` chiru sarja, - chitraloka.com | Kannada Movie News, Reviews | Image

chiru sarja,

 • Chiru Bags Another

  chiru bags another

  Chiranjeevi Sarja who has signed a series of film, has bagged another one. The latest which is yet to be titled is being produced by the Ayogya fame T R Chandrashekar. This one is going to be directed by Mahesh Chaitanya who is presently assisting direction for Buddhivanta 2 film.

  The producer has revealed that it is going to be a complete commercial action entertainer, and it will be made on the lines of blockbuster film Jogi, for which the shooting will start from the first week of December.

  The actor is presently busy shooting for Khaki, Raja Marthanda, Aa Kshana, Ranam and Jugari Cross.

   

 • T R Chandrashekhar's New Film With Chiru

  tr chandrashekar's new film with chiru sarja

  Producer T R Chandrashekhar is currently producing Upendra starrer 'Buddhivantha 2' and Ajay Rao's 'Shokiwala'. Now Chandrashekhar has announced a new film with Chiranjeevi Sarja.

  Chandrashekhar will be producing a new file for Chiru under his Crystal Park Cinemas banner soon. The film will be directed by debutante Mahesh Chaitanya, who is currently working as a co-director for 'Buddhivantha 2'.

  Chiru is currently busy with 'Khakhee', 'Shivarjuna', 'Jugari Cross' and other films in hand and the new film is likely to start after the completion of these films.

 • ಅನುಮತಿಯನ್ನೇ ಪಡೆಯದೆ ಚಿತ್ರೀಕರಣ ದುರಂತಕ್ಕೆ ಕಾರಣ..?

  what is the reason behind ranam tragedy

  ರಣಂ ಚಿತ್ರದ ದುರಂತಕ್ಕೆ ಕಾರಣ ಏನು..? ಇಬ್ಬರನ್ನು ಬಲಿ ಪಡೆದ ದುರಂತದಲ್ಲಿ ನಿರ್ಲಕ್ಷ್ಯ, ಉಡಾಫೆ, ಕಡಿಮೆ ಬಜೆಟ್‍ನಲ್ಲಿ ಮಾಡಿ ಮುಗಿಸುವ ಧಾವಂತವೇ ಎದ್ದು ಕಾಣುತ್ತಿದೆ. ಮೇಲ್ನೋಟಕ್ಕೆ ಕಾಣಿಸುತ್ತಿರುವುದು ಹಾಗೂ ಪೊಲೀಸರು ಹೇಳುತ್ತಿರುವುದು ಇದನ್ನೇ.

  ಚಿತ್ರತಂಡ ಪೊಲೀಸರಿಂದ ಯಾವುದೇ ಅನುಮತಿ ಪಡೆದಿರಲಿಲ್ಲ. ಹಾಗೆಯೇ ಚಿತ್ರೀಕರಣ ಮಾಡುತ್ತಿತ್ತು. ಸಾರ್ವಜನಿಕ ಸ್ಥಳದಲ್ಲಿ ಕಾರ್ ಸ್ಫೋಟಿಸಲು ಅನುಮತಿ ಕೇಳಿದ್ದರೂ ಕೊಡುತ್ತಿರಲಿಲ್ಲ. ಇದಕ್ಕೆ ಚಿತ್ರತಂಡದ ನಿರ್ಲಕ್ಷ್ಯವೇ ಕಾರಣ ಎನ್ನುವುದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರೇ ಹೇಳಿರುವ ಮಾತು.

  ಘಟನೆ ಸಂಭವಿಸಿದ ಸ್ಥಳದಲ್ಲಿ ಟ್ರಾಫಿಕ್ ಕಡಿಮೆ. ವಾಹನಗಳು ಕಡಿಮೆ ಓಡಾಡುತ್ತವೆ. ಹೀಗಾಗಿಯೇ ಅನುಮತಿ ಪಡೆಯದೆ ಒಂದು ವಾರದಿಂದ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಸುತ್ತಿತ್ತು ಚಿತ್ರತಂಡ. 

 • ಜೋಗಿ ಪ್ರೇಮ್, ಚಿರು ಸರ್ಜಾ, ವಿನೋದ್ ಪ್ರಭಾಕರ್ ಸಂಗಮ ಫಿಕ್ಸ್

  jogi prem, chiru sarja, vinod prabhakar in a multi starrer film

  ನಿರ್ದೇಶಕ ಜೋಗಿ ಪ್ರೇಮ್, ಚಿರಂಜೀವಿ ಸರ್ಜಾ ಮತ್ತು ವಿನೋದ್ ಪ್ರಭಾಕರ್ ಒಟ್ಟಿಗೇ ಸಿನಿಮಾ ಮಾಡಲು ರೆಡಿಯಾಗಿದ್ದಾರಂತೆ. ಹೊಸ ನಿರ್ದೇಶಕರೊಬ್ಬರ ಕಥೆಗೆ ಓಕೆ ಎಂದಿದ್ದಾರಂತೆ ಮೂರೂ ಜನ. ಆದರೆ ಚಿತ್ರವಿನ್ನೂ ಆರಂಭಿಕ ಹಂತದಲ್ಲಿದೆ.

  ಚಿರು ಸದ್ಯಕ್ಕೆ ಸಿಕ್ಕಾಪಟ್ಟೆ ಬ್ಯುಸಿ ಇರುವ ಕಲಾವಿದ. ಒಟ್ಟೊಟ್ಟಿಗೇ ನಾಲ್ಕೈದು ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅತ್ತ ಜೋಗಿ ಪ್ರೇಮ್ ಏಕ್ ಲವ್ ಯಾ ಚಿತ್ರದ ನಿರ್ದೇಶನದಲ್ಲಿ ಬ್ಯುಸಿ. ಇತ್ತ ವಿನೋದ್ ಪ್ರಭಾಕರ್ ಕೈಲಿ ಕೂಡಾ 2 ಸಿನಿಮಾಗಳಿವೆ. ಹೀಗಿರುವಾಗ ಈ ಕಾಂಬಿನೇಷನ್ ಸಿನಿಮಾ ಯಾವಾಗ..?

  ಕಥೆ ಕೇಳಿದ್ದೇವೆ, ಇನ್ನೂ ಫೈನಲ್ ಆಗಿಲ್ಲ ಎನ್ನುವ ಚಿರಂಜೀವಿ ಸರ್ಜಾ ಕನ್ನಡಕ್ಕೆ ಮತ್ತೊಂದು ಮಲ್ಟಿಸ್ಟಾರ್ ಸಿನಿಮಾ ಸಿಗ್ನಲ್‍ನ್ನಂತೂ ಕೊಟ್ಟಿದ್ದಾರೆ.

 • ದಚ್ಚುಗೆ ನಾಯಿಯ ಉಡುಗೊರೆ

  Sinnga actor Chiru Sarja Gifts Darshan image

  ಪ್ರಾಣಿ ಪ್ರಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪುಟ್ಟದೊಂದು ನಾಯಿಮರಿ ಉಡುಗೊರೆಯಾಗಿ ಸಿಕ್ಕಿದೆ. ದರ್ಶನ್ ಅವರಿಗೆ ಈ ಪ್ರೀತಿಯ ಕಾಣಿಕೆ ನೀಡಿರುವುದು ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ದಂಪತಿ. ಸಿಂಗ ಚಿತ್ರದಲ್ಲಿ ವ್ಹಾಟ್ ಎ ಬ್ಯುಟಿಫುಲ್ ಹುಡುಗಿ ಹಾಡನ್ನು ದರ್ಶನ್ ರಿಲೀಸ್ ಮಾಡಿದ್ದರು. ಈ ಹಾಡಲ್ಲಿ ಫಿಮೇಲ್ ವರ್ಷನ್ ಗಾಯಕಿ ಮೇಘನಾ ರಾಜ್.

  ಬ್ಯೂಟಿಫುಲ್ ಹುಡುಗಿ ಹಾಡು ಹಿಟ್ ಆಗಿದೆ. ಚಿರು,ಮೇಘನಾ ಚಿತ್ರಗಳಿಗೆ ಸದಾ ಬೆಂಬಲವಾಗಿ ನಿಲ್ಲುವ ದರ್ಶನ್‍ಗೆ ಪುಟ್ಟದೊಂದು ಉಡುಗೊರೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಕುರುಕ್ಷೇತ್ರ ಚಿತ್ರದಲ್ಲಿ ದುರ್ಯೋಧನ ದರ್ಶನ್‍ರ ಪತ್ನಿ ಭಾನುಮತಿಯಾಗಿ ನಟಿಸಿರುವುದು ಕೂಡಾ ಮೇಘನಾ ಅವರೇ. 

  ಉದಯ್ ಮೆಹ್ತಾ ನಿರ್ಮಾಣದ ಸಿಂಗ ಚಿತ್ರಕ್ಕೆ ವಿಜಯ್ ಕಿರಣ್ ನಿರ್ದೇಶನವಿದೆ. ಆದಿತಿ ಪ್ರಭುದೇವ ನಾಯಕಿ. ಚಿತ್ರ ಇದೇ ವಾರ ರಿಲೀಸ್ ಆಗುತ್ತಿದೆ.

   

 • ಪಾರುಲ್ ಮಿಸ್ಸಿಂಗ್.. ನಾಟ್ ರೀಚಬಲ್ - ಸೀಜರ್ ಟೀಂ

  seizer director prpducer upset on heroine parul

  ಬಿಡುಗಡೆಯ ಹೊಸ್ತಿಲಲ್ಲಿ ನಿಂತಿರುವ ಚಿತ್ರ ಸೀಜರ್. ಆದರೆ, ಚಿತ್ರದ ಪ್ರಚಾರಕ್ಕೆ ಚಿತ್ರದ ಕಲಾವಿದರೇ ಸಹಕರಿಸುತ್ತಿಲ್ಲವಾ..? ಸೀಜರ್ ಚಿತ್ರದ ನಿರ್ಮಾಪಕ, ನಿರ್ದೇಶಕರ ಮಾತು ಕೇಳಿದರೆ ಹಾಗನ್ನಿಸೋದು ಸಹಜ.

  ಚಿತ್ರದ ನಾಯಕಿ ಪಾರುಲ್ ಯಾದವ್. ಆದರೆ, ನಿರ್ಮಾಪಕರಿಗೆ, ನಿರ್ದೇಶಕರಿಗೆ ಸಿಗುತ್ತಿಲ್ಲ. ಫೋನ್ ಸ್ವಿಚ್‍ಆಫ್. ಅವರು ಉಳಿದುಕೊಂಡಿರುವ ಹೋಟೆಲ್‍ಗೆ ಹೋಗಿ ಗಂಟೆಗಟ್ಟಲೆ ಕಾದರೂ ಸಿಕ್ಕಲ್ಲ. ತಾವು ನಟಿಸಿರುವ ಸಿನಿಮಾ ಬಗ್ಗೆ ಒಂದೇ ಒಂದು ಮಾತೂ ಆಡಲ್ಲ. ನಾವು ಪಾರುಲ್ ಅವರಿಗೆ ಯಾವುದೇ ಸಂಭಾವನೆ ಬಾಕಿ ಉಳಿಸಿಕೊಂಡಿಲ್ಲ ಎನ್ನುತ್ತಾರೆ ಚಿತ್ರದ ನಿರ್ದೇಶಕ ವಿನಯ್ ಕೃಷ್ಣ.

  ನಿರ್ಮಾಪಕ ತ್ರಿವಿಕ್ರಮ್ ಅವರದ್ದೂ ಇದೇ ಆರೋಪ. ಚಿತ್ರ 4 ವರ್ಷಗಳ ಹಿಂದೆ ಶುರುವಾಯ್ತು. ಆರಂಭದಲ್ಲಿ ಕನ್ನಡದಲ್ಲಷ್ಟೇ ಎಂದುಕೊಂಡಿದ್ದೆವು, ನಂತರ 4 ಭಾಷೆಯಲ್ಲೂ ನಿರ್ಮಿಸಿದೆವು. 15 ಕೋಟಿ ವೆಚ್ಚದ ಸಿನಿಮಾ. ಬಿಡುಗಡೆ ವಿಳಂಬವಾಗಿದ್ದಕ್ಕೆ ಬೇರೆ ಬೇರೆ ಕಾರಣಗಳಿವೆ. ಕಲಾವಿದರು ನಿರ್ಮಾಪಕರಿಗೆ ಈ ರೀತಿ ಅವಮಾನ ಮಾಡಬಾರದು ಎಂದು ಆಕ್ರೋಶ ಹೊರಹಾಕಿದ್ದಾರೆ ತ್ರಿವಿಕ್ರಮ್.

  ಚಿತ್ರತಂಡದ ಮುನಿಸು, ಆಕ್ರೋಶವೇನೇ ಇರಲಿ, ಸೀಜರ್ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಉಳಿದದ್ದು ಪ್ರೇಕ್ಷಕರಿಗೆ ಬಿಟ್ಟಿದ್ದು.

#

Ayushmanbhava Movie Gallery

Damayanthi Audio and Trailer Launch Gallery