ಶ್ರಾವಣ ಬಂತು. 1984ರಲ್ಲಿ ತೆರೆಗೆ ಬಂದಿದ್ದ ಚಿತ್ರ. ಮೇರಿ ಮೇರಿ ಮೇರಿ ಐ ಲವ್ ಯೂ, ಬಾನಿನ ಅಂಚಿದ ಬಂದೆ, ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ, ಶ್ರಾವಣ ಮಾಸ ಬಂದಾಗ.. ಹೀಗೆ ಆ ಚಿತ್ರದ ಹಾಡುಗಳು ಇಂದಿಗೂ ಜನಪ್ರಿಯ. ಊರ್ವಶಿ, ರಾಜ್ ಜೋಡಿಯಾಗಿ ನಟಿಸಿದ್ದರು. ಆ ಚಿತ್ರದಲ್ಲಿ ಡಾ.ರಾಜ್ ಗೆಳೆಯ ಹಾಗೂ ಆತ್ಮದ ಪಾತ್ರದಲ್ಲಿ ನಟಿಸಿದ್ದವರು ಪ್ರಣಯ ರಾಜ ಶ್ರೀನಾಥ್.
ಅದೇ ರಾಗ ಅದೇ ಹಾಡು, ಶಿವರಾಜ್ ಕುಮಾರ್ ಅಭಿನಯದ ಸಿನಿಮಾ. ಆ ಚಿತ್ರದಲ್ಲಿ ಪುನರ್ಜನ್ಮ ಹಾಗೂ ದೆವ್ವದ ಕಥೆಯಿತ್ತು.
ಸಂಯುಕ್ತ ಚಿತ್ರದಲ್ಲಿ ದೆವ್ವದ ಎಳೆಯಿದ್ದರೂ, ದೆವ್ವದ ಸಿನಿಮಾ ಆಗಿರಲಿಲ್ಲ. ಅದೊಂದು ಸಸ್ಪೆನ್ಸ್ ಥ್ರಿಲ್ಲರ್ ಆಗಿತ್ತು. ತಂಗಾಳಿಯಾಗಿ ಹೋದೆ ಎಂಬ ಹಾಡಂತೂ ಬೆಚ್ಚಿ ಬೀಳಿಸುತ್ತಿತ್ತು.
ಇನ್ನು ಇತ್ತೀಚೆಗೆ ಬಂದ ಶಿವಣ್ಣ ಅಭಿನಯದ ಶಿವಲಿಂಗ ಚಿತ್ರ ಅಪ್ಪಟ ದೆವ್ವದ ಸಿನಿಮಾ. ವಾಸು ನಿರ್ದೇಶನದ ಸಿನಿಮಾದಲ್ಲಿ ದೆವ್ವ, ಥ್ರಿಲ್ಲರ್ ಕಥೆಯನ್ನು ಹದವಾಗಿ ಬೆರೆಸಲಾಗಿತ್ತು.
ಈಗ ನಟಸಾರ್ವಭೌಮ ಚಿತ್ರ. ಹೋಲಿಕೆ ಒಂದೇ.. ಅದು ಆತ್ಮ.
ಪುನೀತ್ ರಾಜ್‍ಕುಮಾರ್ ಮೈಮೇಲೆ ಈ ಚಿತ್ರದಲ್ಲಿ ಆತ್ಮವೊಂದು ಬರುತ್ತಾ..? ಆತ್ಮದ ಕೈಗೊಂಬೆಯಾಗಿರ್ತಾರಾ ಪುನೀತ್ ರಾಜ್‍ಕುಮಾರ್..?
ನಿರ್ದೇಶಕ ಪವನ್ ಒಡೆಯರ್, ಅದ್ಯಾವ ರಹಸ್ಯವನ್ನೂ ಬಿಟ್ಟುಕೊಡ್ತಿಲ್ಲ. ರಚಿತಾ ರಾಮ್, ಅನುಪಮಾ ನಾಯಕಿಯಾಗಿರುವ ಚಿತ್ರದಲ್ಲಿ ದೆವ್ವದ ಕಥೆ ಹೇಳುವುದು ಚಿಕ್ಕಣ್ಣ, ಸಾಧು ಮತ್ತು ಅಚ್ಯುತ್ ಕುಮಾರ್. ಉಳಿದಂತೆ.. ರಹಸ್ಯ ತಿಳಿದುಕೊಳ್ಳೋಕೆ ಫೆಬ್ರವರಿ 7ರವರೆಗೆ ಕಾಯಲೇಬೇಕು.