` kamal hassan, - chitraloka.com | Kannada Movie News, Reviews | Image

kamal hassan,

  • HD Gangaraju Meet Rajinikanth and Kamal Hassan

    hd gangaraju, rajinikanth, kamal hassan image

    Siffc newly elected President HD Gangaraju visited Superstar Rajinikanth and Kamal Hassan and honored them in Chennai. Gangaraju will take charge from 27th July and he got elected unanimously. Sifcc election is on 26th and only for secretary post there will be election. Apart from that all the posts have been elected unanimously. 

    HD Gangaraju has made name as a distributor, especially of Tamil films in Karnataka. Those from Karnataka who have served as the presidents of SIFCC include KV Gupta, Bhakthavatsala, Ajantha Raju and KCN Chandrashekar. 

  • Kamal Haasan Calls Government East India Company

    kamal hassan image

    One of the greatest living actors in India, Kamal Haasan has termed the 28% GST on films a very bad move and said he will quit films if the rates are not reduced. He has said that regional language films will be the worst sufferers as they do not have the big budgets of English and Hindi films. He has asked for the rates to be cut to 12%. Otherwise he will have to quit making films as he will not be able to pay these high taxes under GST.

    Kamal Haasan has also compared the government to the East India Company and said that the government should not act like the East India Company whose motive was only to make profit from Indians. "As an industry, we request that the GST rate be brought down to 12-15 per cent. At the present rate, I can't afford the tax and I'll be forced to quit. We should remember this is not East India Company," Kamal Haasan was quoted in a newspaper report. 

    The GST is set to come into effect from July 1 this year. When it comes into force all films irrespective of language will have to pay 28% tax. Till now state governments used to impose entertainment tax. In Karnataka for example entertainment tax on Kannada films was nil. Almost all states had exempted or given tax discounts to the films of the state languages. So Tamil had advantage in Tamil Nadu, Telugu in Andhra Pradesh etc. But under the central government's GST all language films in all states will have to pay the same tax. But most of regional language films are made on small budgets. English and Hindi films have huge budgets. 

    Kamal Haasan has said that regional language film should not be put under the same tax bracket. He was quoted as saying to a news agency that "Regional films, Hollywood films and Hindi films cannot be put on the same slab and film tickets can't be fixed like an essential service."

     

  • Kamal Hassan Meets Chief Minister H D Kumaraswamy

    kamal hassan meets cm hd kumaraswamy

    Actor-director Kamal Hassan on Monday met Chief Minister Kamal Hassan and talked about improving the mutual bonding between Karnataka and Tamil Nadu.

    After the meeting, Kumaraswamy said, 'whether its Cauvery or other issue, it can be resolved by mutual talks based on trust. I requested Kamal Haasan to be a bridge betweem the two states, for which reciprocated warmly' said Kumaraswamy.

    Kamal Hassan thanked Kumaraswamy by saying, 'Your warm hospitality and openness in discussing the Cauvery issue and various other issues concerning our two states is fully reciprocated. I assure I will do my best in being a trustworthy bridge between Karnataka and Tamilnadu' tweeted Kamal Hassan.

  • Ramesh Aravind's Next is Pushpaka Vimana

    ramesh aravind image

    Ramesh Aravind is busy with the second edition of his most popular reality show 'Weekend with Ramesh' to be aired in Zee TV from 26th of December. Meanwhile, he has silently signed a new film called 'Pushpaka Vimana'.

    'Pushpaka Vimana' is the name of the yesteryear hit which had Kamal Hassan and Amala in prominent roles. The new version of the film has nothing to do with the old and the new film tells the story of a father and daughter. While Ramesh Aravind is playing the role of the father, Yuvina plays his daughter.

    The film is being directed by debutante Ravindranath. The muhurath of the film is over and the regular shooting for the film is likely to be held from the 04th of January 2016.

  • Shivarajkumar in Chennai - Meets Rajinikanth, Kamal

    shivarajkumar, rajinikanth image

    Shivarajkumar and his wife Geetha are currently in Chennai to meet Rajinikanth. The couple have invited Rajinikanth, Kamal Hassan and other celebrities for the wedding of their daughter Nirupama scheduled for August 31.

    Rajinikanth is a family friend of the Rajkumar family and has not missed any auspicious functions. Shivarajkumar is become very busy overseeing the preparations for the wedding. The engagement ceremony was held a few months ago.

  • Uttama Villain Audio Launched

    uttam villain image

    Actor-director Ramesh's Aravind's directorial debut in Tamil, 'Uttama Villain' starring Kamal Hassan in lead role is all set to release in April. Recently the audio of the film was released at the Chennai Trade Center amidst much fan fare.

    The songs of the film composed by music composer Ghibran was released in a unique style with Kamal Hassan sending the songs of the film to his daughter Shruthi Hassan who was in Mumbai for a shoot. After that, the CDs of the film were released officially.

    Director Ramesh Arvavind, producers Tirupathi Brothers, Gowthami, Parthiban, Nassar, Urvashi, Parvathi Menon and others were present at the occasion.

  • ಕಮಲ್ ಹಾಸನ್ ಕಾಲಿಗೆ ನಮಸ್ಕರಿಸಿದರೇಕೆ ಸುಹಾಸಿನಿ

    why did suhasini knee down to kamal hassan

    ಸುಹಾಸಿನಿ, ಭಾರತೀಯ ಚಿತ್ರರಂಗದ ಅಭಿಜಾತ ಕಲಾವಿದೆಯರಲ್ಲಿ ಒಬ್ಬರು. ಕಮಲ್ ಹಾಸನ್, ಭಾರತೀಯ ಚಿತ್ರರಂಗಕ್ಕೆ ಮೆಥಡ್ ಆ್ಯಕ್ಟಿಂಗ್ ಪರಿಚಯಿಸಿದ ಧೀಮಂತ. ಇಂತಹ ಕಮಲ್ ಹಾಸನ್ ಕಾಲಿಗೆ ಬಹಿರಂಗ ವೇದಿಕೆಯಲ್ಲಿ ನಟಿ ಸುಹಾಸಿನಿ ಕಾಲಿಗೆ ಬಿದ್ದು ನಮಸ್ಕರಿಸುತ್ತಾರೆ ಎಂದರೆ.. ಏನಿರಬಹುದು ವಿಶೇಷ.

    ಇಲ್ಲಿ ಒಂದು ವಿಷಯ ಹೇಳಲೇಬೇಕು. ಸುಹಾಸಿನಿ, ಕಮಲ್ ಹಾಸನ್ ಅವರಿಗೆ ಮಗಳಾಗಬೇಕು. ಸುಹಾಸಿನಿ, ಚಾರು ಹಾಸನ್ (ತಬರನ ಕಥೆಯ ತಬರ) ಮಗಳು. ಚಾರು ಹಾಸನ್, ಕಮಲ್ ಹಾಸನ್ ಅಣ್ಣ. ಅಣ್ಣನ ಮಗಳು, ಮಗಳೇ ತಾನೆ.. ಆದರೆ, ಸುಹಾಸಿನಿ ಇದಿಷ್ಟಕ್ಕೇ ಅಲ್ಲ..

    ಸುಹಾಸಿನಿ ಚಿತ್ರರಂಗಕ್ಕೆ ಬರುತ್ತೇನೆ ಎಂದಾಗ ತಾಂತ್ರಿಕವಾಗಿಯೂ ಕಲಿತಿರಬೇಕು ಎಂದು ಫಿಲಂ ಇನ್ಸ್ಟಿಟ್ಯೂಟ್‌ಗೆ ಸೇರಿಸಿದ್ದವರು, ಹಣ ಕಟ್ಟಿದ್ದವರು ಸ್ವತಃ ಕಮಲ್ ಹಾಸನ್ ಅವರೇ ಅಂತೆ. ಅಷ್ಟೇ ಅಲ್ಲ, ಮಣಿರತ್ನಂ ಅವರು ಪರಿಚಿತವಾಗಿದ್ದೂ ಕಮಲ್ ಮೂಲಕವೇ. ಇದು ಇಷ್ಟಕ್ಕೇ ನಿಲ್ಲಲ್ಲ, ಮಣಿರತ್ನಂ ಅವರಿಗೂ ನಿರ್ದೇಶಕರಾಗಿ ಜೀವನ ಕೊಟ್ಟಿದ್ದು ನೀವೇ.. ಹೀಗಾಗಿ ನೀವಿಲ್ಲದೆ ನಮ್ಮ ಜೀವನದಲ್ಲಿ ಏನೂ ಇಲ್ಲ ಎಂದು ಬಹಿರಂಗ ವೇದಿಕೆಯಲ್ಲಿಯೇ ಹೇಳಿಕೊಂಡಿದ್ದಾರೆ ಸುಹಾಸಿನಿ. 

  • ಕಮಲ್ ಹಾಸನ್ ಪತ್ನಿ ಸಾರಿಕಾ ಬೀದಿಪಾಲು

    sarika in helpless situation

    ಚಿತ್ರನಟ ಕಮಲ್ ಹಾಸನ್, ತಮಿಳುನಾಡಿಗಷ್ಟೇ ಸೀಮಿತವಲ್ಲ. ಇಡೀ ಭಾರತೀಯರಿಗೇ ಚಿರಪರಿಚಿತ ಮುಖ. ಅದ್ಭುತ ಕಲಾವಿದ ಎನ್ನುವುದರಲ್ಲಿ ಎರಡು ಮಾತಿಲ್ಲ. ಈಗ ರಾಜಕೀಯಕ್ಕೂ ಎಂಟ್ರಿ ಕೊಟ್ಟಿರುವ ಕಮಲ್ ಹಾಸನ್ ಅವರ ಪತ್ನಿ ಈಗ ಬೀದಿಗೆ ಬಿದ್ದಿದ್ದಾರೆ. ಕಮಲ್ ಅವರ ಪತ್ನಿ ಸಾರಿಕಾ ಅವರಿಗೆ ಈಗ ಮುಂಬೈನಲ್ಲಿ ಮನೆ ಕೂಡಾ ಇಲ್ಲದಂತಾಗಿದೆ.

    ಸಾರಿಕಾ ಅವರ ತಾಯಿ ಕಮಲಾ ಠಾಕೂರ್ ಮುಂಬೈನಲ್ಲಿ ವಾಸವಾಗಿದ್ದರು. ಮುಂಬೈನಲ್ಲಿ ಫ್ಲ್ಯಾಟ್, ಪುಣೆ ಸಮೀಪ ಸುಮಾರು 300 ಎಕರೆಯಷ್ಟು ಜಮೀನು ಸೇರಿದಂತೆ ನೂರಾರು ಕೋಟಿ ಮೌಲ್ಯದ ಆಸ್ತಿಯೂ ಇತ್ತು. ಆದರೆ, ನಿಧನರಾಗುವ ಮುನ್ನ ಅವರು ತಮ್ಮ ಇಡೀ ಆಸ್ತಿಯನ್ನು ತಮ್ಮ ಮಗಳಿಗಾಗಲೀ, ಮೊಮ್ಮಕ್ಕಳಾದ ಶೃತಿ ಹಾಸನ್ ಅಥವಾ ಅಕ್ಷರಾ ಹಾಸನ್‍ಗಾಗಲೀ ಬರೆದಿಲ್ಲ. ಬದಲಿಗೆ ತಮ್ಮನ್ನು ನೋಡಿಕೊಳ್ಳುತ್ತಿದ್ದ ಡಾಕ್ಟರ್ ವಿಕ್ರಮ್ ಠಕ್ಕರ್ ಎಂಬುವವರಿಗೆ ವಿಲ್ ಮಾಡಿಟ್ಟಿದ್ದಾರೆ.

    ತಾಯಿಯ ಜೊತೆ ಸಾರಿಕಾ ಅವರ ಸಂಬಂಧ ಅಷ್ಟೇನೂ ಉತ್ತಮವಾಗಿರಲಿಲ್ಲ. ಇನ್ನು ಮಕ್ಕಳಾದ ಶೃತಿ ಹಾಸನ್, ಮುಂಬೈನಲ್ಲೇ ಪ್ರತ್ಯೇಕ ಫ್ಲ್ಯಾಟ್‍ನಲ್ಲಿ ವಾಸವಾಗಿದ್ದಾರೆ. ಮತ್ತೊಬ್ಬ ಮಗಳು ಅಕ್ಷರಾ ಹಾಸನ್, ತಂದೆಯ ಜೊತೆ ಚೆನ್ನೈನಲ್ಲಿದ್ದಾರೆ. ಈಗ ಬೀದಿಗೆ ಬಿದ್ದಿರುವ ಸಾರಿಕಾ ಅವರ ನೆರವಿಗೆ ಬಂದಿರೋದು ಅಮೀರ್ ಖಾನ್.

    ವೈದ್ಯ ವಿಕ್ರಮ್ ಠಕ್ಕರ್ ಹಾಗೂ ಸಾರಿಕಾ ಅವರ ಜೊತೆ ಸಂಧಾನ ಮಾಡಿಸುವ ಭರವಸೆ ನೀಡಿದ್ದಾರಂತೆ ಅಮೀರ್ ಖಾನ್. ಸಾರಿಕಾ ಕೋರ್ಟ್ ಮೆಟ್ಟಿಲನ್ನೂ ಹತ್ತಿದ್ದಾರೆ. ಕಮಲ್ ಹಾಸನ್ ಅವರಿಂದ 2004ರಲ್ಲೇ ದೂರವಾಗಿದ್ದ ಸಾರಿಕಾ, ಮುಂಬೈನಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.

  • ಕಮಲ್ ಹಾಸನ್ ಸ್ಟೈಲ್‍ನಲ್ಲಿ ಉಪ್ಪಿ ಪಾಲಿಟಿಕ್ಸ್

    uppi politics in kamal hassan sytle

    ತಮಿಳುನಟ ಕಮಲ್ ಹಾಸನ್, ರಾಜಕೀಯ ಪ್ರವೇಶವನ್ನು ಘೋಷಿಸಿ, ಆ್ಯಪ್ ಬಿಡುಗಡೆ ಮಾಡಿರುವುದು ಗೊತ್ತಿದೆಯಷ್ಟೇ. ಈಗ ಉಪೇಂದ್ರ ಕೂಡಾ ಅದೇ ಹಾದಿಯಲ್ಲಿ ಮುನ್ನಡೆದಿದ್ದಾರೆ. ಹಾಗೆ ನೋಡಿದರೆ, ಉಪೇಂದ್ರ ಅವರಿಗೆ ತಾವು ನಡೆಯಬೇಕಾದ ರಾಜಕೀಯ ದಾರಿಯ ಬಗ್ಗೆ ಕಮಲ್ ಹಾಸನ್ ಅವರಿಗಿಂತ ಹೆಚ್ಚು ಸ್ಪಷ್ಟತೆಯಿದೆ. 

    ಕೆಪಿಜೆಪಿ ಆ್ಯಪ್ ಬಿಡುಗಡೆ ಮಾಡಿರುವ ಉಪೇಂದ್ರ, ಆ್ಯಪ್‍ನಲ್ಲೇ ಪಕ್ಷದ ಪ್ರಚಾರ, ಅರ್ಜಿ ಸ್ವೀಕಾರ ಎಲ್ಲವನ್ನೂ ನಡೆಸಲು ನಿರ್ಧರಿಸಿದ್ಧಾರೆ. ಅರ್ಹ ಅಭ್ಯರ್ಥಿಗಳನ್ನು ಸಂದರ್ಶನ ಮಾಡಿ ಆಯ್ಕೆ ಮಾಡಲಾಗುವುದು. ಅವಿದ್ಯಾವಂತರೂ ಅರ್ಜಿ ಸಲ್ಲಿಸಬಹುದು. ಆದರೆ, ಅವರು ಪ್ರಜ್ಞಾವಂತರಾಗಿರಬೇಕು. ಅದು ಉಪ್ಪಿ ಕಂಡೀಷನ್.

    ಇನ್ನು ಈ ಚುನಾವಣೆಯಲ್ಲಿ ಉಪೇಂದ್ರ ಕುಂದಾಪುರದಿಂದ ಸ್ಪರ್ಧಿಸುತ್ತಾರೆ ಎಂಬ ಸುದ್ದಿಯನ್ನು ಉಪೇಂದ್ರ ತಳ್ಳಿ ಹಾಕಿದ್ದಾರೆ. ಇನ್ನೂ ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಸ್ಪರ್ಧಿಸುವುದು ಖಚಿತ, ಎಲ್ಲಿಂದ ಎನ್ನುವುದು ನಿರ್ಧಾರವಾಗಿಲ್ಲ ಎಂದಿದ್ಧಾರೆ ಉಪೇಂದ್ರ.

    ಉಪೇಂದ್ರ ಅವರ ರಾಜಕೀಯದ ಬಗ್ಗೆ ಅಲ್ಲಲ್ಲ.. ಪ್ರಜಾಕೀಯದ ಬಗ್ಗೆ ಆಸಕ್ತಿ ಇದ್ದವರು ಗೂಗಲ್ ಪ್ಲೇ ಸ್ಟೋರ್‍ಗೆ ಹೋಗಿ ಪ್ರಜಾಕೀಯ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಬಹುದು.

  • ಕೆಜಿಎಫ್ ಚಿತ್ರವನ್ನು ನೋಡಿ ಮೆಚ್ಚಿದ ದಿಗ್ಗಜರು..!

    ಕೆಜಿಎಫ್ ಚಿತ್ರವನ್ನು ನೋಡಿ ಮೆಚ್ಚಿದ ದಿಗ್ಗಜರು..!

    ಪ್ರತಿಯೊಬ್ಬ ಕಲಾವಿದ ಮತ್ತು ನಿರ್ದೇಶಕರಿಗೆ ಒಂದು ಕನಸಿರುತ್ತೆ. ತಮ್ಮ ಚಿತ್ರಗಳನ್ನು ತಾವು ಇಷ್ಟಪಡುವ ನಟ, ನಿರ್ದೇಶಕ, ತಂತ್ರಜ್ಞರು ನೋಡಿ ಮೆಚ್ಚಬೇಕು ಎನ್ನುವ ಕನಸದು. ಬಾಕ್ಸಾಫೀಸ್‍ನಲ್ಲಿ ಧೂಳೆಬ್ಬಿಸುತ್ತಿರೋ ಕೆಜಿಎಫ್‍ಗೆ ಈಗ ಅಂತಹ ದಿಗ್ಗಜರ ಮೆಚ್ಚುಗೆ ಸಿಕ್ಕಿದೆ.

    ಸಂಗೀತ ಲೋಕದ ಧ್ರುವತಾರೆ ಇಳಯರಾಜಾ, ಕಮಲ್‍ಹಾಸ್ ಕೆಜಿಎಫ್ ಚಾಪ್ಟರ್ 2 ನೋಡಿ ಮೆಚ್ಚಿದ್ದಾರೆ. ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ಕೂಡಾ ಚಿತ್ರವನ್ನು ನೋಡಿ ಯಶ್ ಮತ್ತು ಪ್ರಶಾಂತ್ ನೀಲ್ ಅವರನ್ನು ಹೊಗಳಿದ್ದರು.

    ಇದಕ್ಕೂ ಮೊದಲು ಅಲ್ಲು ಅರ್ಜುನ್, ರಾಮ್ ಚರಣ್ ತೇಜ, ಪ್ರಭಾಸ್, ಕಂಗನಾ ರಣಾವತ್, ಸಿಬಿ ಸತ್ಯರಾಜ್, ಸುಮಂತ್, ಗುರುಕಿರಣ್, ವಿಶಾಲ್, ಕೃತಿ ಕರಬಂಧ, ರವಿಶಂಕರ್ ಗೌಡ, ರಾಮ್ ಪೊತ್ತಿನೇನಿ, ರಾಣಾ ದಗ್ಗುಬಾಟಿ, ಕಾರ್ತಿ, ಖುಷ್ ಬೂ, ಅಮೃತಾ ಅಯ್ಯಂಗಾರ್, ಬೀರ್‍ಬಲ್ ಶ್ರೀನಿ, ಶ್ರೀಮುರಳಿ, ಅಥರ್ವ, ಕಾರ್ತಿಕೇಯ, ಡಾಲಿ ಧನಂಜಯ್, ರಿಷಬ್ ಶೆಟ್ಟಿ, ಸುಮಲತಾ ಅಂಬರೀಷ್, ಕಾರ್ತಿಕ್ ಸುಬ್ಬರಾಜ್, ನವೀನ್ ಚಂದ್ರ, ಶಿವಕಾರ್ತಿಕೇಯನ್, ಪವನ್ ಒಡೆಯರ್, ರಾಘವೇಂದ್ರ ರಾಜಕುಮಾರ್, ಸಾಯಿ ಧರಮ್‍ತೇಜ್, ಸಂತೋಷ್ ಆನಂದರಾಮ್, ಹೇಮಂತ್ ರಾವ್, ಎಪಿ ಅರ್ಜುನ್, ಪ್ರೀತಂ ಗುಬ್ಬಿ.. ಹೀಗೆ ಎಲ್ಲರೂ ಹೊಗಳಿದ್ದವರೇ. ಹೊಗಳಿದವರ ಲಿಸ್ಟು ತುಂಬಾ ತುಂಬಾ ದೊಡ್ಡದು.

    ಇವರೆಲ್ಲರ ಸಾಲಿನಲ್ಲೀಗ ಇಳಯರಾಜ, ಕಮಲ್ ಹಾಸನ್ ಕೂಡಾ ಸೇರಿರೋದು ಎಂತಹ ಕಲಾವಿದ, ತಂತ್ರಜ್ಞನಿಗೂ ಖುಷಿ ಕೊಡುವ ಸಂಗತಿಯೇ...

  • ಗೆದ್ದ ಮೇಲೆ ಕಮಲ್ ಹಾಸನ್`ಗೂ ಕನ್ನಡ ಬಂತು..!

    ಗೆದ್ದ ಮೇಲೆ ಕಮಲ್ ಹಾಸನ್`ಗೂ ಕನ್ನಡ ಬಂತು..!

    ಕಮಲ್ ಹಾಸನ್ ದೇಶದ ಪ್ರತಿಭಾನ್ವಿತ ನಟ. ಹಲವು ಭಾಷೆಗಳಲ್ಲಿ ನಟಿಸಿರೋ ಕಲಾವಿದ. ಕಮಲ್`ಗೆ ಒಂದಲ್ಲ..ಎರಡಲ್ಲ.. 8 ಭಾಷೆಗಳ ಮೇಲೆ ಒಳ್ಳೆಯ ಹಿಡಿತವಿದೆ. ತಮಿಳು ಮಾತೃಭಾಷೆ. ಕನ್ನಡ, ತೆಲುಗು, ಹಿಂದಿ, ಮಲಯಾಳಂ, ಬೆಂಗಾಲಿ, ಫ್ರೆಂಚ್ ಹಾಗೂ ಇಂಗ್ಲಿಷ್ ಭಾಷೆಗಳು ಗೊತ್ತು. ಹೀಗಿದ್ದರೂ, ಇತ್ತೀಚೆಗೆ ಬೆಂಗಳೂರಿಗೆ ತಮ್ಮದೇ ಚಿತ್ರದ ಪ್ರಚಾರಕ್ಕೆ ಬಂದಿದ್ದ ಕಮಲ್, ಅಪ್ಪಿತಪ್ಪಿಯೂ ಕನ್ನಡ ಮಾತನಾಡಿರಲಿಲ್ಲ.

    ತಮಿಳಿನಲ್ಲೇ ಮಾತನಾಡಿ ಕರ್ನಾಟಕದಲ್ಲಿ ಸಿನಿಮಾ ಪ್ರಚಾರ ಮಾಡಿ ಹೋಗಿದ್ದರು. ಅವರ ವಿಕ್ರಂ ಸಿನಿಮಾ ಕನ್ನಡದಲ್ಲಿ ಡಬ್ ಕೂಡಾ ಆಗಿರಲಿಲ್ಲ. ಕನ್ನಡದಲ್ಲಿ ಇಲ್ಲದ ಚಿತ್ರವನ್ನು ನೋಡಬಾರದು ಎಂಬ ಕ್ಯಾಂಪೇನ್ ನಡೆಯಿತಾದರೂ ಯಶಸ್ವಿಯಾಗಲಿಲ್ಲ. ಇದರ ನಡುವೆಯೂ ವಿಕ್ರಂ ಕರ್ನಾಟಕದಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ವಿಕ್ರಂ ಚಿತ್ರದ ಕಲೆಕ್ಷನ್, ಕರ್ನಾಟಕದ ಮಟ್ಟಿಗೆ ದಾಖಲೆಯೇ. ವಿಶ್ವದಾದ್ಯಂತ 200 ಕೋಟಿಗೂ ಹೆಚ್ಚು ಗಳಿಸಿ ಮುನ್ನುಗ್ಗುತ್ತಿರೋ ಚಿತ್ರ ಗೆದ್ದ ಮೇಲೆ ಕಮಲ್ ಹಾಸನ್ ಕನ್ನಡಿಗರಿಗೆ ಕನ್ನಡದಲ್ಲೇ ಧನ್ಯವಾದ ಹೇಳಿದ್ದಾರೆ. ಚಿತ್ರ ಗೆದ್ದ ಮೇಲೆ ಕನ್ನಡ ನೆನಪಾಗಿದೆ.

  • ರಜನಿ, ಕಮಲ್ ಚಿತ್ರಗಳಿಗೆ ಕರ್ನಾಟಕದಲ್ಲಿ ಬಹಿಷ್ಕಾರ

    sa ra govindu calls for ban on rajini, kamal movies

    ಕಾವೇರಿ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ತಮಿಳು ಸೂಪರ್‍ಸ್ಟಾರ್ ರಜನಿಕಾಂತ್ ಹಾಗೂ ಕಮಲ್‍ಹಾಸನ್‍ರ ಚಿತ್ರಗಳಿಗೆ ಕರ್ನಾಟಕದಲ್ಲಿ ಬಹಿಷ್ಕಾರ ಹಾಕುವ ಕುರಿತಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಕರೆ ಕೊಟ್ಟಿದ್ದಾರೆ. ಚಿತ್ರದ ಪ್ರದರ್ಶನದ ಹಕ್ಕುಗಳನ್ನು ಖರೀದಿ ಮಾಡದಂತೆ ವಿತರಕರಿಗೆ ಸೂಚಿಸಿದ್ದಾರೆ.

    ಅಷ್ಟೇ ಅಲ್ಲ, ರಜನಿ, ಕಮಲ್ ಚಿತ್ರಗಳನ್ನು ಪ್ರದರ್ಶನ ಮಾಡದಂತೆ ಪ್ರದರ್ಶಕರಿಗೂ ಮನವಿ ಮಾಡಿದ್ದಾರೆ. ಅಕಸ್ಮಾತ್ ಪ್ರದರ್ಶನ ಮಾಡಿದರೆ ಪ್ರತಿಭಟನೆ ನಡೆಸಿ ಚಿತ್ರಪ್ರದರ್ಶನ ಸ್ಥಗಿತಗೊಳಿಸುವ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.

    ತಮಿಳುನಾಡು ಹೋರಾಟ ಬೆಂಬಲಿಸುವುದು ನಿಮ್ಮ ಕರ್ತವ್ಯ. ಆದರೆ, ಹಾಗೆಂದು ಕರ್ನಾಟಕವನ್ನು ಟೀಕಿಸುವುದು ಸರಿಯಲ್ಲ. ಸ್ವಾಭಿಮಾನಿ ಕನ್ನಡಿಗರು ಇದನ್ನು ಸಹಿಸುವುದಿಲ್ಲ. ನಿಮ್ಮ ರಾಜಕೀಯಕ್ಕಾಗಿ ಕಾವೇರಿಯನ್ನು ಬಳಸಿಕೊಳ್ಳಬೇಡಿ ಎಂದು ಕಮಲ್‍ಹಾಸನ್ ಹಾಗೂ ರಜನಿಕಾಂತ್ ಇಬ್ಬರಿಗೂ ಎಚ್ಚರಿಕೆ ಕೊಟ್ಟಿದ್ದಾರಾ ಸಾ.ರಾ.ಗೋವಿಂದು.

  • ರವಿಚಂದ್ರನ್ ಮಗನಿಗೆ ಕಮಲ್​ಹಾಸನ್ ಮಗಳು ನಾಯಕಿ?

    akshara hassan, vikaram ravichandran image

    ರವಿಚಂದ್ರನ್​ರ ಎರಡನೇ ಮಗ ವಿಕ್ರಂ, ನಾಯಕ ನಟನಾಗುತ್ತಿರುವುದು ಹಳೆಯ ಸುದ್ದಿ. ಈಗ ಹೊಸ ಸುದ್ದಿ ಹೊರಬೀಳುತ್ತಿದೆ. ವಿಕ್ರಂ ನಾಯಕನಾಗಿ ನಟಿಸಲಿರುವ ಮೊದಲ ಚಿತ್ರಕ್ಕೆ ನಾಯಕಿಯಾಗಲು ಕಮಲ್ ಹಾಸನ್ ಮಗಳು ಬರುತ್ತಿದ್ದಾರಂತೆ.

    ಕಮಲ್ ಹಾಸನ್ ಮಗಳು ಎಂದರೆ, ಶೃತಿ ಹಾಸನ್ ಅಲ್ಲ. ಎರಡನೇ ಮಗಳು ಅಕ್ಷರ ಹಾಸನ್. ಈಗಾಗಲೇ ಚಿತ್ರದ ಕಥೆ ಕೇಳಿರುವ ಅಕ್ಷರ ಹಾಸನ್, ಚಿತ್ರದಲ್ಲಿ ನಟಿಸೋಕೆ ಬಹುತೇಕ ಒಪ್ಪಿದ್ದಾರಂತೆ. 

    ಕನಕಪುರ ಶ್ರೀನಿವಾಸ್ ನಿರ್ಮಿಸುತ್ತಿರುವ ಚಿತ್ರಕ್ಕೆ, ನಾಗಶೇಖರ್ ಅಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ಬಣ್ಣ ಹಚ್ಚಿದರೆ, ಅಕ್ಷರ ಹಾಸನ್​ಗೆ ಇದು ಮೊದಲ ಚಿತ್ರವಾಗಲಿದೆ.