` charlie777, - chitraloka.com | Kannada Movie News, Reviews | Image

charlie777,

  • '777 Charlie' Welcomes Danish Sait On Board

    777 charlie welcomes danish sait on board

    Danish Sait who is looking forward for the release of 'French Biryani' in Amazon Prime has joined the team of Rakshith Shetty starrer 'Charlie 777'. The actor will be playing a prominent role in the film.

    '777 Charlie' is being jointly produced by Rakshith Shetty and Pushkar Mallikarjunaiah and the film is written and directed by debutante Kiran Raj. The film revolves around a dejected youth and a dog. Raj B Shetty, Sangeetha Sringeri, Danish Shetty and others play important roles in the film. 

    '777 Charlie' was supposed to have been completed by now. The team had planned to complete the shooting by June and release the film as soon as possible. Due to lockdown, the shooting has been postponed indefinitely and the film will release only by next year.

    The team had released a video called 'Life of Dharma' on occasion of Rakshit Shetty's birthday last month

  • 3 ವರ್ಷ 164 ದಿನ : ಚಾರ್ಲಿ 777 ಓವರ್

    3 ವರ್ಷ 164 ದಿನ : ಚಾರ್ಲಿ 777 ಓವರ್

    ಚಾರ್ಲಿ 777. ರಕ್ಷಿತ್ ಶೆಟ್ಟಿ ನಟನೆಯ ಈ ಚಿತ್ರ ಶುರುವಾಗಿದ್ದು 3 ವರ್ಷ, 164 ದಿನಗಳ ಹಿಂದೆ. ಮಧ್ಯೆ 1 ವರ್ಷದ ಕೊರೊನಾ ಸಂಕಟವನ್ನೆಲ್ಲ ಮುಗಿಸಿ ಚಿತ್ರೀಕರಣ ಮುಗಿಸಿದೆ ಚಾರ್ಲಿ 777. 2017ರ ಸೆಪ್ಟೆಂಬರ್‍ನಲ್ಲಿ ಶುರುವಾಗಿದ್ದ ಚಿತ್ರವಿದು. ಚಿತ್ರದ ಕಥೆ ಮತ್ತು ನಿರ್ದೇಶನ ಕಿರಣ್ ರಾಜ್ ಅವರದ್ದು. ರಿಷಬ್ ಶೆಟ್ಟಿ ಜೊತೆ ಕಿರಿಕ್ ಪಾರ್ಟಿ ಮತ್ತು ರಿಕ್ಕಿ ಚಿತ್ರಕ್ಕೆ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದ ಕಿರಣ್ ರಾಜ್ ಅವರಿಗೆ ಇದು ಫಸ್ಟ್ ಸಿನಿಮಾ.

    ಧರ್ಮನಾಗಿ ರಕ್ಷಿತ್ ಶೆಟ್ಟಿ, ದೇವಿಕಾ ಆಗಿ ಸಂಗೀತಾ ಶೃಂಗೇರಿ ಹೀರೋ ಹೀರೋಯಿನ್ ಆಗಿದ್ದರೆ, ರಾಜ್ ಬಿ.ಶೆಟ್ಟಿ ಡಾ.ಅಶ್ವಿನ್ ಕುಮಾರ್, ಡ್ಯಾನಿಷ್ ಸೇಠ್ ಕರ್ಷನ್ ರಾಯ್ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಇನ್ನೊಬ್ಬ ಹೀರೋ ನಾಯಿ. ನಾಯಿಯ ಸುತ್ತಲೇ ಕಥೆ ಇರೋದು ವಿಶೇಷ. ಚಾರ್ಲಿ 777 ಡಿಸೆಂಬರ್ ಕೊನೆಯ ವಾರ ರಿಲೀಸ್ ಆಗುವ ಸಾಧ್ಯತೆ ಇದೆ.

  • 777 ಚಾರ್ಲಿ ಮುಡಿಗೆ ಮತ್ತೊಂದು ಕಿರೀಟ

    777 ಚಾರ್ಲಿ ಮುಡಿಗೆ ಮತ್ತೊಂದು ಕಿರೀಟ

    ಚಿತ್ರರಂಗದ ಗಣ್ಯರು ಮೆಚ್ಚಿದರು. ಪ್ರಾಣಿಪ್ರಿಯರು ಮೆಚ್ಚಿದರು. ಪ್ರೇಕ್ಷಕರು ಮೆಚ್ಚಿದರು. ವಿಮರ್ಶಕರು ಮೆಚ್ಚಿದರು. ಬಾಕ್ಸಾಫೀಸ್ ಮೆಚ್ಚಿತು. 777 ಚಾರ್ಲಿ ಗೆದ್ದಿತು. ರಕ್ಷಿತ್ ಶೆಟ್ಟಿ ನಿರ್ಮಿಸಿ ನಟಿಸಿದ್ದ ಚಿತ್ರ ಸೂಪರ್ ಡ್ಯೂಪರ್ ಹಿಟ್. ಕಿರಣ್ ರಾಜ್ ತಮ್ಮ ಮೊದಲ ನಿರ್ದೇಶನದಲ್ಲೇ ಅದ್ಭುತ ಪ್ರತಿಭೆ ಮೆರೆದರು. ಈಗ 777 ಚಾರ್ಲಿ ಚಿತ್ರಕ್ಕೆ ಇನ್ನೊಂದು ಕಿರೀಟ ಬಂದಿದೆ.

    ಲೆಟರ್ ಬಾಕ್ಸ್ ಅನ್ನೋ ಅಂತಾರಾಷ್ಟ್ರೀಯ ಸಿನಿಮಾಗಳ ಪಟ್ಟಿಯಲ್ಲಿ 777 ಚಾರ್ಲಿ ಚಿತ್ರಕ್ಕೆ 48ನೇ ಸ್ಥಾನ. ಈ ಲಿಸ್ಟ್‍ನಲ್ಲಿರೋ ಕನ್ನಡದ ಏಕೈಕ ಸಿನಿಮಾ ಚಾರ್ಲಿ. ಚಾರ್ಲಿ ಬಿಟ್ಟರೆ ಈ ಪಟ್ಟಿಯಲ್ಲಿರೋ ಇತರೆ ಇಂಡಿಯನ್ ಸಿನಿಮಾಗಳೆಂದರೆ ರಾಜಮೌಳಿಯವರ ಆರ್.ಆರ್.ಆರ್ ಮತ್ತು ಕಮಲ್‍ಹಾಸನ್`ರ ವಿಕ್ರಂ

  • 777 ಚಾರ್ಲಿಗೆ ಸತಿ ಸಂಗೀತಾ

    sangeetha enters silve screen through charlie 777

    ರಕ್ಷಿತ್ ಶೆಟ್ಟಿ ಅಭಿನಯದ 777ಚಾರ್ಲಿ ಚಿತ್ರಕ್ಕೆ ನಾಯಕಿಯಾಗಿ ಕಿರುತೆರೆ ಧಾರಾವಾಹಿ ಹರಹರ ಮಹಾದೇವ ಖ್ಯಾತಿಯ ಸಂಗೀತಾ ಆಯ್ಕೆಯಾಗಿದ್ದಾರೆ. ಮಹಾದೇವ ಧಾರಾವಾಹಿಯಲ್ಲಿ ಸತಿ ಪಾತ್ರದಿಂದ ಗಮನ ಸೆಳೆದಿದ್ದ ಸಂಗೀತಾಗೆ ಬೆಳ್ಳಿತೆರೆಯಲ್ಲಿ ಇದು ಮೊದಲ ಅನುಭವ. ಎರಡೂವರೆ ಸಾವಿರಕ್ಕೂ ಹೆಚ್ಚು ಪ್ರೊಫೈಲ್‍ಗಳಲ್ಲಿ 150 ಮಂದಿಯನ್ನು ಅಡಿಷನ್ ಮಾಡಿ ಆಯ್ಕೆಯಾಗಿರುವ ಪ್ರತಿಭೆ ಸಂಗೀತಾ.

    ಮೊದಲ ಹಂತದ ಚಿತ್ರೀಕರಣವನ್ನು ಈಗಾಗಲೇ ಮುಗಿಸಿರುವ 777 ಚಾರ್ಲಿ ಚಿತ್ರ, 2ನೇ ಹಂತದ ಚಿತ್ರೀಕರಣದಲ್ಲಿ ನಾಯಕಿಯ ಭಾಗದ ಶೂಟಿಂಗ್ ಪ್ಲಾನ್ ಮಾಡಿದೆ. ಮೊದಲ ಸಿನಿಮಾದಲ್ಲೇ ರಕ್ಷಿತ್ ಶೆಟ್ಟಿ ಜೊತೆ ನಟಿಸುವ ಅವಕಾಶ ಸಿಕ್ಕಿರೋದು ಅದೃಷ್ಟವೇ ಹೌದು ಅಂತಾರೆ ಸಂಗೀತಾ.

    ಹೊಸ ಪ್ರತಿಭೆ ಜೊತೆಗೆ ಆಕೆಗೆ ನಟನೆಯ ಕೆಲವು ಸೂಕ್ಷ್ಮಗಳು ಗೊತ್ತಿವೆ. ಆಕೆಯ ಆಯ್ಕೆಗೆ ಅದೇ ಕಾರಣ ಅಂತಾರೆ ನಿರ್ದೇಶಕ ಪುಷ್ಕರ್ ಮಲ್ಲಿಕಾರ್ಜುನಯ್ಯ.

    ಕಥಾ ನಾಯಕ ಮತ್ತು ನಾಯಿಯ ನಡುವಿನ ಕಥೆ ಚಿತ್ರದಲ್ಲಿದೆ. ನಾಯಕಿಯ ಪಾತ್ರ ಮಾಮೂಲಿ ಸಿನಿಮಾಗಳ ನಾಯಕಿಯ ಪಾತ್ರದ ಹಾಗಿಲ್ಲ. ಹೀಗಾಗಿ ಹೊಸ ಹುಡುಗಿಯ ಹುಡುಕಾಟದಲ್ಲಿದ್ದ ನಮಗೆ ಉತ್ತಮ ಪ್ರತಿಭೆ ಸಿಕ್ಕಿದ್ದಾರೆ ಎಂದು ಖುಷಿಯಾಗಿದ್ದಾರೆ ನಿದೇಶಕ ಕಿರಣ್ ರಾಜ್.

  • 777 ಚಾರ್ಲಿಯ ಆಟ ಶುರು : ಪ್ರೀಮಿಯರ್ ಶೋ.. ಅಡ್ವಾನ್ಸ್ ಬುಕ್ಕಿಂಗ್..

    777 ಚಾರ್ಲಿಯ ಆಟ ಶುರು : ಪ್ರೀಮಿಯರ್ ಶೋ.. ಅಡ್ವಾನ್ಸ್ ಬುಕ್ಕಿಂಗ್..

    777 ಚಾರ್ಲಿ. ರಕ್ಷಿತ್ ಶೆಟ್ಟಿ ನಟನೆಯ ಸಿನಿಮಾ. ಈ ವರ್ಷದ ಕನ್ನಡದ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಜೂನ್ 10ಕ್ಕೆ ರಿಲೀಸ್ ಆಗುತ್ತಿರುವ ಚಿತ್ರದ ಆಟ.. ಬೊಂಬಾಟ್ ಆಗಿ ಶುರುವಾಗುತ್ತಿದೆ. ಚಿತ್ರದ ಪ್ರೀಮಿಯರ್ ಶೋಗಳನ್ನು ದೇಶದ 21 ನಗರಗಳಲ್ಲಿ ಆಯೋಜಿಸಲಾಗಿದೆ. ಜೊತೆಗೆ ಅಡ್ವಾನ್ಸ್ ಬುಕ್ಕಿಂಗ್ ಕೂಡಾ ಶುರುವಾಗಿದೆ.

    ಮುಂಬೈ, ಪುಣೆ, ನಾಗ್ಪುರ, ಹೈದರಾಬಾದ್, ವೈಜಾಗ್, ಚೆನ್ನೈ, ಮಧುರೈ, ಕೊಯಮತ್ತೂರು, ಡೆಲ್ಲಿ, ಬರೋಡಾ, ಸೂರತ್, ತ್ರಿವೇಂದ್ರಮ್, ಸೊಲ್ಲಾಪುರ, ಅಮೃತ್‍ಸರ, ಜೈಪುರ, ಪಣಜಿ, ಲಖನೌ, ವಾರಾಣಸಿ, ಕೋಲ್ಕತ್ತಾ.. ಹೀಗೆ ಎಲ್ಲೆಡೆ ಪ್ರೀಮಿಯರ್ ಶೋಗಳಿವೆ. ಅಲ್ಲಿಗೆ ಮಹಾರಾಷ್ಟ್ರ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಗೋವಾ, ದೆಹಲಿ, ಉತ್ತರ ಪ್ರದೇಶ, ಪ.ಬಂಗಾಳ, ರಾಜಸ್ತಾನ, ಪಂಜಾಬ್..ಹೀಗೆ ಎಲ್ಲ ರಾಜ್ಯಗಳಲ್ಲೂ ಪ್ರೀಮಿಯರ್ ಶೋಗಳಿವೆ. ಜೂನ್ 2ಕ್ಕೆ ಅಂದ್ರೆ ಇವತ್ತು ಅಮೃತ್‍ಸರ, ದೆಹಲಿಗಳಲ್ಲಿ ಪ್ರೀಮಿಯರ್ ಶೋ.

    ಕರ್ನಾಟಕದಲ್ಲಿ ಜೂನ್ 9ಕ್ಕೆ ಪ್ರೀಮಿಯರ್ ಶೋಗಳಿವೆ. ಬೆಂಗಳೂರಿನಲ್ಲಿ 3 ಶೋ, ಮೈಸೂರು, ಮಂಗಳೂರಿನಲ್ಲಿ ಪ್ರೀಮಿಯರ್ ಶೋಗಳಿಗೆ ಪ್ಲಾನ್ ಮಾಡಿದೆ 777 ಚಾರ್ಲಿ ಟೀಂ.

    ಕಿರಣ್ ರಾಜ್ ನಿರ್ದೇಶನದ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಮತ್ತು ನಾಯಿಯ ನಡುವಿನ ಬಾಂಧವ್ಯದ ಕಥೆ ಇದೆ. ಸಂಗೀತಾ ಶೃಂಗೇರಿ ನಾಯಕಿ. ರಾಜ್ ಬಿ.ಶೆಟ್ಟಿ, ದಾನಿಶ್ ಸೇಠ್, ಬಾಬ್ಬಿ ಸಿಂಹ ಉಳಿದ ಪ್ರಧಾನ ಪಾತ್ರದಲ್ಲಿದ್ದಾರೆ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿಗಿಂತ ಹೆಚ್ಚು ಸ್ಕ್ರೀನ್ ಪೇಸ್ ನಾಯಿಗೇ ಇದೆ ಎನ್ನೋದು ಕಿರಣ್ ರಾಜ್ ಮಾತು.

  • Raj B Shetty added to '777 Charlie'

    raj b shetty in charlie 777

    Rakshith Shetty who has completed 'Avane Srimannarayana' is busy with his other film '777 Charlie'. The shooting for the film is in full progress and actor-director Raj B Shetty has been roped in to play a prominent role in the film. 

    Raj B Shetty is playing the role of Dr Ashwin Kumar who is a veterinary doctor in the film. The actor has almost completed his portions in the film and the team released Raj's poster on his birthday.

    '777 Charlie' is a story between a frustrated youth and a dog. Rakshith Shetty plays a prominent role in the film along with a dog. Small screen actress Sangeetha is the heroine. The film is being directed by debutante Kiran Raj. Nobin Paul is the music director, while Arvind Kashyap is the cameraman of this film.

  • Sangeetha Roped In As The Heroine For '777 Charlie'

    sangeetha ropes in as heroine for charlie 777

    The first schedule for Rakshith Shetty's '777 Charlie' is complete and the second schedule for the film is all set to start soon. Meanwhile, actress Sangeetha has been roped in as the heroine for the film.

    '777 Charlie' is a story between a frustrated youth and a dog. Rakshith Shetty plays a prominent role in the film along with a dog. The team was searching a heroine for Rakshith and has finally roped in Sangeetha for the film. Sangeetha had acted as Sathi in the popular tele serial 'Harahara Mahadeva'. This is her debut film.

    The film is being written and directed by debutante Kiran Raj. The film revolves around a dejected youth and a dog. Nobin Paul is the music director, while Arvind Kashyap is the cameraman of this film.

  • Team '777 Charlie' to gift Rakshith Shetty a video on his birthday

    team charlie 777 to gift rakshit shetty a video on his birthday

    Rakshith Shetty starrer '777 Charlie' was supposed to have completed by now. The team had planned to complete the shooting by June and release the film as soon as possible. Due to lockdown, the shooting has been postponed indefinitely and the film will release only by next year.

    Meanwhile, the team of '777 Charlie' has planned to release a video called 'Life of Dharma' on the 06th of June on account of Rakshith Shetty's birthday. Last year, Rakshith had got a gift in the form o 'Avane Srimannarayana' on his birthday and this year, team '777 Charlie' will be releasing a special video.

    '777 Charlie' is being jointly produced by Rakshith Shetty and Pushkar Mallikarjunaiah and the film is written and directed by debutante Kiran Raj. The film revolves around a dejected youth and a dog. A dog plays a prominent role in the film along with Rakshith Shetty. Raj B Shetty also plays an important role in the film. 

    Nobin Paul is the music director, while Arvind Kashyap is the cameraman of this film.

     

  • ಇಂದಿನಿಂದ.. 777 ಚಾರ್ಲಿ ಒಟಿಟಿಯಲ್ಲಿ..  

    ಇಂದಿನಿಂದ.. 777 ಚಾರ್ಲಿ ಒಟಿಟಿಯಲ್ಲಿ..  

    ಚಿತ್ರರಂಗದಲ್ಲಿ ವಿಶೇಷ ದಾಖಲೆ ಬರೆದ ಸಿನಿಮಾ 777 ಚಾರ್ಲಿ. ಪರಂವಾ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದ 777 ಚಾರ್ಲಿ, ಕಲೆಕ್ಷನ್ ವಿಚಾರದಲ್ಲಿ ಡಬಲ್ ಖುಷಿ ಕೊಟ್ಟಿತ್ತು. 150 ಕೋಟಿಗೂ ಅಧಿಕ ಬಿಸಿನೆಸ್ ಮಾಡಿತ್ತು. ಧರ್ಮ ಮತ್ತು ಚಾರ್ಲಿಯ ಬಾಂಧವ್ಯ ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸಿತ್ತು. ಜೂನ್ 10ಕ್ಕೆ ರಿಲೀಸ್ ಆಗಿದ್ದ ಚಾರ್ಲಿ ಯಶಸ್ವಿಯಾಗಿ 50 ದಿನ ಪೂರೈಸಿದ ನಂತರ ಈಗ ಒಟಿಟಿಗೆ ಬಂದಿದೆ.

    ಕಿರಣ್ ರಾಜ್ ಅವರ ಕನಸಿನ ಕೂಸು 777 ಚಾರ್ಲಿ ಇಂದಿನಿಂದ ವೂಟ್‍ನಲ್ಲಿ ಸಿಗಲಿದೆ. 777 ಚಾರ್ಲಿಯ ಕನ್ನಡ ವರ್ಷನ್ ಮಾತ್ರ ಒಟಿಟಿಯಲ್ಲಿದೆ. ಉಳಿದ ಭಾಷೆಯ ಚಾರ್ಲಿ ಮಾರಾಟವಾಗಿದ್ದರೂ, ಅದರ ಮೇಲಿನ ಹಕ್ಕುಗಳನ್ನು ಖರೀದಿಸಿದವರಿಗೇ ಕೊಟ್ಟುಬಿಟ್ಟಿದ್ದಾರಂತೆ ರಕ್ಷಿತ್ ಶೆಟ್ಟಿ.

    ಹಾಗಂತ ಥಿಯೇಟರಿನಿಂದ 777 ಚಾರ್ಲಿ ಹೊರಕ್ಕೇನೂ ಹೋಗಿಲ್ಲ. ಈಗಲೂ 10ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್‍ಗಳಲ್ಲಿ ಸಿನಿಮಾ ಶೋಗಳಿವೆ. ರಕ್ಷಿತ್ ಶೆಟ್ಟಿಯವರಿಗೆ ಅಲ್ಲಿಂದ ಈಗಲೂ ಒಳ್ಳೆಯ ಶೇರ್ ಬರುತ್ತಿದೆ. ಆದರೆ ರಿಲೀಸ್ ಆಗುವುದಕ್ಕೂ ಮಾಡಿಕೊಂಡಿದ್ದ ಒಪ್ಪಂದದ ಪ್ರಕಾರ ಈಗ ಒಟಿಟಿಗೆ ಬಂದಿದ್ದಾನೆ 777 ಚಾರ್ಲಿ.

  • ಈಗ ಅಧಿಕೃತ : 777 ಚಾರ್ಲಿ ರಿಲೀಸ್ ಈ ವರ್ಷಕ್ಕೆ ಇಲ್ಲ..!

    ಈಗ ಅಧಿಕೃತ : 777 ಚಾರ್ಲಿ ರಿಲೀಸ್ ಈ ವರ್ಷಕ್ಕೆ ಇಲ್ಲ..!

    ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಡಿಸೆಂಬರ್ 31ಕ್ಕೆ ರಿಲೀಸ್ ಆಗಬೇಕಿತ್ತು. ಇತ್ತೀಚೆಗೆ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದೆ ಅನ್ನೋ ಸುದ್ದಿಯೂ ಇತ್ತು. ಅದನ್ನೀಗ ರಕ್ಷಿತ್ ಶೆಟ್ಟಿ ಅಧಿಕೃತವಾಗಿ ಹೇಳಿದ್ದಾರೆ.

    ಕೆಲ ವಿಳಂಬಗಳು ಹೊಸದೊಂದು ಅಧ್ಯಾಯಕ್ಕೆ ನಾಂದಿ ಹಾಡುತ್ತವೆ. ಈ ಬಗ್ಗೆ ಸದ್ಯದಲ್ಲೇ ಹೇಳಲಿದ್ದೇನೆ ಎನ್ನುವ ಮೂಲಕ ಸ್ವತಃ ರಕ್ಷಿತ್ ಶೆಟ್ಟಿ ಚಿತ್ರದ ಬಿಡುಗಡೆ ಮುಂದೆ ಹೋಗಿರುವುದನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

    ಚಾರ್ಲಿ 777ಗೆ ರಕ್ಷಿತ್ ಶೆಟ್ಟಿ ಕೇವಲ ಹೀರೋ ಅಲ್ಲ. ಜಿಎಸ್ ಗುಪ್ತಾ ಎಂಬುವವರೊಂದಿಗೆ ನಿರ್ಮಾಪಕರೂ ಆಗಿದ್ದಾರೆ. ಕಿರಣ್ ರಾಜ್ ನಿರ್ದೇಶನದ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಅವರ ಜೊತೆ ಸಂಗೀತಾ ಶೃಂಗೇರಿ, ರಾಜ್ ಬಿ.ಶೆಟ್ಟಿ, ಡ್ಯಾನಿಷ್ ಸೇಠ್ ಮೊದಲಾದವರು ನಟಿಸಿದ್ದಾರೆ. 

  • ಚಾರ್ಲಿ 777ಗೂ ರಕ್ಷಿತ್ ಶೆಟ್ಟಿಯೇ ಹೀರೋ

    rakshith shetty is now charlie 777

    ವಿಭಿನ್ನ ಸಿನಿಮಾಗಳ ಮೂಲಕವೇ ಸ್ಟಾರ್ ಆದ ರಕ್ಷಿತ್ ಶೆಟ್ಟಿ, ಈಗ ಚಾರ್ಲಿ 777 ಆಗುತ್ತಿದ್ದಾರೆ. ಚಿತ್ರಕ್ಕೆ ಮೊದಲು ಅರವಿಂದ್ ಅಯ್ಯರ್ ಹೀರೋ ಎನ್ನಲಾಗಿತ್ತು. ಆದರೆ, ಈಗ ಚಿತ್ರತಂಡ ರಕ್ಷಿತ್ ಶೆಟ್ಟಿ ಅವರನ್ನೇ ನಾಯಕರನ್ನಾಗಿ ಆಯ್ಕೆ ಮಾಡಿಕೊಂಡಿದೆ. ಅರವಿಂದ್ ಅಯ್ಯರ್ ಬದಲಾವಣೆಗೆ ಕಾರಣ, ಅವರ ಹಳೆಯ ಕಮಿಟ್‍ಮೆಂಟ್ಸ್ ಅಷ್ಟೇ ಹೊರತು, ಬೇರೇನೂ ಇಲ್ಲ ಎಂದಿದೆ ಚಿತ್ರತಂಡ.

    ಈಗಾಗಲೇ ಹಲವು ಚಿತ್ರಗಳಿಗೆ ಕಮಿಟ್ ಆಗಿರುವ ಅರವಿಂದ್ ಅಯ್ಯರ್, ಚಾರ್ಲಿ 777 ಚಿತ್ರಕ್ಕೆ ಡೇಟ್ ಹೊಂದಿಸಲು ಸಾಧ್ಯವಾಗಿಲ್ಲ. ಅಂದಹಾಗೆ ಅರವಿಂದ್ ಅಯ್ಯರ್ ಕೂಡಾ ರಕ್ಷಿತ್ ಶೆಟ್ಟಿ ಗ್ಯಾಂಗ್‍ನ ಸದಸ್ಯರೇ. ಅವರದ್ದೇ ಬ್ಯಾನರ್‍ನ ಭೀಮಸೇನ ನಳಮಹರಾಜ ಚಿತ್ರಕ್ಕೆ ಅರವಿಂದ್ ಅಯ್ಯರ್ ಅವರೇ ನಾಯಕ.

    ಪ್ರಾಣಿ ಮತ್ತು ಮನುಷ್ಯನ ನಡುವಿನ ಬಾಂಧವ್ಯದ ಕುರಿತ ಕಥೆ ಹೊಂದಿರುವ ಚಿತ್ರ, ವಿಭಿನ್ನ ಕಥಾ ಹಂದರ ಹೊಂದಿದೆ ಎಂದಿದ್ದಾರೆ ರಕ್ಷಿತ್ ಶೆಟ್ಟಿ. ಅವನೇ ಶ್ರೀಮನ್ನಾರಾಯಣ ಹಾಗೂ ಚಾರ್ಲಿ 777.. ಎರಡೂ ಚಿತ್ರಗಳಿಗೆ ರಕ್ಷಿತ್ ಶೆಟ್ಟಿ ಅವರೇ ನಾಯಕರಾಗಿದ್ದಾರೆ. 

     

  • ಚಾರ್ಲಿ 777ಗೆ ಇಬ್ಬರು ಮರಿ ಸ್ಟಾರ್‍ಗಳ ಎಂಟ್ರಿ 

    two baby stars in charlie 777

    ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಬಿರುಸಾಗಿ ಸಾಗುತ್ತಿದ್ದರೆ, ಇನ್ನೊಂದೆಡೆ ಚಾರ್ಲಿ 777 ಚಿತ್ರೀಕರಣವೂ ಜೋರಾಗಿ ನಡೆಯುತ್ತಿದೆ. ರಕ್ಷಿತ್ ಶೆಟ್ಟಿ ಜೊತೆ ಈ ಚಿತ್ರದ ಇನ್ನೊಂದು ಹೀರೋ ನಾಯಿ. ಚಾರ್ಲಿ ಅನ್ನೋ ಹೆಸರಿನ ಮುದ್ದಾದ ನಾಯಿಯ ಕಥೆ ಚಿತ್ರದಲ್ಲಿದೆ. ಈಗ ಚಿತ್ರದ ಚಿತ್ರೀಕರಣಕ್ಕೆ ಇನ್ನಿಬ್ಬರು ಮರಿ ಸ್ಟಾರ್‍ಗಳ ಎಂಟ್ರಿ ಆಗಿದೆ. ಬೇಬಿ ಶಾರ್ವರಿ ಮತ್ತು ಪಾಣ್ಯ ಬಿ.ರಾವ್.

    ಇವರಲ್ಲಿ ಶಾರ್ವರಿ, ಡ್ರಾಮಾ ಜ್ಯೂನಿಯರ್ಸ್ ಖ್ಯಾತಿ. ಪ್ರಾಣ್ಯ ಬಿ.ರಾವ್, ಡಬ್ ಸ್ಮಾಶ್ ಖ್ಯಾತಿ. ಶಾರ್ವರಿ, ಪುಟ್ಟ ರಕ್ಷಿತ್ ಶೆಟ್ಟಯಾಗಿ ಅಂದರೆ, ರಕ್ಷಿತ್ ಶೆಟ್ಟಿ ಬಾಲಕನಾಗಿದ್ದಾಗಿನ ಪಾತ್ರ ಮಾಡುತ್ತಿದ್ದರೆ, ಪ್ರಾಣ್ಯ, ತಂಗಿಯಾಗಿದ್ದಾರೆ.

    ಕಿರಣ್ ರಾಜ್ ನಿರ್ದೇಶನದ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕರು. ಆದಷ್ಟು ಶೀಘ್ರವಾಗಿ ಚಿತ್ರೀಕರಣ ಮುಗಿಸಿ, ಡಿಸೆಂಬರ್ ಹೊತ್ತಿಗೆ ಸಿನಿಮಾವನ್ನು ರಿಲೀಸ್ ಮಾಡುವ ಸನ್ನಾಹದಲ್ಲಿದೆ ಚಿತ್ರತಂಡ.

  • ಚಾರ್ಲಿ ಜೊತೆ ರಕ್ಷಿತ್ ಶೆಟ್ಟಿ ಧರ್ಮಾವತಾರ

    rakshit's dharmavatara in charlie 777

    ಚಾರ್ಲಿ 777 ಚಿತ್ರ ಶುರುವಾಗಿದೆ. ಅವನೇ ಶ್ರೀಮನ್ನಾರಾಯಣನ ಗುಂಗಿನಿಂದ ಹೊರಬಂದ ರಕ್ಷಿತ್ ಶೆಟ್ಟಿ, ಈಗ ಧರ್ಮನಾಗಿ ಬದಲಾಗಿದ್ದಾರೆ. ಚಾರ್ಲಿ ಚಿತ್ರದ ಶೂಟಿಂಗ್ ಗೋವಾದಲ್ಲಿ ನಡೆಯುತ್ತಿದ್ದು, ರಕ್ಷಿತ್ ಶೆಟ್ಟಿ ಗೋವಾದಲ್ಲೇ ಬೀಡುಬಿಟ್ಟಿದ್ದಾರೆ.

    ನಾಯಿಯ ಜೊತೆ ಹೆಚ್ಚೂ ಕಡಿಮೆ ಅರ್ಧ ಭಾರತ ರೌಂಡ್ ಹೊಡೆಯುತ್ತಾರಂತೆ ಧರ್ಮ ಅರ್ಥಾತ್ ರಕ್ಷಿತ್. ಅಂದಹಾಗೆ ಚಾರ್ಲಿ 777 ಅನ್ನೋದು ನಾಯಿಯ ಹೆಸರು.

    ಕಿರಣ್ ರಾಜ್ ನಿರ್ದೇಶನದ ಚಾರ್ಲಿ 777 ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕ. ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಬೇಬಿ ಶರ್ವರಿ ರಕ್ಷಿತ್ ಶೆಟ್ಟಿಯ ಬಾಲ್ಯದ ಪಾತ್ರದಲ್ಲಿ ನಟಿಸಿದ್ದಾರೆ.

  • ಚಾರ್ಲಿಗೆ ಬಲ್ಲಾಳದೇವನ ಬಲ..!

    ಚಾರ್ಲಿಗೆ ಬಲ್ಲಾಳದೇವನ ಬಲ..!

    ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಜೂನ್ 10ರಂದು ರಿಲೀಸ್ ಆಗುತ್ತಿದೆ. ಈಗಾಗಲೇ ಚಿತ್ರದ ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕುಗಳಲ್ಲಿ ಭರ್ಜರಿ ಬಿಸಿನೆಸ್ ಮಾಡಿರುವ ರಕ್ಷಿತ್ ಶೆಟ್ಟಿ, ಚಿತ್ರವನ್ನು ಪ್ಯಾನ್ ಇಂಡಿಯಾ ಮಾರುಕಟ್ಟೆಗೆ ಬಿಡುತ್ತಿದ್ದಾರೆ. ತೆಲುಗಿನಲ್ಲಿ ಚಿತ್ರವನ್ನು ರಿಲೀಸ್ ಮಾಡುತ್ತಿರುವುದು ಬಲ್ಲಾಳದೇವ ಅರ್ಥಾತ್ ರಾಣಾ ದಗ್ಗುಬಾಟಿ.

    ಆಂಧ್ರ ಮತ್ತು ತೆಲಂಗಾಣದಲ್ಲಿ ರಾಣಾ ಅವರ ಸಂಸ್ಥೆಯೇ ಚಾರ್ಲಿ 777 ರಿಲೀಸ್ ಮಾಡುತ್ತಿದೆ. ತಮಿಳಿನಲ್ಲಿ ಕಾರ್ತಿಕ್ ಸುಬ್ಬರಾಜು ರಿಲೀಸ್ ಮಾಡುತ್ತಿದ್ದಾರೆ.

    ಪರಂವಾ ಸ್ಟುಡಿಯೋಸ್‍ನ ಚಿತ್ರಕ್ಕೆ ಕಿರಣ್ ರಾಜ್ ನಿರ್ದೇಶಕರಾಗಿದ್ದಾರೆ. ನಿರ್ಮಾಣದಲ್ಲೂ ಪಾಲುದಾರರಾಗಿರೋ ರಕ್ಷಿತ್ ಶೆಟ್ಟಿ ಜೊತೆ ಹೀರೋ ಆಗಿರೋದು ನಾಯಿ. ಇದು ನಾಯಿ ಮತ್ತು ಹೀರೋನ ಸೆಂಟಿಮೆಂಟ್ ಸ್ಟೋರಿ. ಜಿ.ಎಸ್.ಗುಪ್ತಾ ಇನ್ನೊಬ್ಬ ನಿರ್ಮಾಪಕರು. ಸಂಗೀತಾ ಶೃಂಗೇರಿ ನಾಯಕಿಯಾಗಿರೋ ಚಿತ್ರದಲ್ಲಿ ರಾಜ್ ಬಿ.ಶೆಟ್ಟಿ, ಡ್ಯಾನಿಷ್ ಸೇಠ್, ಬಾಬ್ಬಿ ಸಿಂಹ ಕೂಡಾ ನಟಿಸಿದ್ದಾರೆ.

  • ಚಾರ್ಲಿಯ ಟಾರ್ಚರ್ ಸಾಂಗ್ ರಿಲೀಸ್

    ಚಾರ್ಲಿಯ ಟಾರ್ಚರ್ ಸಾಂಗ್ ರಿಲೀಸ್

    ಸ್ಯಾಂಡಲ್ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ಗೌರಿ ಹಬ್ಬಕ್ಕೆ ಟಾರ್ಚರ್ ಕೊಟ್ಟಿದ್ದಾರೆ. ಕೆ ಕಿರಣ್ ರಾಜ್ ನಿರ್ದೇಶನದ 777 ಚಾರ್ಲಿ ಸಿನಿಮಾದ  ಟಾರ್ಚರ್ ಹಾಡು ರಿಲೀಸ್ ಆಗಿದೆ. ಕನ್ನಡ ಸೇರಿದಂತೆ ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ, ಒಟ್ಟು 5 ಭಾಷೆಗಳಲ್ಲೂ ಹಾಡು ಬಿಡುಗಡೆಯಾಗಿದೆ.

    ರಕ್ಷಿತ್ ಮತ್ತು ನಾಯಿಯ ನಡುವಿನ ಪಡಿಪಾಟಲು ಟಾರ್ಚರ್ ಹಾಡಿನಲ್ಲಿದೆ. ನಾಯಿ ಕೊಡುವ ಟಾರ್ಚರ್ನ್ನು ಸೊಗಸಾಗಿ ಹಾಡಿರೋದು ವಿಜಯ್ ಪ್ರಕಾಶ್. ಆರೂಮುಕ್ಕಾಲು ನಿಮಿಷದ ಹಾಡಿನಲ್ಲಿ ಒಂದೊಂದು ಫ್ರೇಮ್ ಕೂಡಾ ನೋಡಿಸುತ್ತೆ ಮತ್ತು ಹಾಡು ಕೇಳುವಂತೆ ಮಾಡುತ್ತೆ. ನಾಯಿಯ ಜೊತೆ ರಕ್ಷಿತ್ ಪರದಾಟ ಮಜಾ ಕೊಡುತ್ತೆ.

    ನಾಯಿಗಳನ್ನು ಸಾಕೋಕೆ ಅನುಮತಿ ಇಲ್ಲದ ಮನೆಯಲ್ಲಿ ಚಾರ್ಲಿಯನ್ನು ಇಟ್ಟುಕೊಳ್ಳೋ ರಕ್ಷಿತ್, ಚಾರ್ಲಿಯ ತರಲೆ, ತುಂಟಾಟ, ರಕ್ಷಿತ್ ಶೆಟ್ಟಿಯ ಪಡಿಪಾಡಲುಗಳು ನೋಡುವವರಿಗೆ ಸಖತ್ ನಶೆ ಏರಿಸುತ್ತವೆ.

     ಚಾರ್ಲಿಯ ಟಾರ್ಚರ್ ಹಾಡಿನಲ್ಲಿ ಅಚಿಂತ್ಯ ,ಅರ್ಣವ ಎನ್ನುವ ಇಬ್ಬರು ಪುಟ್ಟ ಮಕ್ಕಳೂ ಹಾಡಿದ್ದಾರೆ.

    ರಕ್ಷಿತ್ ಶೆಟ್ಟಿಗೆ ಈ ಚಿತ್ರದಲ್ಲಿ ಹೀರೋಯಿನ್ ಆಗಿರೋದು ಸಂಗೀತಾ ಶೃಂಗೇರಿ. ಸಿಂಪಲ್ ಸ್ಟಾರ್ ಜೊತೆಗೆ ಮೊಟ್ಟೆ ಸ್ಟಾರ್ ರಾಜ್ ಬಿ ಶೆಟ್ಟಿ, ಡ್ಯಾನಿಷ್ ಸೇಟ್ ಕೂಡಾ ನಟಿಸಿರೋದು ವಿಶೇಷ. ರಕ್ಷಿತ್ ಶೆಟ್ಟಿ ಮತ್ತು ಜಿಎಸ್ ಗುಪ್ತಾ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

  • ಜೂನ್ 10ಕ್ಕೆ 777 ಚಾರ್ಲಿ

    ಜೂನ್ 10ಕ್ಕೆ 777 ಚಾರ್ಲಿ

    ಚಿತ್ರಲೋಕದ ಸೋರ್ಸ್ ಪಕ್ಕಾ ಇತ್ತು. ಸುದ್ದಿ ಸುಳ್ಳಾಗಲಿಲ್ಲ. ಏಪ್ರಿಲ್ 10ರಂದು ಚಿತ್ರದ ರಿಲೀಸ್ ಯಾವಾಗ ಎಂದು ತಿಳಿಸುತ್ತೇವೆ ಎಂದು ಪರಂವಾ ಸ್ಟುಡಿಯೋಸ್ ಅನೌನ್ಸ್ ಮಾಡಿದ ದಿನವೇ, ಜೂನ್ 10ಕ್ಕೆ ರಿಲೀಸ್ ಎಂದು ಘೋಷಿಸಿತ್ತು ಚಿತ್ರಲೋಕ. ಹಾಗೆಯೇ ಈಗ 777 ಚಾರ್ಲಿ, ಜೂನ್ 10ಕ್ಕೆ ಬರುವುದು ಅಧಿಕೃತವಾಗಿದೆ.

    ಕನ್ನಡದ ಜೊತೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿ ಒಟ್ಟು 5 ಭಾಷೆಗಳಲ್ಲಿ ರಿಲೀಸ್ ಆಗಲಿರುವ ಪ್ಯಾನ್ ಇಂಡಿಯಾ ಸಿನಿಮಾ 777 ಚಾರ್ಲಿ. ರಕ್ಷಿತ್ ಶೆಟ್ಟಿ ಜೊತೆ ನಾಯಿಯೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದೆ. ಚಾರ್ಲಿ ಅನ್ನೋದು ಅದೇ ನಾಯಿಯ ಹೆಸರು. ಕಿರಣ್ ರಾಜ್ ನಿರ್ದೇಶನದ ಚಿತ್ರದಲ್ಲಿ ಸಂಗೀತಾ ಶೃಂಗೇರಿ, ರಾಜ್ ಬಿ.ಶೆಟ್ಟಿ, ದಾನಿಷ್ ಸೇಠ್ ಕೂಡಾ ನಟಿಸಿದ್ದಾರೆ.

  • ನಾಳೆ ಪ್ರೀಮಿಯರ್ ಶೋ.. 10ಕ್ಕೆ ಹಬ್ಬ..!

    ನಾಳೆ ಪ್ರೀಮಿಯರ್ ಶೋ.. 10ಕ್ಕೆ ಹಬ್ಬ..!

    777 ಚಾರ್ಲಿ ಚಿತ್ರದ ಪ್ರೀಮಿಯರ್ ಶೋಗಳು ಈಗಾಗಲೇ ದೇಶಾದ್ಯಂತ ನಡೆಯುತ್ತಿವೆ. ಯುನಿವರ್ಸಲ್ ಸಬ್ಜೆಕ್ಟ್ ಇರುವ ಕಥೆ ಚಿತ್ರದಲ್ಲಿದೆ. ಧರ್ಮನಾಗಿ ರಕ್ಷಿತ್ ಶೆಟ್ಟಿ ನಟಿಸಿದ್ದು, ಧರ್ಮ ಮತ್ತು ನಾಯಿ ಚಾರ್ಲಿಯ ನಡುವಿನ ಭಾವನಾತ್ಮಕ ಕಥೆಯೇ ಚಿತ್ರದ ಕಥೆ. ಪರಂವಾ ಸ್ಟುಡಿಯೋಸ್ ನಿರ್ಮಾಣದ ಚಿತ್ರಕ್ಕೆ ಕಿರಣ್ ರಾಜ್ ನಿರ್ದೇಶಕ. ಈಗಾಗಲೇ ರಮ್ಯಾ, ಮನೇಕಾ ಗಾಂಧಿ ಸೇರಿದಂತೆ ಹಲವರು ಚಿತ್ರ ನೋಡಿದ್ದಾರೆ. ಮೆಚ್ಚಿದ್ದಾರೆ. ಇಂಡಿಯಾದ ಒಟ್ಟು 21 ನಗರಗಳಲ್ಲಿ ಸಿನಿಮಾ ಪ್ರೀಮಿಯರ್ ಶೋಗಳು ನಡೆದಿವೆ. ಇನ್ನು ನಾಳೆ ಪ್ರೀಮಿಯರ್ ಶೋಗಳಿವೆ. ಕರ್ನಾಟಕದಲ್ಲಿ ಬೆಂಗಳೂರು, ಶಿವಮೊಗ್ಗ, ಮೈಸೂರು, ಹುಬ್ಬಳ್ಳಿ ಸೇರಿದಂತೆ ಹಲವೆಡೆ 100ಕ್ಕೂ ಹೆಚ್ಚು ಪ್ರೀಮಿಯರ್ ಶೋಗಳಿವೆ.

    ಈ ಸಿನಿಮಾ ನೋಡಿದ ನಂತರ ನೀವೆಲ್ಲ ನಾಯಿಗಳನ್ನು ನೋಡುವ ದೃಷ್ಟಿಕೋನವೇ ಬದಲಾಗುತ್ತದೆ. ಕಂಟೆಂಟ್ ಮೇಲೆ ನಂಬಿಕೆ ಇಟ್ಟಿದ್ದೇವೆ. ನಮ್ಮ ಚಿತ್ರಗಳೇ ಮಾತನಾಡಬೇಕು ಅನ್ನೋ ಕಾನ್ಫಿಡೆನ್ಸ್ ರಕ್ಷಿತ್ ಶೆಟ್ಟಿ ಅವರದ್ದು. ಸಂಗೀತಾ ಶೃಂಗೇರಿ, ಶಾರ್ವರಿ, ರಾಜ್ ಬಿ.ಶೆಟ್ಟಿ.. ಮೊದಲಾದವರು ಪ್ರಧಾನ ಪಾತ್ರದಲ್ಲಿರೋ ಚಿತ್ರಕ್ಕೆ ಚಾರ್ಲಿಯೇ ಹೀರೋ. ಕಿರಣ್ ರಾಜ್ ನಿರ್ದೇಶನದ ಈ ಚಿತ್ರ ಹಾಗೂ ಚಿತ್ರದ ಕಾನ್ಸೆಪ್ಟ್ ಕನ್ನಡಕ್ಕೆ ಹೊಸದು. ಪ್ರೀಮಿಯರ್ ಶೋ ಮುಗಿದ ಮಾರನೇ ದಿನ ಅರ್ಥಾತ್ ಜೂನ್ 10ಕ್ಕೆ ಜಗತ್ತಿನಾದ್ಯಂತ ಚಾರ್ಲಿ ಹಬ್ಬ ಶುರುವಾಗಲಿದೆ.

    777 ಚಾರ್ಲಿ ಸಿನಿಮಾ ಕನ್ನಡದಲ್ಲಿಯೇ 1000+ ಸ್ಕ್ರೀನ್‍ಗಳಲ್ಲಿ ಹಾಗೂ ವಿದೇಶಗಳಲ್ಲಿ 500+ ಸ್ಕ್ರೀನ್‍ಗಳಲ್ಲಿ ರಿಲೀಸ್ ಆಗುತ್ತಿದೆ.

  • ರಕ್ಷಿತ್ ಶೆಟ್ಟಿ ಬರ್ತ್‍ಡೇ  777 ಚಾರ್ಲಿ ಗಿಫ್ಟ್ 

    rakshit shetty's birthday special

    ರಕ್ಷಿತ್ ಶೆಟ್ಟಿ ಈಗ ಅವನೇ ಶ್ರೀಮನ್ನಾರಾಯಣ ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿ. ವಿಜಯಪುರದ ಸುತ್ತಮುತ್ತ ನಡೆಯುತ್ತಿರುವ ಚಿತ್ರೀಕರಣದ ನಡುವೆಯೇ ರಕ್ಷಿತ್ ಶೆಟ್ಟಿ ಬಿಡುವು ಮಾಡಿಕೊಳ್ಳುತ್ತಿದ್ದಾರೆ. ಆ ಬಿಡುವಿನಲ್ಲೇ 777 ಚಾರ್ಲಿ ಚಿತ್ರಕ್ಕೆ ರೆಡಿಯಾಗಲಿದ್ದಾರೆ.

    ಜೂನ್ 6ನೇ ತಾರೀಕು 777 ಚಾರ್ಲಿ ಚಿತ್ರದ ಮುಹೂರ್ತವೂ ನಡೆಯಲಿದೆ. ಏಕೆಂದರೆ, ಅಂದು ರಕ್ಷಿತ್ ಶೆಟ್ಟಿ ಜನ್ಮದಿನ. ಅಷ್ಟೇ ಅಲ್ಲ, ಅದೇ ದಿನ ಅವನೇ ಶ್ರೀಮನ್ನಾರಾಯಣ ಹಾಗೂ 777ಚಾರ್ಲಿ.. ಎರಡೂ ಚಿತ್ರಗಳ ಫಸ್ಟ್ ಲುಕ್‍ನ್ನೂ ಬಿಡುಗಡೆ ಮಾಡಲು ಚಿತ್ರತಂಡಗಳು ನಿರ್ಧರಿಸಿವೆ. 

    ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಅದ್ಧೂರಿ ಸೆಟ್ ಹಾಕಲಾಗುತ್ತಿದ್ದು, ಅದಕ್ಕೆ ಸ್ವಲ್ಪ ಸಮಯ ಬೇಕಿದೆ. ಅವನೇ.. ಚಿತ್ರದ ಸೆಟ್ ರೆಡಿ ಮಾಡುವ ನಡುವೆ ಸಿಗುವ ಗ್ಯಾಪ್‍ನಲ್ಲಿ 777ಚಾರ್ಲಿ ಚಿತ್ರದ ಶೂಟಿಂಗ್ ನಡೆಯಲಿದೆ. 

  • ರಕ್ಷಿತ್ ಶೆಟ್ಟಿಗೆ ಹೀರೋಯಿನ್ ಆಗೋಕೆ ಆಸೆಯಿದ್ದರೆ..

    pushkar and rakshit calls for suditions

    ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 ಚಿತ್ರ ಸೆಟ್ಟೇರುತ್ತಿದೆ. ಈ ಚಿತ್ರಕ್ಕೆ ಅಡಿಷನ್ ಮೂಲಕವೇ ನಾಯಕಿಯನ್ನು ಆಯ್ಕೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಚಿತ್ರಕ್ಕೆ ಹೊಸ ಮುಖ ಬೇಕು. ಅಭಿನಯಿಸುವ ಪ್ರತಿಭೆ ಇರಬೇಕು. ಪರಂವಾ ಸ್ಟುಡಿಯೋಸ್‍ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕರು.

    ನಾಯಿ ಮತ್ತು ಮನುಷ್ಯನ ನಡುವಿನ ಬಾಂಡಿಂಗ್, ಚಿತ್ರದ ಕಥೆ. ರಕ್ಷಿತ್ ಅವರ ಬಳಿಯೇ ಕೆಲಸ ಮಾಡುತ್ತಿದ್ದ ಕಿರಣ್ ರಾಜ್, ಚಿತ್ರದ ನಿರ್ದೇಶಕ. ಚಾರ್ಲಿ ಅನ್ನೋದು ನಾಯಿಯ ಹೆಸರಾದರೆ, 777 ಅನ್ನೋದು ಅದರ ಲೈಸೆನ್ಸ್ ನಂಬರ್. 

    ಸ್ಸೋ.. ಇನ್ನೇಕೆ ತಡ.. This email address is being protected from spambots. You need JavaScript enabled to view it. ಗೆ ಒಂದು ಮೇಯ್ಲ್ ಮಾಡಿ. ನಿಮಗೆ ನೆನಪಿರಲಿ.. ರಶ್ಮಿಕಾ ಮಂದಣ್ಣ, ಸಂಯುಕ್ತಾ ಹೆಗಡೆ ಚಿತ್ರಕ್ಕೆ ಆಯ್ಕೆಯಾಗಿದ್ದೂ ಕೂಡಾ ಇಂತಹ ಅಡಿಷನ್ ಮೂಲಕವೇ.

     

  • ರಾಣಾ.. ಪೃಥ್ವಿರಾಜ್.. ಕಾರ್ತಿಕ್.. ಯುಎಫ್‍ಓ.. : ಚಾರ್ಲಿ ಜೊತೆ ಜೊತೆಯಲಿ ಎಲ್ಲ ಭಾಷೆಗಳಲಿ..

    ರಾಣಾ.. ಪೃಥ್ವಿರಾಜ್.. ಕಾರ್ತಿಕ್.. ಯುಎಫ್‍ಓ.. : ಚಾರ್ಲಿ ಜೊತೆ ಜೊತೆಯಲಿ ಎಲ್ಲ ಭಾಷೆಗಳಲಿ..

    ಒಂದು ಸಿನಿಮಾ ಹೇಗಿರುತ್ತೆ ಅನ್ನೋದನ್ನು ಟೀಸರ್, ಟ್ರೇಲರುಗಳಲ್ಲೇ ನಿರ್ಧರಿಸಬಹುದು. ಚಿತ್ರದ ಇಡೀ ಹೂರಣ ಗೊತ್ತಾಗದೇ ಹೋದರೂ.. ನಿರ್ದೇಶಕರ ಕಲ್ಪನೆ, ಅವರ ಸೃಜನಶೀಲತೆಯ ಶಕ್ತಿ, ಸಿನಿಮಾದ ತಾಕತ್ತು ಅರ್ಥವಾಗುತ್ತದೆ. 777 ಚಾರ್ಲಿ ಮಾಡಿದ್ದೂ ಅದನ್ನೇ. ಚಿತ್ರ ಟೀಸರ್ ರಿಲೀಸ್ ಆಗುವಾಗಲೇ ಭರವಸೆ ಹುಟ್ಟಿಸಿತ್ತು. ಅದರ ಜೊತೆಗೆ ರಕ್ಷಿತ್ ಶೆಟ್ಟಿಯವರ ಹಿಂದಿನ ಚಿತ್ರಗಳ ಟ್ರ್ಯಾಕ್ ರೆಕಾರ್ಡ್ ಕೂಡಾ ಹಾಗೆಯೇ ಇದ್ದ ಕಾರಣ, ವಿಶ್ವಾಸವೂ ಹುಟ್ಟಿತ್ತು. ಹೀಗಾಗಿಯೇ.. ರಕ್ಷಿತ್ ಶೆಟ್ಟಿಯವರ 777 ಚಾರ್ಲಿ ಚಿತ್ರವನ್ನು ರಿಲೀಸ್ ಮಾಡೋಕೆ ಬೇರೆ ಬೇರೆ ಭಾಷೆಗಳ ಸ್ಟಾರ್ ನಟರು, ಸಂಸ್ಥೆಗಳು ಮುಂದೆ ಬಂದಿವೆ.

    ತೆಲುಗಿನಲ್ಲಿ ರಾಣಾ ದಗ್ಗುಬಾಟಿ : ಬಾಹುಬಲಿಯ ಬಲ್ಲಾಳದೇವ ತೆಲುಗಿನಲ್ಲಿ ತಮ್ಮದೇ ಆದ ಸುರೇಶ್ ಪ್ರೊಡಕ್ಷನ್ಸ್ ಮೂಲಕ ರಿಲೀಸ್ ಮಾಡುತ್ತಿದ್ದಾರೆ. ಚಿತ್ರದ ಟೀಸರ್ ನೋಡಿದ ದಿನದಿಂದ ಟಚ್‍ನಲ್ಲಿದ್ದ ಅವರು ಇಡೀ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.

    ತಮಿಳಿನಲ್ಲಿ ಕಾರ್ತಿ ಸುಬ್ಬರಾಜ್ : ಪಿಜ್ಜಾ, ಜಿಗರ್‍ಥಾಂಡಾ, ಇರವಿ, ಮಕ್ರ್ಯುರಿ, ಪೆಟ್ಟಾ, ಪೆಂಗ್ವಿನ್.. ನಂತರ ವಿಭಿನ್ನ ಕಥೆಗಳನ್ನೇ ಮಾಡಿ ಗೆದ್ದಿರುವ ನಿರ್ದೇಶಕ. ರಕ್ಷಿತ್ ಶೆಟ್ಟಿ ಜೊತೆ ಒಂದು ಸಿನಿಮಾ ಮಾಡುವ ಆಸಕ್ತಿಯನ್ನೂ ತೋರಿಸಿದ್ದರು. ತಮಿಳಿನಲ್ಲಿ ರಿಲೀಸ್ ಮಾಡುತ್ತಿರೋದು ಇವರೇ.

    ಮಲಯಾಳಂನಲ್ಲಿ ಪೃಥ್ವಿರಾಜ್ : ಇವರ ಪೂರ್ತಿ ಹೆಸರು ಪೃಥ್ವಿರಾಜ್ ಸುಕುಮಾರನ್. ಹಳೆಯ ಚಿತ್ರಗಳನ್ನು ಬಿಟ್ಟ, ಇತ್ತೀಚಿನ ಸಿನಿಮಾಗಳನ್ನಷ್ಟೇ ತೆಗೆದುಕೊಂಡರೂ ಉತ್ತಮ ಚಿತ್ರಗಳ ಲಿಸ್ಟು ದೊಡ್ಡದು. ಅಯ್ಯಪ್ಪನುಮ್ ಕೋಶಿಯುಮ್, ಡ್ರೈವಿಂಗ್ ಲೈಸೆನ್ಸ್, ಕುರುತ್ತಿ, ಕೋಲ್ಡ್ ಕೇಸ್, ಬ್ರೋಡ್ಯಾಡಿ, ಜನಗಣಮನ.. ಇತ್ತೀಚಿನ ಚಿತ್ರಗಳು. ಅವರಿಗೆ 777 ಚಾರ್ಲಿಯ ಸ್ಟೋರಿ ಹೇಳಿದ್ದು ಮಿಕ್ಸಿಂಗ್ ಎಂಜಿನಿಯರ್ ರಾಜಾ ಕೃಷ್ಣನ್. ಸಿನಿಮಾ ನೋಡಿದ ಪೃಥ್ವಿರಾಜ್ ಮಲಯಾಳಂನಲ್ಲಿ ಸಿನಿಮಾ ವಿತರಣೆ ಹಕ್ಕು ತೆಗೆದುಕೊಂಡಿದ್ದಾರೆ. ಅವರೂ ಕೂಡಾ ನಾಯಿಪ್ರೇಮಿ ಅನ್ನೋದು ಸ್ಪೆಷಲ್ಲು.

    ಹಿಂದಿಯಲ್ಲಿ ಯುಎಫ್‍ಓ : ಒಂದೊಳ್ಳೆ ಚಿತ್ರದ ಮೂಲಕ ಇಡೀ ಇಂಡಿಯಾವನ್ನು ತಲುಪುವ ಐಡಿಯಾ ಇಟ್ಟುಕೊಂಡು ಬಂದಿರೋ ಯುಎಫ್‍ಓ, 777 ಚಾರ್ಲಿಯನ್ನು ಹಿಂದಿಯಲ್ಲಿ ದೇಶದಾದ್ಯಂತ ರಿಲಿಸ್ ಮಾಡುತ್ತಿದೆ.

    ರಕ್ಷಿತ್ ಶೆಟ್ಟಿ, ಸಂಗೀತಾ ಶೃಂಗೇರಿ, ರಾಜ್ ಬಿ.ಶೆಟ್ಟಿ, ಬಾಬ್ಬಿ ಸಿಂಹ ನಟಿಸಿರೋ ಚಿತ್ರಕ್ಕೆ ಕಿರಣ್ ರಾಜ್ ನಿರ್ದೇಶನವಿದೆ. ಸಿನಿಮಾ ಜೂನ್ 10ರಂದು ರಿಲೀಸ್ ಆಗುತ್ತಿದ