` babru, - chitraloka.com | Kannada Movie News, Reviews | Image

babru,

  • 'Babru' Teaser Released by Darshan

    babru teaser launched bu darshan

    Suman Nagarkar's debut film as a producer Babru  teaser was released by challenging star Darshan on Monday evening. Movie is getting released on 6th December.

    The film has the distinction of being shot completely in America for the very first time. The film being directed by IT professional Sujay Ramaiah is about a journey from Mexico to Canada. Sujay says he got the idea when he was driving with Rakshith Shetty and it was Rakishith who encouraged him to direct a feature film. Earlier, Rakshith and Sujay had done a few short films and Now Sujay is making his debut as a full length feature film.

    The film stars Suman Nagarkar, Gana Bhatt and others in prominent roles. Poornachandra Tejaswi is the music director, while Suhas is the cinematographer. The film has been shot completely in America for 30 days.

  • 'ಬೆಳದಿಂಗಳ ಬಾಲೆ’ಯ ಬಬ್ರೂ ಬಿಡುಗಡೆಗೂ ಮೊದಲೇ ದಾಖಲೆ

    babru makes record before movie release

    ಕನ್ನಡ ಚಿತ್ರರಂಗ ಈ ಗ ಹೊಸ ಪ್ರಯತ್ನಗಳಿಂದ ಕಳೆಗಟ್ಟಿದೆ. ಇಂತಹ ವಿಭಿನ್ನ ಪ್ರಯತ್ನದ ಮುಂದುವರಿದ ಭಾಗವೇ ಬಬ್ರೂ. ಅಚ್ಚುಕಟ್ಟುತನದಿಂದ, ಹೊಸ ಪ್ರಯೋಗಗಳಿಂದ ರೂಪುಗೊಂಡಿರುವ ಚಿತ್ರ.  ಟ್ರೇಲರ್ ಮೂಲಕ ಪ್ರೇಕ್ಷಕರನ್ನೆಲ್ಲ ಆಕರ್ಷಿಸಿರುವ ಬಬ್ರೂ ಇದೇ ಡಿಸೆಂಬರ್ 6ರಂದು ತೆರೆಗಾಣುತ್ತಿದೆ. ಅಚ್ಚರಿಯ ಸಂಗತಿಯೆಂದರೆ ಈ ಸಿನಿಮಾ ಬಿಡುಗಡೆಗೂ ಮುನ್ನವೇ ದಾಖಲೆ ಬರೆದಿದೆ.

    ಅಮೆರಿಕದ ಸಿನಿ ಲಾಂಚ್‍ನಲ್ಲಿ ಈ ಸಿನಿಮಾದ ಪ್ರೀಮಿಯರ್ ಶೋ ಏರ್ಪಡಿಸಿಲಾಗಿತ್ತು. ನವೆಂಬರ್ 2ರಂದೇ ನಡೆದಿದ್ದ ಪ್ರೀಮಿಯರ್ ಶೋನಲ್ಲಿ ಬಬ್ರೂಗೆ ಪ್ರೇಕ್ಷಕರು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದರು.  ಅಮೆರಿಕಾದ ಸಿನಿ ಲಾಂಚ್‍ನ ಅಷ್ಟೂ ಪರದೆಗಳಲ್ಲಿ ಹೌಸ್ ಫುಲ್  ಪ್ರದರ್ಶನ ಕಂಡ ಕನ್ನಡ ಚಿತ್ರ ಬಬ್ರೂ.

    ಒಂದು ಅನಿರೀಕ್ಷಿತ ಜರ್ನಿಯ ಕಥೆಯಲ್ಲಿ ಪ್ರೀತಿ, ಪ್ರೇಮ ಮತ್ತು ಸಸ್ಪೆನ್ಸ್, ಕ್ರೈಂ ಥ್ರಿಲ್ಲರ್ ಕಥೆಯಿದೆ. ಈವರೆಗೆ ಯಾವ ಭಾಷೆಯ ಸಿನಿಮಾಗಳಲ್ಲಿಯೂ ಕಾಣಿಸದೆ ಇದ್ದ ಅಮೆರಿಕಾದ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡಿರುವ ಚಿತ್ರ ಬಬ್ರೂ.

    ಸುಜಯ್ ರಾಮಯ್ಯ ನಿರ್ದೇಶನದ ಚಿತ್ರ, ಯುಗ ಕ್ರಿಯೇಷನ್ಸ್ ಹಾಗೂ ಸುಮನ್ ನಗರ್‍ಕರ್ ಪೊಡ್ರಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣವಾಗಿದೆ. ಇಲ್ಲಿ ಸುಮನ್ ನಗರ್‍ಕರ್ ಮತ್ತು ಮಹಿ ಹಿರೇಮಠ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸನ್ನಿ ಮೋಜಾ, ರೇ ಟೊಸ್ಟಾದೋ, ಪ್ರಕೃತಿ ಕಶ್ಯಪ್, ಗಾನಾ ಭಟ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.

     

  • Babru Movie Review: Chitraloka Rating 3.5/ 5*

    babru movie review

    Babru, the first ever Kannada film shot entirely in the United States of America, is a road trip movie which involves two strangers with different motives. A thriller of a kind, Babru is a pleasant ride filled with good amount of surprises along with twists and turns to it.

    As the makers claims it is a journey covering upto 1503 miles on the road, it is quite a trip for the audience who seek for some fun entertainment attached with thrilling elements. Suman Nagarkar who is also one of the producers along with a bunch of movie loving NRIs, makes a comeback with this one.

    It is the technical team headed by Sujay Ramaiah, a software engineer turned director based in California makes Babru look stunningly beautiful on the screen. It kick starts with two strangers sharing a rented car to reach their faraway destination across America, and what follows until they part from each other is worth an experience to watch with all the necessary elements with hardly any bumps ahead as the journey moves ahead.

    It is swift too. Suman Nagarkar puts up another memorable act along with the freshers including Mahi Hiremath and the rest of the cast. 

    It takes a wild turn when the two comes to know that they had been carrying drugs worth over ten million dollars. With money coming into play, the trip takes on an adventurous mode with a chase for a lifetime. How the two end up with money is Babru's USP. Do book your tickets, and fasten your seatbelt for some action on the American roads this weekend as Babru releases this Friday at a theatre near you.

     

  • Made in America by NRIs - Babru To Release This Friday

    babru to release this friday

    In yet another first for Sandalwood, Babru marks as the first Kannada movie shot entirely in the United States of America and made by NRIs, which is all set for a grand release this Friday.

    The film which was premiered in the USA on the occasion of Kannada Rajyotsava, will see the talented actress Suman Nagarkar in a comeback venture, a thriller which traces an epic road trip of two strangers across the USA.

    Passion and love for Kannada movies, brought together a bunch of NRIs who along with Suman Nagarkar has led to the making of Babru. As Mahi Hiremath, Suman plays one of the two protagonists alongside Sunny Moza and others including Rey Tostado, Prakruthi Kashyap, Gaana Bhat, Sandeep Belliyappa and Bharath Sripad.

    Directed by debutant Sujay Ramaiah, the music for Babru is scored by Poornachandra Tejaswi. Book your tickets for a fun-filled thriller road trip, made entirely in the U.S.

  • Suman Nagarkar Turns Producer With 'Babru'

    suman nagarkar's babru

    Actress Suman Nagarkar of 'Beladingala Baale' has turned producer with a new film called 'Babru'. The film is being directed by Sanjay Ramaiah and the shooting for the film is already completed.

    'Babru' is set in America and the film revolves around few character essayed by Suman Nagarkar, Sunny Moja, Mahi Hiremath, Prakruthi Kashyap and others. The film is being shot in Grand Canyon, Death Valley, Avenue of Giants and others and other places.

    'Babru' has music by Poornachandra Tejaswi, while Sujay Ramaiah is the cameraman.

     

     

  • ಬಬ್ರೂನಲ್ಲಿ ನೀವು ನೋಡದ ಅಮೆರಿಕ ದರ್ಶನ

    babru will show unseen america

    ಈಗ ಥಿಯೇಟರಿನಲ್ಲಿರೋ ಬಬ್ರೂ ಚಿತ್ರದ ವಿಶಿಷ್ಟತೆಗಳಲ್ಲಿ ಇದೂ ಒಂದು. ಅದು ಕೇವಲ ಸುಮನ್ ನಗರ್‌ಕರ್ ಅವರ ಕಂಬ್ಯಾಕ್ ಸಿನಿಮಾ ಅಲ್ಲ, ಅಮೆರಿಕದವರೇ ಸೇರಿಕೊಂಡು ಸಿದ್ಧಪಡಿಸಿದ ಹಾಲಿವುಡ್ ಕನ್ನಡ ಸಿನಿಮಾ ಅಷ್ಟೇ ಅಲ್ಲ.. ಈ ಚಿತ್ರದಲ್ಲಿ ಕನ್ನಡಕ್ಕೆ ಹೊಸದಾದ ರೋಡ್ ಜರ್ನಿ ಕಥೆ ಇದೆ. ಜೊತೆಗೆ ನೀವು ಈ ಚಿತ್ರದಲ್ಲಿ ನೋಡುವ ಅಮೆರಿಕವನ್ನು ಭಾರತದ ಯಾವುದೇ ಭಾಷೆಯ ಚಿತ್ರದಲ್ಲೂ ನೋಡಿರೋಕೆ ಸಾಧ್ಯವಿಲ್ಲ. ಅಂತಹ ವಿಶಿಷ್ಟ ಸ್ಥಳಗಳನ್ನು ಹುಡುಕಿ ಶೂಟಿಂಗ್ ಮಾಡಿರುವ ಚಿತ್ರ ಬಬ್ರೂ.

    ಸುಜಯ್ ರಾಮಯ್ಯ ನಿರ್ದೇಶನದ ಚಿತ್ರದಲ್ಲಿ ಇದುವರೆಗೆ ಸಿನಿಮಾ ಮಂದಿ ಬಳಸಿಕೊಳ್ಳದೇ ಇರುವ ಅಮೆರಿಕದ ಬೇರೆ ಬೇರೆ ಜಾಗಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಹಾಲಿವುಡ್ ತಂತ್ರಜ್ಞರೇ ಈ ಚಿತ್ರಕ್ಕೆ ಕೆಲಸ ಮಾಡಿದ್ದು, ಸುಮನ್ ಎದುರು ಮಹಿ ಹಿರೇಮಠ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

  • ಬೆಳದಿಂಗಳ ಬಾಲೆಯ ಬಬ್ರೂಗೆ ಬಭ್ರುವಾಹನನೇ ಸ್ಫೂರ್ತಿ..!

    babru movie title inspired by babruvahana

    ಬೆಳದಿಂಗಳ ಬಾಲೆ ಸುಮನ್ ನಗರ್‍ಕರ್ ನಟಿಸಿ, ನಿರ್ಮಾಣವನ್ನೂ ಮಾಡಿರುವ ಚಿತ್ರ ಬಬ್ರೂ. ಚಿತ್ರದಲ್ಲಿ ಬಬ್ರೂ ಅನ್ನೋದು ಒಂದು ಕಾರಿನ ಹೆಸರು. ಇಡೀ ಚಿತ್ರ ನಡೆಯೋದು ಕಾರು ಮತ್ತು ಜರ್ನಿಯಲ್ಲಿ. ಇಷ್ಟಕ್ಕೂ ಕಾರಿಗೆ ಆ ಟೈಟಲ್ ಇಡೋಕೆ ಕಾರಣ ಏನು..? ಬಭ್ರುವಾಹನ ಸಿನಿಮಾ.

    ಅಣ್ಣಾವ್ರ ಹಲವಾರು ಕ್ಲಾಸಿಕ್ ಸಿನಿಮಾಗಳಲ್ಲಿ ಒಂದಾಗಿರುವ ಬಭ್ರುವಾಹನ ಚಿತ್ರವೇ ಬಬ್ರೂ ಅನ್ನೋ ಟೈಟಲ್ ಇಡೋಕೆ ಕಾರಣವಂತೆ. ಚಿತ್ರದ ಟ್ರೇಲರ್ ರಿಲೀಸ್ ವೇಳೆ ಸ್ವತಃ ಸುಮನ್ ನಗರ್‍ಕರ್ ಈ ವಿಷಯ ಹೇಳಿಕೊಂಡಿದ್ದಾರೆ.

    ರಾಕಿಂಗ್ ಸ್ಟಾರ್ ಯಶ್, ಬಬ್ರೂ ಚಿತ್ರದ ಟ್ರೇಲರ್ ರಿಲೀಸ್ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ರು. ಸುಜಯ್ ರಾಮಯ್ಯ ನಿರ್ದೇಶನವಿರುವ ಚಿತ್ರ ಸಂಪೂರ್ಣ ಅಮೆರಿಕ, ಕೆನಡಾದಲ್ಲಿಯೇ ಶೂಟಿಂಗ್ ಆಗಿದೆ.

  • ಸುಮನ್ ನಗರ್ಕರ್ ಕಂ ಬ್ಯಾಕ್ ಸಿನಿಮಾ ಬಬ್ರೂ

    suman nagarkar makes come back with babru

    ಸುಮನ್ ನಗರ್ಕರ್. ಕನ್ನಡದಲ್ಲಿ ನಟಿಸಿದ್ದು ಕೆಲವೇ ಸಿನಿಮಾ. ನಿಷ್ಕರ್ಷ, ಬೆಳದಿಂಗಳ ಬಾಲೆ, ನಮ್ಮೂರ ಮಂದಾರ ಹೂವೆ, ಮುಂಗಾರಿನ ಮಿಂಚು,  ಅಮ್ಮಾವ್ರ ಗಂಡ, ದೋಣಿ ಸಾಗಲಿ, ಪ್ರೀತ್ಸು ತಪ್ಪೇನಿಲ್ಲ.. ಮೊದಲಾದ ಚಿತ್ರಗಳಲ್ಲಿ 2ನೇ ನಾಯಕಿ. ಅದರಲ್ಲೂ ಬೆಳದಿಂಗಳ ಬಾಲೆಯಲ್ಲಿ ಮುಖವನ್ನೇ ತೋರಿಸದೆ ಆಟವಾಡಿಸುವ ಚೆಲುವೆ. ನಾಯಕಿಯಾಗಿ ನಟಿಸಿದ್ದ ಹೂಮಳೆ ಚಿತ್ರ ಪ್ರೇಕ್ಷಕರನ್ನು ತಲ್ಲಣಗೊಳಿಸಿತ್ತು. ಅಂದಹಾಗೆ ಸುಮನ್ ನಗರ್ಕರ್ ಅಭಿನಯಿಸಿದ್ದ ಮೊದಲ ಸಿನಿಮಾ ಕಲ್ಯಾಣ ಮಂಟಪ.

    ಸುನಿಲ್ ಕುಮಾರ್ ದೇಸಾಯಿ, ನಾಗತಿಹಳ್ಳಿ ಚಂದ್ರಶೇಖರ್, ಎಸ್.ವಿ.ರಾಜೇಂದ್ರ ಸಿಂಗ್ ಬಾಬು.. ಮೊದಲಾದ ದಿಗ್ಗಜರೊಂದಿಗೆ ಕೆಲಸ ಮಾಡಿದ್ದ ಸುಮನ್, ಈ ಬಾರಿ ಸುಜಯ್ ರಾಮಯ್ಯ ಎಂಬ ನಿರ್ದೇಶಕರ ಬಬ್ರೂ ಸಿನಿಮಾ ಮೂಲಕ ಮರಳಿ ಬಂದಿದ್ದಾರೆ.

    15 ವರ್ಷಗಳ ನಂತರ ನಾಗತಿಹಳ್ಳಿ ಚಂದ್ರಶೇಖರ್ ಅವರ ಇಷ್ಟಕಾಮ್ಯ ಚಿತ್ರದ ಮೂಲಕ ವಾಪಸ್ ಆದ ಸುಮನ್ ನಗರ್ಕರ್, ಈಗ ಮತ್ತೊಮ್ಮೆ ನಾಯಕಿಯಾಗಿಯೇ ರೀ ಎಂಟ್ರಿ ಕೊಟ್ಟಿದ್ದಾರೆ. ಬಬ್ರೂ ಚಿತ್ರದ ಮೂಲಕ. ಚಿತ್ರದ ನಾಯಕಿಯೂ ಹೌದು, ನಿರ್ಮಾಪಕಿಯೂ ಹೌದು.

    ಜರ್ನಿಯ ಕ್ರೇಜ್ ಹೊಂದಿರೋ ಸೋಮಾರಿ ಹುಡುಗನ ಜೊತೆ ಪ್ರಯಾಣ ಹೊರಡುವ ನಾಯಕಿ, ಜರ್ನಿಯಲ್ಲಿ ಎದುರಿಸುವ ಅನುಭವಗಳೇ ಚಿತ್ರದ ಕಥೆ. ಕನ್ನಡಕ್ಕೆ ಇದು ಹೊಸತು.

    ಬಬ್ರೂಗೆ ಪೂರ್ಣ ಚಂದ್ರ ತೇಜಸ್ವಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರ ಡಿಸೆಂಬರ್ 6ರಂದು ರಿಲೀಸ್ ಆಗುತ್ತಿದೆ.

  • ಹಾಲಿವುಡ್ ಕನ್ನಡ ಚಿತ್ರ ಬಬ್ರೂ

    hollywood kannada film is babru

    ಕನ್ನಡಿಗರ ಪಾಲಿನ ಎವರ್ ಗ್ರೀನ್ ಬೆಳದಿಂಗಳ ಬಾಲೆ ಸುಮನ್ ನಗರ್‍ಕರ್ ಅಭಿನಯದ ಚಿತ್ರ ಬಬ್ರೂ. ಇತ್ತೀಚೆಗಷ್ಟೇ ಈ ಸಿನಿಮಾದ ಹಾಡು ಮತ್ತು ಟ್ರೇಲರ್ ಬಿಡುಗಡೆಯಾಗಿ ಕುತೂಹಲ ಹುಟ್ಟಿಸಿದೆ. ಅದಕ್ಕೆ ಕಾರಣವಾಗಿರೋದು ವಿಭಿನ್ನ ಕಥೆಯ ಲಕ್ಷಣ ಮತ್ತು ಅದರಲ್ಲಿನ ದೃಶ್ಯಗಳ ತಾಜಾತನ ಬೆರೆತ ಅದ್ಧೂರಿತನ. ಅಷ್ಟಕ್ಕೂ ಈ ಸಿನಿಮಾ ರೂಪುಗೊಂಡಿರುವ ರೀತಿಯೇ ಅಷ್ಟೊಂದು ವಿಶೇಷವಾಗಿದೆ. ಏಕೆಂದರೆ, ಈ ಇಡೀ ಚಿತ್ರವೇ ಸಂಪೂರ್ಣವಾಗಿ ಅಮೆರಿಕದಲ್ಲಿ ಚಿತ್ರೀಕರಣಗೊಂಡಿದೆ. ಇದು ಅಮೆರಿಕದಲ್ಲಿಯೇ ಚಿತ್ರೀಕರಣಗೊಂಡಿರುವ ಕನ್ನಡದ ಏಕೈಕ ಚಿತ್ರವೆಂಬ ಕೀರ್ತಿಗೂ ಭಾಜನವಾಗಿದೆ.

    ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರೇ ರೂಪಿಸಿರುವು ಸಿನಿಮಾ ಬಬ್ರೂ. ಸುಜಯ್ ರಾಮಯ್ಯ ನಿರ್ದೇಶಕ. ಸುಮನ್ ನಗರ್ಕರ್ ಪ್ರಧಾನ ಪಾತ್ರವನ್ನೂ ನಿರ್ವಹಿಸಿದ್ದಾರೆ. ವಿಶೇಷವೆಂದರೆ ಇದರ ತಾಂತ್ರಿಕ ವರ್ಗದಲ್ಲಿಯೂ ಅಮೆರಿಕದವರೇ ಕಾರ್ಯ ನಿರ್ವಹಿಸಿದ್ದಾರೆ. ಒಂದಷ್ಟು ಮುಖ್ಯ ಪಾತ್ರಗಳನ್ನು ಅಮೆರಿಕದ ಕಲಾವಿದರು ನಿರ್ವಹಿಸಿದ್ದಾರೆ. ಇಷ್ಟೆಲ್ಲ ವಿಚಾರಗಳ ಆಧಾರದಲ್ಲಿ ನೋಡುವುದಾದರೆ ಇದನ್ನು ಹಾಲಿವುಡ್ ಕನ್ನಡ ಚಿತ್ರ ಎನ್ನಲಡ್ಡಿಯಿಲ್ಲ.