` loudspeaker, - chitraloka.com | Kannada Movie News, Reviews | Image

loudspeaker,

 • LoudSpeaker Review - Chitraloka Rating 3.5/5

  loudspeaker review

  Shiva Tejas returns with his third film as director and this is one of the best films of this year. Loudspeaker is full of surprises and twists and turns that it will leave the audience wondering. It has a very special story the kind of which you have not seen ever before in Kannada films. 

  The story is about three couple friends who meet for a get together. They decide to play a small game to keep themselves engaged. The suggestion is to switch on the loudspeaker of their mobile phones when they receive a call. They all agree to the game without realising how much this simple thing is going to change their lives. When the game starts it is funny. But soon each call becomes a dreaded call for those receiving it. 

  Shiva Tejas has picked up a brilliant story for this film. Each character has a nerve whacking experience. Each one gets to expose their talents in a confined environment of a house. That is the speciality of the film. The story goes around the 

  world even while staying in the same place. There are engaging dialogues and a background score that keeps the tempo moving. The cinematography takes the cake for managing to keep the focus. In this kind of films where the action takes place indoors and in a single location it is difficult to keep the audience from being distracted. But the camera work here is top class. 

  The director's effort is also painstaking. Each dialogue has to have reactions from various characters. But it cannot look like a television soap. There has to be big screen dramatics. Tejas manages to do that. He shows he is an expert in human expressions by making the actors get the right reactions to each situation. 

  Loudspeaker must be on your watch list for this weekend. Do not miss it because it is not the usual kind of film and you will thank the director for giving such a memorable experience.

 • Shetty's Loudspeaker single on May 27

  chandan shetty's song in loudspeaker

  Rapper Chandan Shetty will be releasing his single Chaddi Olage Iruve Bitkoli for the film Loudspeaker on May 17. The film is directed by Tejas of Maley (starring Prem) and Dhairyam (starring Ajai Rao). Four new actors are being introduced by Tejas in this film.

  Their faces have not yet been revealed till now. It is not known of they will be unveiled in the song on May 17. As of now there is a lot of secrecy about the actors. Meanwhile there is also a lot of curiosity about the Chaddi Olage song by Chandan Shetty.

 • Worlds Most Dangerous Game ಲೌಡ್ ಸ್ಪೀಕರ್ ರೆಡಿ

  kannada movie loudspeaker poster

  ಲೌಡ್ ಸ್ಪೀಕರ್. ಆ ಹೆಸರು ಕೇಳಿದರೆ, ಒಂದು ಜನರೇಷನ್ನಿನವರು ಭೂತಕಾಲಕ್ಕೆ ಹೋಗಿ ಬರುತ್ತಾರೆ. ಒಂದು ಕಾಲದಲ್ಲಿ ಮದುವೆ ಮನೆಗಳಲ್ಲಿ, ಬಸ್ಸುಗಳಲ್ಲಿ, ಹಳ್ಳಿ ಹಳ್ಳಿಗಳಲ್ಲಿ ಲೌಡ್‍ಸ್ಪೀಕರ್ ಹಾಕೋದು ಟ್ರೆಂಡ್ ಆಗಿತ್ತು. ಆದರೆ, ನಾವು ಹೇಳ್ತಿರೋದು ಲೌಡ್‍ಸ್ಪೀಕರ್ ಅನ್ನೋ ಸಿನಿಮಾ ಕಥೆ.

  ಈ ಚಿತ್ರದ ಪೋಸ್ಟರ್ ನೋಡಿದರೆ ಕುತೂಹಲ ಹುಟ್ಟುವುದು ಖಂಡಿತಾ. ಏಕೆಂದರೆ, ಚಿತ್ರದ ಪೋಸ್ಟರ್‍ನಲ್ಲಿ ಇದು  worlds most dangerous game  ಅನ್ನೋ ಲೈನ್ ಇದೆ. ಆದರೆ, ಡಾರ್ಕ್ ಕಾಮಿಡಿ ಥ್ರಿಲ್ಲರ್ ಅಂತಾರೆ ನಿರ್ದೇಶಕರು. ಹೇಗೆ ಅನ್ನೋ ಕುತೂಹಲದ ಪ್ರಶ್ನೆ ಕೇಳಿದ್ರೆ, ವೇಯ್ಟ್.. ಕೆಲವೇ ದಿನಗಳಲ್ಲಿ ರಿಲೀಸ್ ಆಗುತ್ತೆ ಅನ್ನೋ ಉತ್ತರ ಸಿಗುತ್ತೆ ನಿರ್ದೇಶಕ ಶಿವತೇಜಸ್ ಅವರಿಂದ.

  ಮಳೆ, ಧೈರ್ಯಂ ಚಿತ್ರದ ನಂತರ ನಿರ್ದೇಶಕ ಶಿವತೇಜಸ್, ಕಾಮಿಡಿ, ಥ್ರಿಲ್ಲರ್ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ರಾಜ್ ಪ್ರೊಡಕ್ಷನ್ಸ್‍ನಿಂದ ಬರುತ್ತಿರುವ 2ನೇ ಸಿನಿಮಾ ಲೌಡ್‍ಸ್ಪೀಕರ್. ಡಾ.ರಾಜು ಚಿತ್ರದ ನಿರ್ಮಾಪಕರು. 

 • ಜಗತ್ತಿನ ಮೋಸ್ಟ್ ಡೇಂಜರಸ್ ಗೇಮ್..ಲೌಡ್ ಸ್ಪೀಕರ್

  worlds most dangerous game in loudspeaker

  ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲ ಒಂದು ರಹಸ್ಯ ಇದ್ದೇ ಇರುತ್ತೆ. ಆ ರಹಸ್ಯ ಹೊರಜಗತ್ತಿಗೆ ಗೊತ್ತಾದಾಗ ಶಾಕ್ ಆಗೋದು ಗ್ಯಾರಂಟಿ. ಅಂತಹ ರಹಸ್ಯ ಮತ್ತು ಆಟವನ್ನಿಟ್ಟುಕೊಂಡು ಬರುತ್ತಿರುವ ವಿಶಿಷ್ಟ ಸಿನಿಮಾ ಲೌಡ್‍ಸ್ಪೀಕರ್. ಇದು ಸಸ್ಪೆನ್ಸ್ ಅಂದ್ಕೊಂಡ್ರೆ ಸಸ್ಪೆನ್ಸ್. ಕಾಮಿಡಿ ಅಂದ್ಕೊಂಡ್ರೆ ಕಾಮಿಡಿ. ಥ್ರಿಲ್ಲರ್ ಅಂದ್ಕೊಂಡ್ರೆ ಥ್ರಿಲ್ಲರ್. ಎಲ್ಲವನ್ನೂ ಹದವಾಗಿ ಬೆರೆಸಿಯೇ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಶಿವ ತೇಜಸ್.

  ಮಳೆ ಹಾಗೂ ಧೈರ್ಯಂ ಸಿನಿಮಾ ಮಾಡಿದ್ದ ಶಿವತೇಜಸ್, 3ನೇ ಚಿತ್ರದಲ್ಲೂ ವಿಭಿನ್ನ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಡಾ.ಕೆ.ರಾಜು ನಿರ್ಮಾಣದ ಸಿನಿಮಾ, ಇದೇ ಶುಕ್ರವಾರ ತೆರೆಗೆ ಬರುತ್ತಿದೆ. ಸುಮಂತ್ ಭಟ್, ಕಾರ್ತಿಕ್ ರಾವ್, ನೀನಾಸಂ ಭಾಸ್ಕರ್, ಕಾವ್ಯಾ ಶಾ, ಅನುಷಾ, ದಿಶಾ.. ಇವರೆಲ್ಲರ ಜೊತೆಗೆ ಸೀನಿಯರ್‍ಗಳಾದ ರಂಗಾಯಣ ರಘು ಮತ್ತು ದತ್ತಣ್ಣ. ಲೌಡ್‍ಸ್ಪೀಕರ್.. ಕರ್ನಾಟಕದಲ್ಲಷ್ಟೇ ಅಲ್ಲ, ಆಂಧ್ರ, ತಮಿಳುನಾಡಿನಲ್ಲೂ ಏಕಕಾಲಕ್ಕೆ ತೆರೆ ಕಾಣುತ್ತಿದೆ.

 • ಧೈರ್ಯ ಇದ್ರೆ, ಲೌಡ್ ಸ್ಪೀಕರ್ ಆನ್ ಮಾಡಿ.. ಮಾತಾಡಿ..

  loud speaker to release tomorrow

  ಒಂದ್ಸಲ ಲೌಡ್ ಸ್ಪೀಕರ್ ಆನ್ ಮಾಡಿ. ಹಾಗೆಯೇ ಮಾತಾಡ್ತಾ ಹೋಗಿ.. ಏನೇನೆಲ್ಲ ಆಗುತ್ತೆ ಅನ್ನೊದನ್ನ ಕಲ್ಪನೆ ಮಾಡಿಕೊಳ್ಳಿ... ಇದು ಚಿತ್ರದ ಒನ್‍ಲೈನ್ ಸ್ಟೋರಿ. ಉಳಿದಂತೆ ಚಿತ್ರದಲ್ಲಿ ಡಾರ್ಕ್ ಕಾಮಿಡಿ ಬ್ಯಾಕ್‍ಗ್ರೌಂಡ್‍ನಲ್ಲಿ ಬರುತ್ತಿರುವ ಸಿನಿಮಾ. ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಕಥೆಯನ್ನು ಸುಂದರವಾಗಿ ತೆರೆಗೆ ತಂದಿರೋದು ಶಿವ ತೇಜಸ್.

  ಚಿತ್ರದ ನಾಯಕಿ ನಟಿ ಡಾ.ದಿಶಾ ದಿನಕರ್. ವಿಶೇಷ ಅಂದ್ರೆ, ಅವರು ವೃತ್ತಿಯಲ್ಲಿಯೂ ಡಾಕ್ಟರ್. ಚಿತ್ರದಲ್ಲಿಯೂ ಡಾಕ್ಟರ್. ಹಿಗಾಗಿ ಪಾತ್ರ ಮಾಡೋದು ಕಷ್ಟವಾಗಲಿಲ್ಲ ಅಂತಾರೆ ಡಾ. ದಿಶಾ.

  ಮೂವರು ಹೀರೋಗಳು, ಮೂವರು ಹೀರೋಯಿನ್ ಇರುವ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿರೋದು ಸುಮಂತ್ ಭಟ್. ದತ್ತಣ್ಣ ಮತ್ತು ರಂಗಾಯಣ ರಘುರಂತಹ ಹಿರಿಯರೂ ಚಿತ್ರದಲ್ಲಿದ್ದಾರೆ.

  ಪ್ರತಿಯೊಬ್ಬರ ಫೋನ್ ಪ್ರತಿಯೊಬ್ಬರ ಪರ್ಸನಲ್ ಖಜಾನೆ. ಆ ಖಜಾನೆ ಓಪನ್ ಆದರೆ, ನಮ್ಮ ರಹಸ್ಯಗಳು ಹೊರ ಜಗತ್ತಿಗೆ ಗೊತ್ತಾಗಿಬಿಟ್ಟರೆ.. ವಾಟ್ ನೆಕ್ಸ್ಟ್ ಅನ್ನೊದೇ ಚಿತ್ರದ ಕಥೆಯ ಥೀಮ್.

 • ಬೇಜಾರಾದ್ರೆ ಚಡ್ಡಿಯೊಳಗೆ ಇರುವ ಬಿಟ್ಕೊಳ್ಳಿ.

  loudspeaker promotional song goes viral

  ಬೇಜಾರಾದ್ರೆ ಚಡ್ಡಿಯೊಳಗೆ ಇರುವ ಬಿಟ್ಕೊಳ್ಳಿ.. ಇಲ್ಲಾಂದ್ರೆ ಮುಚ್ಕೊಂಡು ಮನೇಲಿ ಕೂತ್ಕೊಳ್ಳಿ.. ಹೀಗೆ ಶುರುವಾಗುತ್ತೆ ಹಾಡು. ಇದು ಲೌಡ್‍ಸ್ಪೀಕರ್ ಸಿನಿಮಾದ್ದು. ಮಳೆ ಹಾಗೂ ಧೈರ್ಯಂ ಚಿತ್ರಗಳ ನಂತರ ಶಿವತೇಜಸ್ ನಿರ್ದೇಶಿಸಿರುವ ಸಿನಿಮಾ ಲೌಡ್‍ಸ್ಪೀಕರ್. ಈಹಾಡು ಹಾಡಿರೋದು ಚಂದನ್ ಶೆಟ್ಟಿ. ಸಂಗಿತ ಹರ್ಷವರ್ಧನ್ ಅವರದ್ದು. 

  ಅಂದಹಾಗೆ ಈ ಹಾಡು ಚಿತ್ರದಲ್ಲಿ ಇಲ್ಲ. ಚಿತ್ರದ ಪ್ರಮೋಷನ್‍ಗಾಗಿಯೇ ಸೃಷ್ಟಿಸಿದ ಹಾಡಿದು. ಜಗತ್ತಿನ ಮೋಸ್ಟ್ ಡೇಂಜರಸ್ ಈ ಚಿತ್ರದ ಕಥೆಯಂತೆ. ನಿಮಗೆಲ್ಲ ಗೊತ್ತಿರೋದೆ..ಆದರೆ, ಸದ್ಯಕ್ಕೆ ಸಸ್ಪೆನ್ಸ್ ಜಾರಿಯಲ್ಲಿರಲಿ ಅಂತಿದೆ ಚಿತ್ರತಂಡ.

  ಅಂದಹಾಗೆ ಚಿತ್ರದ ಪ್ರಮೋಷನ್‍ಗಾಗಿ ಸೃಷ್ಟಿಸಿದ ಈ ಹಾಡು ಈಗ ವೈರಲ್ ಆಗಿಬಿಟ್ಟಿದೆ. ಸಿನಿಮಾ ಮಾಡ್ತಾ ಮಾಡ್ತಾ ಐಡಿಯಾ ಬಂತು. ಅಭಿಷೇಕ್ ಅವರು ಒಂದೊಳ್ಳೆ ಸಾಹಿತ್ಯ ಬರೆದಿದ್ದರು. ಅದು ಸೂಟ್ ಆಗ್ತಾ ಇತ್ತು. ನಿರ್ಮಾಪಕರಿಗೂ ತಿಳಿಸಿ ಹಾಡು ಶೂಟ್ ಮಾಡಿಸಿದೆವು. ಈಗ ಹಿಟ್ ಆಗಿದೆ ಅನ್ನೋ ಖುಷಿಯಿದೆ ಅಂತಿದೆ ಸಿನಿಮಾ ಟೀಂ.

   

 • ಮೊಬೈಲ್ ದಾಸರಾಗಿದ್ದೀರಾ..? ಲೌಡ್‍ಸ್ಪೀಕರ್ ನೋಡಿ

  loudspeaker warns about mobile addiction

  ರೋಡಿನಲ್ಲಿ, ಮನೆಯಲ್ಲಿ, ಆಫೀಸ್‍ನಲ್ಲಿ, ಟಾಯ್ಲೆಟ್‍ನಲ್ಲಿ, ಬೆಡ್‍ರೂಂನಲ್ಲಿ.. ಎಲ್ಲೆಲ್ಲಿಯೂ ಮೊಬೈಲ್ ಹಾವಳಿಯಿಟ್ಟುಬಿಟ್ಟಿದೆ. ಟೆಕ್ನಾಲಜಿ ಕ್ರಾಂತಿಯ ಮೊಬೈಲ್, ಚಟವಾಗಿದೆ. ಈ ಮೊಬೈಲ್ ಚಟದಾಸರಿಗೆ ಒಂದು ಎಚ್ಚರಿಕೆ ಹೇಳಲಿಕ್ಕೆಂದೇ ಬಂದಿರುವ ಚಿತ್ರ ಲೌಡ್‍ಸ್ಪೀಕರ್.

  ಈ ಸಿನಿಮಾದಲ್ಲಿ ಒಂದು ಆಟವಿದೆ. ಏನಂದ್ರೆ, ಮೊಬೈಲ್‍ಗೆ ಎಲ್ಲ ಕರೆಗಳನ್ನು ಸ್ವೀಕರಿಸಿ, ಲೌಡ್‍ಸ್ಪೀಕರ್‍ನಲ್ಲೇ ಮಾತನಾಡಬೇಕು. ಮೊಬೈಲ್‍ಗೆ ಬಂದ ಎಲ್ಲ ಮೆಸೇಜ್‍ಗಳನ್ನೂ ಜೋರಾಗಿ ಓದಿ ಹೇಳಬೇಕು. ಆ ಒಂದು ಆಟ ಎಂಥ ಥ್ರಿಲ್ ಮತ್ತು ಅವಾಂತರ ಸೃಷ್ಟಿಸಬಹುದು ಎಂಬ ಕಾನ್ಸೆಪ್ಟ್ ಚಿತ್ರದ ಕಥೆ. ಹೀಗಾಗಿಯೇ ಇದು ಜಗತ್ತಿನ ಮೋಸ್ಟ್ ಡೇಂಜರಸ್ ಗೇಮ್ ಅನ್ನಿಸ್ಕೊಂಡಿರೋದು.

  ಕನ್ನಡದಲ್ಲಿ ನನಗಿದು 4ನೇ ಸಿನಿಮಾ. ಗೃಹಿಣಿಯಾಗಿ ನಟಿಸಿದ್ದೇನೆ. ಈ ಹಿಂದೆ ಮಿಸ್ಟರ್ & ಮಿಸಸ್ ರಾಮಾಚಾರಿ, ಮುಕುಂದ ಮುರಾರಿ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದೆ. ತಮಿಳಿನಲ್ಲಿ ತಾರಾ ತಪ್ಪಟ್ಟೈ, ವೀರ ಶಿವಾಜಿ ಚಿತ್ರಗಳಲ್ಲಿ ನಟಿಸಿದ್ದೆ. ಲೌಡ್‍ಸ್ಪೀಕರ್ ನನ್ನ ವೃತ್ತಿ ಬದುಕಿಗೆ ದೊಡ್ಡ ತಿರುವು ನೀಡಲಿದೆ ಎಂಬ ವಿಶ್ವಾಸದಲ್ಲಿದ್ದಾರೆ ಚಿತ್ರದ ನಾಯಕಿ ಕಾವ್ಯ ಶಾ. ಶಿವತೇಜಸ್ ನಿರ್ದೇಶನದ ಚಿತ್ರ, ಥಿಯೇಟರುಗಳಲ್ಲಿ ಲೌಡ್ ಆಗಿ ಸದ್ದು ಮಾಡುತ್ತಿದೆ.

 • ಲೌಡ್‍ಸ್ಪೀಕರ್ ಚಡ್ಡಿ ಒಳಗೆ ಇರುವೆ ಬಿಟ್ಕಳಿ

  loud speaker chaddi olage song

  ಚಡ್ಡಿ ಒಳಗೆ ಇರುವೆ ಬಿಟ್ಕಳಿ.. ಇಲ್ಲಾ ಅಂದ್ರೆ ಕಿವಿ ಒಳಗೆ ಬೆರಳು ಇಟ್ಕೊಳ್ಳಿ.. ಬಟ್ ಈ ಗೇಮ್ ಮಾತ್ರ ಆಡ್ಬೇಡಿ.. ಈ ಗೇಮ್ ಹೆಸರೇನು.. ಲೌಲೌಲೌಲೌ ಲೌಡ್ ಸ್ಪೀಕರ್.. 

  ಇದು ಲೌಡ್ ಸ್ಪೀಕರ್ ಚಿತ್ರದಲ್ಲಿರೋ ಏಕೈಕ ಹಾಡು. ಚಂದನ್ ಶೆಟ್ಟಿ ಹಾಡಿರುವ ಈ ಹಾಡು ಸಿಕ್ಕಾಪಟ್ಟೆ ಹಿಟ್ ಆಗಿದೆ. ಈಗಾಗಲೇ 20 ಲಕ್ಷಕ್ಕೂ ಹೆಚ್ಚು ಆನ್‍ಲೈನ್‍ನಲ್ಲಿ ನೋಡಿದ್ದಾರೆ.

  ಪೆಟ್ರೋಲ್ ಇದ್ರೆ ಕಾಲೇಜ್ ಮುಂದೆ ಬೀಟ್ ಹೊಡ್ಕಳಿ, ಇಲ್ಲ ಅಂದ್ರೆ ಮುಚ್ಚೊಂಡ್ ಮನೇಲ್ ಮುದ್ದೆ ತಿನ್ಕೊಳಿ.. ಫ್ರೆಂಡ್ಸ್‍ಗಳ್ ಜೊತೆ ಸೇರ್ಕೊಂಡ್ ಎಣ್ಣೆ ಬಿಟ್ಕೋಳಿ.. ಬಟ್ ಡೋಂಟ್ ಟ್ರೈ ದಿಸ್ ಗೇಮ್ ಅಂತಾ ಕಂಟಿನ್ಯೂ ಆಗುತ್ತೆ ಈ ಹಾಡು.

  ಇಷ್ಟಕ್ಕೂ ಲೌಡ್ ಸ್ಪೀಕರ್ ಅನ್ನೋ ಗೇಮ್ ಯಾಕೆ ಆಡಬಾರದು..? ಅದೇ ಚಿತ್ರದ ಕಥೆ. ನಿರ್ದೇಶಕ ಶಿವತೇಜಸ್ ಈ ಹಿಂದೆ ಮಳೆ ಅನ್ನೋ ಎಂಬ ರೊಮ್ಯಾಂಟಿಕ್ ಸಿನಿಮಾ ಕೊಟ್ಟಿದ್ದವರು. ಥೈರ್ಯ ಅನ್ನೋ ಆ್ಯಕ್ಷನ್ ಥ್ರಿಲ್ಲರ್ ಕೊಟ್ಟಿದ್ದವರು. ಈ ಬಾರಿ ಟೆಕ್ನಾಲಜಿ ಕೂಡಾ ಆಧರಿಸಿರುವ ಸಸ್ಪೆನ್ಸ್, ಥ್ರಿಲ್ಲರ್, ಡಾರ್ಕ್ ಕಾಮಿಡಿ ಜಾನರ್ ಕಥೆ ಹೇಳುತ್ತಿದ್ದಾರೆ. ಕಥೆ ವಿಶೇಷವಾಗಿರುತ್ತೆ ಅನ್ನೊದ್ರಲ್ಲಿ ಅನುಮಾನವಿಲ್ಲ. ಧೈರ್ಯಂ ಚಿತ್ರಕ್ಕೆ ಬಂಡವಾಳ ಹೂಡಿದ್ದ ರಾಜು ಅವರೇ ಲೌಡ್ ಸ್ಪೀಕರ್‍ಗೂ ನಿರ್ಮಾಪಕರು.