` simbu, - chitraloka.com | Kannada Movie News, Reviews | Image

simbu,

  • Simbu Sings For 'Iruvudellava Bittu'

    simbu makes his kannada b=debut as singer

    Tamil actor Simbu is also known for his singing capabilities and has sung songs for Telugu and Tamil songs. Now the actor has sung for a Kannada song for the film 'Iruvudellava Bittu'.

    'Iruvudellava Bittu' is being directed by Kantha Kannalli who had directed 'Jalsa' earlier and Sridhar V Sambhram has composed the songs for the film. Recently, Sridhar has recorded a song sung by Simbu in Chennai. The lyrics for the song has been written by senior lyricist V Nagendra Prasad.

    Simbu had come in support of Kannadigas during the Kaveri water issue recently. Now the actor has sung a Kannada song and has shown his love towards Kannadigas.

  • Simbu To Release The Songs Of 'Iruvudellava Bittu'

    simbu sings for iruvudella bittu

    The songs of 'Iruvudellava Bittu' composed by Sridhar V Sambhram is all set to be released and Tamil actor Simbu will be releasing the audio of the film on the 25th of May. Simbu will be coming over to Bangalore and will be releasing the songs.

    One of the highlights of the film is, Simbu who is also known for his singing capabilities and has sung songs for Telugu and Tamil songs has sung a song for this film. . Now the actor has sung for a Kannada song for the film 'Iruvudellava Bittu'.  The lyrics for the song has been written by senior lyricist V Nagendra Prasad. Recently, the song was recorded in Chennai.

    'Iruvudellava Bittu' is being directed by Kantha Kannalli who had directed 'Jalsa'. Tilak, Meghana Raj and others play prominent roles in the film.

    Related Articles :-

    Simbu Sings For 'Iruvudellava Bittu'

     

  • ಕನ್ನಡದಲ್ಲಿ ಗಾಯಕರಾದರು ತಮಿಳು ನಟ ಸಿಂಬು

    simbu makes his kannada b=debut as singer

    ಸಿಂಬು, ಈ ತಮಿಳು ನಟ ಇತ್ತೀಚೆಗೆ ಕನ್ನಡಿಗರ ಡಾರ್ಲಿಂಗ್ ಆಗಿದ್ದವರು. ತಮಿಳಿನಲ್ಲಿ ಸ್ಟಾರ್ ಆಗಿರುವ ಕಲಾವಿದ ಸಿಂಬು, ತಮಿಳುನಾಡಿನಲ್ಲಿಯೇ ನಿಂತು, ತಮಿಳಿಗರಾಗಿದ್ದುಕೊಂಡೇ ಕಾವೇರಿ ವಿಚಾರದಲ್ಲಿ ಕನ್ನಡಿಗರ ಪರ ನಿಂತಿದ್ದರು. ಈಗ ಕನ್ನಡ ಸಿನಿಮಾದಲ್ಲಿ ಗಾಯಕರೂ ಆಗಿದ್ದಾರೆ.

    `ಇರುವುದೆಲ್ಲವ ಬಿಟ್ಟು ಇರುವೆ ಬಿಟ್ಟು ಕೊಳ್ಳುವುದೇ ಜೀವನ' ಚಿತ್ರದಲ್ಲಿ ಊರ ಸುದ್ದಿ ಕೇಳ್ತಾ ಇರುವೆ.. ಎಲ್ಲರಿಗೂ ಹೇಳ್ತಾ ಇರುವೆ.. ನಿಂದೂ ಸ್ವಲ್ಪ ಸೇರ್ಸುತಿರುವೆ.. ಯಾಕೆ ಬಿಟ್ಟುಕೊಳ್ತೀ ಇರುವೆ..  ಎಂಬ ಹಾಡು ಹಾಡಿದ್ದಾರೆ ಸಿಂಬು. ಸಂಭ್ರಮ ಶ್ರೀಧರ್ ಸಂಗೀತ ನೀಡಿರುವ ಹಾಡಿಗೆ, ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ. ಕಾಂತ ನಿರ್ದೇಶನದ ಸಿನಿಮಾದಲ್ಲಿ ಮೇಘನಾ ರಾಜ್ ನಾಯಕಿ. ದಾವಣಗೆರೆ ದೇವರಾಜ್ ನಿರ್ಮಾಣದ ಚಿತ್ರದ ಟ್ರೇಲರ್‍ನ್ನು ಮೇಘನಾ ಮದುವೆ ದಿನವೇ ಬಿಡುಗಡೆ ಮಾಡುವ ಉತ್ಸಾಹದಲ್ಲಿದೆ ಚಿತ್ರತಂಡ.

     

  • ಕನ್ನಡಿಗರ ಮನಗೆದ್ದ ಸಿಂಬು ಕಾವೇರಿ ಡೈಲಾಗ್

    simbu wins kannadaiga's hearts

    ಕಾವೇರಿ ವಿಚಾರ ಬಂದರೆ ತಮಿಳುನಾಡಿನ ಚಿತ್ರನಟರು ಹದ್ದುಮೀರಿ ಬಿಡುತ್ತಾರೆ. ಕಾವೇರಿಗಾಗಿ ಮಾತನಾಡುವ ಭರದಲ್ಲಿ ಕನ್ನಡಿಗರ ಬಗ್ಗೆಯೂ ಅವಹೇಳನ ಮಾಡೋಕೆ ಹಿಂಜರಿಯುವುದಿಲ್ಲ. ಈ ಹಿಂದೆ ಹಲವು ಬಾರಿ ಅದು ಸಾಬೀತೂ ಆಗಿದೆ. ಈಗ ಕಾವೇರಿ ನದಿ ನೀರು ಹಂಚಿಕೆ ಕುರಿತು ನಿರ್ವಹಣಾ ಮಂಡಳಿ ರಚಿಸಬೇಕು ಎಂದು ಒತ್ತಾಯಿಸಿ ತಮಿಳು ಚಿತ್ರರಂಗ ಪ್ರತಿಭಟನೆಗೆ ಕುಳಿತಿದೆ. ರಜಿನಿಕಾಂತ್, ಕಮಲ್‍ಹಾಸನ್ ಸೇರಿದಂತೆ ಇಡೀ ಚಿತ್ರರಂಗ ಪ್ರತಿಭಟನೆಗಿಳಿದಿರುವಾಗ ತಮಿಳು ನಟ ಸಿಂಬು, ಕನ್ನಡಿಗರ ಪರ ಧ್ವನಿ ಎತ್ತಿದ್ದಾರೆ.

    ಕರ್ನಾಟಕದಲ್ಲಿ ಅವರಿಗೇ ನೀರಿಲ್ಲ. ನಮಗೆ ನೀರು ಕೊಡಿ ಎಂದು ಕೇಳೋದು ಹೇಗೆ..? ನೀರಿಗಾಗಿ ನಾವು ನಾವು ಅಣ್ಣತಮ್ಮಂದಿರು ಜಗಳವಾಡಬೇಕಾ..? ನೀರು ಹೆಚ್ಚು ಇದ್ದಿದ್ದರೆ ಕನ್ನಡಿಗರು ಕೊಡಲ್ಲ ಎನ್ನುತ್ತಿದ್ದರಾ..? ಎಂದು ಪ್ರಶ್ನಿಸುವ ಮೂಲಕ, ಒಂದು ದೊಡ್ಡ ಸಮೂಹವನ್ನೇ ಎದುರು ಹಾಕಿಕೊಂಡಿದ್ದಾರೆ. 

    ನಿಮಗೆ ಸಮಸ್ಯೆ ಬೇಕೋ..? ಪರಿಹಾರ ಬೇಕೊ..? ಇದು ಸಿಂಬು ಎತ್ತಿರುವ ಪ್ರಶ್ನೆ. ಹಲವು ವರ್ಷಗಳಿಂದ ಹೋರಾಡುತ್ತಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಸಮಸ್ಯೆಯ ಮೂಲ ಇದಲ್ಲ ಎನ್ನುವ ಸಿಂಬು, ತಮಿಳು ಮಾಧ್ಯಮಗಳ ಟೀಕೆಯ ಮಧ್ಯೆಯೂ ಬಾಂಧವ್ಯ, ಸಹಬಾಳ್ವೆಯ ಬಗ್ಗೆ ಮಾತನಾಡಿರುವುದು ಕನ್ನಡಿಗರ ಮೆಚ್ಚುಗೆಗೆ ಕಾರಣವಾಗಿದೆ. ತಮಿಳು ಸ್ಟಾರ್ ಆಗಿ, ಇಡೀ ತಮಿಳು ಚಿತ್ರರಂಗವೇ ಕಾವೇರಿಗಾಗಿ ಧ್ವನಿ ಎತ್ತಿರುವಾಗ.. ಸಿಂಬು ಭಿನ್ನವಾಗಿ ಧ್ವನಿಯೆತ್ತುವ ಮೂಲಕ ಕನ್ನಡಿಗರ ಮೆಚ್ಚುಗೆ ಗಿಟ್ಟಿಸಿದ್ದಾರೆ.

    ನೀವು ಕುಡಿದು ದಣಿವಾರಿಸಿಕೊಂಡ ಬಳಿಕ ಮಿಕ್ಕ ನೀರನ್ನು ನಮಗೆ ಕೊಡುವಿರಾ..? ಇದು ಕನ್ನಡದ ತಾಯಂದಿರಿಗೆ ನಾನು ಮಾಡುತ್ತಿರುವ ಮನವಿ ಎಂದು ಕೇಳಿರುವ ಸಿಂಬು, ಕನ್ನಡಿಗರ ಹೃದಯ ಗೆದ್ದಿರುವುದು ಸುಳ್ಳಲ್ಲ.

  • ನಿರ್ಮಾಪಕರ ಒಗ್ಗಟ್ಟು : ಧನುಷ್, ಸಿಂಬು, ವಿಶಾಲ್`ರಂತಹ ಸ್ಟಾರ್ ನಟರಿಗೇ ಬಹಿಷ್ಕಾರದ ಎಚ್ಚರಿಕೆ

    ನಿರ್ಮಾಪಕರ ಒಗ್ಗಟ್ಟು : ಧನುಷ್, ಸಿಂಬು, ವಿಶಾಲ್`ರಂತಹ ಸ್ಟಾರ್ ನಟರಿಗೇ ಬಹಿಷ್ಕಾರದ ಎಚ್ಚರಿಕೆ

    ತಮಿಳು ಚಿತ್ರರಂಗದಲ್ಲಿ ಸ್ಟಾರ್ ನಟರ ಕಾರುಬಾರು ದೊಡ್ಡದು. ನಟರನ್ನು ದೇವರಂತೆಯೇ ಕಾಣುತ್ತಾರೆ. ಅಂತಹ ಚಿತ್ರರಂಗದಲ್ಲಿ ಸ್ಟಾರ್ ನಟರು ಈಗ ಬಹಿಷ್ಕಾರದ ಬಿಸಿ ಎದುರಿಸುತ್ತಿದ್ದಾರೆ. ಅದರಲ್ಲೂ ಧನುಷ್, ವಿಶಾಲ್, ಸಿಂಬು, ಅಥರ್ವ ಅವರಂತಹ ನಟರು. ಈ ಎಲ್ಲ ನಟರಿಗೆ ರೆಡ್ ಕಾರ್ಡ್ ನೀಡುವ ಮೂಲಕ ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿಯು ಅಚ್ಚರಿಯ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಇದರ ಅರ್ಥ  ಯಾವುದೇ ನಿರ್ಮಾಪಕರು ಈ ಹೀರೋಗಳನ್ನು ಹಾಕಿಕೊಂಡು ಇನ್ನುಮುಂದೆ ಸಿನಿಮಾ ಮಾಡುವಂತಿಲ್ಲ. ಕಳೆದ  13ರಂದು ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ. ಈ ನಿರ್ಧಾರದಿಂದಾಗಿ  ನಟರು  ನಿರ್ಮಾಪಕರ ಮಂಡಳಿ ಮುಂದಿನ ಸೂಚನೆ ನೀಡುವವರೆಗೂ ಯಾವುದೇ ನಿರ್ಮಾಣ ಸಂಸ್ಥೆಯು ಅವರೊಂದಿಗೆ ಸಿನಿಮಾಗಳನ್ನು ಮಾಡುವಂತಿಲ್ಲ. ಇನ್ನೊಂದರ್ಥದಲ್ಲಿ ಇವರನ್ನು ಬ್ಯಾನ್ ಮಾಡಲಾಗಿದೆ ಎನ್ನುವುದು.

    ಈ ನಾಲ್ವರು ಕಲಾವಿದರು ನಿರ್ಮಾಪಕರಿಂದ ಹಣ ಪಡೆದುಕೊಂಡು ಮೋಸ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.  ಕೆಲವು ತಿಂಗಳ ಹಿಂದೆ ಚೆನ್ನೈನ ಅಣ್ಣಾಸಾಲೈನಲ್ಲಿ ನಡೆದ ನಿರ್ಮಾಪಕರ  ಹಾಗೂ ಕಲಾವಿದರ  ಸಂಘದ ಸಭೆಯಲ್ಲಿ ಅನೇಕ ನಿರ್ಮಾಪಕರು  ಈ ನಾಲ್ವರು ನಟರ ಮೇಲೆ ಆರೋಪ ಮಾಡಿದ್ದರು. ಇದರಿಂದ ಈ ನಿರ್ಧಾರ ಎನ್ನಲಾಗಿದೆ.

    ಇಷ್ಟಕ್ಕೂ ಯಾವ್ಯಾವ ನಟರ ಮೇಲೆ ಯಾವ ರೀತಿಯ ಆರೋಪಗಳಿವೆ ಅನ್ನೋದನ್ನ ನೋಡೋದಾದ್ರೆ..

    ನಟ ಸಿಂಬು : ಶೂಟಿಂಗ್ ಜಾಗಕ್ಕೆ ಹೇಳಿದ ಸಮಯಕ್ಕೆ ಬರುವುದಿಲ್ಲ. ಚಿತ್ರೀಕರಣವನ್ನ ಯಾವಾಗ ಎಂದರೆ ಆವಾಗ ಪ್ಯಾಕಪ್ ಮಾಡಿಸ್ತಾರೆ.

    ಧನುಷ್ : ತಮ್ಮ ಬ್ಯಾನರ್ ಚಿತ್ರಕ್ಕಾಗಿ ಬೇರೆಯವರಿಗೆ ಒಪ್ಪಿಕೊಂಡಿದ್ದ ಚಿತ್ರಗಳಿಗೆ ಸ್ಪಂದಿಸುವುದಿಲ್ಲ

    ವಿಶಾಲ್ : ತಮಿಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿದ್ದಾಗ ಹಣವನ್ನು ದುರ್ಬಳಕೆ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಅಂಕಿ-ಅಂಶಗಳನ್ನು ಅವರು ಬಹಿರಂಗಪಡಿಸಿಲ್ಲ.

    ಅಥರ್ವ : ಇವರನ್ನು ನಂಬಿಕೊಂಡು ಯಾವುದೇ ಪ್ಲಾನ್ ಮಾಡಿಕೊಳ್ಳೋಕೆ ಆಗಲ್ಲ. ಚಿತ್ರೀಕರಣ, ಚಿತ್ರದ ಪ್ರಚಾರ ಎಲ್ಲವೂ ಇವರ ಬೇಜವಾಬ್ದಾರಿಯಿಂದಾಗಿ ದುಬಾರಿಯಾಗುತ್ತಿದೆ.