` nischika naidu, - chitraloka.com | Kannada Movie News, Reviews | Image

nischika naidu,

 • Amma I Love You Review - Chitraloka Rating 4/5

  amma i love you review

  What happens when a very rich person has to hide his identity and become a beggar for 48 days? A person who never had any reason to ask anyone for anything has to beg for food and sustain himself. This story based on a real incident is beautifully made into a film by KM Chaitanya. The real incident is about a man who became a beggar for six months for the sake of his mother. In the film, the hero has to become a beggar for 48 days but it is still a task filled with dangers and humiliation. Does he succeed and save his mother? Watch the film for this feel good film. 

  Chiranjeevi Sarja is Siddu aka Siddartha, the only son of a rich business woman who runs two textile factories. He returns to India after studying abroad and is to take over the charge of running the business. But in a freak accident, his mother goes into coma and does not recover even after being given treatment by the best doctors money can buy. 

  A monk tells Siddu that his mother will recover if he becomes a beggar for 48 days. He has to beg and make money and eat food with that. Then he has to donate all the money to a temple the following morning and start with zero. Siddu accepts the challenge. But there are so many problems he has to face for that. 

  While he has become a beggar in a twist of fate a girl falls in love with him. But what will she do when she realises he is a beggar? There are also villains trying to hunt him down. In the meantime his uncle is also trying to grab his property. All these elements run in a concurrent manner in the screenplay which is full of lively scenes and witty dialogues providing wholesome entertainment. This is a film for the entire family. There is drama, there is emotions, there is romance and of course there is very good comedy. 

  Behind the scenes there is very good work by the cinematographer. Shekar Chandru has done some excellent cinematography. Vishwa as editor is perfect. Gurukiran composes some haunting tunes and sets the mood for the film in a way only he can. 

  There is also very good performances by Chiru, Sithara, Nishvika Naidu, Chikkanna, Prakash Belawadi, Sathya, Ravi Kale, Karisubbu and other actors. Each element of the film like drama, comedy and romance have their good points. Amma I Love You is a perfect film for the entire family to visit the theatres. 

  Chitraloka Rating - 4/5

 • ಅಮ್ಮ ಐ ಲವ್ ಯು ಸಿಕ್ಕಿದ್ದು ನನ್ನ ಅದೃಷ್ಟ - ನಿಶ್ವಿಕಾ

  amma i love you heroine nischvika naidu

  ಅಮ್ಮ ಐ ಲವ್ ಯೂ.. ಮುಂದಿನ ವಾರ ರಿಲೀಸ್ ಆಗುತ್ತಿರುವ ಈ ಚಿತ್ರದಲ್ಲಿ ಹೀರೋ ಚಿರಂಜೀವಿ ಸರ್ಜಾ. ನಾಯಕಿ ನಿಶ್ವಿಕಾ ನಾಯ್ಡು. ತಾಯಿಯ ಪಾತ್ರದಲ್ಲಿ ನಟಿಸಿರೋದು ನಿಶ್ವಿಕಾ ನಾಯ್ಡು. ಚಿತ್ರದಲ್ಲಿ ನಿಶ್ವಿಕಾ ಅವರದ್ದು ಬೋಲ್ಡ್ & ಬ್ಯೂಟಿಫುಲ್ ಪಾತ್ರ. 

  ವಾಸು ನಾನ್ ಪಕ್ಕಾ ಕಮರ್ಷಿಯಲ್ ಚಿತ್ರದಲ್ಲಿ ನಟಿಸುತ್ತಿರುವಾಗಲೇ ಅಮ್ಮ ಐ ಲವ್ ಯು ಚಿತ್ರದ ಅಡಿಷನ್‍ಗೆ ಹೋಗಿದ್ದರಂತೆ ನಿಶ್ವಿಕಾ. ಆಯ್ಕೆಯಾಗುವವರೆಗೆ ಪಾತ್ರದ ಬಗ್ಗೆ ಗೊತ್ತಿರಲಿಲ್ಲ. ನನ್ನ ವೃತ್ತಿ ಜೀವನಕ್ಕೆ ಅಮ್ಮ ಐ ಲವ್ ಯು ಒಳ್ಳೆಯ ಓಪನಿಂಗ್ ಎಂದಿದ್ದಾರೆ ನಿಶ್ವಿಕಾ.

  ತಾಯಿ, ಮಗನ ಬಾಂಧವ್ಯವೇ ಪ್ರಧಾನವಾಗಿರುವ ಚಿತ್ರದಲ್ಲಿ ನಾಯಕಿಗೂ ಒಳ್ಳೆಯ ಪಾತ್ರವಿದೆ. ಚೈತನ್ಯ ನಿರ್ದೇಶನದ ಸಿನಿಮಾಗೆ ಯೋಗಿ ದ್ವಾರಕೀಶ್ ನಿರ್ಮಾಪಕ.

 • ಅಮ್ಮನಿಗಾಗಿ ಭಿಕ್ಷುಕನಾಗುವ ಮಗನ ಕಥೆ

  amma i love you highlights the love and sentiment of mother and son

  ಅಮ್ಮ ಐ ಲವ್ ಯೂ ಇದೇ ವಾರ ರಿಲೀಸ್ ಆಗುತ್ತಿದೆ. ಹೆಸರು ಹೇಳುವಂತೆ ಇದು ತಾಯಿ, ಮಗನ ಬಾಂಧವ್ಯದ ಚಿತ್ರ. ಈ ಹಿಂದೆ ತಾಯಿ ಪ್ರೀತಿ ಸಾರುವ ನೂರಾರು ಸಿನಿಮಾಗಳು ಬಂದಿರಬಹುದು. ಆದರೆ, ಈ ಚಿತ್ರ ಮಾತ್ರ ಈ ಹಿಂದಿನ ಯಾವ ತಾಯಿ ಸೆಂಟಿಮೆಂಟ್ ಚಿತ್ರಗಳಿಗೂ ಹೋಲಿಕೆ ಆಗೋದಿಲ್ಲ. ಆ ಕಾರಣಕ್ಕಾಗಿಯೇ ರೀಮೇಕ್ ಆದರೂ, ಈ ಚಿತ್ರವನ್ನು ತೋರಿಸಲೇಬೇಕೆಂದು ಹೊರಟಿದೆ ದ್ವಾರಕೀಶ್ ಪ್ರೊಡಕ್ಷನ್ಸ್. ಏಕೆಂದರೆ, ಇದು ತಮಿಳಿನ ಪಿಚ್ಚೈಕಾರನ್ ಚಿತ್ರದ ರೀಮೇಕ್.

  ಅಪಘಾತದಲ್ಲಿ ಗಾಯಗೊಂಡು ಕೋಮಾದಲ್ಲಿರುವ ತಾಯಿ, ಚಿಕಿತ್ಸೆಗೆ ಸ್ಪಂದಿಸದೇ ಹೋದಾಗ, ಸ್ವಾಮೀಜಿಯೊಬ್ಬರ ಬಳಿ ಪರಿಹಾರ ಹುಡುಕಿಕೊಂಡು ಹೋಗುತ್ತಾನೆ ಮಗ. ಆಗ ಆ ಸ್ವಾಮೀಜಿ, 48 ದಿನಗಳ ಕಾಲ, ಭಿಕ್ಷುಕನಾಗಿ ಬದುಕಿದರೆ ತಾಯಿ ಬದುಕುತ್ತಾಳೆ ಎನ್ನುತ್ತಾರೆ. ಆದರೆ, ಅದು ಯಾರಿಗೂ ಗೊತ್ತಾಗುವಂತಿಲ್ಲ ಎಂದು ಷರತ್ತು ವಿಧಿಸುತ್ತಾರೆ. ಕೋಟ್ಯಧಿಪತಿಯಾಗಿದ್ದರೂ, ತಾಯಿಗಾಗಿ ಎಲ್ಲವನ್ನೂ ಬಿಟ್ಟು ಭಿಕ್ಷುಕನಾಗುತ್ತಾನೆ ನಾಯಕ. ಆಮೇಲೆ ಏನಾಗುತ್ತೆ..?

  ತಾಯಿಯನ್ನು ಪ್ರೀತಿಯಿಂದ ನೋಡಕೊಳ್ಳುತ್ತಿರುವ ಮಕ್ಕಳು, ತಾಯಿಯನ್ನು ಕಸಕ್ಕಿಂತಲೂ ಕಡೆಯದಾಗಿ ನೋಡಿಕೊಳ್ಳುತ್ತಿರುವ ದ್ರೋಹಿಗಳು, ತಾಯಿಯನ್ನು ಕಳೆದುಕೊಂಡು ಕಣ್ಣೀರಿಡುತ್ತಿರುವ ಮಕ್ಕಳು, ತಾಯಿಯನ್ನೇ ಕಾಣದ ಅನಾಥರು..  ಹೀಗೆ ಪ್ರತಿಯೊಬ್ಬರ ಕಣ್ಣನ್ನೂ ಒದ್ದೆ ಮಾಡುವಂತ ಅದ್ಬುತ ಕತೆ, ಸಂದೇಶ ಸಿನಿಮಾದಲ್ಲಿದೆ.

  ಆ ದಿನಗಳು ಚೇತನ್ ನಿರ್ದೇಶನದ ಸಿನಿಮಾದಲ್ಲಿ ಕೋಟ್ಯಧಿಪತಿ, ಭಿಕ್ಷುಕನಾಗಿ ನಟಿಸಿರುವುದು ಚಿರಂಜೀವಿ ಸರ್ಜಾ. ಸಿತಾರಾ ತಾಯಿಗಾಗಿ ನಟಿಸಿದ್ದರೆ, ನಿಶ್ವಿಕಾ ನಾಯ್ಡು ನಾಯಕಿ. ಯೋಗಿ ದ್ವಾರಕೀಶ್ ನಿರ್ಮಾಣದ ಚಿತ್ರಕ್ಕೆ ಸಂಗೀತ ನೀಡಿರುವುದು ಗುರುಕಿರಣ್.

 • ಪಡ್ಡೆಹುಲಿಗೆ ಲೇಡಿ ಟೈಗರ್ ನಿಶ್ವಿಕಾ

  paddehuli gets his tigress

  ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ನಾಯಕರಾಗಿ ನಟಿಸುತ್ತಿರುವ ಪಡ್ಡೆಹುಲಿ ಚಿತ್ರ ನಿರೀಕ್ಷೆ ಮೂಡಿಸುತ್ತಿದೆ. ಶ್ರೇಯಸ್ ಅವರ ವಿಭಿನ್ನ ಸ್ಟಂಟ್‍ಗಳು, ಚಿತ್ರದ ಫಸ್ಟ್‍ಲುಕ್‍ನ್ನು ಸುದೀಪ್ ಬಿಡುಗಡೆ ಮಾಡಿದ್ದು.. ಹೀಗೆ ಹಲವು ಕಾರಣಗಳ ಮೂಲಕ ಪಡ್ಡೆಹುಲಿ ನಿರೀಕ್ಷೆ ಹುಟ್ಟಿಸಿದೆ. ಆದರೆ, ಪಡ್ಡೆಹುಲಿಗೆ ನಾಯಕಿ ಯಾರು ಎಂಬ ಕುತೂಹಲಕ್ಕೆ ಉತ್ತರ ಸಿಕ್ಕಿರಲಿಲ್ಲ. ಈಗ ಆ ಪ್ರಶ್ನೆಗೂ ಉತ್ತರ ಸಿಕ್ಕಿದೆ.

  `ವಾಸು.. ನಾನ್ ಪಕ್ಕಾ ಲೋಕಲ್' ಹಾಗೂ `ಅಮ್ಮ ಐ ಲವ್ ಯೂ' ಚಿತ್ರದ ನಾಯಕಿ ನಿಶ್ವಿಕಾ ನಾಯ್ಡು, ಪಡ್ಡೆಹುಲಿ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಮೊದಲ ಎರಡೂ ಚಿತ್ರಗಳು ಬಿಡುಗಡೆಯಾಗುವ ಮುನ್ನವೇ 3ನೇ ಚಿತ್ರಕ್ಕೆ ಆಯ್ಕೆಯಾಗಿರುವುದು ನಿಶ್ವಿಕಾ ಅದೃಷ್ಟವೆಂದೇ ಹೇಳಬೇಕು.

  ಇದೊಂದು ಪಕ್ಕಾ ಕಾಲೇಜ್ & ಮ್ಯೂಸಿಕಲ್ ಸಿನಿಮಾ. ಯಂಗ್ ಜನರೇಷನ್ ಸ್ಟೋರಿ. ನನ್ನ ಮೊದಲೆರಡು ಚಿತ್ರಗಳ ಲುಕ್ ನೋಡಿ, ಅಡಿಷನ್‍ಗೆ ಕರೆದಿದ್ದರು. ಅಲ್ಲಿ ನಿರ್ದೇಶಕ ಗುರು ದೇಶಪಾಂಡೆ ನನ್ನನ್ನು ಓಕೆ ಮಾಡಿದರು ಎಂದು ಹೇಳಿಕೊಂಡಿದ್ದಾರೆ ನಿಶ್ವಿಕಾ. ಎಂ.ರಮೇಶ್ ರೆಡ್ಡಿ ನಿರ್ಮಾಣದ ಚಿತ್ರ ಅದ್ದೂರಿಯಾಗಿ ಸಿದ್ಧವಾಗುತ್ತಿದೆ.