` padde huli, - chitraloka.com | Kannada Movie News, Reviews | Image

padde huli,

 • ಪಡ್ಡೆಹುಲಿಯ 5 ಕ್ಲಾಸಿಕ್ ಭಾವಗೀತೆಗಳು

  paddehuli has classic songs

  ಹೆಸರು ಪಡ್ಡೆಹುಲಿ. ಹೀರೋ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಮಂಜು. ಹೀರೋಯಿನ್, ನಿಶ್ವಿಕಾ ನಾಯ್ಡು. ಗುರು ದೇಶಪಾಂಡೆ ನಿರ್ದೇಶನದ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ. ಹೆಸರು ನೋಡಿದರೆ ಪಡ್ಡೆಹುಲಿ. ಆದರೆ, ಚಿತ್ರದಲ್ಲಿ ಕನ್ನಡದ ಖ್ಯಾತನಾಮಕ ಭಾವಗೀತೆಗಳೆಲ್ಲ ಇವೆ.

  ಬಿ.ಆರ್. ಲಕ್ಷ್ಮಣ್ ರಾವ್ ಅವರ `ಹೇಳಿ ಹೋಗು ಕಾರಣ...ಜಿ.ಪಿ.ರಾಜರತ್ನಂ ಅವರ `ಹೆಂಡ ಹೆಂಡ್ತಿ ಕನ್ನಡ ಪದಗೋಳ್ ಅಂದ್ರೆ ರತ್ನಂಗ್ ಪ್ರಾಣ...ಬಸವಣ್ಣನವರ ವಚನ `ಕಳಬೇಡ.. ಕೊಲಬೇಡ.. ಹುಸಿಯ ನುಡಿಯಲೂ ಬೇಡ..

  ಡಿ.ವಿ.ಗುಂಡಪ್ಪನವರ `ಬದುಕು ಜಟಕಾ ಬಂಡಿ.. ವಿಧಿ ಅದರ ಸಾಹೇಬ..ಕೆ.ಎಸ್. ನರಸಿಂಹ ಸ್ವಾಮಿಯವರ `ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ..

  ಭಾವಗೀತೆಗಳಿಗೆ ಸಂಗೀತ ಸಂಯೋಜಿಸಿದ್ದಾರೆ ಅಜನೀಶ್. ಈ ಹಾಡುಗಳು ಪಡ್ಡೆಹುಲಿ ಎಂಬ ಹೆಸರಿನ ಪಕ್ಕಾ ಕಮರ್ಷಿಯಲ್ ಚಿತ್ರದಲ್ಲಿ ಬಂದಿದ್ದು ಏಕೆ..? ಅದೇ ಚಿತ್ರದ ಕಥೆ ಅಂತಾರೆ ಗುರು ದೇಶಪಾಂಡೆ. ಸಿನಿಮಾ ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ಪ್ರತ್ಯಕ್ಷವಾಗಲಿದೆ.

 • ಪಡ್ಡೆಹುಲಿಯ ವಿಕಟ ಕವಿ ಇವರೇ ಕಣ್ರಪ್ಪಾ

  yogaraj bhat is philosopher to paddehuli

  ಪಡ್ಡೆಹುಲಿ ಟ್ರೇಲರ್ ನೋಡಿದವರಿಗೆ ಅರೆ.. ಇದೇನೋ.. ಯೋಗರಾಜ್ ಭಟ್ಟರ ಧ್ವನಿ ಇದ್ದ ಹಾಗಿದೆಯಲ್ಲ ಎನ್ನಿಸಿದ್ದರೆ ಖಂಡಿತಾ ಆಶ್ಚರ್ಯವಿಲ್ಲ. ಮಧ್ಯೆ ಮಧ್ಯೆ ಒಂದಿಷ್ಟು ವೇದಾಂತದ ಮಾತುಗಳು, ಉಡಾಫೆ ಎಂಬ ಮಸಾಲೆಯ ಜೊತೆ ಹದವಾಗಿ ಬೆರೆಸಿದಂತೆ ಕಿವಿಗೆ ಕೇಳಿಸಿರುವುದೂ ಸುಳ್ಳಲ್ಲ. ಅದು ಸುಳ್ಳೇನಲ್ಲ.. ಯೋಗರಾಜ್ ಭಟ್ಟರು ಇರೋದು ಸತ್ಯ.

  ಗುರು ದೇಶಪಾಂಡೆ ನಿರ್ದೇಶನದ ಪಡ್ಡೆಹುಲಿಯಲ್ಲಿ ಭಟ್ಟರು ವಿಕಟ ಕವಿ. ಅದೊಂದು ವಿಶೇಷವಾದ ಪಾತ್ರ. ಕ್ಲಬ್‍ನಲ್ಲಿಯೇ ಇರುವ ಭಟ್ಟರ ಪಾತ್ರ, ನಾಯಕನಿಗೆ ಹಾಡು, ಸಂಗೀತದ ಬಗ್ಗೆ ತಮ್ಮದೇ ಸ್ಟೈಲಿನಲ್ಲಿ ಕಿವಿ ಮಾತು ಹೇಳುತ್ತೆ. ಅರ್ಥಾತ್.. ಭಟ್ಟರ ಫಿಲಾಸಫಿ ತೆರೆಯ ಮೇಲೂ ಮುಂದುವರಿಯುತ್ತೆ.

  ಕೆ.ಮಂಜು ಪುತ್ರ ಶ್ರೇಯಸ್‍ಗೆ ಗುರು, ನಿರ್ದೇಶಕ ಗುರುದೇಶಪಾಂಡೆಯವರೇ ಆದರೂ, ತೆರೆಯ ಮೇಲೆ ಭಟ್ಟರೂ ಪಾಠ ಹೇಳ್ತಾರೆ. ರಮೇಶ್ ರೆಡ್ಡಿ ನುಂಗ್ಲಿ ನಿರ್ಮಾಣದ ಚಿತ್ರದಲ್ಲಿ ರವಿಚಂದ್ರನ್, ಸುಧಾರಾಣಿ, ಪುನೀತ್, ರಕ್ಷಿತ್ ಶೆಟ್ಟಿ ಮೊದಲಾದ ತಾರೆಯರ ದಂಡೇ ಇದೆ.

 • ಪಡ್ಡೆಹುಲಿಯ ವಿಷ್ಣು ಪ್ರೇಮ

  paddehli vishnu rap song

  ಪಡ್ಡೆಹುಲಿ. ವಿಷ್ಣುವರ್ಧನ್ ಅವರನ್ನು ಗುರು ಎಂದೇ ಸ್ವೀಕರಿಸಿರುವ ಕೆ.ಮಂಜು ಅವರ ಮಗ ಶ್ರೇಯಸ್ ಅಬಿನಯದ ಮೊದಲ ಸಿನಿಮಾ. ಗುರುದೇಶಪಾಂಡೆ ನಿರ್ದೇಶನದ ಪಡ್ಡೆಹುಲಿ ಚಿತ್ರತಂಡ, ವಿಷ್ಣು ಹುಟ್ಟುಹಬ್ಬಕ್ಕೆ ವಿಶೇಷ ರ್ಯಾಪ್ ಸಾಂಗ್ ರಿಲೀಸ್ ಮಾಡುತ್ತಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದಲ್ಲಿ ಚಾಮುಂಡಿ ತಾಯಿ ಮಡಿಲಲ್ಲಿ ಹುಟ್ಟಿ, ದುರ್ಗದ ಕೋಟೆಯಲ್ಲಿ ಬೆಳಕು ಕಂಡ ವಿಷ್ಣು ಚಿತ್ರಣವಿದೆ.

  ಸಿನಿಮಾದಲ್ಲಿ ಹೀರೋ ವಿಷ್ಣುವರ್ಧನ್ ಅಭಿಮಾನಿ. ನಾಯಕ ಗುರಿ ಮುಟ್ಟುವುದಕ್ಕೆ ನಾಗರಹಾವು ಸಿನಿಮಾ ಸ್ಫೂರ್ತಿಯಾಗುತ್ತೆ. ಚಿತ್ರದ ಕಥೆ ಶುರುವಾಗುವುದೇ ಚಿತ್ರದುರ್ಗದ ಕೋಟೆಯಿಂದ ಎಂದು ಕಥೆಯ ಒಂದಿಷ್ಟು ಎಳೆ ಬಿಟ್ಟುಕೊಟ್ಟಿದ್ದಾರೆ ಗುರು ದೇಶಪಾಂಡೆ.

  ನನಗೆ ವಿಷ್ಣು ಸರ್ ಗುರುಗಳು. ನನ್ನ ಬದುಕಿನ ಬಹುದೊಡ್ಡ ತಿರುವು, ಯಶಸ್ಸಿಗೆ ವಿಷ್ಣು ಸರ್ ಕಾರಣ. ಹೀಗಾಗಿ ನನ್ನ ಮಗನ ಮೊದಲ ಸಿನಿಮಾ ವಿಷ್ಣು ಸರ್ ಆಶೀರ್ವಾದ ಬೇಕು. ಅವರಿಗೆ ನಮನ ಸಲ್ಲಿಸಲಿಕ್ಕೆಂದೇ ಪಡ್ಡೆಹುಲಿ ಚಿತ್ರ ತಂಡದಿಂದ ಈ ರ್ಯಾಪ್ ಸಾಂಗ್ ಮಾಡಿದ್ದೇವೆ ಎಂದು ತಿಳಿಸಿದ್ದಾರೆ ಕೆ.ಮಂಜು.

 • ಪ್ಪ ವಿಷ್ಣು ಫ್ಯಾನ್.. ಮಗ ದರ್ಶನ್ ಫ್ಯಾನ್

  one is vishnuvardhan fan while other one is darshan fan

  ಪಡ್ಡೆಹುಲಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾಗುತ್ತಿರುವ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಅವರ ಸಿನಿಮಾ ಟ್ರೇಲರ್ ಹೊರಬಂದಿದೆ. ಈಗಾಗಲೇ ಚಿತ್ರದಲ್ಲಿ ಶ್ರೇಯಸ್, ವಿಷ್ಣು ಗೆಟಪ್‍ನಲ್ಲಿ ಕಾಣಿಸಿಕೊಳ್ತಿರೋ ಶ್ರೇಯಸ್, ವಿಷ್ಣು ಅಭಿಮಾನಿಗಳಿಗೆ ಥ್ರಿಲ್ ಕೊಟ್ಟಿದ್ದಾರೆ. ನಾಗರಹಾವು ಚಿತ್ರದ ರಾಮಾಚಾರಿ ಗೆಟಪ್‍ನಲ್ಲಿ ಮಿಂಚಿದ್ದಾರೆ ಶ್ರೇಯಸ್. ಅಂದಹಾಗೆ ಚಿತ್ರದ ಟ್ರೇಲರ್ ರಿಲೀಸ್ ಮಾಡಿರುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್.

  ಇದೇ ವೇಳೆ ತಮ್ಮದೊಂದು ಸೀಕ್ರೆಟ್ ಹೊರಹಾಕಿದ ಶ್ರೇಯಸ್ `ಅಪ್ಪ ವಿಷ್ಣು ಅಭಿಮಾನಿ. ನಾನು ಡಿ ಬಾಸ್ ಅಭಿಮಾನಿ' ಎಂದು ಹೇಳೋ ಮೂಲಕ ತಮ್ಮ ದರ್ಶನ್ ಪ್ರೇಮವನ್ನು ಹೊರಹಾಕಿದ್ದಾರೆ.

 • ಪ್ರೇಮಲೋಕವೇ ಬೇರೆ.. ಪಡ್ಡೆಹುಲಿಯೇ ಬೇರೆ.. 

  ravichandran requess not to compare paddehuli with premeloka

  ರವಿಚಂದ್ರನ್‍ರನ್ನು ಕ್ರೇಜಿಸ್ಟಾರ್ ಆಗಿಸಿದ ಸಿನಿಮಾ ಪ್ರೇಮಲೋಕ. ಆಗಿನ ಕಾಲಕ್ಕೆ ಹಾಡುಗಳ ಮೂಲಕವೇ ರೋಮಾಂಚನ ಮೂಡಿಸಿದ್ದ ಸಿನಿಮಾ ಅದು. ವಿಶೇಷ ಅಂದ್ರೆ, ರವಿಚಂದ್ರನ್ ಹೀರೋ ತಂದೆಯಾಗಿ ನಟಿಸಿರುವ ಪಡ್ಡೆಹುಲಿಯಲ್ಲಿ 10 ಹಾಡುಗಳಿವೆ. ಅವುಗಳಲ್ಲಿ ಟಪ್ಪಾಂಗುಚ್ಚಿ, ಪ್ರೇಮಗೀತೆಗಳ ಜೊತೆಗೆ, ಭಾವಗೀತೆ, ವಚನ ಸಾಹಿತ್ಯದ ಹಾಡುಗಳೂ ಇವೆ. 

  ಇನ್ನೂ ಒಂದು ಹೋಲಿಕೆ ಇದೆ. ರವಿಚಂದ್ರನ್ ಪ್ರೇಮಲೋಕದಲ್ಲಿ ವಿಷ್ಣು, ಅಂಬಿ, ಶ್ರೀನಾಥ್, ಪ್ರಭಾಕರ್, ಲೋಕೇಶ್ ಎಲ್ಲರೂ ಇದ್ದರು. ಪುಟ್ಟ ಪುಟ್ಟ ಪಾತ್ರಗಳಲ್ಲಿ ನಟಿಸಿ, ನನಗೆ ಶುಭ ಕೋರಿದ್ದರು. ಈಗ ಪಡ್ಡೆಹುಲಿಯಲ್ಲಿ ನಾನಿದದ್ದೇನೆ. ಹೊಸ ಹುಡುಗ ಶ್ರೇಯಸ್‍ಗೆ ಶುಭ ಕೋರುತ್ತಿದ್ದೇನೆ ಎಂದಿದ್ದಾರೆ ಕ್ರೇಜಿ ಸ್ಟಾರ್ ರವಿಚಂದ್ರನ್.

  ಅಷ್ಟೇ ಅಲ್ಲ, ಪಡ್ಡೆಹುಲಿಯಲ್ಲಿ ಪುನೀತ್ ರಾಜ್‍ಕುಮಾರ್, ರಕ್ಷಿತ್ ಶೆಟ್ಟಿ, ನಿರ್ದೇಶಕ ಯೋಗರಾಜ್ ಭಟ್, ಸುಧಾರಾಣಿ ಕೂಡಾ ಇದ್ದಾರೆ. ಆದರೆ, ಪ್ರೇಮಲೋಕ, ಪಡ್ಡೆಹುಲಿಯನ್ನು ಹೋಲಿಸುವುದು ಬೇಡ, ಆ ಚಿತ್ರವೇ ಬೇರೆ. ಪಡ್ಡೆಹುಲಿಯೇ ಬೇರೆ. ಪಡ್ಡೆಹುಲಿಯನ್ನು ಹೊಸಬರ ಚಿತ್ರ ಎಂದು ನೋಡಿ ಎಂದು ಮನವಿ ಮಾಡಿರೋದು ರವಿಚಂದ್ರನ್.

  ಕೆ.ಮಂಜು ಪುತ್ರ ಶ್ರೇಯಸ್, ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಡ್ತಿರೋ ಸಿನಿಮಾ ಇದು. ಗುರು ದೇಶಪಾಂಡೆ ನಿರ್ದೇಶನದ ಸಿನಿಮಾದಲ್ಲಿ ನಿಶ್ವಿಕಾ ನಾಯ್ಡು ನಾಯಕಿ. 

 • ರವಿಚಂದ್ರನ್-ಸುಧಾರಾಣಿ ಮತ್ತೆ ಜೋಡಿ..!

  ravichandran adnd sudharani in paddehuli

  ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಸುಧಾರಾಣಿ ಒಟ್ಟಿಗೇ ನಟಿಸಿದ್ದ ಸಿನಿಮಾ ಮನೆದೇವ್ರು. ನಟಿಸಿದ್ದು ಒಂದೇ ಸಿನಿಮಾ ಆದರೂ ಕನ್ನಡ ಚಿತ್ರರಸಿಕರ ನೆನಪಿನಲ್ಲಿ ಸದಾ ಹಸಿರಾಗಿರುವ ಜೋಡಿ ರವಿ-ಸುಧಾ ಅವರದ್ದು. ಈಗ ಆ ಜೋಡಿ ಮತ್ತೆ ಒಂದಾಗುತ್ತಿದೆ. ತೆರೆಯ ಮೇಲೆ. ಪಡ್ಡೆ ಹುಲಿ ಚಿತ್ರದಲ್ಲಿ.

  ಪಡ್ಡೆ ಹುಲಿ ಚಿತ್ರದಲ್ಲಿ ರವಿಚಂದ್ರನ್ ಕನ್ನಡ ಪ್ರೊಫೆಸರ್ ಪಾತ್ರ ಮಾಡುತ್ತಿದ್ದಾರೆ. ಅದು ಚಾಮಯ್ಯ ಮೇಷ್ಟ್ರು ಪಾತ್ರದಂತೆಯೇ ಹಿಟ್ ಆಗಲಿದೆ ಅನ್ನೋದು ನಿರ್ದೇಶಕ ಗುರು ದೇಶಪಾಂಡೆ ಭರವಸೆ. ಆ ಪಾತ್ರದಲ್ಲಿ ನಿಮಗೆ ಯು.ಆರ್.ಅನಂತಮೂರ್ತಿ ಮತ್ತು ಎಸ್.ಎಲ್. ಭೈರಪ್ಪ ಕಂಡರೆ ಅಚ್ಚರಿಯಿಲ್ಲ, ಅಷ್ಟರಮಟ್ಟಿಗೆ ಆ ಪಾತ್ರವನ್ನು ಕಟ್ಟಲಾಗಿದೆ. ನಾಯಕನ ತಂದೆಯಾಗಿ ನಟಿಸುತ್ತಿರುವ ರವಿಚಂದ್ರನ್‍ಗೆ ಸುಧಾರಾಣಿ ಜೋಡಿ.

  ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ನಟಿಸುತ್ತಿರುವ ಮೊದಲ ಸಿನಿಮಾ ಪಡ್ಡೆಹುಲಿ. ನಿಶ್ವಿಕಾ ನಾಯ್ಡು ನಾಯಕಿಯಾಗಿರುವ ಚಿತ್ರದ ನಿರ್ಮಾಪಕರು ರಮೇಶ್ ರೆಡ್ಡಿ ನಂಗ್ಲಿ.

   

 • ಸೆನ್ಸಾರ್ ಗೆದ್ದ ಪಡ್ಡೆಹುಲಿ

  paddehulu gets u/a certificate

  ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಅಭಿನಯದ ಪ್ರಥಮ ಚಿತ್ರ ಪಡ್ಡೆಹುಲಿ, ಸೆನ್ಸಾರ್ ಗೆದ್ದಿದೆ.ಸೆನ್ಸಾರ್‍ನಲ್ಲಿ ಪಡ್ಡೆಹುಲಿಗೆ ಯು/ಎ ಪ್ರಮಾಣದ ಪತ್ರ ಸಿಕ್ಕಿದೆ.  ರಾಜಾಹುಲಿ ಗುರುದೇಶಪಾಂಡೆ ನಿರ್ದೇಶನದ ಪಡ್ಡೆಹುಲಿಯಲ್ಲಿ ನಿಶ್ವಿಕಾ ನಾಯ್ಡು ನಾಯಕಿ. ರವಿಚಂದ್ರನ್-ಸುಧಾರಾಣಿ, ಶ್ರೇಯಸ್ ತಂದೆತಾಯಿಯಾಗಿ ನಟಿಸಿದ್ದಾರೆ. ರಕ್ಷಿತ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ರಮೇಶ್ ರೆಡ್ಡಿ ನಿರ್ಮಾಣದ ಚಿತ್ರದಲ್ಲಿ ಸಂಗೀತ ನಿರ್ದೇಶಕ ಅಜನೀಶ್ ಲೋಕ್‍ನಾಥ್, ಕನ್ನಡದ ಭಾವಗೀತೆ, ವಚನಗಳನ್ನ ಬಳಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ವಿಷ್ಣುವರ್ಧನ್ ಅವರ ರಾಮಾಚಾರಿ ಗೆಟಪ್‍ನಲ್ಲಿ ಒಂದು ವಿಶೇಷ ಹಾಡು ಕೂಡಾ ಇದೆ. ಬೇಸಗೆಯಲ್ಲಿ ಚಿತ್ರಮಂದಿರದಲ್ಲಿ ಗರ್ಜಿಸಲಿದೆ ಪಡ್ಡೆಹುಲಿ.

 • ಹಳ್ಳಿಮೇಷ್ಟ್ರು ಪಡ್ಡೆಹುಲಿ ಪ್ರೊಫೆಸರ್

  hallimestru turns paddehuli professor

  ಕನ್ನಡ ಚಿತ್ರರಸಿಕರಿಗೆ ರಸಿಕ ಎಂದರೂ ಅವರೇ.. ಅಣ್ಣಯ್ಯ ಅಂದ್ರೂ ಅವರೇ.. ಚಿಕ್ಕೆಜಮಾನ್ರು ಎಂದರೂ ಅವರೇ.. ಪ್ರೇಮಲೋಕದ ರಣಧೀರ ಅಂದ್ರೂ ಅವರೇ.. ತಮ್ಮ ಒಂದೊಂದು ಚಿತ್ರವನ್ನೂ ತಮ್ಮ ಕಿರೀಟದ ಗರಿಗಳನ್ನಾಗಿಸಿಕೊಂಡಿರುವ ಕ್ರೇಜಿಸ್ಟಾರ್ ರವಿಚಂದ್ರನ್, ಹಳ್ಳಿಮೇಷ್ಟ್ರು ಅನ್ನೋದನ್ನೂ ಮತ್ತೊಮ್ಮೆ ಹೇಳಬೇಕಿಲ್ಲ. ಈ ಹಳ್ಳಿಮೇಷ್ಟ್ರು ಈಗ ಪಡ್ಡೆಹುಲಿ ಚಿತ್ರದಲ್ಲಿ ಕನ್ನಡ ಪ್ರೊಫೆಸರ್ ಆಗಿದ್ದಾರೆ.

  ಮಗನ ಬಗ್ಗೆ ಅಪಾರ ಕಾಳಜಿ ಹೊಂದಿರುವ ಅಪ್ಪ, ಮಗನ ಕನಸು ನನಸಾಗಿಸಲು ಏನೇನೆಲ್ಲ ಮಾಡುತ್ತಾನೆ. ಮಗನಿಗೆ ಹೇಗೆಲ್ಲ ಸಪೋರ್ಟ್ ಮಾಡ್ತಾನೆ ಅನ್ನೋದು ಕಥೆ. ಸಾಮಾನ್ಯವಾಗಿ ತಾಯಿ-ಮಗನ ಸೆಂಟಿಮೆಂಟ್ ಚಿತ್ರಗಳೇ ಹೆಚ್ಚಿರುತ್ತವೆ. ಇಲ್ಲಿ ತಂದೆ ಮಗನ ಸೆಂಟಿಮೆಂಟ್ ಇದೆ ಎನ್ನುತ್ತಾರೆ ನಿರ್ದೇಶಕ ಗುರುದೇಶಪಾಂಡೆ.

  ಅವರ ಜೊತೆ ನಟಿಸುವಾಗ ಮೊದ ಮೊದಲು ನನಗೂ ಆತಂಕವಿತ್ತು. ಆದರೆ, ಚಿತ್ರೀಕರಣ ನಡೆಯುತ್ತಾ ಹೋದಂತೆ ಅವರು ಹತ್ತಿರವಾದರು. ಅಪ್ಪ ಅಂದ್ರೆ ಹೀಗೇ ಇರಬೇಕು ಎನ್ನಿಸುವಂತೆ ನಟಿಸಿದ್ದಾರೆ ಎಂದು ಹೇಳಿದ್ದಾರೆ ನಾಯಕ ನಟ ಶ್ರೇಯಸ್.

  ಅಂದಹಾಗೆ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್‍ಗೆ ಇದು ಮೊದಲ ಸಿನಿಮಾ. ನಿಶ್ವಿಕಾ ನಾಯ್ಡು ನಾಯಕಿಯಾಗಿರುವ ಚಿತ್ರದಲ್ಲಿ ಸುಧಾರಾಣಿ, ರವಿಚಂದ್ರನ್‍ಗೆ ಜೋಡಿ. ರ್ಯಾಪ್ ಸಿಂಗರ್ ಆಗುವ ಕನಸು ಈಡೇರಿಸಿಕೊಳ್ಳಲುವ ಯುವಕನ ಕಥೆ ಚಿತ್ರದಲ್ಲಿದೆ. ಹಾಡುಗಳು ಹಿಟ್ ಆಗಿವೆ. ಸಿನಿಮಾ ಮುಂದಿನ ವಾರ ತೆರೆಗೆ ಬರುತ್ತಿದೆ.

 • ಹೆಸರಿಗಷ್ಟೇ ಸುಧಾರಾಣಿ.. ಛೆ.. ಒಂದೂ ಸೀನ್ ಇಲ್ಲ..

  no duet, no romance says ravichandran

  ಕೆ.ಮಂಜು ಪುತ್ರ ಶ್ರೇಯಸ್ ಅಭಿನಯದ ಮೊದಲ ಸಿನಿಮಾ ಪಡ್ಡೆಹುಲಿ. ಈ ಮ್ಯೂಸಿಕಲ್ ಸಿನಿಮಾದಲ್ಲಿ 10 ಹಾಡುಗಳಿವೆ. ವಿಶೇಷವೇನು ಗೊತ್ತೇ.. ಒಂದೇ ಒಂದು ಹಾಡಿನಲ್ಲೂ ರವಿಚಂದ್ರನ್ ಇಲ್ಲ. ಹೀರೋಗೆ ಅಪ್ಪನಾಗಿ ನಟಿಸಿರುವ ರವಿಚಂದ್ರನ್‍ಗೆ ಅದೊಂದು ಬೇಜಾರಿದೆ.. ಅದನ್ನು ಅವರು ತಮಾಷೆಯಾಗಿ ಹೇಳಿಕೊಳ್ಳೋದು ಹೀಗೆ..

  ಇಡೀ ಸಿನಿಮಾ ನಿಂತಿರುವುದು ಹೀರೋ ಮೇಲೆ. ನಿರ್ದೇಶಕ ಗುರು ದೇಶಪಾಂಡೆ, ಈ ಪಾತ್ರಕ್ಕೆ ನಾನೇ ಬೇಕು ಎಂದು ಹಠ ಮಾಡಿ ಕರೆಸಿಕೊಂಡರು. ಇಡೀ ಸಿನಿಮಾದಲ್ಲಿ 10 ಹಾಡುಗಳಿದ್ದರೂ, ನನಗಾಗಿ ಒಂದು ಹಾಡನ್ನೂ ಇಟ್ಟಿಲ್ಲ. ಹೆಸರಿಗೆ ಸುಧಾರಾಣಿ ಇದ್ದಾರೆ, ಜೋಡಿಯಾಗಿ. ಅವರನ್ನು ಮುಟ್ಟೋದು ದೂರದ ಮಾತು, ಶಾಸ್ತ್ರಕ್ಕಾದರೂ ಒಂದು ಸೀನ್ ಜೊತೆಗಿಡೋದು ಬೇಡವಾ ಎನ್ನುತ್ತಾರೆ ರವಿಚಂದ್ರನ್.

  ಮನೆದೇವ್ರು ನಂತರ ಇಬ್ಬರೂ ಒಟ್ಟಿಗೇ ನಟಿಸಿರುವ ಚಿತ್ರದಲ್ಲಿ ಶ್ರೇಯಸ್‍ಗೆ ನಿಶ್ವಿಕಾ ನಾಯ್ಡು ಹೀರೋಯಿನ್. 

  ನಾನು ಹೀರೋ ಆಗಿ ಗಳಿಸಿದ್ದಕ್ಕಿಂತ, ಪೋಷಕ ನಟನಾಗಿಯೇ ಹೆಚ್ಚು ಗಳಿಸಿದ್ದೇನೆ ಎನ್ನುವ ರವಿಚಂದ್ರನ್, ಶ್ರೇಯಸ್ ಚಿತ್ರಕ್ಕೆ ಶುಭ ಕೋರಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery