` katheyondhu shuruvagidhe, - chitraloka.com | Kannada Movie News, Reviews | Image

katheyondhu shuruvagidhe,

 • ಮೊಟ್ಟೆ ಹುಡುಗಿಯ ಕಥೆಯೊಂದು ಶುರುವಾಗಿದೆ

  shreya anchan talks about katheyondhu shuruvagidhe

  ಕಥೆಯೊಂದು ಶುರುವಾಗಿದೆ ಚಿತ್ರದಲ್ಲಿ ಶ್ರೇಯಾ ಅಂಚನ್ ಎಂಬ ಚೆಲುವೆ ರಿಸೆಪ್ಷನಿಸ್ಟ್ ಆಗಿದ್ದಾರೆ. ದಿಗಂತ್ ಮಾಲೀಕತ್ವದ ರೆಸಾರ್ಟ್‍ಗೆ ಅವರೇ ರಿಸೆಪ್ಷನಿಸ್ಟ್. ನೋಡೋಕೆ ಬ್ಯೂಟಿಫುಲ್ ಹುಡುಗಿ. ಹುಡುಗರು ಬೀಳದೇ ಇರ್ತಾರಾ..? ಹಾಗೆ ಬೆನ್ನು ಬಿದ್ದ ಹುಡುಗನಿಗೆ ಈ ಶ್ರೇಯಾ ಅಂಚನ್ ಏನ್ ಹೇಳ್ತಾರೆ..? ಅವರನ್ನ ಹೇಗೆ ಮ್ಯಾನೇಜ್ ಮಾಡ್ತಾರೆ..? ತಿಳಿದುಕೊಳ್ಳೋ ಕುತೂಹಲ ಇದ್ಯಾ..? ಕಥೆಯೊಂದು ಶುರುವಾಗಿದೆ ಸಿನಿಮಾ ನೋಡಿ.

  ಶ್ರೇಯಾ ಅಂಚನ್ ಯಾರು ಗೊತ್ತಲ್ಲ, ಒಂದು ಮೊಟ್ಟೆಯ ಕಥೆ ಚಿತ್ರದಲ್ಲಿನಟಿಸಿದ್ದ ಚೆಲುವೆ. ಕಥೆಯೊಂದು ಶುರುವಾಗಿದೆ ನನ್ನ ವೃತ್ತಿ ಬದುಕಿನಲ್ಲಿ ವಿಶೇಷ ಚಿತ್ರ. ನಿರ್ದೇಶಕ ಸೆನ್ನಾ, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಚಿತ್ರದುದ್ದಕ್ಕೂ ನನಗೆ ನೀಡಿದ ಸಪೋರ್ಟ್‍ನ್ನು ಮರೆಯೋಕೆ ಸಾಧ್ಯವೇ ಇಲ್ಲ ಎಂದು ಹೇಳಿಕೊಂಡಿದ್ದಾರೆ ಶ್ರೇಯಾ. ಚಿತ್ರದಲ್ಲಿ ಶ್ರೇಯಾ ಅವರ ಪಾತ್ರದ ಹೆಸರು ಸ್ವರ್ಣ.

 • ರೆಸಾರ್ಟ್‍ನಲ್ಲಿ ಅವನು.. ಅವಳು.. ಕಥೆಯೊಂದು ಶುರುವಾದಾಗ..

  katheyondhu shuruvagidhe is a special love story

  ಅವನೊಬ್ಬ ರೆಸಾರ್ಟ್ ಮಾಲೀಕ. ಅವಳು ಆ ರೆಸಾರ್ಟ್‍ಗೆ ಬರುವ ಅತಿಥಿ. ಅವರಿಬ್ಬರ ಮಧ್ಯೆ ಗೆಳೆತನ ಚಿಗುರೊಡೆದು, ಪ್ರೀತಿ ಶುರುವಾಗುತ್ತೆ. ಕಥೆಯೊಂದು ಶುರುವಾಗುವುದು ಹೀಗೆ... ಇಲ್ಲಿ ರೆಸಾರ್ಟ್ ಮಾಲೀಕ ದಿಗಂತ್. ಅತಿಥಿ ಪೂಜಾ. 

  ಏಕಾಂತ ಅರಸಿ ರೆಸಾರ್ಟ್‍ಗೆ ಬರುವ ನಾಯಕಿ, ತನ್ನದೇ ಕನಸುಗಳನ್ನು ಕೊಟ್ಟಿಕೊಂಡಿರುವ ನಾಯಕನ ಮಧ್ಯೆ ಕಥೆಯೊಂದು ಶುರು ಮಾಡಿರುವುದು ನಿರ್ದೇಶಕ ಸನ್ನಾ. 

  ಏನಾದರೂ ಮಾಡಿ, ಇವರಿಬ್ಬರ ಮಧ್ಯೆ ಚೆಂದದ ಲವ್ ಸ್ಟೋರಿ ಶುರು ಮಾಡಿಸಿ ಎಂದು ಹೇಳಿದ್ದವರು ಪರಂವಾ ಸ್ಟುಡಿಯೋಸ್‍ನ ರಕ್ಷಿತ್ ಶೆಟ್ಟಿ ಮತ್ತು ಪುಷ್ಕರ್ ಮಲ್ಲಿಕಾರ್ಜುನಯ್ಯ. ಕಥೆಯೊಂದು ಶುರುವಾಗಿದೆ ಚಿತ್ರದ ಟ್ರೇಲರ್.. ಅಷ್ಟೇ ವಿಭಿನ್ನವಾಗಿ ಗಮನ ಸೆಳೆಯುತ್ತಿದೆ. 

 • ವಿದೇಶದಲ್ಲಿ ದಾಖಲೆ ಬರೆಯಲು ಹೊರಟ ಕಥೆಯೊಂದು ಶುರುವಾಗಿದೆ..

  katheyondhu shuruvagidhe to premiere overseas first

  ಕಥೆಯೊಂದು ಶುರುವಾಗಿದೆ... ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವುದು ಆಗಸ್ಟ್ 3ರಂದು. ಆಗಸ್ಟ್ 2ರಂದು ಬೆಂಗಳೂರಿನ ಮಾಲ್‍ವೊಂದರಲ್ಲಿ ನಾಲ್ಕು ವಯೋಮಾನದ ಅದೃಷ್ಟವಂತ ಪ್ರೇಮಿಗಳಿಗಾಗಿ ಪ್ರೀಮಿಯರ್ ಶೋ ಆಯೋಜಿಸಿದೆ. ಅದಕ್ಕಾಗಿ ವಿಶೇಷ ಸ್ಪರ್ಧೆಯೊಂದನ್ನೂ ಹಮ್ಮಿಕೊಂಡಿರುವ ಚಿತ್ರತಂಡ, ಈಗ ಇನ್ನೊಂದು ದಾಖಲೆ ಮಾಡಲು ಹೊರಟಿದೆ. ಅದು ವಿದೇಶದಲ್ಲಿ.

  ಜುಲೈ 27 ಹಾಗೂ 28ರಂದು ಯೂರೋಪ್, ಅಮೆರಿಕ, ಆಸ್ಟ್ರೇಲಿಯ, ಸಿಂಗಾಪುರ್, ಬ್ರಿಟನ್, ಮಲೇಷ್ಯಾಗಳಲ್ಲಿ ಚಿತ್ರದ ಪ್ರೀಮಿಯರ್ ಶೋ ಆಯೋಜಿಸಿದೆ. ಮೊದಲು ಭಾರತದಲ್ಲಿ ಬಿಡುಗಡೆ ಮಾಡಿ, ನಂತರ ವಿದೇಶಕ್ಕೆ ಹೋಗಲು ಯೋಜಿಸಿದ್ದ ಚಿತ್ರತಂಡ, ನಂತರ ಅದನ್ನೇ ಉಲ್ಟಾ ಮಾಡಿದೆ. ವಿದೇಶದಿಂದಲೇ ಸಿನಿಮಾ ಅಭಿಯಾನ ಆರಂಭಿಸಿದೆ. ಇದು ಕನ್ನಡಕ್ಕೆ ಹೊಸದು ಹಾಗೂ ವಿಭಿನ್ನ ಪ್ರಯತ್ನ. ಇದು ಯಶಸ್ವಿಯಾದರೆ, ಕನ್ನಡ ಚಿತ್ರರಂಗದ ಮಾರುಕಟ್ಟೆ ಹಿಗ್ಗಲಿದೆ ಎಂದು ಬೇರೆ ಹೇಳಬೇಕಿಲ್ಲ.

  ಇದು ಸನ್ನಾ ಹೆಗಡೆ ನಿರ್ದೇಶನದ ಮೊದಲ ಸಿನಿಮಾ. ರಕ್ಷಿತ್ ಶೆಟ್ಟಿ, ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಸಿನಿಮಾದಲ್ಲಿ ದಿಗಂತ್ ಹೀರೋ, ಪೂಜಾ ದೇವರಿಯಾ ನಾಯಕಿ. ವಿಭಿನ್ನ ವಯೋಮಾನದವರ ಪ್ರೇಮ ಕಥೆ ಹೇಳುವ ಸಿನಿಮಾ, ಬಿಡುಗಡೆಗೆ ಸಿದ್ಧಗೊಂಡಿದೆ.