` paddehuli, - chitraloka.com | Kannada Movie News, Reviews | Image

paddehuli,

  • ಪಡ್ಡೆಹುಲಿಯಲ್ಲಿ 10 ಹಾಡುಗಳ ವೈಭವ

    paddehuli has 10 songs

    ಪಡ್ಡೆಹುಲಿ ಚಿತ್ರದಲ್ಲಿ ನಾಡಿನ ಖ್ಯಾತ ಕವಿ, ವಚನಕಾರರ ಗೀತೆಗಳನ್ನು ಬಳಸಿಕೊಂಡಿರುವುದು ಗೊತ್ತಿದೆ ತಾನೇ. ಅವುಗಳನ್ನೂ ಸೇರಿಸಿ ಚಿತ್ರದಲ್ಲಿ ಒಟ್ಟು10 ಹಾಡುಗಳಿವೆಯಂತೆ. ಅದು ಇವತ್ತೇ ರಿಲೀಸ್ ಆಗುತ್ತಿವೆ. ಇಂದು ರಾತ್ರಿ 7 ಗಂಟೆಗೆ ಪಡ್ಡೆಹುಲಿಯ ಹಾಡುಗಳ ವೈಭವ, ಸಂಗೀತರಸಿಕರಿಗಾಗಿ ಮೀಸಲಾಗಲಿವೆ.

    ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದಲ್ಲಿ 10 ಹಾಡುಗಳು ವಿಭಿನ್ನವಾಗಿ ಮೂಡಿಬಂದಿವೆ. ಇನ್ನೂ ವಿಶೇಷವೆಂದರೆ ಪ್ರೇಮಲೋಕದ ನಂತರ (11 ಹಾಡುಗಳು) ಇಷ್ಟೊಂದು ಹಾಡುಗಳನ್ನು ಹೊತ್ತು ತರುತ್ತಿರುವ ಚಿತ್ರದಲ್ಲಿ ರವಿಚಂದ್ರನ್ ಅವರೇ ಹೀರೋಗೆ ಅಪ್ಪ. ಗುರು ದೇಶಪಾಂಡೆ ನಿರ್ದೇಶನದ ಚಿತ್ರ, ಹೀಗೆಯೇ ಹಲವಾರು ಕಾರಣಗಳಿಗೆ ಕುತೂಹಲ ಮೂಡಿಸಿದೆ. 

  • 'Paddehuli' Songs On March 19th

    paddehuli songs on march 19th

    The trailer of K Manju's son Shreyas's debut film as a hero 'Paddehuli' was released recently. Now the audio jukebox of the film is all set to be released on the 19th of March.

    The makers of 'Paddehuli' has organised a grand event along with Colors Kannada and the songs of the film will be released at the SJB Auditorium in Kengeri Main Road in Bangalore,  The songs of the film has been composed by Ajaneesh Lokanath and the songs is being distributed by Puneeth Rajakumar's PRK Audio.

    'PaddeHuli' is being produced by M Ramesh Reddy under the Tejaswini Enterprises banner. Guru Deshapande is the director. Shreyas, Nishvika Naidu, V Ravichandran, Sudharani, Rakshith Shetty and others play prominent roles.

  • Celebrity Show Of 'Paddehuli' Held

    celebrity show of paddehuli held

    Shreyas's debut film 'Paddehuli' was released across Karnataka two weeks back. Recently, the celebrity show of the film was held at the Artistes Association Preview Theater in Bangalore.

    Many celebrities from Kannada film industry including Ramesh Aravind, Ajay Rao, Chikkanna, Shashank, director Prem, V Nagendra Prasad, Ravi Verma, Saiprakash, 'Madarangi' Krishna and others were present at the occasion and watched the film.

    PaddeHuli' is produced by M Ramesh Reddy under the Tejaswini Enterprises banner. Guru Deshapande is the director. Ajaneesh Lokanath is the music director, while K S Chandrashekhar is the cinematographer. Shreyas, Nishvika Naidu, V Ravichandran, Sudharani, Rakshith Shetty and others play prominent roles.

  • Paddehuli Review: Chitraloka Rating 4/ 5*

    paddehuli movie review

    Debutant Shreyas, son of noted Kannada film producer K Manju, opens his account with an apt commercial entertainer which caters to both mass and the class audience. Director Guru Deshpande returns with a tailor made youthful subject for the first time hero pegged with an inspiring tale of an aspiring musician.

    Unlike the regular starry launch, the maker has kept it simple, delivering justice to crucial aspects in a film, which is story and the making along with appealing performances.

    What makes Paddehuli as a winner is its honesty in giving importance to every department rather turning it into a complete one man show. It has a decent story with a meaningful message to the youngsters, who set out to achieve their dreams against all odds in life.

    Crazy Star V. Ravichandran adds greater value to the script as a father. His character as a Kannada lecturer instills faith and determination in the protagonist's mind when he takes an important decision to fulfil his dreams to become a successful musician.

    In the meanwhile, the film also delivers in terms of entertainment, from rib-tickling humour set in college, to romance, emotional drama and a bits of action in between the path towards protagonist's journey as an aspiring musician.

    The other significant part of Paddehuli, is its content highlighting Kannada language and its rich literature right throughout the movie. In fact, it is the base of this musical saga. The works of popular Kannada writers and the immense treasure of folklore is put to perfect use including the music composed by Ajaneesh Lokanath.

    That's not all, Guru Deshpande has presented this one with some real special surprises right from Sahasa Simha Dr. Vishnuvardhan who inspires yet another debutant, as the first part of the film is set in Chitradurga. That apart, it is also a treat for power star Puneeth Rajkumar and Rakshit Shetty fans who play an inspiring role in it.

    Insofar Shreyas is concerned, he delivers a power packed performance, and is definitely a talent to watch out for. Nishvika Naidu does a beautiful job as a lover and the rest fits the bill as Paddehuli roars loud with well-balanced entertainment for all.

     

  • Promotional Song Of 'Padde Huli' Released

    padde huli promotional song released

    Producer K Manju's son Shreyas's debut film as a hero will start from next week. meanwhile, the promotional song of 'Padde Huli' was released by Rakshith Shetty on Wednesday in Bangalore.

    On Wednesday evening, Shreyas celebrated his birthday in a grand style and the promotional song of the film was released. Apart from Rakshith Shetty, KFCC president Sa Ra Govindu, veteran director Bhagawan, Indrajith Lankesh, Yogaraj Bhatt and others were present at the occasion.

    Ajaneesh Lokanath is the music director for this film, while K S Chandrashekhar is the cinematographer.  The film is being directed by Guru Deshapande, while Ramesh Reddy is the producer.

     

  • ಕೂಡಲ ಸಂಗಮದೇವ.. ಪಡ್ಡೆಹುಲಿ

    basavanna's vachana in paddehuli

    ಪಡ್ಡೆಹುಲಿ ಚಿತ್ರದಲ್ಲಿ ಭಾವಗೀತೆಗಳಿಗಷ್ಟೇ ಅಲ್ಲ, ಬಸವಣ್ಣನವರ ವಚನಗಳಿಗೂ ಜಾಗ ಸಿಕ್ಕಿದೆ. ಶಿವರಾತ್ರಿ ವಿಶೇಷವಾಗಿ ಪಡ್ಡೆಹುಲಿ ಚಿತ್ರತಂಡ ಚಿತ್ರದಲ್ಲಿ ಬಳಸಿಕೊಂಡಿರುವ ಎರಡು ವಚನಗಳನ್ನು ಬಿಡುಗಡೆ ಮಾಡಿದೆ. ಹೊಸ ಸಂಗೀತ ಸ್ಪರ್ಶದಲ್ಲಿ ಅಣ್ಣನವರ ವಚನಗಳು ಕಿವಿಗಿಂಪಾಗಿವೆ.

    ಕೆ.ಮಂಜು ಪುತ್ರ ಶ್ರೇಯಸ್ ಅಭಿನಯದ ಮೊದಲ ಚಿತ್ರ ಪಡ್ಡೆಹುಲಿಗೆ ಗುರು ದೇಶಪಾಂಡೆ ನಿರ್ದೇಶಕ. ಮ್ಯೂಸಿಕಲ್ ಲವ್ ಸ್ಟೋರಿಯಾಗಿರುವ ಪಡ್ಡೆಹುಲಿಯಲ್ಲಿ ರವಿಚಂದ್ರನ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಕ್ಷಿತ್ ಶೆಟ್ಟಿ ಅತಿಥಿ ನಟರಾಗಿ ಕಾಣಿಸಿಕೊಂಡಿದ್ದು, ನಿಶ್ವಿಕಾ ನಾಯ್ಡು ನಾಯಕಿ.

    ಅಜನೀಶ್ ಲೋಕನಾಥ್, ಭಾವಗೀತೆಗಳು ಮತ್ತು ಬಸವಣ್ಣನವರ ವಚನಗಳಿಗೆ ಆಧುನಿಕತೆಯ ಸ್ಪರ್ಶ ನೀಡಿದ್ದು, ವಿಭಿನ್ನವಾಗಿ ಕೇಳಿಸುತ್ತಿವೆ. ಕಳಬೇಡ ಕೊಲಬೇಡ.. ಹುಸಿಯ ನುಡಿಯಲು ಬೇಡ.. ಮತ್ತು ಲೋಕದಾ ಡೊಂಕ ನೀವೇಕೆ ತಿದ್ದುವಿರಿ.. ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ ಎಂಬ ಎರಡು ವಚನಗಳನ್ನು ಹೊಸತನದಲ್ಲಿ ಕಟ್ಟಿಕೊಟ್ಟಿದ್ದಾರೆ ಅಜನೀಶ್ ಲೋಕನಾಥ್.

  • ಪಡ್ಡೆಹುಲಿ ಕಥೆಗೂ ಸಾಹಸ ಸಿಂಹನಿಗೂ ಇದೆ ನಂಟು

    relationship between paddehuli and vishnuvardhan

    ನಿರ್ಮಾಪಕ ಕೆ.ಮಂಜು, ವಿಷ್ಣುವರ್ಧನ್ ಅವರ ಕಟ್ಟಾ ಅಭಿಮಾನಿಯಾಗಿದ್ದವರು. ಅವರ ಕೊನೆಯ ದಿನಗಳಲ್ಲಿ ವಿಷ್ಣು ಜೊತೆಗಿದ್ದ ಆತ್ಮೀಯರಲ್ಲಿ ಮಂಜು ಕೂಡಾ ಒಬ್ಬರು. ಈಗ ಅವರ ಮಗ ಶ್ರೇಯಸ್ ಹೀರೋ ಆಗಿ ಬರುತ್ತಿದ್ದಾರೆ. ಪಡ್ಡೆಹುಲಿ ಚಿತ್ರದಲ್ಲಿ ಶ್ರೇಯಸ್, ವಿಷ್ಣು ಅಭಿಮಾನಿಯಾಗಿಯೇ ಎಂಟ್ರಿ ಕೊಡುತ್ತಿದ್ದಾರೆ. 

    ಮಗನ ಮೊದಲ ಚಿತ್ರದಲ್ಲಿ ಶ್ರೇಯಸ್‍ಗೆ ನಾಗರಹಾವು ವಿಷ್ಣು ಗೆಟಪ್‍ನಲ್ಲಿ ಚಿತ್ರದುರ್ಗದ ಕೋಟೆಯಲ್ಲೇ ಹಾಡು ಸೃಷ್ಟಿಸಿದ್ದಾರೆ. ರಾಜಾಹುಲಿ ಖ್ಯಾತಿಯ ನಿರ್ದೇಶಕ ಗುರು ದೇಶಪಾಂಡೆ, ಮ್ಯೂಸಿಕಲ್ ಲವ್ ಸ್ಟೋರಿ ಮಾಡಿದ್ದಾರೆ. ಇದೆಲ್ಲದರ ಜೊತೆಗೆ ವಿಷ್ಣುವರ್ಧನ್ ಅವರಿಗೂ ಈ ಚಿತ್ರದ ಕಥೆಗೂ ಒಂದು ಭಾವನಾತ್ಮಕ ನಂಟು ಇದೆ.

    ವಿಷ್ಣುವರ್ಧನ್ ಅವರೇ ಒಮ್ಮೆ ಮಂಜು ಅವರಿಗೆ ಕಾಲೇಜ್ ಬೇಸ್ ಇರುವ ಲವ್ ಸ್ಟೋರಿಯ ಎಳೆಯನ್ನು ಹೇಳಿದ್ದರಂತೆ. ಅದು ಮಂಜು ಅವರಿಗೂ ಇಷ್ಟವಾಗಿತ್ತು. ಅದನ್ನು ಡೆವಲಪ್ ಮಾಡು, ಒಳ್ಳೆ ಸಿನಿಮಾ ಆಗುತ್ತೆ ಎಂದು ಕೂಡಾ ಹೇಳಿದ್ದರಂತೆ.

    ತಮ್ಮ ಮಗನನ್ನು ಗ್ರ್ಯಾಂಡ್ ಆಗಿ ಎಂಟ್ರಿ ಕೊಡಿಸಲು ಕಥೆಯ ಹುಡುಕಾಟದಲ್ಲಿದ್ದಾಗ ನೆನಪಾಗಿದ್ದು ಈ ಕಥೆ. ಅದು ವಿಷ್ಣು ಆಶೀರ್ವಾದ ಎಂದೇ ನಂಬಿಕೊಂಡು ಸಿನಿಮಾ ರೆಡಿ ಮಾಡಿದ್ದಾರೆ.

    ರಮೇಶ್ ರೆಡ್ಡಿ ನಿರ್ಮಾಣದ ಚಿತ್ರದಲ್ಲಿ ರವಿಚಂದ್ರನ್, ಸುಧಾರಾಣಿ, ರಕ್ಷಿತ್ ಶೆಟ್ಟಿ, ಪುನೀತ್ ರಾಜ್‍ಕುಮಾರ್ ಕೂಡಾ ನಟಿಸಿದ್ದಾರೆ. ಅಮ್ಮ ಐ ಲವ್ ಯು ಖ್ಯಾತಿಯ ನಿಶ್ವಿಕಾ ನಾಯ್ಡು ನಾಯಕಿ. 

  • ಪಡ್ಡೆಹುಲಿ ಕಬಡ್ಡಿ.. ಕಬಡ್ಡಿ..

    kabbadi is the main attraction in paddehuli

    ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಅಭಿನಯದ ಪಡ್ಡೆಹುಲಿ, ಹಲವಾರು ವಿಶೇಷ ಕಾರಣಗಳಿಗೆ ಗಮನ ಸೆಳೆಯುತ್ತಿದೆ. ಚಿತ್ರದ ಹೆಸರೋ ಪಕ್ಕಾ ಮಾಸ್. ಈ ಚಿತ್ರದಲ್ಲಿಯೇ ಕನ್ನಡದ ಖ್ಯಾತ ಕವಿಗಳ ಭಾವಗೀತೆಗಳನ್ನು ಬಳಸಿಕೊಳ್ಳಲಾಗಿದೆ. ಇದೊಂದು ಮ್ಯೂಸಿಕಲ್ ಸಿನಿಮ ಎನ್ನುತ್ತಿದ್ದಾರೆ ಅಜನೀಶ್ ಲೋಕನಾಥ್.

    ರವಿಚಂದ್ರನ್ ಎಂಟ್ರಿಯೊಂದಿಗೇ ಭರ್ಜರಿ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ, ಈಗ ರಕ್ಷಿತ್ ಶೆಟ್ಟಿ ಆಗಮನದೊಂದಿಗೆ ನಿರೀಕ್ಷೆಯ ತುತ್ತತುದಿ ಮುಟ್ಟಿದೆ. ಹೀಗೆ ಭಾವಗೀತೆ, ರೊಮ್ಯಾನ್ಸ್ ಇರುವ ಚಿತ್ರದಲ್ಲಿ ನಮ್ಮ ದೇಸೀ ಆಟ ಕಬಡ್ಡಿ ಇರಲಿದೆಯಂತೆ.

    ನಾಯಕನ ಇಂಟ್ರೊಡಕ್ಷನ್ ಸೀನ್ ಕಬಡ್ಡಿ ಆಟದ ಮೂಲಕ ಆಗಲಿದೆಯಂತೆ. ಸೀನಿಯರ್ ಸ್ಟೂಡೆಂಟ್ ಆಗಿ ಕಾಣಿಸಿಕೊಳ್ಳೋದು ಕಿರಿಕ್ ಪಾರ್ಟಿ ಕರ್ಣ ಅರ್ಥಾತ್ ರಕ್ಷಿತ್ ಶೆಟ್ಟಿ. ರಕ್ಷಿತ್ ಕರ್ಣನಾಗಿಯೇ ಆಡಿದರೆ, ಶ್ರೇಯಸ್ ಪಡ್ಡೆಹುಲಿಯಾಗಿ ಆಡ್ತಾರೆ. 

    ಗುರು ದೇಶಪಾಂಡೆ ನಿರ್ದೇಶನದ ಚಿತ್ರದಲ್ಲಿ ನಿಶ್ವಿಕಾ ನಾಯ್ಡು ನಾಯಕಿ. 

  • ಪಡ್ಡೆಹುಲಿ ಚೂರ್ ಚೂರಾಗಿದೆ ಹಾಡು ಹಿಟ್ ಫಿಕ್ಸು..

    paddehuli song is hit

    ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ನಟಿಸಿರುವ, ರಾಜಾಹುಲಿ ಖ್ಯಾತಿಯ ಗುರುದೇಶಪಾಂಡೆ ನಿರ್ದೇಶನದ ಚಿತ್ರ ಪಡ್ಡೆಹುಲಿ. ರವಿಚಂದ್ರನ್, ಸುಧಾರಾಣಿ, ರಕ್ಷಿತ್ ಶೆಟ್ಟಿ ಕೂಡಾ ನಟಿಸಿರುವ ಚಿತ್ರದ ಒಂದೊಂದೇ ಹಾಡುಗಳು ಹೊರಬೀಳುತ್ತಿವೆ. ಈಗ ಚಿತ್ರದ ಚಿಂದಿ ಹಾಡೊಂದು ವಿಡಿಯೋ ಸಮೇತ ರಿಲೀಸ್ ಆಗಿದೆ.

    ಚೂರ್ ಚೂರಾಗಿದೆ.. ಅನ್ನೋ ಟಪ್ಪಾಂಗುಚ್ಚಿ ಸಾಂಗ್‍ಗೆ ಮೈನವಿರೇಳಿಸುವಂತೆ ಕುಣಿದಿರೋದು ಶ್ರೇಯಸ್ ಮತ್ತು ನಿಶ್ವಿಕಾ ನಾಯ್ಡು. ಪುನೀತ್ ಆರ್ಯ ಸಾಹಿತ್ಯ ಇರುವ ಹಾಡಿಗೆ ಅಜನೀಶ್ ಲೋಕನಾಥ್ ಕಿಕ್ಕೇರಿಸುವ ಮ್ಯೂಸಿಕ್ ಕೊಟ್ಟಿದ್ದಾರೆ. 

  • ಪಡ್ಡೆಹುಲಿ ಹಾಡು.. ವಿಷ್ಣುದಾದಾ ಅಭಿಮಾನಿಗಳಿಗಾಗಿ.. ನೋಡ್ಕೊಂಡ್ ಬಿಡಿ

    special song by vishnu fan to vishnu fans

    ನಿರ್ಮಾಪಕ, ವಿಷ್ಣು ದಾದಾ ಕಟ್ಟರ್ ಅಭಿಮಾನಿಯಾಗಿದ್ದ ಕೆ.ಮಂಜು ತಮ್ಮ ಪುತ್ರ ಶ್ರೇಯಸ್ ಅವರನ್ನ ಚಿತ್ರರಂಗಕ್ಕೆ ಕರೆ ತರುತ್ತಿದ್ದಾರೆ. ಅದು ಪಡ್ಡೆಹುಲಿ ಚಿತ್ರದ ಮೂಲಕ. ಅಪ್ಪ ರಿಯಲ್ ಲೈಫಲ್ಲಿ ವಿಷ್ಣು ಅಭಿಮಾನಿ. ಮಗ ಶ್ರೇಯಸ್ ತಮ್ಮ ಮೊದಲ ಚಿತ್ರದಲ್ಲಿ ವಿಷ್ಣು ದಾದಾ ಫ್ಯಾನ್. ಪಡ್ಡೆಹುಲಿ ಚಿತ್ರದಲ್ಲಿ ಶ್ರೇಯಸ್ ವಿಷ್ಣು ಅಭಿಮಾನಿಯಾಗಿ ನಟಿಸಿದ್ದು, ಅಭಿಮಾನದಿಂದಲೇ ವಿಶೇಷ ಹಾಡು ಚಿತ್ರೀಕರಿಸಲಾಗಿದೆ.

    ಚಿತ್ರದ ನಿರ್ದೇಶಕ ಗುರು ದೇಶಪಾಂಡೆ, ಚಿತ್ರದುರ್ಗದ ಕೋಟೆಯ ಸುತ್ತ ಈ ಹಾಡು ಚಿತ್ರೀಕರಿಸಿದ್ದು, ಇಂದು ಮಧ್ಯಾಹ್ನ 12 ಗಂಟೆಗೆ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ಹಾಡಿನ ಪ್ರದರ್ಶನ ಆಯೋಜಿಸಲಾಗಿದೆ. ರಮೇಶ್ ರೆಡ್ಡಿ ನುಂಗ್ಲಿ ನಿರ್ಮಾಣದ ಚಿತ್ರದಲ್ಲಿ ರವಿಚಂದ್ರನ್ ಕೂಡಾ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ನಿಶ್ವಿಕಾ ನಾಯ್ಡು ಚಿತ್ರದ ನಾಯಕಿ.

  • ಪಡ್ಡೆಹುಲಿಗೆ ಅಪ್ಪು ಪವರ್

    paddehuli gets power star's support

    ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಅಭಿನಯದ ಮೊದಲ ಸಿನಿಮಾ ಪಡ್ಡೆಹುಲಿಗೆ ಈಗ ಅಪ್ಪು ಪವರ್ ಸಿಕ್ಕಿದೆ. ವಿಭಿನ್ನ ಹಾಡುಗಳ ಮೂಲಕ ಸದ್ದು ಮಾಡ್ತಿರೋ ಪಡ್ಡೆಹುಲಿ ಚಿತ್ರದ ಆಡಿಯೋ ರೈಟ್ಸ್‍ನ್ನು ಸ್ವತಃ ಪುನೀತ್ ರಾಜ್‍ಕುಮಾರ್ ಅವರೇ ಖರೀದಿಸಿದ್ದಾರೆ. ಪಿಆರ್‍ಕೆ ಆಡಿಯೋ ಮೂಲಕವೇ ಪಡ್ಡೆಹುಲಿ ಮ್ಯೂಸಿಕ್ಕು ಜನರ ಹೃದಯ ಕದಿಯುತ್ತಿದೆ.ಹೀಗಿರುವಾಗಲೇ ಮತ್ತೊಂದು ಪವರ್ ಕೊಟ್ಟಿದ್ದಾರೆ ಪವರ್ ಸ್ಟಾರ್.

    ಪಡ್ಡೆಹುಲಿ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಅತಿಥಿ ನಟರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಕಡೆಯ 15 ನಿಮಿಷದಲ್ಲಿ ಪುನೀತ್ ಕಾಣಿಸಿಕೊಳ್ಳಲಿದ್ದಾರೆ. ಅದು ಪ್ರಮುಖ ಪಾತ್ರವಾಗಿದ್ದು, ಯುವಕರಲ್ಲಿ ಜೋಶ್ ಹಾಗೂ ಸ್ಫೂರ್ತಿ ತುಂಬುವ ಪಾತ್ರ ಎಂದಿದ್ದಾರೆ ನಿರ್ದೇಶಕ ಗುರು ದೇಶಪಾಂಡೆ. ಪುನೀತ್ ಅವರನ್ನೇ ಹೈಲೈಟ್ ಮಾಡಿರುವ ಪಡ್ಡೆಹುಲಿಯ ಟ್ರೇಲರ್ ಏಪ್ರಿಲ್ 10ಕ್ಕೆ ಅಂದರೆ ನಾಳೆ ರಿಲೀಸ್ ಆಗುತ್ತಿದೆ.

    ಈಗಾಗಲೇ ಪಡ್ಡೆಹುಲಿಯಲ್ಲಿ ರವಿಚಂದ್ರನ್, ಸುಧಾರಾಣಿ ಪ್ರಧಾನ ಪಾತ್ರಗಳಲ್ಲಿಯೇ ನಟಿಸಿದ್ದರೆ, ರಕ್ಷಿತ್ ಶೆಟ್ಟಿ ಕೂಡಾ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ. ನಿಶ್ವಿಕಾ ನಾಯ್ಡು ನಾಯಕಿಯಾಗಿರುವ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತವಿದೆ.

    ಕೆ.ಮಂಜು ಅವರ ಗೆಳೆಯ ರಮೇಶ್ ರೆಡ್ಡಿ ನುಂಗ್ಲಿ, ಗೆಳೆಯನ ಮಗನನ್ನು ಚಿತ್ರರಂಗಕ್ಕೆ ತರುತ್ತಿರುವುದು ವಿಶೇಷ. ಒಟ್ಟಿನಲ್ಲಿ ಮಂಜು ಪುತ್ರನ ಎಂಟ್ರಿಗೆ ಕ್ರೇಜಿ ಸ್ಟಾರ್, ಪವರ್ ಸ್ಟಾರ್ ಮತ್ತು ಸಿಂಪಲ್ ಸ್ಟಾರ್ ಜೊತೆಯಾಗಿದ್ದಾರೆ.

  • ಸಿನಿಮಾ ಟೈಟಲ್ ಮಾಸ್.. ಕಥೆ ಕ್ಲಾಸ್.. ಮ್ಯೂಸಿಕ್ ಬಾಸ್.. 

    paddehuli has unique combination

    ಕೆ.ಮಂಜು ಪುತ್ರ ಶ್ರೇಯಸ್ ನಾಯಕರಾಗಿರುವ ಚಿತ್ರದ ಟೈಟಲ್ ಪಡ್ಡೆಹುಲಿ. ಟೈಟಲ್ ನೋಡಿದ್ರೆ ಫುಲ್ ಮಾಸ್. ರಾಜಾಹುಲಿ ಖ್ಯಾತಿಯ ಗುರುದೇಶಪಾಂಡೆ ನಿರ್ದೇಶನ. ಇಷ್ಟೆಲ್ಲ ಇದ್ದರೂ, ಚಿತ್ರದ ಕಥೆ ಕ್ಲಾಸ್ ಅಂತೆ. ಹೇಗೆ ಅಂತೀರಾ..?

    ಜೀವನದಲ್ಲಿ ಗುರಿ ಸಾಧನೆ ಈಡೇರಿಸಿಕೊಳ್ಳಲು ಹೊರಡುವ ಮಕ್ಕಳ ಪ್ರಯತ್ನದಲ್ಲಿ ಹೆತ್ತವರ ಪಾತ್ರ ಏನು ಎನ್ನುವುದು ಚಿತ್ರದ ಕಥೆ. ಹೀರೋಗೆ ಹಂಸಲೇಖ, ಕೆ.ಎಸ್.ಅಶ್ವತ್ಥ್, ಮೈಸೂರು ಅನಂತಸ್ವಾಮಿ, ರಘು ದೀಕ್ಷಿತ್ ಅವರಂತೆ ಕನ್ನಡದ ಗೀತೆಗಳನ್ನು ರ್ಯಾಪ್ ಶೈಲಿಯಲ್ಲಿ ಜನರನ್ನು ಮುಟ್ಟುವ ಬಯಕೆ. ಅವನು ಗುರಿ ಮುಟ್ಟುತ್ತಾನಾ ಎನ್ನುವುದೇ ಚಿತ್ರದ ಕಥೆ ಎನ್ನುತ್ತಾರರೆ ಡೈರೆಕ್ಟರ್ ಗುರು.

    ಹೀರೋಗೆ ತಂದೆಯಾಗಿ ನಟಿಸಿರುವುದು ರವಿಚಂದ್ರನ್. ಹಳ್ಳಿ ಮೇಷ್ಟ್ರು ರವಿಚಂದ್ರನ್, ಈ ಚಿತ್ರದಲ್ಲಿ ಪ್ರಮೋಷನ್ ಪಡೆದು ಕನ್ನಡ ಪ್ರೊಫೆಸರ್ ಆಗಿದ್ದಾರೆ. ತಾಯಿಯಾಗಿ ನಟಿಸಿರುವುದು ಸುಧಾರಾಣಿ. ಮನೆದೇವ್ರು ನಂತರ ಜೋಡಿ ಮತ್ತೆ ತೆರೆ ಮೇಲೆ ಒಂದಾಗಿದೆ. ಕಬಡ್ಡಿ ಟೀಂ ಕ್ಯಾಪ್ಟನ್ ಆಗಿ ಕಿರಿಕ್ ಪಾರ್ಟಿ ರಕ್ಷಿತ್ ಶೆಟ್ಟಿ ಕಾಣಿಸಿಕೊಂಡಿದ್ದರೆ, ಮತ್ತೊಂದು ಗೆಸ್ಟ್ ರೋಲ್‍ನಲ್ಲಿ ಪುನೀತ್ ಬಂದಿದ್ದಾರೆ. ಮುಂದಿನ ವಾರ ಸಿನಿಮಾ ರಿಲೀಸ್ ಆಗುತ್ತಿದೆ.