ಮುಂದಿನ ವಾರ ಮಿಸ್ಟರ್ ಎಲ್‍ಎಲ್‍ಬಿ ಸಿನಿಮಾ ಬರುತ್ತಿದೆ. ಈ ವಾರ.. ಮುಂದಿನ ವಾರ.. ಎಂದು ಚಿತ್ರ ಬಿಡುಗಡೆಗೆ ವಿಳಂಬ ಮಾಡಿದ್ದ ಚಿತ್ರದ ನಿರ್ಮಾಪಕರು, ಇನ್ನು ಕಾಯೋದ್ರಲ್ಲಿ ಅರ್ಥವಿಲ್ಲ ಅನ್ನೋ ತೀರ್ಮಾನಕ್ಕೆ ಬಂದು ಸಿನಿಮಾವನ್ನು ಥಿಯೇಟರಿಗೆ ತರುತ್ತಿದ್ದಾರೆ.
ಇಷ್ಟಕ್ಕೂ ಚಿತ್ರದ ಕಥೆಯೇನು ಎಂದರೆ, ಕ್ವಾಟ್ಲೆ, ಕಿರಿಕ್ಕುಗಳು ಅನಾವರಣಗೊಳ್ಳುತ್ತವೆ. ಚಿತ್ರದ ನಾಯಕ ಊರಿಗೇ ಕ್ವಾಟ್ಲೆ ಕೊಟ್ರೆ, ಅವನಿಗೇ ಕ್ವಾಟ್ಲೆ ಕೊಡೋ ಪಾತ್ರ ನಾಯಕಿಯದ್ದು. ಹಳ್ಳಿಯಲ್ಲಿನ ರಾಜಕೀಯವನ್ನು ಹಾಸ್ಯಮಯವಾಗಿ ಹೇಳಲಾಗಿದೆಯಂತೆ.
ಶಿಶಿರ್ ಶಾಸ್ತ್ರಿ ಮತ್ತು ಲೇಖ ಚಂದ್ರ ಅಭಿನಯದ ಈ ಚಿತ್ರಕ್ಕೆ ರಘುವರ್ಧನ್ ನಿರ್ದೇಶಕ. ಸುಮಾರು 50ರಿಂದ 60 ಚಿತ್ರಮಂದಿರಗಳಲ್ಲಿ ರಿಲೀಸ್ ಆಗೋಕೆ ರೆಡಿಯಾಗಿದೆ ಮಿಸ್ಟರ್ ಎಲ್‍ಎಲ್‍ಬಿ.