` lekha chandra, - chitraloka.com | Kannada Movie News, Reviews | Image

lekha chandra,

  • Lekha Chandra Is The Heroine Of 'Fighter'

    lekha chandra is the heroine for fighter

    Actress Lekha Chandra who is looking forward for the release of 'Yariguntu Yarigilla' has been selected as the heroine of Vinod Prabhakar's new film 'Fighter'. The shooting for the film has already been started and Lekha Chandra has joined the sets of the film.

    Vinod Prabhakar's new film 'Fighter' was launched at the Kanteerava Studios in July. Though the film was launched in July, the shooting started recently and the shooting is in full progress.

    'Fighter' is being directed by Nutan Umesh who had earlier directed 'Krishnan Marriage Story' and 'Astitva'. Katigenahalli Somashekhar is the producer. Vijayalakshmi plays Vinod's mother in this film.

     

  • ಫೈಟರ್ ವಿನೋದ್ ಪ್ರಭಾಕರ್ ಬೆನ್ನು ಹತ್ತಿದ ಲೇಖಾಚಂದ್ರ

    ಫೈಟರ್ ವಿನೋದ್ ಪ್ರಭಾಕರ್ ಬೆನ್ನು ಹತ್ತಿದ ಲೇಖಾಚಂದ್ರ

    ವಿನೋದ್ ಪ್ರಭಾಕರ್ ಅವರ ಬೆನ್ನ ಹಿಂದೆ ಒಬ್ಬಳು ಸುಂದರಿ ಬಿದ್ದಿದ್ದಾಳೆ. ವಿನೋದ್ ಎಲ್ಲೇ ಹೋದ್ರೂ.. ಆಕೆ ಫಾಲೋ ಮಾಡ್ತಾಳೆ. ಅದೂ ಅಂತಿಂತಾ ಫಾಲೋ ಅಲ್ಲ. ವಿನೋದ್ ಇನ್ನೊಬ್ಬಳಿಗೆ ತಾಳಿ ಕಟ್ಟೋಕೆ ಹೋದ್ರೆ ಗೂಂಡಾಗಳನ್ನ ಇಟ್ಟುಕೊಂಡು ವಿನೋದ್ ಪ್ರಭಾಕರ್‍ನ್ನೇ ಓಡಿಸ್ಕೊಂಡು ಹೋಗ್ತಾಳೆ. ಪೊಲೀಸ್ ಆಗಿ ಬಂದು ರಸ್ತೆಯಲ್ಲೇ..

    ಫೈಟರ್ ಚಿತ್ರದ ಹಾಡಿದು. ಟೀಸರ್ ಬಿಟ್ಟು ಸೆನ್ಸೇಷನ್ ಮಾಡಿದ್ದ ಫೈಟರ್ ಚಿತ್ರದ ಹೊಸ ಹಾಡು ರಿಲೀಸ್ ಆಗಿದೆ.  ಐ ವಾನಾ ಫಾಲೋ ಯೂ… ರುಕ್ಕೋ ರುಕ್ಕೋ ರೋಮಿಯೋ, ನನ್ನ ಕಡೆ ನೋಡಯ್ಯೋ…’ ಎಂದು ಸಾಗುವ ಹಾಡಿದು. ನಾಯಕನ ಹಿಂದೆ ಸುತ್ತುತ್ತಾ ಆತನನ್ನು ಛೇಡಿಸುವ ರೀತಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ವಿನೋದ್ ಪ್ರಭಾಕರ್ ಹಾಗೂ ಲೇಖಾಚಂದ್ರ ಈ ಹಾಡಿಗೆ ಸ್ಟೈಲಿಶ್ ಲುಕ್ನಲ್ಲಿ ಸ್ಟೆಪ್ಸ್ ಹಾಕಿದ್ದಾರೆ.

    ಗುರುಕಿರಣ್ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಕವಿರಾಜ್ ಸಾಹಿತ್ಯ ಬರೆದಿದ್ದು, ಚೈತ್ರಾ ಧ್ವನಿಯಾಗಿದ್ದಾರೆ. ಭಜರಂಗಿ ಮೋಹನ್ ನೃತ್ಯ ನಿರ್ದೇಶನ ಮಾಡಿದ್ದಾರೆ. ನೂತನ್ ಉಮೇಶ್ ನಿರ್ದೇಶನದ ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಪಾವನಾ ಹಾಗೂ ಲೇಖಾಚಂದ್ರ ನಟಿಸಿದ್ದಾರೆ. ‘ಲಾಕಪ್ ಡೆತ್’ ಖ್ಯಾತಿಯ ನಟಿ ನಿರೋಷ ‘ಫೈಟರ್’ ಮೂಲಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ದೊಡ್ಡ ಗ್ಯಾಪ್ನ ನಂತರ ಮತ್ತೆ ಕನ್ನಡದಲ್ಲಿ ಅಭಿನಯಿಸಿರುವುದು ವಿಶೇಷ.

  • ಮಿಸ್ಟರ್ ಎಲ್‍ಎಲ್‍ಬಿ - ಕ್ವಾಟ್ಲೆಗೇ ಕ್ವಾಟ್ಲೆ

    mr llb releasing in 16th february

    ಮುಂದಿನ ವಾರ ಮಿಸ್ಟರ್ ಎಲ್‍ಎಲ್‍ಬಿ ಸಿನಿಮಾ ಬರುತ್ತಿದೆ. ಈ ವಾರ.. ಮುಂದಿನ ವಾರ.. ಎಂದು ಚಿತ್ರ ಬಿಡುಗಡೆಗೆ ವಿಳಂಬ ಮಾಡಿದ್ದ ಚಿತ್ರದ ನಿರ್ಮಾಪಕರು, ಇನ್ನು ಕಾಯೋದ್ರಲ್ಲಿ ಅರ್ಥವಿಲ್ಲ ಅನ್ನೋ ತೀರ್ಮಾನಕ್ಕೆ ಬಂದು ಸಿನಿಮಾವನ್ನು ಥಿಯೇಟರಿಗೆ ತರುತ್ತಿದ್ದಾರೆ. 

    ಇಷ್ಟಕ್ಕೂ ಚಿತ್ರದ ಕಥೆಯೇನು ಎಂದರೆ, ಕ್ವಾಟ್ಲೆ, ಕಿರಿಕ್ಕುಗಳು ಅನಾವರಣಗೊಳ್ಳುತ್ತವೆ. ಚಿತ್ರದ ನಾಯಕ ಊರಿಗೇ ಕ್ವಾಟ್ಲೆ ಕೊಟ್ರೆ, ಅವನಿಗೇ ಕ್ವಾಟ್ಲೆ ಕೊಡೋ ಪಾತ್ರ ನಾಯಕಿಯದ್ದು. ಹಳ್ಳಿಯಲ್ಲಿನ ರಾಜಕೀಯವನ್ನು ಹಾಸ್ಯಮಯವಾಗಿ ಹೇಳಲಾಗಿದೆಯಂತೆ. 

    ಶಿಶಿರ್ ಶಾಸ್ತ್ರಿ ಮತ್ತು ಲೇಖ ಚಂದ್ರ ಅಭಿನಯದ ಈ ಚಿತ್ರಕ್ಕೆ ರಘುವರ್ಧನ್ ನಿರ್ದೇಶಕ. ಸುಮಾರು 50ರಿಂದ 60 ಚಿತ್ರಮಂದಿರಗಳಲ್ಲಿ ರಿಲೀಸ್ ಆಗೋಕೆ ರೆಡಿಯಾಗಿದೆ ಮಿಸ್ಟರ್ ಎಲ್‍ಎಲ್‍ಬಿ.