` award function, - chitraloka.com | Kannada Movie News, Reviews | Image

award function,

 • ಅಜ್ಜಿ ಸೀರೆಯ ಅಲಂಕಾರದಲ್ಲಿ ರಶ್ಮಿಕಾ

  rakshith shetty, rashmika image

  ರಶ್ಮಿಕಾ ಮಂದಣ್ಣ. ಕೊಡಗಿನ ಕುವರಿ. ಕಿರಿಕ್ ಸುಂದರಿ. ಈ ಚೆಲುವೆ ಮಾಡರ್ನ್ ಸೀರೆ ತೊಟ್ಟರೂ ಚೆಂದ. ಸಂಪ್ರದಾಯಿಕ ಸೀರೆಯುಟ್ಟರೂ ಚೆಂದ. ಇಂತಹ ರಶ್ಮಿಕಾ ಇತ್ತೀಚೆಗೆ ಒಂದು ಸೀರೆಯುಟ್ಟು ಬಂದಿದ್ದರು. ಝೀ ಕನ್ನಡದ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಸ್ವೀಕರಿಸೋಕೆ ಬಂದಿದ್ದ ರಶ್ಮಿಕಾ ಅವರ ಸೀರೆ ಎಲ್ಲರ ಗಮನ ಸೆಳೆದಿತ್ತು. 

  ಅಪ್ಟಟ ಕೊಡವರಂತೆಯೇ ಸೀರೆಯುಟ್ಟು ಬಂದಿದ್ದ ರಶ್ಮಿಕಾ, ಆ ಸೀರೆಯ ಕಥೆ ಹೇಳಿದ್ದಾರೆ. ಆ ಸೀರೆ ಈಗಿನ ಕಾಲದ್ದಲ್ಲ. ಆ ಸೀರೆಗೆ 61 ವರ್ಷಗಳ ಇತಿಹಾಸವಿದೆ. ಆ ಸೀರೆಯನ್ನು ಉಡುತ್ತಿದ್ದವರು ರಶ್ಮಿಕಾ ಅವರ ಅಜ್ಜಿ. ಅವರು ಅವರ ಮದುವೆಯಲ್ಲಿ ಉಟ್ಟುಕೊಂಡಿದ್ದ ಆ ಸೀರೆಯನ್ನು ರಶ್ಮಿಕಾ ಅವರ ತಾಯಿಗೆ ಕೊಟ್ಟಿದ್ದರಂತೆ. ಈಗ ಅದೇ ಸೀರೆ ರಶ್ಮಿಕಾಗೆ ಬಂದಿದೆ. 

  `ನೀನು ತುಂಬಾ ಎತ್ತರಕ್ಕೆ ಹೋಗುತ್ತೀಯಾ' ಎಂದು ಅಜ್ಜಿ ಹೇಳುತ್ತಿದ್ದರಂತೆ. ನಾನು ಹೆಚ್ಚಾಗಿ ಬೆಳೆದದ್ದು ಅಜ್ಜಿಯ ಬಳಿಯಲ್ಲೇ. ಅಜ್ಜಿ ನನ್ನನ್ನು ಬಿಟ್ಟು ಹೋದಾಗ ನಾನು ತುಂಬಾ ಕೋಪಗೊಂಡಿದ್ದೆ. ಈಗ ಅವರ ಸೀರೆಯಲ್ಲಿ ಈ ಪ್ರಶಸ್ತಿ ಸ್ವೀಕರಿಸಿರುವುದು ಏನೋ ಒಂದು ಸಮಾಧಾನ. ಅವರು ಅಲ್ಲಿಂದಲೇ ನೋಡಿ ಹೆಮ್ಮೆಪಟ್ಟುಕೊಳ್ಳುತ್ತಿರಬಹುದು ಎಂದು ಭಾವುಕರಾಗಿ ಹೇಳಿಕೊಂಡಿದ್ದಾರೆ ರಶ್ಮಿಕಾ.

 • ಡಾ.ರಾಜ್‍ಕುಮಾರ್ ಸೌಹಾರ್ದ ಪ್ರಶಸ್ತಿ ಪ್ರದಾನ

  rajkumar sau harda awards

  ಪಾರ್ವತಮ್ಮ ರಾಜ್‍ಕುಮಾರ್ ಅವರ ಅನಾರೋಗ್ಯ, ನಿಧನದ ಹಿನ್ನೆಲೆಯಲ್ಲಿ ಘೋಷಣೆಯಾಗಿದ್ದರೂ ಪ್ರದಾನವಾಗದೇ ಇದ್ದ ಡಾ.ರಾಜ್‍ಕುಮಾರ್ ಸೌಹಾರ್ದ ಪ್ರಶಸ್ತಿಯನ್ನು ಡಾ.ರಾಜ್‍ಕುಮಾರ್ ಟ್ರಸ್ಟ್ ಪ್ರದಾನ ಮಾಡಿದೆ. 

  2016ನೇ ಸಾಲಿನಲ್ಲಿ - ಜಯಂತಿ, ವಿಜಯ್ ರೆಡ್ಡಿ, ರಾಜನ್ ನಾಗೇಂದ್ರ, 2017ನೇ ಸಾಲಿನ ಲೋಕನಾಥ್, ಶಿವಶಂಕರ್, ರಾಜೇಶ್ ಹಾಗೂ 2018ನೇ ಸಾಲಿನಲ್ಲಿ ಬಿ.ಜಯಾ, ಎಂ.ಎಸ್.ಉಮೇಶ್ ಹಾಗೂ ಎಸ್.ಮನೋಹರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

  ಪುನೀತ್ ರಾಜ್‍ಕುಮಾರ್ ಹಾಗೂ ರಾಘವೇಂದ್ರ ರಾಜ್‍ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರಶಸ್ತಿ ಪುರಸ್ಕøತರನ್ನು ಗೌರವಿಸಿದರು.

I Love You Movie Gallery

Rightbanner02_butterfly_inside

One Way Movie Gallery