` 777 charlie, - chitraloka.com | Kannada Movie News, Reviews | Image

777 charlie,

 • '777 Charlie' To Start In June

  777 charlie to start in june

  The shooting for Rakshith Shetty's 'Avane Srimannarayana' is in full progress and meanwhile his next film is all set to be launched in June. The first poster of the film is out in social media.

  Earlier, Rakshith Shetty was supposed to produce '777 Charlie' under the Parmavah Studios banner. Though Rakshith Shetty will be producing the film along with Pushkar Mallikarjunaiah, he will also be acting in the lead role in the film along with a dog.

  The film is being written and directed by debutante Kiran Raj. The film revolves around a dejected youth and a dog. Nobin Paul is the music director, while Arvind Kashyap is the cameraman of this film.

 • 6 ತಿಂಗಳು : 100 ಸಿನಿಮಾ : 2022ರ ದಾಖಲೆ

  6 ತಿಂಗಳು : 100 ಸಿನಿಮಾ : 2022ರ ದಾಖಲೆ

  ಇದು ಸ್ಯಾಂಡಲ್ ವುಡ್ ಸಂಭ್ರಮ. ಸರಿಯಾಗಿ 6 ತಿಂಗಳಿಗೆ ಈ ವರ್ಷ ರಿಲೀಸ್ ಆದ ಚಿತ್ರಗಳ ಸಂಖ್ಯೆ 100ರ ಗಡಿ ದಾಟಿದೆ. ಜುಲೈ 1ಕ್ಕೆ ರಿಲೀಸ್ ಆದ ಬೈರಾಗಿ, ವಿಂಡೋ ಸೀಟ್ ಚಿತ್ರಗಳೊಂದಿಗೆ ಈ ವರ್ಷ ರಿಲೀಸ್ ಆದ ಒಟ್ಟು ಚಿತ್ರಗಳ ಸಂಖ್ಯೆ 100ರ ಗಡಿ ದಾಟಿದೆ. 100ನೇ ಸಿನಿಮಾ ಪಟ್ಟವನ್ನು ಸೆಂಚುರಿ ಸ್ಟಾರ್ ಚಿತ್ರಕ್ಕಾದರೂ ಕೊಡಬಹುದು. ನಿರೂಪ್ ಭಂಡಾರಿ-ಶೀತಲ್ ಶೆಟ್ಟಿ ಜೋಡಿಯ ವಿಂಡೋ ಸೀಟ್ ಚಿತ್ರಕ್ಕಾದರೂ ಕೊಡಬಹುದು.

  ಈ ವರ್ಷ ಶುರುವಾಗಿದ್ದು ಒಂಭತ್ತನೇ ದಿಕ್ಕು ಚಿತ್ರದಿಂದ. ಲಾಕ್ ಡೌನ್ ಮುಗಿದ ಮೇಲೆ ಥಿಯೇಟರಿಗೆ ಬಂದ ಮೊದಲ ಸಿನಿಮಾ ಯೋಗಿ-ದಯಾಳ್ ಪದ್ಮನಾಭನ್ ಕಾಂಬಿನೇಷನ್`ನ ಒಂಭತ್ತನೇ ದಿಕ್ಕು. ಅದಾದ ನಂತರ ಸಿನಿಮಾಗಳ ಪ್ರವಾಹವೇ ಹರಿದು ಬಂತು.

  ಫೆಬ್ರವರಿಯಲ್ಲಿ ರಿಲೀಸ್ ಆದ ಚಿತ್ರಗಳಲ್ಲಿ ಸದ್ದು ಮಾಡಿದ್ದು ಏಕ್ ಲವ್ ಯಾ ಮತ್ತು ಬೈ ಟು ಲವ್ ಚಿತ್ರಗಳು.

  ಮಾರ್ಚ್‍ನಲ್ಲಿ ಜೇಮ್ಸ್ ದಾಖಲೆ ಬರೆಯಿತು. ತಮ್ಮ ಕೊನೆಯ ಚಿತ್ರವನ್ನೂ ಯಶಸ್ವಿಯಾಗಿ ಗೆಲ್ಲಿಸಿದ್ದರು ಪುನೀತ್ ರಾಜಕುಮಾರ್. ಜೇಮ್ಸ್ 100 ಕೋಟಿ ಗಳಿಕೆಯನ್ನೂ ದಾಟಿತು.

  ಏಪ್ರಿಲ್ ಸಂಪೂರ್ಣ ಕೆಜಿಎಫ್ ಹಬ್ಬಕ್ಕೆ ಮೀಸಲು. ನಂತರ ಬಂದ ಕೆಲವು ಚಿತ್ರಗಳು ಕಂಟೆಂಟ್‍ನಲ್ಲಿ ಗಮನ ಸೆಳೆದರೂ ಬಾಕ್ಸಾಫೀಸ್‍ನಲ್ಲಿ ಕೇಳಿ ಬಂದಿದ್ದು ಒಂದೇ ಹೆಸರು ಕೆಜಿಎಫ್..ಕೆಜಿಎಫ್..ಕೆಜಿಎಫ್.. ಜೂನ್‍ನಲ್ಲಿ ಈಗ ಚಾರ್ಲಿ ಸದ್ದು ಮಾಡುತ್ತಿದೆ. ಹೊಸ ದಾಖಲೆ ಬರೆಯುತ್ತಿದೆ. ರಕ್ಷಿತ್ ಶೆಟ್ಟಿ ಬಾಕ್ಸಾಫೀಸ್‍ನಲ್ಲಿ ಸದ್ದು ಮಾಡಿದ್ದಾರೆ.

  ಇವುಗಳ ನಡುವೆ ಅವತಾರಪುರುಷ, ತುರ್ತು ನಿರ್ಗಮನ, ವೀಲ್`ಚೇರ್ ರೋಮಿಯೋ ಚಿತ್ರಗಳು ವಿಭಿನ್ನ ಕಥೆಗಳ ಮೂಲಕ ಗಮನ ಸೆಳೆದವು.

  ಉಪೇಂದ್ರ, ಯಶ್, ಪುನೀತ್, ಯೋಗಿ, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಾಜ್ ಬಿ.ಶೆಟ್ಟಿ, ವಿನೋದ್ ಪ್ರಭಾಕರ್, ಧನ್‍ವೀರ್, ಅಜೇಯ್ ರಾವ್.. ಸೇರಿದಂತೆ ಸ್ಟಾರ್ ನಟರು ತಲಾ ಒಂದೊಂದು ಚಿತ್ರಗಳಲ್ಲಿ ಕಾಣಿಸಿಕೊಂಡರು. ಡಾಲಿ ಧನಂಜಯ್ 2021ರ ಕೊನೆಯಲ್ಲಿ ಹಿಟ್ ಕೊಟ್ಟು, ಈಗ 21 ಅವರ್ಸ್ ಮೂಲಕ ವರ್ಷವಿಡೀ ಸಂಭ್ರಮಿಸುವ ಸ್ಟಾರ್ ಆಗಿದ್ದಾರೆ.

  ರವಿಚಂದ್ರನ್ ಅವರ 2ನೇ ಮಗ ವಿಕ್ರಂ ಹಾಗೂ ರಕ್ಷಿತಾ ಪ್ರೇಮ್ ಅವರ ಪುತ್ರ ರಾಣಾ ಚಿತ್ರರಂಗಕ್ಕೆ ಹೀರೋಗಳಾಗಿ ಎಂಟ್ರಿ ಕೊಟ್ಟರು. ನಿರ್ದೇಶಕರಲ್ಲಿ ಕಿರಣ್ ರಾಜ್ 777 ಚಾರ್ಲಿ ಮೂಲಕ ಗುರುತಿಸಿಕೊಡ ಹೊಸ ಪ್ರತಿಭೆ.

 • 777 Charlie' Launched On Rakshith's Birthday

  777 charlie launched on rakshit shetty

  The shooting for Rakshith Shetty's 'Avane Srimannarayana' is in full progress and meanwhile his next film '777 Charlie' was launched on Wednesday on account of Rakshith's birthday.

  Like, his previous film 'Kirik Party' this film was also launched at the  Dharmagiri Manjunatha Swamy temple in Bangalore and many friends and well wishers of Rakshith Shetty arrived and wished him and the team a huge success.

  The film is being written and directed by debutante Kiran Raj. The film revolves around a dejected youth and a dog. Nobin Paul is the music director, while Arvind Kashyap is the cameraman of this film.

 • 777 ಚಾರ್ಲಿ ಈಗ 116 ಚಾರ್ಲಿ : ರಕ್ಷಿತ್ ದಿಲ್ ಖುಷ್

  777 ಚಾರ್ಲಿ ಈಗ 116 ಚಾರ್ಲಿ : ರಕ್ಷಿತ್ ದಿಲ್ ಖುಷ್

  777 ಚಾರ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇತ್ತೀಚೆಗೆ ಚಾರ್ಲಿಯಷ್ಟು ಕಣ್ಣೀರು ಹಾಕಿಸಿದ ಇನ್ನೊಂದು ಸಿನಿಮಾ ಇಲ್ಲ. ತಾಯಿ-ತಂಗಿ ಸೆಂಟಿಮೆಂಟ್`ಗೆ ಕಣ್ಣೀರಿಟ್ಟಿದ್ದ ಪ್ರೇಕ್ಷಕರಿಗೆ ನಾಯಿ ಸೆಂಟಿಮೆಂಟ್ ತೋರಿಸಿ ಗೆದ್ದವರು ರಕ್ಷಿತ್ ಶೆಟ್ಟಿ. ದೇಶಾದ್ಯಂತ ಅದ್ಭುತ ಶೋ ಕಾಣ್ತಿರೋ ಚಾರ್ಲಿ ಈಗ 116 ಚಾರ್ಲಿ ಆಗಿದೆ. ರಕ್ಷಿತ್ ಶೆಟ್ಟಿ ಖುಷಿಯಾಗಿದ್ದಾರೆ. ವಿಶೇಷ ಏನಂದ್ರೆ..

  777 ಚಾರ್ಲಿಗೆ ಐಎಂಡಿಬಿ ರೇಟಿಂಗ್‍ನಲ್ಲಿ 116ನೇ ಸ್ಥಾನ ಸಿಕ್ಕಿದೆ. ಅಂದ್ರೆ ಇದೂವರೆಗೆ ಸಿನಿಮಾ ನೋಡಿದವರು ಮತ್ತು ಅವರ ಮೆಚ್ಚುಗೆಯ ಆಧಾರದ ಮೇಲೆ ಕೊಡೋ ರ್ಯಾಂಕ್ ಅದು. ಆ ರ್ಯಾಂಕ್‍ನಲ್ಲೀಗ 777 ಚಾರ್ಲಿಗೆ 116ನೇ ರ್ಯಾಂಕ್ ಬಂದಿದೆ.

  ಇಲ್ಲಿ ಇನ್ನೂ ಒಂದು ವಿಶೇಷ ಇದೆ. ಏಕೆಂದರೆ ಈ ಲಿಸ್ಟಿನಲ್ಲಿ 777 ಚಾರ್ಲಿಗೆ ಬಾಹುಬಲಿ, ಆರ್.ಆರ್.ಆರ್. ಕೆಜಿಎಫ್, ಡಿಡಿಎಲ್‍ಜೆ, ನಾಯಟ್ಟು, ಭಜರಂಗಿ ಬಾಯಿಜಾನ್ ಚಿತ್ರಗಳಿಗಿಂತ ಒಳ್ಳೆ ರ್ಯಾಂಕಿಂಗ್ ಇದೆ. ಕಿರಣ್ ರಾಜ್ ತಮ್ಮ ಮೊದಲ ನಿರ್ದೇಶನದಲ್ಲೇ ದೊಡ್ಡ ಮಟ್ಟಿಗೆ ಗೆದ್ದಿದ್ದಾರೆ. ಬಾಕ್ಸಾಫೀಸಿನಲ್ಲಿ.. ಪ್ರೇಕ್ಷಕರ ಹೃದಯದಲ್ಲಿ.. ವಿಮರ್ಶಕರ ದೃಷ್ಟಿಯಲ್ಲಿ.. ಚಿತ್ರರಂಗದ ತಂತ್ರಜ್ಞರ ದೃಷ್ಟಿಯಲ್ಲಿ.. ಎಲ್ಲ ದೃಷ್ಟಿಯಿಂದಲೂ ಪರಂವಾ ಸ್ಟುಡಿಯೋಸ್, ಕಿರಣ್ ರಾಜ್ ಅವರಿಗೆ ಒಳ್ಳೆ ರ್ಯಾಂಕ್ ಸಿಕ್ಕಿದೆ.

 • 777 ಚಾರ್ಲಿ ಒಟಿಟಿ ಡೇಟ್ ಫಿಕ್ಸ್

  rakshith shetty in 777 charlie image

  ಚಿತ್ರರಂಗದಲ್ಲಿ ವಿಶೇಷ ದಾಖಲೆ ಬರೆದ ಸಿನಿಮಾ 777 ಚಾರ್ಲಿ. ಜೂನ್ 10ಕ್ಕೆ ರಿಲೀಸ್ ಆಗಿದ್ದ ಚಾರ್ಲಿ ಬಾಕ್ಸಾಫೀಸ್‍ನಲ್ಲಿ ಮೋಡಿ ಮಾಡಿದೆ. 150 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿದೆ. 50ನೇ ಸಮೀಪಿಸುತ್ತಿರುವಾಗಲೇ ಒಟಿಟಿ ರಿಲೀಸ್`ಗೆ ಡೇಟ್ ಫಿಕ್ಸ್ ಆಗಿದೆ.

  ರಕ್ಷಿತ್ ಶೆಟ್ಟಿ ಅವರೇ ಪರಂವಾ ಸ್ಟುಡಿಯೋಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದ 777 ಚಾರ್ಲಿ, ಕಲೆಕ್ಷನ್ ವಿಚಾರದಲ್ಲಿ ಡಬಲ್ ಖುಷಿ ಕೊಟ್ಟಿದೆ. ಪ್ರೇಕ್ಷಕರ ಮೆಚ್ಚುಗೆಯ ವಿಚಾರದಲ್ಲೂ ಚಾರ್ಲಿ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಚಿತ್ರದ ಗೆಲುವಿನ ಎಲ್ಲ ಕ್ರೆಡಿಟ್‍ನ್ನೂ ರಕ್ಷಿತ್ ಶೆಟ್ಟಿ ನಿರ್ದೇಶಕ ಕಿರಣ್ ರಾಜ್ ಅವರಿಗೆ ಕೊಟ್ಟಿದ್ದಾರೆ. ಚಿತ್ರತಂಡಕ್ಕೆ ಲಾಭಾಂಶದ ಶೇ.10ರಷ್ಟು ಪಾಲು ಘೋಷಿಸಿದ್ದಾರೆ. ಇದೆಲ್ಲ ಸಂಭ್ರಮದ ನಡುವೆ 777 ಚಾರ್ಲಿ ಜುಲೈ 29ಕ್ಕೆ ವೂಟ್‍ನಲ್ಲಿ ರಿಲೀಸ್ ಆಗುತ್ತಿದೆ.

 • 777 ಚಾರ್ಲಿ ನೋಡಿದ ಸಿಎಂ ಬೊಮ್ಮಾಯಿ & ಟೀಂ

  777 ಚಾರ್ಲಿ ನೋಡಿದ ಸಿಎಂ ಬೊಮ್ಮಾಯಿ & ಟೀಂ

  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶ್ವಾನ ಪ್ರಿಯರು. ಅವರ ಮನೆಯಲ್ಲಿ ಸಾಕಿದ್ದ ನಾಯಿ ಮೃತಪಟ್ಟಾಗ ಅವರು ಮಗುವನ್ನೇ ಕಳೆದುಕೊಂಡವರಂತೆ ಕಣ್ಣೀರಿಟ್ಟಿದ್ದನ್ನು ಕರ್ನಾಟಕ ನೋಡಿದೆ. ಇದೇ ಪ್ರೀತಿಯಿಂದ 777 ಚಾರ್ಲಿ ನೋಡಿದ್ದಾರೆ ಸಿಎಂ ಬೊಮ್ಮಾಯಿ. ಬೊಮ್ಮಾಯಿ ಜೊತೆ ಸಚಿವರಾದ ಆರ್.ಅಶೋಕ್, ಡಿ.ಸುಧಾಕರ್, ಬಿ.ಸಿ.ನಾಗೇಶ್, ಶಾಸಕ ರಘುಪತಿ ಭಟ್ ಸೇರಿದಂತೆ ಹಲವರು ಸಿನಿಮಾ ನೋಡಿದರು.

  ನನಗೆ ನಾಯಿಗಳೆಂದರೆ ಪ್ರೀತಿ. ನನ್ನ ಮನೆಯಲ್ಲೀಗ ದಿಯಾ ಅನ್ನೋ ಹೆಸರಿನ ನಾಯಿ ಇದೆ. ಸಿನಿಮಾದಲ್ಲಿ ಚಾರ್ಲಿ ಹೇಗೆ ಅಪ್ಪಿಕೊಳ್ಳುತ್ತದೋ.. ನಾನು ಮನೆಗೆ ಹೋದಾಗ ನನ್ನ ದಿಯಾ ಕೂಡಾ ಹಾಗೆಯೇ ಅಪ್ಪಿಕೊಳ್ಳುತ್ತದೆ ಎಂದರು ಬೊಮ್ಮಾಯಿ. ನಾಯಿಗಳನ್ನು ದತ್ತು ತೆಗೆದುಕೊಳ್ಳುವಂತೆ ಕರೆಯನ್ನೂ ಕೊಟ್ಟರು. ನಿರ್ದೇಶಕ ಕಿರಣ್ ರಾಜ್, ರಕ್ಷಿತ್ ಶೆಟ್ಟಿಯವರನ್ನು ಬಾಯ್ತುಂಬಾ ಹೊಗಳಿದರು.

 • 777 ಚಾರ್ಲಿ ಸತತ 3ನೇ ವಾರವೂ ಬೊಂಬಾಟ್ : ಯಶ್ ಚಿತ್ರದ ದಾಖಲೆ ಬ್ರೇಕ್

  777 ಚಾರ್ಲಿ ಸತತ 3ನೇ ವಾರವೂ ಬೊಂಬಾಟ್ : ಯಶ್ ಚಿತ್ರದ ದಾಖಲೆ ಬ್ರೇಕ್

  ದೇಶದಾದ್ಯಂತ ಭಾವುಕತೆಯ ಸಂಚಲನ ಸೃಷ್ಟಿಸಿದ ಸಿನಿಮಾ 777 ಚಾರ್ಲಿ. ಒಂದು ಸುದೀರ್ಘ ಗ್ಯಾಪ್ ನಂತರ ಬಂದ ರಕ್ಷಿತ್ ಶೆಟ್ಟಿ ಸಿನಿಮಾ ಬೊಂಬಾಟ್ ಪ್ರದರ್ಶನ ಕಾಣುತ್ತಿದೆ. ಸತತ 3ನೇ ವಾರದ ವೀಕೆಂಡ್‍ನಲ್ಲೂ 777 ಚಾರ್ಲಿ ಬೊಂಬಾಟ್. ಬಾಕ್ಸಾಫೀಸ್ ಮೂಲಗಳ ಪ್ರಕಾರ 777 ಚಾರ್ಲಿಯ ಗಳಿಕೆ 60 ಕೋಟಿ ದಾಟಿ ಮುನ್ನುಗ್ಗುತ್ತಿದೆ.

  ಈ ಅವಧಿಯಲ್ಲಿ ಈ ಸಿನಿಮಾ ಯಶ್ ಅವರ ಮಿಸ್ಟರ್ & ಮಿಸಸ್ ರಾಮಾಚಾರಿ ಚಿತ್ರದ ಬಾಕ್ಸಾಫೀಸ್ ದಾಖಲೆ ಬ್ರೇಕ್ ಮಾಡಿದೆ ಎಂಬ ಸುದ್ದಿ ಇದೆ. ಅಧಿಕೃತವಾಗಿಲ್ಲ, ಅಷ್ಟೆ. ದಾಖಲೆಗಳಿರೋದೇ ಮುರಿಯೋದಕ್ಕೆ. ಈಗ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳ ಲಿಸ್ಟಿನಲ್ಲಿ 777 ಚಾರ್ಲಿ 5ನೇ ಸ್ಥಾನಕ್ಕೇರಿದೆ ಎನ್ನಲಾಗಿದೆ.

  ಡೈರೆಕ್ಟರ್ ಕಿರಣ್ ರಾಜ್ ಅವರಿಗೆ ಇದು ಫಸ್ಟ್ ಮೂವಿ. ನಾಯಿಯನ್ನೇ ಹೀರೋ ಮಾಡಿಕೊಂಡು ಗೆದ್ದಿರುವ ರಕ್ಷಿತ್ ಶೆಟ್ಟಿ.. ಪ್ರೇಕ್ಷಕರ ಹೃದಯವನ್ನೂ.. ವಿರ್ಮಶಕರ ಮೆದುಳನ್ನೂ.. ಬಾಕ್ಸಾಫೀಸಿನ ಕೀಲಿಕೈಯನ್ನೂ ಏಕಕಾಲಕ್ಕೆ ಕದ್ದಿರೋದು 777 ಚಾರ್ಲಿಯ ವಿಶೇಷ.

 • Rakshith Shetty To Star In '777 Charlie'

  rakshit shetty in 777 charlie

  Rakshith Shetty who is looking forward to act in 'Avane Srimannarayana' is all set to star in yet another film called '777 Charlie'. The shooting for the film is all set to start in the month of May.

  Earlier, Rakshith Shetty was supposed to produce '777 Charlie' under the Parmavah Studios banner and Aravind Iyer was to act in yet. Though Rakshith Shetty will be producing the film along with Pushkar Mallikarjunaiah, he will also be acting in the lead role in the film. He has replaced Aravind Iyer as the hero.

  The film is being written and directed by debutante Kiran Raj. The film revolves around a dejected youth and a dog.

  Related Articles :-

  ಚಾರ್ಲಿ 777ಗೂ ರಕ್ಷಿತ್ ಶೆಟ್ಟಿಯೇ ಹೀರೋ

 • ಅವನೇ ಶ್ರೀಮನ್ನಾರಾಯಣ ಕಲಿಸಿದ ಪಾಠವೇ ಚಾರ್ಲಿಯನ್ನು ಗೆಲ್ಲಿಸಿತು : ರಕ್ಷಿತ್ ಶೆಟ್ಟಿ

  ಅವನೇ ಶ್ರೀಮನ್ನಾರಾಯಣ ಕಲಿಸಿದ ಪಾಠವೇ ಚಾರ್ಲಿಯನ್ನು ಗೆಲ್ಲಿಸಿತು : ರಕ್ಷಿತ್ ಶೆಟ್ಟಿ

  777 ಚಾರ್ಲಿ. ಈಗ ಇಡೀ ದೇಶದಲ್ಲಿ ಸುದ್ದಿ ಮಾಡ್ತಿರೋ ಸಿನಿಮಾ. ಬಾಕ್ಸಾಫೀಸಿನಲ್ಲಿ ಬೊಂಬಾಟ್ ಕಲೆಕ್ಷನ್ ಮಾಡುತ್ತಾ 4ನೇ ವಾರದಲ್ಲೂ ಸಖತ್ತಾಗಿ ಕ್ಲಿಕ್ ಆಗಿದೆ. ತಮಿಳು, ತೆಲುಗು, ಹಿಂದಿ, ಮಲಯಾಳಂನಲ್ಲಿ ನಿಧಾನಕ್ಕೆ ಪಿಕಪ್ ಆದ 777 ಚಾರ್ಲಿ, ಅಲ್ಲಿಯ ಪ್ರೇಕ್ಷಕರಿಗೂ ಇಷ್ಟವಾಗಿದ್ದು ವಿಶೇಷ. ಈ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ತಮ್ಮ ಅವನೇ ಶ್ರೀಮನ್ನಾರಯಣ ಚಿತ್ರವನ್ನ ನೆನಪಿಸಿಕೊಂಡಿದ್ದಾರೆ.

  ನಾನು ಈಗಲೂ ಅವನೇ ಶ್ರೀಮನ್ನಾರಾಯಣ ಸೋತಿತು ಎಂದು ಒಪ್ಪಿಕೊಳ್ಳಲ್ಲ. ಅದೊಂದು ಕೆಟ್ಟ ಬಿಸಿನೆಸ್. 777 ಚಾರ್ಲಿ ರಿಲೀಸ್ ವೇಳೆ ಮತ್ತೆ ನಾವೇನಾದರೂ ಅದೇ ರೀತಿ ಮಾಡಿದ್ದರೆ ನನಗೆ ಬರುತ್ತಿದ್ದ ಲಾಭದಲ್ಲಿ ಬಹುತೇಕ ಕಡಿಮೆಯಾಗುತ್ತಿತ್ತು. ನನಗೆ ಅವನೇ ಶ್ರೀಮನ್ನಾರಾಯಣ ದೊಡ್ಡ ಪಾಠ. ಸಿನಿಮಾ ಮೇಕಿಂಗ್, ಬಿಸಿನೆಸ್, ಲೈಫ್.. ಎಲ್ಲವನ್ನೂ ಕಲಿಸಿದ ಎಂದಿದ್ದಾರೆ ರಕ್ಷಿತ್ ಶೆಟ್ಟಿ.

 • ಇಡೀ ತಂಡಕ್ಕೆ ಗೆಲುವಿನ ಪಾಲು ಹಂಚಿದ ರಕ್ಷಿತ್ ಶೆಟ್ಟಿ : ಗಳಿಸಿದ್ದೆಷ್ಟು ಕೋಟಿ..?

  ಇಡೀ ತಂಡಕ್ಕೆ ಗೆಲುವಿನ ಪಾಲು ಹಂಚಿದ ರಕ್ಷಿತ್ ಶೆಟ್ಟಿ : ಗಳಿಸಿದ್ದೆಷ್ಟು ಕೋಟಿ..?

  ಚಿತ್ರರಂಗದಲ್ಲಿ ದುಡಿದದ್ದೇಕ್ಕೇ ಸಂಭಾವನೆ ಸಿಗೋದು ಕಷ್ಟ. ಕೆಲವು ಸಂಸ್ಥೆ ಮತ್ತು ನಿರ್ಮಾಪಕರು ಬಿಟ್ಟರೆ ಕೈ ಎತ್ತೋರ ಸಂಖ್ಯೆಯೇ ಹೆಚ್ಚು. ಅಂತಾದ್ದರಲ್ಲಿ ರಕ್ಷಿತ್ ಶೆಟ್ಟಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ತಮ್ಮ ಇಡೀ ತಂಡಕ್ಕೆ ತಮ್ಮ ಚಿತ್ರದ ಗೆಲುವಿನ ಪಾಲನ್ನು ಹಂಚುತ್ತಿದ್ದಾರೆ.

  777 ಚಾರ್ಲಿ ಸಿನಿಮಾ ಬಾಕ್ಸಾಫೀಸ್‍ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. 25 ದಿನಗಳನ್ನು ಯಶಸ್ವಿಯಾಗಿ ಪೂರೈಸಿರುವ ಚಿತ್ರ, 450ಕ್ಕೂ ಹೆಚ್ಚು ಸೆಂಟರ್‍ಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಕೆಜಿಎಫ್ ನಂತರ ಇಷ್ಟು ದೊಡ್ಡ ಮಟ್ಟದ ಸಕ್ಸಸ್ ಕಂಡ ಕನ್ನಡ ಸಿನಿಮಾ ಇದೇ. 777 ಚಾರ್ಲಿ.

  ಹಾಗಾದರೆ ಚಿತ್ರ ಗಳಿಸಿರುವ ಲಾಭ ಎಷ್ಟು? ಇದು ಅಂದಾಜಿನ ಲೆಕ್ಕಾಚಾರವಲ್ಲ. ಖುದ್ದು ನಿರ್ಮಾಪಕರೂ ಆಗಿರೋ ರಕ್ಷಿತ್ ಶೆಟ್ಟಿಯವರೇ ನೀಡಿರುವ ಅಧಿಕೃತ ಲೆಕ್ಕ. ಇದುವರೆಗೆ 777 ಚಾರ್ಲಿ ಮಾಡಿರುವ ಒಟ್ಟಾರೆ ಬಿಸಿನೆಸ್ 150 ಕೋಟಿ. ನಿರ್ಮಾಪಕರಿಗೆ 90ರಿಂದ 100 ಕೋಟಿಗಳಷ್ಟು ಹಣ ಬರಬಹುದು ಎಂದು ವಿವರ ಕೊಟ್ಟಿದ್ದಾರೆ ರಕ್ಷಿತ್ ಶೆಟ್ಟಿ. ಇದರಲ್ಲಿ ಥಿಯೇಟರ್ ಬಿಸಿನೆಸ್ ಅಷ್ಟೇ ಅಲ್ಲ, ಸ್ಯಾಟಲೈಟ್, ಒಟಿಟಿ, ಆಡಿಯೋ, ಡಬ್ಬಿಂಗ್.. ಎಲ್ಲವೂ ಸೇರಿಯೇ ಇರುವ ಲೆಕ್ಕ.

  ಅಷ್ಟೇ ಅಲ್ಲ, ಈಗ ಬಂದಿರೋ ಲಾಭದಲ್ಲಿ ಶೇ.10ರಷ್ಟನ್ನು ಚಿತ್ರತಂಡಕ್ಕೆ, ಸಿನಮಾಗೆ ಶ್ರಮಿಸಿದವರಿಗೆ ಹಂಚಲು ನಿರ್ಧರಿಸಿದ್ದಾರೆ ರಕ್ಷಿತ್ ಶೆಟ್ಟಿ. ಇನ್ನು ಲಾಭದ ಶೇ.5ರಷ್ಟನ್ನು ನಾಯಿಗಳ ಸಾಕಾಣಿಕೆಗೆ, ನೆರವಿಗೆ ನೀಡಲು ನಿರ್ಧರಿಸಿದ್ದಾರೆ.

  ಅಂದಹಾಗೆ ಚಿತ್ರ ಈಗಿನ್ನೂ 25 ದಿನ ಪೂರೈಸಿದೆ. ವೀಕೆಂಡ್‍ಗಳಲ್ಲಿ ಈಗಲೂ ಭರ್ಜರಿ ಗಳಿಕೆ ಕಾಣುತ್ತಿರೋ 777 ಚಾರ್ಲಿ, ವಾರದ ದಿನಗಳಲ್ಲಿ ಸರಾಸರಿಗಿಂತ ಹೆಚ್ಚಿಗೇ ಕಲೆಕ್ಷನ್ ಮಾಡುತ್ತಿದೆ. 

 • ಡಿ.1ಕ್ಕೆ ಚೀನಾಗೆ ಸಿಂಪಲ್ ಸ್ಟಾರ್

  ಡಿ.1ಕ್ಕೆ ಚೀನಾಗೆ ಸಿಂಪಲ್ ಸ್ಟಾರ್

  ರಕ್ಷಿತ್ ಶೆಟ್ಟಿ ಈಗ ಥಾಯ್, ಜಪಾನಿ ಹಾಗೂ ಚೀನಾ ಭಾಷೆಗೂ ಹೋಗುತ್ತಿದ್ದಾರೆ ರಕ್ಷಿತ್ ಶೆಟ್ಟಿ ನಟಿಸಿ, ನಿರ್ಮಾಣ ಮಾಡಿದ್ದ 777 ಚಾರ್ಲಿ ಚಿತ್ರಕ್ಕೆ ಚೀನಾ, ಥಾಯ್‍ಲ್ಯಾಂಡ್ ಹಾಗೂ ಜಪಾನ್‍ನಲ್ಲಿ ಡಿಮ್ಯಾಂಡ್ ಶುರುವಾಗಿದೆ. 777 ಚಾರ್ಲಿ ಕೂಡಾ ಈ ವರ್ಷದ ಸೂಪರ್ ಹಿಟ್ ಸಿನಿಮಾ. 150 ಕೋಟಿಗೂ ಹೆಚ್ಚ ಬ್ಯುಸಿನೆಸ್ ಮಾಡಿದ್ದ 777 ಚಾರ್ಲಿಯಲ್ಲಿ ನಾಯಿಯ ಕಥೆಗೆ ಪ್ರೇಕ್ಷಕರು ಕಣ್ಣೀರಿಟ್ಟಿದ್ದರು. ದೇಶ ವಿದೇಶಗಳ ಪ್ರೇಕ್ಷಕರನ್ನು ಸೆಳೆದಿತ್ತು. ರಕ್ಷಿತ್ ಶೆಟ್ಟಿ, ಸಂಗೀತಾ ಶೃಂಗೇರಿ, ರಾಜ್ ಬಿ.ಶೆಟ್ಟಿ.. ಮೊದಲಾದವರು ನಟಿಸಿದ್ದ ಚಿತ್ರಕ್ಕೆ ಕಿರಣ್ ರಾಜ್ ಆಕ್ಷನ್ ಕಟ್ ಹೇಳಿದ್ದರು.

  ಮೊದಲ ಚಿತ್ರದಲ್ಲೇ ಭರ್ಜರಿ ಯಶಸ್ಸು ಕೊಟ್ಟಿದ್ದ ಕಿರಣ್ ರಾಜ್ 777 ಚಾರ್ಲಿ ಚಿತ್ರವನ್ನು ದೇಶ ವಿದೇಶಗಳಲ್ಲಿ ಆಯಾ ಭಾಷೆಗಳಲ್ಲೇ ರಿಲೀಸ್ ಮಾಡುತ್ತಿದ್ದಾರೆ. ಕಂಟೆಂಟ್ ಮುಖ್ಯ. ಭಾಷೆ ಅಲ್ಲ ಎನ್ನುವುದು ಮತ್ತೆ ಸಾಬೀತು ಮಾಡಿದ್ದಾರೆ. ಈಗಾಗಲೇ ಚಿತ್ರದ ಥಾಯ್ ಭಾಷೆಯ ವರ್ಷನ್ ಟ್ರೇಲರ್ ರಿಲೀಸ್ ಕೂಡಾ ಆಗಿದೆ. ಡಿಸೆಂಬರ್ 1ರಂದು ಥಾಯ್ ಭಾಷೆಯ 777 ಚಾರ್ಲಿ ರಿಲೀಸ್ ಆಗಲಿದೆ. ಥಾಯ್ ಜನ ಪ್ರಾಣಿ ಪ್ರಿಯರು. ನಾವಿಲ್ಲಿ ಸಿನಿಮಾ ರಿಲೀಸ್ ಮಾಡುತ್ತಿದ್ದಂತೆಯೇ ಥಾಯ್ ಹಕ್ಕು ಪಡೆದಿದ್ದರು. ಈಗ ರಿಲೀಸ್ ಆಗುತ್ತಿರೆ. ಜಪಾನ್, ರಷ್ಯಾ, ಚೀನಾ ಭಾಷೆಯಲ್ಲೂ ಡಿಮ್ಯಾಂಡ್ ಇದೆ. ಇನ್ನು ಕೆಲವೇ ದಿನಗಳಲ್ಲಿ ಜಪಾನಿ ಭಾಷೆಯಲ್ಲೂ ಸಿನಿಮಾ ಬಿಡುಗಡೆಯಾಗಲಿದೆ. ಚೀನಾ ಭಾಷೆಯ ಕೆಲಸ ಕೂಡಾ ಚಾಲ್ತಿಯಲ್ಲಿದೆ ಎಂದಿದ್ದಾರೆ ಡೈರೆಕ್ಟರ್ ಕಿರಣ್ ರಾಜ್.

  ಇತ್ತೀಚೆಗೆ ರಾಜಮೌಳಿಯವರ ಆರ್.ಆರ್.ಆರ್. ಜಪಾನಿ ಭಾಷೆಗೆ ಡಬ್ ಆಗಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿತ್ತು. ಅದರೊಂದಿಗೆ ಕೆಜಿಎಫ್ ಚಾಪ್ಟರ್ 2 ದಾಖಲೆಯನ್ನೂ ಹಿಂದೆ ಹಾಕಿತ್ತು. ಚೀನಾದಲ್ಲಿ ಕೂಡಾ ರಿಲೀಸ್ ಆಗಿ ಹಿಟ್ ಆದರೆ ಒಳ್ಳೆಯ ಬ್ಯುಸಿನೆಸ್ ಮಾಡಬಹುದು ಎನ್ನುವುದು ಕಿರಣ್ ರಾಜ್ ಕನಸು. ರಕ್ಷಿತ್ ಶೆಟ್ಟಿ ಕನ್ನಡದ ಚಿತ್ರದ ಮೂಲಕ ಕನ್ನಡವನ್ನೂ ಬೇರೆ ಬೇರೆ ದೇಶಗಳಿಗೆ ಪರಿಚಯಿಸುತ್ತಿದ್ದಾರೆ. ಆ ಮೂಲಕ ಸಿಂಪಲ್ ಸ್ಟಾರ್ ಮತ್ತೊಂದು ಚರಿತ್ರೆಯನ್ನೇ ಸೃಷ್ಟಿಸಲು ಹೊರಟಿದ್ದಾರೆ.