` rustum, - chitraloka.com | Kannada Movie News, Reviews | Image

rustum,

 • 'Rustom' Trailer This Sunday

  rustum trailer on april 14th

  The first trailer of Shivarajakumar starrer 'Rustom' is all set to be released on Sunday the 14th of April. The trailer will be released through the You Tube channel of Anand Audio at 8.45 in the morning.

  The shooting for 'Rustom' is complete and the film is in the post-production stage. The team is gearing up to release the film in the month of May.

  'Rustom' stars Shivarajakumar, Shraddha Srinath, Mayuri, Vivek Oberoi and others in prominent roles. Mahendra Simha is the cinematographer, while Anup Seelin is the music director.  The film is being produced by Jayanna under Jayanna Combines banner.

 • 'Rustum' Trailer Released

  rustum trailer released

  The trailer of Shivarajakumar starrer 'Rustom' is was released through the You Tube channel of Anand Audio at 8.45 today morning. Shivarajakumar's dialogue, 'arrest means allergy, encounter means energy' has become a huge hit among the viewers. With seven hours of the trailer being uploaded, the trailer has witnessed more than 2.5 lakh views 

  The shooting for 'Rustom' is complete and the film is in the post-production stage. The team is gearing up to release the film in the month of May.

  'Rustom' stars Shivarajakumar, Shraddha Srinath, Mayuri, Vivek Oberoi and others in prominent roles. Mahendra Simha is the cinematographer, while Anup Seelin is the music director.  The film is being produced by Jayanna under Jayanna Combines banner.

 • It's Century Star vs Real Star On June 14th

  its century star vs real star

  Shivarajakumar and Upendra are all set to clash at the box-office in this June. The release date of Shivarajakumar's new film 'Rustom' and Upendra's 'I Love You' has been announced and both the films are set to release on the 14th of June.

  The post production of 'Rustom' is almost complete and the makers have decided to release the film across Karnataka on the 14th of June. The film marks the debut of Ravi Verma as a director. 'Rustom' stars Shivarajakumar, Shraddha Srinath, Mayuri, Vivek Oberoi and others in prominent roles.

  'I Love You' was censored recently with an 'U/A' certificate. Now director-producer R Chandru has decided to release the film on the 14th of June. Dr Kiran Thotambyle is the music director of the film.

  'I Love You's is being written and directed by R Chandru. Apart from direction, Chandru is also producing the film. Sugnan is the cameraman. The film stars Upendra, Rachita Ram, Sonu Gowda, Bramhanandam, Sayyaji Shinde, Ravi Kaale and others in prominent roles.

 • Rachita Is Vivek Oberoi's Pair In 'Rustom'

  rachitha in rustum as vivek's pair

  Well known Bollywood actor Vivek Oberoi making debut with Shivarajakumar starrer 'Rustom' is not a new news. Vivek plays a prominent role in the film and actress Rachita Ram has been roped in to pair opposite him.

  'Rustom' is being produced by Jayanna Combines banner. Well known stunt master Ravi Verma has turned director with this film. The shooting for the film is in progress and Vivek Oberoi along with Rachita Ram will be joining the sets in the month of August.

  The film stars Shivarajakumar, Shraddha Srinath, Mayuri, Vivek Oberoi, Rachita Ram, Shivamani and others in prominent roles. Mahendra Simha is the cinematographer, while Anup Seelin is the music director.

 • Shivanna's Rustum By Ravi Verma On April 24

  shivarajkumar's rustum by ravi verma

  Shivanna's next film Rustum to be directed by stunt master Ravi Verma in his directorial debut is set to begin on Dr Rajkumar's birthday on April 24. The film is being made under the Jayanna-Bhogendra Combines.

  Slowly the technicians of the film are being finalized. Naveen Kumar who made an impact with Mufti is the cinematographer while Anoop Seelin is the music composer.

  Though the Muharat for the film will be done on April 24 the actual shooting will start a month later as Shivanna has to complete his pending projects like The Villain, Kavacha and SRK.

 • Shivarajakumar's 'Rustom' Launched

  shivarajkumar's rustom launched

  Shivarajakumar's new film 'Rustom' which is being directed by choreographer turned director Raviverma was launched in Bangalore on Tuesday morning.

  Meanwhile, the first look of the film has been released and has sported a moustache for his role.

  'Rustom' is being produced by Jayanna Combines banner and this is Shivarajakumar's third film for the same production company after 'Bangara - S/O Bangarada Manushya' and 'Mufti'. The film stars Shivarajakumar, Shraddha Srinath, Mayuri and others in prominent roles. Mahendra Simha is the cinematographer, while Anup Seelin is the music director.

 • Vivek Oberoi To Act In 'Rustom'

  vivek oberoi in rustum

  Well known Bollywood actor Vivek Oberoi is all set to make his debut with Shivarajakumar starrer 'Rustom'. Vivek plays a prominent role in the film and will be joining the sets of the film from August first week.

  'Rustom' is being produced by Jayanna Combines banner and this is Shivarajakumar's third film for the same production company after 'Bangara - S/O Bangarada Manushya' and 'Mufti'. Well known stunt master Ravi Verma has turned director with this film. 

  The film stars Shivarajakumar, Shraddha Srinath, Mayuri and others in prominent roles. Mahendra Simha is the cinematographer, while Anup Seelin is the music director.

   

 • ಏನ್ ಖದರ್ ಗುರು.. ಭಲೇ ರುಸ್ತುಂ..!

  rustum trailer creates magic

  ಹುರಿಗಟ್ಟಿದ ಮೀಸೆ, ಕಟ್ಟುಮಸ್ತಾದ ದೇಹ, ಕಣ್ಣಿನಲ್ಲೇ ಬೆಂಕಿ, ಆಗಾಗ್ಗೆ ಕೈಲಿ ಪ್ರತ್ಯಕ್ಷವಾಗುವ ಲಾಂಗು, ರಿವಾಲ್ವರು, ಬೆಂಕಿ ಡೈಲಾಗು, ಒಂದಿಷ್ಟು ಪ್ರೀತಿ, ಕಣ್ಣೀರು, ವಿಲನ್ನುಗಳ ಅಬ್ಬರ.. ಇದಿಷ್ಟೂ ಸೇರಿದರೆ ರುಸ್ತುಂ.

  ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ ಮೊದಲ ಚಿತ್ರ ರುಸ್ತುಂ, ಪ್ರೇಕ್ಷಕರನ್ನು ಶಿಳ್ಳೆ ಹೊಡೆಯುವಂತೆ ಮಾಡಿದೆ. ಅದರಲ್ಲೂ `ತುಂಬಾ ದಿನದ ಹಿಂದೇನೇ ರೌಡಿಸಂನ ಕಾಂಟ್ರ್ಯಾಕ್ಟ್ ತೆಗೆದುಕೊಂಡಿದ್ದೀನಿ' `ಅರೆಸ್ಟ್ ಅಂದ್ರೆ ಅಲರ್ಜಿ, ಎನ್‍ಕೌಂಟರ್ ಅಂದ್ರೆ ಎನರ್ಜಿ' ಎಂಬ ಡೈಲಾಗುಗಳು ಶಿಳ್ಳೆ ಹೊಡೆಸುತ್ತವೆ.

  ಶಿವಣ್ಣನಿಗೆ ಶ್ರದ್ಧಾ ಶ್ರೀನಾಥ್ ಜೋಡಿಯಾಗಿದ್ದರೆ, ಮಯೂರಿ ತಂಗಿ. ವಿವೇಕ್ ಒಬೆರಾಯ್‍ಗೆ ರಚಿತಾ ರಾಮ್ ಜೊತೆಗಾತಿ. ಅಣ್ಣನ ಖಡಕ್ ಲುಕ್ಕಿಗೆ ಫಿದಾ ಅಗಿರುವುದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್.

 • ಕನ್ನಡ ಕಲಿಯುತ್ತಿದ್ದಾರೆ ವಿವೇಕ್ ಒಬೇರಾಯ್

  vivek oberoir to dub in kannada for his role in rustom

  ಬಾಲಿವುಡ್ ಸ್ಟಾರ್ ನಟ ವಿವೇಕ್ ಒಬೇರಾಯ್ ಕನ್ನಡ ಕಲಿಯುತ್ತಿದ್ದಾರೆ. ಹೇಳಿ ಕೇಳಿ ಕರ್ನಾಟಕದ ಅಳಿಯ. ಕನ್ನಡ ಕಲಿಯೋದ್ರಲ್ಲೇನು ವಿಶೇಷ ಅಂತೀರೇನೋ..  ಅವರು ಕನ್ನಡ ಕಲಿಯುತ್ತಿರೋದು ರುಸ್ತುಂ ಚಿತ್ರಕ್ಕಾಗಿ. ನಿಮಗೆಲ್ಲ ಗೊತ್ತಿರೋ ಹಾಗೆ ರುಸ್ತುಂನಲ್ಲಿ ವಿವೇಕ್ ಒಬೇರಾಯ್ ಪ್ರಧಾನ ಪಾತ್ರ ಮಾಡುತ್ತಿದ್ದಾರೆ. ವಿವೇಕ್ ಒಬೇರಾಯ್‍ಗೆ ರುಸ್ತುಂ ಜೋಡಿಯಾಗಿರೋದು ರಚಿತಾ ರಾಮ್.

  ಶಿವಣ್ಣ-ಶ್ರದ್ಧಾ ಶ್ರೀನಾಥ್ ಅಭಿನಯದ ಈ ಚಿತ್ರದಲ್ಲಿ ವಿವೇಕ್ ಒಬೇರಾಯ್ ಅವರದ್ದು ಪುಟ್ಟ ಆದರೆ, ಪ್ರಮುಖ ಪಾತ್ರ. ಹೀಗಾಗಿ ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಲು ಮುಂದಾಗಿದ್ದಾರಂತೆ ವಿವೇಕ್ ಒಬೇರಾಯ್.

  ರವಿವರ್ಮ ನಿರ್ದೇಶನದ ಚೊಚ್ಚಲ ಚಿತ್ರಕ್ಕೆ ಜಯಣ್ಣ-ಭೋಗೇಂದ್ರ ನಿರ್ಮಾಪಕರು. ವಿವೇಕ್ ಒಬೇರಾಯ್ ಕನ್ನಡದಲ್ಲಿ.. ಸ್ವತಃ ತಾವೇ ಡಬ್ ಮಾಡುತ್ತೇನೆ ಎಂದಿರುವುದನ್ನು ಕೇಳಿ ಚಿತ್ರತಂಡ ಖುಷಿಯಾಗಿದೆ.

 • ಕವಚದ ಬೆನ್ನತ್ತಿಕೊಂಡೇ ಬರ್ತಾನೆ ರುಸ್ತುಂ

  rustum trailer on april 14th

  ಶಿವರಾಜ್‍ಕುಮಾರ್ ಅಭಿನಯದ ಕವಚ ಚಿತ್ರ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿರುವಾಗಲೇ, ಅವರ ಮತ್ತೊಂದು ಸಿನಿಮಾ ರಿಲೀಸ್ ಆಗೋಕೆ ತುದಿಗಾಲಲ್ಲಿ ನಿಂತಿದೆ. ಶಿವರಾಜ್‍ಕುಮಾರ್ ಖಡಕ್ ಇನ್ಸ್‍ಪೆಕ್ಟರ್ ಆಗಿ ನಟಿಸಿರುವ, ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ ಮೊದಲ ಸಿನಿಮಾ ರುಸ್ತುಂ ಚಿತ್ರದ ಟ್ರೇಲರ್ 

  ಏಪ್ರಿಲ್ 14ಕ್ಕೆ ಹೊರಬೀಳಲಿದೆ.

  ಕವಚ ರಿಲೀಸ್ ಹಿಂದೆಯೇ ರುಸ್ತುಂ ಬೇಕಿತ್ತಾ..? ಟೈಂ ಗ್ಯಾಪ್ ಕಡಿಮೆ ಆಯ್ತಲ್ವಾ ಅಂದ್ರೆ, ನಿರ್ದೇಶಕ ರವಿವರ್ಮ ಹೇಳೋದೇ ಬೇರೆ. ಕವಚ ಚಿತ್ರವೇ ಬೇರೆ. ನಮ್ಮ ಸಿನಿಮಾವೇ ಬೇರೆ. ಇದು ಪಕ್ಕಾ ಮಾಸ್ ಸಿನಿಮಾ. ಕವಚ ಕೌಟುಂಬಿಕ ಸಿನಿಮಾ. ರುಸ್ತುಂ ಜಾನರೇ ಬೇರೆ ಅಂತಾರೆ ರವಿವರ್ಮ.

  ಇಷ್ಟೆಲ್ಲ ಆಗಿ ಸಿನಿಮಾ ರಿಲೀಸ್ ಆಗುವುದು ಮೇ ತಿಂಗಳ ಕೊನೆಗೆ. ಹೀಗಾಗಿ ಹಲವು ವಾರಗಳ ಗ್ಯಾಪ್ ಸಿಗಲಿದೆ ಎನ್ನುವುದು ರವಿವರ್ಮ ಭರವಸೆ. ಶಿವಣ್ಣನಿಗೆ ಚಿತ್ರದಲ್ಲಿ ಜೋಡಿಯಾಗಿರೋದು ಶ್ರದ್ಧಾ ಶ್ರೀನಾಥ್. ವಿವೇಕ್ ಒಬೇರಾಯ್, ರಚಿತಾ ರಾಮ್, ಮಯೂರಿ ಪ್ರಮುಖ ಪಾತ್ರದಲ್ಲಿದ್ದಾರೆ. 

 • ಕುಣಿದು ಕುಪ್ಪಳಿಸೋ ಹಾಗಿದೆ ಪೊಲೀಸ್ ಬೇಬಿ ಹಾಡು

  police baby song goes viral

  ಇತ್ತೀಚೆಗೆ ತಮಿಳಿನ ರೌಡಿ ಬೇಬಿ ಹಾಡು ದೊಡ್ಡ ಮಟ್ಟಿಗೆ ಸದ್ದು ಮಾಡಿತ್ತು. ಪ್ರಭುದೇವ ಕೊರಿಯೋಗ್ರಫಿ ಮಾಡಿದ್ದ ಹಾಡಿಗೆ ಧನುಷ್ ಮತ್ತು ಸಾಯಿಪಲ್ಲವಿಯ ಡ್ಯಾನ್ಸ್ ಹುಚ್ಚೆಬ್ಬಿಸುವಂತಿತ್ತು. ಅದಕ್ಕೆ ಸಡ್ಡು ಹೊಡೆಯುವಂತಹ ಹಾಡೊಂದು ಕನ್ನಡದಲ್ಲಿಯೇ ಬಂದಿದೆ. ರುಸ್ತುಂ ಚಿತ್ರದಲ್ಲಿ.

  ಯೂ ಆರ್ ಮೈ ಪೊಲೀಸ್ ಬೇಬಿ ಅನ್ನೋ ಹಾಡು ರುಸ್ತುಂ ಚಿತ್ರದ್ದು. ಕುಣಿದಿರೋದು ಶಿವರಾಜ್‍ಕುಮಾರ್ ಮತ್ತು ಶ್ರದ್ಧಾ ಶ್ರೀನಾಥ್. ಆ ಹಾಡಿನ ನೆರಳಾಗಲೀ, ಡ್ಯಾನ್ಸ್‍ನ ನೆರಳಾಗಲೀ ಈ ಹಾಡಿನಲ್ಲಿಲ್ಲ. ಆದರೆ ಕುಣಿತ ಬೊಂಬಾಟ್ ಆಗಿದೆ ಅನ್ನೋ ಸಿಗ್ನಲ್ಲನ್ನಂತೂ ಕೊಟ್ಟಿದೆ.

  ಎ.ಪಿ.ಅರ್ಜುನ್ ಬರೆದಿರುವ ಹಾಡಿಗೆ ರಘು ದೀಕ್ಷಿತ್, ಅಪೂರ್ವ ಶ್ರೀಧರ್ ಧ್ವನಿ ನೀಡಿದ್ದಾರೆ. ಇಮ್ರಾನ್ ಸರ್ದಾರಿಯಾ ಕೊರಿಯೋಗ್ರಫಿ, ಅನೂಪ್ ಸೀಳಿನ್ ಅವರ ಸಂಗೀತದ ಕಿಕ್ಕನ್ನು ಹೆಚ್ಚಿಸುವ ಹಾಗಿದೆ. ಅಂದಹಾಗೆ ಇದು ಇಂಡಿಯಾದ ನಂಬರ್  1 ಸ್ಟಂಟ್ ಮಾಸ್ಟರ್ ರವಿವರ್ಮ ನಿರ್ದೇಶನದ ಮೊದಲ ಚಿತ್ರ ರುಸ್ತುಂ.

 • ಜೂನ್ 14ಕ್ಕೆ ರುಸ್ತುಂ

  rustum release date fixed

  ಶಿವರಾಜ್‍ಕುಮಾರ್, ಶ್ರದ್ಧಾ ಶ್ರೀನಾಥ್, ವಿವೇಕ್ ಒಬೇರಾಯ್, ರಚಿತಾ ರಾಮ್, ಮಯೂರಿ ಅಭಿನಯದ ರುಸ್ತುಂ ಚಿತ್ರ ರಿಲೀಸ್‍ಗೆ ಡೇಟ್ ಫಿಕ್ಸ್ ಆಗಿದೆ. ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ ಚೊಚ್ಚಲ ಚಿತ್ರವಿದು. ಜಯಣ್ಣ ಬ್ಯಾನರ್‍ನ ಸಿನಿಮಾ ಜೂನ್ 14ಕ್ಕೆ ತೆರೆಗೆ ಬರಲಿದೆ.

  ಶಿವಣ್ಣ ಅಳ್ತಾರೆ, ನಗಿಸ್ತಾರೆ. ತಂಗಿ ಸೆಂಟಿಮೆಂಟ್ ಇದೆ. ಬೊಂಬಾಟ್ ಡ್ಯಾನ್ಸ್ ಇದೆ. ಭರ್ಜರಿ ಸ್ಟಂಟ್ ಇದೆ. ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್‍ಟೈನರ್ ಅನ್ನೋ ಭರವಸೆ ಕೊಡ್ತಾರೆ ನಿರ್ದೇಶಕ ರವಿವರ್ಮ. 

 • ದೇವತಾಮನುಷ್ಯ, ರುಸ್ತುಂ ಚಿತ್ರಗಳಿಗೆ ಮುಹೂರ್ತ

  puneeth shivanna's new movie launched today

  ಡಾ.ರಾಜ್‍ಕುಮಾರ್ ಹುಟ್ಟುಹಬ್ಬ, ಕನ್ನಡಿಗರ ಪಾಲಿಗೆ ಹಬ್ಬ. ಈ ವಿಶೇಷ ಹಬ್ಬದ ದಿನ ಅಣ್ಣಾವ್ರ ಮಕ್ಕಳ ಚಿತ್ರ ಸೆಟ್ಟೇರದಿದ್ದರೆ ಹೇಗೆ..? ಈ ಬಾರಿಯೂ ಶಿವರಾಜ್‍ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್ ಅಭಿನಯದ ಚಿತ್ರಗಳು ಸೆಟ್ಟೇರುತ್ತಿವೆ.

  ಸಂತೋಷ್ ಆನಂದ್‍ರಾಮ್ ನಿರ್ದೇಶನದ ದೇವತಾಮನುಷ್ಯ ಚಿತ್ರಕ್ಕೆ ಇಂದು ಮುಹೂರ್ತ. ಅಂದಹಾಗೆ ದೇವತಾಮನುಷ್ಯ ಅನ್ನೋ ಟೈಟಲ್ ಇನ್ನೂ ಫೈನಲ್ ಆಗಿಲ್ಲ. ಅದೇ ಟೈಟಲ್‍ನ್ನು ಚಿತ್ರಕ್ಕೆ ಇಡಬಹುದು ಎಂಬ ನಿರೀಕ್ಷೆ ಇದೆ.

  ಇನ್ನು ಶಿವರಾಜ್‍ಕುಮಾರ್ ಅಭಿನಯದ ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ ರುಸ್ತುಂ ಚಿತ್ರಕ್ಕೂ ರಾಜ್ ಹುಟ್ಟುಹಬ್ಬದ ದಿನವೇ ಮುಹೂರ್ತ. ಶ್ರದ್ಧಾ ಶ್ರೀನಾಥ್, ಶಿವರಾಜ್‍ಕುಮಾರ್‍ಗೆ ನಾಯಕಿ. ಮಯೂರಿ, ಶಿವಣ್ಣನ ತಂಗಿಯಾಗಿ ನಟಿಸುತ್ತಿದ್ದಾರೆ.

 • ಮೀಸೆ ಬಿಟ್ಟ ಶಿವಣ್ಣ..!

  shivarajkumar's mustache atracts fans

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೊಸ ಸಿನಿಮಾ ರುಸ್ತುಂ ಮುಹೂರ್ತ ಆಚರಿಸಿಕೊಂಡಿದೆ. ಈ ವೇಳೆ ಎಲ್ಲರ ಗಮನ ಸೆಳೆದಿರುವುದು ಶಿವರಾಜ್ ಕುಮಾರ್ ಅವರ ಮೀಸೆ. ಖಡಕ್ ಪೊಲೀಸ್ ಆಫೀಸರ್ ಪಾತ್ರ ಮಾಡ್ತಿರೋ ಶಿವರಾಜ್ ಕುಮಾರ್, ಮೀಸೆ ಬಿಟ್ಟು ಗನ್ ಹಿಡಿದಿದ್ದಾರೆ.

  ಶಿವರಾಜ್‍ಕುಮಾರ್ ತಮ್ಮ ವೃತ್ತಿ ಜೀವನದಲ್ಲಿಯೇ ಮೊದಲ ಬಾರಿಗೆ ಮೀಸೆಯಲ್ಲಿ ಕಾಣಿಸಿಕೊಂಡಿದ್ದು ಶಿವ ಮೆಚ್ಚಿದ ಕಣ್ಣಪ್ಪ ಚಿತ್ರದಲ್ಲಿ. ಅದಾದ ನಂತರ ಮೀಸೆಯನ್ನೇ ವಸ್ತುವಾಗಿಸಿಕೊಂಡಿದ್ದ ಆಸೆಗೊಬ್ಬ ಮೀಸೆಗೊಬ್ಬ ಚಿತ್ರದಲ್ಲಿ ಮೀಸೆ ಅಂಟಿಸಿಕೊಂಡೇ ನಗಿಸಿದ್ದರು ಶಿವರಾಜ್‍ಕುಮಾರ್. ಅದಾದ ಮೇಲೆ ಗಡಿಬಿಡಿ ಅಳಿಯ ಚಿತ್ರದಲ್ಲಿಯೂ ಸ್ವಲ್ಪ ಭಾಗ ಮೀಸೆ ಇತ್ತು. 

  ಗಂಡುಗಲಿ ಕುಮಾರರಾಮ, ಗಂಧದ ಗುಡಿ-ಭಾಗ 2ರಲ್ಲಿ ಶಿವರಾಜ್‍ಕುಮಾರ್ ಲುಕ್ಕಿಗೆ ಮೀಸೆ ಹೊಸ ಖದರ್ ಕೊಟ್ಟಿತ್ತು. ಇತ್ತೀಚೆಗೆ ಪ್ರತಿ ಚಿತ್ರದಲ್ಲೂ ವಿಭಿನ್ನವಾಗಿ ವಿಶಿಷ್ಟವಾಗಿ ಕಾಣಿಸಿಕೊಳ್ಳುತ್ತಿರುವ ಶಿವರಾಜ್‍ಕುಮಾರ್, ಮೀಸೆಯಿಂದಾಗಿಯ ಏ ಸದ್ದು ಮಾಡ್ತಿದ್ದಾರೆ.

  ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ ಮೊದಲ ಸಿನಿಮಾ ರುಸ್ತುಂ. ನೀವು ಇದುವರೆಗೂ ನೋಡಿರುವ ಶಿವರಾಜ್‍ಕುಮಾರ್ ಬೇರೆ.. ಈ ಚಿತ್ರದಲ್ಲಿ ಕಾಣಿಸಿಕೊಳ್ಳುವ ಶಿವರಾಜ್‍ಕುಮಾರ್ ಬೇರೆ ಎಂದಿರುವ ರವಿವರ್ಮ, ಚಿತ್ರದ ಶೂಟಿಂಗ್ ಶುರುವಾಗುವ ಮುನ್ನವೇ ನಿರೀಕ್ಷೆ ಹೆಚ್ಚಿಸಿದ್ದಾರೆ.

 • ರಿಯಲ್ ಸ್ಟಾರ್ ವಸ ಸೆಂಚುರಿ ಸ್ಟಾರ್

  real star vs century star

  ಜೂನ್ 14, ಸ್ಯಾಂಡಲ್‍ವುಡ್ ಸ್ಟಾರ್‍ಗಳಿಬ್ಬರ ಮುಖಾಮುಖಿಗೆ ಸಾಕ್ಷಿಯಾಗಲಿದೆ. ಹೌದು, ಆ ದಿನ ಕನ್ನಡದ ಎರಡು ಬಹುನಿರೀಕ್ಷಿತ ಚಿತ್ರಗಳು ರಿಲೀಸ್ ಆಗುತ್ತಿವೆ. ಆಪ್ತಮಿತ್ರರಾಗಿರುವ ಉಪೇಂದ್ರ ಮತ್ತು ಶಿವರಾಜ್‍ಕುಮಾರ್, ಇಬ್ಬರ ಚಿತ್ರಗಳು ಕೂಡಾ ಒಂದೇ ದಿನ ತೆರೆಗೆ ಬರುತ್ತಿವೆ.

  ಶಿವಣ್ಣ ಅಭಿನಯದ ರುಸ್ತುಂ, ಅದೇ ದಿನ ತೆರೆಗೆ ಬರುತ್ತಿದೆ. ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶಕರಾಗಿರುವ ಚಿತ್ರದಲ್ಲಿ ವಿವೇಕ್ ಒಬೇರಾಯ್ ಕೂಡಾ ನಟಿಸಿದ್ದಾರೆ. ರಚಿತಾ ರಾಮ್, ಒಬೇರಾಯ್‍ಗೆ ಜೋಡಿಯಾದರೆ, ಶ್ರದ್ಧಾ ಶ್ರೀನಾಥ್ ಶಿವಣ್ಣನ ಜೋಡಿ. ಮಯೂರಿ, ಶಿವಣ್ಣನ ತಂಗಿ.

  ಅದೇ ದಿನ ಉಪೇಂದ್ರ ಅಭಿನಯದ ಐ ಲವ್ ಯೂ ರಿಲೀಸ್ ಆಗುತ್ತಿದೆ. ಆ ಚಿತ್ರಕ್ಕೆ ರಚಿತಾ ರಾಮ್ ಹೀರೋಯಿನ್. ಸೋನು ಗೌಡ ಕೂಡಾ ಪ್ರಧಾನ ಪಾತ್ರದಲ್ಲಿರುವ ಚಿತ್ರಕ್ಕೆ ಆರ್.ಚಂದ್ರು ನಿರ್ದೇಶಕ. 

 • ರುಸ್ತುಂ ಇನ್ನೂ ಫೈನಲ್ ಆಗಿಲ್ಲ - ಶ್ರದ್ಧಾ

  shraddha in rustum is not yest finalised

  ರುಸ್ತುಂ, ಶಿವರಾಜ್ ಕುಮಾರ್ ಅಭಿನಯದ ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ ಮೊದಲ ಚಿತ್ರ. ಆ ಚಿತ್ರಕ್ಕೆ ಶ್ರದ್ಧಾ ಶ್ರೀನಾಥ್ ನಾಯಕಿ ಎಂಬ ಸುದ್ದಿ ಹಲವು ಕಡೆ ಹರಿದಾಡುತ್ತಿದೆ. ಈ ಕುರಿತು ನಟಿ ಶ್ರದ್ಧಾ ಶ್ರೀನಾಥ್ ಸ್ಪಷ್ಟನೆ ಕೊಟ್ಟಿದ್ದಾರೆ.

  ನಾನಿನ್ನೂ ಸಿನಿಮಾ ಒಪ್ಪಿಕೊಂಡಿಲ್ಲ. ಯಾವುದೇ ಅಗ್ರಿಮೆಂಟ್‍ಗೆ ಸಹಿ ಹಾಕಿಲ್ಲ. ಸಹಿ ಹಾಕಿದ ನಂತರ ಕನ್‍ಫರ್ಮ್ ಮಾಡುತ್ತೇನೆ ಎಂದಿದ್ದಾರೆ ಶ್ರದ್ಧಾ. ಶ್ರದ್ಧಾ ಅವರ ಮಾತು ಕೇಳಿದರೆ, ಒಂದಂತೂ ಗೊತ್ತಾಗುತ್ತೆ. ಚಿತ್ರದ ಆಫರ್ ಶ್ರದ್ಧಾಗೆ ಹೋಗಿರುವುದಂತೂ ಸತ್ಯ.

 • ರುಸ್ತುಂ ಐಟಂ.. ಸಾಕ್ಷಿ ಸುಂದರಂ..

  sakshi choudry in rusutum's item song

  ರುಸ್ತುಂ. ಶಿವರಾಜ್‍ಕುಮಾರ್, ವಿವೇಕ್ ಒಬೇರಾಯ್, ಶ್ರದ್ಧಾ ಶ್ರೀನಾಥ್, ರಚಿತಾ ರಾಮ್, ಮಯೂರಿ ನಟಿಸುತ್ತಿರು ಸಿನಿಮಾ. ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ ಮೊದಲ ಸಿನಿಮಾ. ಈ ಸಿನಿಮಾಗೀಗ ಹೊಸ ಐಟಂ ಸೇರ್ಪಡೆಗೊಂಡಿದೆ.

  ತೆಲುಗಿನಲ್ಲಿ ಪೋತಗಾಡು, ಜೇಮ್ಸ್‍ಬಾಂಡ್ ಚಿತ್ರಗಳಲ್ಲಿ ನಟಿಸಿರುವ ಸಾಕ್ಷಿ ಚೌಧರಿ ಈ ಚಿತ್ರದ ಐಟಂ ಸಾಂಗ್‍ಗೆ ಹೆಜ್ಜೆ ಹಾಕಿದ್ದಾರೆ. ಈ ಹಾಡಿಗೆ ಕೊರಿಯೋಗ್ರಫಿ ಮಾಡಿರೋದು ರಾಜು ಸುಂದರಂ. ಅಪ್ಪಟ ಮಂಡ್ಯ ಸೊಗಡಿನ ಈ ಹಾಡಿಗೆ ಸಾಹಿತ್ಯ ಬರೆದಿರುವುದು ನಿರ್ದೇಶಕ ಎ.ಪಿ.ಅರ್ಜುನ್.

  ಮಂಡ್ಯ ಶೈಲಿಯ ಐಟಂ ಸಾಂಗ್ ಮುಗಿಸುವ ಮೂಲಕ ಶೇ.80ರಷ್ಟು ಚಿತ್ರೀಕರಣ ಮುಗಿಸಿದೆ ರುಸ್ತುಂ ಚಿತ್ರತಂಡ. ದೀಪಾವಳಿ ವೇಳೆಗೆ ಸಿನಿಮಾವ.

 • ರುಸ್ತುಂಗೆ ಡಿಂಪಲ್ ಕ್ವೀನ್

  rachitha ram joins rustum team

  ಶಿವರಾಜ್ ಕುಮಾರ್ ನಟಿಸುತ್ತಿರುವ, ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ ಮೊದಲ ಚಿತ್ರ ರುಸ್ತುಂ. ಶಿವಣ್ಣಂಗೆ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್ ಜೋಡಿ. ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಬಾಲಿವುಡ್ ನಟ ವಿವೇಕ್ ಒಬೇರಾಯ್ ಕೂಡಾ ನಟಿಸುತ್ತಿದ್ದಾರೆ. ಆ ವಿವೇಕ್ ಒಬೇರಾಯ್‍ಗೆ ಜೋಡಿಯಾಗ್ತಿರೋದು ರಚಿತಾ ರಾಮ್.

  ಬುಲ್ ಬುಲ್ ರಚಿತಾ ರಾಮ್ ಕೈತುಂಬಾ ಸಿನಿಮಾಗಳಿವೆ. ಅಯೋಗ್ಯ ಶೂಟಿಂಗ್ ಮುಗಿಸಿಕೊಂಡು ರಿಲೀಸ್‍ಗೆ ರೆಡಿಯಾಗಿದ್ದರೆ, ರಾಜಕುಮಾರ, ಸೀತಾರಾಮ ಕಲ್ಯಾಣ, ಐ ಲವ್ ಯೂ ಚಿತ್ರೀಕರಣದಲ್ಲಿವೆ. ಹೀಗಿರುವಾಗಲೇ ರುಸ್ತುಂ ಒಪ್ಪಿಕೊಂಡಿದ್ದಾರೆ ರಚಿತಾ.

  ಚಿತ್ರದಲ್ಲಿ ನನ್ನ ಪಾತ್ರ ತುಂಬಾನೇ ಸ್ಪೆಷಲ್. ಇಡೀ ಸಿನಿಮಾಗೆ ತಿರುವು ಕೊಡುವ ಪಾತ್ರ ನನ್ನದು. ಹೀಗಾಗಿ ಸಿನಿಮಾ ಒಪ್ಪಿಕೊಂಡೆ ಎಂದಿದ್ದಾರೆ ರಚಿತಾ ರಾಮ್.

 • ವಿವೇಕ್ ಒಬೇರಾಯ್ ಹೇಳಿದ ರುಸ್ತುಂ ಸ್ಟೋರಿ

  vivek oberoi feels happy about rustum team

  ರವಿವರ್ಮ ನಿರ್ದೇಶನದ ಚಿತ್ರದಲ್ಲಿ ಶಿವರಾಜ್‍ಕುಮಾರ್ ಹೀರೋ ಆಗಿ ನಟಿಸುತ್ತಿರುವುದು ಗೊತ್ತು. ಆ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಶಿವಣ್ಣ ಕಾಣಿಸಿಕೊಂಡಿದ್ದಾರೆ. ಶಿವರಾಜ್‍ಗೆ  ಶ್ರದ್ಧಾ ಶ್ರೀನಾಥ್ ನಾಯಕಿ. ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಬಾಲಿವುಡ್ ನಟ ವಿವೇಕ್ ಒಬೇರಾಯ್ ನಟಿಸಿದ್ದು, ಅವರಿಗೆ ರಚಿತಾ ರಾಮ್ ಜೋಡಿಯಾಗಿದ್ದಾರೆ. ಚಿತ್ರದ ಶೂಟಿಂಗ್ ಮುಗಿಸಿ ತೆರಳಿರುವ ವಿವೇಕ್ ಒಬೇರಾಯ್, ಚಿತ್ರದ ಅನುಭವ ಹಂಚಿಕೊಂಡಿದ್ದಾರೆ.

  ನಾನು ಚಿಕ್ಕ ಹುಡುಗನಾಗಿದ್ದಾಗಿನಿಂದ ಶಿವಣ್ಣರನ್ನು ಬಲ್ಲೆ. ಅವರನ್ನು ನೋಡಿಕೊಂಡೇ ಬೆಳೆದವನು ನಾನು. ಅವರ ಜೊತೆ ನಟಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಚಿತ್ರದಲ್ಲಿ ನನ್ನದು ಅತ್ಯಂತ ಪುಟ್ಟ ಪಾತ್ರವಾದರೂ, ಸಿಕ್ಕ ಅನುಭವ ಅದ್ಭುತವಾಗಿತ್ತು. ಸಾಹಸ ನಿರ್ದೇಶಕ ರವಿವರ್ಮ ಒಳ್ಳೆಯ ಸಿನಿಮಾ ಮಾಡುತ್ತಿದ್ದಾರೆ. ಅವರೆಲ್ಲರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನಗೆ ಸಿಕ್ಕ ದೊಡ್ಡ ಗೌರವ ಎಂದು ಹೇಳಿಕೊಂಡಿದ್ದಾರೆ ವಿವೇಕ್ ಒಬೇರಾಯ್. ಅಂದಹಾಗೆ ವಿವೇಕ್ ಒಬೇರಾಯ್, ಕರ್ನಾಟಕದ ಅಳಿಯ ಕೂಡಾ. ಅವರ ಪತ್ನಿ ಪ್ರಿಯಾಂಕಾ ಆಳ್ವಾ ಕನ್ನಡತಿ.

 • ವಿವೇಕ್ ಒಬೇರಾಯ್‍ಗೆ ಮೊದಲ ಆಫರ್ ಕೊಟ್ಟಿದ್ದವರೇ ಶಿವಣ್ಣ

  shivanna was the first to offer role to vivek oberoi for rustum

  ರುಸ್ತುಂ ಚಿತ್ರದಲ್ಲಿ ಶಿವಣ್ಣನ ಜೊತೆ ಬಾಲಿವುಡ್ ಸ್ಟಾರ್ ವಿವೇಕ್ ಒಬೇರಾಯ್ ಕೂಡಾ ನಟಿಸುತ್ತಿದ್ದಾರಷ್ಟೆ. ಕರ್ನಾಟಕದ ಅಳಿಯನಾಗಿದ್ದರೂ, ವಿವೇಕ್‍ಗೆ ಇದು ಮೊದಲ ಕನ್ನಡ ಸಿನಿಮಾ. ಎಲ್ಲರಿಗೂ ಗೊತ್ತಿರುವಂತೆ ಕಂಪೆನಿ, ವಿವೇಕ್ ಒಬೇರಾಯ್ ಅಭಿನದಯ ಮೊದಲ ಸಿನಿಮಾ. ರಾಮ್‍ಗೋಪಾಲ್ ವರ್ಮ ನಿರ್ದೇಶನದ ಚಿತ್ರದಲ್ಲಿ ವಿವೇಕ್ ಅವರಿಗೆ ಡಾನ್ ಪಾತ್ರ ಕೊಟ್ಟಿದ್ದರು. ಆದರೆ, ಅದಕ್ಕೂ ಮುನ್ನ ವಿವೇಕ್ ಕನ್ನಡ ಚಿತ್ರದಲ್ಲಿ ನಟಿಸಬೇಕಿತ್ತಂತೆ.

  ವಿವೇಕ್ ಒಬೇರಾಯ್ ಅವರಿಗೆ ಬೆಂಗಳೂರಿನಲ್ಲಿ ಹಲವು ಬಂಧುಗಳಿದ್ದಾರೆ. ಅವರ ಚಿಕ್ಕಮ್ಮನ ಮನೆಗೆ ಆಗಾಗ ಬರುತ್ತಿದ್ದರಂತೆ ವಿವೇಕ್. ವಿವೇಕ್ ಅವರ ಚಿಕ್ಕಮ್ಮನಿಗೆ, ಡಾ.ರಾಜ್ ಕುಟುಂಬದ ಜೊತೆ ಒಡನಾಟವಿತ್ತು. ಹೀಗೇ ಒಮ್ಮೆ ಬಂದಿದ್ದಾಗ, ಅದಾಗಲೇ ಸ್ಟಾರ್ ಆಗಿದ್ದ ಶಿವಣ್ಣ, ವಿವೇಕ್ ಒಬೇರಾಯ್‍ಗೆ ಸಿನಿಮಾ ಆಫರ್ ಕೊಟ್ಟಿದ್ದರಂತೆ. ನೋಡೋಕೆ ಸ್ಮಾರ್ಟ್ ಆಗಿದ್ದೀಯ, ನನ್ನ ಸಿನಿಮಾದಲ್ಲಿ ಒಂದೊಳ್ಳೆ ಪಾತ್ರವಿದೆ. ನನ್ನ ತಮ್ಮನ ಪಾತ್ರ, ನಟಿಸುತ್ತೀಯ ಎಂದು ಕೇಳಿದ್ದರಂತೆ.

  ಆದರೆ, ಆಗ ನಾನು ಇನ್ನೂ ಓದುತ್ತಿದ್ದೆ. ಅಮೆರಿಕದಲ್ಲಿ ಪಿಜಿ ಮಾಡಲು ಹೊರಟಿದ್ದೆ. ಹಾಗಾಗಿ ಕನ್ನಡದಲ್ಲಿ ನಟಿಸಲು ಆಗಲಿಲ್ಲ ಎಂದಿರುವ ವಿವೇಕ್, ರುಸ್ತುಂ ಚಿತ್ರವನ್ನು ಒಪ್ಪಿಕೊಳ್ಳಲು ಮೊದಲ ಕಾರಣವೇ ಶಿವಣ್ಣ ಎಂದಿದ್ದಾರೆ. ಇದು ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ ಮೊದಲ ಚಿತ್ರ. ಶಿವಣ್ಣನಿಗೆ ಶ್ರದ್ಧಾ ಶ್ರೀನಾಥ್ ಜೋಡಿಯಾಗಿದ್ದರೆ, ವಿವೇಕ ಒಬೇರಾಯ್‍ಗೆ ರಚಿತಾ ರಾಮ್ ಜೋಡಿ.

Gara Gallery

Rightbanner02_butterfly_inside

Paddehuli Movie Gallery