` natasarvabhowma, - chitraloka.com | Kannada Movie News, Reviews | Image

natasarvabhowma,

  • ದಾಖಲೆ ಮೊತ್ತಕ್ಕೆ ನಟಸಾರ್ವಭೌಮ ಸೇಲ್..!

    natasarvabhouma distribution rights sold for record sum

    ಪುನೀತ್ ಚಿತ್ರಗಳು ಎಂದರೆ ವಿತರಕರು ಸಾಲುಗಟ್ಟುತ್ತಾರೆ. ಜೊತೆಗೆ ಈ ಬಾರಿ ಪುನೀತ್ ಜೊತೆ ರಾಕ್‍ಲೈನ್ ವೆಂಕಟೇಶ್ ಸಿನಿಮಾ ಎಂಬುದೂ ಸೇರಿ ನಟಸಾರ್ವಭೌಮನಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಸೃಷ್ಟಿಯಾಗಿದೆ. ಚಿತ್ರದ ಟ್ರೇಲರ್ ಎಬ್ಬಿಸಿದ ಹವಾ ನೋಡಿದ ವಿತರಕರು, ಚಿತ್ರವನ್ನು ದಾಖಲೆ ಮೊತ್ತಕ್ಕೆ ಖರೀದಿಸಿದ್ದಾರಂತೆ.

    ಧೀರಜ್ ಎಂಟರ್‍ಪ್ರೈಸಸ್ ಚಿತ್ರವನ್ನು ಭಾರಿ ಮೊತ್ತಕ್ಕೆ ಖರೀದಿಸಿದ್ದು, 350ಕ್ಕೂ ಹೆಚ್ಚು ಸೆಂಟರ್‍ಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಪುನೀತ್, ರಚಿತಾ ರಾಮ್, ಅನುಪಮಾ, ಚಿಕ್ಕಣ್ಣ, ಸಾಧುಕೋಕಿಲ, ಬಿ.ಸರೋಜಾದೇವಿ, ರವಿಶಂಕರ್ ಸೇರಿದಂತೆ ಭರ್ಜರಿ ತಾರಾಗಣ ಇರುವ ಚಿತ್ರಕ್ಕೆ ಪವನ್ ಒಡೆಯರ್ ನಿರ್ದೇಶಕ.

  • ದೀಪಾವಳಿಗೆ ನಟಸಾರ್ವಭೌಮ..?

    will natasarvabhouma release on deepavali

    ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ ಸಿನಿಮಾ, ದೀಪಾವಳಿಗೆ ರಿಲೀಸ್ ಆಗುತ್ತಾ..? ಅಂತಾದ್ದೊಂದು ನಿರೀಕ್ಷೆ ಈಗ ಗರಿಗೆದರುತ್ತಿದೆ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾದ ಕೆಲವೇ ಕೆಲವು ದೃಶ್ಯ ಹಾಗೂ ಹಾಡುಗಳ ಶೂಟಿಂಗ್ ಬಾಕಿಯಿದ್ದು, ಸೆಪ್ಟೆಂಬರ್ 18ರಿಂದ ಮತ್ತೆ ಶೂಟಿಂಗ್ ಶುರುವಾಗುತ್ತಿದೆ. ಅದು ಮುಗಿದರೆ ಕುಂಬಳಕಾಯಿ ಒಡೆದಂತೆಯೇ ಲೆಕ್ಕ. 

    ಶೂಟಿಂಗ್ ಜೊತೆ ಜೊತೆಯಲ್ಲೇ ನಿರ್ದೇಶಕ ಪವನ್ ಒಡೆಯರ್, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲೂ ತೊಡಗಿಸಿಕೊಂಡಿರೋದ್ರಿಂದ, ಶೂಟಿಂಗ್ ಮುಗಿದ ನಂತರ, ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲು ಸಿದ್ಧವಾಗಲಿದೆ. 

    ಪವನ್ ಒಡೆಯರ್ ಹಾಗೂ ರಾಕ್‍ಲೈನ್ ವೆಂಕಟೇಶ್ ಪ್ಲಾನ್ ಪ್ರಕಾರವೇ ಎಲ್ಲವೂ ನಡೆದರೆ, ದೀಪಾವಳಿಗೆ ನಟಸಾರ್ವಭೌಮನನ್ನು ತೆರೆಯ ಮೇಲೆ ನೋಡಬಹುದು.

  • ನಟ ಸಾರ್ವಭೌಮನಿಗೆ ಇನ್ನೊಬ್ಬ ಹೀರೋಯಿನ್

    pavan wodeyar in search of new heroine

    ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರಕ್ಕೆ ಹೊಸ ನಾಯಕಿ ಆಯ್ಕೆಯಾಗಲಿದ್ದಾರೆ. ಕೆಲವೇ ದಿನಗಳಲ್ಲಿ ಹೊಸ ನಾಯಕಿಯ ಹೆಸರು ಫೈನಲ್ ಮಾಡಲಿದ್ದೇವೆ. ಹೀಗೆಂದು ನಿರ್ದೇಶಕ ಪವನ್ ಒಡೆಯರ್ ಹೇಳಿದ್ದಾರೆ. ಹಾಗಾದರೆ ರಚಿತಾ ರಾಮ್..?

    ಅಭಿಮಾನಿಗಳೇ.. ಡೋಂಟ್‍ವರಿ.. ಡಿಂಪಲ್ ಕ್ವೀನ್ ನಟಸಾರ್ವಭೌಮನ ನಾಯಕಿ. ಚಿತ್ರಕ್ಕೆ ಇನ್ನೊಬ್ಬ ನಾಯಕಿಯ ಪಾತ್ರದ ಅವಶ್ಯಕತೆ ಇದೆ. ಅದು ಕಥೆಗೆ ತಿರುವು ನೀಡುವಂತಹ ಪಾತ್ರ. ಆ ಪಾತ್ರಕ್ಕಾಗಿ ಅಂದರೆ 2ನೇ ನಾಯಕಿಗಾಗಿ ಪವನ್ ಒಡೆಯರ್ ಹುಡುಕಾಟ ಶುರು ಮಾಡಿದ್ದಾರೆ. ಶೀಘ್ರದಲ್ಲೇ 2ನೇ ನಾಯಕಿಯ ಆಯ್ಕೆ ಮುಗಿಯಲಿದೆ. 

  • ನಟಸಾರ್ವಭೌಮ ಆಡಿಯೋ ಅದ್ಧೂರಿ

    natavabhouma audio launch in hubbali

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರದ ಅಡಿಯೋ ಲಾಂಚ್ ಅದ್ಧೂರಿಯಾಗಿ ನೆರವೇರಿದೆ. ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಅಪ್ಪು ಸಿನಿಮಾದ ಹಾಡುಗಳ ಬಿಡುಗಡೆಯಾಗಿದೆ. 

    ಐಟಿ ದಾಳಿ ಹಿನ್ನೆಲೆಯಲ್ಲಿ ಪುನೀತ್ ರಾಜ್‍ಕುಮಾರ್, ರಾಕ್‍ಲೈನ್ ವೆಂಕಟೇಶ್ ಕಾರ್ಯಕ್ರಮಕ್ಕೆ ಬರುವ ಬಗ್ಗೆ ಸಂಶಯಗಳಿದ್ದವು. ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಸಮಾರಂಭಕ್ಕೆ ಬರಲು ಸಾಧ್ಯವಾಗಲಿಲ್ಲ. ಪುನೀತ್ ಕಾರ್ಯಕ್ರಮಕ್ಕೆ ಆಗಮಿಸಿದ್ದಷ್ಟೇ ಅಲ್ಲ, ಅದ್ಭುತ ಡ್ಯಾನ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸಿದ್ರು.

    ಪುನೀತ್ ಜೊತೆ ಅಷ್ಟೇ ಅದ್ಭುತವಾಗಿ ಹೆಜ್ಜೆ ಹಾಕಿದ ರಚಿತಾ ರಾಮ್, ಪ್ರೇಕ್ಷಕರ ಶಿಳ್ಳೆ ಚಪ್ಪಾಳೆ ಗಿಟ್ಟಿಸಿದ್ರು. ನಿರೂಪಕಿ ಅನುಶ್ರೀ ಅವರ ಉತ್ತರ ಕರ್ನಾಟಕ ಶೈಲಿಯ ನಿರೂಪಣೆ ಗಮನ ಸೆಳೆಯಿತು.

    ಪವನ್ ಒಡೆಯರ್ ನಿರ್ದೇಶನದ ನಟಸಾರ್ವಭೌಮ, ರಿಲೀಸ್‍ಗೆ ರೆಡಿಯಾಗಿದ್ದು, ಪ್ರಚಾರದ ಕೆಲಸಕ್ಕೆ ಆಡಿಯೋ ಲಾಂಚ್ ಮೂಲಕ ಮುಂದಾಗಿದೆ ಚಿತ್ರತಂಡ.

  • ನಟಸಾರ್ವಭೌಮ ಆನ್‍ಲೈನ್ ಲೀಕ್

    natasarvabhouma suffers pn;ine piracy problem

    ಇತ್ತೀಚೆಗೆ ಹಿಂದಿ, ತಮಿಳು ಹಾಗೂ ತೆಲುಗು ಚಿತ್ರರಂಗಗಳನ್ನು ಅತಿ ದೊಡ್ಡ ಭೂತವಾಗಿ ಕಾಡ್ತಿರೋದು ಪೈರಸಿ. ಅದರಲ್ಲೂ ತಮಿಳು ರಾಕರ್ಸ್. ಈಗ ಆ ಕಂಟಕ ಕನ್ನಡ ಚಿತ್ರರಂಗಕ್ಕೂ ಎದುರಾಗಿದೆ. ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರವನ್ನು ತಮಿಳು ರಾಕರ್ಸ್ ಆನ್‍ಲೈನ್‍ಗೆ ಬಿಟ್ಟಿದ್ದಾರೆ. 25 ದಿನ ಪೂರೈಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ನಟಸಾರ್ವಭೌಮನಿಗೆ ನಿಜವಾದ ವಿಲನ್ ಆಗಿ ಕಾಡ್ತಿದೆ ತಮಿಳು ರಾಕರ್ಸ್.

    ಪವನ್ ಒಡೆಯರ್ ನಿರ್ದೇಶನದ ನಟಸಾರ್ವಭೌಮ ಚಿತ್ರಕ್ಕೆ ರಾಕ್‍ಲೈನ್ ವೆಂಕಟೇಶ್ ನಿರ್ಮಾಪಕ. ಈ ಪೈರಸಿ ದಂಧೆಕೋರರ ವಿರುದ್ಧ ರಾಕ್‍ಲೈನ್ ಸಮರ ಸಾರುತ್ತಾರೆ ಎಂಬುದರಲ್ಲಿ ಅನುಮಾನವಿಲ್ಲ. ತಮಿಳು ರಾಕರ್ಸ್ ಸಿಕ್ಕಿಬೀಳ್ತಾರಾ..?

  • ನಟಸಾರ್ವಭೌಮ ಎಷ್ಟನೇ ನಂಬರ್..?

    natasarvabhouma is puneeth's 28th or 41st film

    ನಟಸಾರ್ವಭೌಮ, ಪುನೀತ್ ರಾಜ್‍ಕುಮಾರ್ ಅವರ ಎಷ್ಟನೇ ಸಿನಿಮಾ. ಪುನೀತ್ ಅವರಿಗಿಂತಲೂ ಅವರ ಅಭಿಮಾನಿಗಳಿಗೆ ಚೆನ್ನಾಗಿ ಗೊತ್ತಿರುತ್ತೆ. ಅಂದಹಾಗೆ  ಪುನೀತ್ ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದ್ದು ತಮ್ಮ 6ನೇ ತಿಂಗಳಲ್ಲಿ. ಪ್ರೇಮದ ಕಾಣಿಕೆ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸಮಯವದು. ಪುನೀತ್ ಆಗಿನ್ನೂ 6 ತಿಂಗಳ ಮಗು. ರಾಜ್-ಜಯಮಾಲಾ ಜೋಡಿ ಮುದ್ದು ಮಗುವಾಗಿ ಕಾಣಿಸಿಕೊಂಡಿದ್ದರು ಅಪ್ಪು.

    ಅದಾದ ಮೇಲೆ ಸನಾದಿ ಅಪ್ಪಣ್ಣ, ತಾಯಿಗೆ ತಕ್ಕ ಮಗ, ವಸಂತ ಗೀತ, ಭೂಮಿಗೆ ಬಂದ ಭಗವಂತ, ಚಲಿಸುವ ಮೋಡಗಳು, ಹೊಸ ಬೆಳಕು.. ಹೀಗೆ ಹಲವು ಚಿತ್ರಗಳಲ್ಲಿ ನಟಿಸಿದರು. ಬೆಟ್ಟದ ಹೂವು ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಮತ್ತು ರಾಷ್ಟ್ರಪ್ರಶಸ್ತಿಯನ್ನು ಪಡೆದ ಅಪ್ಪು, ನಾಯಕರಾಗಿ ನಟಿಸಿದ ಮೊದಲ ಸಿನಿಮಾ ಅಪ್ಪು.

    ಹೀರೋ ಆಗಿ ಅಪ್ಪು ಮೊದಲ ಸಿನಿಮಾ ಆದರೆ, ನಟನಾಗಿ ಪ್ರೇಮದ ಕಾಣಿಕೆ ಮೊದಲ ಸಿನಿಮಾ. ಹೀಗಾಗಿ ಹೀರೋ ಅಪ್ಪುಗೆ ನಟಸಾರ್ವಭೌಮ 28ನೇ ಚಿತ್ರವಾದರೆ, ಕಲಾವಿದನಾಗಿ ಇದು 41ನೇ ಸಿನಿಮಾ. 

  • ನಟಸಾರ್ವಭೌಮ ಕಲೆಕ್ಷನ್ ಎಷ್ಟು..? - ರಾಕ್‍ಲೈನ್ ಸ್ಪೀಕಿಂಗ್

    rockline venkatesh talks about natasarvabhouma

    ನಟಸಾರ್ವಭೌಮ ಚಿತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಅದ್ಭುತ ಎನ್ನುವಂತಹ ಪ್ರತಿಕ್ರಿಯೆಗಳೇ ಸಿಗುತ್ತಿರುವಾಗ ಚಿತ್ರದ ಕಲೆಕ್ಷನ್ ಎಷ್ಟಾಗಿರಬಹುದು..? ನಟಸಾರ್ವಭೌಮ ಹೊಸ ದಾಖಲೆ ಬರೆಯಿತಾ..? ಹೀಗೆ ಹಲವು ಪ್ರಶ್ನೆಗಳು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿರುವುದು ಸತ್ಯ. ಇದಕ್ಕೆ ಚಿತ್ರದ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಅವರೇ ಉತ್ತರ ಕೊಟ್ಟಿದ್ದಾರೆ.

    `ರಿಲೀಸ್ ಆಗಿ ಇನ್ನೂ ಕೆಲವೇ ದಿನಗಳಾಗಿವೆ. ಈಗಲೇ ಅಧಿಕೃತ ಎಂದು ಲೆಕ್ಕ ಹೇಳುವುದು ಕಷ್ಟ. ಅಂದಾಜಿನ ಲೆಕ್ಕ ಸಿಗಬಹುದು. ನನಗೆ ಈಗಾಗಲೇ ಹಾಕಿದ ಬಂಡವಾಳ ವಾಪಸ್ ಬಂದಾಗಿದೆ. ಇನ್ನು ಬರುವುದೆಲ್ಲವೂ ಲಾಭ. ಒಂದೆರಡು ವಾರ ಕಳೆದ ಬಳಿಕ ಅಧಿಕೃತ ಮಾಹಿತಿ ಸಿಗಲಿದೆ' ಎಂದಿದ್ದಾರೆ ರಾಕ್‍ಲೈನ್.

    ಅಂದಹಾಗೆ ಇದು ಕೆಜಿಎಫ್ ದಾಖಲೆಯನ್ನೇನೂ ಮುರಿದಿಲ್ಲ. ಕೆಜಿಎಫ್ ಸಿನಿಮಾನೇ ಬೇರೆ. ನಟಸಾರ್ವಭೌಮ ಚಿತ್ರವೇ ಬೇರೆ. ಒಂದಕ್ಕೊಂದು ಕಂಪೇರ್ ಮಾಡೋದೇ ಸರಿಯಲ್ಲ. ನನ್ನ ಬ್ಯಾನರ್‍ನ ಹಿಂದಿನ ಎಲ್ಲ ಸಿನಿಮಾಗಳಿಗಿಂತ ಹೆಚ್ಚು ಕಲೆಕ್ಷನ್ ಮಾಡಿರುವ ಚಿತ್ರ ನಟಸಾರ್ವಭೌಮ. ಚಿತ್ರವನ್ನು 350 ಥಿಯೇಟರುಗಳಲ್ಲಿ ರಿಲೀಸ್ ಮಾಡಿದ್ದೆವು. ಈಗ ಇನ್ನಷ್ಟು ಸೆಂಟರ್‍ಗಳಿಂದ ಬೇಡಿಕೆ ಬರುತ್ತಿದೆ ಎಂದಿದ್ದಾರೆ ರಾಕ್‍ಲೈನ್.

  • ನಟಸಾರ್ವಭೌಮ ಚಿತ್ರದಲ್ಲಿ ಭೂತ ಯಾರು..?

    who is ghost in natasarvabhouma

    ನಟಸಾರ್ವಭೌಮ ಚಿತ್ರದ ಟ್ರೇಲರ್ ಬಿಡುಗಡೆಗೆ ಎಲ್ಲರೂ ಕಾತರದಿಂದ ಕಾಯುತ್ತಿದ್ದರೆ, ಚಿತ್ರದ ಒಂದು ರಹಸ್ಯ ಸೋರಿಕೆಯಾಗಿಬಿಟ್ಟಿದೆ. ಚಿತ್ರದಲ್ಲಿ ಒಂದು ದೆವ್ವ ಅರ್ಥಾತ್ ಭೂತ ಅಂದ್ರೆ ಆತ್ಮವೊಂದು ಇರಲಿದೆ. ಪುನೀತ್ ಪಾಲಿಗೆ ಇದು ಮೊತ್ತಮೊದಲ ಹಾರರ್ ಸಿನಿಮಾ ಆಗಲಿದೆ. ಹಾಗಾದರೆ, ದೆವ್ವ ಯಾರು..?

    ರಚಿತಾ, ಅನುಪಮಾ ನಾಯಕಿಯರು. ಬಿ.ಸರೋಜಾದೇವಿಯವರದ್ದೊಂದು ಪ್ರಧಾನ ಪಾತ್ರ. ರವಿಶಂಕರ್, ಚಿಕ್ಕಣ್ಣ, ಸಾಧುಕೋಕಿಲ.. ಮೊದಲಾದವರು ಚಿತ್ರದಲ್ಲಿದ್ದಾರೆ. ಇವರಲ್ಲೇ ಒಬ್ಬರು.. ಅಥವಾ ಇವರನ್ನು ಹೊರತುಪಡಿಸಿ ಒಬ್ಬರು ಚಿತ್ರದಲ್ಲಿ ದೆವ್ವವಾಗಿರ್ತಾರೆ ಅನ್ನೋದು ಕನ್‍ಫರ್ಮು. ಟ್ರೇಲರ್‍ನಲ್ಲಿಯೂ ಆ ಗುಟ್ಟು ಹೇಳೋದಿಲ್ವಂತೆ ನಿರ್ದೇಶಕ ಪವನ್ ಒಡೆಯರ್. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾ ಹೀಗೆಯೇ ಭರ್ಜರಿ ಸದ್ದು ಮಾಡುತ್ತಿದೆ. ರಿಲೀಸ್ ಡೇಟು ಕೂಡಾ ಹತ್ತಿರವಾಗುತ್ತಿದೆ.

  • ನಟಸಾರ್ವಭೌಮ ಟೈಟಲ್ ಇಡೋಕೆ ಏನು ಕಾರಣ..?

    reason behind natasarvabhouma trailer

    ನಟಸಾರ್ವಭೌಮ ಎಂದಾಕ್ಷಣ ಕನ್ನಡಿಗರ ಕಣ್ಣ ಮುಂದೆ ಬರೋದು ಡಾ.ರಾಜ್‍ಕುಮಾರ್. ಅದು ಅವರಿಗೆ ಅಭಿಮಾನಿಗಳು ನೀಡಿದ್ದ ಬಿರುದೂ ಹೌದು. ಅವರ ಚಿತ್ರದ ಹೆಸರೂ ಹೌದು. ಹೀಗಾಗಿಯೇ ಪುನೀತ್ ಚಿತ್ರಕ್ಕೆ ನಟಸಾರ್ವಭೌಮ ಎಂದು ಟೈಟಲ್ ಕೊಟ್ಟಾಗ ಕೆಲವರು ಬೇಡ ಎಂದಿದ್ದರಂತೆ. 

    ಕಾರಣ ಇಷ್ಟೆ, ಡಾ.ರಾಜ್ ಹೆಸರು ಮತ್ತು ಬಿರುದಿನ ತೂಕವೇ ಚಿತ್ರದ ನಿರೀಕ್ಷೆಯನ್ನು ಭಾರಿ ಭಾರಿ ಪ್ರಮಾಣದಲ್ಲಿ ಏರಿಸುತ್ತೆ. ಮತ್ತೊಂದು ಇದು ಪಕ್ಕಾ ಕಮರ್ಷಿಯಲ್ ಸಿನಿಮಾ. ಈ ಟೈಟಲ್ ಬೇಕಾ..? ಎಂಬ ಪ್ರಶ್ನೆಗಳು ಎದ್ದಿದ್ದವಂತೆ.

    `ಆದರೆ, ಚಿತ್ರದ ಕಥೆಗೆ ಆ ಟೈಟಲ್ ಅತ್ಯುತ್ತಮವಾಗಿ ಹೊಂದಾಣಿಕೆಯಾಗುತ್ತೆ. ನೀವೂ ಅಷ್ಟೆ, ಸಿನಿಮಾ ನೋಡಿದ ಮೇಲೆ ಟೈಟಲ್ ಸರಿಯಾಗಿದೆ ಎಂದು ಖಂಡಿತಾ ಹೇಳುತ್ತೀರಿ' ಎಂದು ಭರವಸೆ ಕೊಡ್ತಾರೆ ನಿರ್ದೇಶಕ ಪವನ್ ಒಡೆಯರ್.

  • ನಟಸಾರ್ವಭೌಮ ಯಾವ ರೀತಿಯ ಸಿನಿಮಾ..?

    natasarvabhouma photo generates curiosity

    ನಟ ಸಾರ್ವಭೌಮ ಸಿನಿಮಾದ ಕಥೆ ಏನು..? ಕೌಟುಂಬಿಕ ಕಥಾ ಹಂದರದ ಚಿತ್ರವಾ..? ಇಬ್ಬರು ನಾಯಕಿಯರಿದ್ದಾರೆ, ತ್ರಿಕೋನ ಪ್ರೇಮಕಥೆಯಾ..? ಚಿತ್ರದ ಕಥಾನಾಯಕ ಫೋಟೋಗ್ರಾಫರ್. ಹಾಗಾದರೆ, ಮೀಡಿಯಾ ಸ್ಟೋರಿನಾ..? ಹೀಗೆ ಹಲವಾರು ಪ್ರಶ್ನೆ ಹುಟ್ಟಿ ಹಾಕಿದೆ ನಟಸಾರ್ವಭೌಮ. ಆ ಕುತೂಹಲಕ್ಕೆ ಇನ್ನೊಂದು ಸೇರ್ಪಡೆ ಇದು, ಈ ಫೋಟೋ.

    ನಟಸಾರ್ವಭೌಮ ಚಿತ್ರದ ಶೂಟಿಂಗ್ ಸೆಟ್‍ನಿಂದ ಹೊರಬಂದಿರುವ ಈ ಫೋಟೋ, ಬಾದಾಮಿಯಲ್ಲಿ ನಡೆದ ಚಿತ್ರೀಕರಣದ ವೇಳೆ ಪುನೀತ್  ಪೂಜೆಯಲ್ಲಿ ತೊಡಗಿಸಿಕೊಂಡಿರುವ ಒಂದು ಫೋಟೋ.  

    ಹೀಗೆ ಹಲವು ಅಂಶಗಳು ಇದು ಯಾವ ರೀತಿಯ ಸಿನಿಮಾ ಇರಬಹುದು ಎಂಬ ಕುತೂಹಲ ಸೃಷ್ಟಿಸಿವೆ. 

    ಪವನ್ ಒಡೆಯರ್ ನಿರ್ದೇಶನದ ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿದ್ದರೆ, ಬಿ.ಸರೋಜಾದೇವಿ ಹಲವು ವರ್ಷಗಳ ನಂತರ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಬಾಹುಬಲಿಯ ಕಾಲಕೇಯ ಖ್ಯಾತಿಯ ಪ್ರಭಾಕರ್ ಕೂಡಾ ಚಿತ್ರದಲ್ಲಿದ್ದಾರೆ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಈ ಸಿನಿಮಾ ಅಂತಿಮ ಹಂತದ ಚಿತ್ರೀಕರಣದಲ್ಲಿದೆ.

  • ನಟಸಾರ್ವಭೌಮ ಸೆನ್ಸಾರ್ ಪಾಸ್.. ರಿಲೀಸ್ ಅಷ್ಟೇ ಬಾಕಿ

    natasarvabhouma censored without any cuts and mutes

    ಪುನೀತ್ ರಾಜ್‍ಕುಮಾರ್ ಅಭಿಮಾನಿಗಳ ಸುದೀರ್ಘ ಕಾಯುವಿಕೆಗೆ ಫೆಬ್ರವರಿ 7ರಂದು ಬಹುಮಾನ ಸಿಗುತ್ತಿದೆ. ನಟಸಾರ್ವಭೌಮ ಚಿತ್ರದ ಮೂಲಕ. ಚಿತ್ರ ಸೆನ್ಸಾರ್ ಪಾಸ್ ಆಗಿದ್ದು, ಯು/ಎ ಪ್ರಮಾಣ ಪತ್ರ ಪಡೆದುಕೊಂಡಿದೆ. ಚಿತ್ರದ ಒಟ್ಟು ಅವದಿ 155 ನಿಮಿಷ. ಅರ್ಥಾತ್.. 2 ಗಂಟೆ, 35 ನಿಮಿಷ. 

    ಈಗಾಗಲೇ ಚಿತ್ರದ ಮೂರು ಹಾಡುಗಳು ರಿಲೀಸ್ ಆಗಿದ್ದು, ಮೂರೂ ಹಾಡುಗಳು ಹಿಟ್ ಆಗಿವೆ. ಪವನ್ ಒಡೆಯರ್ ನಿರ್ದೇಶನದ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಪುನೀತ್ ಪತ್ರಕರ್ತನಾಗಿ ನಟಿಸಿದ್ದಾರೆ. ರಚಿತಾ ರಾಮ್ ಮತ್ತು ಅನುಪಮಾ ಪರಮೇಶ್ವರನ್ ಚಿತ್ರಕ್ಕೆ ನಾಯಕಿಯರು. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರದಲ್ಲಿ ದಶಕಗಳ ನಂತರ ಬಿ.ಸರೋಜಾದೇವಿ ಬಣ್ಣ ಹಚ್ಚಿರುವುದು ವಿಶೇಷ.

  • ನಟಸಾರ್ವಭೌಮನ ಜೊತೆ ಚಿಕ್ಕಣ್ಣ, ಕಿರಿಕ್ ರಘು ಡ್ಯಾನ್ಸ್

    natasarvabhouma shoots a party song

    ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರಕ್ಕೆ ಜಾನಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡುತ್ತಿರುವುದೇ ಸೆನ್ಸೇಷನ್ ಸೃಷ್ಟಿಸಿದೆ. ಹಾಡಿನ ಚಿತ್ರೀಕರಣವೂ ಈಗಾಗಲೇ ನಡೆದಿದ್ದು, ಪುನೀತ್ ಹೆಜ್ಜೆ ಹಾಕಿರೋದು ಪಾರ್ಟಿ ಸಾಂಗ್‍ಗಂತೆ. ಯೋಗರಾಜ್ ಭಟ್ಟರ ಸಾಹಿತ್ಯಕ್ಕೆ ಡಿಫರೆಂಟ್ ಸ್ಟೆಪ್ಸ್ ಕೊಟ್ಟಿರೊದು ಜಾನಿ ಮಾಸ್ಟರ್. ರಾಜಕುಮಾರ ಚಿತ್ರದಲ್ಲಿ ಅಪ್ಪು ಡ್ಯಾನ್ಸ್ ಡ್ಯಾನ್ಸ್.. ನೃತ್ಯ ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರನ್ನೂ ಥ್ರಿಲ್ಲಾಗಿಸಿತ್ತು. ಅದಕ್ಕಿಂತ ವಿಭಿನ್ನವಾದ ಸ್ಟೆಪ್ಸ್ ಹಾಕಿಸಿದ್ದಾರೆ ಎಂದು ಖುಷಿಯಾಗಿದ್ದಾರೆ ನಿರ್ದೇಶಕ ಪವನ್ ಒಡೆಯರ್.

    ಪಾರ್ಟಿ ಸಾಂಗ್‍ನಲ್ಲಿ ಪುನೀತ್ ಜೊತೆ ಚಿಕ್ಕಣ್ಣ, ಕಿರಿಕ್ ಪಾರ್ಟಿ ಖ್ಯಾತಿಯ ರಘು ಕೂಡಾ ಹೆಜ್ಜೆ ಹಾಕಿರೋದು ವಿಶೇಷ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರದಲ್ಲಿ ರಚಿತಾ ರಾಮ್, ಅನುಪಮಾ ನಾಯಕಿಯರು. ಬಿ.ಸರೋಜಾದೇವಿ ಬಹಳ ವರ್ಷಗಳ ನಂತರ ಬಣ್ಣ ಹಚ್ಚುತ್ತಿರುವುದು ನಟಸಾರ್ವಭೌಮನ ಸ್ಪೆಷಲ್.

  • ನಟಸಾರ್ವಭೌಮನ ಮದ್ಯಪ್ರಾಚ್ಯ ಓಟ ಶುರು

    natasarvabhouma releasing today in middle east

    ರಾಜ್ಯಾದ್ಯಂತ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ನಟಸಾರ್ವಭೌಮ ಸಿನಿಮಾ, ಮದ್ಯಪ್ರಾಚ್ಯ ದೇಶಗಳ ಸವಾರಿ ಶುರು ಮಾಡಿದೆ. ಇಂದಿನಿಂದ ಅಂದ್ರೆ, ಫೆಬ್ರವರಿ 21ರಿಂದ ಫೆಬ್ರವರಿ 27ರವರೆಗೆ ಮದ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.

    ಯುಎಇ, ಒಮನ್, ಕುವೈತ್, ಕತಾರ್, ಬಹರೈನ್, ಶಾರ್ಜಾ, ಅಬುಧಾಬಿಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. 

    ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ನಟಸಾರ್ವಭೌಮ ಚಿತ್ರದಲ್ಲಿ ಪುನೀತ್, ರಚಿತಾ ರಾಮ್, ಅನುಪಮಾ ಪರಮೇಶ್ವರನ್ ನಟಿಸಿದ್ದಾರೆ. ಪವನ್ ಒಡೆಯರ್ ನಿರ್ದೇಶನದ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ.

  • ನಟಸಾರ್ವಭೌಮನ ಯಾರೋ ನೀನು ಹಾಡಿನ ವಿಡಿಯೋ ಬಂತು

    natasarvabhouma yaro naanu video song

    ನಟಸಾರ್ವಭೌಮ ಚಿತ್ರದ ಯಾರೋ ನೀನು ಹಾಡು ಸೂಪರ್ ಹಿಟ್. ಈ ಯುಗಳ ಗೀತೆಯ ಅಕ್ಷರಗಳ ಮೋಡಿಗೆ ಮರುಳಾಗಿದ್ದವರಿಗೆಲ್ಲ ಈಗ ವಿಡಿಯೋ ನೋಡುವ ಚಾನ್ಸ್. ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿ, ಕಣ್ತುಂಬಿಕೊಂಡು.. ಮತ್ತೊಮ್ಮೆ ಹಾಡು ನೋಡಬೇಕಲ್ಲ ಎನಿಸಿದವರಿಗಾಗಿಯೇ.. ಈ ಯುಗಳ ಗೀತೆಯ ಹೂರಣ ತೆರೆದಿಟ್ಟಿದೆ ರಾಕ್‍ಲೈನ್ ಪ್ರೊಡಕ್ಷನ್ಸ್.

    ಮತ್ತೊಮ್ಮೆ.. ಮಗದೊಮ್ಮೆ ಕೇಳುವಂತಿರುವ ಹಾಡು, ರಚಿತಾ ರಾಮ್.. ಪುನೀತ್ ಅವರನ್ನು ಕನಸಿನಲ್ಲಿಯೇ ಪ್ರೀತಿಸುವ ಗೀತೆ. ಹಾಡಿನ ಕೊರಿಯೋಗ್ರಫಿಯೂ ಅಷ್ಟೇ ಚೆನ್ನಾಗಿದೆ. ಡಿ.ಇಮಾನ್ ಮ್ಯೂಸಿಕ್ ನೀಡಿರುವ ಹಾಡಿಗೆ ಸಾಹಿತ್ಯ ಬರೆದಿರುವುದು ಪ್ರೇಮಕವಿ ಕವಿರಾಜ್. ಶ್ರೇಯಾ ಘೋಷಾಲ್ ಕಂಠದಲ್ಲಿ ಮೂಡಿರುವ ಸುಂದರ ಗೀತೆ, ಪ್ರೇಮಲೋಕಕ್ಕೆ ಕರೆದೊಯ್ಯುತ್ತೆ.

  • ನಟಸಾರ್ವಭೌಮನನ್ನು ಮೊದಲ ದಿನವೇ ಕಣ್ತುಂಬಿಕೊಂಡ ಕ್ರಿಕೆಟ್ ಸ್ಟಾರಿಣಿ

    veda krishnamurthy appreciated natasarvabhouma

    ನಟಸಾರ್ವಭೌಮ ಚಿತ್ರ ಅಭಿಮಾನಿಗಳಿಗೆ ಥ್ರಿಲ್ ನೀಡುತ್ತಿರುವಾಗಲೇ ವಿಶೇಷ ಅಭಿಮಾನಿಯೊಬ್ಬರಿಂದ ಅಪ್ಪುಗೆ ಮೆಚ್ಚುಗೆಯ ಅಪ್ಪುಗೆ ಸಿಕ್ಕಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಕ್ರಿಕೆಟ್ ಆಟಗಾರ್ತಿ, ಭಾರತೀಯ ಮಹಿಳಾ ಕ್ರಿಕೆಟ್‍ನ ಅವಿಭಾಜ್ಯ ಅಂಗವಾಗಿರುವ ವೇದಾ ಕೃಷ್ಣಮೂರ್ತಿ, ನಟಸಾರ್ವಭೌಮ ಚಿತ್ರವನ್ನು ಮೊದಲ ದಿನವೇ ನೋಡಿ, ಮೆಚ್ಚಿ ಥ್ರಿಲ್ಲಾಗಿ.. ಅಪ್ಪುಗೆ ಶುಭ ಕೋರಿದ್ದಾರೆ.

    ಅಪ್ಪಟ ಅಭಿಮಾನಿಯಂತೆ ಮೊದಲ ದಿನವೇ ಚಿತ್ರ ನೋಡಿದ್ದ ವೇದಾ `ಇದು ಅದ್ಭುತ ಸಿನಿಮಾ. ಅದರಲ್ಲೂ ಕ್ಲೈಮಾಕ್ಸ್ ಸೂಪರ್. ಎಲ್ಲರೂ ನೋಡಲೇಬೇಕು. ಈ ಚಿತ್ರ ಎಲ್ಲ ದಾಖಲೆಗಳನ್ನೂ ಮುರಿಯಲಿ. ಆಲ್ ದಿ ಬೆಸ್ಟ್ ಸರ್' ಎಂದು ಶುಭ ಕೋರಿದ್ದರು.

    ಪುನೀತ್ ರಾಜ್‍ಕುಮಾರ್ ಎಂದಿನ ಸ್ಟೈಲ್‍ನಲ್ಲಿಯೇ `ಚಿತ್ರ ನೋಡಿದ್ದಕ್ಕೆ ಧನ್ಯವಾದ. ನೀವು ಸಿನಿಮಾ ನೋಡಿದ್ದು, ಮೆಚ್ಚಿಕೊಂಡಿದ್ದು ನನಗೆ ನಿಜಕ್ಕೂ ಖುಷಿಯಾಯ್ತು' ಎಂದು ಪ್ರತಿಕ್ರಿಯಿಸಿದ್ದಾರೆ.

  • ನಟಸಾರ್ವಭೌಮನಲ್ಲೂ ಇರಲಿದೆ ಅಪ್ಪು ವಂಡರ್ಸ್

    johnny master to choregraph puneeth again

    ರಾಜಕುಮಾರ ಚಿತ್ರ, ಸೂಪರ್ ಡ್ಯೂಪರ್ ಹಿಟ್ ಆಗಿದ್ದಷ್ಟೇ ಅಲ್ಲ, ಪುನೀತ್ ರಾಜ್‍ಕುಮಾರ್ ಸ್ಟೆಪ್ಪುಗಳೂ ಪ್ರೇಕ್ಷಕರನ್ನು ಬೆರಗಾಗಿಸಿದ್ದವು. ಡ್ಯಾನ್ಸ್ ಅಪ್ಪು ಡ್ಯಾನ್ಸ್ ಅಂತೂ ಚಿಕ್ಕಮಕ್ಕಳಿಗೂ ಫೇವರಿಟ್ ಆಗಿ ಹೋಗಿತ್ತು. ಹೀಗೆ ಹೆಜ್ಜೆಗಳ ಮೂಲಕವೇ ಮೋಡಿ ಮಾಡಿದ್ದರ ಹಿಂದಿದ್ದವರು ಜಾನಿ ಮಾಸ್ಟರ್. ಅವರೀಗ ಮತ್ತೆ ಬಂದಿದ್ದಾರೆ. ನಟಸಾರ್ವಭೌಮನಿಗಾಗಿ.

    ರಾಕ್‍ಲೈನ್ ನಿರ್ಮಾಣದ ಚಿತ್ರಕ್ಕೆ ಪವನ್ ಒಡೆಯರ್ ನಿರ್ದೇಶನವಿದೆ. ರಚಿತಾ ರಾಮ್ ನಾಯಕಿಯಾಗಿದ್ದು, ಬಿ.ಸರೋಜಾದೇವಿ ದಶಕಗಳ ನಂತರ ಬಣ್ಣ ಹಚ್ಚಿದ್ದಾರೆ. ಹೀಗೆ ಸ್ಪೆಷಲ್‍ಗಳ ಸ್ಪೆಷಲ್ ಹೊತ್ತಿರುವ ಚಿತ್ರಕ್ಕೆ ಈಗ ಜಾನಿ ಮಾಸ್ಟರ್ ಕ್ರೇಜ್. ಅಭಿಮಾನಿಗಳು, ಈ ಚಿತ್ರದಲ್ಲೂ ಅಪ್ಪು ಅವರಿಂದ ಅದ್ಭುತ ಡ್ಯಾನ್ಸ್ ನಿರೀಕ್ಷೆ ಮಾಡಬಹುದು.

  • ನಟಸಾರ್ವಭೌಮನಿಗೆ ಕುಂಭಳಕಾಯಿ 

    puneeth's natasarvabhouma shooting completed

    ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್, ಪವನ್ ಒಡೆಯರ್, ರಾಕ್‍ಲೈನ್ ವೆಂಕಟೇಶ್ ಕಾಂಬಿನೇಷನ್‍ನ ನಟಸಾರ್ವಭೌಮ ಚಿತ್ರದ ಶೂಟಿಂಗ್ ಮುಕ್ತಾಯವಾಗಿದೆ. ನಾಯಕನ ಇಂಟ್ರೊಡಕ್ಷನ್ ಸಾಂಗ್‍ನ್ನು ಐದು ಸೆಟ್‍ಗಳಲ್ಲಿ ಚಿತ್ರೀಕರಿಸಿದ ಚಿತ್ರತಂಡ ಶೂಟಿಂಗ್ ಮುಗಿಸಿದೆ.

    natasarvabhouma_shooting2.jpgಬೆಂಗಳೂರು, ಹೈದರಾಬಾದ್, ವಿಜಯಪುರಗಳಲ್ಲಿ ಚಿತ್ರೀಕರಣ ನಡೆಸಿರುವ ಚಿತ್ರದಲ್ಲಿ ಪುನೀತ್ ಇದೇ ಮೊದಲ ಬಾರಿಗೆ ಜರ್ನಲಿಸ್ಟ್ ಪಾತ್ರ ಮಾಡಿದ್ದಾರೆ. ರಚಿತಾ ರಾಮ್, ಅನುಪಮಾ ಪರಮೇಶ್ವರನ್ ನಾಯಕಿಯರು. ಬಿ.ಸರೋಜಾದೇವಿ ಹಲವು ವರ್ಷಗಳ ನಂತರ ಬಣ್ಣ ಹಚ್ಚಿದ್ದಾರೆ. ಜನವರಿ 2ನೇ ವಾರದಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

  • ನಡುರಾತ್ರಿಗೇ ನರ್ತಿಸುತ್ತಾನೆ ನಟಸಾರ್ವಭೌಮ

    natasarvabhouma shows will starts at mid night

    ಪವರ್ ಸ್ಟಾರ್ ಚಿತ್ರಗಳು ಮುಂಜಾನೆ ಶೋ ಕಾಣುವುದು ಹೊಸದೇನೂ ಅಲ್ಲ. ಆದರೆ, ಈ ಬಾರಿ ನಟಸಾರ್ವಭೌಮನ ಮ್ಯಾಜಿಕ್ ಮಧ್ಯರಾತ್ರಿಯಿಂದಲೇ ಶುರುವಾಗಲಿದೆ. ಊರ್ವಶಿ ಚಿತ್ರಮಂದಿರದಲ್ಲಿ ಅಭಿಮಾನಿಯೊಬ್ಬ ಮುಂಜಾನೆ 4 ಗಂಟೆ ಶೋಗೆ ಇಡೀ ಥಿಯೇಟರ್ ಬುಕ್ ಮಾಡಿದ್ದ. ಆದರೆ ಆತನ ಶೋಗಿಂತಲೂ ಮೊದಲೇ ನಟ್ಟ ನಡುರಾತ್ರಿಯಲ್ಲಿಯೇ ನಟಸಾರ್ವಭೌಮ ಪ್ರದರ್ಶನ ಶುರುವಾಗಲಿದೆ.

    ಸಂಜಯ್ ನಗರದ ವೈಭವ್ ಚಿತ್ರಮಂದಿರದಲ್ಲಿ - ಬೆಳಗ್ಗೆ 4 ಗಂಟೆಗೆ ಶಾರದಾ, ಚಂದ್ರೋದಯ, ಬಾಲಾಜಿ ಥಿಯೇಟರ್‍ಗಳಲ್ಲಿ - ಬೆಳಗ್ಗೆ 6 ಗಂಟೆಗೆ ಮಂಗಳೂರಿನಲ್ಲಿ - ಬೆಳಗ್ಗೆ 7 ಗಂಟೆಗೆ

    ಊರ್ವಶಿ ಚಿತ್ರಮಂದಿರ - ಬೆಳಗ್ಗೆ 4 ಗಂಟೆಗೆ ಪ್ರದರ್ಶನ ಫಿಕ್ಸ್ ಆಗಿದೆ. ಆದರೆ, ಅಚ್ಚರಿಯೆಂದರೆ, ಕೆಲವೊಂದು ಥಿಯೇಟರು ಮಧ್ಯರಾತ್ರಿ 12 ಗಂಟೆಗೇ ಶೋ ಶುರು ಮಾಡುವ ಸುಳಿವು ಕೊಟ್ಟಿವೆ. ಅಭಿಮಾನಿಗಳಿಂದ ಬೇಡಿಕೆಯಿದ್ದು, ಮಧ್ಯರಾತ್ರಿಯೇ ರಿಲೀಸ್ ಶೋ ಕೊಡುವುದಕ್ಕೆ ಮುಂದಾಗಿವೆ. ಬಿಬಿಎಂಪಿ ಅನುಮತಿ ಸಿಕ್ಕ ಮೇಲೆ ಥಿಯೇಟರುಗಳು ಟೈಮಿಂಗ್ಸ್ ಪ್ರಕಟಿಸಲಿವೆ.

  • ನಿಮ್ಮ ಊರಿಗೂ ಬರ್ತಾರೆ.. ನಟಸಾರ್ವಭೌಮ..

    natasarvabhouma team will soon travel across karnataka

    ನಟಸಾರ್ವಭೌಮ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಏಕಕಾಲದಲ್ಲಿ 550 ಶೋ ಪ್ರದರ್ಶನಗಳ ಮೂಲಕ ನಟಸಾರ್ವಭೌಮ ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದಾನೆ. ಮೊದಲೇ ಯೋಜಿಸಿದಂತೆ ಚಿತ್ರತಂಡ ನಾಳೆಯಿಂದ ರಾಜ್ಯಾದ್ಯಂತ ಪ್ರವಾಸ ಹೊರಟಿದೆ.

    ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಹೋಗಿ, ಅಭಿಮಾನಿಗಳೊಂದಿಗೆ ಸಿನಿಮಾ ನೋಡುವ ಪ್ಲಾನ್ ಮಾಡಿದೆ ಚಿತ್ರತಂಡ. ನಾಳೆಯಿಂದ ವಿದೇಶಗಳಲ್ಲೂ ರಿಲೀಸ್ ಆಗುತ್ತಿರುವ ನಟಸಾರ್ವಭೌಮ, ಅಮೆರಿಕದಲ್ಲಿ 46 ಸ್ಕ್ರೀನ್‍ಗಳಲ್ಲಿ ರಿಲೀಸ್ ಮಾಡುತ್ತಿದೆ. ಇದೇ ಮೊದಲ ಬಾರಿಗೆ ರಷ್ಯಾದಲ್ಲೂ ರಿಲೀಸ್ ಆಗುತ್ತಿರುವ ನಟಸಾರ್ವಭೌಮ, ಚೀನಿ ಭಾಷೆಗೆ ಡಬ್ ಆಗುತ್ತಿದೆ. 

    ಒಟ್ಟಿನಲ್ಲಿ ನಟಸಾರ್ವಭೌಮನಿಗೆ ಪ್ರೇಕ್ಷಕ ಶರಣಾಗಿ ಹೋಗಿದ್ದಾನೆ.

  • ನಿಮ್ಮ ಊರಿಗೇ ಬರ್ತಾನೆ ನಟಸಾರ್ವಭೌಮ. ಟೈಂ ತಿಳ್ಕೊಳಿ

    natasarvabhouma is coming to your city

    ನಟಸಾರ್ವಭೌಮ ಸೂಪರ್ ಸಕ್ಸಸ್ ಖುಷಿಯನ್ನು ಅಭಿಮಾನಿ ದೇವರೊಂದಿಗೆ ಹಂಚಿಕೊಳ್ಳಲು ಹೊರಟಿದ್ದಾರೆ ಪುನೀತ್ ರಾಜ್‍ಕುಮಾರ್. ಈಗಾಗಲೇ ಬೆಂಗಳೂರು, ಮಂಡ್ಯ, ಮೈಸೂರು, ರಾಮನಗರ ಯಾತ್ರೆ ಪೂರೈಸಿರುವ ಅಪ್ಪು, ಈ ಬಾರಿ ಉತ್ತರ ಕರ್ನಾಟಕ ಯಾತ್ರೆಗೆ ಹೊರಟಿದ್ದಾರೆ. ಮಾರ್ಚ್ 3ರಂದು ಭಾನುವಾರ ಪುನೀತ್ ಅಭಿಮಾನಿಗಳ ಜೊತೆಯಲ್ಲಿರ್ತಾರೆ.

    ಮಾರ್ಚ್ 3 : ಭಾನುವಾರ

    ಬೆಳಗ್ಗೆ 10ಕ್ಕೆ - ಹಾವೇರಿ

    ಬೆಳಗ್ಗೆ 11.30 - ರಾಣೆಬೆನ್ನೂರು

    ಮಧ್ಯಾಹ್ನ 1ಕ್ಕೆ - ದಾವಣಗೆರೆ

    ಮಧ್ಯಾಹ್ನ 2.30 - ಚಿತ್ರದುರ್ಗ

    ಮಧ್ಯಾಹ್ನ 3.30 - ಹಿರಿಯೂರು

    ಸಂಜೆ 4.30 - ಶಿರಾ 

    ಸಂಜೆ 5.30 - ತುಮಕೂರು

    ಈಗ ರೆಡಿಯಾಗಬೇಕಿರೋದು ನೀವು. ನಟಸಾರ್ವಭೌಮನನ್ನು ಕಣ್ತುಂಬಿಕೊಂಡ ಅಭಿಮಾನಿಗಳು, ಈಗ ರಿಯಲ್ಲಾಗಿಯೇ ಪುನೀತ್ ಜೊತೆ ಕೈ ಕುಲುಕಬಹುದು.