ರಾಧಿಕಾ ಕುಮಾರಸ್ವಾಮಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಬಬ್ಲಿ ಬಬ್ಲೀ ಪಾತ್ರಗಳ ಮೂಲಕ. ಅದಾದ ನಂತರ ಹಲವು ಅವತಾರಗಳಲ್ಲಿ ಕಾಣಿಸಿಕೊಂಡಿರುವ ರಾಧಿಕಾ ಕುಮಾರಸ್ವಾಮಿ, ಕನ್ನಡದಲ್ಲಷ್ಟೇ ಅಲ್ಲ, ತೆಲುಗಿನಲ್ಲಿಯೂ ಕೂಡಾ ದೈವಭಕ್ತೆಯ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ, ಈಗ ಸ್ವತಃ ದೇವತೆಯ ಪಾತ್ರದಲ್ಲಿ ನಟಿಸಲು ಸಿದ್ಧರಾಗಿದ್ದಾರೆ ರಾಧಿಕಾ.
ಶಮಿಕಾ ಎಂಟರ್‍ಪ್ರೈಸಸ್ ಮೂಲಕ ನಿರ್ಮಾಣವಾಗುತ್ತಿರುವ `ಭೈರಾದೇವಿ' ಚಿತ್ರಕ್ಕೆ ರಾಧಿಕಾ ನಾಯಕಿ ಮತ್ತು ನಿರ್ಮಾಪಕಿ. ರಾಧಿಕಾ ಜೊತೆ ರಮೇಶ್ ಅರವಿಂದ್ ಹಾಗೂ ಅನು ಪ್ರಭಾಕರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಆರ್.ಎಕ್ಸ್. ಸೂರಿ ಚಿತ್ರ ನಿರ್ದೇಶಿಸಿದ್ದ ಶ್ರೀಜೈ, ಭೈರಾದೇವಿ ಚಿತ್ರದ ನಿರ್ದೇಶಕ.
ಈ ಚಿತ್ರ ಕನ್ನಡದಲ್ಲಷ್ಟೇ ಅಲ್ಲ, ಏಕಕಾಲದಲ್ಲಿ ತೆಲುಗು ಹಾಗೂ ತಮಿಳಿನಲ್ಲಿಯೂ ನಿರ್ಮಾಣವಾಗಲಿದೆ. ಒಂದೊಳ್ಳೆ ಕಥೆ. ಇಷ್ಟವಾಯಿತು. ಪಾತ್ರವೂ ವಿಭಿನ್ನವಾಗಿತ್ತು. ಹೀಗಾಗಿ ನಾನೇ ನಿರ್ಮಾಣದ ಜವಾಬ್ದಾರಿಯನ್ನೂ ವಹಿಸಿಕೊಂಡೆ ಎಂದಿದ್ದಾರೆ ರಾಧಿಕಾ ಕುಮಾರಸ್ವಾಮಿ.