` bellbottom, - chitraloka.com | Kannada Movie News, Reviews | Image

bellbottom,

 • Rishab Shetty Does A Funny Version Of James Bond Intro !

  rishab shetty does a funny version of james bond

  For all the fans of James Bond character from the popular English movies featuring the fictional British Secret Service agent created in 1953 by writer Ian Fleming, the signature style of his introduction scenes is a class apart.

  The brisk walk of the character James bond while the target encircles before bond turns shooting and then the screen fills in red colour is one of most watched and repeated introduction scenes ever. Inspired by it, actor and director Rishab Shetty is seen repeating the similar act, but with a funny take on it.

  While introducing the protagonist detective Divakar portrayed by Rishab Shetty from the movie 'Bell Bottom’, the team has used the James bond introduction scene and as well as the signature tune. But unlike James bond, detective Divakar is shown in a lighter vein. 

  The teaser of the film directed by Jayatheertha starring Rishab Shetty, Hariprriya in the lead is releasing on December 7. Ajaneesh Loknath has composed music for the detective venture.

 • Yogaraj Bhatt To Act In 'Bell Bottom'

  yogaraj bhatt to act in bell bottom

  Jayatheertha's 'Bell Bottom', which stars Rishab Shetty and Haripriya has now another directing acting in the film and it is none other than Yogaraj Bhatt. Yogaraj Bhatt will be playing the role of a retired dacoit in the film.

  One of the highlights of 'Bell Bottom' is four well known directors are working for this film. While, Jayatheertha is directing it, Rishab and Shivamani are acting in the film in main roles. The film is a periodic thriller set in the 1980s.

  'Bell Bottom' is written and directed by Jayatheertha. T K Dayanand has helped him in the screenplay an dialogues of the film. Ajaneesh Lokanath is the music director, while Santhosh Kumar K C is the producer.

   

 • ಒಂದು ಬೆಲ್‍ಬಾಟಂನಲ್ಲಿ ಐವರು ನಿರ್ದೇಶಕರು..!

  5 directors in one bellbottom movie

  ಬೆಲ್‍ಬಾಟಂ. ಬಿಡುಗಡೆಗೆ ಮುನ್ನವೇ ಕುತೂಹಲ ಹುಟ್ಟಿಸಿರುವ ಸಿನಿಮಾ. ಏಕೆಂದರೆ ಚಿತ್ರದ ನಾಯಕ ರಿಷಬ್ ಶೆಟ್ಟಿ. ಅವರು ಕಿರಿಕ್ ಪಾರ್ಟಿಯಂತಹ ಸೂಪರ್ ಹಿಟ್ ಸಿನಿಮಾ ಕೊಟ್ಟ ಡೈರೆಕ್ಟರ್. ಚಿತ್ರದ ನಿರ್ದೇಶಕ ಜಯತೀರ್ಥ. ಒಲವೇ ಮಂದಾರ ಕ್ಲಾಸಿಕ್ ಲವ್‍ಸ್ಟೋರಿ ಕೊಟ್ಟಿದ್ದ ಡೈರೆಕ್ಟರ್. ಸಿನಿಮಾದ ಬಗ್ಗೆ ಕುತೂಹಲ ಹುಟ್ಟೋಕೆ ಈ ಎರಡು ಕಾರಣಗಳು ಸಾಕು.

  ಆದರೆ, ಇಂತಹ ಕುತೂಹಲಗಳ ಗುಚ್ಛಕ್ಕೆ ಇನ್ನೂ ಒಂದು ವಿಷಯ ಸೇರ್ಪಡೆಯಾಗಿದೆ. ಸಿನಿಮಾದಲ್ಲಿ ಇಬ್ಬರಲ್ಲ.. ಒಟ್ಟು ಐವರು ನಿರ್ದೇಶಕರಿದ್ದಾರೆ.

  ಚಿತ್ರಕ್ಕೆ ಕಥೆ ಬರೆದಿರುವುದು ಟಿ.ಕೆ. ದಯಾನಂದ್. ಅವರೂ ನಿರ್ದೇಶಕರೇ. ಇನ್ನು ಚಿತ್ರದ ಪ್ರಮುಖ ಪಾತ್ರ ಮೋಡಿ ನಂಜಪ್ಪನಾಗಿ ನಟಿಸುತ್ತಿರುವುದು ಶಿವಮಣಿ. ಇವರ ಬಗ್ಗೆ ಹೇಳುವ ಅವಶ್ಯಕತೆಯೇ ಇಲ್ಲ. ಕನ್ನಡ ಚಿತ್ರರಂಗದ ಟ್ರೆಂಡ್‍ಸೆಟ್ಟರ್ ನಿರ್ದೇಶಕರಲ್ಲಿ ಒಬ್ಬರು ಶಿವಮಣಿ.

  ಇನ್ನು ಚಿತ್ರದಲ್ಲಿ ನಿವೃತ್ತ ದರೋಡೆಕಾರನ ಪಾತ್ರದಲ್ಲಿ ನಟಿಸುತ್ತಿರುವುದು ಯೋಗರಾಜ್ ಭಟ್. ಸದ್ಯಕ್ಕೆ ಕನ್ನಡ ಚಿತ್ರರಂಗದ ಸೆನ್ಸೇಷನಲ್ ಡೈರೆಕ್ಟರ್.

  ಇವರೆಲ್ಲರ ಸಮಾಗಮ ಬೆಲ್‍ಬಾಟಮ್‍ನಲ್ಲಿದೆ.  80ರ ದಶಕದ ಈ ಕಥೆಯಲ್ಲಿ ರಿಷಬ್ ಶೆಟ್ಟಿ ಹೀರೋ ಆಗಿದ್ದರೆ, ಹರಿಪ್ರಿಯಾ ನಾಯಕಿ. ಐವರು ಡೈರೆಕ್ಟರುಗಳು. ಕುತೂಹಲವೋ.. ಕುತೂಹಲ.

 • ಬೆಲ್‍ಬಾಟಂ ಹರಿಕಥೆ ಸ್ಪೆಷಲ್

  bellbottom trailer has harikathe special

  ಬೆಲ್‍ಬಾಟಂ. ರಿಷಬ್ ಶೆಟ್ಟಿ ಮತ್ತು ಹರಿಪ್ರಿಯಾ ಅಭಿನಯದ ಸಿನಿಮಾ. ಸಿನಿಮಾದಲ್ಲಿರೋದು 80ರ ದಶಕದ ಸ್ಟೋರಿ. ರಿಷಬ್ ಪತ್ತೇದಾರನಾಗಿ, ಪೊಲೀಸ್ ಆಗಿ ನಟಿಸಿರುವ ಚಿತ್ರ. ಇನ್ನು ಹರಿಕಥೆ. ಇದು ಬಹುತೇಕ ಕರ್ನಾಟಕದ ಎಲ್ಲ ಭಾಗಗಳಲ್ಲಿಯೂ ಇರುವ ಜನಪದ ಸಂಪ್ರದಾಯ. ಹರಿಕಥೆ ಹೇಳುವ ಶೈಲಿಯೇ ವಿಭಿನ್ನ. ವಿಶೇಷ ಅಂದ್ರೆ ಇವರೆಡನ್ನೂ ಬೆಲ್‍ಬಾಟಂ ಸಿನಿಮಾ ಮಿಕ್ಸ್ ಮಾಡಿಕೊಂಡು ಬಂದಿದೆ.

  ಬೆಲ್‍ಬಾಟಂ ಟ್ರೇಲರ್ ಗಮನ ಸೆಳೆಯುತ್ತಿರುವುದೇ ಈ ಕಾರಣಕ್ಕೆ. ತುಸು ತಮಾಷೆಯಾಗಿಯೇ ಶುರುವಾಗುವ ಟ್ರೇಲರ್, ಹರಿಕಥೆಯಿಂದಾಗಿ ಗಮನ ಸೆಳೆಯುತ್ತದೆ. ಕನ್ನಡಿಗರ ಜೇಮ್ಸ್‍ಬಾಂಡ್ ಸಿಐಡಿ 999 ಡಾ.ರಾಜ್, ಹೀರೋಗೆ ಪತ್ತೇದಾರನಾಗಲು ಸ್ಫೂರ್ತಿಯಾಗುತ್ತಾರೆ ಅನ್ನೋದು ಟ್ರೇಲರ್‍ನಲ್ಲಿಯೇ ಗೊತ್ತಾಗಿಬಿಡುತ್ತೆ. ಇನ್ನು ರಿಷಬ್ ಶೆಟ್ಟಿ, ಗುಂಡಿಯಲ್ಲಿ ಬಿದ್ದು ಹಾಗೇಕೆ ಇರುತ್ತಾರೆ..? ಪೊಲೀಸ್ ಕಾನ್‍ಸ್ಟೇಬಲ್ ಮತ್ತು ಪತ್ತೇದಾರ.. ಎರಡೂ ಹೇಗೆ..? ಟ್ರೇಲರ್ ಹುಟ್ಟಿಸುವ ಕುತೂಹಲಗಳಿವು.

  ಮುದ್ದು ಮುದ್ದಾಗಿ ಕಾಣುವ ಹರಿಪ್ರಿಯಾ ಸೈಲೆಂಟಾಗಿ ನಗೆಯುಕ್ಕಿಸುತ್ತಾರೆ. ಪೊಲೀಸ್ ಠಾಣೆಯಿಂದ 5 ಲಕ್ಷ ನಾಪತ್ತೆ ಎನ್ನುವ ಬ್ರೇಕಿಂಗ್ ನ್ಯೂಸ್ ಜೊತೆ ಟ್ರೇಲರ್ ಮುಗಿಯುತ್ತೆ. 

  ಸಿನಿಮಾದ ಟ್ರೇಲರ್ ಚಿಕ್ಕದಾಗಿರಬೇಕು. ಕುತೂಹಲ ಹುಟ್ಟಿಸಬೇಕು. ಎರಡನ್ನೂ ಸರಿಯಾಗಿ ನಿರ್ವಹಿಸಿ ಗೆದ್ದಿದ್ದಾರೆ ನಿರ್ದೇಶಕ ಜಯತೀರ್ಥ. ಚಿತ್ರಕ್ಕೆ ಸಂತೋಷ್ ಕುಮಾರ್ ನಿರ್ಮಾಪಕ.

 • ಬೆಲ್‍ಬಾಟಮ್‍ನಲ್ಲಿ ಮುಳುಗಿ ಹೋಗಿದ್ದಾರೆ ಹರಿಪ್ರಿಯಾ

  haripriya in bellbottom

  ಹರಿಪ್ರಿಯಾ ಈಗ ಸಿಕ್ಕಾಪಟ್ಟೆ ಬ್ಯುಸಿ ನಟಿ. ಅವರ ಸಂಹಾರ ಚಿತ್ರ ಇದೇ ವಾರ ರಿಲೀಸ್ ಆಗುತ್ತಿದೆ. ಇನ್ನೊಂದು ಚಿತ್ರ ಲೈಫ್ ಜೊತೆ ಒಂದ್ ಸೆಲ್ಫಿ ಶೂಟಿಂಗ್‍ನ ಕೊನೆಯ ಹಂತದಲ್ಲಿದೆ. ಸೂಜಿದಾರ ಚಿತ್ರ ಪ್ರೊಡಕ್ಷನ್ ಹಂತದಲ್ಲಿದೆ. ತೆಲುಗಿನಲ್ಲಿ ನಟಿಸಿದ್ದ ಜೈಸಿಂಹ, ಭರ್ಜರಿ ಸದ್ದು ಮಾಡುತ್ತಿದೆ. ಮತ್ತೊಂದೆಡೆ ಬೆಲ್‍ಬಾಟಮ್ ಚಿತ್ರಕ್ಕೆ ರೆಡಿಯಾಗಿದ್ದಾರೆ ಹರಿಪ್ರಿಯಾ.

  ಬೆಲ್‍ಬಾಟಮ್ ಚಿತ್ರದ ಬಗ್ಗೆ ಹರಿಪ್ರಿಯಾ ಖುಷಿ ಪಡೋಕೆ ಕಾರಣಗಳಿವೆ. ಏಕೆಂದರೆ, ಇಡೀ ಚಿತ್ರದ ಸ್ಕ್ರಿಪ್ಟ್ ಅವರ ಕೈಲಿದೆ. ಇಷ್ಟು ವರ್ಷಗಳಲ್ಲಿ ಈ ರೀತಿ ಚಿತ್ರದ ಇಡೀ ಸ್ಕ್ರಿಪ್ಟ್ ನೋಡುತ್ತಿರುವುದು ಅವರಿಗೂ ಮೊದಲ ಅನುಭವ. ರಿಷಬ್ ಶೆಟ್ಟಿ ನಾಯಕರಾಗಿರುವ ಚಿತ್ರಕ್ಕೆ ಜಯತೀರ್ಥ ನಿರ್ದೇಶಕ.

  80ರ ದಶಕದ ಕಥೆ. ವಸ್ತ್ರ ವಿನ್ಯಾಸ, ಡೈಲಾಗ್ ಪ್ರತಿಯೊಂದೂ ವಿಭಿನ್ನವಾಗಿದೆ. ಚಿತ್ರದ ಮೇಲೆ ಭಾರಿ ವಿಶ್ವಾಸ ಇಟ್ಟುಕೊಂಡಿದ್ದಾರೆ.

 • ಬೆಲ್‍ಬಾಟಮ್‍ನಲ್ಲಿ ಮುಳುಗಿ ಹೋಗಿದ್ದಾರೆ ಹರಿಪ್ರಿಯಾ

  bellbottom team bus with working on script

  ಹರಿಪ್ರಿಯಾ ಈಗ ಸಿಕ್ಕಾಪಟ್ಟೆ ಬ್ಯುಸಿ ನಟಿ. ಅವರ ಸಂಹಾರ ಚಿತ್ರ ಇದೇ ವಾರ ರಿಲೀಸ್ ಆಗುತ್ತಿದೆ. ಇನ್ನೊಂದು ಚಿತ್ರ ಲೈಫ್ ಜೊತೆ ಒಂದ್ ಸೆಲ್ಫಿ ಶೂಟಿಂಗ್‍ನ ಕೊನೆಯ ಹಂತದಲ್ಲಿದೆ. ಸೂಜಿದಾರ ಚಿತ್ರ ಪ್ರೊಡಕ್ಷನ್ ಹಂತದಲ್ಲಿದೆ. ತೆಲುಗಿನಲ್ಲಿ ನಟಿಸಿದ್ದ ಜೈಸಿಂಹ, ಭರ್ಜರಿ ಸದ್ದು ಮಾಡುತ್ತಿದೆ. ಮತ್ತೊಂದೆಡೆ ಬೆಲ್‍ಬಾಟಮ್ ಚಿತ್ರಕ್ಕೆ ರೆಡಿಯಾಗಿದ್ದಾರೆ ಹರಿಪ್ರಿಯಾ.

  ಬೆಲ್‍ಬಾಟಮ್ ಚಿತ್ರದ ಬಗ್ಗೆ ಹರಿಪ್ರಿಯಾ ಖುಷಿ ಪಡೋಕೆ ಕಾರಣಗಳಿವೆ. ಏಕೆಂದರೆ, ಇಡೀ ಚಿತ್ರದ ಸ್ಕ್ರಿಪ್ಟ್ ಅವರ ಕೈಲಿದೆ. ಇಷ್ಟು ವರ್ಷಗಳಲ್ಲಿ ಈ ರೀತಿ ಚಿತ್ರದ ಇಡೀ ಸ್ಕ್ರಿಪ್ಟ್ ನೋಡುತ್ತಿರುವುದು ಅವರಿಗೂ ಮೊದಲ ಅನುಭವ. ರಿಷಬ್ ಶೆಟ್ಟಿ ನಾಯಕರಾಗಿರುವ ಚಿತ್ರಕ್ಕೆ ಜಯತೀರ್ಥ ನಿರ್ದೇಶಕ.

  80ರ ದಶಕದ ಕಥೆ. ವಸ್ತ್ರ ವಿನ್ಯಾಸ, ಡೈಲಾಗ್ ಪ್ರತಿಯೊಂದೂ ವಿಭಿನ್ನವಾಗಿದೆ. ಚಿತ್ರದ ಮೇಲೆ ಭಾರಿ ವಿಶ್ವಾಸ ಇಟ್ಟುಕೊಂಡಿದ್ದಾರೆ.

 • ರಿಸಬ್ ಶೆಟ್ಟಿಯ 13 ವರ್ಷದ ಕನಸು

  rishab shetty's dream come reality

  ಕಿರಿಕ್ ಪಾರ್ಟಿ, ರಿಕ್ಕಿ ಚಿತ್ರಗಳ ನಿರ್ದೇಶಕ ರಿಷಬ್ ಶೆಟ್ಟಿ. ಈಗ ಬೆಲ್‍ಬಾಟಂ ಚಿತ್ರದ ನಾಯಕ. ಅಂದಹಾಗೆ ಎರಡು ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟ ನಿರ್ದೇಶಕ ರಿಷಬ್ ಶೆಟ್ಟಿಯವರ ಕನಸು, ಡೈರೆಕ್ಟರ್ ಆಗುವುದಾಗಿರಲಿಲ್ಲ. ನಾಯಕನಾಗಬೇಕು ಎಂಬ ಕನಸಿಟ್ಟುಕೊಂಡು ಚಿತ್ರರಂಗಕ್ಕೆ ಬಂದವರು ರಿಷಬ್ ಶೆಟ್ಟಿ.

  13 ವರ್ಷಗಳ ಹಿಂದೆ ಚಿತ್ರರಂಗ ಪ್ರವೇಶಿಸಿದ ರಿಷಬ್ ಶೆಟ್ಟಿಗೆ ನಟನಾಗುವ ಅವಕಾಶ ಸಿಗಲಿಲ್ಲ. ಉಳಿದವರು ಕಂಡಂತೆ ಚಿತ್ರದಲ್ಲಿ ನಟಿಸಿದರಾದರೂ, ಪೂರ್ಣ ಪ್ರಮಾಣದ ಹೀರೋ ಆಗಲು ಸಾಧ್ಯವಾಗಿರಲಿಲ್ಲ. ಆದರೆ, ನಿರ್ದೇಶಕರಾಗಿ ಹೆಸರು ಮಾಡಿದ ರಿಷಬ್ ಶೆಟ್ಟಿ, ಬೆಲ್‍ಬಾಟಂ ಚಿತ್ರದ ಮೂಲಕ ಹೀರೋ ಆಗುತ್ತಿದ್ದಾರೆ.

  ಕೆಲವೊಮ್ಮೆ ನಾವು ಊರಿಗೆ ಹೊರಟಾಗ ಡೈರೆಕ್ಟ್ ಬಸ್ ಸಿಗೋದಿಲ್ಲ. ಸುತ್ತಿ ಬಳಸಿ ಹೋಗಬೇಕಾಗುತ್ತೆ. ಆದರೆ, ನಮ್ಮ ಗಮ್ಯ ತಲುಪುವ ತವಕ ಕಡಿಮೆಯಾಗೋದಿಲ್ಲ. 2005ರಲ್ಲಿ ಚಿತ್ರರಂಗಕ್ಕೆ ಬಂದ ನನ್ನ ಕನಸು, 13 ವರ್ಷಗಳ ನಂತರ ನನಸಾಗುತ್ತಿದೆ ಎಂದು ತಮ್ಮ ಹಾದಿಯನ್ನು ನೆನಪಿಸಿಕೊಂಡಿದ್ದಾರೆ ರಿಷಬ್ ಶೆಟ್ಟಿ.

  ಪ್ರಯತ್ನ ನಿರಂತರವಾಗಿದ್ದರೆ, ಅವಕಾಶಗಳು ಸಿಕ್ಕೇ ಸಿಗುತ್ತವೆ. ಪರಿಶ್ರಮ ಪ್ರಾಮಾಣಿಕವಾಗಿದ್ದರೆ, ಗೆಲುವು ಕೂಡಾ ಸಿಗುತ್ತೆ. ಅದೃಷ್ಟವೂ ಜೊತೆಯಲ್ಲಿದ್ದರೆ, ಅಂದುಕೊಂಡ ಗುರಿಯನ್ನು ತಲುಪಬಹುದು. ಇವೆಲ್ಲದಕ್ಕೂ ಉದಾಹರಣೆಯಂತಿದ್ದಾರೆ ರಿಷಬ್ ಶೆಟ್ಟಿ.

   

Yajamana Movie Gallery

Bazaar Movie Gallery