` 2018, - chitraloka.com | Kannada Movie News, Reviews | Image

2018,

 • 2018 ಕ್ರೇಜಿಸ್ಟಾರ್ ವರ್ಷವಾಗುತ್ತಾ..?

  2018 will be crazy star year

  ಕ್ರೇಜಿ ಸ್ಟಾರ್ ರವಿಚಂದ್ರನ್ ತಮ್ಮ ದಶಕಗಳ ಚಿತ್ರಜೀವನದಲ್ಲಿ ಕೆಲವೊಂದಿಷ್ಟು ವರ್ಷಗಳನ್ನು ತಮ್ಮದೇ ಎಂಬಂತೆ ಆಳಿದ್ದಾರೆ. ಅದು ತಮ್ಮ ಚಿತ್ರಗಳ ಮೂಲಕ. ಸಕ್ಸಸ್ ಮೂಲಕ. ಈಗ ಮತ್ತೊಮ್ಮೆ 2018 ರವಿಚಂದ್ರನ್ ವರ್ಷವಾಗುವ ಸುಳಿವು ಕೊಟ್ಟಿದ್ದಾರೆ. ಎಲ್ಲವೂ ಪ್ಲಾನ್ ಪ್ರಕಾರವೇ ಆದರೆ, ಈ ವರ್ಷ ರವಿಚಂದ್ರನ್ ಅವರ 4 ಸಿನಿಮಾಗಳು ಬಿಡುಗಡೆಯಾಗಲಿವೆ.

  ಚಿರಂಜೀವಿ ಸರ್ಜಾ ಜೊತೆ ನಟಿಸಿರುವ ಸೀಜರ್ ಇದೇ ತಿಂಗಳು ತೆರೆಗೆ ಬರಲಿದೆ. ಅದಾದ ನಂತರ ಬಕಾಸುರ ಕ್ಯೂನಲ್ಲಿದೆ. ಈ ಎರಡು ಚಿತ್ರಗಳ ಸರದಿ ಮುಗಿದ ನಂತರ ಕುರುಕ್ಷೇತ್ರದ ಶ್ರೀಕೃಷ್ಣನಾಗಿ ಬೆಳ್ಳಿತೆರೆಯಲ್ಲಿ ರಾರಾಜಿಸಲಿದ್ದಾರೆ ಕ್ರೇಜಿ ಸ್ಟಾರ್. ಇವುಗಳೆಲ್ಲ ಮುಗಿಯುವ ಹೊತ್ತಿಗೆ ರಾಜೇಂದ್ರ ಪೊನ್ನಪ್ಪ ಸಿನಿಮಾ ತೆರೆಗೆ ಬರೋಕೆ ರೆಡಿಯಾಗಿರುತ್ತೆ. 

  ಇದರ ಜೊತೆಗೆ ಎಂ.ಎಸ್.ರಮೇಶ್ ನಿರ್ದೇಶನದ ದಶರಥ ಚಿತ್ರವೂ ಇದೇ ವರ್ಷ ತೆರೆಕಂಡರೆ ಆಶ್ಚರ್ಯವಿಲ್ಲ. ಹೀಗಾಗಿ ಈ ವರ್ಷ ರವಿಚಂದ್ರನ್ ವರ್ಷವಾಗೋದು ಗ್ಯಾರಂಟಿ.

 • 2018ರ ಅರಂಭಕ್ಕೆ ತದ್ವಿರುದ್ಧ 2019ರ ಆರಂಭ

  2019 year beginning is different from 2018

  2018 ಕೊನೆಯಾಗುತ್ತಿದೆ. ಕೆಜಿಎಫ್ ಹವಾ ಈ ವಾರ. ಅದಾದ ನಂತರದ ಕೊನೆಯ ವಾರದಲ್ಲೂ 8 ಸಿನಿಮಾಗಳು ರಿಲೀಸ್‍ಗೆ ರೆಡಿಯಿವೆ. ಇಷ್ಟಿದ್ದರೂ ಈ ವರ್ಷದ ಸ್ಪೆಷಾಲಿಟಿ ಎಂದರೆ ಸ್ಟಾರ್ ನಟರ ಸಿನಿಮಾಗಳ ಕೊರತೆ.

  ವರ್ಷದ ಆರಂಭದಲ್ಲಂತೂ ಸ್ಟಾರ್ ಸಿನಿಮಾಗಳೇ ಇರಲಿಲ್ಲ. ಇಡೀ ವರ್ಷದಲ್ಲಿ ಬಹುತೇಕ ಎಲ್ಲ ಸ್ಟಾರ್‍ಗಳ ತಲಾ ಒಂದೊಂದು ಚಿತ್ರ ಬಂದವು. ಇದರ ನಡುವೆಯೂ ಪುನೀತ್, ದರ್ಶನ್, ರಕ್ಷಿತ್ ಶೆಟ್ಟಿ ಸಿನಿಮಾಗಳು ಬರಲೇ ಇಲ್ಲ. ಇದು 2018ರ ಕಥೆ. 2019ರ ಕಥೆ ಫುಲ್ ಡಿಫರೆಂಟ್.

  2019ರ ಆರಂಭದಿಂದಲೇ ಶಿವಣ್ಣ ಬರುವುದು ಬಹುತೇಕ ಖಚಿತ. ಕವಚ ರಿಲೀಸ್‍ಗೆ ರೆಡಿ. ಪುನೀತ್‍ರ ನಟಸಾರ್ವಭೌಮ, ದರ್ಶನ್‍ರ ಕುರುಕ್ಷೇತ್ರ, ಯಜಮಾನ, ಸುದೀಪ್‍ರ ಪೈಲ್ವಾನ್, ರಕ್ಷಿತ್ ಶೆಟ್ಟಿಯ ಅವನೇ ಶ್ರೀಮನ್ನಾರಾಯಣ, ಉಪೇಂದ್ರರ ಐ ಲವ್ ಯೂ, ಶಿವಣ್ಣ ಅಭಿನಯದ ರುಸ್ತುಂ, ಶ್ರೀಮುರಳಿಯವರ ಭರಾಟೆ, ಗಣೇಶ್ ಅಭಿನಯದ ಗಿಮಿಕ್ ಇವುಗಳ ಜೊತೆಗೆ ರಿಷಬ್ ಶೆಟ್ಟಿಯವರ ಬೆಲ್‍ಬಾಟಂ, ಪುನೀತ್ ಪ್ರೊಡಕ್ಷನ್ಸ್‍ನ ಕವಲುದಾರಿ.. ಮೊದಲಾದ ದೊಡ್ಡ ದೊಡ್ಡ ಸಿನಿಮಾಗಳು ಕ್ಯೂನಲ್ಲಿವೆ. ಪಟ್ಟಿಯಲ್ಲಿ ಕೆಲವು ಹೆಸರು ಮಿಸ್ ಆಗಿರಬಹುದೇನೋ.. ಆದರೆ, 2019ರ ಆರಂಭವಂತೂ ಅಬ್ಬರಿಸಿ ಘರ್ಜಿಸಲಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery