` rahman, - chitraloka.com | Kannada Movie News, Reviews | Image

rahman,

  • 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಗರ

    gara movie releases in 100 plus heters

    ಟಿವಿ ನಿರೂಪಕ ರೆಹಮಾನ್, ಆವಂತಿಕ, ಆರ್ಯನ್, ನೇಹಾ ಪಾಟೀಲ್, ರಾಮಕೃಷ್ಣ, ರೂಪಾದೇವಿ, ಮನ್‍ದೀಪ್ ರಾಯ್, ತಬಲ ನಾಣಿ ಮೊದಲಾದವರು ನಟಿಸಿರುವ ಚಿತ್ರ ಗರ. 25 ಫ್ರೇಂ ಫಿಲಂಸ್ ಬ್ಯಾನರ್‍ನಲ್ಲಿ ಬರುತ್ತಿರುವ ಗರ ಚಿತ್ರ, ಇದೇ ವಾರ ರಿಲೀಸ್ ಆಗುತ್ತಿದೆ. ಹೊಸಬರ ಚಿತ್ರವಾದರೂ 100ಕ್ಕೂ ಹೆಚ್ಚು ಟಾಕೀಸುಗಳಲ್ಲಿ ರಿಲೀಸ್ ಆಗುತ್ತಿರುವುದು ವಿಶೇಷ.

    ಕಥೆ,ಚಿತ್ರಕಥೆ, ಸಂಭಾಷಣೆ ಬರೆದು, ನಿರ್ದೇಶನವನ್ನೂ ಮಾಡಿರುವ ಕೆ.ಆರ್.ಮುರಳೀಕೃಷ್ಣಗೆ ಕನ್ನಡ ಚಿತ್ರರಂಗ ಹೊಸದೇನಲ್ಲ. ಹೆಚ್ಚೂ ಕಡಿಮೆ 3 ದಶಕಗಳ ಅನುಭವ ಅವರ ಬೆನ್ನಿಗಿದೆ.

    ಗರ ಚಿತ್ರದ ಹೈಲೈಟ್ ಎಂದರೆ, ಜಾನಿ ಲಿವರ್ ಮತ್ತು ಸಾಧುಕೋಕಿಲ ಒಟ್ಟಿಗೇ ನಟಿಸಿರುವುದು. ಸಾಧು ಅವರನ್ನು ಕನ್ನಡದ ಜಾನಿ ಲಿವರ್ ಎಂದೇ ಕರೆಯುವುದು ಗೊತ್ತಿರುವ ಸಂಗತಿಯೇ. ಅವರಿಬ್ಬರೂ ಈಗ ಒಟ್ಟಿಗೇ ನಟಿಸಿರುವುವುದು ಗರ ಚಿತ್ರದ ಹೈಲೈಟ್.

  • Gara Review: Chitraloka Rating 3.5* /5

    gara review

    After producing films, Murali Krishna brother of Shantaram who directed films like Bala Nauke, Hrudaya Samrajya and Karnana Sampattu, makes his debut as a director with Gara. It is inspired by one of R K Narayan's most popular story 'An Astrologer's Day' released in 1947.

    With few additions to the simple plot from the classic story, the director has a webbed a sensible screenplay to turn it into a suspense thriller along with the much needed commercial aspects.

    It opens up with an astrologer who meets a rich guy in a small town, which is similar to the short story but what follows thereafter when the two are connected to each other in this cinematic version by Murali Krishna, has more to what meets the eye in the end.

    Turning a popular classic tale into a full fledged film is indeed a hard task especially for the one who is making his debut but the effort deserves appreciation which comes with good visuals, songs and humour. Notable performances in Gara is an added attraction especially that of Johnny Lever and Sadhu Kokila.

    It is the new faces from that of news anchor turned actor Rehman, Neha Patil, Avanthika and Aditya Aryan who play the crucial role gives Gara a youthful look, but Johnny Lever and Sadhu Kokila as 'digital brothers' are the highlight. Sagar Gururaj is impressive with his compositions. Watch Gara for all its honest effort for a sensible entertainment.

  • Saroj Khan Composes Dance For 'Gara'

    saroj khan composes dance for gara

    Well known choreographer Saroj Khan who has composed dances for hundreds of Bollywood films has made her entry to Kannada film with 'Gara'. Saroj Khan has composed a dance number for the film and the song was recently shot in Bangalore..

    'Gara' was launched last year and the film marks the debut of well known news anchor Rehman as a hero.  The film is being written and directed and produced by Muralikrishna. Apart from Rehman and Johnny Lever, Avanthika,  Sadhu Kokila and others play prominent roles in the film.  Well known comedian Johnny Lever who has acted in comic roles in numerous Hindi films has also acted in this film.

    Manjula Gururaj's son Sagar is the music director, while H C Veni is the cameraman.

  • ಅಪ್ಪಟ ಪ್ರಾಮಾಣಿಕ ಮೋಸಗಾರರ ಆಟ ಗರ

    gara has a unique story

    ಗರ ಚಿತ್ರದ ಟ್ಯಾಗ್‍ಲೈನ್ ಅದೇ.. ಅಪ್ಪಟ ಪ್ರಾಮಾಣಿಕ ಮೋಸಗಾರರ ಆಟ. ಪ್ರಾಮಾಣಿಕತೆಗೂ, ಮೋಸಕ್ಕೂ ಎತ್ತಣಿಂದೆತ್ತಣ ಸಂಬಂಧ ಎನ್ನುವವರ ಕುತೂಹಲಕ್ಕೆ ಉತ್ತರ ಸಿಕ್ಕೋದು ಸಿನಿಮಾದಲ್ಲಿ ಮಾತ್ರ. ಅಷ್ಟರಮಟ್ಟಿಗೆ ಕುತೂಹಲ ಹುಟ್ಟಿಸುತ್ತಾರೆ ನಿರ್ದೇಶಕ ಮುರಳೀಕೃಷ್ಣ.

    ಟಿವಿ ನಿರೂಪಕ ರೆಹಮಾನ್ ನಾಯಕನಾಗಿ ನಟಿಸಿರುವ ಚಿತ್ರಕ್ಕೆ ಗುಮ್ ಗುಮ್ ಗರ ಎಂಬ ವಿಶೇಷ ಥೀಮ್ ಸಾಂಗ್‍ನ್ನೂ ಬಿಟ್ಟಿದ್ದಾರೆ. ಮೇ ಮೊದಲ ವಾರ ತೆರೆಗೆ ಬರುತ್ತಿರುವ ಚಿತ್ರ ವಿಭಿನ್ನ ವಿಶೇಷ ಕಾರಣಗಳಿಂದಾಗಿಯೇ ಸದ್ದು ಮಾಡುತ್ತಿದೆ.

  • ಜುಗಾರಿ ಬ್ರದರ್ಸ್ ಮೋಡಿಗೆ ರೆಡಿಯಾಗಿ

    jugari brothers in gara

    ಗರ, ಆರ್.ಕೆ.ನಾರಾಯಣ್ ಅವರ ಕಿರುಕಥೆಯನ್ನಾಧರಿಸಿ ಮಾಡಿರುವ ಸಿನಿಮಾ. ಮುರಳೀಕೃಷ್ಣ ನಿರ್ದೇಶನದ ಈ ಚಿತ್ರ ಮುಂದಿನ ವಾರ ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ಸಾಧುಕೋಕಿಲ ಮತ್ತು ಜಾನಿ ಲಿವರ್.

    ಬಾಲಿವುಡ್‍ನಲ್ಲಿ ಜಾನಿ ಲಿವರ್‍ಗೆ ಅವರದ್ದೇ ಆದ ಪ್ರತ್ಯೇಕ ಸ್ಥಾನಮಾನವಿದೆ. ಕನ್ನಡದಲ್ಲಿ ಅಂತಹ ಲೆವೆಲ್‍ನಲ್ಲಿರೋದು ಸಾಧು ಮಹಾರಾಜ್.

    ಈ ಇಬ್ಬರೂ ಕಾಮಿಡಿಯನ್‍ಗಳು ಒಟ್ಟಿಗೇ ನಟಿಸಿರುವ  ಚಿತ್ರ ಗರ. ಈ ಚಿತ್ರದಲ್ಲಿ ಇಬ್ಬರೂ ಜುಗಾರಿ ಬ್ರದರ್ಸ್ ಆಗಿ ನಟಿಸಿದ್ದು, ನಕ್ಕು ನಗಿಸಲು ಕಂಪ್ಲೀಟ್ ರೆಡಿಯಾಗಿದ್ದಾರೆ. ನಗೋಕೆ ನೀವು ರೆಡಿಯಾಗಿ.

  • ವ್ಹಾವ್.. ಗರ ಪೋಸ್ಟರ್‍ಗಳನ್ನು ನೋಡಿದಿರಾ..?

    gara poster creates curisosity

    ಟಿವಿ 9ನಲ್ಲಿ ನ್ಯೂಸ್ ಆ್ಯಂಕರ್ ಆಗಿದ್ದ ರೆಹಮಾನ್, ನಂತರ ಬಿಗ್‍ಬಾಸ್‍ಗೆ ಹೋಗಿ, ಕಿರುತೆರೆಯಲ್ಲಿ ಮನರಂಜನಾ ಕಾರ್ಯಕ್ರಮಗಳ ನಿರೂಪಕರಾಗಿಯೂ ಯಶಸ್ಸು ಕಂಡವರು. ಅವರು ಇದೇ ಮೊದಲ ಬಾರಿಗೆ ನಾಯಕರಾಗಿ ನಟಿಸಿರುವ ಚಿತ್ರ ಗರ. ಮುರಳೀಕೃಷ್ಣ ನಿರ್ದೇಶನದ ಗರ ರಿಲೀಸ್‍ಗೆ ರೆಡಿಯಾಗಿದೆ. ಈ ಹೊತ್ತಿನಲ್ಲಿ ವಿಶೇಷವಾಗಿ ಗಮನ ಸೆಳೆಯುತ್ತಿರುವುದು ಗರ ಚಿತ್ರದ ಪೋಸ್ಟರ್‍ಗಳು. ಡಿಸೈನರ್ ತೇಜಸ್ ಎಂಬ ಹುಡುಗ.

    ಇದರ ಕ್ರೆಡಿಟ್ ತೇಜಸ್ ಅವರಿಗೆ ಹೋಗಬೇಕು. ನನಗೆ ಹೊಸ ತರಹದ ಪೋಸ್ಟರ್ ಮಾಡಿಸಬೇಕು ಎಂಬ ಆಸೆಯಿತ್ತು. ಪೋಸ್ಟರ್‍ಗಳ ಮೂಲಕವೇ ಜನರಲ್ಲಿ ಕುತೂಹಲ ಹುಟ್ಟಿಸಬೇಕೆಂಬ ಕನಸಿತ್ತು. ಅದರ ಬಗ್ಗೆ ಕಲ್ಪನೆಗಳೂ ಇದ್ದವು. ಅವುಗಳನ್ನೆಲ್ಲ ಈ ತೇಜಸ್‍ಗೆ ಹೇಳಿದೆ. ಆತ ಅದಕ್ಕೆ ತಕ್ಕಂತೆ ಹತ್ತು ಹಲವು ಡಿಸೈನ್‍ಗಳೊಂದಿಗೆ ಬಂದ. ಈಗ ಗೆದ್ದಿದ್ದೇವೆ ಅಂತಾರೆ ಮುರಳೀಕೃಷ್ಣ.

    ಈಗ ಪೋಸ್ಟರ್‍ಗಳಿಗೆ ಸಿಗುತ್ತಿರೋ ರೆಸ್ಪಾನ್ಸ್ ನೋಡಿ ಖುಷಿಯಾಗುತ್ತಿದೆ ಎಂದಿದ್ದಾರೆ ಡಿಸೈನರ್ ತೇಜಸ್.

  • ಸಾಧು ಕೋಕಿಲಾ.. ಜಾನಿ ಲೀವರ್ ಒಟ್ಟಿಗೇ ಬಂದರು..!

    johnny lever and sadhu kokila image

    ಸಾಧು ಕೋಕಿಲಾ, ಕನ್ನಡದ ಹಾಸ್ಯನಟ. ಜಾನಿ ಲೀವರ್ ಬಾಲಿವುಡ್‍ನ ಹಾಸ್ಯನಟ. ಕೆಲವು ಹಂತದಲ್ಲಿ ಸಾಧು ಅವರನ್ನು ಕನ್ನಡದ ಜಾನಿ ಲೀವರ್ ಎಂದು ಕರೆಯುವವರಿಗೂ ಕೊರತೆಯಿಲ್ಲ. ಈಗ ಅವರಿಬ್ಬರೂ ಒಂದಾಗಿದ್ದಾರೆ. ಒಂದೇ ಚಿತ್ರದಲ್ಲಿ ಒಟ್ಟಿಗೇ ಅಣ್ಣತಮ್ಮಂದಿರಾಗಿ ನಟಿಸುತ್ತಿದ್ದಾರೆ.

    ಕೆ.ಆರ್. ಮುರಳೀಕೃಷ್ಣ ನಿರ್ದೇಶನದ `ಗರ' ಚಿತ್ರದಲ್ಲಿ ಸಾಧು ಹಾಗೂ ಜಾನಿ ಒಟ್ಟಿಗೇ ನಟಿಸುತ್ತಿದ್ದಾರೆ. ಅಣ್ಣತಮ್ಮಂದಿರ ಪಾತ್ರದಲ್ಲಿ ನಟಿಸುತ್ತಿರುವ ಇಬ್ಬರಿಗೂ ಒಂದೇ ರೀತಿಯ ಕಾಸ್ಟ್ಯೂಮ್ ಡಿಸೈನ್ ಮಾಡಲಾಗಿದೆ.

    ನಿರ್ದೇಶಕ ಮುರಳೀಕೃಷ್ಣ, ನಿರ್ದೇಶಕ ಶಾಂತಾರಾಮ್ ಅವರ ಪುತ್ರ. ಚಿತ್ರದಲ್ಲಿ ಆವಂತಿಕಾ ಮೋಹನ್, ಆರ್ಯನ್, ನ್ಯೂಸ್ ಆ್ಯಂಕರ್ ಆಗಿದ್ದ ರೆಹಮಾನ್ ಮೊದಲಾದವರು ನಟಿಸುತ್ತಿದ್ದಾರೆ.