ಶಿವರಾಜ್‍ಕುಮಾರ್ ಅಭಿನಯದ ರುಸ್ತುಂ ಸಿನಿಮಾ ರಿಲೀಸ್ ಆಗಿದೆ. ಶಿವಣ್ಣನ ಜೊತೆ ಶ್ರದ್ಧಾ ಶ್ರೀನಾಥ್, ವಿವೇಕ್ ಒಬೇರಾಯ್, ರಚಿತಾ ರಾಮ್, ಮಯೂರಿ ನಟಿಸಿರುವ ಚಿತ್ರ ಬಾಕ್ಸಾಫೀಸ್‍ನಲ್ಲಿ ಭರ್ಜರಿ ಸದ್ದು ಮಾಡ್ತಿದೆ. ಸಾಮಾನ್ಯವಾಗಿ ತಮ್ಮ ನಿರ್ಮಾಣದ ಯಾವುದೇ ಸಿನಿಮಾಗಳನ್ನು ನೋಡದ ಜಯಣ್ಣ, ಈ ಚಿತ್ರವನ್ನು ಮಾತ್ರ ರಿಲೀಸ್‍ಗೂ ಮೊದಲೇ ನೋಡಿದ್ದಾರೆ. ಅಷ್ಟೇ ಅಲ್ಲ, ಕುಟುಂಬದವರೊಂದಿಗೆ ಇನ್ನೊಮ್ಮೆ ನೋಡುವ ಆಸೆ ತೋಡಿಕೊಂಡಿದ್ದಾರೆ.
ಕಾರಣ ಇಷ್ಟೆ, ರುಸ್ತುಂ ಕಲೆಕ್ಷನ್ ಭರ್ಜರಿಯಾಗಿದೆ. ಫೋನ್ ಮಾಡಿದವರು ಪ್ರಾಮಾಣಿಕ ಪೊಲೀಸ್ ಅಧಿಕಾರಿಯ ಕುಟುಂಬದಲ್ಲಿ ನಡೆಯುವ ಸಮಸ್ಯೆಗಳನ್ನು ಚೆನ್ನಾಗಿ ತೋರಿಸಿದ್ದೀರಿ ಎಂದಿದ್ದಾರಂತೆ.
ಇದೆಲ್ಲದರ ನಡುವೆ ಸಿನಿಮಾವನ್ನು ಇಡೀ ಇಂಡಿಯಾದಲ್ಲಿ ಡಬ್ ಮಾಡಿ ರಿಲೀಸ್ ಮಾಡೋಕೆ ಜಯಣ್ಣ ರೆಡಿಯಾಗುತ್ತಿದ್ದಾರೆ. ಡಬ್ಬಿಂಗ್ ರೈಟ್ಸ್‍ಗೆ ಒಳ್ಳೆಯ ಡಿಮ್ಯಾಂಡ್ ಕೂಡಾ ಇದೆ. ಏಕೆಂದರೆ, ವಿವೇಕ್ ಒಬೇರಾಯ್‍ಗೆ ಹಿಂದಿಯಲ್ಲಿ, ಶ್ರದ್ಧಾ ಶ್ರೀನಾಥ್‍ಗೆ ತಮಿಳಿನಲ್ಲಿ ಬೇಡಿಕೆ ಇದೆ. ಜೊತೆಗೆ ಚಿತ್ರದಲ್ಲಿ ಬಿಹಾರದ ಕಥೆ ಇದೆ. ಈ ಎಲ್ಲದರ ಜೊತೆಗೆ ಚಿತ್ರದ ನಿರ್ದೇಶಕ ರವಿವರ್ಮ, ಬಾಲಿವುಡ್‍ನಲ್ಲಿ ಚಿರಪರಿಚಿತವಾದ ಹೆಸರು. ಇವೆಲ್ಲವೂ ಚಿತ್ರಕ್ಕೆ ಪ್ಲಸ್ ಆದರೆ, ರುಸ್ತುಂ, ಹಿಂದಿ, ತಮಿಳು, ತೆಲುಗಿನಲ್ಲೂ ಭರ್ಜರಿ ಸದ್ದು ಮಾಡಲಿದೆ.