass ingredients. The film tells the story of Vasu (Anish) a carefree youth who has good friends and family. Mahalakshmi (Nishvika Naidu) falls in love with Vasu and proposes to him. She also woos his family and friends. But Vasu mysteriously claims that he wants to kill Mahalakshmi. The answer lies in the crux of the film.

    The first half of the film is engaging and moves fastly. However, the second half of the film is a bit slow. In spite of that, the film manages to engage the audience with its commercial elements.

    Anish excels as Vasu and has given a wonderful performance. He is very easy in dance and stunts. Nishvika Naidu woos with her charm. The rest of the star cast provide ample support to the film. Music by Ajaneesh Lokanath is good and Ajaneesh gives some hummable songs through this film.

    Vasu is a good watch. Don't miss it.

  • ಅನೀಶ್ ಕಮರ್ಷಿಯಲ್‍ಗೆ ಅದೃಷ್ಟ ಖುಲಾಯಿಸುತ್ತಾ..?

    anish has high hopes on vasu nan pakka commercial

    ಎಂದೆಂದೂ ನಿನಗಾಗಿ, ನನ್ ಲೈಫಲ್ಲಿ, ಮಾಂಜಾ, ಪೊಲೀಸ್ ಕ್ರಾರ್ಟರ್ಸ್, ಅಕಿರಾ.. ಹೀಗೆ ಹಲವು ಚಿತ್ರಗಳಲ್ಲಿ ನಟಿಸಿದ್ದ ಅನೀಶ್‍ಗೆ ಮೆಚ್ಚುಗೆ ಸಿಕ್ಕಿದ್ದವು. ಅನೀಶ್‍ಗೆ ಒಳ್ಳೆಯ ಭವಿಷ್ಯವಿದೆ, ಒಳ್ಳೆಯ ಕಲಾವಿದ ಎಂದಿತ್ತು ಚಿತ್ರರಂಗ. ಆದರೆ, ಕಮರ್ಷಿಯಲ್ ಸಕ್ಸಸ್ ಸಿಕ್ಕಿರಲಿಲ್ಲ. ಈಗ ಆ ಕಮರ್ಷಿಯಲ್ ಸಕ್ಸಸ್‍ನ್ನು ತಾವೇ ಹುಡುಕಿಕೊಂಡಿದ್ದಾರೆ ಅನೀಶ್ ತೇಜೇಶ್ವರ್.

    ವಾಸು ನಾನ್ ಪಕ್ಕಾ ಕಮರ್ಷಿಯಲ್ ಚಿತ್ರವನ್ನು ತಾವೇ ನಿರ್ಮಿಸಿ, ನಟಿಸಿದ್ದಾರೆ. ಚಿತ್ರದಲ್ಲಿ ಕ್ವಾಟ್ಲೆ, ಕೀಟಲೆ, ತರ್ಲೆ, ತಮಾಷೆ, ಒಂದು ಒಳ್ಳೆ ಲವ್ ಸ್ಟೋರಿ ಎಲ್ಲವೂ ಇದೆ. 

    ಆಸ್ತಿಯೆಲ್ಲ ನಾಯಿಗೆ ಬರೀತಾನಂತೆ ಅಪ್ಪ.. , ನೋಡ್ತಾ ಇರು, ನನ್ ಅಪ್ಪ ಯಾರು ಅಂತಾ ಯಾರಿಗೂ ಗೊತ್ತಾಗಬಾರದು, ಆ ಲೆವೆಲ್ಲಿಗೆ ಬೆಳೀತೀನಿ.. ಅನ್ನೋ ಟ್ರೇಲರ್‍ನಲ್ಲಿದ್ದ ಡೈಲಾಗುಗಳು ಪ್ರೇಕ್ಷಕರಲ್ಲಿ ನಗು ಅರಳಿಸಿವೆ. ಅಮ್ಮ ಐ ಲವ್ ಯೂ ಖ್ಯಾತಿಯ ನಿಶ್ವಿಕಾ ನಾಯ್ಡು ನಾಯಕಿ. ಹಾಗೆ ನೋಡಿದ್ರೆ, ನಿಶ್ವಿಕಾರ ಮೊದಲ ಚಿತ್ರ ವಾಸು ನಾನ್ ಪಕ್ಕಾ ಕಮರ್ಷಿಯಲ್. 

    ಅಜಿತ್ ವಾಸನ್ ನಿರ್ದೇಶನದ ಚಿತ್ರ ಇದೇ ವಾರ ತೆರೆ ಕಾಣುತ್ತಿದೆ. ವಾಸು ಅದೃಷ್ಟ ಅರ್ಥಾತ್ ಅನೀಶ್ ಅದೃಷ್ಟ ಖುಲಾಯಿಸುತ್ತಾ..?

  • ಕಮರ್ಷಿಯಲ್ ವಾಸುಗೆ ಕನ್ನಡ ಸ್ಟಾರ್‍ಗಳ ಬೆಂಬಲ

    anish tejesh's vasu nan pakka commercial

    ವಾಸು ನಾನ್ ಪಕ್ಕಾ ಕಮರ್ಷಿಯಲ್. ನಾಳೆ ರಿಲೀಸಾಗುತ್ತಿರುವ ಈ ಚಿತ್ರಕ್ಕೆ ಕನ್ನಡ ಚಿತ್ರರಂಗದ ಸ್ಟಾರ್‍ಗಳ ಸಪೋರ್ಟ್ ಸಿಕ್ಕಿದೆ. ಕಿಚ್ಚ ಸುದೀಪ್, ಚಿತ್ರದ ಟ್ರೇಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿ, ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

    ಚಿತ್ರದ ಹಾಡುಗಳು ಹಾಗೂ ಚಿತ್ರದ ರಿಲೀಸ್ ಡೇಟ್‍ನ್ನು ಚಾಲೆಂಜಿಂಗ್ ಸ್ಟಾರ್ ಅನೌನ್ಸ್ ಮಾಡಿದ್ದರು.ಅಷ್ಟೇ ಅಲ್ಲ, ಚಿತ್ರದ ಒಂದು ಹಾಡನ್ನು ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಡಿದ್ದಾರೆ.

    ಹೀಗೆ ಪುನೀತ್, ದರ್ಶನ್ ಹಾಗೂ ಸುದೀಪ್.. ಚಿತ್ರತಂಡದ ಜೊತೆಯಲ್ಲಿರೋದು ಬಿಡುಗಡೆ ಖುಷಿಯಲ್ಲಿರುವ ಚಿತ್ರತಂಡದ ಕಾನ್ಫಿಡೆನ್ಸ್ ಹೆಚ್ಚಿಸಿರುವುದು ಸುಳ್ಳಲ್ಲ. ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸಿದ್ದು, ಚಿತ್ರಕ್ಕೆ ಅಜಿತ್ ವಾಸನ್ ಉಗ್ಗಿನ ನಿರ್ದೇಶಕ.

  • ನಾಯಕ.. ಗಾಯಕ.. ನಿರ್ಮಾಪಕ.. ವಾಸು ಪಕ್ಕಾ ಕಮರ್ಷಿಯಲ್

    vasu nan pakka commercial hero is a singer too

    ವಾಸು.. ಪಕ್ಕಾ ಕಮರ್ಷಿಯಲ್. ಇದು ಅನೀಷ್ ತೇಜೇಶ್ವರ್ ನಿರ್ಮಾಣದ ಸಿನಿಮಾ. ಈ ಚಿತ್ರಕ್ಕೆ ಅನೀಶ್ ನಿರ್ಮಾಪಕರಷ್ಟೇ ಅಲ್ಲ, ನಾಯಕರೂ ಹೌದು. ಚಿತ್ರದಲ್ಲಿ ಅವರೊಂದು ಹಾಡನ್ನೂ ಹಾಡಿದ್ದಾರೆ. ಇವನೊಬ್ಬ ಪೊರಕಿ.. ಇವನೊಬ್ಬ ಕಂತ್ರಿ.. ವಾಸು ಬಂದ ದಾರಿಬಿಡಿ ಅನ್ನೋ ಹಾಡಿಗೆ ಧ್ವನಿಯಾಗಿದ್ದಾರೆ ಅನೀಶ್.

    ಚಿತ್ರಕ್ಕೆ ಸಂಗೀತ ನೀಡಿರುವ ಅಜನೀಶ್ ಲೋಕನಾಥ್, ಈ ಹಾಡನ್ನು ಯಾರಿಂದ ಹಾಡಿಸಬೇಕು ಎಂದು ಚರ್ಚೆ ಮಾಡುತ್ತಿದ್ದರಂತೆ. ಸ್ವತಃ ನಿರ್ಮಾಪಕರಾಗಿದ್ದರೂ, ನಾನೊಂದ್ಸಲ ಟ್ರೈ ಮಾಡ್ಲ ಎಂದು ರಿಕ್ವೆಸ್ಟ್ ಮಾಡಿದ್ರಂತೆ ಅನೀಶ್. ಟ್ರೈ ಮಾಡೋಣ ಎಂದು ಸ್ಟುಡಿಯೋಗೆ ಕರೆಸಿ ಹಾಡಿಸಿಯೂ ಬಿಟ್ಟಿದ್ದಾರೆ ಅಜನೀಶ್. ಹಾಡು ಕೇಳಿದ ಮೇಲೆ ಇಷ್ಟವಾಗಿ ಅದನ್ನೇ ಉಳಿಸಿಕೊಂಡಿದ್ದಾರೆ.

    ಅಮ್ಮ ಐ ಲವ್ ಯು ಚಿತ್ರದಲ್ಲಿ ಗಮನ ಸೆಳೆದಿದ್ದ ನಿಶ್ವಿಕಾ ನಾಯ್ಡು, ಚಿತ್ರದ ನಾಯಕಿ. ಇದೇ ಶುಕ್ರವಾರ ಕಮರ್ಷಿಯಲ್ಲಾಗೇ ಚಿತ್ರಮಂದಿರಕ್ಕೆ ಬರುತ್ತಿದ್ದಾನೆ ವಾಸು.

  • ರಗಡ್ ಹೀರೋ.. ಬಜಾರಿ ಹೀರೋಯಿನ್.. ಪಕ್ಕಾ ಕಮರ್ಷಿಯಲ್

    vasu nan pakka commercial heroine nishvika naidu

    ವಾಸು ನಾನ್ ಪಕ್ಕಾ ಕಮರ್ಷಿಯಲ್. ಈ ಚಿತ್ರದ ನಾಯಕನಷ್ಟೇ ನಾಯಕಿಯ ಕಥೆಯೂ ಇಂಟರೆಸ್ಟಿಂಗ್. ಚಿತ್ರದ ನಾಯಕಿ ನಿಶ್ವಿಕಾ ನಾಯ್ಡು. ಅಮ್ಮ ಐ ಲವ್ ಯು ಚಿತ್ರದ ಮೂಲಕ ಕನ್ನಡಿಗರಿಗೆ ಚಿರಪರಿಚಿತವಾಗಿರುವ ಮುಖ. ಚೆಲುವೆ. ಈ ಚೆಲುವೆ ಮೊದಲು ನಟಿಸಿದ್ದ ಸಿನಿಮಾ ವಾಸು ನಾನ್ ಪಕ್ಕಾ ಕಮರ್ಷಿಯಲ್. ರಿಲೀಸ್ ಆಗಿದ್ದು ಮಾತ್ರ ಅಮ್ಮ ಐ ಲವ್ ಯು.

    ಈ ಚಿತ್ರದಲ್ಲಿ ನಿಶ್ವಿಕಾ ಪಾತ್ರದ ಹೆಸರು ಮಹಾಲಕ್ಷ್ಮಿ. ಸಂಪ್ರದಾಯಸ್ಥ ಹುಡುಗಿ. ಆದರೆ, ಬಜಾರಿ. ಇಷ್ಟಪಟ್ಟಿದ್ದನ್ನು ಅದೆಷ್ಟೇ ಕಷ್ಟವಾದರೂ ದಕ್ಕಿಸಿಕೊಳ್ಳಲೇಬೇಕು ಎಂದು ಹೊರಡುವ ಹಠಮಾರಿ.

    ಜಾಹೀರಾತಿನ ಮೂಲಕ ಚಿತ್ರರಂಗಕ್ಕೆ ಬಂದವಳು ನಾನು. ವಾಸು.. ಚಿತ್ರಕ್ಕೆ ಅಡಿಷನ್ ಮೂಲಕವೇ ಆಯ್ಕೆಯಾದೆ. ಅಮ್ಮ ಐ ಲವ್ ಯೂ ಚಿತ್ರಕ್ಕೂ ಅಷ್ಟೆ, ಅಡಿಷನ್ ಮೂಲಕವೇ ಆಯ್ಕೆಯಾದೆ. ಕನ್ನಡತಿಯಾಗಿ, ಕನ್ನಡ ನನ್ನ ಮೊದಲ ಆದ್ಯತೆ. ಅವಕಾಶ ಸಿಕ್ಕರೆ ಬೇರೆ ಭಾಷೆಗಳಲ್ಲೂ ನಟಿಸುತ್ತೇನೆ ಅಂತಾರೆ ನಿಶ್ವಿಕಾ ನಾಯ್ಡು.

    ಅಮ್ಮ ಐ ಲವ್ ಯು ರಿಲೀಸ್ ಆಗಿ ಪ್ರೇಕ್ಷಕರ ಮನಗೆದ್ದಿದೆ. ಈಗ.. ವಾಸು.. ಬೆಳ್ಳಿತೆರೆಗೆ ಬರುತ್ತಿದೆ. ಕೆ.ಮಂಜು ಪುತ್ರ ಶ್ರೇಯಸ್ ಮಂಜು ಜೊತೆ ಪಡ್ಡೆಹುಲಿ ಚಿತ್ರಕ್ಕೂ ನಿಶ್ವಿಕಾ ನಾಯಕಿ. 

    ವಾಸು.. ಚಿತ್ರಕ್ಕೆ ಅನೀಶ್ ತೇಜೇಶ್ವರ್ ನಾಯಕರಾಗಿದ್ದಾರೆ. ರಗಡ್ ಲುಕ್‍ನಲ್ಲಿ ಪ್ರೇಮಿಯಾಗಿ, ಮಗನಾಗಿ ನಟಿಸಿದ್ದಾರೆ. ನಿರ್ಮಾಪಕರೂ ಅವರೇ. ಅಜಿತ ವಾಸನ್ ಉಗ್ಗಿ ನಿರ್ದೇಶನವಿದೆ.

  • ಸಿನಿಮಾ ರಿಲೀಸ್ ಘೋಷಣೆಯಲ್ಲೇ ಅದ್ದೂರಿ ದರ್ಶನ

    vasu nan pakka commercial release date announced

    ವಾಸು ನಾನ್ ಪಕ್ಕಾ ಕಮರ್ಷಿಯಲ್. ಇದೇ ಆಗಸ್ಟ್ 3ಕ್ಕೆ ರಿಲೀಸ್ ಆಗುತ್ತಿರುವ ಸಿನಿಮಾ. ಆಡಿಯೋ, ಟೀಸರ್, ಟ್ರೇಲರ್ ಬಿಡುಗಡೆಗೆ ಅದ್ದೂರಿ ಕಾರ್ಯಕ್ರಮ ಮಾಡೋದು ನೋಡಿದ್ದೀರಿ. ಕೇಳಿದ್ದೀರಿ. ಆದರೆ, ಈ ವಾಸು ಪಕ್ಕಾ ಕಮರ್ಷಿಯಲ್. ಹೀಗಾಗಿ ಚಿತ್ರ ಬಿಡುಗಡೆ ದಿನಾಂಕ ಘೋಷಿಸೋಕೆಂದೇ ಅದ್ಧೂರಿ ಕಾರ್ಯಕ್ರಮ ಮಾಡಿದ್ದಾರೆ. ಸಿನಿಮಾದ ರಿಲೀಸ್ ಡೇಟ್ ಘೋಷಿಸಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್.

    ಚಿತ್ರದ ಬಿಡುಗಡೆ ದಿನಾಂಕ ಘೋಷಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು ದರ್ಶನ್.

    ಅನೀಶ್ ತೇಜೇಶ್ವರ್, ನಿಶ್ವಿಕಾ ನಾಯ್ಡು ಪ್ರಮುಖ ಭೂಮಿಕೆಯಲ್ಲಿರೋ ಚಿತ್ರಕ್ಕೆ, ಅಜಿತ್ ಉಗ್ಗಿನ್ ವಾಸನ್ ನಿರ್ದೇಶನವಿದೆ. ರಿಲೀಸ್ ಡೇಟ್ ಘೋಷಣೆ ಕಾರ್ಯಕ್ರಮದಲ್ಲಿ ಅನುಷಾ ರಂಗನಾಥ್, ಅನಿತಾ ಭಟ್, ಕೃಷಿ ತಾಪಂಡ ಹಾಡಿ ಕುಣಿದರು. ಮೌಂಟ್ ಕಾರ್ಮೆಲ್ ಕಾಲೇಜು ವಿದ್ಯಾರ್ಥಿನಿಯರು ಹಿಪ್‍ಹಾಪ್ ಡ್ಯಾನ್ಸ್ ಪ್ರದರ್ಶಿಸಿದರು. ಯಶವಂತ ಎಂಬ ಯುವಕ ಯೋಗಾಸನಗಳ ವಿವಿಧ ಭಂಗಿಗಳ ಪ್ರದರ್ಶನ ನೀಡಿದ್ರು.