` veerendra hegde, - chitraloka.com | Kannada Movie News, Reviews | Image

veerendra hegde,

 • Dr Veerendra Heggade Releases The Songs Of 'Kanoorayana'

  dr veerendra hegade released kanoorayana audio

  Dharmasthala Dharmadhikari Dr Veerendra Heggade on Friday evening released the songs of T S Nagabharana's new film 'Kanoorayana' at the KSCA in Bangalore and wished the team a huge success.

  'Kanoorayana' is a film being produced by Dharmasthala's co-operative movement and 20 lakh people from this movement have produced the movie by investing Rs 20 each.

  'Kanoorayana' stars Skanda Avinash, Sonu, Giriraj, Doddanna, Girija Lokesh, Neenasam Ashwath, Sundar Raj, Karisubbu and others in prominent roles. Vasuki Vaibhav is the music director.

 • ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ : ವಿಶೇಷತೆಗಳೇನು?

  puneeth rajkumar image

  ಡಾ.ಪುನೀತ್ ರಾಜ್‍ಕುಮಾರ್ ಅವರಿಗೆ ಮರಣೋತ್ತರವಾಗಿ ಇಂದು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ನಡೆಯಲಿದೆ. ಇಂದು ಸಂಜೆ 4 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ. ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮ ನಡೆಯಲಿದೆ. ಗಾಯಕ ವಿಜಯ ಪ್ರಕಾಶ್ ತಂಡದವರ ಗಾಯನ ಇರಲಿದೆ. ಐದು ಸಾವಿರ ಜನಕ್ಕೆ ಪಾಸ್ ನೀಡಲಾಗುವುದು. ಮುಖ್ಯ ಅತಿಥಿಗಳಾಗಿ ಸುಧಾಮೂರ್ತಿ, ರಜನಿಕಾಂತ್, ಜ್ಯೂನಿಯರ್ ಎನ್ಟಿಆರ್  ಇರಲಿದ್ದಾರೆ.

  ಪುನೀತ್ ಅವರ ಪರವಾಗಿ ಪ್ರಶಸ್ತಿ ಸ್ವೀಕಾರ ಮಾಡಲಿರುವುದು ಅಶ್ವಿನಿ ಪುನೀತ್ ರಾಜಕುಮಾರ್. ಜೊತೆಗೆ ಇಡೀ ದೊಡ್ಮನೆಯ ಎಲ್ಲ ಕುಟುಂಬ ಸದಸ್ಯರೂ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸ್ಪೀಕರ್ ಕಾಗೇರಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಸುನಿಲ್ ಕುಮಾರ್ ಸೇರಿದಂತೆ ಎಲ್ಲ ಮಂತ್ರಿಗಳು, ಶಾಸಕರು ಭಾಗಿಯಾಗಲಿದ್ದಾರೆ. ಕರ್ನಾಟಕ ರತ್ನ ಪ್ರಶಸ್ತಿ ಪೂರ್ಣ ಬೆಳ್ಳಿಯಲ್ಲಿ ಇರಲಿದೆ. 50 ಗ್ರಾಂ ಚಿನ್ನದ ಪದಕ ಕೂಡ ಇರಲಿದೆ.

  ಕುವೆಂಪು, ಡಾ. ರಾಜಕುಮಾರ್, ಎಸ್ ನಿಜಲಿಂಗಪ್ಪ, ಸಿಎನ್.ಆರ್ ರಾವ್, ಪಂಡಿತ್ ಭೀಮಸೇನ ಜೋಶಿ, ಶಿವಕುಮಾರ ಸ್ವಾಮೀಜಿ, ದೇ. ಜವರೇಗೌಡ ಅವರು ಇದುವರೆಗಿನ ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕøತರು. ಸಾರ್ವಜನಿಕರು ಕೂಡಾ ಸಮಾರಂಭದಲ್ಲಿ ಭಾಗವಹಿಸಬಹುದು. ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭದ ಮುಖ್ಯ ವೇದಿಕೆಯಲ್ಲಿ 20 ಗಣ್ಯರಿಗೆ ಮಾತ್ರ ಅವಕಾಶವಿದೆ. ವೇದಿಕೆ ಮುಂಭಾಗದಲ್ಲಿ 500 ವಿಐಐಪಿಗಳ ಆಸನಕ್ಕೆ ವ್ಯವಸ್ಥೆ ಮಾಡಲಾಗಿದೆ.

  ಇಂದು ಮಧ್ಯಾಹ್ನ 1 ಗಂಟೆಯ ಬಳಿಕ ಕೆ. ಆರ್. ಸರ್ಕಲ್, ವಿಧಾನಸೌಧ, ರಾಜಭವನ ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಚಾರ  ಮಾರ್ಗ ಬದಲಾವಣೆಯಾಗಿದೆ. ಅನಿವಾರ್ಯವಲ್ಲದಿದ್ದರೆ ಇಂದು ಮಧ್ಯಾಹ್ನದ ನಂತರ ವಿಧಾನಸೌಧ ಭಾಗದಲ್ಲಿ ಹೋಗದೇ ಇರುವುದು ಉತ್ತಮ.

   

 • ಪ್ರಥಮ್‍ಗೆ ಧರ್ಮಸ್ಥಳ ಧರ್ಮಾಧಿಕಾರಿ ಉಡುಗೊರೆ

  pratham meets veerendra hegde

  ಒಳ್ಳೆಯ ಹುಡುಗ ಪ್ರಥಮ್‍ಗೆ ಈಗ ಒಂದು ಮರೆಯಲಾರದ ಉಡುಗೊರೆ ಸಿಕ್ಕಿದೆ. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಧರ್ಮಸ್ಥಳಕ್ಕೆ ಭೇಟಿ ಕೊಟ್ಟಿದ್ದ ಪ್ರಥಮ್, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಹೆಗ್ಗಡೆಯವರು, ಪ್ರಥಮ್‍ಗೆ ವಿದೇಶಿ ವಾಚ್‍ವೊಂದನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.

  ಚಿಕಾಗೊದಿಂದ ತರಿಸಿದ್ದ ವಾಚ್‍ನ್ನು ಹೆಗ್ಗಡೆಯವರಿಂದಲೇ ಕಾಣಿಕೆಯಾಗಿ ಪಡೆದ ಪ್ರಥಮ್‍ಗೆ ಅದು ಮರೆಯಲಾಗದ ಕ್ಷಣ. ಭಾವುಕರಾಗಿಯೇ ಉಡುಗೊರೆಯನ್ನು ಸ್ವೀಕರಿಸಿರುವ ಪ್ರಥಮ್, ಇದು ನನ್ನ ಜೀವಮಾನದಲ್ಲೇ ನಾನು ಪಡೆಯುತ್ತಿರುವ ಅತಿ ಶ್ರೇಷ್ಟ ಗಿಫ್ಟ್ ಎಂದಿದ್ದಾರೆ.