` yajamana, - chitraloka.com | Kannada Movie News, Reviews | Image

yajamana,

  • ದರ್ಶನ್ ಬಗ್ಗೆ ಇದ್ದ ಭಯ ಸೆಟ್ಟಿಗೆ ಹೋದ ಮೇಲೆ ಹೋಯ್ತು - ರಶ್ಮಿಕಾ

    rashmika talks about her working experience with darshan

    ದರ್ಶನ್ ಜೊತೆ ನನಗಿದು ಮೊದಲನೇ ಸಿನಿಮಾ. ಈ ಮೊದಲು ಬಂದಿದ್ದ ಆಫರ್, ಡೇಟ್ಸ್ ಪ್ರಾಬ್ಲಂನಿಂದಾಗಿ ಕೈ ತಪ್ಪಿತ್ತು. ಈ ಬಾರಿ ಹಾಗಾಗಲಿಲ್ಲ. ಇಷ್ಟಿದ್ದರೂ, ಒಂದು ಆತಂಕ ಇದ್ದೇ ಇತ್ತು. ದರ್ಶನ್ ದೊಡ್ಡ ಸ್ಟಾರ್.. ಹೇಗೋ ಏನೋ.. ಎಂಬ ಆತಂಕವದು. ಆ ಆತಂಕ ಸೆಟ್ಟಿಗೆ ಹೋಗಿ ದರ್ಶನ್ ಜೊತೆ ಕುಳಿತ ಕೆಲವೇ ನಿಮಿಷಗಳಲ್ಲಿ ಮಾಯವಾಗಿ ಬಿಡ್ತು..

    ದರ್ಶನ್ ಕುರಿತು ಉತ್ಸಾಹದಿಂದ ಹೀಗೆ ಹೇಳ್ತಾ ಹೋಗ್ತಾರೆ ರಶ್ಮಿಕಾ ಮಂದಣ್ಣ. ಯಜಮಾನ ಚಿತ್ರದಲ್ಲಿ ಆಕೆಯೇ ಯಜಮಾನಿ.. ಅರ್ಥಾತ್ ನಾಯಕಿ. 

    ದರ್ಶನ್‍ಗೆ ಅಹಂಕಾರವಿಲ್ಲ. ಎಲ್ಲರೊಂದಿಗೆ ಸರಳವಾಗಿ ಬೆರೆಯುವ ವ್ಯಕ್ತಿತ್ವ ಅವರದ್ದು ಎಂದಿದ್ದಾರೆ ರಶ್ಮಿಕಾ ಮಂದಣ್ಣ. ದರ್ಶನ್ ಮತ್ತು ನನ್ನ ಕೆಮಿಸ್ಟ್ರಿ ಅದ್ಭುತವಾಗಿದೆ. ತೆರೆ ಮೇಲೆ ಬಂದಾಗ ಕಾಮಿಡಿ, ರೊಮ್ಯಾನ್ಸ್ ಎಲ್ಲವೂ ಇದೆ. ನೋಡೋಕೆ ಚೆಂದ ಚೆಂದ. ದರ್ಶನ್ ಜೊತೆ ನಟಿಸುವುದೂ ಒಂದು ಒಳ್ಳೆಯ ಎಕ್ಸ್‍ಪೀರಿಯನ್ಸ್ ಎಂದಿದ್ದಾರೆ ರಶ್ಮಿಕಾ ಮಂದಣ್ಣ.

    ಶೈಲಜಾ ನಾಗ್ ನಿರ್ಮಾಣದ ಸಿನಿಮಾಗೆ ಹರಿಕೃಷ್ಣ, ಪಿ.ಕುಮಾರ್ ನಿರ್ದೇಶನವಿದೆ. ರಶ್ಮಿಕಾ ಜೊತೆ ತಾನ್ಯಾ ಹೋಪ್ ಕೂಡಾ ಚಿತ್ರದ ನಾಯಕಿ.

  • ದರ್ಶನ್ ಯಜಮಾನನ ಈ ಮ್ಯಾಜಿಕ್.. ಬಾಕ್ಸಾಫೀಸ್‍ಗಿಂತ ಗ್ರೇಟ್

    this magix of yajamana will make everyone proud

    ದರ್ಶನ್ ಅಭಿನಯದ ಯಜಮಾನ ಸಿನಿಮಾ ಬಾಕ್ಸಾಫೀಸ್‍ನ್ನು ಚಿಂದಿ ಉಡಾಯಿಸಿದೆ. ರಿಲೀಸ್ ಆದ ಪ್ರತಿಯೊಂದು ಸೆಂಟರ್‍ನಲ್ಲೂ ಭರ್ಜರಿ ಬೆಲೆ ತೆಗೆಯುತ್ತಿದೆ. ಅದಕ್ಕಿಂತಲೂ ಯಜಮಾನ ಟೀಂ ಖುಷಿ ಪಡೋ ವಿಚಾರ ಇನ್ನೊಂದಿದೆ. ಸಿನಿಮಾ ನೋಡಿದ ಕೆಲವರು ಸಿಟಿ ಬಿಟ್ಟು ಹಳ್ಳಿಗೆ ಹೋಗಿ ಬ್ರಾಂಡ್ ಕಟ್ಟೋಕೆ ರೆಡಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ದರ್ಶನ್‍ಗೆ ಟ್ಯಾಗ್ ಮಾಡಿ ಹಳ್ಳಿಯಲ್ಲೇ ದುಡಿದು, ನಮ್ಮದೇ ಬ್ರ್ಯಾಂಡ್ ಕಟ್ಟುತ್ತೇವೆ. ನಮಗೆ ನಾವೇ ಯಜಮಾನರಾಗುತ್ತೇ. ವಿಲ್ ಬ್ಯಾಕ್ ಟು ವಿಲೇಜ್ ಎಂದು ಹೇಳಿ ಹೊರಟು ನಿಂತಿದ್ದಾರೆ.

    ನಿಮಗೆ ಗೊತ್ತಿರಬೇಕು. ಬಂಗಾರದ ಮನುಷ್ಯ ಸಿನಿಮಾ ನೋಡಿ ಸಿಟಿ ಬಿಟ್ಟು ಹಳ್ಳಿಗೆ ಹೋಗಿ ರೈತರಾದವರಿದ್ದಾರೆ. ಹಾಲು ಜೇನು ಸಿನಿಮಾ ನೋಡಿ ಡೈವೋರ್ಸ್‍ಗೆ ಅರ್ಜಿ ಹಾಕಿದ್ದ ದಂಪತಿ ಒಂದಾದ ಉದಾಹರಣೆ ಇದೆ. ಜೀವನ ಚೈತ್ರ ಚಿತ್ರವಂತೂ ಮದ್ಯಪಾನದ ವಿರುದ್ಧ ಹೋರಾಟವನ್ನೇ ರೂಪಿಸಿಬಿಟ್ಟಿತ್ತು. ರಾಜ್-ಅಂಬಿ ಅಭಿನಯದ ಒಡಹುಟ್ಟಿದವರು, ವಿಷ್ಣು ಅಭಿನಯದ ಯಜಮಾನ ಚಿತ್ರಗಳು ದೂರವಾಗಿದ್ದ ಅಣ್ಣ ತಮ್ಮಂದಿರನ್ನು ಒಂದು ಮಾಡಿದ್ದವು. ಭೂತಯ್ಯನ ಮಗ ಅಯ್ಯು ಸಿನಿಮಾ ನೋಡಿ ಕೋರ್ಟಿನಲ್ಲಿ ಹೋರಾಡುತ್ತಿದ್ದವರು ಕೇಸು ವಾಪಸ್ ತೆಗೆದುಕೊಂಡಿದ್ದರು. ಇತ್ತೀಚೆಗೆ ಆ ಮೋಡಿ ಮಾಡಿದ್ದ ಸಿನಿಮಾ ರಾಜಕುಮಾರ. ವೃದ್ಧಾಶ್ರಮಕ್ಕೆ ಬಿಟ್ಟಿದ್ದ ಹೆತ್ತವರನ್ನು ಮಕ್ಕಳೇ ಮನೆಗೆ ವಾಪಸ್ ಕರೆದುಕೊಂಡು ಹೋಗಿದ್ದರು. ಈಗ.. ದರ್ಶನ್ ಯಜಮಾನ ಈ ಮೋಡಿ ಮಾಡಿದೆ.

    ಸಿನಿಮಾ ಸಕ್ಸಸ್ ಎನ್ನವುದು ಗಲ್ಲಾಪೆಟ್ಟಿಗೆಯಲ್ಲಿ ಅಲ್ಲ, ಇಂತಹವುಗಳಲ್ಲಿ ಅಡಗಿದೆ. ನಿರ್ಮಾಪಕಿ ಶೈಲಜಾ ನಾಗ್, ಬಿ. ಸುರೇಶ್, ನಿರ್ದೇಶಕ ಹರಿಕೃಷ್ಣ-ಕುಮಾರ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇದು ಸಿನಿಮಾ ಸಕ್ಸಸ್ಸಿಗಿಂತ ದೊಡ್ಡ ಖುಷಿ ಕೊಟ್ಟಿರೋದ್ರಲ್ಲಿ ಎರಡು ಮಾತಿಲ್ಲ.

  • ದರ್ಶನ್ ಯಜಮಾನನ ನಿರ್ದೇಶಕ ಯಾರು..?

    composer v harikrishna turns director for yajamana

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರದ ನಿರ್ದೇಶಕ ಯಾರು..? ಅರೇ.. ಇದೇನಿದು.. ಪಿ.ಕುಮಾರ್ ಅಲ್ವಾ.. ಅಂತೀರೇನೋ.. ಹೌದು. ಪಿ.ಕುಮಾರ್ ನಿರ್ದೇಶನದ ಚಿತ್ರಕ್ಕೆ ಈಗ ಇನ್ನೊಬ್ಬರು ಸೇರಿಕೊಂಡಿದ್ದಾರೆ. ಅದು ವಿ.ಹರಿಕೃಷ್ಣ. ಚಿತ್ರದ ಟೈಟಲ್ ಕಾರ್ಡ್‍ನಲ್ಲಿ ವಿ.ಹರಿಕೃಷ್ಣ ಹಾಗೂ ಪೊನ್ನು ಕುಮಾರ್ ಇಬ್ಬರ ಹೆಸರನ್ನೂ ನಿರ್ದೇಶಕರೆಂದು ತೋರಿಸಲಾಗಿದೆಯಂತೆ.

    ಯಜಮಾನ ಚಿತ್ರ ಶುರುವಾದಾಗಿನಿಂದ ಚಿತ್ರದ ಪ್ರತಿ ಹಂತದಲ್ಲೂ ವಿ.ಹರಿಕೃಷ್ಣ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರಂತೆ. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ.. ಹೀಗೆ ಪ್ರತಿಯೊಂದರಲ್ಲೂ ತೊಡಗಿಸಿಕೊಂಡಿದ್ದ ಹರಿಕೃಷ್ಣ ಅವರಿಗೆ ನಿರ್ದೇಶಕನ ಕ್ರೆಡಿಟ್ ನೀಡಿದ್ದೇವೆ ಎಂದಿದ್ದಾರೆ ನಿರ್ಮಾಪಕಿ ಶೈಲಜಾ ನಾಗ್.

    ಅಂದಹಾಗೆ ಹರಿಕೃಷ್ಣ ಮತ್ತು ದರ್ಶನ್ ಕಾಂಬಿನೇಷನ್‍ನ 25ನೇ ಚಿತ್ರ ಯಜಮಾನ. ಸಂಗೀತ ನಿರ್ದೇಶನದ ಜೊತೆ ಜೊತೆಯಲ್ಲಿ ನಿರ್ದೇಶಕನ ಜವಾಬ್ದಾರಿಯನ್ನೂ ಹೊತ್ತಿರುವ ಹರಿಕೃಷ್ಣ, ನಿರ್ದೇಶಕರಾಗಬೇಕು ಎಂಬ ತಮ್ಮ ಕನಸನ್ನು ಯಜಮಾನ ಚಿತ್ರದ ಮೂಲಕ ನನಸು ಮಾಡಿಕೊಂಡಿದ್ದಾರೆ.

  • ದರ್ಶನ್ ಸರಳತೆ ಕಂಡ ಶಂಕರ್‍ಗೆ ರಜನಿಕಾಂತ್ ನೆನಪಾಗಿದ್ದೇಕೆ..?

    shankar ashwath appreciated darshan

    ರಜನಿಕಾಂತ್ ಸೂಪರ್ ಸ್ಟಾರ್ ಆದ್ರೆ, ದರ್ಶನ್ ಚಾಲೆಂಜಿಂಗ್ ಸ್ಟಾರ್. ನಟ ಶಂಕರ್ ಅಶ್ವತ್ಥ್‍ಗೆ ದರ್ಶನ್ ಸರಳತೆ ಕಂಡಾಗ, ತಕ್ಷಣ ರಜನಿಕಾಂತ್ ನೆನಪಾಗಿದ್ದಾರೆ. ಅವಕಾಶಗಳಿಲ್ಲದೆ ಟ್ಯಾಕ್ಸಿ ಓಡಿಸುತ್ತಿದ್ದ ನಟ ಶಂಕರ್ ಅಶ್ವತ್ಥ್ ಅವರ ವಿಷಯ ತಿಳುದು, ದರ್ಶನ್ ತಮ್ಮ ಯಜಮಾನ ಚಿತ್ರದಲ್ಲಿ ಅವಕಾಶ ಕೊಟ್ಟಿದ್ದಾರೆ. ಶೂಟಿಂಗ್‍ಗೆಂದು ಸೆಟ್ಟಿಗೆ ಹೋದಾಗ, ದರ್ಶನ್ ಸ್ವತಃ ಎದ್ದು ಬಂದು, ಶಂಕರ್ ಅವರ ಯೋಗಕ್ಷೇಮ ವಿಚಾರಿಸಿಕೊಂಡರಂತೆ. 

    ಅವರಿಗೆ ಆಗ ತಕ್ಷಣ ನೆನಪಾಗಿದ್ದು ರಜನಿಕಾಂತ್. ಹಿಂದೊಮ್ಮೆ ರಜನಿಕಾಂತ್ ಅವರನ್ನು ನೋಡೋಕೆ ಹೋಗಿದ್ದಾಗ, ನನ್ನ ತಂದೆಯ ಹೆಸರು ಹೇಳಿದ್ದೆ. ಅಶ್ವತ್ಥ್ ಅವರ ಮಗ ಎಂದು ಗೊತ್ತಾದ ತಕ್ಷಣ ರಜಿನಿಕಾಂತ್, ನಾನು ಇದ್ದಲ್ಲಿಗೇ ಬಂದು ಮಾತನಾಡಿಸಿದ್ದರು. ನನ್ನ ತಂದೆಯೇನೋ ಹಿರಿಯ ಕಲಾವಿದ. ಆದರೆ, ನಾನೆಲ್ಲಿ..? ನನ್ನಂತಹವನನ್ನು ತಾನೊಬ್ಬ ಸ್ಟಾರ್ ಎಂಬ ಬಿಗುಮಾನವಿಲ್ಲದೆ ನಡೆಸಿಕೊಂಡಿದ್ದು ಒಳ್ಳೆಯ ಸಂಸ್ಕಾರ. ಆ ಪರಮಾತ್ಮ, ಅವರ ಕುಟುಂಬಕ್ಕೆ ಒಳ್ಳೆಯದು ಮಾಡಲಿ ಎಂದು ಹೇಳಿಕೊಂಡಿದ್ದಾರೆ ಶಂಕರ್ ಅಶ್ವತ್ಥ್.

  • ದರ್ಶನ್ ಸಿನಿಮಾ ನಿರ್ಮಾಪಕರು ಈ ಷರತ್ತುಗಳನ್ನು ಪಾಲಿಸಲೇಬೇಕು

    darshan's conditions for his movie producers

    ಸಾಮಾನ್ಯವಾಗಿ ಸ್ಟಾರ್ ನಟರ ಚಿತ್ರ ಮಾಡುವವರಿಗೆ ಕೆಲವೊಂದು ಷರತ್ತುಗಳಿರುತ್ತವೆ. ಅದು ಹೀರೋ ಮತ್ತು ನಿರ್ಮಾಪಕರಿಗಷ್ಟೇ ಗೊತ್ತಿರುತ್ತವೆ. ಆದರೆ ದರ್ಶನ್ ಹಾಗಲ್ಲ. ಓಪನ್. ಓಪನ್ ಸೀಕ್ರೆಟ್.

    ಸಾಮಾನ್ಯವಾಗಿ ಕಥೆಗೆ ಓಕೆ ಹೇಳಿ, ಕಾಲ್‍ಶೀಟ್ ಕೊಟ್ಟು, ಅಡ್ವಾನ್ಸ್ ಪಡೆದ ಮೇಲೆ ದರ್ಶನ್ ಮತ್ತೆ ಮತ್ತೆ ನಿರ್ದೇಶಕರ ಕೆಲಸದಲ್ಲಿ ಮೂಗು ತೂರಿಸೋದಿಲ್ಲ. ಅಲ್ಲಿಯವರಗೆ ತಮ್ಮ ಎಲ್ಲ ಅನುಮಾನಗಳನ್ನೂ, ಪ್ರಶ್ನೆಗಳನ್ನೂ ಎತ್ತಿ ಉತ್ತರ ಪಡೆದುಕೊಂಡುಬಿಟ್ಟಿರುತ್ತಾರೆ. ಅದಾದ ನಂತರ ದರ್ಶನ್, ನಿದೇಶಕರ ಪಾಲಿಗೆ ಮಣ್ಣಿನ ಗೊಂಬೆ. ಹೇಗೆ ಬೇಕಾದರೂ ಮಾಡಬಹುದು. 

    ಹೀಗಿರುವ ದರ್ಶನ್, ತಮ್ಮ ನಿರ್ಮಾಪಕರಿಗೆ ಹಾಕುವ ಕಂಡೀಷನ್ಸ್ ಇಷ್ಟೆ. ಸಿನಿಮಾದ ತಂತ್ರಜ್ಞರು, ಕಲಾವಿದರು ಕನ್ನಡದವರೇ ಇರಲಿ ಅನ್ನೋದು. ಬೇರೆ ಭಾಷೆಯಿಂದ ಟೆಕ್ನಿಷಿಯನ್ಸ್ ಕರೆದುಕೊಂಡು ಬರ್ತೀವಿ. ಅವರಿಗೆ ಇದು ಟೈಂಪಾಸ್ ಅಷ್ಟೆ. ಬದ್ಧತೆ ಇರಲ್ಲ. ಅದೇ ಚಾನ್ಸ್ ನಮ್ಮವರಿಗೆ ಕೊಟ್ರೆ, ಪ್ರೀತಿಯಿಂದ ಹೆಚ್ಚು ಜವಾಬ್ದಾರಿಯಿಂದ ಮಾಡ್ತಾರೆ. ಅವರಿಗೆ ಈ ಮಣ್ಣಿನ ಸೊಗಡೂ ಕೂಡಾ ಗೊತ್ತಿರುತ್ತೆ. ಇದು ನಾನು ಹಾಕುವ ಕಂಡೀಷನ್ಸ್.

    ಹೀಗಾಗಿ ನಾನು ನನ್ನ ಚಿತ್ರದಲ್ಲಿ ಕನ್ನಡದ ಸಂಗೀತ ನಿರ್ದೇಶಕ, ಫೈಟ್ ಮಾಸ್ಟರ್, ಕ್ಯಾಮೆರಾ, ನೃತ್ಯ ನಿರ್ದೇಶಕ ಕನ್ನಡದವರೇ ಆಗಿರಬೇಕು ಎಂದು ಬಯಸುತ್ತೇನೆ. ಹಠ ಮಾಡುತ್ತೇನೆ. ಜಗಳ ಆಡುತ್ತೇನೆ ಎಂದು ಹೇಳಿಕೊಂಡಿದ್ದಾರೆ ದರ್ಶನ್.

    ಹೀಗಾಗಿಯೇ.. ಯಜಮಾನನ ಅಭಿಮಾನಿ ಬಳಗವೂ ದೊಡ್ಡದು. ಸ್ನೇಹಲೋಕವೂ ದೊಡ್ಡದು. 

  • ದರ್ಶನ್ ಸಿನಿಮಾ ಮಾಡ್ತೀರಾ.. ಮುಗೀತು ನಿಮ್ ಕಥೆ ಎಂದಿದ್ದರಂತೆ..!

    darshan shocked over these rumors

    ದರ್ಶನ್ ಇದುವರೆಗೆ 50 ಸಿನಿಮಾ ಮಾಡಿದ್ದಾರೆ. ಸೂಪರ್ ಹಿಟ್ಸ್ ಕೊಟ್ಟಿದ್ದಾರೆ. ಸೋಲನ್ನೂ ಕಂಡಿದ್ದಾರೆ. ಸೋಲು ಕಂಡ ನಿರ್ಮಾಪಕರಿಗೆ ಮತ್ತೆ ಕಾಲ್‍ಶೀಟ್ ಕೊಟ್ಟಿದ್ದಾರೆ. ನೆರವಾಗಿದ್ದಾರೆ. ಚಿತ್ರರಂಗದಲ್ಲಿ ಬೇರೆಯವರ ಕಷ್ಟಗಳಿಗೆ ಹೆಗಲಾಗಿದ್ದಾರೆ. ಹೊಸಬರ ಚಿತ್ರಗಳನ್ನು ಪ್ರೋತ್ಸಾಹಿಸುತ್ತಾರೆ. ಇಷ್ಟೆಲ್ಲ ಇರುವಾಗ ಇಡೀ ಗಾಂಧಿನಗರದಲ್ಲಿ ದರ್ಶನ್ ಬಗ್ಗೆ ಒಳ್ಳೆಯ ಮಾತುಗಳಷ್ಟೇ ಇವೆ ಎಂದುಕೊಂಡರೆ.. ನಿಮ್ಮ ನಿರೀಕ್ಷೆ ಸುಳ್ಳು. ಅಫ್‍ಕೋರ್ಸ್.. ಅದು ಗೊತ್ತಾದಾಗ ದರ್ಶನ್ ಕೂಡಾ ಶಾಕ್ ಆಗಿದ್ದರಂತೆ.

    ಯಜಮಾನ ಚಿತ್ರದ ನಿರ್ಮಾಪಕಿ ಶೈಲಜಾ ನಾಗ್ ಮತ್ತು ಬಿ.ಸುರೇಶ್. ಇಬ್ಬರೂ ಇದೇ ಮೊದಲ ಬಾರಿಗೆ ಕಮರ್ಷಿಯಲ್ ಸಿನಿಮಾ ಮಾಡುತ್ತಿದ್ದಾರೆ. ಪ್ರತಿಯೊಂದನ್ನೂ ಪ್ಲಾನ್ ಮಾಡಿಕೊಂಡು ಅಚ್ಚುಕಟ್ಟಾಗಿ ಮಾಡುವುದು ಅವರ ಸ್ಟೈಲ್. ಹೀಗಿರುವ ಶೈಲಜಾ ನಾಗ್ ಶೂಟಿಂಗ್ ಅರ್ಧ ಮುಗಿದ ಮೇಲೆ ಒಂದು ದಿನ ದರ್ಶನ್ ಬಳಿ ನಿಮಗೊಂದು ವಿಷಯ ಹೇಳಬೇಕು, ಬೇಸರ ಮಾಡಿಕೊಳ್ಳಬಾರದು ಎಂದರಂತೆ.

    ಏನಮ್ಮ.. ಏನ್ ವಿಷ್ಯ ಎಂದು ಗಾಬರಿಗೊಂಡ ದರ್ಶನ್, ನಾನೇನಾದರೂ ತಪ್ಪು ಮಾಡಿದ್ದೀನಾ ಎಂದೆಲ್ಲ ಯೋಚಿಸಿದ್ರಂತೆ. ಆಗ ಶೈಲಜಾ ನಾಗ್ ತಾವು ದರ್ಶನ್ ಕುರಿತು ಕೇಳಿದ ಕಥೆಗಳನ್ನೆಲ್ಲ ಹೇಳಿದ್ದಾರೆ.

    ಗಾಂಧಿನಗರದ ಕೆಲವು ಮಂದಿ, ಓಹೋ.. ದರ್ಶನ್ ಸಿನಿಮಾ ಮಾಡ್ತಿದ್ದೀರಾ.. ಮುಗೀತು ಬಿಡಿ ನಿಮ್ ಕಥೆ.. ಈ ಸಿನಿಮಾ ಆದ್ಮೇಲೆ ನೀವು ಮತ್ತೆ ಚಿತ್ರರಂಗಕ್ಕೇ ಬರಲ್ಲ. ಇಂಡಸ್ಟ್ರಿಯನ್ನೇ ಬಿಟ್ಟು ಹೋಗ್ತೀರಿ. ದರ್ಶನ್ ಕಾಟ ಹಂಗಿರುತ್ತೆ ಎಂದಿದ್ದರಂತೆ. ಅದನ್ನೆಲ್ಲ ದರ್ಶನ್ ಬಳಿ ಹೇಳಿದ ಶೈಲಜಾ ನಾಗ್, ನಾನು ಕೇಳಿದ್ದೆಲ್ಲ ಸುಳ್ಳು ಅನ್ನೋದು ಕೆಲಸ ಮಾಡ್ತಾ ಮಾಡ್ತಾ ಗೊತ್ತಾಯ್ತು ಎಂದು ದರ್ಶನ್ ಬಳಿಯೇ ಹೇಳಿದ್ದಾರೆ.

    ನನ್ನ ಬೆನ್ನ ಹಿಂದೆ ಹೀಗೆಲ್ಲ ಆಗುತ್ತಾ ಎಂದು ಅಚ್ಚರಿಪಟ್ಟಿದ್ದಾರೆ ದರ್ಶನ್. ಅಷ್ಟೆ ಅಲ್ಲ, ನನಗೆ ಹೇಳೋದೇ ಒಂದು, ಮಾಡೋದೇ ಒಂದು ಎಂಬ ನಿರ್ಮಾಪಕರಿಗೆ ನಾನು ಕಿರಿಕ್ ಕೊಟ್ಟಿರೋದು ನಿಜ ಎಂದಿದ್ದಾರೆ. 

    ಫೈನಲ್ ವಿಷಯ ಏನ್ ಗೊತ್ತಾ..? ಯಜಮಾನ ಚಿತ್ರದ ಸಂಭಾವನೆಯನ್ನೆಲ್ಲ ಚುಕ್ತಾ ಮಾಡಿದ ಶೈಲಜಾ ನಾಗ್, ಮತ್ತೊಂದು ಸಿನಿಮಾಗೆ ಅಡ್ವಾನ್ಸ್ ಕೊಟ್ಟಿದ್ದಾರಂತೆ. ಹಾಗೆ ನನಗೆ ಒಂದು ಸಿನಿಮಾ ಮುಗಿಯುತ್ತಿದ್ದಂತೆಯೇ ಇನ್ನೊಂದು ಸಿನಿಮಾಗೆ ಅಡ್ವಾನ್ಸ್ ಕೊಟ್ಟ ಮೊದಲ ನಿರ್ಮಾಪಕಿ ಶೈಲಜಾ ನಾಗ್ ಎಂದು ಹೇಳಿಕೊಂಡಿದ್ದಾರೆ ದರ್ಶನ್.

  • ದರ್ಶನ್ ಹೇಗೆ..? - ದೇವರಾಜ್ ಕೊಟ್ಟ ಸರ್ಟಿಫಿಕೇಟ್ ಏನು..?

    darshan gets certificate from devaraj

    `ನಾನು ದರ್ಶನ್ ಜೊತೆ ಒಂದಲ್ಲ.. 4 ಸಿನಿಮಾಗಳಲ್ಲಿ ನಟಿಸಿದ್ದೇನೆ. ದರ್ಶನ್ ಬೇರೆಯವರ ಹಾಗಲ್ಲ. ಸಾಮಾನ್ಯವಾಗಿ ಬೇರೆ ಚಿತ್ರಗಳಲ್ಲಿ ಪೋಷಕ ನಟರ ರೋಲ್‍ಗಳನ್ನು ಎಡಿಟ್ ಮಾಡಿಬಿಡುತ್ತಾರೆ. ಹೆಚ್ಚು ಕಾಣಿಸಿಕೊಳ್ಳೋಕೇ ಬಿಡಲ್ಲ. ಆದರೆ ದರ್ಶನ್ ಹಾಗಲ್ಲ' ಯಜಮಾನನ ಸುದ್ದಿಗೋಷ್ಠಿಯಲ್ಲಿ ದರ್ಶನ್ ಬಗ್ಗೆ ಮಾತನಾಡುತ್ತಾ ಹೋದ ದೇವರಾಜ್, ದರ್ಶನ್‍ರ ಇನ್ನೊಂದು ಮುಖ ಪರಿಚಯ ಮಾಡಿಸಿದ್ರು.

    ದರ್ಶನ್, ಚಿತ್ರರಂಗಕ್ಕೆ ದೊಡ್ಡ ಆಲದ ಮರ ಇದ್ದಹಾಗೆ. ಗುಣ, ವ್ಯಕ್ತಿತ್ವ ತುಂಬಾ ಡಿಫರೆಂಟ್. ಆಲದ ಮರ ಹಲವರಿಗೆ ಆಸರೆ ನೀಡುವಂತೆ, ದರ್ಶನ್ ಕೂಡಾ ಹಲವರನ್ನು ಪೋಷಿಸುತ್ತಾ ಬೆಳೆಯುತ್ತಿದ್ದಾರೆ ಅಂತಾರೆ ದೇವರಾಜ್.

  • ದರ್ಶನ್‍ಗೆ ಮಿ.ಇಂಡಿಯಾ ವಿಲನ್..!

    mr india anoop is villain for yajamana

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರಕ್ಕೆ ಖಳನಾಯಕರಾಗಿ ಅನೂಪ್ ಸಿಂಗ್ ಠಾಕೂರ್ ಬರುತ್ತಿದ್ದಾರೆ. ಅನೂಪ್ ಸಿಂಗ್ ಠಾಕೂರ್ ಕೇವಲ ನಟರಲ್ಲ. ಬಾಡಿಬಿಲ್ಡಿಂಗ್‍ನಲ್ಲಿ ಅಂತಾರಾಷ್ಟ್ರೀಯ ಕೂಟಗಳಲ್ಲಿ ಪ್ರಶಸ್ತಿ ಗೆದ್ದಿರುವ ಕ್ರೀಡಾಪಟು. 2015ರಲ್ಲಿ ಮಿ.ಇಂಡಿಯಾ ಪ್ರಶಸ್ತಿ ಪಡೆದಿದ್ದವರು. ಈಗ ದರ್ಶನ್ ಚಿತ್ರಕ್ಕೆ ವಿಲನ್.

    ಈ ಚಿತ್ರದಲ್ಲಿ ದರ್ಶನ್ ಎದುರು ಮೂವರು ಖಳನಾಯಕರಿದ್ದಾರೆ. ಹೀರೋ ಧನಂಜಯ್, ಅಭಿನವ ವಜ್ರಮುನಿ ರವಿಶಂಕರ್ ಜೊತೆ ಈಗ ಅನೂಪ್ ಸಿಂಗ್ ಠಾಕೂರ್ ಸೇರ್ಪಡೆಯಾಗಿದ್ದಾರೆ.

    ಕನ್ನಡದಲ್ಲಿ ಈ ಹಿಂದೆ ರೋಗ್ ಚಿತ್ರದಲ್ಲಿ ಸೈಕೋ ಪಾತ್ರದಲ್ಲಿ ಗಮನ ಸೆಳೆದಿದ್ದ ಅನೂಪ್ ಸಿಂಗ್ ಠಾಕೂರ್, ಸಿಂಗಂ 3 ಚಿತ್ರದಲ್ಲಿ ಸೂರ್ಯ ಎದುರು ಖಳನಾಗಿ ಅಬ್ಬರಿಸಿದ್ದವರು. ರಾಮಾಯಣ ಧಾರಾವಾಹಿಯಲ್ಲಿ ಹನುಮಂತನ ಪಾತ್ರದಲ್ಲಿ ಮಿಂಚಿದ್ದ ಅನೂಪ್ ಸಿಂಗ್ ಠಾಕೂರ್, ದರ್ಶನ್ ಎದುರು ನಟಿಸುತ್ತಿರುವುದಕ್ಕೆ ಥ್ರಿಲ್ಲಾಗಿದ್ದಾರೆ.

  • ಬಾಹುಬಲಿಗಿಂತ ಕೆಜಿಎಫ್ ಇಷ್ಟ ಎಂದ ದರ್ಶನ್.. ಕಾರಣ ಏನ್ ಗೊತ್ತಾ..?

    darshan's forst preference is kgf and not baahubali

    ನಿಮಗೆ ಬಾಹುಬಲಿ ಇಷ್ಟವೋ.. ಕೆಜಿಎಫ್ ಚಿತ್ರ ಇಷ್ಟವೋ.. ಅರೆ.. ಎರಡೂ ಇಂಡಿಯನ್ ಸಿನಿಮಾಗಳೇ ಅಲ್ವಾ ಅಂತೀರೇನೋ.. ಆದರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗಲ್ಲ. ನೇರಾ ನೇರ.. 

    ನನಗೆ ತೆಲುಗಿನ ಬಾಹುಬಲಿ ಚಿತ್ರಕ್ಕಿಂತ ಕೆಜಿಎಫ್ ಸಿನಿಮಾನೇ ಇಷ್ಟ. ಏಕೆಂದರೆ ಅದು ಕನ್ನಡದ ಸಿನಿಮಾ. ಕನ್ನಡ ಚಿತ್ರರಂಗವನ್ನು ಇಂಡಿಯಾ ಲೆವೆಲ್ಲಿಗೆ ತೋರಿಸಿದ ಸಿನಿಮಾ. ಐ ಲೈಕ್ ಕೆಜಿಎಫ್ ಅಂತಾರೆ ದರ್ಶನ್.

    ಯಜಮಾನ ಚಿತ್ರದ ರಿಲೀಸ್ ವೇಳೆ ಮಾತನಾಡಿದ ದರ್ಶನ್, ಯಜಮಾನ ಚಿತ್ರದಲ್ಲಿ ಮನರಂಜನೆಯ ಜೊತೆಗೆ ಸಮಾಜಕ್ಕೆ ಒಂದೊಳ್ಳೆ ಸಂದೇಶವೂ ಇದೆ ಅನ್ನೋದನ್ನು ಮರೆಯೋದಿಲ್ಲ.

  • ಭಾನುವಾರ ಬೆಳಗ್ಗೆ 10 ಗಂಟೆ.. ಯಜಮಾನ ಬರ್ತಾನೆ

    yajamana trailer this sunday

    ದರ್ಶನ್ ಅಭಿನಯದ ಯಜಮಾನ ಚಿತ್ರವನ್ನು ಅಭಿಮಾನಿಗಳು ಕಾತರದಿಂದ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ದರ್ಶನ್ ಅಭಿಮಾನಿಗಳದ್ದು ಹೆಚ್ಚೂ ಕಡಿಮೆ 2 ವರ್ಷದ ಹಸಿವು. ಆ ಹಸಿವು ನೀಗುವ ಕಾಲ ಹತ್ತಿರವಾಗುತ್ತಿದೆ. ಫೆಬ್ರವರಿ 10ರ ಭಾನುವಾರ ಬೆಳಗ್ಗೆ 10 ಗಂಟೆಗೆ ಸರಿಯಾಗಿ ಯಜಮಾನ ಚಿತ್ರದ ಟ್ರೇಲರ್ ಪ್ರತ್ಯಕ್ಷವಾಗಲಿದೆ.

    ಈಗಾಗಲೇ ನಂದಿ, ಬಸಣ್ಣಿ, ಯಜಮಾನ ಹಾಡುಗಳು ಅಭಿಮಾನಿಗಳ ನಾಲಗೆ ತುದಿಯಲ್ಲಿವೆ. ಈಗ ಟ್ರೇಲರ್ ಬಾಕಿ. ದರ್ಶನ್, ರಶ್ಮಿಕಾ ಮಂದಣ್ಣ, ದೇವರಾಜ್ ನಟಿಸಿರುವ ಚಿತ್ರಕ್ಕೆ ಹರಿಕೃಷ್ಣ, ಕುಮಾರ್ ನಿರ್ದೇಶನವಿದ್ದರೆ, ಶೈಲಜಾ ನಾಗ್, ಬಿ.ಸುರೇಶ್ ನಿರ್ಮಾಪಕರು. ಫೆಬ್ರವರಿ ಕೊನೆಯ ವಾರ ಅಥವಾ ಮಾರ್ಚ್‍ನಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

  • ಮಂಜುಳಾ ನೆನಪಿಸ್ತಾರಂತೆ ಯಜಮಾನಿ..!

    rashmika's acing reminds of manjula

    ಒಂದಂತೂ ಸತ್ಯ. ಸತ್ಯವೇ ಇರಬೇಕು. ರಶ್ಮಿಕಾ ಮಂದಣ್ಣ ಅವರದ್ದು ಯಜಮಾನ ಚಿತ್ರದಲ್ಲಿ ಸ್ವಲ್ಪ ಬಜಾರಿ ಎನ್ನಿಸುವ ಪಾತ್ರವೇ ಇರಬೇಕು. ಏಕೆ ಗೊತ್ತೇ.. ರಶ್ಮಿಕಾ ಮಂದಣ್ಣ ಅವರ ಅಭಿನಯ ನೋಡಿದ ಯಜಮಾನ ಚಿತ್ರತಂಡದವರು ರಶ್ಮಿಕಾ ಅವರನ್ನು ಮಂಜುಳಾಗೆ ಹೋಲಿಸಿದ್ದರಂತೆ.

    `ಅಯ್ಯೋ ಬಿಡಿ.. ನನಗೆ ಅಷ್ಟೆಲ್ಲ ಸೀನ್ ಇಲ್ಲ. ನನಗೆ ಗೊತ್ತಿರೋದು ನಾನು ಮಾಡಿದ್ದೇನೆ' ಎಂದಿದ್ದಾರೆ ರಶ್ಮಿಕಾ. ಆದರೂ.. ಒಳಗೊಳಗೆ ಆ ಕಾಂಪ್ಲಿಮೆಂಟ್ ಸಿಕ್ಕಾಗ ಖುಷಿಯಾಗಿದ್ದು ಹೌದು. ಸಹಜವೇ ಅಲ್ವೇ.

    ಯಜಮಾನ ಚಿತ್ರದಲ್ಲಿ ರಶ್ಮಿಕಾ ಲಂಗ, ದಾವಣಿ, ಮೂಗುತಿ, ಸೆಲ್ವಾರ್.. ಹೀಗೆ ಬೇರೆಯೇ ರೀತಿ ಕಾಣಿಸಿಕೊಂಡಿದ್ದಾರೆ. 

    ನಿರ್ಮಾಪಕಿ ಶೈಲಜಾ ನಾಗ್, ಬಿ.ಸುರೇಶ್, ಹರಿಕೃಷ್ಣ, ಕುಮಾರ್, ದೇವರಾಜ್ ಎಲ್ಲರೊಂದಿಗೆ ಸಮಯ ಕಳೆಯುವಾಗ ನನಗೆ ಮನೆಯವರೊಂದಿಗೆ ಇದ್ದ ಫೀಲ್ ಆಗುತ್ತಿತ್ತು. ಇಡೀ ಸೆಟ್ಟಿನಲ್ಲಿ ನನಗೆ ಮನೆಯ ವಾತಾವರಣ ಸೃಷ್ಟಿಸಿಕೊಟ್ಟ ಮೊದಲಿಗ ದರ್ಶನ್ ಎಂದಿದ್ದಾರೆ ಕಿರಿಕ್ ಚೆಲುವೆ.. ಅಲ್ಲಲ್ಲ.. ಯಜಮಾನನ ಒಡತಿ.

  • ಮಿಠಾಯಿ ಸೂರಿಗೆ ಮಿಠಾಯಿ ಕೊಡೋರೇ ಇಲ್ವಂತೆ.. ಪಾಪ..!

    mitayi suri has no lady love in yajamana movie

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಿತ್ರದಲ್ಲಿ ಮಿಠಾಯಿ ಸೂರಿ ಅನ್ನೋ ಪಾತ್ರವಿದೆ. ಆ ಪಾತ್ರ ಮಾಡಿರೋದು ಡಾಲಿ ಧನಂಜಯ್. ಟಗರು ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿ ಬೊಬ್ಬಿರಿದಿದ್ದ ಧನಂಜಯ್, ಇಲ್ಲಿ ಪುಟ್ಟದೊಂದು ಪಾತ್ರ ಮಾಡಿದ್ದಾರೆ. ಮಿಠಾಯಿ ಸೂರಿಯಾಗಿದ್ದಾರೆ.

    `ನನ್ನದು ಮಿಠಾಯಿ ಸೂರಿ ಪಾತ್ರ. ಹುಂಬತನವೇ ಮೈವೆತ್ತಿಕೊಂಡಿರುವ ಕ್ಯಾರೆಕ್ಟರ್. ಸಿಕ್ಕಾಪಟ್ಟೆ ಕಿರಿಕ್ ಮಾಡುತ್ತೆ. ಆದರೆ ವಿಲನ್ ಅಲ್ಲ' ಎನ್ನುವ ಧನಂಜಯ್ ಅವರಿಗೆ ಅದೊಂದೇ ಬೇಜಾರು.

    ಮಿಠಾಯಿ ಸೂರಿಗೆ ಮಿಠಾಯಿ ತಿನ್ನಿಸೋರೇ ಇಲ್ಲ. ಸಿಂಗಲ್. ಅರ್ಥಾತ್.. ಮಿಠಾಯಿ ಸೂರಿಗೆ ಹೀರೋಯಿನ್ ಇಲ್ಲ.

    ಯಜಮಾನ ಚಿತ್ರ ಮಾರ್ಚ್ 1ರಂದು ತೆರೆಗೆ ಬರುತ್ತಿದ್ದು, ಭರ್ಜರಿ ಓಪನಿಂಗ್ ಎದುರು ನೋಡುತ್ತಿದೆ.

  • ಮುಸುಕುಧಾರಿಯಾಗಿ ಯಜಮಾನನ ದರ್ಶನ ಪಡೆದ ಜಗ್ಗೇಶ್

    jaggesh watches yajamana movie in disguise

    ಕನ್ನಡದಲ್ಲಿ ತಮಗಿಷ್ಟವಾದ ಪ್ರತಿಯೊಬ್ಬರ ಚಿತ್ರವನ್ನೂ ಮೆಚ್ಚಿ, ಪ್ರೋತ್ಸಾಹಿಸುವ, ಬೆನ್ನುತಟ್ಟುವ, ಸಾಧ್ಯವಾದಷ್ಟೂ ಹೆಗಲಿಗೆ ಹೆಗಲು ಕೊಡುವ ನಟ ಜಗ್ಗೇಶ್, ದರ್ಶನ್‍ರ ಯಜಮಾನ ಚಿತ್ರವನ್ನು ಕದ್ದುಮುಚ್ಚಿ ನೋಡಿಕೊಂಡು ಬಂದಿದ್ದಾರೆ. ಥಿಯೇಟರಿನಲ್ಲೇ.

    ಕೆಜಿಎಫ್ ಚಿತ್ರವನ್ನು ಮಂಕಿ ಕ್ಯಾಪ್ ಹಾಕಿಕೊಂಡು ಹೋಗಿ ನೋಡಿ, ಮಿರ್ಚಿ ಮಂಡಕ್ಕಿ ತಿಂದು ಬಂದಿದ್ದ ಜಗ್ಗೇಶ್, ಯಜಮಾನ ಚಿತ್ರವನ್ನು ಮುಸುಕು ಹಾಕಿಕೊಂಡು ಹೋಗಿ ನೋಡಿ ಬಂದಿದ್ದಾರೆ.

    ಯಾವ ಥಿಯೇಟರಿನಲ್ಲಿ ಅಂತೀರಾ..? ಗೊತ್ತಾಗ್ಬಿಟ್ರೆ ಬಿಟ್‍ಬಿಡ್ತೀರಾ..? ಅದಕ್ಕೇ ಜಗ್ಗೇಶ್ ಅದನ್ನು ಸಸ್ಪೆನ್ಸ್ ಆಗಿಯೇ ಇಟ್ಟಿದ್ದಾರೆ.

    ಯಜಮಾನ ಚಿತ್ರವಂತೂ ದರ್ಶನ್‍ರ ಈ ಹಿಂದಿನ ಎಲ್ಲ ಚಿತ್ರಗಳ ಬಾಕ್ಸಾಫೀಸ್ ದಾಖಲೆಗಳನ್ನು ಪುಡಿಗಟ್ಟಿ ಮುನ್ನುಗ್ಗುತ್ತಿದೆ. ದರ್ಶನ್ ಹ್ಯಾಪಿ. ಹರಿಕೃಷ್ಣ ಹ್ಯಾಪಿ. ನಿರ್ಮಾಪಕಿ ಶೈಲಜಾ ನಾಗ್ ಅವರಂತೂ ಡಬಲ್ ಹ್ಯಾಪಿ.

  • ಮ್ಯಾಜಿಕ್ ಸೃಷ್ಟಿಸಿದ ಯಜಮಾನ ಟೈಟಲ್ ಸಾಂಗ್

    yajamana's title rack creates magic

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರದ ಟೈಟಲ್ ಸಾಂಗ್ ಅಕ್ಷರಶಃ ಮ್ಯಾಜಿಕ್ ಮಾಡಿಬಿಟ್ಟಿದೆ. ಸಂತೋಷ್ ಆನಂದ್ ರಾಮ್ ಬರೆದಿರುವ ಮಾತು ತಪ್ಪದ ಯಜಮಾನ.. ಹಾಡು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ದರ್ಶನ್ ಅವರ ಇದುವರೆಗಿನ ಎಲ್ಲ ಚಿತ್ರಗಳ ಹಾಡುಗಳಿಗೆ ಹೋಲಿಸಿದರೆ, ಇದು ಕಂಪ್ಲೀಟ್ ಡಿಫರೆಂಟ್. 

    ಹಾಡು ರಿಲೀಸ್ ಆದ ಕೇವಲ 6 ನಿಮಿಷದಲ್ಲಿ 1 ಲಕ್ಷ ಮಂದಿ, 20 ನಿಮಿಷದಲ್ಲಿ 2 ಲಕ್ಷ ಮಂದಿ ವೀಕ್ಷಿಸಿ ದಾಖಲೆ ಬರೆದಿದೆ ಯಜಮಾನ ಟೈಟಲ್ ಸಾಂಗ್. ಈಗ ಒಂದು ಮಿಲಿಯನ್ ವ್ಯೂ ದಾಟಿ ಮುನ್ನುಗ್ಗುತ್ತಿದೆ ಯಜಮಾನನ ಟೈಟಲ್ ಸಾಂಗ್.

    ಶೈಲಜಾ ನಾಗ್, ಬಿ.ಸುರೇಶ್ ನಿರ್ಮಾಣದ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ. ಹರಿಕೃಷ್ಣ, ಕುಮಾರ್ ನಿರ್ದೇಶನದ ಸಿನಿಮಾಗೆ ಹರಿಕೃಷ್ಣ ಅವರೇ ಮ್ಯೂಸಿಕ್ ಡೈರೆಕ್ಟರ್. ವಿಜಯ್ ಪ್ರಕಾಶ್ ಹಾಡಿರುವ ಹಾಡು, ಈಗ ಸೃಷ್ಟಿಸಿರುದು ಮ್ಯಾಜಿಕ್.

  • ಯಜಮಾನ 800+

    yajamana to release in more than 800 screens

    ದರ್ಶನ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಯಜಮಾನ ಸಿನಿಮಾ ರಿಲೀಸ್‍ಗೆ ಕ್ಷಣಗಣನೆ ಶುರುವಾಗಿದೆ. ದರ್ಶನ್ ಚಿತ್ರ ಮಾರ್ಚ್ 1ರಂದು 800ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಬಿಡುಗಡೆಯಾಗುತ್ತಿದೆ. ಅದು ದರ್ಶನ್ ಕ್ರೇಜ್.

    ಕಲಾತ್ಮಕ ಚಿತ್ರಗಳ ಮೂಲಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ನಿರ್ಮಾಪಕರಾದ ಶೈಲಜಾ ನಾಗ್, ಬಿ.ಸುರೇಶ್ ಇದೇ ಮೊದಲ ಬಾರಿಗೆ ಕಮರ್ಷಿಯಲ್ ಸಿನಿಮಾ ಮಾಡಿದ್ದಾರೆ. ಹರಿಕೃಷ್ಣ, ಕುಮಾರ್ ಜಂಟಿ ನಿರ್ದೇಶನದ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್ ನಾಯಕಿಯರು. ದೇವರಾಜ್, ಧನಂಜಯ್, ರವಿಶಂಕರ್, ಸಾಧುಕೋಕಿಲ ನಸಿರುವ ಯಜಮಾನ, ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.

  • ಯಜಮಾನ ಚಿತ್ರದಲ್ಲಿ ನರೇಂದ್ರ ಮೋದಿ ಸಂದೇಶ..!

    does yajamana movie have modi;'s make in india concept

    ಸಿನಿಮಾ ರಿಲೀಸ್‍ಗೂ ಮೊದಲೆ ಚಿತ್ರದಲ್ಲಿ ಮನರಂಜನೆ ಜೊತೆಗೆ ಸಂದೇಶವೂ ಇದೆ ಎಂದಿದ್ದರು ದರ್ಶನ್. ಅಷ್ಟೇ ಅಲ್ಲ, ಚಿತ್ರದ ಕಥೆ ಡಿಫರೆಂಟ್ ಎಂದಿದ್ದರು. ಹಾಗೆಯೇ ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಒಂದು ಪ್ರಬಲ ಸಂದೇಶವಿದೆ. ಅದು ಮೇಕ್ ಇನ್ ಇಂಡಿಯಾ. 

    ಚಿತ್ರದಲ್ಲಿ ದರ್ಶನ್, ಸ್ವೀಟ್ ಬ್ರಾಂಡ್ ಕಂಪೆನಿಯ ಓನರ್. ಆ ಬ್ರಾಂಡ್ ಕಸಿದುಕೊಳ್ಳೋಕೆ ನಡೆಯುವ ಸಂಚಿನ ವಿರುದ್ಧ ಹೋರಾಡುತ್ತಾನೆ. ಅದು ಮೋದಿಯ ಮೇಕ್ ಇನ್ ಇಂಡಿಯಾ ಕಾನ್ಸೆಪ್ಟಿಗೆ ಹತ್ತಿರವಾಗಿದೆ ಅನ್ನೋದು ದರ್ಶನ್ ಮತ್ತು ಮೋದಿ.. ಇಬ್ಬರಿಗೂ ಅಭಿಮಾನಿಗಳಾಗಿರುವವರ ಮಾತು. 

  • ಯಜಮಾನ ಟೀಂ ರಿಪೀಟ್

    ಯಜಮಾನ ಟೀಂ ರಿಪೀಟ್

    ರಾಬರ್ಟ್ ನಂತರ ದರ್ಶನ್ ಮದಕರಿ ನಾಯಕ ಚಿತ್ರ ಮಾಡಬೇಕಿತ್ತು. ಲಾಕ್ ಡೌನ್ ಕಾರಣದಿಂದಾಗಿ ಅದು ಮುಂದಕ್ಕೆ ಹೋಗಿದೆ. ರಾಕ್ಲೈನ್ ಚಿತ್ರವನ್ನು ಮಾಡಬೇಕಿತ್ತು. ಅದರ ಬಗ್ಗೆ ಸದ್ದಿಲ್ಲ. ಇದರ ನಡುವೆಯೇ ಯಜಮಾನ ಟೀಂ ರಿಪೀಟ್ ಆಗಿದೆ. ಯೆಸ್, ಅದು ಡಿ 55.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಮ್ಮೆ ಶೈಲಜಾ ನಾಗ್ ಅವರಿಗೇ ಕಾಲ್ ಶೀಟ್ ಕೊಟ್ಟಿದ್ದಾರೆ. ಡೈರೆಕ್ಟರ್ ಸೀಟ್ನಲ್ಲಿ ಹರಿಕೃಷ್ಣ ಬಂದಿದ್ದಾರೆ. ಸದ್ಯಕ್ಕೆ ಸಿಕ್ಕಿರೋ ಸುದ್ದಿ ಇಷ್ಟು ಮಾತ್ರ. ಯಜಮಾನ ಚಿತ್ರದಲ್ಲಿ ಎಣ್ಣೆ ಗಾಣದ ಕಥೆಯನ್ನು ಕಮರ್ಷಿಯಲ್ಲಾಗಿ ಹೇಳಿ ಗೆದ್ದಿದ್ದ ಹರಿಕೃಷ್ಣ, ಈ ಬಾರಿ ಎಂತಹ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ ಅನ್ನೋ ಕುತೂಹಲ ಎಲ್ಲರಿಗೂ ಇದೆ. ಕಥೆ, ಸಿನಿಮಾ ಟೈಟಲ್ ಎಲ್ಲವೂ ಶೀಘ್ರದಲ್ಲೇ ಅನೌನ್ಸ್ ಆಗಲಿದೆ.

  • ಯಜಮಾನ ದರ್ಶನ್ ಚಿತ್ರಕ್ಕೆ ತಾರೆಯರ ನೃತ್ಯ

    stars come together for a song in yajamana

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ. ಶೈಲಜಾ ಸುರೇಶ್ ನಿರ್ಮಾಪಕಿ. ಧನಂಜಯ್ ನೆಗೆಟಿವ್ ರೋಲ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕ ಪಿ. ಕುಮಾರ್ ಚಿತ್ರಕ್ಕಾಗಿಯೇ ಹಳ್ಳಿಯ ಸೆಟ್‍ವೊಂದನ್ನು ಹಾಕಿಸಿದ್ದಾರೆ. ಇವರೆಲ್ಲರ ಹೊರತಾಗಿ ಚಿತ್ರದಲ್ಲಿ ಚಿತ್ರರಂಗದ ತಾರಾಬಳಗವೇ ಕಾಣಿಸಿಕೊಳ್ಳಲಿದೆ. 

    ಯಜಮಾನ ಚಿತ್ರದ ಒಂದು ಹಾಡಿನಲ್ಲಿ ರೆಬಲ್‍ಸ್ಟಾರ್ ಅಂಬರೀಷ್ ಬರಲಿದ್ದಾರೆ. ಲವ್ಲೀಸ್ಟಾರ್ ಪ್ರೇಮ್, ಪ್ರಜ್ವಲ್ ದೇವರಾಜ್, ಜ್ಯೂ. ಟೈಗರ್ ವಿನೋದ್ ಪ್ರಭಾಕರ್ ಸೇರಿದಂತೆ ಹಲವು ಸ್ನೇಹಿತರು ದರ್ಶನ್ ಚಿತ್ರದಲ್ಲಿ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ. 

    ಇದುವರೆಗೆ ದರ್ಶನ್ ಹಲವು ನಟರ ಚಿತ್ರಗಳಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಈಗ ದರ್ಶನ್ ಚಿತ್ರದಲ್ಲಿ ಕಲಾವಿದರು ಅತಿಥಿಗಳಾಗಿ ಬರುತ್ತಿದ್ದಾರೆ. ಪ್ರೀತಿಯಿಂದ.. ಸ್ನೇಹಕ್ಕಾಗಿ..

  • ಯಜಮಾನ ದರ್ಶನ್ ಚಿತ್ರದಲ್ಲಿರೋ ನಿರ್ದೇಶಕರೆಷ್ಟು ಜನ..?

    army of director's in darshan's yajamana

    ಯಜಮಾನ. ಬಹುನಿರೀಕ್ಷಿತ ದರ್ಶನ್ ಸಿನಿಮಾ. ಎರಡು ವರ್ಷಗಳಿಂದ ದರ್ಶನ್ ಚಿತ್ರಗಳಿಲ್ಲದೆ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ದರ್ಶನ್ ಫ್ಯಾನ್ಸ್ ಸಿನಿಮಾ ಥಿಯೇಟರಿಗೆ ಬರುವುದನ್ನೇ ಎದುರು ನೋಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿರುವ ಚಿತ್ರಕ್ಕೆ ಶೈಲಜಾ ನಾಗ್ ಮತ್ತು ಬಿ.ಸುರೇಶ್ ನಿರ್ಮಾಪಕರು. ಆದರೆ, ಕುತೂಹಲದ ಸಂಗತಿ ಇದ್ಯಾವುದೂ ಅಲ್ಲ. ಟೋಟಲ್ ಟೀಂನಲ್ಲೇ ನಿರ್ದೇಶಕರ ಸಂಗಮವಿದೆ.

    ಸುಮ್ಮನೆ ನೋಡಿ. ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಬಿ.ಸುರೇಶ್ ಸ್ವತಃ ಒಬ್ಬ ನಿರ್ದೇಶಕರು. ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವವರು. ಪಿ.ಕುಮಾರ್ ಮತ್ತು ಹರಿಕೃಷ್ಣ ಚಿತ್ರದ ನಿರ್ದೇಶಕರು. ಹರಿಕೃಷ್ಣ ಈ ಸಿನಿಮಾದ ಮೂಲಕ ಡೈರೆಕ್ಟರ್ ಆಗುತ್ತಿದ್ದಾರೆ.

    ಇನ್ನು ಚಿತ್ರಕ್ಕೆ ಹಾಡು ಬರೆದಿರುವ ಚೇತನ್ ಕುಮಾರ್, ಯೋಗರಾಜ್ ಭಟ್, ಕವಿರಾಜ್, ಎಲ್ಲರೂ ನಿರ್ದೇಶಕರೇ. ಅಂದಹಾಗೆ ಸಂತೋಷ್ ಆನಂದ್‍ರಾಮ್ ಇದೇ ಮೊದಲ ಬಾರಿಗೆ ದರ್ಶನ್ ಚಿತ್ರಕ್ಕೆ ಹಾಡು ಬರೆದಿದ್ದಾರೆ. ಒಟ್ಟಿನಲ್ಲಿ ಯಜಮಾನನ ಮನೆಯಲ್ಲಿ ನಿರ್ದೇಶಕರದ್ದೇ ದರ್ಬಾರು.

  • ಯಜಮಾನ ದರ್ಶನ್.. ಸಾರಥಿ ದರ್ಶನ್..!

    darshan;s name is krishna in yajamana

    ಸಾರಥಿ ಚಿತ್ರದಲ್ಲಿ ದರ್ಶನ್ ಪಾತ್ರದ ಹೆಸರೇನು..? ರಾಜ ಮತ್ತು ಕೃಷ್ಣ. ಆ ಎರಡೂ ಹೆಸರಲ್ಲಿ ಕಾಣಿಸಿಕೊಳ್ತಾರೆ ದರ್ಶನ್. ಈಗ ಯಜಮಾನ ಚಿತ್ರದಲ್ಲೂ ಅದೇ ಹೆಸರು. ಕೃಷ್ಣ. 

    ಯಜಮಾನ ಚಿತ್ರದಲ್ಲಿ ದರ್ಶನ್ ಒಬ್ಬ ಗೌಳಿಗ. ಹೆಸರು ಕೃಷ್ಣ. ಕೊಳಲನೂದುವಷ್ಟೇ ಸಹಜವಾಗಿ ರೌಡಿಗಳನ್ನೂ ಮಟ್ಟ ಹಾಕಬಲ್ಲ ವೀರನಂದಿ.

    ಹಾಗಾದರೆ ಯಜಮಾನ ಯಾರಿರಬಹುದು..? ದೇವರಾಜ್ ಇರಬಹುದಾ..? 

    ಮಾರ್ಚ್ 1ರ ನಂತರ ಯಾವುದೂ ಸೀಕ್ರೆಟ್ ಆಗಿರಲ್ಲ. ಮೊದಲ ಶೋ ಮುಗಿಯುವ ಹೊತ್ತಿಗೆ ಎಲ್ಲವೂ ಗೊತ್ತಾಗಿರುತ್ತೆ. ನಮ್ಮ ಹಣೆಬರಹವೂ ಗೊತ್ತಾಗಿರುತ್ತೆ ಅನ್ನೋ ದರ್ಶನ್, ಯಜಮಾನ ಒಂದು ಪಕ್ಕಾ ಕಮರ್ಷಿಯಲ್ ಮೂವಿ ಅಂತಾರೆ.