` ramesh aravind, - chitraloka.com | Kannada Movie News, Reviews | Image

ramesh aravind,

 • ಶಿವಾಜಿ ಸುರತ್ಕಲ್ ಹೀರೋನಾ? ವಿಲನ್ನಾ?

  ಶಿವಾಜಿ ಸುರತ್ಕಲ್ ಹೀರೋನಾ? ವಿಲನ್ನಾ?

  ಶಿವಾಜಿ ಸುರತ್ಕಲ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ರಮೇಶ್ ಅರವಿಂದ್ ಹುಟ್ಟುಹಬ್ಬದ ವಿಶೇಷವಾಗಿ ಬಿಡುಗಡೆಯಾದ ಟೀಸರಿನಲ್ಲಿ ಎಲ್ಲರಿಗೂ ಕಾಡುವ ಪ್ರಬಲ ಕುತೂಹಲ ಅದೇ. ಶಿವಾಜಿ ಸುರತ್ಕಲ್ ಹೀರೋನಾ? ವಿಲನ್ನಾ?

  ಸಿನಿಮಾ ಥಿಯೇಟರಿನಲ್ಲಿ ಚೆನ್ನಾಗಿ ಹೋಗುತ್ತಿರುವ ಸಂದರ್ಭದಲ್ಲೇ ಲಾಕ್ ಡೌನ್ ಆಯಿತು. ಆ ಸಂದರ್ಭದಲ್ಲೂ ಚಿತ್ರದ ಮಿಸ್ಟೇಕ್ಸ್‍ಗಳ ಪಟ್ಟಿ ಹುಡುಕಿದರು ಪ್ರೇಕ್ಷಕರು. ಅದನ್ನು ಗಮನದಲ್ಲಿಟ್ಟುಕೊಂಡೇ ಶಿವಾಜಿ ಸುರತ್ಕಲ್ 2 ಬಿಡುಗಡೆಯಾಗುತ್ತಿದೆ. ನಾವೆಲ್ಲ ನರಕ ಎಂದರೆ ಪಾತಾಳಕ್ಕಿಂತ ಕೆಳಗಿದೆ ಎಂದುಕೊಂಡಿದ್ದೇವೆ. ಆದರೆ ನರಕ ಅನ್ನೋದು ಆಕಾಶದ ಕೆಳಗೆ ನಮ್ಮ ತಲೆಯಲ್ಲೇ ಇದೆ. ಇಂತಾದ್ದೊಂದು ನರಕದಲ್ಲಿರೋ ಶಿವಾಜಿ ತನ್ನೊಳಗಿನ ರಾಕ್ಷಸನನ್ನಿಟ್ಟುಕೊಂಡೇ ಕೆಟ್ಟದರ ವಿರುದ್ಧ ಹೋರಾಡುತ್ತಾನೆ. ಅವನು ಗೆಲ್ಲೋದು ತನ್ನೊಳಗಿನ ರಾಕ್ಷಸನನ್ನಾ ಎನ್ನುವುದೇ ಚಿತ್ರದ ಕಥೆ ಎನ್ನುತ್ತಾರೆ ರಮೇಶ್. ಟೀಸರ್ ಕೊನೆಯಲ್ಲಿ ಕೈಗೆ ಬೇಡಿ ಹಾಕಿಕೊಂಡು ಬರುವ ಶಿವಾಜಿ ಸುರತ್ಕಲ್ ಪಾತ್ರ, ಶಿವಾಜಿ ಸುರತ್ಕಲ್ ಹೀರೋನಾ? ವಿಲನ್ನಾ? ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ.

  ನಿರ್ದೇಶಕ ಆಕಾಶ್ ಶ್ರೀವತ್ಸ ರಮೇಶ್ ಜೊತೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದವರು. ನನ್ನ ಅವರ ಸ್ನೇಹ 15 ವರ್ಷಗಳಷ್ಟು ಹಳೆಯದು. ಅವರೊಬ್ಬ ಅದ್ಭುತ ನಿರ್ದೇಶಕ ಎನ್ನುತ್ತಾರೆ ರಮೇಶ್. ಇದು ಒಬ್ಬ ಶಿವಾಜಿಯ ಕಥೆಯಲ್ಲ. ಇಬ್ಬರು ಶಿವಾಜಿಯ ಕಥೆ ಎನ್ನುತ್ತಾ ಕುತೂಹಲ ಹೆಚ್ಚಿಸಿದ್ದರು ಡೈರೆಕ್ಟರ್ ಆಕಾಶ್ ಶ್ರೀವತ್ಸ.

  ನಾಯಕಿ ರಾಧಿಕಾ ನಾರಾಯಣ್ ಅವರಂತೂ ಚಿತ್ರದ ಎಷ್ಟೇ ಸೀಕ್ವೆಲ್ ನಟಿಸೋಕೆ ನಾನು ಸಿದ್ಧ ಎಂದರೆ ಮೇಘನಾ ಗಾಂವ್ಕರ್‍ಗೆ ರಮೇಶ್ ಜೊತೆ ನಟಿಸುವ ಚಾನ್ಸ್ ಸಿಕ್ಕಿದ್ದು ದೊಡ್ಡ ಖುಷಿ. ತಂದೆ ಪೊಲೀಸ್ ಆಫೀಸರ್. ಹಾಗಾಗಿ ಪೊಲೀಸ್ ಯುನಿಫಾರ್ಮ್ ಹಾಕೋದು ಚಿತ್ರದ ಡಬ್ಬಲ್ ಖುಷಿ ಕೊಟ್ಟಿದೆಯಂತೆ ಮೇಘನಾಗೆ. ನಿರ್ಮಾಪಕ ಅನೂಪ್ ಗೌಡ ಇಡೀ ಚಿತ್ರತಂಡದ ಬಗ್ಗೆ ಖುಷಿ ವ್ಯಕ್ತಪಡಿಸಿದರು.

  ಶಿವಾಜಿ ಸುರತ್ಕಲ್ ಭಾಗ-2 ರಲ್ಲಿ ನಾಜರ್, ರಮೇಶ್ ಭಟ್, ಶೋಭರಾಜ್, ಶ್ರೀನಿವಾಸ ಪ್ರಭು, ವಿದ್ಯಾ ಮೂರ್ತಿ, ವೀಣಾ ಸುಂದರ್ ಮೊದಲಾದವರು ನಟಿಸಿದ್ದಾರೆ.

 • ಶಿವಾಜಿಗೆ ಫಾರಿನ್ ಪ್ರೇಕ್ಷಕರಿಂದಲೂ ಅದ್ಭುತ ರೆಸ್ಪಾನ್ಸ್

  doreign audience appraciates shivaji suratkal

  ಶಿವರಾತ್ರಿಗೆ ರಿಲೀಸ್ ಆಗಿ ಸಖತ್ ಸದ್ದು ಮಾಡುತ್ತಿರುವ ಚಿತ್ರ ಶಿವಾಜಿ ಸುರತ್ಕಲ್. ರಮೇಶ್ ಅರವಿಂದ್ ಅವರ ವಿಭಿನ್ನ ಅವತಾರ, ಸ್ಪೆಷಲ್ ಎನ್ನಿಸುವ ಕಥೆ, ಥ್ರಿಲ್ ಕೊಡುವ ನಿರೂಪಣೆ, ಚಿತ್ರಕಥೆ ಕನ್ನಡದ ಪ್ರೇಕ್ಷಕರಿಗೆ ಹಿಡಿಸಿ, ಚಿತ್ರವನ್ನು ಗೆಲ್ಲಿಸಿದ್ದಾರೆ. ಈಗ ಇದೇ ಸಿನಿಮಾ ವಿದೇಶದಲ್ಲೂ ಭರ್ಜರಿ ಸದ್ದು ಮಾಡ್ತಿದೆ.

  ಕನ್ನಡ ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗುತ್ತದೆ ಎನ್ನುವ ನಂಬಿಕೆಯಂತೂ ಇತ್ತು. ಆದರೆ ವಿದೇಶದಲ್ಲಿ ಕರ್ನಾಟಟಕದಲ್ಲಿ ಸಿಕ್ಕ ರೀತಿಯದ್ದೇ ರಿಯಾಕ್ಷನ್ ಸಿಕ್ಕಿದ್ದು ವಿಶೇಷ. ಇಲ್ಲಿಯೂ ಅಷ್ಟೆ.. ಮೊದಲ ದಿನ ಸಾಧಾರಣವಾದ ರಿಯಾಕ್ಷನ್ ಇತ್ತು. ನಂತರ 2ನೇ ದಿನಕ್ಕೆ.. 3ನೇ ದಿನಕ್ಕೆ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಿತ್ತು. ಅಲ್ಲಿಯೂ ಹಾಗೆಯೇ ಆಯ್ತು. ಅಮೆರಿಕದಲ್ಲಿ ಮೊದಲು 4 ಸೆಂಟರ್‍ಗಳಲ್ಲಿ ರಿಲೀಸ್ ಮಾಡಿದ್ದೆವು. ನಂತರ ಅದು 8 ಸೆಂಟರ್‍ಗೆ ಏರಿತು. ಆಸ್ಟ್ರೇಲಿಯಾದಲ್ಲೂ ಇದೇ ರೀತಿಯ ರೆಸ್ಪಾನ್ಸ್ ಸಿಕ್ಕಿದೆ. ಬ್ರಿಟನ್ನಿನಲ್ಲೂ ಚಿತ್ರಕ್ಕೆ ಪ್ರೇಕ್ಷಕರು ಧಾವಿಸಿ ಬರುತ್ತಿದ್ದಾರೆ. ಐ ಆ್ಯಮ್ ಹ್ಯಾಪಿ ಎನ್ನುತ್ತಾರೆ ರಮೇಶ್ ಅರವಿಂದ್.

  ಚಿತ್ರದ ನಿರ್ದೇಶಕ ಆಕಾಶ್ ಶ್ರೀವತ್ಸ ಶಿವಾಜಿ ಸುರತ್ಕಲ್ ಸೀಕ್ವೆಲ್ ಪ್ಲಾನ್ ಮಾಡುತ್ತಿದ್ದಾರೆ. ಸದ್ಯಕ್ಕೆ ರಮೇಶ್ ಅರವಿಂದ್ ಮತ್ತು ಆಕಾಶ್ ಶ್ರೀವತ್ಸ ಲಂಡನ್‍ಗೆ ಪ್ರೀಮಿಯರ್ ಶೋಗೆ ಹೊರಟಿದ್ದಾರೆ.

 • ಶಿವಾಜಿಯ ಜೊತೆ ಯಾರ್ ಯಾರೆಲ್ಲ ಸಸ್ಪೆನ್ಸ್ ಥ್ರಿಲ್ ಕೊಡ್ತಾರೆ..?

  ಶಿವಾಜಿಯ ಜೊತೆ ಯಾರ್ ಯಾರೆಲ್ಲ ಸಸ್ಪೆನ್ಸ್ ಥ್ರಿಲ್ ಕೊಡ್ತಾರೆ..?

  ಶಿವಾಜಿ ಸುರತ್ಕಲ್-2 ಸಿನಿಮಾ ಇದೇ 14ಕ್ಕೆ ರಿಲೀಸ್ ಆಗುತ್ತಿದೆ. ಮೊದಲ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆಯೇ 2ನೇ ಭಾಗಕ್ಕೆ ಪ್ರೇರಣೆ. ಈ ಚಿತ್ರದಲ್ಲೂ ಸಸ್ಪೆನ್ಸ್ ಥ್ರಿಲ್ ಬೆರೆಸಿಯೇ ಭಾವನಾತ್ಮಕ ಚಿತ್ರವೊಂದನ್ನು ಕಟ್ಟಿಕೊಟ್ಟಿದ್ದಾರೆ ಅಶೋಕ್ ಶ್ರೀವತ್ಸ. ರಮೇಶ್ ಜೊತೆಗೆ ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ನಿಧಿ ಹೆಗಡೆ ಪ್ರಧಾನ ಪಾತ್ರಗಳಲ್ಲಿದ್ದಾರೆ. ಇವರ ಜೊತೆಗೆ ನಾಜರ್, ಶೋಭರಾಜ್, ವಿನಾಯಕ್ ಜೋಷಿ, ಸುಮನ್ ಭಟ್, ರಮೇಶ್ ಭಟ್, ಸಿದ್ಲಿಂಗು ಶ್ರೀಧರ್, ವೀಣಾ ಸುಂದರ್, ಸುಂದರ್, ಶ್ರೀನಿವಾಸ ಪ್ರಭು ಮೊದಲಾದ ದೊಡ್ಡ ತಾರಾಗಣವೇ ಇದೆ. ಚಾರ್ಲಿ 777 ಖ್ಯಾತಿಯ ಸಂಗೀತಾ ಶೃಂಗೇರಿ ಅವರದ್ದು ವಿಶೇಷ ಪಾತ್ರ. ಮಧುರಾ ಗೌಡ, ಸೃಷ್ಟಿ ಶೆಟ್ಟಿ, ಲಕ್ಷ್ಮಿ ಮೂರ್ತಿ ಎಂಬ ಹೊಸ ಪ್ರತಿಭೆಗಳ ಪರಿಚಯವೂ ಈ ಚಿತ್ರದ ಮೂಲಕ ಆಗಲಿದೆ.

  ನಾಜರ್ ಅವರದ್ದು ಇಲ್ಲಿ ವಿಜಯೇಂದ್ರ ಹೆಸರಿನ ಪಾತ್ರ. 25 ವರ್ಷಗಳ ಗೆಳೆತನವಿದ್ದರೂ ನಾಜರ್ ಮತ್ತು ರಮೇಶ್ ಇದೇ ಮೊದಲ ಬಾರಿಗೆ ಒಟ್ಟಿಗೇ ನಟಿಸಿರುವುದು ವಿಶೇಷ.  ಶಿವಾಜಿ ತಂದೆಯ ಪಾತ್ರಕ್ಕೆ ಹುಡುಕಾಡುತ್ತಿದ್ದಾಗ ಹಿರಿಯ ನಟ ನಾಜರ್‌ ಅವರೇ ಉತ್ತಮ ಆಯ್ಕೆ ಎಂದು ಚಿತ್ರತಂಡಕ್ಕೆ ಅನಿಸಿದೆ. ಆ ಪಾತ್ರ ನಿವೃತ್ತ ಹಿರಿಯ ಪೊಲೀಸ್‌ ಅಧಿಕಾರಿಯದ್ದಾಗಿರುವುದರಿಂದ ಅದಕ್ಕೆ ಖಡಕ್‌ ಪೊಲೀಸ್‌ ಆಫೀಸರ್‌ನ ಬಾಡಿ ಲ್ಯಾಂಗ್ವೇಜ್‌ ಇರುವವರು ಬೇಕಿತ್ತು. ರಮೇಶ್‌ ಮತ್ತು ನಾಜರ್‌ ಸನ್ನಿವೇಶಗಳು ಬಹಳ ಸುಂದರವಾಗಿ ಮೂಡಿಬಂದಿವೆ. ಅಪ್ಪ-ಮಗನ ನಡುವೆ ಸಣ್ಣ ಪುಟ್ಟ ವಿಚಾರಕ್ಕೂ ಜಗಳ ಆಗುತ್ತಿರುತ್ತದೆ. ಮಗ ಎಮೋಶನಲ್‌ ಮತ್ತು ತಂದೆ ಪ್ರ್ಯಾಕ್ಟಿಕಲ್‌ ಮನುಷ್ಯ ಆಗಿರುತ್ತಾನೆ ಎನ್ನುತ್ತಾರೆ ಅಶೋಕ್ ಶ್ರೀವತ್ಸ.

  ಇನ್ನೊಂದು ಪ್ರಮುಖ ಪಾತ್ರ ಬೇಬಿ ಆರಾಧ್ಯಳದ್ದು. ಶಿವಾಜಿ ಸುರತ್ಕಲ್‌ನ ಏಳು ವರ್ಷದ ಮಗಳು ಸಿರಿ ಸುರತ್ಕಲ್‌ ಪಾತ್ರದಲ್ಲಿ ಬಾಲನಟಿ ಆರಾಧ್ಯಾ ಚಂದ್ರ ಅದ್ಭುತವಾಗಿ ನಟಿಸಿದ್ದಾರೆ. ಕೆಲಸದಲ್ಲಿ ಮುಳುಗಿರುವ ಅಪ್ಪ ತನಗೆ ಸಮಯ ಕೊಡಬೇಕು ಎಂದು ಹಂಬಲಿಸುವ ಮಗಳು ಅವಳು. ಅಪ್ಪ-ಮಗಳ ನಡುವಿನ ಅನ್‌ಕಂಡೀಶನಲ್‌ ಲವ್‌ ಪ್ರೇಕ್ಷಕರನ್ನು ಭಾವನಾತ್ಮಕವಾಗಿ ಕಟ್ಟಿಹಾಕುತ್ತದೆ ಎನ್ನುತ್ತಾರೆ ಡೈರೆಕ್ಟರ್. ಸಿರಿ ಸುರತ್ಕಲ್ ಪುಟ್ಟ ಮಗುವಿನ ಅಂದರೆ 2 ವರ್ಷದ ಮಗುವಿನ ಪಾತ್ರದಲ್ಲಿ ನಿರ್ದೇಶಕರ ಮಗಳು ಶಾನ್ವಿಯೇ ನಟಿಸಿರುವುದು ವಿಶೇಷ. ಅನೂಪ್ ಮತ್ತು ರೇಖಾ ನಿರ್ಮಾಣದ ಚಿತ್ರ ಅದ್ಧೂರಿಯಾಗಿಯೇ ತೆರೆಗೆ ಬಂದಿದೆ.

 • ಶೂಟಿಂಗ್ ಮುಗಿಸಿದ ಬಟರ್ ಫ್ಲೈ

  butterfly shooting completed

  ಪರೂಲ್ ಯಾದವ್ ಅಭಿನಯದ ರಮೇಶ್ ಅರವಿಂದ್ ನಿರ್ದೇಶಿಸುತ್ತಿರುವ ಬಟರ್ ಫ್ಲೈ ಚಿತ್ರದ ಚಿತ್ರೀಕರಣ ಯೂರೋಪ್‍ನಲ್ಲಿ ಮುಕ್ತಾಯಗೊಂಡಿದೆ. ಗೋಕರ್ಣದಿಂದ ಶುರುವಾದ ಚಿತ್ರೀಕರಣ, ಮೈಸೂರು, ಬೆಂಗಳೂರು, ಪ್ಯಾರಿಸ್‍ಗಳನ್ನು ಸುತ್ತಿದೆ.  ಪ್ಯಾರಿಸ್‍ನಲ್ಲಿಯೇ ಚಿತ್ರದ ಚಿತ್ರೀಕರಣ ಮುಗಿದಿರುವುದು ವಿಶೇಷ. ಸಿನಿಮಾ ಅಕ್ಟೋಬರ್‍ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

  ಕ್ವೀನ್ ಚಿತ್ರದ ರೀಮೇಕ್ ಆಗಿರುವ ಬಟರ್‍ಫ್ಲೈನಲ್ಲಿ ಪರೂಲ್ ಯಾದವ್, ಹೀರೋಯಿನ್ ಅಷ್ಟೇ ಅಲ್ಲ, ಸಹ ನಿರ್ಮಾಪಕಿಯೂ ಹೌದು. ತೆಲುಗಿನಲ್ಲಿ ದಟ್ ಈಸ್ ಮಹಾಲಕ್ಷ್ಮಿ ಹೆಸರಿನಲ್ಲಿ ತಮನ್ನಾ ಭಾಟಿಯಾ, ತಮಿಳಿನಲ್ಲಿ ಪ್ಯಾರಿಸ್ ಪ್ಯಾರಿಸ್ ಹೆಸರಿನಲ್ಲಿ ಕಾಜಲ್ ಅಗರ್‍ವಾಲ್, ಮಲಯಾಳಂನಲ್ಲಿ ಜಾಮ್ ಜಾಮ್ ಹೆಸರಿನಲ್ಲಿ ಮಂಜಿಮಾ ಮೋಹನ್ ನಟಿಸುತ್ತಿದ್ದಾರೆ. 4 ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗಿರುವ ಚಿತ್ರಗಳಲ್ಲಿ ಕನ್ನಡ ಹಾಗೂ ತಮಿಳು ಚಿತ್ರಗಳನ್ನು ರಮೇಶ್ ಅರವಿಂದ್ ನಿರ್ದೇಶಿಸಿದ್ದಾರೆ. 

  ಚಿತ್ರದ ಹಾಡುಗಳನ್ನು ಎಲ್ಲ ನಟಿಯರೂ ಸಿಂಗಲ್ ಟೇಕ್‍ನಲ್ಲೇ ಮುಗಿಸಿಕೊಟ್ಟರು. ಇದು ಈ ಚಿತ್ರದ ಸ್ಪೆಷಲ್. ನಾಲ್ವರು ಸ್ಟಾರ್‍ಗಳು, ಒಂದೇ ಸೆಟ್.. ಅಬ್ಬಾ.. ಆ ಸವಾಲಿನ ಕೆಲಸವನ್ನು ಯಶಸ್ವಿಯಾಗಿ ಮುಗಿಸಿದ್ದೇವೆ ಎಂದು ಖುಷಿಯಾಗಿದ್ದಾರೆ ರಮೇಶ್ ಅರವಿಂದ್.

  ಚಿತ್ರೀಕರಣ ಇಷ್ಟು ಸರಳವಾಗಿ, ಸೊಗಸಾಗಿ ಮುಗಿಯುತ್ತದೆ ಎಂದು ನಾವಂದುಕೊಂಡಿರಲಿಲ್ಲ. ಯಾವುದೇ ಸಮಸ್ಯೆ, ಗೊಂದಲವಿಲ್ಲದೆ ಚಿತ್ರೀಕರಣ ಮುಗಿದಿದೆ, ಅಕ್ಟೋಬರ್‍ನಲ್ಲಿ ತೆರೆಗೆ ತರುವ ಯೋಜನೆ ಇದೆ ಎಂದು ಹೇಳಿದ್ದಾರೆ ನಿರ್ಮಾಪಕ ಮನು ಕುಮಾರನ್.

  ಚಿತ್ರಕ್ಕೆ ಬಾಲಿವುಡ್ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಸಂಗೀತ ನೀಡಿರುವುದು ಇನ್ನೊಂದು ವಿಶೇಷ.

 • ಶೆರ್ಲಾಕ್ ಹೋಮ್ಸ್ ಶಿವಾಜಿ ಸುರತ್ಕಲ್

  shivaji suratkal has sherlock holmes touch

  ನೀವು ಇಂಗ್ಲಿಷ್ ಡಿಟೆಕ್ಟಿವ್ ಕಥೆ, ಕಾದಂಬರಿ ಓದಿರುವವರಾದರೆ... ಅಥವಾ ಕನ್ನಡದಲ್ಲಿಯೇ ಪತ್ತೇದಾರಿ ಸಾಹಿತ್ಯ ಗೊತ್ತಿರುವುವರಾದರೆ.. ನಿಮಗೆ ಶೆರ್ಲಾಕ್ ಹೋಮ್ಸ್ ಗೊತ್ತಿರುತ್ತೆ. ಪ್ರಚಂಡ ಬುದ್ದಿಶಕ್ತಿ ಇರುವ ಪತ್ತೇದಾರ ಶೆರ್ಲಾಕ್ ಹೋಮ್ಸ್. ಈಗ ಅದೇ ರೀತಿಯ ಡಿಟೆಕ್ಟಿವ್ ಆಗಿ ತೆರೆ ಮೇಲೆ ಬರುತ್ತಿದ್ದಾರೆ ಶಿವಾಜಿ ಸುರತ್ಕಲ್ ಅಲಿಯಾಸ್ ರಮೇಶ್ ಅರವಿಂದ್.

  ಆಕಾಶ್ ಶ್ರೀವತ್ಸ ನಿರ್ದೇಶನದ ಚಿತ್ರದಲ್ಲಿ ಶಿವಾಜಿ ಪಾತ್ರವೇ ಹಾಗಿದೆಯಂತೆ. ಆಕಾಶ್ ಅವರಿಗೆ ಇದು ಅವರ ಗೆಳೆಯ ಅಭಿನಂದನ್ ಹೇಳಿದ ಕಥೆ. ಕಥೆಯ ಒನ್ ಲೈನ್ ಕೇಳಿ ಇಷ್ಟವಾಗಿ ಅದನ್ನು ರಮೇಶ್ ಅವರಿಗೆ ತಲುಪಿಸಿದರಂತೆ ಆಕಾಶ್. ನಂತರ ರಮೇಶ್ ಅವರಿಗೂ ಕಥೆ ಇಷ್ಟವಾಯ್ತು. ಅದಾದ ಮೇಲೆ ಆಕಾಶ್ ಮತ್ತು ಅಭಿನಂದನ್ ಇಬ್ಬರೂ ಒಟ್ಟಿಗೇ ಸೇರಿ 1 ವರ್ಷ ಚಿತ್ರಕಥೆ ಬರೆದರಂತೆ. ಮಧ್ಯೆ ರಮೇಶ್ ಅರವಿಂದ್ ಕೂಡಾ ಇನ್‍ಪುಟ್ಸ್ ಕೊಟ್ಟಿದ್ದಾರೆ. ರಮೇಶ್ ಅವರ ಫಿಲ್ಮೀ ಜರ್ನಿಯ 101ನೇ ಚಿತ್ರವಾಗಿ ಶಿವಾಜಿ ಸುರತ್ಕಲ್ ದಿ ಕೇಸ್ ಆಫ್ ರಣಗಿರಿ ರಹಸ್ಯ ರಿಲೀಸ್ ಆಗುತ್ತಿದೆ. 

 • ಹಿಂದಿನ ದಿನ ಅಪ್ಪುಗೆ ರಮೇಶ್ ಹೇಳಿದ್ದ ಬುದ್ದನ ಕಥೆ

  ಹಿಂದಿನ ದಿನ ಅಪ್ಪುಗೆ ರಮೇಶ್ ಹೇಳಿದ್ದ ಬುದ್ದನ ಕಥೆ

  ಕಣ್ಣಲ್ಲಿ ಕಣ್ಣಿಟ್ಟು ಸುಮಾರು 2 ಗಂಟೆಗಳ ಕಾಲ ನನ್ನೊಂದಿಗೆ ಮಾತನಾಡಿದ್ದ ಅಪ್ಪು, ಮರುದಿನ ಅದೇ ಕಣ್ಣುಗಳನ್ನು ದಾನ ಮಾಡ್ತಾರೆ ಅಂದ್ರೆ ನಂಬೋದಾದರೂ ಹೇಗೆ..

  ಹೀಗೆ ಹೇಳುತ್ತಲೇ ರಮೇಶ್ ಅರವಿಂದ್ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು. ಧ್ವನಿ ಭಾರವಾಗಿತ್ತು. ಭಾವನೆಯನ್ನು ಅದುಮಿಟ್ಟುಕೊಂಡೇ ಮಾತನಾಡುತ್ತಾ  ಹೋದ ರಮೇಶ್ ಅಪ್ಪು ಜೊತೆ ನನ್ನ ನೆನಪುಗಳು ನೂರಾರಿವೆ. ಆದರೆ ನನಗೆ ಎಲ್ಲಕ್ಕಿಂತ ಹೆಚ್ಚು ಕಾಡೋದು ಹಿಂದಿನ ದಿನ ಗುರುಕಿರಣ್ ಮನೆಯಲ್ಲಿ ನಡೆದಿದ್ದ ಹುಟ್ಟುಹಬ್ಬದ ಪಾರ್ಟಿ. ಅಲ್ಲಿ ಅವರು ನಮ್ಮೊಂದಿಗೆ ಸುಮಾರು 2 ಗಂಟೆ ಹೊತ್ತು ಮಾತನಾಡಿದ್ದರು. ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿದ್ದರು. ಆಗ ನಾನು ಮಾತನಾಡುತ್ತಾ ಬುದ್ಧನ ಒಂದು ಮಾತು ಹೇಳಿದ್ದೆ. ಬುದ್ದ ಹೇಳ್ತಾನೆ, ಬದುಕಿನಲ್ಲಿ ನಾವು ಇಷ್ಟಪಡುವ ಎಲ್ಲ ವಿಷಯಗಳನ್ನೂ ಒಂದಲ್ಲ ದಿನ ಕಳೆದುಕೊಳ್ಳಬೇಕಾಗುತ್ತೆ ಅಂತಾ. ಅದಕ್ಕೆ ಅಪ್ಪು ಹೌದು ಸಾರ್, ಬೆಳಕು ಹೋದ ಮೇಲೆ ರಾತ್ರಿ ಬರಲೇಬೇಕಲ್ವಾ.. ಅದೇ ಅಲ್ವಾ ಜೀವನ ಎಂದಿದ್ದರು. ಮರುದಿನವೇ ಬೆಳಕು ಹೋಗಿತ್ತು.

  100 ಚಿತ್ರದ ಸುದ್ದಿಗೋಷ್ಠಿಯಲ್ಲಿ ರಮೇಶ್ ಈ ಎಲ್ಲ ವಿಷಯ ಹೇಳಿದರು. ಸುದ್ದಿಗೋಷ್ಠಿ ಆರಂಭಕ್ಕೂ ಮೊದಲು ಪುನೀತ್ ಅವರಿಗಾಗಿ ಮೌನ ಶ್ರದ್ಧಾಂಜಲಿ ಸಲ್ಲಿಸಿದರು.