` ambi ninge vayasaitho, - chitraloka.com | Kannada Movie News, Reviews | Image

ambi ninge vayasaitho,

 • Ambi Ning Vayassaytho, Abishek most excited

  abhishek most excited for ambi ninge vaisaitho

  Guess who is the most excited person in the Ambareesh household about the upcoming film Ambi Ning Vayassaytho? It is not Ambareesh or Sumalatha but their son Abishek who is. It is because Abishek has not seen his father playing a lead role.

  The last time Ambareesh played lead role was in 2004 when S Mahendar directed Gowdru for him. That was 14 years ago. And even before that Ambareesh was acting in very few films as he was busy in politics. He was mostly acting in multistarrers or in guest roles.

  After the early 1990s he has not played his kind of action hero films at all. The last such role was in Operation Antha. In Ambi Ning Vayassaytho he plays a stuntman which gives him an opportunity to play the kind of roles that made him famous in the 1980s.

 • Ambi Ninge Vayassaitho' Audio On August 10th

  ambi ninge vaisaitho on aug 10th

  If everything had gone right, then Ambarish and Sudeep starrer 'Ambi Ninge Vayassaitho' was supposed to release on the 10th of August. Now the film's release has been postponed due to various reasons and the audio is scheduled to release on the same day.

  The songs of  'Ambi Ninge Vayassaitho' is all set to be released on the 10th of August. The audio release event will be held in Palace Grounds and all the top stars of Kannada cinema are expected to participate in the event. Not only the top stars of Kannada cinema, even Rajanikanth is expected to be a part of the event. Rajanikanth has already been invited and is yet to be seen whether he will grace the occasion. Rajanikanth's son-in-law and actor-director Dhanush has given confirmation to be a part of the event.

  'Ambi Ninge Vayassaitho' is the remake of Tamil hit 'Power Pandi' which was directed by Dhanush. The film is being directed by Gurudutt Ganiga and the screenplay is by Sudeep. Jack Manju is the producer. The film stars Ambarish, Suhasini, Sudeep and others in prominent roles. Arjun Janya is the music director, while Jabeen Jacob is the cameraman of the film.

 • ಅಂಬಿ.. ಜಲೀಲ ಸಾಂಗ್ ಹಿಟ್ಟಾಗೋಯ್ತೋ.

  hey jalila song is a total hit

  ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದ ಮೊದಲ ಹಾಡು ಹೊರಬಿದ್ದಿದೆ. ಅಭಿಮಾನಿಗಳ ಹೃದಯದಲ್ಲಿ ಹೇ ಜಲೀಲ.. ಖಾಯಂ ಸ್ಥಾನ ಗಿಟ್ಟಿಸಿಕೊಂಡಿದ್ದಾನೆ. ಹಾಡು ವೈರಲ್ ಆಗೋಕೆ ಶುರುವಾಗಿದೆ.

  ಫುಲ್ ಬಾಟ್ಲು ವಿಸ್ಕಿ ಈಗ ಕುಡ್ದಂಗಗಾಗದೆ ಎಂದು ಶುರುವಾಗುವ ಹಾಡಿನಲ್ಲಿ ಅಂಬರೀಷ್‍ರ ಜಲೀಲ ಮತ್ತು ಕನ್ವರ್‍ಲಾಲನನ್ನು ನೆನಪಿಸ್ತಾರೆ. ಅಂಬರೀಷ್‍ರ ಇಷ್ಟದ ಆಟೋಟಗಳನ್ನೂ ಸ್ಮರಿಸುತ್ತಾರೆ. ರೇಸು, ಇಸ್ಪೀಟು, ಗೌಡ್ರ ಗತ್ತು, ಅಂಬಿಯ ಬೈಗುಳ, ಆ ಬೈಗುಳದಲ್ಲಿರೋ ಪ್ರೀತಿ, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಗುಣ.. ಹೀಗೆ ಇಡೀ ಹಾಡಿನಲ್ಲಿರೋದು ಅಂಬರೀಷ್ ಗುಣಗಾನ. ಅಂಬಿಕಾ, ಚಳಿ ಚಳಿ ಹಾಡು, ಸುಮಲತಾ ಮದ್ವೆಯನ್ನೂ ಹಾಡಿನಲ್ಲಿ ನೆನಪಿಸ್ತಾರೆ ಜೋಗಿ ಪ್ರೇಮ್. ಅಂದಂಗೆ.. ಇಡೀ ಹಾಡಿಗೆ ಸಾಹಿತ್ಯ ಪೋಣಿಸಿರೋದು ಜೋಗಿ ಪ್ರೇಮ್ ಅವರೇ.

  ಹಾಡಿನ ಕಿಕ್ಕು ಹೆಚ್ಚಿಸಿರೋದು ವಿಜಯ್ ಪ್ರಕಾಶ್. ಆ ಕಿಕ್ ಹೆಚ್ಚೋಕೆ ಕಾರಣ, ಅರ್ಜುನ್ ಜನ್ಯರ ಮ್ಯೂಸಿಕ್ಕು. ಗುರುದತ್ ಗಾಣಿಗ ನಿರ್ದೇಶನದ ಚಿತ್ರಕ್ಕೆ ಕಿಚ್ಚ ಸುದೀಪ್ ಮತ್ತು ಜಾಕ್ ಮಂಜು ನಿರ್ಮಾಪಕರು. ಅಂಬರೀಷ್ ಹಲವು ವರ್ಷಗಳ ನಂತರ ಹೀರೋ ಆಗಿಯೇ ನಟಿಸುತ್ತಿರುವ ಚಿತ್ರವಾದ್ದರಿಂದ, ಕುತೂಹಲವಂತೂ ರಾಕೆಟ್ ರೇಂಜನ್‍ನಲ್ಲಿದೆ. ವಯಸ್ಸಾದ್ರೂ ನೋಡೋ ನೋಟ ರಾಕೆಟ್ಟಂಗಿದೆ ಅಂದ್ಮೇಲೆ ಅಷ್ಟು ನಿರೀಕ್ಷೆ ಇಟ್ಟುಕೊಳ್ಳೋದ್ರಲ್ಲಿ ತಪ್ಪೇನಿಲ್ಲ.

 • ಅಂಬಿಗೆ 66.. ಡೈರೆಕ್ಟರ್‍ಗೆ 26.. ಹೇಗಾಯ್ತು ಇದೆಲ್ಲ..?

  gurudutt ganiga talks about ambi

  ರೆಬಲ್‍ಸ್ಟಾರ್ ಅಂಬರೀಷ್‍ಗೆ ಈಗಿನ್ನೂ ಜಸ್ಟ್ 66 ವರ್ಷ. ಅವರ ಸಿನಿಮಾ ಅಂಬಿ ನಿಂಗ್ ವಯಸ್ಸಾಯ್ತೋ ನಿರ್ದೇಶಕ ಗುರುದತ್ ಗಾಣಿಗಗೆ ವಯಸ್ಸು 26 ವರ್ಷ. ಬಹುಶಃ ಅಂಬರೀಷ್ ಅವರ ಸಿನಿಮಾ ನಿರ್ದೇಶಿಸಿರುವ ಅತ್ಯಂತ ಚಿಕ್ಕ ವಯಸ್ಸಿನ ಹುಡುಗ ಗುರುದತ್. ಕೆಲವರಿಗೆ ಮಾತ್ರವೇ ಅಂತಾದ್ದೊಂದು ಅದೃಷ್ಟವಿರುತ್ತೆ. ಮೊದಲ ಸಿನಿಮಾದಲ್ಲಿಯೇ ಅಂಬರೀಷ್, ಸುಹಾಸಿನಿ, ಸುದೀಪ್‍ರಂತಹ ನಟರನ್ನು ನಿಭಾಯಿಸುವ ಅದೃಷ್ಟ. ಹೇಗಾಯ್ತು ಇದೆಲ್ಲ.. ಅಂತಾ ಕೇಳಿದ್ರೆ ಅವರು ತೋರಿಸೋದು ಸುದೀಪ್ ಅವರತ್ತ.

  ಗುರುದತ್, ಕುಂದಾಪುರದ ಹುಡುಗ. ಯಕ್ಷಗಾನದಲ್ಲಿ ಆಸಕ್ತಿಯಿತ್ತು. ಆದರೆ ಕ್ರಮೇಣ ಟಿವಿ, ಸಿನಿಮಾ ಗೀಳು ಹತ್ತಿಸಿಕೊಂಡ ಗುರುದತ್ ಗಾಂಧಿನಗರಕ್ಕೆ ಬಂದ್ರು. ಅಪ್ಪ ಅಮ್ಮನ ಮಾತು ಧಿಕ್ಕರಿಸಿ ಬಂದಿದ್ದ ಕಾರಣ, ನಿತ್ಯ ಜೀವನಕ್ಕೂ ಪರದಾಟವಿತ್ತು. ಆಗ ಹೊಟ್ಟೆಪಾಡಿಗಾಗಿ ಎಲ್ಲ ಕೆಲಸವನ್ನೂ ಮಾಡಿದ ಗುರುದತ್, ಮೇಕಪ್ ಮ್ಯಾನ್‍ನಿಂದ ಹಿಡಿದು ಸೆಟ್ ಬಾಯ್‍ವರೆಗೆ ಎಲ್ಲ ಕೆಲಸವನ್ನೂ ಮಾಡಿದ್ದಾರೆ. ಹೀಗಿರುವಾಗಲೇ ಅವರು ಒಂದು ದಿನ ಸುದೀಪ್ ಕಣ್ಣಿಗೆ ಬಿದ್ದರು. ಅದೃಷ್ಟದ ಬಾಗಿಲು ತೆರೆದುಕೊಂಡಿತ್ತು.

  ನಿಂಗೆ ಒಳ್ಳೆ ಕಮ್ಯುನಿಕೇಷನ್ ಸ್ಕಿಲ್ ಇದೆ. ಏನ್ ಮಾಡಬೇಕು ಅಂದ್ಕೊಂಡಿದ್ದೀಯಾ ಅಂದ್ರಂತೆ ಸುದೀಪ್. ಡೈರೆಕ್ಟರ್ ಆಗುವ ಆಸೆಯನ್ನು ಬಿಚ್ಚಿಟ್ಟ ಗುರುದತ್ ಅವರನ್ನ ತಮ್ಮ ಜೊತೆಯಲ್ಲೇ ಅಸಿಸ್ಟೆಂಟ್ ಆಗಿ ಸೇರಿಸಿಕೊಂಡಿದ್ದಾರೆ. ಅದಕ್ಕೂ ಮೊದಲು ಸಂಜು ವೆಡ್ಸ್ ಗೀತಾಗೆ ನಾಗಶೇಖರ್ ಜೊತೆ ಹಾಗೂ ಎಸ್.ನಾರಾಯಣ್ ಜೊತೆ ಸ್ವಲ್ಪ ಸ್ವಲ್ಪ ಕೆಲಸ ಮಾಡಿದ್ದ ಗುರುದತ್, ಮಾಣಿಕ್ಯ ಚಿತ್ರದಲ್ಲಿ ಸಂಪೂರ್ಣವಾಗಿ ಅಸಿಸ್ಟೆಂಟ್ ಡೈರೆಕ್ಟರ್ ಆದ್ರು. ಸುದೀಪ್ ಅವರ ಸಂಬಂಧಿಯಾಗಿರೋ ಸಂಚಿತ್ ಎಂಬುವರ ಜೊತೆ ಕಿರುಚಿತ್ರಗಳಲ್ಲಿ ತೊಡಗಿಸಿಕೊಂಡ್ರು. ತಮ್ಮದೇ ಆದ ಒಂದು ಸ್ಕ್ರಿಪ್ಟ್ ಮಾಡಿಕೊಂಡು ನಿರ್ಮಾಪಕರ ಹುಡುಕಾಟದಲ್ಲಿದ್ದಾಗಲೇ.. ಅಂಬಿ ನಿಂಗ್ ವಯಸ್ಸಾಯ್ತೋ.. ಚಿತ್ರದ ಆಫರ್ ಸಿಕ್ಕಿದ್ದು. ಸುದೀಪ್ ಮತ್ತು ಜಾಕ್ ಮಂಜು ಅವರೇ ನಿರ್ಮಾಪಕರು.

  ಮೊದಲ ಚಿತ್ರದಲ್ಲಿಯೇ ದೊಡ್ಡ ದೊಡ್ಡ ಸ್ಟಾರ್‍ಗಳನ್ನು ನಿರ್ದೇಶಿಸುವ ಅವಕಾಶ ಬಿಡೋಕೆ ಸಾಧ್ಯನಾ..? ಜೊತೆಗೆ ಸುದೀಪ್ ಇದ್ದರು. ಈಗ ಚಿತ್ರ ಮುಗಿಸಿದ್ದೇವೆ. ಮನೆಯಲ್ಲಿ ನನ್ನ ಸಿನಿಮಾ ಕನಸನ್ನು ವಿರೋಧಿಸಿದ್ದವರೆಲ್ಲ ಈಗ ಒಪ್ಪಿಕೊಂಡಿದ್ದಾರೆ ಎಂದು ಹೇಳೋ ಗುರುದತ್, ಮೊದಲ ಚಿತ್ರವನ್ನು ಪ್ರೇಕ್ಷಕ ಹೇಗೆ ಸ್ವೀಕರಿಸುತ್ತಾನೆ ಎಂದು ತಿಳಿದುಕೊಳ್ಳೋ ಕುತೂಹಲದಲ್ಲಿದ್ದಾರೆ

 • ಅಂಬಿಗೆ ಸುಮಲತಾನೇ ಜೋಡಿ ಆಗ್ತಾರಾ..?

  will sumalatha be ambi's heroine?

  ರೆಬಲ್‍ಸ್ಟಾರ್ ಅಂಬರೀಷ್ ಅಭಿನಯದ `ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರದಲ್ಲಿ ಅಂಬಿಗೆ ಜೋಡಿ ಯಾರು ಅನ್ನೋದು ಈಗ ಚಿತ್ರತಂಡವನ್ನು ಕಾಡುತ್ತಿದೆ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ, ಸುಹಾಸಿನಿ ಅಂಬಿಗೆ ಜೋಡಿಯಾಗಬೇಕಿತ್ತು. ಆದರೆ, ಡೇಟ್ಸ್ ಸಮಸ್ಯೆಯಿಂದಾಗಿ ಸುಹಾಸಿನಿ ಹಿಂದೆ ಸರಿದಿದ್ದಾರೆ. ಹೀಗಾಗಿ ಚಿತ್ರತಂಡ ರಮ್ಯಾಕೃಷ್ಣ, ಖುಷ್‍ಬೂ ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡಿತ್ತು. ಆದರೆ, ಇದೆಲ್ಲವನ್ನೂ ಕೈಬಿಟ್ಟು ಸುಮಲತಾ ಅವರನ್ನೇ ನಾಯಕಿಯನ್ನಾಗಿಸಬಾರದೇಕೆ ಎಂಬ ಚರ್ಚೆ ಶುರುವಾಗಿದೆ.

  ಅಂಬರೀಷ್ ಸುಮಲತಾ ಈ ಹಿಂದೆ ಹಲವು ಚಿತ್ರಗಳಲ್ಲಿ ಜೋಡಿಯಾಗಿದ್ದವರು. ಕನ್ನಡ ಚಿತ್ರರಂಗದ ಯಶಸ್ವಿ ಜೋಡಿಗಳಲ್ಲಿ ಅಂಬಿ-ಸುಮಲತಾ ಜೋಡಿಯೂ ಒಂದು. ಇತ್ತೀಚೆಗೆ ದೊಡ್ಮನೆ ಹುಡ್ಗ ಚಿತ್ರದಲ್ಲೂ ಅಂಬಿ-ಸುಮಲತಾ ಜೋಡಿಯಾಗಿ ನಟಿಸಿದ್ದರು. ಜಾಕ್ ಮಂಜು ನಿರ್ಮಾಣದ ಚಿತ್ರದಲ್ಲಿ ಸುಮಲತಾ ಅವರನ್ನೇ ಆಯ್ಕೆ ಮಾಡಿಕೊಳ್ಳಬಾರದೇಕೆ ಎಂದು ಚಿತ್ರತಂಡ ಚಿಂತಿಸುತ್ತಿದೆ. ಆದರೆ, ಸದ್ಯಕ್ಕೆ ಫೈನಲ್ ಆಗಿಲ್ಲ.

  ಚಿತ್ರದಲ್ಲಿ ಯಂಗ್ ಅಂಬರೀಷ್ ಪಾತ್ರದಲ್ಲಿ ಕಿಚ್ಚ ಸುದೀಪ್ ನಟಿಸುತ್ತಿದ್ದು, ಸುದೀಪ್‍ಗೆ ಶೃತಿ ಹರಿಹರನ್ ನಾಯಕಿ. ವಯಸ್ಸಾದ ಮೇಲೆ ಸೀನಿಯರ್ ಸುದೀಪ್ ಪಾತ್ರವೇ ಅಂಬರೀಷ್ ಆಗ್ತಾರೆ. ಸೀನಿಯರ್ ಶೃತಿ ಹರಿಹರನ್ ಯಾರಾಗ್ತಾರೆ ಅನ್ನೋದಷ್ಟೇ ಈಗಿನ ಕುತೂಹಲ.

  ಉತ್ತರ ಹೇಳಬೇಕಿರುವುದು ನಿರ್ಮಾಪಕ ಜಾಕ್ ಮಂಜು ಹಾಗೂ ನಿರ್ದೇಶಕ ಗುರುದತ್ ಗಾಣಿಗ.

   

 • ಅಂಬಿಗೆ ಸುಹಾಸಿನಿಯೇ ಜೋಡಿಯಾಗಿ ಬಂದರು..!

  suhasini to pair with ambi

  ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದಲ್ಲಿ ರೆಬಲ್‍ಸ್ಟಾರ್ ಅಂಬರೀಷ್‍ಗೆ ಜೋಡಿ ಯಾರು ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಅಂಬರೀಷ್‍ಗೆ ಜೋಡಿ ಸುಮಲತಾ ಅಲ್ಲ, ರಮ್ಯಕೃಷ್ಣಾ ಅಲ್ಲ, ಖುಷ್‍ಬೂ ಕೂಡಾ ಅಲ್ಲ. ಮೊದಲೇ ನಿಗದಿಯಾಗಿದ್ದಂತೆ ಸುಹಾಸಿನಿ.

  ಈಗಾಗಲೇ ಸುಹಾಸಿನಿ ಶೂಟಿಂಗ್‍ಗೆ ಆಗಮಿಸಿದ್ದು, ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಜಾಕ್ ಮಂಜು ನಿರ್ಮಾಣದ ಈ ಚಿತ್ರಕ್ಕೆ ಬೆನ್ನೆಲುಬಾಗಿರುವುದು ಕಿಚ್ಚ ಸುದೀಪ್. ಗುರುದತ್ ಗಾಣಿಗ ಎಂಬ ಯುವ ಪ್ರತಿಭೆಗೆ ಚಿತ್ರ ನಿರ್ದೇಶನದ ಜವಾಬ್ದಾರಿ ನೀಡಲಾಗಿದೆ.

 • ಕಿಚ್ಚನಲ್ಲಿ ಮಗುವನ್ನು ಕಂಡರಂತೆ ಶೃತಿ ಹರಿಹರನ್

  sruthi thanks sudeep

  ಕಿಚ್ಚ ಸುದೀಪ್ ಹೊರಗಿನಿಂದ ನೋಡುವವರಿಗೆ ಸದಾ ಸೀರಿಯಸ್ಸಾಗಿರುವಂತೆ ಕಾಣಿಸ್ತಾರೆ. ಅಫ್‍ಕೋರ್ಸ್, ವೃತ್ತಿಯ ವಿಚಾರಕ್ಕೆ ಬಂದರೆ ಕಿಚ್ಚ ಸುದೀಪ್ ಸಿಕ್ಕಾಪಟ್ಟೆ ಸೀರಿಯಸ್. ಆದರೆ ಅವರ ಜೊತೆ ಕೆಲಸ ಮಾಡಿದವರಿಗೆ ಸ್ನೇಹಮಯಿ ಸುದೀಪ್ ಇಷ್ಟವಾಗಿಬಿಡ್ತಾರೆ. ಶೃತಿ ಹರಿಹರನ್‍ಗೆ ಆಗಿರುವುದು ಕೂಡಾ ಇಂಥದ್ದೇ ಅನುಭವ.

  ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದಲ್ಲಿ ಸುದೀಪ್‍ಗೆ ಜೋಡಿಯಾಗಿರುವ ಶೃತಿ ಹರಿಹರನ್, ಸುದೀಪ್ ಅವರಲ್ಲಿ ಮಗುವಿನ ಮನಸ್ಸು ಕಂಡಿದ್ದಾರಂತೆ. ನಿಮ್ಮೊಂದಿಗೆ ಕೆಲಸ ಮಾಡಿದ್ದು ಸುಂದರ ಅನುಭವ. ನಿಮ್ಮ ಆಹಾರ, ಸಂಗೀತ ಮತ್ತು ಸಿನಿಮಾ ಅಭಿರುಚಿ ಇಷ್ಟವಾಯ್ತು. ಎಲ್ಲಕ್ಕಿಂತ ಇಷ್ಟವಾಗಿದ್ದು ನಿಮ್ಮೊಳಗೆ ಈಗಲೂ ಜೀವಂತವಾಗಿರುವ ಮಗುತನ ಎಂದು ಹೇಳಿದ್ದಾರೆ ಶೃತಿ.

  ನೀವು ನನ್ನ ಸೀರಿಯಸ್ ಇಮೇಜ್‍ನ್ನೇ ಡ್ಯಾಮೇಜ್ ಮಾಡುತ್ತಿದ್ದೀರಿ ಎಂದಿರುವ ಕಿಚ್ಚ, ನಿಮ್ಮೊಂದಿಗೆ ಕೆಲಸ ಮಾಡಿದ್ದು ನನಗೂ ಮರೆಯಲಾಗದ ಅನುಭವ ಎಂದು ಹೇಳಿದ್ದಾರೆ.

 • ಕೇರಳದಲ್ಲಿ ಅಂಬಿ, ಸುಹಾಸಿನಿ ಡ್ಯುಯೆಟ್

  ambi ninge vaisaito shooting in kerala

  ಅಂಬಿ ನಿಂಗೆ ವಯಸ್ಸಾಯ್ತೋ.. ಅದು ಚಿತ್ರದ ಟೈಟಲ್ ಅಷ್ಟೆ. ಅಂಬರೀಷ್‍ಗೆ ವಯಸ್ಸಾಗೋಕೆ ಸಾಧ್ಯಾನಾ..? ಈಗ ಅಂಬರೀಷ್, ಸುಹಾಸಿನಿ ಜೊತೆ ಡ್ಯುಯೆಟ್ ಹಾಡುತ್ತಿದ್ದಾರೆ. ಕೇರಳದ ಕರಾವಳಿಯಲ್ಲಿ ಅಂಬರೀಷ್, ಸುಹಾಸಿನಿ ಯುಗಳ ಗೀತೆಯ ಚಿತ್ರೀಕರಣ ನಡೆಯುತ್ತಿದೆ. ಅದೊಂದು ಹಾಡಿನ ಶೂಟಿಂಗ್ ಮುಗಿದರೆ, ಚಿತ್ರೀಕರಣ ಮುಗಿದಂತೆಯೇ ಲೆಕ್ಕ. ನಂತರ ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರುವಾಗಲಿದೆ.

  ಜಾಕ್ ಮಂಜು ನಿರ್ಮಾಣದ ಸಿನಿಮಾಗೆ ಗುರುದತ್ ಗಾಣಿಗ ನಿರ್ದೇಶನವಿದೆ. ಗುರುದತ್, ಕಿಚ್ಚ ಸುದೀಪ್ ಶೋಧಿಸಿದ ಪ್ರತಿಭೆ. ಸಿನಿಮಾದಲ್ಲಿ ಸುದೀಪ್ ಹಾಗೂ ಶೃತಿ ಹರಿಹರನ್, ಯಂಗ್ ಅಂಬರೀಷ್ ಮತ್ತು ಯಂಗ್ ಸುಹಾಸಿನಿ ಪಾತ್ರ ಮಾಡುತ್ತಿದ್ದಾರೆ. ಇಷ್ಟಕ್ಕೂ ಚಿತ್ರದ ಸ್ಪೆಷಲ್ ಏನು..?

  ಅಂಬರೀಷ್ ಅವರ ಸ್ಟೈಲಲ್ಲೇ ಹೇಳೋದಾದ್ರೆ, `ಚಿತ್ರದ ಕಥೆ, ತಂಡ ಎಲ್ಲವೂ ಚೆನ್ನಾಗಿದೆ. ಅಂಬರೀಷ್ ಅದ್ಭುತವಾಗಿ ನಟಿಸಿದ್ದಾನೆ'. 

 • ಹಠಮಾರಿ ಅಂಬಿಯನ್ನು ಪ್ರೀತಿಯಿಂದ ಒಪ್ಪಿಸಿದ್ದ ಸುದೀಪ್

  sudeep convinced ambi to act in ambi ninge vaisaitho

  ರೆಬಲ್ಸ್ಟಾರ್ ಅಂಬರೀಷ್ ನಟಿಸಿದ, ಬಿಡುಗಡೆಯಾಗಿರುವ ಕೊನೆಯ ಚಿತ್ರ ಅಂಬಿ ನಿಂಗ್ ವಯಸ್ಸಾಯ್ತೋ. ಬಿಡುಗಡೆಯಾಗಬೇಕಿರುವ ಕೊನೆಯ ಚಿತ್ರ ಕುರುಕ್ಷೇತ್ರ. ಅಂಬಿ ನಿಂಗ್ ವಯಸ್ಸಾಯ್ತೊ ಸಿನಿಮಾ, ತಮಿಳಿನ ಪವರ್ ಪಾಂಡಿ ಚಿತ್ರದ ರೀಮೇಕ್. ಆ ಚಿತ್ರವನ್ನು ಒಪ್ಪಿಕೊಳ್ಳೋಕೆ ಕಾರಣವಾಗಿದ್ದು ಇಬ್ಬರ ಪ್ರೀತಿ.  ಗೆಳೆಯ ರಜನಿಕಾಂತ್ ಹಾಗೂ ಸುದೀಪ್ ಮೇಲಿನ ಪ್ರೀತಿಗೆ ಒಪ್ಪಿ ನಟಿಸಿದ್ದರು ಅಂಬಿ.

  ಅಷ್ಟೇ ಅಲ್ಲ, ಚಿತ್ರದ ಪ್ರತಿ ಹಂತದಲ್ಲೂ ಸಹಕಾರ ಕೊಟ್ಟಿದ್ದರು ಅಂಬರೀಷ್. ಸಿನಿಮಾ ರಿಲೀಸ್ ವೇಳೆ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದ ಅಂಬರೀಷ್, ಆಂಬುಲೆನ್ಸ್ನಲ್ಲಿ ಹೋಗಿ ಸಿನಿಮಾ ನೋಡಿಕೊಂಡು ಬಂದಿದ್ದರು. ಆ ಚಿತ್ರದ  ಹೇ ಜಲೀಲ.. ಕನ್ವರ್ಲಾಲ ಎಂಬ ಪ್ರೇಮ್ ಬರೆದಿರುವ ಹಾಡು, ಅಕ್ಷರಶಃ ಅಂಬರೀಷ್ ವ್ಯಕ್ತಿತ್ವ ಎಂದರೆ ತಪ್ಪೇನಲ್ಲ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery