` yajamana, - chitraloka.com | Kannada Movie News, Reviews | Image

yajamana,

 • ಯಜಮಾನ ನಾಯಕಿಗೆ ಒಂದೇ ದಿನ ಎರಡು ಲಡ್ಡು..!

  tanya hope has two bog releases on same day

  ಯಜಮಾನ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ. ಹಾಗಂತ, ಅವರೊಬ್ಬರೇ ನಾಯಕಿ ಅಲ್ಲ. ದರ್ಶನ್ ಎದುರು ತಾನ್ಯಾ ಹೋಪ್ ಎಂಬ ಇನ್ನೊಬ್ಬ ನಾಯಕಿಯೂ ನಟಿಸಿದ್ದಾರೆ. ಬಸಣ್ಣಿ ಹಾಡಿನಲ್ಲಿ ಬೊಂಬಾಟಾಗಿ ಕುಣಿದಿರುವುದು ಅವರೇ. ಅವರಿಗೆ ಒಂದೇ ದಿನ ಎರಡು ಲಡ್ಡು ಬಿದ್ದಿದೆ.

  ಮಾರ್ಚ್ 1ಕ್ಕೆ ಕನ್ನಡದಲ್ಲಿ ತಾನ್ಯಾ ಹೋಪ್ ಅವರ ಯಜಮಾನ ರಿಲೀಸ್ ಆಗುತ್ತಿದೆ. ಅದೇ ದಿನ.. ತಮಿಳಿನಲ್ಲಿ ನಟಿಸಿರುವ ತಾಡಂ ಚಿತ್ರವೂ ರಿಲೀಸ್ ಆಗುತ್ತಿದೆ. ಯಜಮಾನ ಆ್ಯಕ್ಷನ್, ಫ್ಯಾಮಿಲಿ ಡ್ರಾಮ. ತಾಡಂ, ಥ್ರಿಲ್ಲರ್ ಸಿನಿಮಾ. ಒಟ್ಟಿನಲ್ಲಿ ತಾನ್ಯಾಗೆ ಒಂದೇ ದಿನ ಎರಡು ಲಡ್ಡು.

 • ಯಜಮಾನ ರೈತರ ಕಥೆನಾ..?

  is yajamana stor about farmers

  ಯಜಮಾನ ಚಿತ್ರದಲ್ಲಿರೋದು ರೈತರ ಕಥೆನಾ..? ಅಂಥಾದ್ದೊಂದು ನಿರೀಕ್ಷೆ ಚಿತ್ರದಲ್ಲಿದೆ. ಚಿತ್ರದಲ್ಲಿ ಅಂತಹುದ್ದೇನಿದೆ ಅನ್ನೋ ಮಾತಿಗೆ ದರ್ಶನ್ ಕೊಟ್ಟಿರೋ ಉತ್ತರ ಅದು. ರೈತನೊಬ್ಬ ಕಷ್ಟಪಟ್ಟು ದುಡೀತಾನೆ. ಬೆವರು ಬಸೀತಾನೆ. ಆದರೆ, ಬೆವರನ್ನೇ ಸುರಿಸದ ಮಧ್ಯವರ್ತಿ ಅದರ ಲಾಭ ಪಡೀತಾನೆ. ಇತ್ತ, ಅದೇ ರೈತ ಬೆಂಗಳೂರಿನ ಹೋಟೆಲ್ಲು, ಮಾರ್ಕೆಟ್ಟುಗಳಲ್ಲಿ ಕೂಲಿಯಾಗ್ತಾನೆ. ರೈತನಿಗೆ ನ್ಯಾಯ ಎಲ್ಲಿ ಸಿಗುತ್ತೆ.. ಇಂಥ ಪ್ರಶ್ನೆಯನ್ನ ನಮ್ಮ ಸಿನಿಮಾ ಎತ್ತಿ ಹೇಳುತ್ತೆ ಎಂದಿದ್ದಾರೆ.

  ಸ್ವಲ್ಪ ನೆನಪಿಸಿಕೊಳ್ಳಿ, ಸಾರಥಿ ಚಿತ್ರದ ರೇಷ್ಮೆ ಬೆಳೆಯುವ ರೈತ ಮತ್ತು ಪೊಲೀಸ್ ದೃಶ್ಯವನ್ನು ಕಣ್ಣ ಮುಂದೆ ತಂದುಕೊಳ್ಳಿ. ಆ ಸೀನ್ ಅದೆಷ್ಟು ವೈರಲ್ ಎಂದರೆ, ಈಗಲೂ ಆಗಾಗ್ಗೆ ವಾಟ್ಸಪ್ಪು, ಫೇಸ್‍ಬುಕ್‍ಗಳಲ್ಲಿ ಮೆರೆದಾಡುತ್ತೆ. ಹಾಗಾದರೆ, ಹರಿಕೃಷ್ಣ ಯಜಮಾನನಲ್ಲಿ ಅದೇ ಕಥೆ ಹೇಳಿದ್ದಾರಾ..?

  ಇಷ್ಟೆ ದಿನ ಕಾದಿದ್ದೀವಂತೆ.. ಇನ್ನೊಂದು ದಿನ ಕಾಯೋಕಾಗಲ್ವಾ..? ಯಜಮಾನ ನಾಳೆಯೇ ರಿಲೀಸ್.

 • ಯಜಮಾನನ 4 ಪದಗಳಲ್ಲಿ ಇಷ್ಟೆಲ್ಲ ಕಥೆ ಇದ್ಯಾ..?

  yajamana four words has many meanings

  ಯಜಮಾನ. ಇರೋದು 4 ಅಕ್ಷರ. ಈ ನಾಲ್ಕು ಅಕ್ಷರಗಳಲ್ಲಿ ಇಷ್ಟೆಲ್ಲ ಕಥೆ ಇದ್ಯಾ ಅನ್ನಿಸುವಂತೆ ಮಾಡೋದು ಕವಿಗಳು. ಮೊದಲೇ ಗಾದೆ ಇದ್ಯಲ್ಲ.. ರವಿ ಕಾಣದ್ದನ್ನು ಕವಿ ಕಂಡ ಅಂತಾ. ಇಲ್ಲಿ ಸ್ವಲ್ಪ ಚೇಂಜ್ ಮಾಡ್ಕೊಳಿ, ನಿರ್ಮಾಪಕರು, ನಿರ್ದೇಶಕರು, ನಾಯಕ ನಟ, ಕಲಾವಿದ, ತಂತ್ರಜ್ಞರಾರೂ ಕಾಣದ ವಿಶೇಷಗಳನ್ನು ದರ್ಶನ್ ಅವರ ಅಭಿಮಾನಿಯೂ ಆಗಿರುವ ಕವಿ ಕವಿರಾಜ್ ಕಂಡಿದ್ದಾರೆ.  ಯಜಮಾನ ಚಿತ್ರದ 4 ಅಕ್ಷರಗಳನ್ನೇ ಒಡೆದಿದ್ದಾರೆ ಕವಿರಾಜ್.

  ಜನ : ಜನ ಈ ಸಿನಿಮಾ ನೋಡ್ತಾರೆ.

  ಜಯ : ಈ ಸಿನಿಮಾಗೆ ಜಯ ಗ್ಯಾರಂಟಿ.

  ಜಮಾ : ನಿರ್ಮಾಪಕರ ಖಾತೆಗೆ ಲಾಭ ಜಮಾ ಆಗುತ್ತೆ.

  ಜಮಾನ : ಈ ಜಮಾನ ಯಜಮಾನನ್ನು ಮೆಚ್ಚಿಕೊಳ್ಳುತ್ತೆ.

  ಅಂದಹಾಗೆ ದರ್ಶನ್, ಯಜಮಾನ ಚಿತ್ರದ ಒಂದು ಮುಂಜಾನೆ ಹಾಡು ಬರೆದಿದ್ದಾರೆ. ಕವಿರಾಜ್ ಬರೆದಿದ್ದ 50 ಪಲ್ಲವಿಗಳನ್ನು ಸೈಡಿಗಿಟ್ಟು, ನಿರ್ದೇಶಕ ಹರಿಕೃಷ್ಣ ಈ ಪಲ್ಲವಿ ಎತ್ತಿಕೊಂಡರಂತೆ.

 • ಯಜಮಾನನ ಜೊತೆ ಯಜಮಾನ್ತಿ ಕಟೌಟ್

  yajamani rashmika's cutout with darshan

  ಯಾವುದೇ ಸ್ಟಾರ್ ಸಿನಿಮಾ ರಿಲೀಸ್ ಆದರೆ, ಆ ನಟನ ಕಟೌಟ್ ಹಾಕುವುದು ಚಿತ್ರರಂಗದಲ್ಲಿ ಮಾಮೂಲು. ಕೆಲವೊಮ್ಮೆ ಹೀರೋಯಿನ್‍ಗಳ ಕಟೌಟ್ ಹಾಕುವುದೂ ಇದೆ. ಕನ್ನಡದಲ್ಲಿ ಹಾಗೆ ಅತೀ ಹೆಚ್ಚು ಕಟೌಟ್ ಹಾಕಿಸಿಕೊಂಡ ಹೀರೋಯಿನ್ ಆಗಿ ಖ್ಯಾತಿ ಹೊಂದಿರುವುದು ಒನ್ & ಓನ್ಲಿ ಮಾಲಾಶ್ರೀ. ಈಗ ಮತ್ತೊಮ್ಮೆ ಆ ಸಂಪ್ರದಾಯ ಶುರುವಾದಂತಿದೆ. ಯಜಮಾನತಿಯ ಕಟೌಟ್ ಕೂಡಾ ಬಂದಿದೆ.

  ರಶ್ಮಿಕಾ ಮಂದಣ್ಣ ಅಭಿಮಾನಿಗಳು ಯಜಮಾನ ದರ್ಶನ್ ಕಟೌಟ್ ಪಕ್ಕದಲ್ಲಿಯೇ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಅವರ ಕಟೌಟ್‍ನ್ನೂ ಹಾಕಿ ಸಂಭ್ರಮಿಸಿದ್ದಾರೆ. 

  ತುಮಕೂರು ಸೇರಿದಂತೆ ಹಲವೆಡೆ ಈ ಬಾರಿ ರಶ್ಮಿಕಾ ಮಂದಣ್ಣ ಕಟೌಟ್‍ಗಳು ರಾರಾಜಿಸಿವೆ. ಅಭಿಮಾನಿಗಳ ಕ್ರೇಜ್‍ಗೆ ಥ್ರಿಲ್ ಆಗಿರುವ ರಶ್ಮಿಕಾ ಕಟೌಟ್ ಹಾಕುವಾಗ ಅಪಾಯಕ್ಕೊಳಗಾಗದಂತೆ ಜಾಗ್ರತೆ ವಹಿಸಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಹರಿಕೃಷ್ಣ ನಿರ್ದೇಶನದ, ಚಾಲೆಂಜಿಂಗ್ ಸ್ಟಾರ್ ಅಭಿನಯದ ಯಜಮಾನ, ಬಾಕ್ಸಾಫೀಸ್‍ನಲ್ಲಿ ದೂಳೆಬ್ಬಿಸುತ್ತಿದೆ.

 • ಯಜಮಾನನ ಪೋಸ್ಟರ್‍ನಲ್ಲೇ ಕಥೆ ಗೊತ್ತಾಯ್ತಾ..?

  yajamana first motion poster

  ಭೂಮಿ ತೂಕದ ಆನೆ.. ಬೆಳೆದ ತನ್ನಿಂದ ತಾನೆ.. ಕೂಗಿ ಹೇಳಿತು ಜಮಾನಾ.. ಅಭಿಮಾನಿಗಳ ಸುಲ್ತಾನ.. ಅಕ್ಷರಗಳ ಜೊತೆ ಆಟವಾಡುತ್ತಲೇ ಹೋರಿಗಳ ಜೊತೆ ನಿಂತಿರುವ ದರ್ಶನ್ ಕಾಣಿಸಿಕೊಳ್ತಾರೆ. ಇದು ಯಜಮಾನನ ಫಸ್ಟ್‍ಲುಕ್. ಮೋಷನ್ ಪೋಸ್ಟರ್ ರಿಲೀಸ್ ಮಾಡಿದೆ ಸಿನಿಮಾ ಟೀಂ.

  ಕಳೆದ ಕೆಲವು ದಿನಗಳಿಂದ ಟ್ರೆಂಡಿಂಗ್‍ನಲ್ಲಿದ್ದ ಯಜಮಾನನ ಫಸ್ಟ್‍ಲುಕ್ ಪೋಸ್ಟರ್ ಅಭಿಮಾನಿಗಳನ್ನು ಹುಚ್ಚೆಬ್ಬಿಸಿರುವುದು ನಿಜ. ಕುಮಾರ್ ನಿರ್ದೇಶನದ ಚಿತ್ರದ ಪೋಸ್ಟರ್‍ನಲ್ಲಿ ಚಿತ್ರದ ಕಥೆಯ ಸುಳಿವೂ ಇದೆಯಂತೆ. 

  ಶೈಲಜಾ ನಾಗ್, ಬಿ.ಸುರೇಶ್ ನಿರ್ಮಾಣದ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ದರ್ಶನ್‍ಗೆ ನಾಯಕಿ. 

 • ಯಜಮಾನನ ಬಸಣ್ಣಿ.. ಹಾಡು. ಎಲ್ಲಿಟ್ಟಿದ್ರಿ ಭಟ್ರೆ ಇಂಥಾ ಪದಗಳನ್ನ..?

  yogaraj bhatt thrills youth again

  ಯಜಮಾನ ಚಿತ್ರದ ಮೂರನೇ ಹಾಡಿನ ಲಿರಿಕಲ್ ವಿಡಿಯೋ ಹೊರಬಿದ್ದಿದೆ. ಬಸಣ್ಣಿ ಹಾಡಿನ ಸಾಹಿತ್ಯ ಕೇಳಿದವರು ಭಟ್ಟರು ಇಂಥ ಪದಗಳನ್ನ ಅದೆಲ್ಲಿಟ್ಟಿದ್ರು ಅಂತಾ ಬೆರಗುಗೊಂಡಿದ್ದಾರೆ.

  ಹಾಡಿನಲ್ಲಿ ಭಟ್ಟರು ಗಾದೆ, ನಾಣ್ಣುಡಿ, ಆಡುಮಾತು, ಪೋಲಿಮಾತು ಎಲ್ಲವನ್ನೂ ಹದವಾಗಿ ಬೆರೆಸಿ ಕಟ್ಟಿಕೊಟ್ಟಿದ್ದಾರೆ.

  ಹುಡ್ಗೀನ ಕೈ ತೊಳ್ಕೊಂಡು ಮುಟ್ಬೇಕು.. ಸಂಬಂಧ ಫಿಕ್ಸ್ ಮಾಡೋಕೆ ಬಂದೀನಿ.. ಲಕ್ಸು ಸೋಪ್ ಹಾಕ್ಕೊಂಡು ಜಳಕ ಮಾಡೀನಿ.. ಉಳ್ಳಾಗಡ್ಡಿ ತಿನ್ನೋದು ಯಾಕೆ ಅನ್ನೋದೂ ಹಾಡಿನ ಪದವಾಗಿದೆ.

  ಇಳಕಲ್ ಸೀರೆ ಮೊಣಕಾಲಿನ ಮೇಲೆ ಉಡೋದ್ಯಾಕೆ, ಮಕಮಲ್ ಟೋಪಿ, ತಮ್ಮ ಶ್ರೀದೇವಿ ಮೇಲಿನ ಪ್ರೀತಿ.. ಎಲ್ಲವನ್ನೂ ಹಾಡಿಗೆ ತಂದಿದ್ದಾರೆ.  ದರ್ಶನ್ ಅವರಿಗಾಗಿ ಭಟ್ಟರು ಡಿಫರೆಂಟ್ ಡಿಫರೆಂಟ್ ಪದಗಳ ಹಾಡನ್ನು ಸೃಷ್ಟಿಸಿ ಒನ್ಸ್ ಎಗೇಯ್ನ್ ಹಾಡನ್ನು ಗೆಲ್ಲಿಸಿದ್ದಾರೆ.

  ಅಪ್ಪಟ ತುಂಡೈಕ್ಳ ಹಾಡಿಗೆ ಹರಿಕೃಷ್ಣ ಸಂಗೀತ ಜೋಡಿಸಿದ್ದಾರೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿರೋ ಚಿತ್ರಕ್ಕೆ ಶೈಲಜಾ ನಾಗ್ ನಿರ್ಮಾಪಕಿ. ಹಾಡು ಹಿಟ್ಟಾಗಿದೆ. ವೈರಲ್ಲಾಗಿದೆ.

 • ಯಜಮಾನನ ವಿತರಣೆ ಕಾರ್ತಿಕ್ ಗೌಡ ಪಾಲು

  karthik gowda to distribute yajamana

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರ ಬಿಡುಗಡೆಗೆ ರೆಡಿಯಾಗುತ್ತಿರುವಾಗಲೇ ಚಿತ್ರಕ್ಕೆ ಡಿಮ್ಯಾಂಡ್ ಜೋರಾಗಿದೆ. ಚಿತ್ರದ ವಿತರಣೆ ಹೊಣೆಯನ್ನು ನಿರ್ಮಾಪಕ ಕಾರ್ತಿಕ್ ಗೌಡ ವಹಿಸಿಕೊಂಡಿದ್ದಾರೆ. ಕಾರ್ತಿಕ್ ಗೌಡ ಅವರ ಕೆ.ಆರ್.ಜಿ. ಸ್ಟುಡಿಯೋ ಮೂಲಕ ಯಜಮಾನ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

  ಯಜಮಾನ ಚಿತ್ರವನ್ನು ರಿಲೀಸ್ ಮಾಡುವುದಕ್ಕೆ ಎಕ್ಸೈಟ್ ಆಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಕಾರ್ತಿಕ್ ಗೌಡ. ಕೆಜಿಎಫ್‍ನ ಸಹನಿರ್ಮಾಪಕರಲ್ಲಿ ಒಬ್ಬರಾದ ಕಾರ್ತಿಕ್ ಗೌಡ, ವಿಜಯ್ ಕಿರಗಂದೂರು ಅವರ ಸಂಬಂಧಿಯೂ ಹೌದು. ದರ್ಶನ್, ರಶ್ಮಿಕಾ ಮಂದಣ್ಣ ಅಭಿನಯದ ಸಿನಿಮಾಗೆ ಪಿ.ಕುಮಾರ್, ಹರಿಕೃಷ್ಣ ನಿರ್ದೇಶಕರು. ಶೈಲಜಾ ನಾಗ್ ಮತ್ತು ಬಿ.ಸುರೇಶ್ ನಿರ್ಮಾಣದ ಸಿನಿಮಾ ಇದೇ ತಿಂಗಳ ಅಂತ್ಯಕ್ಕೆ ಅಥವಾ ಮಾರ್ಚ್‍ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

 • ಯಜಮಾನನ ಸೆಟ್‍ನಲ್ಲಿ ಯಜಮಾನ್ತಿ..!

  darshan's wife visits yajamana shooting spot

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರ ತಂಡಕ್ಕೆ ಅಚ್ಚರಿಯ ಶಾಕ್ ಕೊಟ್ಟಿದ್ದಾರೆ ವಿಜಯಲಕ್ಷ್ಮಿ ದರ್ಶನ್. ಪ್ಯಾಲೇಸ್ ಗ್ರೌಂಡ್‍ನಲ್ಲಿ ಶೂಟಿಂಗ್ ನಡೆಯುತ್ತಿದ್ದ ವೇಳೆ ಸೆಟ್‍ಗೆ ಭೇಟಿ ಕೊಟ್ಟ ವಿಜಯಲಕ್ಷ್ಮಿ, ಎಲ್ಲರನ್ನೂ ಅಚ್ಚರಿಯಲ್ಲಿ ಮುಳುಗಿಸಿದರು. ವಿಜಯಲಕ್ಷ್ಮಿ, ದರ್ಶನ್ ಚಿತ್ರಗಳ ಚಿತ್ರೀಕರಣ ಜಾಗಕ್ಕೆ ಹೋಗುವುದು ಹೊಸದೇನೂ ಅಲ್ಲ. ಆದರೆ, ಇತ್ತೀಚೆಗೆ ಅದು ಅಪರೂಪವಾಗಿತ್ತು.

  ಯಜಮಾನರ ಜೊತೆ ಮಾತನಾಡಿ, ಚಿತ್ರತಂಡದವರೊಂದಿಗೆ ಬೆರೆತಿದ್ದ ವಿಜಯಲಕ್ಷ್ಮಿ, ಯಜಮಾನ ಚಿತ್ರತಂಡದ ಖುಷಿ ಇಮ್ಮಡಿಗೊಳಿಸಿದ್ದರು.

 • ಯಜಮಾನನನ್ನು ಮರೆತಿಲ್ಲ ರಶ್ಮಿಕಾ ಮಂದಣ್ಣ

  ಯಜಮಾನನನ್ನು ಮರೆತಿಲ್ಲ ರಶ್ಮಿಕಾ ಮಂದಣ್ಣ

  ರಶ್ಮಿಕಾ ಮಂದಣ್ಣ ಕನ್ನಡವನ್ನೇ ಮರೆತುಬಿಟ್ಟಿದ್ದಾರಾ..? ತಾವು ಕನ್ನಡ ಸಿನಿಮಾಗಳ ಮೂಲಕ ಸಿನಿಮಾಗೆ ಬಂದೆ ಅನ್ನೋದನ್ನು ಮರೆತು ಹೋಗಿದ್ದಾರಾ..? ಇಂಥಾದ್ದೊಂದು ಪ್ರಶ್ನೆ ಇತ್ತೀಚೆಗೆ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿತ್ತು. ಅದಕ್ಕೆ ಕಾರಣ, ಪೊಗರು ಚಿತ್ರದ ಬಗ್ಗೆ ರಶ್ಮಿಕಾ ಮಂದಣ್ಣ ವರ್ತಿಸಿದ ರೀತಿ. ಚಿತ್ರದ ಪ್ರಚಾರವನ್ನು ರಶ್ಮಿಕಾ ಸರಿಯಾಗಿ ಮಾಡಲಿಲ್ಲ ಅನ್ನೋದು ಕೂಡಾ ಒಂದು ಕಾರಣ. ಇನ್ನು ತೆಲುಗು, ತಮಿಳು ನಟರ ಹುಟ್ಟುಹಬ್ಬಗಳಿಗೆಲ್ಲ ವಿಶ್ ಮಾಡುವ ಸಂಪ್ರದಾಯ ಪಾಲಿಸುವ ರಶ್ಮಿಕಾ, ಕನ್ನಡದ ತಾರೆಗಳನ್ನು ನೆನಪಿಸಿಕೊಳ್ಳೋದು ಅಪರೂಪ.

  ಹೀಗಿರುವಾಗ ರಶ್ಮಿಕಾ ಪೇಜ್‍ನಲ್ಲಿ ಇದ್ದಕ್ಕಿದ್ದಂತೆ ಯಜಮಾನನ ಫೋಟೋ ಕಾಣಿಸಿತು. ಹೌದು, ಯಜಮಾನ ಚಿತ್ರ ರಿಲೀಸ್ ಆದ 2 ವರ್ಷದ ನೆನಪನ್ನು ರಶ್ಮಿಕಾ ಮಂದಣ್ಣ,  ದರ್ಶನ್ ಜೊತೆಗಿರೋ ಫೋಟೋ ಹಂಚಿಕೊಂಡು ಖುಷಿಪಟ್ಟಿದ್ದರು.

  ಅಂದಹಾಗೆ ಯಜಮಾನ ಮಾರ್ಚ್ 1ರಂದು ರಿಲೀಸ್ ಆಗಿತ್ತು. ಸೂಪರ್ ಹಿಟ್ ಎನಿಸಿಕೊಂಡಿತ್ತು. ಈಗ ಮಾರ್ಚ್ 11ಕ್ಕೆ ರಾಬರ್ಟ್ ರಿಲೀಸ್ ಆಗುತ್ತಿದೆ. ಅಷ್ಟೇ ಅಲ್ಲ, ತೆಲುಗಿನಲ್ಲೂ ಬರುತ್ತಿರೋ ಸಿನಿಮಾ, ದರ್ಶನ್ ಪಾಲಿಗೆ ಲಕ್ಕಿ ಮಾರ್ಚ್ ಆಗಲಿ.

 • ರಶ್ಮಿಕಾಳಂತ ಮಗಳಿರಬೇಕಿತ್ತು ಎಂದರೇಕೆ ಶಂಕರ್ ಅಶ್ವತ್ಥ್..?

  shankar ashwath says he would be glad to have a daughter like rashmika

  ಯಜಮಾನ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದಲ್ಲಿ ದರ್ಶನ್‍ಗೆ ರಶ್ಮಿಕಾ ಮಂದಣ್ಣ ಜೋಡಿ. ಇದೇ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವುದು ಶಂಕರ್ ಅಶ್ವತ್ಥ್. ಬಹಳ ದಿನಗಳ ನಂತರ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವ ಶಂಕರ್ ಅಶ್ವತ್ಥ್, ನನಗೂ ರಶ್ಮಿಕಾರಂತಹ ಮಗಳಿರಬೇಕಿತ್ತು ಎಂದಿರಬೇಕಿತ್ತು.

  ಆಗಿದ್ದಿಷ್ಟೆ, ಶೂಟಿಂಗ್ ವೇಳೆ ಶಂಕರ್ ಅಶ್ವತ್ಥ್ ಭುಜದ ನೋವಿನಿಂದ ಬಳಲುತ್ತಿದ್ದರಂತೆ. ಸುಸ್ತಾಗಿ ಕುಳಿತಿದ್ದಾಗ ರಶ್ಮಿಕಾ ಮಂದಣ್ಣ, ಶಂಕರ್ ಅಶ್ವತ್ಥ್ ಅವರ ಭುಜಗಳನ್ನು ಒತ್ತಿ, ಮಸಾಜ್ ಮಾಡಿದ್ರಂತೆ. ರಶ್ಮಿಕಾ ಹಾಗೆ ಭುಜಗಳನ್ನು ಒತ್ತುತ್ತಿದ್ದಾಗ, ನನಗೂ ಇಂತಹ ಮಗಳಿರಬೇಕಿತ್ತು ಎನ್ನಿಸಿತು ಎಂದು ಹೇಳಿಕೊಂಡಿದ್ದಾರೆ ಶಂಕರ್ ಅಶ್ವತ್ಥ್.

  ಇದು ನನಗೆ ಸಿಕ್ಕ ಅತಿದೊಡ್ಡ ಉಡುಗೊರೆ ಎಂದಿದ್ದಾರೆ ರಶ್ಮಿಕಾ ಮಂದಣ್ಣ. ಅಷ್ಟೇ ಅಲ್ಲ, ಅಪ್ಪನ ಪ್ರೀತಿಯ ಎದುರು ಮಗಳು ಖಂಡಿತಾ ಕಣ್ಣೀರಾಗುತ್ತಾಳೆ. ಅಷ್ಟು ಸಣ್ಣ ಕೆಲಸಕ್ಕೆ ನೀವು ನನಗೆ ಮಗಳ ಸ್ಥಾನ ಕೊಟ್ಟಿರಿ. ಥ್ಯಾಂಕ್ಯೂ ಅಪ್ಪಾ ಎಂದಿದ್ದಾರೆ.

 • ಶಿವನಂದಿ ಹಾಡಿಗೆ ದರ್ಶನ್ ಫ್ಯಾನ್ಸ್ ಚಿತ್ತೋ ಚಿತ್ತು..

  yajamana's first song break records

  ಯಜಮಾನ ಚಿತ್ರದ ಮೊದಲ ಲಿರಿಕಲ್ ಸಾಂಗ್ ವಿಡಿಯೋ ಹೊರಬಂದಿದೆ. ನಂದಿ.. ನಂದಿ.. ಶಿವನಂದಿ.. ಎಂದು ಸಾಗುವ ಹಾಡು ಹೀರೋ ಇಂಟ್ರೊಡಕ್ಷನ್ ಸಾಂಗ್ ಇರಬೇಕು. ದರ್ಶನ್ ಅವರ ಮೇಲೆ ಬರೆದಿರುವ ಹಾಡಲ್ಲಿ, ಯಜಮಾನ ದರ್ಶನ್ ಊರಿನ ರಕ್ಷಕ ಇರಬೇಕು ಎಂಬ ಭಾವನೆ ಮೂಡುವಂತಿದೆ.

  ದರ್ಶನ್ ಅವರ ಯಜಮಾನ ಚಿತ್ರದ ಮೊದಲ ಹಾಡಿನ ಝಲಕ್ ಇದು. ರಶ್ಮಿಕಾ ಮಂದಣ್ಣ ಮತ್ತು ತಾನ್ಯಾ ಹೋಪ್ ನಟಿಸಿರುವ ಚಿತ್ರಕ್ಕೆ ಪಿ.ಕುಮಾರ್ ಮತ್ತು ಹರಿಕೃಷ್ಣ ನಿರ್ದೇಶಕರು. ಸಂಗೀತ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ ಹರಿಕೃಷ್ಣ. ಭರ್ಜರಿ ಚೇತನ್ ಕುಮಾರ್ ಬರೆದಿರುವ ಹಾಡು

  ಶೈಲಜಾ ನಾಗ್ ಮತ್ತು ಬಿ.ಸುರೇಶ್ ನಿರ್ಮಾಣದ ಸಿನಿಮಾ ಫೆಬ್ರವರಿ ಎಂಡ್ ಅಥವಾ ಮಾರ್ಚ್‍ನಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ. ಚಿತ್ರದ ಹಾಡಂತೂ ಆನ್‍ಲೈನ್‍ನಲ್ಲಿ ದಾಖಲೆಗಳನ್ನು ಚಿಂದಿ ಚಿಂದಿ ಮಾಡುತ್ತಿದೆ.

 • ಸಂಕ್ರಾಂತಿಗೆ ದರ್ಶನ್ ಶಿವನಂದಿ ಕಾಣಿಕೆ

  shivanandi song on sankranthi

  ಸಂಕ್ರಾಂತಿಯಲ್ಲಿ ಚಿತ್ರರಂಗದಿಂದ ಸಹಜವಾಗಿಯೇ ವಿಶೇಷ ಕಾಣಿಕೆಗಳಿರುತ್ತವೆ. ಅದು ಅಭಿಮಾನಿಗಳಿಗಾಗಿ. ಹೀಗಾಗಿಯೇ ಈ ಬಾರಿ ದರ್ಶನ್ ಸಂಕ್ರಾಂತಿಗೆ ವಿಶೇಷ ಉಡುಗೊರೆ ಕೊಡುತ್ತಿದ್ದಾರೆ. ದರ್ಶನ್ ಅವರ ಯಜಮಾನ ಚಿತ್ರದ ಶಿವನಂದಿ ಹಾಡು ಸಂಕ್ರಾಂತಿಗೇ ರಿಲೀಸ್ ಆಗುತ್ತಿದೆ. 

  ಪಿ.ಕುಮಾರ್ ಮತ್ತು ಹರಿಕೃಷ್ಣ ನಿರ್ದೇಶನದ ಯಜಮಾನ ಚಿತ್ರದ ಈ ಹಾಡಿಗೆ ಸಾಹಿತ್ಯ ಬರೆದಿರುವುದು ಬಹದ್ದೂರ್ ಚೇತನ್. ಶೈಲನಾ ನಾಗ್ ಮತ್ತು ಬಿ.ಸುರೇಶ್ ನಿರ್ಮಾಣದ ಚಿತ್ರವಿದು. ದರ್ಶನ್ ಸಿನಿಮಾಗಾಗಿ ಚಾತಕಪಕ್ಷಿಗಳಂತೆ ಕಾಯುತ್ತಿರುವ ಅಭಿಮಾನಿಗಳಿಗೆ ಇದು ಊಟಕ್ಕೆ ಮೊದಲಿನ ಉಪ್ಪಿನಕಾಯಿ.

 • ಸಾರಥಿಯನ್ನು ನೆನಪಿಸುತ್ತಾ ಯಜಮಾನ..?

  jallikattu bulls in yajamana

  ಸಾರಥಿ, ದರ್ಶನ್ ಅಭಿನಯದ ಬ್ಲಾಕ್‍ಬಸ್ಟರ್ ಸಿನಿಮಾ. ಆ ಚಿತ್ರದಲ್ಲಿ ಗಮನ ಸೆಳೆದೆದ್ದುದು ಕಣಿವೆಯಲ್ಲಿ ಗೂಳಿಗಳ ಓಟ. ಚಿತ್ರದ ಹೈಲೈಟ್‍ಗಳಲ್ಲಿ ಅದೂ ಒಂದಾಗಿತ್ತು. ಅದು ಮತ್ತೆ ಯಜಮಾನನಲ್ಲಿ ಮರುಕಳಿಸಿದೆ. ಯಜಮಾನ ಚಿತ್ರದಲ್ಲಿ 10 ಜಲ್ಲಿಕಟ್ಟು ಗೂಳಿಗಳನ್ನು ಬಳಸಿಕೊಳ್ಳಲಾಗಿದೆ.

  ತಮಿಳುನಾಡಿನಿಂದ ಜಲ್ಲಿಕಟ್ಟುಗಾಗಿಯೇ ತಯಾರು ಮಾಡಿದ ಕಟ್ಟುಮಸ್ತಾದ 10 ಗೂಳಿಗಳನ್ನು ದಿನಕ್ಕೆ 10 ಸಾವಿರದಂತೆ ಬಾಡಿಗೆ ಕೊಟ್ಟು ಕರೆಸಿಕೊಂಡು ಚಿತ್ರೀಕರಣ ಮಾಡಿದೆ ಚಿತ್ರತಂಡ. ಯಜಮಾನ ಚಿತ್ರದ ಹೈಲೈಟ್ ಅದು.

  ಮಾರ್ಚ್ 1ಕ್ಕೆ ರಿಲೀಸ್ ಆಗುತ್ತಿರುವ ಯಜಮಾನ ಚಿತ್ರದ ಅತಿದೊಡ್ಡ ಹೈಲೈಟ್ ಈ ಜಲ್ಲಿಕಟ್ಟು ಗೂಳಿಗಳು. ಚಿತ್ರದಲ್ಲಿ ದರ್ಶನ್ ನಂದಿಯ ಎದುರು ನಿಂತಿರುವುದಕ್ಕೂ, ಈ ಗೂಳಿಗಳಿಗೂ ಸಂಬಂಧವಿದೆ ಎನ್ನಿಸಿದ್ರೆ ಅಚ್ಚರಿಯಿಲ್ಲ. 

  ಬಿ.ಸುರೇಶ್, ಶೈಲಜಾ ನಾಗ್ ನಿರ್ಮಾಣದ ಚಿತ್ರಕ್ಕೆ ಹರಿಕೃಷ್ಣ ನಿರ್ದೇಶಕ ಮತ್ತು ಸಂಗೀತ ನಿರ್ದೇಶಕ. ರಶ್ಮಿಕಾ ಮಂದಣ್ಣ ನಾಯಕಿಯಾಗಿರುವ ಚಿತ್ರ ಬಿಡುಗಡೆಗೂ ಮುನ್ನವೇ ಭರ್ಜರಿ ಹವಾ ಎಬ್ಬಿಸಿದೆ. ದರ್ಶನ್ ಸಿನಿಮಾ ಹೆಚ್ಚೂ ಕಡಿಮೆ ಎರಡು ವರ್ಷದ ಗ್ಯಾಪ್ ನಂತರ ತೆರೆಗೆ ಬರುತ್ತಿರುವುದೇ ಅಭಿಮಾನಿಗಳಿಗೆ ಹಬ್ಬ.

 • ಸುದೀಪ್, ರಕ್ಷಿತ್ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾದ ತರುಣ್ ಸುಧೀರ್

  tharun sudhir in poster controversy

  ಕನ್ನಡದ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರಾಗಿರುವ ತರುಣ್ ಸುಧೀರ್, ವಿವಾದದ ಸುಳಿಗೆ ಸಿಲುಕಿದ್ದಾರೆ. ದರ್ಶನ್ ಅಭಿನಯದ ರಾಬರ್ಟ್ ಚಿತ್ರದಲ್ಲಿ ಬ್ಯುಸಿಯಾಗಿರುವ ತರುಣ್, ಏನೋ ಮಾಡಲು ಹೋಗಿ, ಇನ್ನೇನೋ ಮಾಡಿಕೊಂಡುಬಿಟ್ಟಿದ್ದಾರೆ. ಆಗಿರೋದಿಷ್ಟೆ, ಅವನೇ ಶ್ರೀಮನ್ನಾರಾಯಣ ಚಿತ್ರದ ಪೋಸ್ಟರ್ ರಿಲೀಸ್ ಆದಾಗ, ತರುಣ್ ಸುಧೀರ್ ವಿಶ್ ಮಾಡಿದ್ದರು. ಆದರೆ, ವಿಶ್ ಮಾಡುವಾಗ ಫಟಾಪೋಸ್ಟರ್ ನಿಕ್ಲಾ ಹೀರೋ ಎನ್ನುತ್ತಾ ರಕ್ಷಿತ್‍ರನ್ನು ಕಾಲೆಳೆದರು. ಆ ಮೂಲಕ ಅವನೇ ಶ್ರೀಮನ್ನಾರಾಯಣದ ಪೋಸ್ಟರ್ ನಕಲಿ ಎಂದು ಕೆಣಕಿದರು. 

  ಇದಾದ ಬೆನ್ನಲ್ಲೇ ತರುಣ್ ಸುಧೀರ್ ಅವರ ರಾಬರ್ಟ್ ಪೋಸ್ಟರ್ ನಕಲಿ ಎಂದು ಅಭಿಮಾನಿಗಳು ಟ್ರೋಲ್ ಶುರು ಮಾಡಿದ್ರು. ಏಕೆಂದರೆ, ರಾಬರ್ಟ್ ಚಿತ್ರದ ಪೋಸ್ಟರ್‍ಗೂ, ಹಾಲಿವುಡ್ ನಟ ಡ್ವೇಯ್ಸ ಜಾನ್ಸನ್ ಹಂಚಿಕೊಂಡಿದ್ದ ಫೋಟೋಗೂ ಹೋಲಿಕೆಗಳಿದ್ದವು. 

  ಇದಷ್ಟೇ ಅಲ್ಲ, ಇದರ ಜೊತೆಗೆ ಕಿಚ್ಚ ಸುದೀಪ್‍ರ ಪೈಲ್ವಾನ್‍ಗೆ ವಿಶ್ ಮಾಡಲಿಲ್ಲ, ಬಂದ ದಾರಿಯನ್ನು ಮರೆತುಬಿಟ್ರಾ ಎಂದು ಸುದೀಪ್ ಅಭಿಮಾನಿಗಳು ತರುಣ್ ವಿರುದ್ಧ ಮುಗಿಬಿದ್ದರು.

  ಒಟ್ಟಿನಲ್ಲಿ ಕನ್ನಡದ ಸ್ಟಾರ್ ನಿರ್ದೇಶಕರಾಗಿರುವ ತರುಣ್ ಸುಧೀರ್, ಏಕಕಾಲಕ್ಕೆ ಇಬ್ಬರು ಸ್ಟಾರ್‍ಗಳ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

 • ಸ್ವೀಡನ್‍ಗೆ ಹೊರಟ ಯಜಮಾನ ದರ್ಶನ್

  darshan heads to sweden for completing last phase of yajamana movie shooting

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಗುಣಮುಖರಾಗಿದ್ದಾರೆ. ಆಕ್ಸಿಡೆಂಟ್ ನಂತರ ಕೈಗೆ ಪ್ಲಾಸ್ಟರ್ ಹಾಕಿಕೊಂಡಿದ್ದ ದರ್ಶನ್, ಮತ್ತೆ ಕಾಯಕದತ್ತ ಮುಖ ಮಾಡಿದ್ದಾರೆ. ಯಜಮಾನ ಚಿತ್ರದ ಹಾಡುಗಳ ಶೂಟಿಂಗ್ ಶುರುವಾಗಿದೆ. ಸ್ವೀಡನ್‍ನಲ್ಲಿ.

  ಚಿತ್ರತಂಡದ ಜೊತೆ ಸ್ವೀಡನ್‍ನತ್ತ ಪ್ರಯಾಣ ಬೆಳೆಸಿದ್ದಾರೆ ದರ್ಶನ್. ಡ್ಯಾನ್ಸ್ ಮಾಸ್ಟರ್ ಗಣೇಶ್ ಹಾಡುಗಳ ಕೊರಿಯೋಗ್ರಫಿ ಮಾಡಲಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ದರ್ಶನ್ ಅವರ ಮೇಲೆ ಫೋಕಸ್ ಆಗಿರುವ ಹಾಡುಗಳ ಶೂಟಿಂಗ್ ಸ್ವೀಡನ್‍ನಲ್ಲಿ ನಡೆಯಲಿದೆ. 

 • ಹತ್ ರುಪಾಯ್‍ಗೊಂದು ಯಜಮಾನ..

  one more song from yajamana goes viral

  ಬಾಳೊಂದು ಹರಳೆಣ್ಣೆ ಪೇಟೆ..ಇಲ್ಲಿ ಒಬ್ಬೊಬ್ಬಂದ್ ಒಂದೊಂದು ತೀಟೆ... ಎಂದು ಶುರುವಾಗುತ್ತೆ ಹಾಡು. ಆಗೋಯ್ತು ಮರ್ಯಾದೆ ಸಸ್ತಾ ಮಾಲು.. ಎಂದು ಪಲ್ಲವಿ ಮುಗಿಯುತ್ತೆ. ಹಾಡಿರೋದು ವಿಜಯ್ ಪ್ರಕಾಶ್. ಬರೆದಿರೋದು ಭಟ್ಟರು. ಕುಣಿದಿರೋದು ದರ್ಶನ್ನು. ಈ ಎಲ್ಲರನ್ನೂ ಒಟ್ಟುಗೂಡಿಸಿರೋದು ಡೈರೆಕ್ಟರ್ ಹರಿಕೃಷ್ಣ ಮತ್ತು ನಿರ್ಮಾಪಕಿ ಶೈಲಜಾ ನಾಗ್.

  ಹತ್ ರುಪಾಯ್‍ಗೊಂದ್..ಹತ್ ರುಪಾಯ್‍ಗೊಂದ್..ಹತ್ ರುಪಾಯ್‍ಗೊಂದ್..ಹತ್ ರುಪಾಯ್‍ಗೊಂದ್..

  ಈಗಾಗಲೇ ಯಜಮಾನ ಚಿತ್ರದ ನಂದಿ.. ಶಿವನಂದಿ, ಬಸಣ್ಣಿ.. ಹೀಗೆ 4 ಹಾಡು ಹಿಟ್ ಆಗಿವೆ. 5ನೇ ಹಾಡು.. ಆ ದಾಖಲೆಗಳನ್ನೆಲ್ಲ ಚಿಂದಿ ಉಡಾಯಿಸಿ ಕಿಕ್ಕೇರಿಸುತ್ತಿದೆ. ಇನ್ನೊಂದ್ ದಿನ ಅಷ್ಟೆ.. ಮಾರ್ಚ್ 1ಕ್ಕೆ ಆ ಎಲ್ಲ ಕುತೂಹಲಕ್ಕೂ ಉತ್ತರ ಸಿಕ್ಕಿಬಿಡುತ್ತೆ.

 • ಹೃದಯವಂತ ದರ್ಶನ್

  darshan's heart warming moment

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಮ್ಮೆ ತಮ್ಮ ಹೃದಯವಂತಿಕೆ ಮೆರೆದಿದ್ದಾರೆ. ಪೂರ್ವಿಕಾ ಅನ್ನೋ ತಮ್ಮ ಅಭಿಮಾನಿಯನ್ನು ತಮ್ಮ ಸೆಟ್‍ಗೇ ಕರೆಸಿಕೊಂಡು ಮಾತನಾಡಿಸಿದ್ದಾರೆ. ಅದರಲ್ಲೇನು ವಿಶೇಷ ಎನ್ನಬೇಡಿ. 

  ಪೂರ್ವಿಕಾ ಮಂಡ್ಯದ ಮದ್ದೂರು ಬಳಿಯ ಹಳ್ಳಿಯೊಂದರ ಬಾಲೆ. ಹೃದಯದಲ್ಲಿ ರಂಧ್ರವಾಗಿದ್ದು ಶಸ್ತ್ರಚಿಕಿತ್ಸೆಗೆ ಸಿದ್ಧರಾಗುತ್ತಿದ್ದಾರೆ. ಆಪರೇಷನ್‍ಗೆ ಹೋಗುವ ಮುನ್ನ ದರ್ಶನ್ ಅವರನ್ನು ನೋಡಬೇಕು ಎಂದು ಬಯಸಿದ್ದ ಅಭಿಮಾನಿಯ ಬಯಕೆಯನ್ನು ದರ್ಶನ್ ಈ ರೀತಿ ಈಡೇರಿಸಿದ್ದಾರೆ. ಮೈಸೂರಿನಲ್ಲಿ ತಮ್ಮ ಯಜಮಾನ ಚಿತ್ರದ ಚಿತ್ರೀಕರಣದ ಸೆಟ್‍ಗೇ ಕರೆಸಿಕೊಂಡಿದ್ದ ದರ್ಶನ್, ಚಿತ್ರೀಕರಣವನ್ನೆಲ್ಲ ತೋರಿಸಿ, ಮಗುವಿನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದಾರೆ.

 • ಹೇಗಿರ್ತಾನೆ ಯಜಮಾನ.. ಸೆ.23ಕ್ಕೆ ನೋಡಿ..

  yajamana first look on sep 23 rd

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರ, ಹೆಚ್ಚೂ ಕಡಿಮೆ ಶೂಟಿಂಗ್ ಮುಗಿಸಿದೆ. ಶೈಲಜಾ ನಾಗ್, ಬಿ.ಸುರೇಶ್ ನಿರ್ಮಾಣದ ಯಜಮಾನನಿಗೆ ಪಿ.ಕುಮಾರ್ ನಿರ್ದೇಶಕ. ರಶ್ಮಿಕಾ ಮಂದಣ್ಣ ನಾಯಕಿಯಾಗಿರುವ ಸಿನಿಮಾದ ಫಸ್ಟ್‍ಲುಕ್, ಸೆಪ್ಟೆಂಬರ್ 23ಕ್ಕೆ ಬಿಡುಗಡೆಯಾಗಲಿದೆ. 

  ಕುರುಕ್ಷೇತ್ರಕ್ಕೆ ಕಾದು ಕಾದು ಕುಳಿತಿದ್ದ ದರ್ಶನ್ ಅಭಿಮಾನಿಗಳು, ಈಗ ಯಜಮಾನನ ಫಸ್ಟ್‍ಲುಕ್‍ನಿಂದ ಪುಳಕಗೊಳ್ಳಲು ರೆಡಿಯಾಗುತ್ತಿದ್ದಾರೆ. ಫಸ್ಟ್‍ಲುಕ್ ಬಿಡುಗಡೆ ದಿನ ಹೇಳೋಕೆ ದರ್ಶನ್ ಅವರ ಫೋಟೋ ಬಳಸಿಕೊಂಡಿರುವುದೇ ಅಭಿಮಾನಿಗಳನ್ನು ಥ್ರಿಲ್ಲಾಗಿಸಿದೆ. ಫಸ್ಟ್ ಲುಕ್ ಹೇಗಿರುತ್ತೋ..

 • ಹೇಳದೇ ಮಾಡಿದರು ಯಜಮಾನ ದರ್ಶನ್

  darshan gives chance to shankar ashwath

  ಚಾಮಯ್ಯ ಮೇಷ್ಟ್ರು ಎಂದೇ ಖ್ಯಾತರಾಗಿದ್ದ ಹಿರಿಯ ನಟ ಕೆ.ಎಸ್. ಅಶ್ವತ್ಥ್ ಅವರ ಪುತ್ರ ಶಂಕರ್ ಅಶ್ವತ್ಥ್, ಮೈಸೂರಿನಲ್ಲಿ ಉಬರ್ ಕಾರು ಚಾಲಕರಾಗಿ ಜೀವನ ಸಾಗಿಸುತ್ತಿದ್ದಾರೆ ಎನ್ನುವುದು ಕೆಲವು ತಿಂಗಳ ಹಿಂದೆ ಬೆಳಕಿಗೆ ಬಂದಿತ್ತು. ಸುದ್ದಿ ಮಾಧ್ಯಮಗಳಲ್ಲಿ ಈ ವಿಷಯ ಪ್ರಸಾರವಾದಾಗ ಚಿತ್ರರಂಗದ ಹಲವರು ನೆರವು ನೀಡುವ ಮಾತನ್ನಾಡಿದ್ದರು. ತಮ್ಮ ಚಿತ್ರಗಳಲ್ಲಿ ಅವಕಾಶ ಕೊಡುವ ಭರವಸೆ ಕೊಟ್ಟಿದ್ದರು. ಏಕೆಂದರೆ ಶಂಕರ್ ಅಶ್ವತ್ಥ್, ನೆರವು ಕೇಳಿರಲಿಲ್ಲ. ಬದಲಿಗೆ ಅವಕಾಶಗಳನ್ನಷ್ಟೇ ಕೇಳಿದ್ದರು.

  ಆಗ ಮೌನವಾಗಿದ್ದವರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಏನೊಂದೂ ಮಾತನಾಡಿರಲಿಲ್ಲ. ಆದರೆ, ಆಡದೇ ಮಾಡುವನು ರೂಢಿಯೊಳಗುತ್ತಮನು ಎಂಬಂತೆ, ದರ್ಶನ್ ತಮ್ಮ ಯಜಮಾನ ಚಿತ್ರದಲ್ಲಿ ಶಂಕರ್ ಅಶ್ವತ್ಥ್ ಅವರಿಗೆ ಪ್ರಮುಖ ಪಾತ್ರವೊಂದನ್ನು ಕೊಡಿಸಿದ್ದಾರೆ. 

  ದರ್ಶನ್ ಚಿತ್ರದಲ್ಲಿ ನಟಿಸುತ್ತಿರುವುದು ಇದೇ ಮೊದಲು. ಅವರೂ ಮೈಸೂರಿನವರೇ ಎಂದು ಹೇಳಿಕೊಂಡಿದ್ದಾರೆ ಶಂಕರ್ ಅಶ್ವತ್ಥ್. ಅವಕಾಶವಂಚಿತರಾದ ಶಂಕರ್ ಅಶ್ವತ್ಥ್ ಅವರನ್ನು ಮತ್ತೆ ಕರೆಸಿಕೊಂಡು ಅವಕಾಶ ಕೊಡಿಸಿದ್ದು ಯಜಮಾನ ಚಿತ್ರತಂಡದ ಹೆಗ್ಗಳಿಕೆ.