` thanush, - chitraloka.com | Kannada Movie News, Reviews | Image

thanush,

 • 'Nanjundi Kalyana' On April 6th

  new nanjundi kalyana

  Well known theatre personality Rajendra Karanth is back once again as a director. Rajendra Karanth directed Ramesh Aravind starrer 'Mangana Kaili Manikya' a few years ago, but the film was a flop. Now Rajendra Karanth has silently directed yet another film called 'Nanjundi Kalyana' and the film is all set to release on the 06th of April.

  'Nanjundi Kalyana' stars Thanush who has acted in films like 'Ale' and 'Madamakki'. This is his third film and Shravya is paired opposite Thanush. Apart from Thanush and Shravya the film stars Padmaja Rao, Kuri Prathap, Manjunath Hegade and others in prominent roles.

  'Nanjundi Kalyana' has nothing to do with the yesteryear film except for the title. Manjunath B Naik is the cameraman, while Anup Seelin has composed the music for the film. Thanush's father Shivanna Dasanapura is the producer of the film. 

   

 • ಕುರಿ ಪ್ರತಾಪ್‍ರ ನಾರೀ ಸಂಕಟ

  nanjundi kakyana movie image

  ಪ್ರತಿ ದಿನ ಶೇವ್ ಮಾಡಬೇಕು. ಒಂದ್ಸಲ ಮೇಕಪ್ ಹಾಕಿಸಿಕೊಂಡ್ರೆ ಇಡೀ ದಿನ ಅದೇ ಮೇಕಪ್‍ನಲ್ಲಿರಬೇಕು. ಪ್ಯಾಕಪ್ ಆಗುವವರೆಗೆ ಮೇಕಪ್ ತೆಗೆಯೋಹಾಗಿಲ್ಲ. ಅಬ್ಬಾ.. ಈ ಕಷ್ಟ ಯಾವ ಗಂಡಸಿಗೂ ಬರಬಾರದು.. ಹೀಗಂತ ತಮ್ಮ ಅನುಭವ ಹೇಳಿಕೊಂಡಿರೋದು ಕುರಿ ಪ್ರತಾಪ್. ಇದೇ ವಾರ ತೆರೆಗೆ ಬರುತ್ತಿರುವ ನಂಜುಂಡಿ ಕಲ್ಯಾಣದಲ್ಲಿ ಹೀರೋನ ಹೆಂಡತಿಯಾಗಿ ನಟಿಸಿರುವ ಕುರಿ ಪ್ರತಾಪ್, ಸ್ತ್ರೀವೇಷದ ಕಷ್ಟಗಳನ್ನೆಲ್ಲ ಹೇಳಿಕೊಂಡಿದ್ದಾರೆ.

  ನಂಜುಂಡಿ ಕಲ್ಯಾಣದಲ್ಲಿ ಕುರಿ ಪ್ರತಾಪ್ ಅವರ ಪಾತ್ರದ ಹೆಸರು ಬ್ಯಾಂಕಾಕ್ ಮಲ್ಲಿಕಾ. ಹೀರೋ ತನುಷ್ ಬ್ಯಾಂಕಾಕ್‍ನಲ್ಲಿ ಮಲ್ಲಿಕಾರನ್ನು ಮದುವೆಯಾಗ್ತಾರೆ. ಅದು ಮದುವೆ ಇಷ್ಟವಿಲ್ಲದ ಕಾರಣಕ್ಕೆ. ಇಷ್ಟವಿಲ್ಲದ ಮದುವೆ ತಪ್ಪಿಸಿಕೊಳ್ಳಲು, ಬ್ಯಾಂಕಾಕ್ ಮಲ್ಲಿಕಾ ಅವರ ಜೊತೆ ಮದುವೆಯಾಗುವ ನಾಯಕ, ನಂತರ ಮದುವೆಯಾಗಬೇಕು ಎಂದುಕೊಂಡಾಗ ಶುರುವಾಗುವುದೇ ಕಲ್ಯಾಣದ ಸಂಕಟ. ಈ ವಾರ ತೆರೆಗೆ ಬರುತ್ತಿರುವ ನಂಜುಂಡಿ ಕಲ್ಯಾಣದಲ್ಲಿ ನಗೋಕೆ ಬೇಜಾನ್ ಕಾರಣಗಳಿವೆ. ತನುಷ್, ಶ್ರಾವ್ಯ ಅಭಿನಯದ ಚಿತ್ರದಲ್ಲಿ ಮದುವೆಯೇ ಕೇಂದ್ರಬಿಂದು. 

 • ತಮಾಷೆಯಾಗಿಯೇ ಹುಟ್ಟಿತ್ತು ಕಾಮಿಡಿ ಸಿನಿಮಾ

  nanjundi kalyana's interesting story

  ನಂಜುಂಡಿ ಕಲ್ಯಾಣ. ಇದೇ ವಾರ ತೆರೆಗೆ ಬರುತ್ತಿರುವ ಹಾಸ್ಯಮಯ ಚಿತ್ರ. ಚಿತ್ರಕ್ಕೆ ತನುಷ್ ನಾಯಕ ಮತ್ತು ನಿರ್ಮಾಪಕ. ನಿರ್ದೇಶಕ ರಾಜೇಂದ್ರ ಕಾರಂತ್. ನಾಯಕಿಯಾಗಿ ನಟಿಸಿರುವುದು ನಿರ್ದೇಶಕ ಓಂಪ್ರಕಾಶ್ ರಾವ್ ಅವರ ಪುತ್ರಿ ಶ್ರಾವ್ಯಾ. ಇಡೀ ಚಿತ್ರದಲ್ಲಿ ನಗೆಯ ಹೋಳಿಗೆಯೇ ಇದೆ ಅನ್ನೋದು ಚಿತ್ರತಂಡದ ಭರವಸೆ. ಚಿತ್ರ ನೋಡಿ ನಗದೇ ಇದ್ದವರಿಗೆ 1 ಲಕ್ಷ ಬಹುಮಾನ ಕೊಡುತ್ತೇವೆ ಎನ್ನುತ್ತಿದೆ ಚಿತ್ರತಂಡ.

  ಅಂದಹಾಗೆ ಈ ಚಿತ್ರ ಹುಟ್ಟಿದ ಕಥೆಯೇ ಸ್ವಾರಸ್ಯವಾಗಿದೆ. ತಮಾಷೆಯಾಗಿ ಶುರುವಾದ ಸಂಭಾಷಣೆ ಸಿನಿಮಾ ಆಗಿದೆ. ತನುಷ್ ಈ ಹಿಂದೆ ಮಡಮಕ್ಕಿ ಚಿತ್ರದಲ್ಲಿ ನಟಿಸಿದ್ದವರು. ಆ ಚಿತ್ರದಲ್ಲಿ ನಿರ್ದೇಶಕ ರಾಜೇಂದ್ರ ಕಾರಂತ್ ಕೂಡಾ ಇದ್ದರು. ಅವರನ್ನು ತನುಷ್, ತಮ್ಮ ಗುರು ಎಂದೇ ಕರೆಯುತ್ತಾರೆ. ಒಂದ್ಸಲ ಹೀಗೇ ಮಾತನಾಡುವಾಗ ರಾಜೇಂದ್ರ, ಸಲಿಂಗಿಗಳ ಮದುವೆಯ ಕಥೆಯ ಎಳೆಯೊಂದನ್ನು ಹೇಳಿದ್ರು. ನಾನೂ ತಮಾಷೆಗಾಗಿ ಕಥೆ ಚೆನ್ನಾಗಿದೆ. ನಂಜುಂಡಿ ಕಲ್ಯಾಣ ಅನ್ನೋ ಟೈಟಲ್ ಇಡೋಣ ಎಂದೆ. ನಾನು ಹೇಳಿದ್ದು ತಮಾಷೆಗೆ. ಆದರೆ, ರಾಜೇಂದ್ರ ಅದನ್ನು ಸೀರಿಯಸ್ಸಾಗಿ ತೆಗೆದುಕೊಂಡರಷ್ಟೇ ಅಲ್ಲ, ರಾಘವೇಂದ್ರ ರಾಜ್‍ಕುಮಾರ್ ಬಳಿ ಹೋಗಿ ನಂಜುಂಡಿ ಕಲ್ಯಾಣ ಟೈಟಲ್‍ನಲ್ಲಿ ಮತ್ತೆ ಸಿನಿಮಾ ಮಾಡುತ್ತೇವೆ ಎಂದು ಹೇಳಿ ಅವರ ಒಪ್ಪಿಗೆಯನ್ನೂ ಪಡೆದುಕೊಂಡುಬಿಟ್ಟರು. ಚಿತ್ರ ಶುರುವಾಗಿದ್ದು ಹಾಗೆ.

  ಇದು ನಿಜಕ್ಕೂ ರಿಸ್ಕೀ ಸಬ್ಜೆಕ್ಟ್. ಜನ ಹೇಗೆ ಒಪ್ಪಿಕೊಳ್ತಾರೆ ಅನ್ನೋ ಭಯ ನಮಗೂ ಇದೆ. ಆದರೆ, ಎಲ್ಲಿಯೂ ಅಶ್ಲೀಲತೆಯಿಲ್ಲ. ಚಿತ್ರ ಶುರುವಿಂದ ಕೊನೆಯವರೆಗೆ ಮಜವಾಗಿ ನೋಡಿಸಿಕೊಂಡು ಹೋಗುತ್ತೆ. 2018ರ ಯೂತ್‍ಫುಲ್ ಸಿನಿಮಾ ಇದು. ಥಿಯೇಟರ್‍ನಿಂದ ಹೊರಬರುವಾಗ ಪ್ರತಿಯೊಬ್ಬರೂ ನಗು ನಗುತ್ತಾ ಬರುತ್ತಾರೆ ಅನ್ನೋ ಭರವಸೆ ಕೊಡ್ತಾರೆ ತನುಷ್. 

 • ನಂಜುಂಡಿ ಕಲ್ಯಾಣದಲ್ಲಿ ಸಲಿಂಗಿಗಳಿಗೇನು ಕೆಲಸ..?

  lgbt marriage issue in nanjundi kalyana

  ನಂಜುಂಡಿ ಕಲ್ಯಾಣದಲ್ಲಿ ಮದುವೆಯೇ ಕಥೆಯ ಮೂಲ. ಚಿತ್ರದ ಹೀರೋ ತನುಷ್. ನಾಯಕಿ ಶ್ರಾವ್ಯಾ. 1989ರ ನಂಜುಂಡಿ ಕಲ್ಯಾಣದಂತೆಯೇ, ಈ ಚಿತ್ರದಲ್ಲೂ ಮದುವೆಯೇ ಸೆಂಟರ್ ಆಫ್ ಅಟ್ರ್ಯಾಕ್ಷನ್. ಆದರೆ, ಇವೆಲ್ಲದರ ಮಧ್ಯೆ ಸಲಿಂಗಿಗಳೂ ಇದ್ದಾರೆ. ಅವರಿಗೇನು ಕೆಲಸ ಅನ್ನೋದೇ ನಂಜುಂಡಿ ಕಲ್ಯಾಣದ ದೊಡ್ಡ ಪ್ರಶ್ನೆ.

  ತನುಷ್, ಅಂದರೆ ಚಿತ್ರದ ಹೀರೋ ಬ್ಯಾಂಕಾಕ್‍ನಲ್ಲಿ ಸಲಿಂಗಿ ಕುರಿಪ್ರತಾಪ್‍ನನ್ನು ಮದುವೆಯಾಗಿ ಬೆಂಗಳೂರಿಗೆ ಬರುತ್ತಾನೆ. ಆದರೆ, ಆ ಮದುವೆ ತಾಯಿ ಪದ್ಮಜಾ ರಾವ್‍ಗೆ ಇಷ್ಟವಿರೋದಿಲ್ಲ. ಹಾಗಾಗಿ ಅವಳು ಮಗನಿಗೆ ಹುಡುಗಿಯೊಬ್ಬಳ ಜೊತೆ ಮದುವೆ ಮಾಡಿಸಲು ಹೊರಡುತ್ತಾಳೆ. ಆಗ ಶುರುವಾಗುತ್ತೆ.. ನಗೆಯ ಹಬ್ಬದೂಟ. ಟ್ವಿಸ್ಟುಗಳ ಆಟ. ಪ್ರೇಕ್ಷಕರಿಗೆ ಬೊಂಬಾಟ್ ಭೋಜನ ಗ್ಯಾಂರಟಿ ಎನ್ನುತ್ತಿದೆ ಚಿತ್ರತಂಡ. ಇದೇ ವಾರ ತೆರೆಗೆ ಬರುತ್ತಿದೆ ನಂಜುಂಡಿ ಕಲ್ಯಾಣ.

   

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery