` ramesh aravind, - chitraloka.com | Kannada Movie News, Reviews | Image

ramesh aravind,

 • ಚಿಟ್ಟೆಗಳ ಜೊತೆ ಪಾರುಲ್ ಬರ್ತ್‍ಡೇ

  parul yadav's birthday celebration

  ಚಿತ್ರನಟಿ ಪಾರುಲ್ ಯಾದವ್, ಚಿಟ್ಟೆಯಾಗಿದ್ದಾರೆ. ಏಕೆಂದರೆ, ಅವರೀಗ ಬಟರ್‍ಫ್ಲೈ ಚಿತ್ರದ ನಾಯಕಿ ಕಂ ನಿರ್ಮಾಪಕಿ. ಈ ಚಿತ್ರದೊಂದಿಗೆ ಪಾರುಲ್ ಅವರಿಗೆ ವಿಶೇಷ ಬಾಂಧವ್ಯವೂ ಬೆಳೆದುಬಿಟ್ಟಿದೆ. ಕಳೆದ ವರ್ಷ ಪಾರುಲ್ ಹುಟ್ಟುಹಬ್ಬದಂದೇ ಚಿತ್ರದ ಮುಹೂರ್ತ ನೆರವೇರಿತ್ತು. ಈ ವರ್ಷ ಮತ್ತೊಮ್ಮೆ ಅದೇ ಚಿತ್ರತಂಡದೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ಚಿಟ್ಟೆ ಪಾರುಲ್.

  ಚಿತ್ರರಂಗ ಸಾಮಾನ್ಯವಾಗಿ ಹೀರೋ ಓರಿಯಂಟೆಡ್. ಹೀಗಾಗಿ ಚಿತ್ರದ ಆಡಿಯೋ, ಮುಹೂರ್ತ.. ಇತ್ಯಾದಿಗಳನ್ನೆಲ್ಲ ನಾಯಕರ ಹುಟ್ಟುಹಬ್ಬದ ದಿನಕ್ಕೆ ಮಾಡ್ತಾರೆ. ಆದರೆ, ಈ ಸಿನಿಮಾದಲ್ಲಿ ನಾಯಕಿಗೆ ಆದ್ಯತೆ ನೀಡಿರುವುದು ವಿಶೇಷ. ಸಿನಿಮಾ ಶುರುವಾಗಿದ್ದೇ ನಾಯಕಿಯ ಹುಟ್ಟುಹಬ್ಬದ ದಿನ. ಈ ವರ್ಷ ಮತ್ತೊಮ್ಮೆ ಅದೇ ಚಿತ್ರತಂಡದೊಂದಿಗೆ ಹುಟ್ಟುಹಬ್ಬ ಆಚರಿಸಿದ್ದು ಖುಷಿ ಕೊಟ್ಟಿದೆ ಎಂದಿದ್ದಾರೆ ಪಾರುಲ್.

  ಮನುಕುಮಾರನ್ ಪ್ರಧಾನ ನಿರ್ಮಾಪಕರಾಗಿರುವ ಚಿತ್ರ ಇದು. ಏಕಕಾಲದಕ್ಕೆ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಶೂಟಿಂಗ್ ನಡೆಯುತ್ತಿದೆ. ಇದು ಕ್ವೀನ್ ಚಿತ್ರದ ರೀಮೇಕ್. 

  ಕನ್ನಡದಲ್ಲಿ ಪಾರುಲ್ ಯಾದವ್, ತಮಿಳಿನಲ್ಲಿ ತಮನ್ನಾ, ತೆಲುಗಿನಲ್ಲಿ ಕಾಜಲ್ ಕ್ವೀನ್ ಆಗಿದ್ದಾರೆ.

 • ಚಿಟ್ಟೆಯಾದರು ಪಾರುಲ್ 

  parul yadav turns into a beautiful buteerfly

  ಬಟರ್ ಫ್ಲೈ ಸಿನಿಮಾ ರಿಲೀಸ್‍ಗೆ ರೆಡಿಯಾಗಿದೆ. ಸೆನ್ಸಾರ್ ಮುಗಿಸಿರುವ ಬಟರ್‍ಫ್ಲೈ ಪಾರುಲ್ ಯಾದವ್ ಅಭಿನಯದ ಸಿನಿಮಾ. ನಿರ್ಮಾಪಕಿಯರಲ್ಲಿ ಅವರೂ ಒಬ್ಬರು. ಕ್ವೀನ್ ಚಿತ್ರದ ರೀಮೇಕ್ ಆಗಿರುವ ಬಟರ್‍ಫ್ಲೈ ಸಿನಿಮಾದ ಪ್ರಚಾರಕ್ಕೆ ಡಿಫರೆಂಟ್ ತಂತ್ರ ಮಾಡುತ್ತಿದ್ದಾರೆ ಪಾರುಲ್.

  ಬಟರ್ ಫ್ಲೈ ಚಿತ್ರದ ಪ್ರಚಾರಕ್ಕಾಗಿ ಚಿಟ್ಟೆಯ ವೇಷ ತೊಟ್ಟಿದ್ದಾರೆ ಪಾರುಲ್. ಚಿತ್ರದ ಟೈಟಲ್‍ಗೆ ತಕ್ಕಂತೆ, ವಿಶೇಷ ವಿನ್ಯಾಸದ ಡ್ರೆಸ್ ತೊಟ್ಟು ಫೋಟೋಶೂಟ್ ಮಾಡಿಸಿದ್ದಾರೆ. ರಮೇಶ್ ಅರವಿಂದ್ ನಿರ್ದೇಶನದ ಬಟರ್‍ಫ್ಲೈ, ಏಕಕಾಲದಲ್ಲಿ ತೆಲುಗು, ತಮಿಳು, ಮಲಯಾಳಂನಲ್ಲೂ ಸಿದ್ಧವಾಗಿದ್ದು, ಒಂದೇ ವಾರ ಎಲ್ಲ ಕಡೆ ರಿಲೀಸ್ ಆಗುತ್ತಿದೆ.

 • ಜನನಿ, ದೀಪಾ ಕಾಮತ್ ಜೊತೆ ಶಿವಾಜಿ ಸುರತ್ಕಲ್`ಗೆ ಗ್ಲಾಮರಸ್ ಸಂಗೀತಾ..!

  ಜನನಿ, ದೀಪಾ ಕಾಮತ್ ಜೊತೆ ಶಿವಾಜಿ ಸುರತ್ಕಲ್`ಗೆ ಗ್ಲಾಮರಸ್ ಸಂಗೀತಾ..!

  ಜನನಿ. ಶಿವಾಜಿ ಸುರತ್ಕಲ್ ಸಿನಿಮಾ ನೋಡಿದ್ದವರಿಗೆ ಜನನಿ ಪಾತ್ರ ಖಂಡಿತಾ ಗೊತ್ತಿರುತ್ತೆ. ಶಿವಾಜಿಯ ಪತ್ನಿಯ ಪಾತ್ರ ಅದು. ಮೊದಲ ಭಾಗದಲ್ಲೇ ಸತ್ತು ಹೋಗಿರುವ ಪಾತ್ರ, ಭಾಗ-2ರಲ್ಲಿ ಹೇಗೆ ಬರೋಕೆ ಸಾಧ್ಯ..? ಅದಕ್ಕೆ ಜನನಿ ಪಾತ್ರ ಮಾಡಿರುವ ರಾಧಿಕಾ ನಾರಾಯಣ್ ಉತ್ತರ ಕೊಡುವುದು ಹೀಗೆ. ನನ್ನ ಜನನಿ ಪಾತ್ರ ಶಿವಾಜಿಯ ಅರೆಪ್ರಜ್ಞೆಯ ಮನಸ್ಥಿತಿ ಎನ್ನುತ್ತಾರೆ ರಾಧಿಕಾ.

  ಶಿವಾಜಿಯ ಅರೆಪಜ್ಞೆಯ ಮನಸ್ಥಿತಿಯನ್ನು ನಾನು ಪ್ರತಿನಿಧಿಸುತ್ತೇನೆ. ಒಂದನೇ ಭಾಗಕ್ಕಿಂತ ಎರಡನೇ ಭಾಗದಲ್ಲಿ ನನಗೆ ಹೆಚ್ಚು ಎಕ್ಸ್ಪ್ಲೋರ್ ಮಾಡುವ ಅವಕಾಶ ಸಿಕ್ಕಿದೆ. ಅಂದರೆ ಭಾವನಾತ್ಮಕವಾಗಿಯೂ ನನ್ನ ಪಾತ್ರ ತುಂಬಾ ಗಾಢವಾಗಿದೆ ಎನ್ನುವುದು ಶಿವಾಜಿ ಸುರತ್ಕಲ್`ನ ಅರೆಪ್ರಜ್ಞೆಯ ಮನಸ್ಥಿತಿಯ ಮಾತು.

  ಇನ್ನು ಇದೇ ಮೊದಲ ಬಾರಿಗೆ ರಮೇಶ್ ಅರವಿಂದ್ ಜೊತೆ ನಟಿಸುತ್ತಿರುವ ಮೇಘನಾ ಗಾಂವ್ಕರ್ ಅವರದ್ದು ದೀಪಾ ಕಾಮತ್ ಎಂಬ ಪೊಲೀಸ್ ಆಫೀಸರ್ ಪಾತ್ರ. ಎಸಿಪಿ ಶಿವಾಜಿ ಸುರತ್ಕಲ್ ಅವರ ಬಾಸ್ ಪಾತ್ರದಲ್ಲಿ ನಾನಿದ್ದೇನೆ. ಮಾಯಾವಿಯ ಮಿಸ್ಟ್ರಿ ಕಥೆಯನ್ನು ಬಗೆಹರಿಸುವ ಪತ್ತೆದಾರರ ಕೆಲಸದಲ್ಲಿ ನಾನು ನೆರವಾಗುತ್ತೇನೆ. ನಾನಿದರಲ್ಲಿ ಸ್ಟ್ರೈಟ್ ಫಾರ್ವರ್ಡ್ ಪೊಲೀಸ್ ಆಫೀಸರ್ ಆಗಿದ್ದು, ನನ್ನ ವೃತ್ತಿ ಜೀವನದಲ್ಲಿಇದೇ ಮೊದಲ ಬಾರಿಗೆ ಖಾಕಿ ಧರಿಸಿದ್ದೇನೆ. ಆದರೆ ನನ್ನ ತಂದೆಯೂ ಪೊಲೀಸ್ ಅಧಿಕಾರಿಯಾಗಿದ್ದರಿಂದ ನನಗೆ ಈ ಪಾತ್ರ ನಿರ್ವಹಣೆ ಕಷ್ಟವಾಗಲಿಲ್ಲ. ಆ ಕಾಸ್ಟ್ಯೂಮ್ ಹಾಕಿದ ತಕ್ಷಣ ಆ ಪೊಲೀಸ್ ಖದರ್ ಮತ್ತು ಬಾಡಿ ಲಾಂಗ್ವೇಜ್ ಬಂದೇ ಬಿಡುತ್ತದೆ. ಖಡಕ್ ಆಗಿ ಡೈಲಾಗ್ ಹೊಡೆದಿದ್ದೇನೆ. ಮೇಘನಾ ಹೇಗೆಲ್ಲ ಡೈಲಾಗ್ ಹೊಡೆದಿರಬಹುದು ಎಂಬ ಕಲ್ಪನೆಗೆ ಉತ್ತರ ಇದೇ ವಾರ ಚಿತ್ರಮಂದಿರದಲ್ಲಿ ಸಿಗಲಿದೆ.

  ಇವರಿಬ್ಬರ ಮಧ್ಯೆ ಚಿತ್ರದಲ್ಲಿ ಇನ್ನೂ ಒಂದು ಪಾತ್ರ ತಂದಿದ್ದಾರೆ ನಿರ್ದೇಶಕ ಅಶೋಕ್ ಶ್ರೀವತ್ಸ. ಸಂಗೀತಾ ಶೃಂಗೇರಿ ಅವರದ್ದು ಕೇವಲ ಗ್ಲಾಮರ್ ರೋಲ್ ಅಲ್ಲವಂತೆ. ನನ್ನದು ಕೇವಲ ಹಾಡಿಗೆ ಬಂದು ಹೋಗುವ ಪಾತ್ರವಲ್ಲ, ಸ್ಟ್ರಾಂಗ್ ಕ್ಯಾರೆಕ್ಟರ್ ಇದೆ ಎಂದಿದ್ದಾರೆ ಸಂಗೀತಾ ಶೃಂಗೇರಿ.

  ರಾಧಿಕಾ ನಾರಾಯಣ್ ಭಾವನೆಗಳನ್ನು ತರುತ್ತಾರೆ, ಮೇಘನಾ ಗಾಂವ್ಕರ್ ಪವರ್ ನೀಡುತ್ತಾರೆ, ಸಂಗೀತಾ ಶೃಂಗೇರಿ ಗ್ಲಾಮರ್ ಬೆರೆಸುತ್ತಾರೆ' ಎಂದು ನಿರ್ದೇಶಕ ಆಕಾಶ್ ಶ್ರೀವತ್ಸ ಹೇಳಿದ್ದಾರೆ. ಈ ಸಿನಿಮಾವನ್ನು ರೇಖಾ ಕೆ.ಎನ್. ಹಾಗೂ ಅನೂಪ್ ಗೌಡ ನಿರ್ಮಿಸಿದ್ದಾರೆ.

 • ಡಯಲ್ 100

  ಡಯಲ್ 100

  100. ಇದು ಪೊಲೀಸ್ ಎಮರ್ಜೆನ್ಸಿ ಡಯಲ್ ನಂಬರ್. ಯಾರಿಗೆ ಏನೇ ಸಮಸ್ಯೆ ಆದರೂ 100ಗೆ ಕಾಲ್ ಹೋಗುತ್ತೆ. ಆ ಸಮಸ್ಯೆಗೆ ಪರಿಹಾರ ಹುಡುಕಬೇಕಾದವರು ಪೊಲೀಸ್. ಅಂತಹ ಪೊಲೀಸ್ ಅಧಿಕಾರಿ ವಿಷ್ಣು. ರಮೇಶ್ ಅರವಿಂದ್.

  ಆ ವಿಷ್ಣುವಿಗೆ ಒಬ್ಬಳು ಮುದ್ದಿನ ತಂಗಿ. ಅಣ್ಣನನ್ನು ಗೋಳು ಹೊಯ್ದುಕೊಳ್ಳೋ ತರಲೆ.. ತುಂಟಿ.. ರಚಿತಾ ರಾಮ್.

  ಪೂರ್ಣ ಆ ಕುಟುಂಬದ ಯಜಮಾನಿ.

  ಆ ಮನೆಗೊಬ್ಬ ಕ್ರಿಮಿನಲ್ ಎಂಟ್ರಿ ಕೊಡ್ತಾನೆ. ಅವನು ಸೈಬರ್ ಕ್ರಿಮಿನಲ್. ಇನ್ಸ್‍ಸ್ಟಾ ಮೂಲಕ ಎಂಟ್ರಿ ಕೊಡೋ ಆತ ಇಡೀ ಕುಟುಂಬದ ನೆಮ್ಮದಿಯನ್ನೇ ಕಿತ್ತುಕೊಂಡು ಬಿಡ್ತಾನೆ.. ಅದರಿಂದ ಹೊರಬರೋಕೆ ವಿಷ್ಣು ಪಡೋ ಸಾಹಸವೇ 100 ಸ್ಟೋರಿ.

  ನಿರ್ಮಾಪಕ ರಮೇಶ್ ರೆಡ್ಡಿ ಅವರ ಫ್ರೆಂಡ್ ಮನೆಯಲ್ಲಿ ರಿಯಲ್ಲಾಗಿ ನಡೆದ ಘಟನೆಗೆ ಸಿನಿಮಾಟಿಕ್ ಟಚ್ ಕೊಟ್ಟಿದ್ದಾರೆ ರಮೇಶ್. ಚಿತ್ರದ ಡೈರೆಕ್ಟರ್ ಅವರೇ. ಇದೇ ವಾರ ರಿಲೀಸ್ ಆಗುತ್ತಿರೊ 100 ಚಿತ್ರದ ಮೇಕಿಂಗ್ ಕೂಡಾ ಭರ್ಜರಿಯಾಗಿದೆ. ಚೇಸಿಂಗ್ ದೃಶ್ಯಗಳು ಉಸಿರು ಬಿಗಿ ಹಿಡಿದು ನೋಡುವಂತಿವೆ. ವೇಯ್ಟ್.. ಫಾರ್.. 100.

 • ಡಿಂಪಲ್ ಕ್ವೀನ್ ಜೊತೆ ರಮೇಶ್ 100 

  ramesh aravind's next movie titled 100

  ರಮೇಶ್ ಮತ್ತು ರಚಿತಾ ರಾಮ್ ಮತ್ತೆ ಜೊತೆಯಾಗಿ ನಟಿಸುತ್ತಿದ್ದಾರೆ. ಪುಷ್ಪಕ ವಿಮಾನ ಚಿತ್ರದ ನಂತರ ಮತ್ತೊಮ್ಮೆ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಗೊತ್ತಿದೆಯಷ್ಟೇ. ಈಗ ಆ ಚಿತ್ರದ ಟೈಟಲ್ ಹೊರಬಿದ್ದಿದೆ. ಚಿತ್ರದ ಟೈಟಲ್ 100.

  ಈ ಚಿತ್ರದಲ್ಲಿಯೂ ರಮೇಶ್ ಅವರದ್ದು ಪೊಲೀಸ್ ಅಧಿಕಾರಿಯ ಪಾತ್ರವಂತೆ. ರಚಿತಾ ರಾಮ್ ಅವರಷ್ಟೆ ಅಲ್ಲದೆ, ಜೋಶ್ ಖ್ಯಾತಿಯ ಪೂರ್ಣ ಇನ್ನೊಬ್ಬ ನಾಯಕಿಯಂತೆ. ನಾಯಕ ನಟನಾಗಿ ಅಷ್ಟೇ ಅಲ್ಲದೆ, ನಿರ್ದೇಶನದ ಹೊಣೆಯನ್ನೂ ಹೊತ್ತಿರುವ ರಮೇಶ್ ಅರವಿಂದ್, ಶೀಘ್ರದಲ್ಲೇ ಚಿತ್ರೀಕರಣ ಶುರು ಮಾಡಲಿದ್ದಾರೆ.

 • ದೆವ್ವದ ಥ್ರಿಲ್ಲರ್ ಶಿವಾಜಿ ಸುರತ್ಕಲ್

  ghost thriller is shivaji suratkal

  ಇದೇ ಮೊದಲ ಬಾರಿಗೆ ನಿಗೂಢ ರಹಸ್ಯ ಭೇದಿಸುವ ಅಧಿಕಾರಿಯಾಗಿ ಥ್ರಿಲ್ ಕೊಟ್ಟಿದ್ದಾಋಎ ರಮೇಶ್ ಅರವಿಂದ್. ರಣಗಿರಿ ಅನ್ನೋ ಸ್ಥಳ, ಅಲ್ಲಿ ನಡೆಯೋ ನಿಗೂಢ ಕೊಲೆ, ಹುಣ್ಣಿಮೆಯ ದಿನ ಸತ್ತುಬೀಳೋ ಪಾರಿವಾಳ, ಕೊಲೆ ಆಗಿದೆಯೋ.. ಇಲ್ಲವೋ.. ಅನ್ನೋದೇ ಸಸ್ಪೆನ್ಸ್ ಎಂಬಷ್ಟು ಕುತೂಹಲ ಹುಟ್ಟಿಸಿದೆ ಶಿವಾಜಿ ಸುರತ್ಕಲ್ ಸಿನಿಮಾ.

  ರಮೇಶ್ ಅರವಿಂದ್ ಜೊತೆ ರಾಧಿಕಾ ನಾರಾಯಣ್, ಆರೋಹಿ, ಅವಿನಾಶ್ ಮೊದಲಾದ ದೊಡ್ಡ ತಾರಾಬಳಗವೇ ಇರುವ ಚಿತ್ರದ ಟ್ರೇಲರ್ ಭರ್ಜರಿ ಸದ್ದು ಮಾಡುತ್ತಿದೆ. ಕೊಲೆಯ ತನಿಖೆ ಮಾಡುತ್ತಾ.. ಮಾಡುತ್ತಾ.. ನಿಜವೋ.. ಭ್ರಮೆಯೋ.. ಎಂಬ ಸಂದಿಗ್ಧಕ್ಕೆ ಸಿಲುಕುವ ಶಿವಾಜಿ ಸುರತ್ಕಲ್ ಪಾತ್ರ, ಹೌದು.. ದೆವ್ವ ಭೂತ ಇರೋದು ನಿಜ ಎಂದು ಕೂಗುತ್ತೆ.

  ಆಕಾಶ್ ಶ್ರೀವತ್ಸ ನಿರ್ದೇಶನದ ಸಿನಿಮಾಗೆ, ಕೆ.ಎನ್.ರೇಖಾ, ಅನೂಪ್ ಗೌಡ ನಿರ್ಮಾಪಕರು. ಟ್ರೇಲರ್ನಲ್ಲಿ ಬೆರಗು ಹುಟ್ಟಿಸುವುದು ಜ್ಯೂಡಾ ಸ್ಯಾಂಡಿ ಮ್ಯೂಸಿಕ್.

 • ನವೆಂಬರ್‍ಗೆ ಬರುತ್ತಾ ಬಟರ್ ಫ್ಲೈ..?

  butterfly to release in november

  ಹಿಂದಿಯ ಕ್ವೀನ್ ಚಿತ್ರದ ರೀಮೇಕ್ ಆಗಿರುವ ಬಟರ್‍ಫ್ಲೈ, 4 ಭಾಷೆಗಳಲ್ಲಿ ಏಕಕಾಲದಲ್ಲಿ ತಯಾರಾಗುತ್ತಿರುವ ಸಿನಿಮಾ. ಕನ್ನಡದಲ್ಲಿ ಕ್ವೀನ್ ಅರ್ಥಾತ್ ಬಟರ್‍ಫ್ಲೈ ಆಗಿರೋದು ಪಾರುಲ್ ಯಾದವ್. ನಿರ್ದೇಶಕ ರಮೇಶ್ ಅರವಿಂದ್, ಕನ್ನಡ ಹಾಗೂ ತಮಿಳು ವರ್ಷನ್‍ಗಳ ನಿರ್ದೇಶಕ. ಸಿನಿಮಾ ನವೆಂಬರ್‍ಗೆ ರಿಲೀಸ್ ಆಗಬಹುದು ಎಂಬ ಸುಳಿವು ಕೊಟ್ಟಿರುವುದು ಸ್ವತಃ ರಮೇಶ್ ಅರವಿಂದ್.

  ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ವೇಗವಾಗಿ ನಡೀತಾ ಇದೆ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಏಕಕಾಲದಲ್ಲಿ ರಿಲೀಸ್ ಆಗಲಿರುವ ಸಿನಿಮಾ ಇದು. ಒಂದೊಂದು ಭಾಷೆಯಲ್ಲೂ ಒಬ್ಬೊಬ್ಬರು ಹೀರೋಯಿನ್. ಹೀಗಾಗಿ ನವೆಂಬರ್‍ನಲ್ಲಿ ಏಕಕಾಲದಲ್ಲಿ ಸಿನಿಮಾ ತೆರೆಗೆ ತರೋಕೆ ಸಿದ್ಧತೆ ನಡೆದಿದೆ ಎಂದಿದ್ದಾರೆ ರಮೇಶ್ ಅರವಿಂದ್.

  ಸೋಮವಾರವಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡ ರಮೇಶ್ ಅರವಿಂದ್, ನಿರ್ದೇಶಕರಾಗಿ, ನಟರಾಗಿ, ಕಿರುತೆರೆಯಲ್ಲಿ ನಿರೂಪಕರಾಗಿ ಸಂಪೂರ್ಣ ಬ್ಯುಸಿಯಾಗಿಬಿಟ್ಟಿದ್ದಾರೆ. ಇದರ ನಡುವೆ ಬಟರ್‍ಫ್ಲೈ ಸಿನಿಮಾ ಕೆಲಸ ಚುರುಕಿನಿಂದ ನಡೆಯುತ್ತಿದೆ.

 • ಪಾರುಲ್ ಅದ್ದೂರಿ ಮದುವೆ

  parul's grand wedding n butterfly

  ಕೈತುಂಬಾ ಮೆಹಂದಿಯ ರಂಗು.. ಮೈತುಂಬಾ ಅಲಂಕಾರ.. ಒಡವೆ.. ನವವಧುವಿನಂತೆ ಕಂಗೊಳಿಸಿದ್ದಾರೆ ಪಾರುಲ್ ಯಾದವ್..ಅವರ ಮದುವೆಯಲ್ಲಿ. ಇಲ್ಲಿ ಮದುಮಗಳಾಗಿರೋದು ಪಾರುಲ್ ಯಾದವ್ ಅಲಿಯಾಸ್ ಪಾರ್ವತಿ.

  ಪಾರುಲ್ ಯಾವಾಗ ಪಾರ್ವತಿಯಾದರು ಎಂದು ತಲೆಗೆ ಹುಳು ಬಿಟ್ಟುಕೊಳ್ಳಬೇಡಿ. ಬಟರ್‍ಫ್ಲೈ ಚಿತ್ರದಲ್ಲಿ ಪಾರುಲ್  ಪಾತ್ರದ ಹೆಸರು ಪಾರ್ವತಿ. ನಮ್ಮ ಮನೆಲೊಂದು ಬಾಳ ದೊಡ್ಡ ಕಾರ್ಯಕ್ರಮ ಅನ್ನೋ ಹಾಡಿನ ಮೂಲವೇ ಮದುವೆ. ಬಟರ್‍ಫ್ಲೈ ಚಿತ್ರಕ್ಕಾಗಿ.

  ಯೋಗರಾಜ್ ಭಟ್ಟರ ಹಾಡಿಗೆ ಬಾಲಿವುಡ್ ಕೊರಿಯೋಗ್ರಾಫರ್ ಸೀಜರ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಚಿತ್ರದಲ್ಲೊಂದು ಹಳೆಯ ಸಿನಿಮಾ ಹಾಡುಗಳ ರೀಮಿಕ್ಸ್ ಹಾಡು ಕೂಡಾ ಇದೆಯಂತೆ. ಚಿತ್ರದ ನಿರ್ದೇಶಕ ರಮೇಶ್ ಅರವಿಂದ್. ಚಿತ್ರದ ನಿರ್ಮಾಪಕಿಯರಲ್ಲಿ ಪಾರುಲ್ ಕೂಡಾ ಒಬ್ಬರು.

 • ಪಾರೂಲ್ ಪದೇ ಪದೇ ಅತ್ತಿದ್ರಂತೆ.. ಈ ಹಾಡು ಕೇಳಿ

  parul yadav in love wth this song

  ಪಾರೂಲ್ ಯಾದವ್ ಅಭಿನಯದ ಕ್ವೀನ್ ಚಿತ್ರದ ರೀಮೇಕ್ ಸಿನಿಮಾ ಬಟರ್ ಫ್ಲೈ ರಿಲೀಸಾಗೋಕೆ ರೆಡಿಯಾಗಿದೆ. ಬಿಡುಗಡೆಗೆ ಮುನ್ನ ಎಲ್ಲರನ್ನೂ ಆಕರ್ಷಿಸಿರುವ ಹಾಡು `ಮೆಲ್ಲ ಕೈ ಹಿಡಿದು ನೀ ತಲುಪಿಸು ಬಾ ಮನೆ ತನಕ.. ' ಎಂಬ ಗೀತೆ. ಜಯಂತ್ ಕಾಯ್ಕಿಣಿಯವರ ಸಾಹಿತ್ಯ ಹೃದಯವನ್ನು ಕಲಕುವಂತಿದೆ.

  ಇಡೀ ಸಿನಿಮಾದಲ್ಲಿ ನನಗೆ ಅತ್ಯಂತ ಹೆಚ್ಚು ಇಷ್ಟವಾದ ಗೀತೆ ಇದು. ಈ ಹಾಡಿನ ಚಿತ್ರೀಕರಣದ ವೇಳೆ ಪದೇ ಪದೇ ಕಣ್ಣೀರಿಟ್ಟಿದ್ದೇನೆ. ಈ ಹಾಡನ್ನು ಯಾರೇ ಕೇಳಿದರೂ ಭಾವುಕರಾಗುವುದು ಖಂಡಿತಾ. ನಾನಂತೂ ಪಾತ್ರದೊಳಗೆ ಬೆರೆತು ಹೋಗಿದ್ದೆ' ಎನ್ನುತ್ತಾರೆ ಪಾರುಲ್.

  ರಮೇಶ್ ಅರವಿಂದ್ ನಿರ್ದೇಶನದ ಬಟರ್ ಫ್ಲೈ ಚಿತ್ರಕ್ಕೆ ಪಾರುಲ್ ಯಾದವ್ ಸಹ ನಿರ್ಮಾಪಕಿಯೂ ಹೌದು. 

 • ಪಾರೂಲ್ ಪಾರ್ವತಿ ಮದುವೆಗೆ ರೆಡಿ. ನಾಳೇನೇ ಮದ್ವೆ..!

  parul parvathi's wedding song out

  ಪಾರುಲ್ ಯಾದವ್ ಮನೆಯಲ್ಲೀಗ ಮದುವೆ ಸಂಭ್ರಮ. ನಾಳೆಯೇ ಮದುವೆ. ಲಂಡನ್ ಹುಡುಗ. ಮದುವೆ ಆದ ಮೇಲೆ ಲಂಡನ್ ಲೈಫು. ಅರೆ.. ಇದೇನ್ ಶಾಕಿಂಗ್ ನ್ಯೂಸ್ ಅಂದ್ಕೋಬೇಡಿ. ಇದೆಲ್ಲ ರಿಯಲ್ ಲೈಫ್ ಸ್ಟೋರಿ ಅಲ್ಲ, ರೀಲ್ ಲೈಫಿನದ್ದು.

  ಬಟರ್ ಫ್ಲೈ ಚಿತ್ರದ ಸಾಂಗ್ ರಿಲೀಸ್ ಆಗಿದ್ದು, ಹಾಡಿನ ಸಾಹಿತ್ಯವೇ ಅದು. ನಾಳೆ ನಮ್ಮ ಮನೇಲೊಂದು ಬಾಳ ದೊಡ್ಡ ಕಾರ್ಯಕ್ರಮ.. ನಮ್ಮ ಹುಡ್ಗಿ ಮ್ಯಾರೇಜಿದೆ.. ಎಂದು ಶುರುವಾಗುವ ಹಾಡಿಗೆ ಸಾಹಿತ್ಯ ಬರೆದಿರೋದು ಭಟ್ಟರು. ಅಮಿತ್ ತ್ರಿವೇದಿ ಸಂಗೀತ ಸಂಯೋಜನೆಯ ಹಾಡಿದು. ಹಿಂದಿಯ ಕ್ವೀನ್ ಚಿತ್ರದ ರೀಮೇಕ್ ಇದಾಗಿದ್ದು, ರಮೇಶ್ ಅರವಿಂದ್ ನಿರ್ದೇಶಿಸಿದ್ದಾರೆ.

 • ಪೈಲ್ವಾನನಿಗೆ ರಮೇಶ್ ಅರವಿಂದ್ ಸಾಥ್

  ramesh aravond lends voice for sudeep's pailwan

  ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್‍ಗೆ ಈಗ ರಮೇಶ್ ಅರವಿಂದ್ ಕೂಡಾ ಜೊತೆಯಾಗಿದ್ದಾರೆ. ಸೆಪ್ಟೆಂಬರ್ 12ರಂದು ರಿಲೀಸ್ ಆಗುತ್ತಿರುವ ಪೈಲ್ವಾನ್ ಚಿತ್ರದಲ್ಲಿ ಹಿನ್ನೆಲೆ ಧ್ವನಿ ನೀಡಿದ್ದಾರೆ ರಮೇಶ್ ಅರವಿಂದ್. ಅಂದಹಾಗೆ ಇದು ಕನ್ನಡದಲ್ಲಿ ಮಾತ್ರ. ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಧ್ವನಿಗಳಿವೆ.

  ಪೈಲ್ವಾನ್ ಅಮೆರಿಕ, ಆಸ್ಟ್ರೇಲಿಯಾ, ಕುವೈತ್, ದುಬೈ, ಬ್ರಿಟನ್, ಕತಾರ್, ಸಿಂಗಾಪುರ ಸೇರಿದಂತೆ ಹಲವಾರು ದೇಶಗಳಲ್ಲಿ ಪ್ರಪಂಚದಾದ್ಯಂತ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ.

  ಕಿಚ್ಚ ಸುದೀಪ್ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಕುಸ್ತಿ ಪಟುವಾಗಿ ನಟಿಸಿದ್ದು, ಸುನಿಲ್ ಶೆಟ್ಟಿ ಕಿಚ್ಚನ ಗುರುವಾಗಿದ್ದಾರೆ. ಆಕಾಂಕ್ಷಾ ಸಿಂಗ್ ಕಿಚ್ಚನ ಹೀರೋಯಿನ್. ಕೃಷ್ಣ ನಿರ್ದೇಶನದ ಚಿತ್ರಕ್ಕೆ ಸ್ವಪ್ನಾ ಕೃಷ್ಣ ನಿರ್ಮಾಪಕಿ. 

   

 • ಪ್ಯಾರಿಸ್‍ಗೆ ಹಾರಿದರು ರಮೇಶ್ ಅರವಿಂದ್

  paris paris launch

  ರಮೇಶ್ ಅರವಿಂದ್ ಕನ್ನಡದಲ್ಲಷ್ಟೇ ಅಲ್ಲ, ತಮಿಳಿನಲ್ಲೂ ಖ್ಯಾತರಾಗಿರುವ ಕಲಾವಿದ. ನಿರ್ದೇಶಕರಾಗಿಯೂ ಹೆಸರು ಮಾಡಿರುವ ರಮೇಶ್, ತಮಿಳಿನಲ್ಲಿ ಪ್ಯಾರಿಸ್ ಪ್ಯಾರಿಸ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಅದು ಹಿಂದಿಯ ಕ್ವೀನ್ ಚಿತ್ರದ ರೀಮೇಕ್. ತಮಿಳಿನಲ್ಲಿ ನಟಿಸುತ್ತಿರುವುದು ಕಾಜಲ್ ಅಗರ್‍ವಾಲ್.

  ಅರೆ, ಕನ್ನಡದಲ್ಲಿ ಇದೇ ಚಿತ್ರವನ್ನು ಬಟರ್ ಫ್ಲೈ ಅಂಥಾ ಮಾಡ್ತಿದ್ದಾರಲ್ವಾ..? ಪಾರುಲ್ ಯಾದವ್ ಹೀರೋಯಿನ್ ಅಲ್ವಾ..? ನಿಮ್ಮ ಪ್ರಶ್ನೆ ಮತ್ತು ನೀವು ತಿಳಿದುಕೊಂಡಿರುವ ಎರಡೂ ವಿಷಯಗಳು ಪಕ್ಕಾ. ಕನ್ನಡದಲ್ಲಿಯೂ ಈ ಚಿತ್ರದ ಡೈರೆಕ್ಟರ್ ಅದೇ ರಮೇಶ್ ಅರವಿಂದ್. ತಮಿಳಿನಲ್ಲೂ ಅವರೇ. ಕನ್ನಡದಲ್ಲಿ ಪಾರುಲ್ ಮಾಡಿದ ಪಾತ್ರವನ್ನೇ ತಮಿಳಿನಲ್ಲಿ ಕಾಜಲ್ ಮಾಡುತ್ತಿದ್ದಾರೆ.

  ಕನ್ನಡದಲ್ಲಿ ಆಗಲೇ ಒಂದು ಹಂತದ ಚಿತ್ರೀಕರಣ ಶುರುವಾಗಿ ಮುಕ್ತಾಯದ ಹಂತದಲ್ಲಿದೆ. ತಮಿಳಿನಲ್ಲಿ ಶುರುವಾಗಬೇಕಿದೆ. ಕ್ವೀನ್ ಚಿತ್ರದ ಕಥೆಯನ್ನು ಕನ್ನಡ ಮತ್ತು ತಮಿಳುನಾಡಿನ ನೇಟಿವಿಟಿಗಳಿಗೆ ತಕ್ಕಂತೆ ಬದಲಾಯಿಸಿದ್ದೇವೆ ಎಂದಿದ್ದಾರೆ ರಮೇಶ್.

 • ಪ್ಯಾರಿಸ್‍ನಲ್ಲಿ ಪಾರ್ವತಿ ಪಾರುಲ್ ಹನಿಮೂನ್

  parul completes shooting in paris

  ಪ್ಯಾರ್ ಗೇ ಪಾರುಲ್ ಪಾರ್ವತಿಯಾಗಿದ್ದಾರೆ. ಚಿಟ್ಟಯಾಗಿದ್ದಾರೆ. ಬಟರ್ ಫ್ಲೈನಂತೆ ಹಾರುತ್ತಿದ್ದಾರೆ. ಹಾರಿರುವುದು ಪ್ಯಾರಿಸ್‍ನಲ್ಲಿ. ಹಾರಿಸಿರುವುದು ರಮೇಶ್ ಅರವಿಂದ್. ಇದು ಬಟರ್ ಫೈ ಚಿತ್ರದ ಶೂಟಿಂಗ್ ಕಥೆ. 45 ದಿನಗಳ ಪ್ಯಾರಿಸ್ ಶೂಟಿಂಗ್ ಮುಗಿಸಿರುವ ಪಾರುಲ್, ಚಿತ್ರದ ನಿರ್ಮಾಪಕಿಯರಲ್ಲಿ ಒಬ್ಬರು. 

  ಏಕಕಾಲದಲ್ಲಿ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಸಿದ್ಧವಾಗುತ್ತಿದೆ ಬಟರ್ ಫ್ಲೈ. ಕನ್ನಡದಲ್ಲಿ ಪಾರುಲ್ ಯಾದವ್ ಗೋಕರ್ಣದ ಪಾರ್ವತಿಯಾಗಿ ನಟಿಸಿದ್ದಾರೆ. ಸತತ 45 ದಿನ ಪ್ಯಾರಿಸ್‍ನಲ್ಲಿದ್ದ ಪಾರುಲ್‍ಗೆ ಅದೊಂದು ಹಿತಾನುಭವ. ಇಂಡಿಯಾ ಬಿಟ್ಟು, ಬೇರೆಲ್ಲೂ ಇಷ್ಟು ಸುದೀರ್ಘ ಕಾಲ ಇರಲಿಲ್ಲವಂತೆ. ಈಗಲೂ ಪ್ಯಾರಿಸ್ ಗುಂಗು ಕಾಡುತ್ತಿದೆ ಎನ್ನುವ ಪಾರುಲ್, ಚಿತ್ರಕ್ಕಾಗಿ ಒಂದೂವರೆ ವರ್ಷ ಮೀಸಲಿಟ್ಟಿದ್ದಾರೆ. ಇದು ಜಾಸ್ತಿ ಅಯ್ತಲ್ವಾ ಎಂದರೆ, ಬಾಹುಬಲಿ ಚಿತ್ರಕ್ಕಾಗಿ ಪ್ರಭಾಸ್ ಮೂರೂವರೆ ವರ್ಷ ಮೀಸಲಿಟ್ಟಿದ್ದರು. ಅದರ ಮುಂದೆ ನನ್ನದೇನು ಮಹಾ ಅಂತಾರೆ. 

  ತಮನ್ನಾ, ಕಾಜಲ್ ಮತ್ತು ಮಂಜಿಮಾ ಮೋಹನ್, ತೆಲುಗು, ತಮಿಳು, ಮಲಯಾಳಂ ಹೀರೊಯಿನ್‍ಗಳು. ಎಲ್ಲರೂ ಒಂದೇ ಸೆಟ್‍ನಲ್ಲಿದ್ದದ್ದು ವಿಶೇಷ. ಅಂದಹಾಗೆ ಇದು ಹಿಂದಿನ ಕ್ವೀನ್ ಚಿತ್ರದ ರೀಮೇಕ್. ಹನಿಮೂನ್‍ಗೆ ಬರುವ ಹಳ್ಳಿ ಹುಡುಗಿಯ ಬೆರಗುಗಳನ್ನು ಕ್ವೀನ್ ಅದ್ಭುತವಾಗಿ ಕಟ್ಟಿಕೊಟ್ಟಿತ್ತು. ಆ ಚಿತ್ರವನ್ನು ಕನ್ನಡಕ್ಕೆ ತರಬೇಕು ಎನ್ನುವುದು ನನ್ನ ಹಂಬಲ ಎಂದು ಹೇಳಿಕೊಂಡಿದ್ದಾರೆ.

  ನಾನೀನ ಕನ್ನಡತಿ. ನನ್ನನ್ನು ಪ್ರೀತಿಸಿದವರು, ಬೆಳೆಸಿದವರು ಕನ್ನಡದವರು ಎಂದು ಅಭಿಮಾನದಿಂದ ಹೇಳಿಕೊಳ್ಳುವ ಪಾರುಲ್ ಯಾದವ್, ಕನ್ನಡದ ಟೀಚರ್ ಒಬ್ಬರಿಂದ ಹೇಳಿಸಿಕೊಂಡು ಕನ್ನಡವನ್ನು ಸ್ಪಷ್ಟವಾಗಿ ಕಲಿತಿದ್ದಾರೆ. ಕನ್ನಡತಿಯೇ ಆಗಿಬಿಟ್ಟಿದ್ದಾರೆ. ಸಿನಿಮಾ ಮೇ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

 • ಫೆ.4ರಿಂದ 100 ಮನೆ ಮನೆಗೆ..

  ಫೆ.4ರಿಂದ 100 ಮನೆ ಮನೆಗೆ..

  2021ರಲ್ಲಿ ರಿಲೀಸ್ ಆಗಿ ಸೈಬರ್ ಕ್ರೈಂ ಬಗ್ಗೆ ಜಾಗೃತಿ ಮೂಡಿಸಿದ ಸಿನಿಮಾ 100. ರಮೇಶ್ ಅರವಿಂದ್ ನಿರ್ದೇಶನದ ಸಿನಿಮಾ ಪ್ರೇಕ್ಷಕರ ಜೊತೆ ಪೊಲೀಸರನ್ನೂ ಸೆಳೆದಿದ್ದ ಸಿನಿಮಾ. ರಮೇಶ್, ರಚಿತಾ ರಾಂ, ಪೂರ್ಣ, ವಿಶ್ವಕರ್ಣ, ಪ್ರಕಾಶ್ ಬೆಳವಾಡಿ, ಶೋಭರಾಜ್, ಮಾಲತಿ ಸುಧೀರ್ ಮೊದಲಾದವರು ನಟಿಸಿದ್ದ ಸಿನಿಮಾದ ಕಂಟೆಂಟ್ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಈಗ ಸಿನಿಮಾ ಒಟಿಟಿಗೆ ಬರುತ್ತಿದೆ.

  ರಮೇಶ್ ರೆಡ್ಡಿ ನಿರ್ಮಾಣದ 100 ಝೀ 5ನಲ್ಲಿ ರಿಲೀಸ್ ಆಗುತ್ತಿದ್ದು, ಫೆಬ್ರವರಿ 4ರಿಂದ ಪ್ರೇಕ್ಷಕರಿಗೆ ಸಿಗಲಿದೆ.

 • ಫೆಬ್ರವರಿ 21ಕ್ಕೆ ರಮೇಶ್ ಅರವಿಂದ್ 101

  case no 10.. ramesh's 101 movie

  ರಮೇಶ್ ಅರವಿಂದ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇ ಕಡಿಮೆ. ಶಾಂತಿ ಕ್ರಾಂತಿ ಚಿತ್ರವೊಂದೇ ಧಡ್ ಅಂತಾ ಕಣ್ಣ ಮುಂದೆ ಬರೋ ಸಿನಿಮಾ. ಅವರೀಗ ಡಿಟೆಕ್ಟಿವ್ ಆಗಿದ್ದಾರೆ. ಅವರು ಮೊದಲ ಬಾರಿ ಪತ್ತೇದಾರನಾಗಿ ಕಾಣಿಸಿಕೊಂಡಿರುವ ‘ಶಿವಾಜಿ ಸುರತ್ಕಲ್’ ಫೆಬ್ರವರಿ 21ರಂದು ರಿಲೀಸ್ ಆಗ್ತಾ ಇದೆ.

  ‘ಶಿವಾಜಿ ಸುರತ್ಕಲ್’ ರಮೇಶ್ ಅಭಿನಯದ 101ನೇ ಸಿನಿಮಾ. ಈಗಾಗಲೇ ಚಿತ್ರ ಟೀಸರ್ ಹಾಗೂ ಟ್ರೇಲರುಗಳ ಮೂಲಕ ನಿರೀಕ್ಷೆ ಹುಟ್ಟಿಸಿದೆ.

  ರಮೇಶ್ ಎದುರು ರಾಧಿಕಾ ನಾರಾಯಣ್, ಆರೋಹಿ ನಟಿಸಿದ್ದು, ಅವಿನಾಶ್, ರಮೇಶ್ ಪಂಡಿತ್, ರೋಹಿತ್ ಭಾನುಪ್ರಕಾಶ್, ರಾಘು ರಮಣಕೊಪ್ಪ ಮೊದಲಾದವರು ಪೋಷಕ ಪಾತ್ರಗಳಲ್ಲಿದ್ದಾರೆ.

  ರಣಗಿರಿ ಅನ್ನೋ ನಿಗೂಢ ಸ್ಥಳದಲ್ಲಿ ನಡೆಯೋ ಸಾವಿನ ಬೆನ್ನು ಹತ್ತುವ ಕಥೆ, ಸೈಕಲಾಜಿಕಲ್ ಥ್ರಿಲ್ಲರ್ನಂತಿದೆ. ದೆವ್ವವೂ ಜೊತೆಗಿದೆಯಾ..? ಸಿನಿಮಾ ನೋಡಿಯೇ ಹೇಳಬೇಕು. ರೇಖಾ ಕೆ.ಎನ್. ಮತ್ತು ಅನೂಪ್ ಗೌಡ ನಿರ್ಮಾಣದ ಚಿತ್ರಕ್ಕೆ ಅಕಾಶ್ ಶ್ರೀವತ್ಸ ನಿರ್ದೇಶಕ.

   

 • ಬಟರ್ ಫ್ಲೈಗೆ ಯು/ಎ ಸರ್ಟಿಫಿಕೇಟ್

  butterfly censored

  ಪ್ಯಾರ್ ಗೇ ಹುಡುಗಿ ಪಾರೂಲ್ ಯಾದವ್ ನಟಿಸಿರುವ ಸಿನಿಮಾ ಬಟರ್ ಫ್ಲೈ. ಈ ಚಿತ್ರಕ್ಕೆ ಅವರು ನಾಯಕಿಯೂ ಹೌದು, ನಿರ್ಮಾಪಕಿಯೂ ಹೌದು. ರಮೇಶ್ ಅರವಿಂದ್ ನಿರ್ದೇಶನದ ಹಿಂದಿಯ ಕ್ವೀನ್ ಚಿತ್ರದ ರೀಮೇಕ್ ಇದು. ಏಕಕಾಲದಲ್ಲಿ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ತಯಾರಾಗಿರುವ ಸಿನಿಮಾ, ಸೆನ್ಸಾರ್ ಗೆದ್ದಿದೆ. ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ.

  ಚಿತ್ರಕ್ಕೆ ಯಾವುದೇ ಕಟ್ ಹೇಳದೆ ಸೆನ್ಸಾರ್ ಪಾಸ್ ಮಾಡಿದೆ. ಮೇ ತಿಂಗಳಲ್ಲಿ ಸಿನಿಮಾ ಏಕಕಾಲದಲ್ಲಿ ನಾಲ್ಕೂ ಭಾಷೆಗಳಲ್ಲಿ ತೆರೆ ಕಾಣಲಿದೆ. ತಮಿಳಿನಲ್ಲಿ ತಮನ್ನಾ, ತೆಲುಗಿನ ಕಾಜಲ್ ಅಗರ್‍ವಾಲ್ ಹಾಗೂ ಮಲಯಾಳಂನಲ್ಲಿ ಮಂಜಿಮ್ ಮೋಹನ್ ಬಟರ್ ಫ್ಲೈ ಆಗಿದ್ದಾರೆ

 • ಬಟರ್‍ಫ್ಲೈ.. ಬಟರ್‍ಫ್ಲೈ.. ಬಟರ್‍ಫ್ಲೈ..

  butterfly shooting in mysore

  ಬಟರ್‍ಫ್ಲೈ.. ಅನ್ನೋ ಪದ ಮೂರು ಸಾರಿ ಕೇಳಿದ್ರೆ ಸಾಕು, ಹಳೆಯ ದಿನಗಳ ಒಂದು ಜಾಹೀರಾತು ನೆನಪಾಗುತ್ತಲ್ಲ.. ಹಾಗೆಯೇ ನೆನಪಲ್ಲಿ ಉಳಿಯುವಂತಹ ಚಿತ್ರವೊಂದು ಬಟರ್‍ಫ್ಲೈ.. ಹೆಸರಿನಲ್ಲಿಯೇ ತಯಾರಾಗುತ್ತಿದೆ. ರಮೇಶ್ ಅರವಿಂದ್ ನಿರ್ದೇಶನದಲ್ಲಿ ಪಾರೂಲ್ ಯಾದವ್ ಬಟರ್‍ಫ್ಲೈ ಆಗಿ ನಟಿಸುತ್ತಿದ್ದಾರೆ. ನಾಯಕಿಯಷ್ಟೇ ಅಲ್ಲ, ಚಿತ್ರದ ನಿರ್ಮಾಪಕರಲ್ಲಿ ಪಾರುಲ್ ಕೂಡಾ ಒಬ್ಬರು. 

  ದುಂಬಿಯೊಂದು ಚಿಟ್ಟೆಯಾಗುವಂತೆಯೇ, ಮುಗ್ದ ಹುಡುಗಿಯೊಬ್ಬಳು ಬದಲಾಗುವ ಕಥೆ ಚಿತ್ರದಲ್ಲಿದೆ. ಪಾರೂಲ್ ಪಾರ್ವತಿಯಾಗಿದ್ದಾರೆ. ಚಿತ್ರೀಕರಣ ಈಗ ಫೈನಲ್ ಹಂತದಲ್ಲಿದೆ. ಪ್ಯಾರಿಸ್‍ನಲ್ಲಿ ಒಂದು ದೃಶ್ಯ ಚಿತ್ರೀಕರಿಸಿಬಿಟ್ಟರೆ ಚಿತ್ರೀಕರಣ ಮುಗಿದಂತೆಯೇ. ಅಂದಹಾಗೆ ಇದು ಹಿಂದಿಯ ಕ್ವೀನ್ ಚಿತ್ರದ ರೀಮೇಕ್.

  ಮೈಸೂರಿನಲ್ಲಿ ಈಗ ಚಿತ್ರೀಕರಣ ಬಿರುಸಾಗಿ ನಡೆಯುತ್ತಿದ್ದು, ಮಾಧ್ಯಮದವರನ್ನೆಲ್ಲ ಶೂಟಿಂಗ್ ಸೆಟ್‍ಗೆ ಕರೆದು ಚಿತ್ರತಂಡದ ಪರಿಚಯ ಮಾಡಿಸಿದ್ದಾರೆ ನಿರ್ದೇಶಕ ರಮೇಶ್ ಅರವಿಂದ್. ರಮೇಶ್ ಅರವಿಂದ್ ಜೊತೆ ಕೆಲಸ ಮಾಡುವುದು ಹೆಮ್ಮೆಯ ಸಂಗತಿ ಎಂದು ಹೇಳಿಕೊಂಡಿದ್ದಾರೆ ಪಾರೂಲ್. ಸಿನಿಮಾ ಆಗಸ್ಟ್‍ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

 • ಮತ್ತೊಂದು ಸೆಂಚುರಿಯತ್ತ ರಮೇಶ್ ಅರವಿಂದ್

  ಮತ್ತೊಂದು ಸೆಂಚುರಿಯತ್ತ ರಮೇಶ್ ಅರವಿಂದ್

  ಶಿವಣ್ಣ ಅಷ್ಟೇ ಅಲ್ಲ, ರಮೇಶ್ ಅರವಿಂದ್ ಕೂಡಾ 100+ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಮತ್ತೊಂದು ಸೆಂಚುರಿ ಹೊಡೆಯುವ ಹಾದಿಯಲ್ಲಿದ್ದಾರೆ. ಅದು ವೀಕೆಂಡ್ ವಿತ್ ರಮೇಶ್ ಸರಣಿಯಲ್ಲಿ. ಹೊಸ ಸೀಸನ್ ಪ್ರಾರಂಭವಾಗಲಿದೆ. ಮೊದಲ ಸಂಚಿಕೆ ಮಾರ್ಚ್ 25 ರಂದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. 5ನೇ ಸೀಸನ್ ಪ್ರಾರಂಭಕ್ಕೂ ಮುನ್ನ ನಿರೂಪಕ ರಮೇಶ್ ಅರವಿಂದ್ ಹಾಗೂ ಜೀ ವಾಹಿನಿಯ ಚೀಫ್ ಕಂಟೆಂಟ್ ಆಫೀಸರ್ ರಾಘವೇಂದ್ರ ಹುಣಸೂರು ಪತ್ರಿಕಾಗೋಷ್ಠಿಯಲ್ಲಿ ಶೋ ಕುರಿತಾಗಿ ಮಾಹಿತಿ ನೀಡಿದ್ದಾರೆ. ಮೊದಲ ಎಪಿಸೋಡ್ನ ಅತಿಥಿ ಯಾರಾಗಲಿದ್ದಾರೆ ಎಂಬುದರ ಜೊತೆಗೆ ಈ ಸೀಸನ್ನಲ್ಲಿ ಕಾಣಿಸಿಕೊಳ್ಳುವ ಇತರೆ ಕೆಲವು ಅತಿಥಿಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ.

  ಮೊದಲ ಎಪಿಸೋಡ್ಗೆ ಸ್ಯಾಂಡಲ್ವುಡ್ ಕ್ವೀನ್ ನಟಿ ರಮ್ಯಾ ಅತಿಥಿಯಾಗಿ ಭಾಗಿಯಾಗಲಿದ್ದಾರೆ. ರಮ್ಯಾ ಜೊತೆಗಿನ ಎಪಿಸೋಡ್ನ ಚಿತ್ರೀಕರಣ ಮಾರ್ಚ್ 21 ರಿಂದ ಪ್ರಾರಂಭವಾಗಲಿದೆ. ಎರಡನೇ ಎಪಿಸೋಡ್ ನಲ್ಲಿ ಡ್ಯಾನ್ಸ್ ಲಿಜೆಂಡ್ ಪ್ರಭುದೇವ ಸಾಧಕರ ಕುರ್ಚಿಯ ಮೇಲೆ ಕೂರಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

  ಈ ಸೀಸನ್ನಲ್ಲಿ ನಟ ಧ್ರುವ ಸರ್ಜಾ, ನಟಿ ರಚಿತಾ ರಾಮ್, ನಟಿ ಮಾಲಾಶ್ರೀ, ಇಶಾ ಫೌಂಡೇಶನ್ನ ಜಗ್ಗಿ ವಾಸುದೇವ್ , ಖ್ಯಾತ ಹೃದ್ರೋಗ ತಜ್ಞ ಮಂಜುನಾಥ್ ಸೇರಿದಂತೆ ಇನ್ನೂ ಹಲವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿಶೇಷವೆಂದರೆ ಇನ್ನು 16 ಸಾಧಕರ ಬಳಿಕ ನೂರನೇ ಸಾಧಕರು ಬರಲಿದ್ದು, ಆ ಎಪಿಸೋಡ್ಗೆ ಬಹಳ ವಿಶೇಷ ಅತಿಥಿಯೊಬ್ಬರು ಸಾಧಕರ ಕುರ್ಚಿ ಏರಲಿದ್ದಾರೆ. ನೂರನೇ ಎಪಿಸೋಡ್ಗೆ ಬರುವ ಅತಿಥಿ ಆ ಚೇರ್ಗೆ ನ್ಯಾಯ ಕೊಡಲಿದ್ದಾರೆ ಎಂದಿದ್ದಾರೆ ನಟ ರಮೇಶ್.

  ಸಿನಿಮಾದಲ್ಲಿಯೂ ಸೆಂಚುರಿ ಹೋಡಿದಿದ್ದೇನೆ. ಈಗ ಇದರಲ್ಲೂ  ಸೆಂಚುರಿ ಬಾರಿಸಿದರೆ  ಖುಷಿ ಆಗುತ್ತ್ತದೆ. ಕರ್ನಾಟಕದಲ್ಲಿ ಸಾಧಕರಿಗೆ ಕೊರತೆ ಇಲ್ಲ. ಕೇವಲ ನಟ, ರಾಜಕಾರಣಿ ಅಲ್ಲ ವೈದ್ಯರು, ರೈತರು, ನರ್ಸ್, ಹೀಗೆ ಹಲವರನ್ನು ಕರೆಸಬಹುದು. ಸ್ಪೂರ್ತಿ ತುಂಬುವ ಕೆಲಸ ಮಾಡಬೇಕು. ಕರ್ನಾಟಕದಲ್ಲಿರೋ ಎಲ್ಲರಿಗೂ ತಮ್ಮ ನಿಜವಾದ ಶಕ್ತಿಯ ಅರಿವಾಗಿ, ಎಲ್ಲರೂ ತಮ್ಮ ಅತ್ಯುತ್ತಮ ವ್ಯಕ್ತಿತ್ವನ್ನು ಹೊರಗೆ ತೋರಬೇಕು ಅನ್ನುವುದೇ ವೀಕೆಂಡ್ ವಿತ್ ರಮೇಶ್ ಅನ್ನೋದೆ ಉದ್ದೇಶ ಎಂದರು ರಮೇಶ್ ಅರವಿಂದ್. ಇದೇ ಮಾರ್ಚ್ 25 ರಿಂದ ಸೀಸನ್ 5 ಪ್ರಸಾರವಾಗಲಿದೆ.

 • ಮೆಲ್ಲ ಮೆಲ್ಲನೆ ಆವರಿಸಿತು ಮೆಲ್ಲನೆ ಕೈ ಹಿಡಿದು..

  mellamellane song creates magic

  ಹಾಡು ಬರೆದಿರುವುದು ಜಯಂತ್ ಕಾಯ್ಕಿಣಿ. ಹಾಡಿರುವುದು ಸುಪ್ರಿಯಾ ಲೋಹಿತ್ ಮತ್ತು ಸತ್ಯ ಪ್ರಕಾಶ್. ಅಮಿತ್ ತ್ರಿವೇದಿ ಸಂಗೀತ ನಿರ್ದೇಶನದ ಹಾಡು.. ಮೆಲ್ಲ ಕೈ ಹಿಡಿದು.. ನೀ ತಲುಪಿಸು ಬಾ.. ನನ್ನ ಮನೆತನಕಾ.. 

  ಒಂದೊಂದು ಪದದಲ್ಲೇ ಇಡೀ ಜೀವನವನ್ನು ತುಂಬಿಸಿ ಕೊಡುವ ಜಯಂತ್ ಕಾಯ್ಕಿಣಿ, ಇಲ್ಲೂ ಗೆದ್ದಿದ್ದಾರೆ.

  ಹಾಡು ಮೆಲ್ಲ ಮೆಲ್ಲನೆ ಆವರಿಸುತ್ತಾ ಹೋಗುತ್ತೆ. ದುಃಖದಲ್ಲಿದ್ದಾಗ ಸಂಗಾತಿಯಂತೆ, ಖುಷಿಯಲ್ಲಿದ್ದಾಗ ವಿಷಾದ ಗೀತೆಯಂತೆ ಕೇಳಿಸುವ ಈ ವಿಭಿನ್ನ ಗೀತೆ, ಬಟರ್ ಫ್ಲೈ ಚಿತ್ರದ್ದು.

  ಮನು ಕುಮಾರ್, ಪಾರೂಲ್ ಯಾದವ್ ನಿರ್ಮಾಣದ ಚಿತ್ರದಲ್ಲಿ ಪಾರೂಲ್ ಯಾದವ್, ಪಾರೂ ಆಗಿ ನಟಿಸಿದ್ದಾರೆ. ರಮೇಶ್ ಅರವಿಂದ್ ನಿರ್ದೇಶನದ ಚಿತ್ರ, ಮಲೆನಾಡಿನ ಮಡಿಲಲ್ಲಿ, ಗೋಕರ್ಣದಲ್ಲಿ, ಪ್ಯಾರಿಸ್ಸಿನಲ್ಲಿ ಚಿತ್ರೀಕರಣಗೊಂಡಿದೆ. ಪುನೀತ್ ರಾಜ್‍ಕುಮಾರ್ ಬಿಡುಗಡೆ ಮಾಡಿದ್ದ ಈ ಹಾಡು ಪ್ರೇಮಿಗಳ ಹೃದಯವನ್ನು ನಿಧಾನವಾಗಿ ಆವರಿಸಿಕೊಳ್ಳುತ್ತಿದೆ.

 • ಮೊಬೈಲ್ ಮೂಲಕ ಆಗಂತುಕರು ಕುಟುಂಬದೊಳಕ್ಕೆ ಎಂಟ್ರಿ ಕೊಟ್ಟಾಗ..

  ಮೊಬೈಲ್ ಮೂಲಕ ಆಗಂತುಕರು ಕುಟುಂಬದೊಳಕ್ಕೆ ಎಂಟ್ರಿ ಕೊಟ್ಟಾಗ..

  ಇದು ವಿಚಿತ್ರ.. ಆದರೂ ನಿಜ.. ಈಗಿನ ಜನರೇಷನ್‍ನಲ್ಲಿ ಜನ ಮುಖಾಮುಖಿ ಮಾತುಗಳಿಗಿಂತ ಮೊಬೈಲ್ ಮಾತುಕತೆಯಲ್ಲೇ ಬ್ಯುಸಿ. ಮೊಬೈಲ್ ಒಂದಿದ್ದರೆ ಸಾಕು.. ಮೊಬೈಲೇ ಮನೆ. ಇಂತಹ ಹೊತ್ತಿನಲ್ಲಿ ಅಪರಿಚಿತರು ಮನೆಯೊಳಗೆ ಎಂಟ್ರಿ ಕೊಟ್ಟರೆ.. ಅದೂ ಮೊಬೈಲ್ ಮೂಲಕವೇ ಆಗಂತುಕರು ಮನೆಯೊಳಗೆ ನುಗ್ಗಿಬಿಟ್ಟರೆ.. 100 ಚಿತ್ರದ ಕಾನ್ಸೆಪ್ಟೇ ಅದು. ಸೈಬರ್ ಕ್ರೈಂ ಮಿಸ್ಟರಿ.

  ಆನ್‍ಲೈನ್ ಜಗತ್ತಿನ ಮೂಲಕ ಮನೆಯೊಳಗೆ ನುಗ್ಗುವ ಅಪರಿಚಿತರು ಒಂದು ಕುಟುಂಬ, ಆ ಕುಟುಂಬದ ಯಜಮಾನ ಪ್ರತಿಪಾದಿಸುವ ಮೌಲ್ಯಗಳನ್ನು ಬ್ರೇಕ್ ಮಾಡ್ತಾರೆ. ಆಗ ಯಾವ್ಯಾವ ರೀತಿ ಮೋಸ ಹೋಗಬಹುದು ಅನ್ನೋದೇ ಚಿತ್ರದ ಕಥೆ ಎನ್ನುತ್ತಾರೆ ರಮೇಶ್.

  ರಮೇಶ್`ಗೆ ಇಲ್ಲಿ ರಚಿತಾ ರಾಮ್ ತಂಗಿಯಾಗಿದ್ದಾರೆ. ಪೂರ್ಣಿಮಾ ಇನ್ನೊಬ್ಬ ನಾಯಕಿ. ರಮೇಶ್ ರೆಡ್ಡಿ ನಿರ್ಮಾಣದ ಸಿನಿಮಾ ಅದ್ಧೂರಿಯಾಗಿ ಮೂಡಿ ಬಂದಿದ್ದು, ಚೇಸಿಂಗ್ ಸೀನ್‍ಗಳು ಉಸಿರು ಬಿಗಿಹಿಡಿದು ನೋಡುವಂತಿವೆ. ಚಿತ್ರ ನವೆಂಬರ್ 19ಕ್ಕೆ ರಿಲೀಸ್ ಆಗುತ್ತಿದೆ.