` nata bhayankara, - chitraloka.com | Kannada Movie News, Reviews | Image

nata bhayankara,

  • Pratham Is Now Nata Bayankara - Exclusive

    pratham's film re title nata bayankara

    Bigg Boss winner Pratham's new film has a change of title. The film was launched with the title Pratham Buildup. But now the makers have decided to give it another name. The new name is Nata Bayankara. This is the same title given to the late star of negative roles Vajramuni.

    Earlier the film had the tagline 'Ee nan magandu ide aytu guru'. But it is not certain if the tagline will be retained or changed or dropped altogether. Nata Bayankara is a comedy subject and has nothing to do with Vajramuni.

    The story of the film has not changed and has been retained. There is only a change of name as it was felt that it better suits the story.

  • ನಟ ಭಯಂಕರ : ಪ್ರಥಮ್ ಹೇಳಿದಂತೆಯೇ ಇದೆ..

    ನಟ ಭಯಂಕರ : ಪ್ರಥಮ್ ಹೇಳಿದಂತೆಯೇ ಇದೆ..

    ಹುಡುಗೀರು ಕೇಳ್ದಾಗೆಲ್ಲ ರಾಖಿ ಕಟ್ಟೋಕೆ ಕೈ ಕೊಡ್ತೀವಿ. ನಾವು ಕೇಳ್ದಾಗ ತಾಳಿ ಕಟ್ಟೋಕೆ ಯಾಕೆ ಕೊರಳು ಕೊಡಲ್ಲ..

    ಡೈಲಾಗು ಕೇಳಿ ನಗುವುದಕ್ಕೆ ಪುರುಸೊತ್ತು ಕೊಡಲ್ಲ. ಅವು ಕಣ್ಣುಗಳೋ.. ಕೆಂಡದುಂಡೆಗಳೋ.. ಎನ್ನುವಂತೆ ದೆವ್ವವಾಗಿ ಅವಳು ಕಾಣಿಸುತ್ತಾಳೆ. ಸಾಯಿ ಕುಮಾರ್ ಅಗ್ನಿ ಸ್ಟೈಲಿನಲ್ಲೇ ಡೈಲಾಗ್ ಹೊಡೆದರೆ, ಶೋಭರಾಜ್, ಶಂಕರ್ ಅಶ್ವತ್ಥ್, ಓಂಸಾಯಿಪ್ರಕಾಶ್, ಕುರಿ ಪ್ರತಾಪ್..ಎಲ್ಲರೂ ಭಯಂಕರವಾಗಿಯೇ ನಟಿಸುತ್ತಾರೆ. ಇವರ ಮಧ್ಯೆ ಸುಶ್ಮಿತಾ ಜೋಶಿ ಮತ್ತು ನಿಹಾರಿಕ ಶೆಣೈ ನಾಯಕಿಯರು ಮುದ್ದಾಗಿ ಹಾಗೂ ಭಯಂಕರವಾಗಿ ಕಾಣಿಸುತ್ತಾರೆ. ಚಿತ್ರಕ್ಕೆ ಪ್ರಥಮ್ ಹೀರೋ ಅಷ್ಟೇ ಅಲ್ಲ, ಡೈರೆಕ್ಟರ್ ಕೂಡಾ. ಚಿತ್ರದ ಕಥೆಯೊಳಗೂ ಡೈರೆಕ್ಟರ್. ಹೆಸರು ನಟ ಭಯಂಕರ. ರಿಲೀಸ್ ಆಗುತ್ತಿರುವುದು ಫೆಬ್ರವರಿ 3ನೇ ತಾರೀಕಿಗೆ.

    ಸ್ವರಸ್ಯ ಸಿನಿ ಕ್ರಿಯೇಷನ್ಸ್ ಮೂಲಕ ನಿರ್ಮಾಣವಾಗಿರೋ ಚಿತ್ರದಲ್ಲಿ ಉಪೇಂದ್ರ ಹಾಡಿದೆ. ಧ್ರುವ ಸರ್ಜಾ ವಾಯ್ಸ್ ಇದೆ. ಕಲ್ಲನ್ನೂ ಮಾತನಾಡಿಸುವ ಕಲೆ ಹೊಂದಿರೋ ಪ್ರಥಮ್, ಈ ಹೊತ್ತಿನಲ್ಲಿ ಸಿದ್ದರಾಮಯ್ಯ ಅವರಿಂದ ಚಿತ್ರಕ್ಕೆ ಶುಭಾಶಯ ಹೇಳಿಸಿರುವುದು ವಿಶೇಷ. ದಟ್ ಈಸ್ ಪ್ರಥಮ್ ಸ್ಪೆಷಲ್. ನಟಭಯಂಕರ ಎಂದರೆ ನೆನಪಾಗುವುದು ವಜ್ರಮುನಿ. ಆದರೆ ಇಲ್ಲಿ ಪ್ರಥಮ್ ಹೀರೋ ಮತ್ತು ಡೈರೆಕ್ಟರ್. ಇದು ಹಾರರ್ ಆಕ್ಷನ್ ಕಾಮಿಡಿ ಸಿನಿಮಾ.

  • ನಟ ಭಯಂಕರನಿಗೆ ರೋರಿಂಗ್ ಸ್ಟಾರ್ ಸಾಥ್

    ನಟ ಭಯಂಕರನಿಗೆ ರೋರಿಂಗ್ ಸ್ಟಾರ್ ಸಾಥ್

    ನಟ ಭಯಂಕರ. ಹಾಗೆಂದರೆ ಕನ್ನಡಿಗರಿಗೆ ನೆನಪಾಗೋದು ವಜ್ರಮುನಿ. ಆದರೆ ಆ ಹೆಸರನ್ನ ತಮ್ಮ ಚಿತ್ರಕ್ಕೆ ಟೈಟಲ್ ಆಗಿ ಇಟ್ಟುಕೊಂಡು ಬರುತ್ತಿದ್ದಾರೆ ಒಳ್ಳೆ ಹುಡ್ಗ ಪ್ರಥಮ್. ನಟ ಭಯಂಕರ ಚಿತ್ರದ ಹಾಡುಗಳನ್ನು ರಿಲೀಸ್ ಮಾಡಿದ್ದು ರೋರಿಂಗ್ ಸ್ಟಾರ್ ಶ್ರೀಮುರಳಿ.

    ಇವನ್ಯಾರಪ್ಪ ಇಷ್ಟೊಂದು ಮಾತಾಡ್ತಾನೆ ಎಂದುಕೊಂಡು ನೋಡ ನೋಡುತ್ತಲೇ ಪ್ರಥಮ್ ಅಭಿಮಾನಿಯಾಗಿಬಿಟ್ಟೆ. ಪ್ರಥಮ್ ಅವರ ಕಾನ್ಫಿಡೆನ್ಸ್ ನನಗೆ ತುಂಬಾನೇ ಇಷ್ಟ. ಒಂದು ಹಾಡನ್ನು ಉಪೇಂದ್ರ ಹಾಡಿದ್ದಾರೆ. ಎಲ್ಲ ಹಾಡುಗಳೂ ಚೆನ್ನಾಗಿವೆ. ಸಿನಿಮಾ ಯಶಸ್ವಿಯಾಗಲಿ ಎಂದು ಹಾರೈಸಿದರು ಶ್ರೀಮುರಳಿ.

    ಅಹಂಕಾರ ಇರೋ ವ್ಯಕ್ತಿ ಒಬ್ಬರಿಗೆ ಒಂದು ಮಾತು ಕೊಡ್ತಾನೆ. ಆಮೇಲೆ ಬದಲಾಗ್ತಾನೆ. ಅದು ಒಂದು ಕಥೆ. ಇನ್ನೊಂದು ಕಥೆಯಲ್ಲಿ ಒಬ್ಬ ಸ್ಟುಪಿಡ್ ಸೂಪರ್ ಸ್ಟಾರ್  ಹಾಗೂ ಕುರುಡಿ ದೆವ್ವದ ಲವ್ ಸ್ಟೋರಿ. ಇವೆರಡನ್ನೂ ಇಟ್ಟುಕೊಂಡು ಸಿನಿಮಾ ಮಾಡಿದ್ದೇನೆ. ನೋಡಿ ಎಂಜಾಯ್ ಮಾಡಿ ಎಂದಿದ್ದಾರೆ ಪ್ರಥಮ್. ಅಂದಹಾಗೆ ಈ ಚಿತ್ರಕ್ಕೆ ನಿರ್ದೇಶಕರೂ ಅವರೇ. ಪ್ರಥಮ್ ಡೈರೆಕ್ಷನ್‍ನ ಮೊದಲ ಸಿನಿಮಾ ನಟ ಭಯಂಕರ.

  • ನಟಭಯಂಕರ' ಪ್ರಥಮ್

    pratham is now natabhayankara

    ನಟ ಸಾರ್ವಭೌಮ ಎಂದರೆ ಡಾ.ರಾಜ್‍ಕುಮಾರ್. ನಟ ಭೈರವ ಎಂದರೆ ವಜ್ರಮುನಿ. ನಟಶೇಖರ ಎಂದರೆ ಕಲ್ಯಾಣ್‍ಕುಮಾರ್. ನಟಭಯಂಕರ ಎಂದರೆ ಪ್ರಥಮ್. ಹೌದು, ಒಳ್ಳೆಯ ಹುಡುಗ ಪ್ರಥಮ್, ಬಿಗ್‍ಬಾಸ್ ಪ್ರಥಮ್ ನಟಭಯಂಕರರಾಗುತ್ತಿದ್ದಾರೆ. ನಿಮಗೆ ನೆನಪಿರಬೇಕು. ಇತ್ತೀಚೆಗೆ ಪ್ರಥಮ್ ಅಭಿನಯದ 

    `ಪ್ರಥಮ್ ಬಿಲ್ಡಪ್' ಹೆಸರಿನ ಚಿತ್ರವೊಂದು ಶುರುವಾಗಿತ್ತು. ಈಗ ಚಿತ್ರದ ಟೈಟಲ್ ಬದಲಾಗಿದೆ. ಚಿತ್ರಕ್ಕೆ ನಟಭಯಂಕರ ಎಂದು ಟೈಟಲ್ ಇಡಲಾಗಿದೆ. ಅಲ್ಲಿಗೆ ಬಿಗ್‍ಬಾಸ್ ಪ್ರಥಮ್, ಒಳ್ಳೆಯ ಹುಡುಗ ಪ್ರಥಮ್... ನಟ ಭಯಂಕರ ಪ್ರಥಮ್ ಆಗಲಿದ್ದಾರೆ.