` chutu chutu, - chitraloka.com | Kannada Movie News, Reviews | Image

chutu chutu,

 • Anand Audio Turns 20 Years As It Celebrates Chutu Chutu Video Song Hitting 75 M+ Views on YouTube

  anand audio turns 20 years as it celebrates chutu chutu

  One of sandalwood's premiere audio label - Anand Audio marks its twenty successful years in the industry. On this occasion, it celebrates its most popular video song from the movie Rambo 2 - 'Chutu Chutu’ on its YouTube channel with has crossed 75 million plus views, making it the most watched Kannada video song on YouTube.

  The song is composed by Arjun Janya in the voice of Ravindra Soragavi and Shamita Malnad. It is is penned by Shivu Bergi, which features Sharan and Ashika for the film Rambo 2 directed by Anil Kumar.

  The audio label thanks its viewers for making its 20 years of journey, a special one.

  The two decade year old company was started in 1999 by its founder Late Shri. Mohan Chabria. With over 700 + Films, 1000 Devotional and Non Film Album, Anand Audio is growing strong with more than 7000+ Songs. Anand Audio also has the biggest YouTube channel for Kannada Movies Music in India, with over 3.6 Million subscribers and growing.

 • ಕಿರಿಕ್ ಪಾರ್ಟಿ ದಾಖಲೆ ಮುರಿದ ಚುಟು ಚುಟು ಅಂತೈತಿ..

  chutu chutu bats krik party audio record

  ಚುಟು ಚುಟು ಅಂತೈತಿ ಹಾಡು ಯೂಟ್ಯೂಬ್‍ಗೆ ಎಂಟ್ರಿ ಕೊಟ್ಟು ವರ್ಷವಾಯ್ತು. ಶರಣ್-ಅಶಿಕಾ ರಂಗನಾಥ್ ಜೋಡಿ, ಆ ಜೋಡಿಯ ಕುಣಿತ, ಅರ್ಜುನ್ ಜನ್ಯಾ ಮ್ಯೂಸಿಕ್ಕು, ರವೀಂದ್ರ ಸೊರ್ಗಾವಿ, ಶಮಿತಾ ಮಲ್ನಾಡ್ ಕಂಠ, ಶಿವು ಬೆರಗಿ ಸಾಹಿತ್ಯ.. ಎಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗಿ, ಚಿತ್ರವೂ ಹಿಟ್ ಆಗಿರುವಾಗಲೇ.. ಚುಟು ಚುಟು ಹಾಡು ಯೂಟ್ಯೂಬ್‍ನಲ್ಲಿ ದಾಖಲೆಯನ್ನೇ ಬರೆದುಬಿಟ್ಟಿದೆ. ಚುಟು ಚುಟು ಹಾಡು, ಕನ್ನಡದಲ್ಲಿ ಅತೀ ಹೆಚ್ಚು ವೀಕ್ಷಿಸಿದ ಹಾಡು ಎಂಬ ದಾಖಲೆ ಬರೆದಿದೆ.

  ಈ ಮೊದಲು ಈ ದಾಖಲೆ ಕಿರಿಕ್ ಪಾರ್ಟಿ ಚಿತ್ರದ ಬೆಳಗೆದ್ದು ಯಾರ ಮುಖವಾ ನಾನು ನೋಡಿದೆ ಹಾಡಿಗಿತ್ತು. ಆ ಹಾಡನ್ನು ಏಳೂವರೆ ಕೋಟಿಗೂ ಹೆಚ್ಚು ಜನ ನೋಡಿದ್ದರು. ಅದನ್ನೂ ಮೀರಿ ಈಗಲೂ ರನ್ನಿಂಗ್‍ನಲ್ಲಿದೆ ಚುಟು ಚುಟು ಹಾಡು. 

   

 • ಚುಟು ಚುಟು ಅಂತೈತಿ.. ಸೆಲಬ್ರೇಷನ್ ಮಾಡೈತಿ..

  chutu chutu 100 m views celebrations

  ಚುಟು ಚುಟು ಅಂತೈತಿ.. ನನಗಾ ಚುಮು ಚುಮು ಆಗತೈತಿ.. ಹಾಡು ಬಂದು 2 ವರ್ಷವೇ ಆಯ್ತು. ಱಂಬೋ 2 ಚಿತ್ರದ ಈ ಹಾಡು0, ಸಿನಿಮಾಗೆ ಅತಿ ದೊಡ್ಡ ಪ್ರಚಾರವನ್ನೂ ಕೊಟ್ಟಿತ್ತು. ಸಿನಿಮಾ ಕೂಡಾ ಸೂಪರ್ ಹಿಟ್ ಆಗಿತ್ತು. ಅದಾದ ಮೇಲೆ ಹಾಡು ಯೂಟ್ಯೂಬ್ ಒಂದರಲ್ಲೇ 10 ಕೋಟಿ ವೀಕ್ಷಣೆ ದಾಟಿ ದಾಖಲೆಯನ್ನೂ ಬರೆದಿತ್ತು. ಈಗ ಆ ದಾಖಲೆಯನ್ನೇ ಸಂಭ್ರಮಿಸಿದೆ ಱಂಬೋ 2 ಟೀಂ.

  ಚಿತ್ರರಂಗದಲ್ಲಿ ಸಿನಿಮಾ 50 ದಿನ, 100 ದಿನ, 25 ವಾರ ಓಡಿದರೆ ಸಂಭ್ರಮಿಸುತ್ತಾರೆ. ಇತ್ತೀಚೆಗೆ ಅದು 25 ದಿನಕ್ಕೂ ಸಂಭ್ರಮಿಸುವ ಹಂತಕ್ಕೆ ಬಂದಿದೆ. ಆದರೆ.. ಒಂದು ಹಾಡಿನ ದಾಖಲೆಯನ್ನು ಚಿತ್ರತಂಡದೊಂದಿಗೆ ಸಂಭ್ರಮಿಸಿದೆ ಆನಂದ್ ಆಡಿಯೋ.

  ಅನಿಲ್‌ಕುಮಾರ್ ನಿರ್ದೇಶನ, ಅರ್ಜುನ್‌ ಜನ್ಯ ಸಂಗೀತವಿದ್ದ ಹಾಡನ್ನು ಶಿವು ಬೇರ್ಗಿ ಬರೆದಿದ್ದರು.

  ಈ ಹಾಡು ಅತಿ ಹೆಚ್ಚು ಜನ ವೀಕ್ಷಿಸಿದ ದಕ್ಷಿಣ ಭಾರತದ ಸಿನಿಮಾ ಹಾಡುಗಳ ಪೈಕಿ ಟಾಪ್ 25 ಲಿಸ್ಟ್ನಲ್ಲಿದೆಯಂತೆ.

  ಭೂಷಣ್‌ ನೃತ್ಯ ನಿರ್ದೇಶಿಸಿದ್ದ ಹಾಡಿಗೆ ಕ್ಯಾಮೆರಾ ಕೆಲಸ ಮಾಡಿದ್ದವರು ಸುಧಾಕರ್‌ ಎಸ್‌. ರಾಜ್‌. ಮೋಹನ್‌ ಬಿ. ಕೆರೆ ಕಲಾ ನಿರ್ದೇಶನವಿತ್ತು. ಹಾಡಿನಲ್ಲಿದ್ದ ಜಾನಪದದ ಸೊಗಡನ್ನು ಅಷ್ಟೇ ಸ್ಟೈಲಿಷ್ ಆಗಿ ಹಾಡಿದ್ದರು ಶಮಿತಾ ಮಲ್ನಾಡ್‌ ಮತ್ತು ರವೀಂದ್ರ ಸೊರಗಾವಿ. ಶರಣ್, ಅಶಿಕಾ ರಂಗನಾಥ್ ನರ್ತಿಸಿರುವ ಹಾಡು ಇಂದಿಗೂ ಸ್ಕೂಲು, ಕಾಲೇಜುಗಳ ವೇದಿಕೆಯಲ್ಲಿ ಟ್ರೆಂಡಿಂಗ್ನಲ್ಲಿದೆ. ಅಂದಹಾಗೆ.. ಸಂಭ್ರಮಾಚರಣೆ ವೇಳೆ ಆನಂದ್ ಆಡಿಯೋ 25ನೇ ವರ್ಷ ತುಂಬಿದ್ದನ್ನೂ ನೆನಪಿಸಿಕೊಂಡರು ಆನಂದ್ ಮತ್ತು ಶ್ಯಾಮ್. ಮಂಡಿಚಿಪ್ಪು ನೋವು ಮರೆತು ಕುಣಿದಿದ್ದನ್ನು ನೆನಪಿಸಿಕೊಂಡರು ಶರಣ್. ಅಶಿಕಾ ತೆಳ್ಳಗಾಗಿದ್ದರು. ಎಲ್ಲರ ಶ್ರಮಕ್ಕೆ ಪ್ರತಿಫಲ ಈಗ ಸಿಕ್ಕಿದೆ. ಹಾಡು ಹಿಟ್ ಆಗಲು ಕಾರಣಕರ್ತರಾದ ಎಲ್ಲರಿಗೂ ನಟ ಶ್ರೀಮುರಳಿ ನೆನಪಿನ ಕಾಣಿಕೆ ವಿತರಿಸಿ ಹಾರೈಸಿದ್ದು ವಿಶೇಷವಾಗಿತ್ತು.

 • ಚುಟು ಚುಟು ಬೆಡಗಿಯ ಚಿನಕುರಳಿ ಮಾತು

  ashika ranganath speaks about chutu chutu song

  ಚುಟು ಚುಟು.. ಹಾಡು ನೋಡಿದ್ದೀರಾ..? ರ್ಯಾಂಬೋ 2 ಚಿತ್ರದ ಆ ಹಾಡಿನಲ್ಲಿ ಗಮನ ಸೆಳೆದಿದ್ದು ಆಶಿಕಾ ರಂಗನಾಥ್ ಅವರ ಗ್ಲಾಮರ್. ಇದುವರೆಗೆ ಹೋಮ್ಲಿ ಪಾತ್ರಗಳಲ್ಲಿಯೇ ಕಾಣಿಸಿಕೊಂಡಿದ್ದ ಆಶಿಕಾ, ಚುಟು ಚುಟು ಹಾಡಿನಲ್ಲಿ ಕಣ್ಣು ಕುಕ್ಕುವಂತಿದ್ದರು. 

  ಆ ಹಾಡು, ಆ ಡ್ರೆಸ್ ಬಗ್ಗೆ ನನಗೆ ಗೊತ್ತಿತ್ತು. ಗೊತ್ತಿಲ್ಲದೆ ಒಪ್ಪಿಕೊಂಡಿದ್ದೇನೂ ಅಲ್ಲ. ಅದು ಗ್ಲಾಮರಸ್ ಆಗಿದೆ. ವಲ್ಗರ್ ಆಗಿಲ್ಲ. ಚಿತ್ರದಲ್ಲಿ ನನ್ನದು ಗೋವಾದ ಮಿಡ್ಲ್ ಕ್ಲಾಸ್ ಮನೆಯ ಹುಡುಗಿಯ ಪಾತ್ರ. ಪಾತ್ರದ ಹೆಸರು ಮಯೂರಿ. ಬೋಲ್ಡ್ ಹುಡುಗಿ. ಹೀಗಾಗಿ ಹಾಡಿನಲ್ಲೂ ಹಾಗೆಯೇ ಇದೆ ಅಷ್ಟೆ ಎಂದಿದ್ದಾರೆ ಆಶಿಕಾ ರಂಗನಾಥ್.

  ಆಫರ್‍ಗೋಸ್ಕರ ವಲ್ಗರ್ ಆಗಲ್ಲ. ಅವಕಾಶ ಸಿಗದೇ ಹೋದರೂ ವಲ್ಗರ್ ಪಾತ್ರಗಳಲ್ಲಿ ನಟಿಸಲ್ಲ. ಗ್ಲಾಮರ್ ಡ್ರೆಸ್ ತೊಟ್ಟರೆ ಆಫರ್ ಸಿಗುತ್ತೆ ಅನ್ನೋದೇ ಸುಳ್ಳು. ಇನ್ನು ಚುಟು ಚುಟು ಹಾಡನ್ನು ತುಂಬಾ ಜನ ಮೆಚ್ಚಿಕೊಂಡಿದ್ದಾರೆ. ತೆರೆಗೆ ಬಂದ ಮೇಲೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುತ್ತೆ ಅನ್ನೋ ಕುತೂಹಲ ನನಗೂ ಇದೆ ಎಂದಿದ್ದಾರೆ ಆಶಿಕಾ.