` nirupbhandari - chitraloka.com | Kannada Movie News, Reviews | Image

nirupbhandari

  • 2ನೇ ವಾರಕ್ಕೆ ವಿಕ್ರಾಂತ್ ರೋಣ : 150 ಕೋಟಿ ಹೊಸ್ತಿಲಲ್ಲಿ..

    2ನೇ ವಾರಕ್ಕೆ ವಿಕ್ರಾಂತ್ ರೋಣ : 150 ಕೋಟಿ ಹೊಸ್ತಿಲಲ್ಲಿ..

    ವಿಕ್ಟರಿ ರೋಣನ ಗೆಲುವಿನ ನಾಗಾಲೋಟ ಮುಂದುವರೆದಿದೆ. ಎಲ್ಲೆಲ್ಲೂ ಚಿತ್ರದ ಬಗ್ಗೆ ಪ್ರಶಂಸೆ ಮತ್ತು ಪಾಸಿಟಿವ್ ಟಾಕ್`ಗಳೇ. ಚಿತ್ರದ ಬಗ್ಗೆ ಶುರುವಾದ ಅಪಪ್ರಚಾರ, ಅಪಸ್ವರಗಳನ್ನೆಲ್ಲ ಮೂಲೆಗುಂಪಾಗಿಸಿ ಚಿತ್ರ ಭರ್ಜರಿ ಯಶಸ್ಸು ಕಂಡಿದೆ. ಈಗ 2ನೇ ವಾರಕ್ಕೆ ಕಾಲಿಟ್ಟಿದೆ.

    ಸಾಮಾನ್ಯವಾಗಿ 2ನೇ ವಾರಕ್ಕೆ ಚಿತ್ರಮಂದಿರ ಮತ್ತು ಶೋಗಳ ಸಂಖ್ಯೆ ಕಡಿಮೆಯಾಗುತ್ತೆ. ಆದರೆ ವಿಕ್ಟರಿ ರೋಣನ ವಿಕ್ಟರಿ ಶೋಗಳ ಸಂಖ್ಯೆ ಹೆಚ್ಚಾಗಿರೋದು ವಿಶೇಷ. ಅಲ್ಲದೆ ಇಂದ ವರಮಹಾಲಕ್ಷ್ಮಿ ಹಬ್ಬ. ಸೋಮವಾರ ಮೊಹರಂ. ನಡುವೆ 4 ದಿನ ರಜೆ. ಇದು ವಿಕ್ರಾಂತ್ ರೋಣ ಚಿತ್ರದ ಕಲೆಕ್ಷನ್‍ನ್ನು ಇನ್ನಷ್ಟು ಹೆಚ್ಚಿಸುವ ನಿರೀಕ್ಷೆ ಇದೆ.

    ಕನ್ನಡದಲ್ಲಿ ವಿಕ್ರಾಂತ್ ರೋಣನ ಕಲೆಕ್ಷನ್ 100 ಕೋಟಿ ಸಮೀಪದಲ್ಲಿದ್ದರೆ, ತೆಲುಗು ಮತ್ತು ಹಿಂದಿಯಲ್ಲಿ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಈ ವಾರವೇ 150 ಕೋಟಿ ದಾಟಬಹುದು ಎಂಬ ನಿರೀಕ್ಷೆ ಚಿತ್ರರಂಗದಲ್ಲಿದೆ.

  • Aadi Lakshmi Puraana review: Chitraloka Rating 4 /5*

    adi lakshmi purana review

    One of sandalwood's finest actresses in recent times - Radhika Pandit, has one more reason to smile with Aadi Lakshmi Puraana, delivering on its assurance for a fun-filled entertainment.

    Further, it is also special for the reason that the sandalwood has witnessed back to back release of movies directed by women directors. This time, Priya, who has been groomed under legendary filmmaker such as Maniratnam, has worked on a romantic-comedy with a completely new approach to it.

    On the outset, the tale majorly rests on the two protagonists, Aaditya played by Nirup Bhandari and Lakshmi by Radhika Pandit. While Aadi, an investigating officer dealing with drug mafia crosses path with Lakshmi, who is living a simple life with mischievous attitude of playing harmless pranks and lies on others. Soon, the fun starts to flourish with web of lies taking over the romantic roller coaster.

    Unlike the usual drama, Aadi Lakshmi Puraana breathes freshness and doesn't deviate to good versus bad with rom-com as a booster. But, in fact the cute love story continues to be in focus and everything else is made to take the second fiddle. Preetha Jayaram has done a 'wonderful' job with the camera, which is another strength of the film apart from the love drama and the talented cast pulling it off with ease.

    While Radhika Pandit takes the centre stage for putting her best as Lakshmi, Nirup continues to impress with his acts. His elder brother Anup Bhandari gives the rom-com its perfect rhythm and number to swing along with the lovely tale. Watch the fun and mischievous tale which guarantees 100 per cent of cute, crisp and clean entertainment. Another feather in the cap for Rockline Venkatesh as producer.

     

     

     

     

  • Rajaratha Releasing on March 23rd - Exclusive

    Rajaratha Image

    'Rangitaranga' fame Nirup Bhandari's new film 'Rajaratha' was supposed to be released on the 16th of this month. However, the film has been postponed by a month and the film will now release on the 23rd of March. 

    Speaking to Chitraloka Anup Bhandari told Since the Telugu version has not been censored we have decided to postpone the release to March 23. More over from 10th Bengaluru International film festival is also there this month and we won’t be getting Orion Mall screens and exams will follow.

    'Rajaratha' stars Nirup Bhandari and Avanthika Shetty in lead roles. One of the highlights of the film is, well known Kollywood actor Arya who is known for his performance in 'Naan Kaduval' has made his debut in Kannada through 'Rajaratha'. Ravishankar, Shruthi Hariharan and others play prominent roles in the film. Ajaneesh Lokanath has also composed five songs for the film.

    Well known art director Rajath Poddar who has worked for films like 'Jagga Jasoos', 'Barfie' and othes has done art direction for this film. Apart from that, choreographers Johnny Master and Bosco-Caesar have choreographed songs, while Shivakumar who has done the colour grading for films like 'Bahubali' has worked for this film.

     

  • ಆದಿಲಕ್ಷ್ಮಿ ಪುರಾಣ

    adi lakshmi purana highlights

    ಆದಿ ದಕ್ಷ, ಪ್ರಾಮಾಣಿಕ ಅಧಿಕಾರಿ. ಸುಳ್ಳು ಹೇಳುವವರನ್ನು ಕಂಡ್ರೆ ಆಗೋದಿಲ್ಲ... ಅದು ನಿರೂಪ್ ಭಂಡಾರಿ..

    ಅವನಿಗೆ ಮದುವೆಯಾಗಿಲ್ಲ. ಹುಡುಗಿ ಹುಡುಕುತ್ತಿದ್ದಾರೆ. ಇವನೇ ಯಾರಿಗೂ ಎಸ್ ಅಂತಿಲ್ಲ.. ಇವನಿಗೆ ಎಂತ ಹುಡುಗಿ ಬೇಕು ಅಂದ್ರೆ, ಅವಳನ್ನು ನೋಡಿದ ತಕ್ಷಣ ಮಿಂಚು ಹೊಡೀಬೇಕು. ಹಾರ್ಟಲ್ಲಿ ಸುನಾಮಿ ಎದ್ದೇಳಬೇಕು...

    ನಿರೂಪ್‍ಗೆ ಮಿಂಚು ಹೊಡೆಸಿ, ಸುನಾಮಿಯನ್ನೂ ಏಳುವಂತೆ ಮಾಡುವ ಚೆಲುವೆ ಸಿಂಡ್ರೆಲಾ ರಾಧಿಕಾ ಪಂಡಿತ್.

    ನಿಮ್ಮ ಹೆಸರು ನಂದಿನಿ ಅಲ್ಲ ತಾನೆ.. ಹಳೆಯ ಕಾಲದಿಂದಲೂ ಆ ಹೆಸರಿನ ಹುಡುಗೀರೇ ಹುಡುಗರಿಗೆ ಹುಚ್ಚು ಹಿಡಿಸಿರೋದು ಎನ್ನುವ ಡೈಲಾಗಿನಲ್ಲಿ ಬಂಧನ, ಮುಂಗಾರು ಮಳೆ ಚಿತ್ರಗಳನ್ನೆಲ್ಲ ನೆನಪಿಸಿಬಿಡ್ತಾರೆ.

    ಆದಿ ಲಕ್ಷ್ಮಿ ಲವ್ ಪುರಾಣದ ಕಥೆ ಇಷ್ಟರಲ್ಲೇ ಕುತೂಹಲ ಹುಟ್ಟಿಸಿಬಿಡುತ್ತೆ. ಮಣಿರತ್ನಂ ಅಸಿಸ್ಟೆಂಟ್ ಆಗಿದ್ದ ಪ್ರಿಯಾ ನಿರ್ದೇಶನದ ಮೊದಲ ಚಿತ್ರವಿದು. 

    ಈಗ ಕುತೂಹಲವನ್ನು ಹಿಮಾಲಯದ ಎತ್ತರಕ್ಕೆ ಹೊತ್ತೊಯ್ಯುವ ಈ ಡೈಲಾಗ್ ಕೇಳಿಬಿಡಿ.

    ನಾನೊಂದು ಹುಡುಗಿಯನ್ನು ಇಷ್ಟಪಟ್ಟಿದ್ದೇನೆ ಅಂತಾನೆ ನಾಯಕ. ಓಕೆ ಅನ್ನೋದನ್ನೇ ಕಾಯುತ್ತಿರುವ ನಾಯಕನ ಅಮ್ಮ ತಾರಾ, ಬಾ.. ಹೋಗಿ ಅವರ ಅಪ್ಪ ಅಮ್ಮನನ್ನ ಕೇಳಿಬಿಡೋಣ ಅಂತಾರೆ.

    ನಾವು ಹೆಣ್ಣು ಕೇಳೋದಾದ್ರೆ, ಅವಳ ಗಂಡನನ್ನೇ ಕೇಳಬೇಕು ಅಂತಾನೆ ನಾಯಕ.. ಮುಂದಿನದ್ದು.. ನಿಮ್ಮ ಊಹೆಗೆ ಬಿಟ್ಟಿದ್ದು. ಉತ್ತರ ಸಿಕ್ಕೋದು ಮುಂದಿನ ವಾರ.

  • ಆದಿಲಕ್ಷ್ಮೀ ಪುರಾಣದಲ್ಲಿ ಹೆಣ್ಮಕ್ಳದ್ದೇ ಸಾಮ್ರಾಜ್ಯ

    women power in adilakshmi purana

    ಆದಿಲಕ್ಷ್ಮೀ ಪುರಾಣ, ರಾಧಿಕಾ ಪಂಡಿತ್‍ರನ್ನು 3 ವರ್ಷಗಳ ನಂತರ ತೆರೆಗೆ ತರುತ್ತಿರುವ ಚಿತ್ರವಿದು. ರಾಜರಥ ನಂತರ ನಿರೂಪ್ ಭಂಡಾರಿ ನಟಿಸಿರುವ ಚಿತ್ರವೂ ಆದಿಲಕ್ಷ್ಮೀ ಪುರಾಣ. ಮದುವೆಯಾಗಿರುವ ಹುಡುಗಿಯನ್ ಲವ್ ಮಾಡೋ ಸ್ಟೋರಿ ಇರುವ ಆದಿಲಕ್ಷ್ಮೀಪುರಾಣದಲ್ಲಿ ಹೆಣ್ಮಕ್ಕಳದ್ದೇ ಸಾಮ್ರಾಜ್ಯ.

    ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್. ಆದರೆ, ಚಿತ್ರದ ನಿರ್ದೇಶಕಿ ಪ್ರಿಯಾ. ಆಕೆ ಮಣಿರತ್ನಂ ಅಸಿಸ್ಟೆಂಟ್ ಆಗಿದ್ದ ಹುಡುಗಿ. ಅವರಷ್ಟೇ ಅಲ್ಲ, ಚಿತ್ರದ ಛಾಯಾಗ್ರಹಕಿಯೂ ಪ್ರೀತಾ ಅನ್ನೋ ಇನ್ನೊಬ್ಬ ಹುಡುಗಿ. ಸ್ಸೋ.. ಇಲ್ಲಿ ಚಿತ್ರತಂಡದವರನ್ನೆಲ್ಲ ಆಡಿಸಿರೋದು, ಕುಣಿಸಿರೋದು ಹೆಂಗಸರೇ. ಚಿತ್ರ ರಿಲೀಸ್‍ಗೆ ರೆಡಿಯಾಗಿ ನಿಂತಿದೆ. ಜಸ್ಟ್ ವೇಯ್ಟ್..

  • ಗುಮ್ಮನ ಪ್ರಚಾರ ಈಗ ಕಿಚ್ಚನ ಕೈಲಿಲ್ಲ : ಪ್ರೇಕ್ಷಕಪ್ರಭುಗಳೇ ರಾಯಭಾರಿಗಳು..

    ಗುಮ್ಮನ ಪ್ರಚಾರ ಈಗ ಕಿಚ್ಚನ ಕೈಲಿಲ್ಲ : ಪ್ರೇಕ್ಷಕಪ್ರಭುಗಳೇ ರಾಯಭಾರಿಗಳು..

    ಇದು ವಿಜಯಯಾತ್ರೆ. ಸಿನಿಮಾವೊಂದರ ಗೆಲುವಿನ ಜಾತ್ರೆ. ಸಿನಿಮಾ ಚೆನ್ನಾಗಿದ್ದಾಗ.. ಅದನ್ನು ಫೇಲ್ ಎಂದು ಬಿಂಬಿಸಲು ಕೆಲವು ವ್ಯವಸ್ಥಿತ ಸಂಚುಗಳು ಶುರುವಾದಾಗ.. ಪ್ರೇಕ್ಷಕರೇ ಚಿತ್ರವನ್ನು ಗೆಲ್ಲಿಸೋದಿದ್ಯಲ್ಲ.. ನಿಜವಾದ ಗೆಲುವು ಅದು. ವಿಕ್ರಾಂತ್ ರೋಣ ಚಿತ್ರತಂಡ ಈಗ ಆ ಗೆಲುವಿರ ರುಚಿ ಸವಿಯುತ್ತಿದೆ. ಸುದೀಪ್ ಸಿನಿಮಾ ಜುಲೈ 28ಕ್ಕೆ ರಿಲೀಸ್ ಆದಾಗ ಅದ್ಭುತ ಓಪನಿಂಗ್ ಅಂತೂ ಸಿಕ್ಕಿತ್ತು. ವಿಚಿತ್ರವೆಂದರೆ ಮೊದಲ ಶೋ ಮುಗಿಯುವ ಮುನ್ನವೇ ಸಿನಿಮಾ ಚೆನ್ನಾಗಿಲ್ಲವಂತೆ.. ಡಬ್ಬಾ ಅಂತೆ ಎಂಬ ಟಾಕ್ ಶುರುವಾಯ್ತು. ಆದರೆ.. ಸಿನಿಮಾದ ಕಥೆ, ಟೆಕ್ನಾಲಜಿ, ಪ್ರೆಸೆಂಟೇಷನ್, ಹಾಡು, ಮ್ಯೂಸಿಕ್, ಗ್ರಾಫಿಕ್ಸ್.. ಹೀಗೆ ಸಕಲವೂ ಸಕ್ಸಸ್ ಆಗಿದ್ದ ಚಿತ್ರದ ಬಗ್ಗೆ ಹೀಗೇಕೆ ಎಂದು ಚಿತ್ರತಂಡ ಕೇಳಿಕೊಳ್ಳೋ ಮೊದಲೇ ಅಲರ್ಟ್ ಆದವರು ಪ್ರೇಕ್ಷಕರು. ನಂತರ ಶುರುವಾಗಿದ್ದು ಹೊಸ ಕಥೆ.

    ಈಗ ನೀವು ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟರೆ ಸಾಕು, ವಿಕ್ರಾಂತ್ ರೋಣ ಹ್ಯಾಷ್‍ಟ್ಯಾಗ್ ಖಂಡಿತಾ ಟ್ರೆಂಡಿಂಗ್‍ನಲ್ಲಿ ಕಾಣಸಿಗುತ್ತೆ. ಏಕೆಂದರೆ ಸೋಷಿಯಲ್ ಮೀಡಿಯಾದಲ್ಲಿರುವ ಬಹುತೇಕರು ಸಿನಿಮಾ ನೋಡಿದ ನಂತರ ಚಿತ್ರ ತಮಗೆ ಏಕೆ ಇಷ್ಟವಾಯಿತು ಎಂದು ಬರೆಯುತ್ತಿದ್ದಾರೆ. ಚಿತ್ರದ ಪ್ರಚಾರ ಈಗ ಸುದೀಪ್ ಕೈಲಿಲ್ಲ. ಅದನ್ನು ನೇರವಾಗಿ ಎತ್ತಿಕೊಂಡವರು ಸಿನಿಮಾ ನೋಡಿ ಬಂದ ಪ್ರೇಕ್ಷಕರು. ಸಿನಿಮಾ ಹೇಗಿದೆ? ಯಾವ ಪಾರ್ಟ್ ಇಷ್ಟವಾಯ್ತು. ಯಾಕೆ ಇಷ್ಟವಾಯ್ತು. ಯಾವ ಹಾಡು, ಯಾರ ಅಭಿನಯ, ಗ್ರಾಫಿಕ್ಸ್, ಬಿಜಿಎಂ.. ಹೀಗೆ ಪ್ರತಿಯೊಂದನ್ನೂ ಖುದ್ದು ಪ್ರೇಕ್ಷಕರೇ ವಿವರಿಸಿ ಹೇಳುತ್ತಿದ್ದಾರೆ. ಅಲ್ಲಿಗೆ ಗೆದ್ದಿದ್ದು ವಿಕ್ರಾಂತ್ ರೋಣ. ಅನೂಪ್ ಭಂಡಾರಿ..ಕಿಚ್ಚ ಸುದೀಪ..ನಿರೂಪ್ ಭಂಡಾರಿ..ಜಾಕ್ ಮಂಜು.

    ಆರಂಭದಲ್ಲಿ ಸ್ವಲ್ಪ ಡಲ್ ಎನಿಸಿದ ತೆಲುಗು, ಹಿಂದಿ, ತಮಿಳು ಭಾಷೆಗಳಲ್ಲೂ ಸಿನಿಮಾ ಸೂಪರ್ ಆಗಿ ಪಿಕಪ್ ಆಗಿದೆ. 100 ಕೋಟಿ ಕಲೆಕ್ಷನ್ ದಾಟಿ ಮುನ್ನುಗ್ಗುತ್ತಿರುವ ಚಿತ್ರ ವಿಕ್ರಾಂತ್ ರೋಣ. ಈ ವರ್ಷದಲ್ಲಿ 100 ಕೋಟಿ ಕ್ಲಬ್ ಸೇರಿದ 4ನೇ ಸಿನಿಮಾ.

    ಜೇಮ್ಸ್

    ಕೆಜಿಎಫ್ ಚಾಪ್ಟರ್ 2

    777 ಚಾರ್ಲಿ

    ನಂತರ..

    ವಿಕ್ರಾಂತ್ ರೋಣ ಕೂಡಾ 100 ಕೋಟಿ ಕ್ಲಬ್ ಸೇರಿದೆ

  • ಜೂ.ಸಿದ್ದರಾಮಯ್ಯ ಆಗ್ತಾರಾ ನಿರೂಪ್ ಭಂಡಾರಿ?

    ಜೂ.ಸಿದ್ದರಾಮಯ್ಯ ಆಗ್ತಾರಾ ನಿರೂಪ್ ಭಂಡಾರಿ?

    ಸಿ.ಎಂ ಸಿದ್ಧರಾಮಯ್ಯ ಬಯೋಪಿಕ್ಗೆ ಕಿಕ್ಸ್ಟಾರ್ಟ್ ಸಿಕ್ಕಿದ್ದು, ಸಿದ್ದರಾಮಯ್ಯ ಅವರ ಜೀವನಾಧಾರಿತ ಚಿತ್ರದ ಕಥೆಯನ್ನು ಕಳೆದ ಏಳು ತಿಂಗಳಿನಿಂದ ಸಿದ್ದಪಡಿಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಯೋಪಿಕ್ಗೆ ‘ಲೀಡರ್ ರಾಮಯ್ಯ’ ಎಂದು ಟೈಟಲ್ ಇಡಲಾಗಿದೆ. ಸಿದ್ಧರಾಮಯ್ಯ ರೋಲ್ನಲ್ಲಿ ವಿಜಯ್ ಸೇತುಪತಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಯಂಗ್ ಅಂದ್ರೆ ಯುವಕ ಸಿದ್ದು ಪಾತ್ರಧಾರಿಯಾಗಿ ಯಾರಿರ್ತಾರೆ ಎಂಬ ಪ್ರಶ್ನೆಗೆ ನಿರೂಪ್ ಭಂಡಾರಿ ಹೆಸರು ಕೇಳಿ ಬಂದಿದೆ.

    ಯೌವನದ ಪಾತ್ರದಲ್ಲಿ ನಿರೂಪ್, ಸಿದ್ದರಾಮಯ್ಯ ಲಾಯರ್ ಆಗಿದ್ದ ದಿನಗಳ ಪಾತ್ರದಲ್ಲಿ ವಿಜಯ್ ಸೇತುಪತಿ ನಟಿಸಲಿದ್ದಾರೆ ಎನ್ನುವುದು ಸದ್ಯಕ್ಕಿರುವ ಮಾಹಿತಿ. ಈ ಸಿನಿಮಾ ಎರಡು ಭಾಗದಲ್ಲಿ ಮೂಡಿ ಬರಲಿದ್ದು, ಮೊದಲ ಭಾಗದಲ್ಲಿ ನಿರೂಪ್ ಭಂಡಾರಿ ನಾಯಕನಾಗಿ ನಟಿಸಿದರೆ, ಎರಡನೇ ಭಾಗದಲ್ಲಿ ಸಿದ್ದರಾಮಯ್ಯನವರ ಪಾತ್ರದಲ್ಲಿ ತಮಿಳಿನ ಹೆಸರಾಂತ ನಟ ವಿಜಯ್ ಸೇತುಪತಿ ಕಾಣಿಸಿಕೊಳ್ಳಲಿದ್ದಾರಂತೆ.

    ಸತ್ಯ ರತ್ನಂ ನಿರ್ದೇಶನದಲ್ಲಿ ಈ ಸಿನಿಮಾದಲ್ಲಿ, ನಿರೂಪ್ ಭಂಡಾರಿ ಅವರನ್ನು ಯುವ ಸಿದ್ದು ಪಾತ್ರಕ್ಕೆ ಕಾಂಟ್ಯಾಕ್ಟ್ ಮಾಡಲಾಗಿದೆಯಂತೆ. ಇನ್ನೂ ಇಬ್ಬರು ನಟರ ಹೆಸರು ಚಾಲ್ತಿಯಲ್ಲಿದ್ದು, ಚಿತ್ರತಂಡ ಅವರ ಹೆಸರನ್ನು ಖಚಿತ ಪಡಿಸಿಲ್ಲ. ಕ್ಷೇತ್ರಪತಿ ನವೀನ್ ಶಂಕರ್ ಹೆಸರೂ ಕೇಳಿ ಬರ್ತಿದೆ. ಚಿತ್ರೀಕರಣವನ್ನು ಪ್ರಾರಂಭಿಸಲು ನಿರ್ದೇಶಕರು ಸಿದ್ಧತೆಯಲ್ಲಿದ್ದಾರೆ. ಚಿತ್ರತಂಡ ತಮಿಳು ನಟ ವಿಜಯ್ ಸೇತುಪತಿ ಕಾಲ್ ಶೀಟ್ಗಾಗಿ ಕಾಯುತ್ತಿದೆ ಎನ್ನಲಾಗಿದೆ.

    ಗಂಗಾವತಿ ಹಯಾತ್ ಪೀರ್ ಸಾಬ್ ಅವರ ನೇತೃತ್ವದ ಎಮ್ಎಸ್ ಕ್ರಿಯೇಷನ್ಸ್ ಬ್ಯಾನರ್ ಅಡಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಹೈ ಬಜೆಟ್ನಲ್ಲಿ 50 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.

  • ಡುಮ್ಮಿ.. ಲಡ್ಡೂ.. ಸೋಡಾಬುಡ್ಡಿ.. ಲಕ್ಷ್ಮೀ.. ರಾಧಿಕಾ ಪಂಡಿತ್

    radhika is a sweet faced liar in adi lakshmi purana

    ಡುಮ್ಮಿ ಲಕ್ಷ್ಮೀ ಎಂದರೂ ಅವಳು ತಿರುಗಿ ನೋಡ್ತಾಳೆ.. ಸೋಡಾಬುಡ್ಡಿ ಅಂದ್ರೂ ಹಾ ಅಂತಾಳೆ.. ಲಡ್ಡೂ ಲಕ್ಷ್ಮಿ ಎಂದರೂ ಓ ಅಂತಾಳೆ.. ಅವಳು ಆದಿಲಕ್ಷ್ಮೀ ಪುರಾಣದ ಲಕ್ಷ್ಮಿ.. ಅರ್ಥಾತ್ ರಾಧಿಕಾ ಪಂಡಿತ್.

    ಇಂತಹ ಮಾತುಗಳನ್ನೇ ಕೇಳಿ ಬೆಳೆದ ಲಕ್ಷ್ಮಿ, ನಾನು ನೋಡೋಕೆ ಚೆನ್ನಾಗಿಲ್ಲ.. ಕುರೂಪಿ ಎನ್ನುವ ಭಾವನೆಯಲ್ಲೇ ಬೆಳೆದಿರುತ್ತಾಳೆ ಲಕ್ಷ್ಮಿ. ಯಾರಾದರೂ ನೀನು ಚೆನ್ನಾಗಿದ್ದೀಯ ಅಂದ್ರೂ ನಂಬೋಕೆ ರೆಡಿ ಇರಲ್ಲ. ಧೋನಿ ಅಂದ್ರೆ ಈ ಲಕ್ಷ್ಮೀಗೆ ಪಂಚಪ್ರಾಣ. ಇಂತಹ ಹುಡುಗಿಯನ್ನು  ಆದಿ ಅರ್ಥಾತ್ ನಿರೂಪ್ ಭಂಡಾರಿ ಲವ್ ಮಾಡ್ತಾರೆ. ಅಷ್ಟು ಹೊತ್ತಿಗೆ ಈ ಲಡ್ಡೂಗೆ ಮದುವೆಯಾಗಿ 7 ವರ್ಷದ ಮಗುವೂ ಇರುತ್ತಾ..? ಟ್ರೇಲರ್ ನೋಡೋವ್ರಿಗೆ ಕಾಡುವ ಕುತೂಹಲವಿದು.

    ನಿರ್ದೇಶಕಿ ಪ್ರಿಯಾ, ಸುಳ್ಳುಗಳಿಂದಲೇ ತುಂಬಿ ತುಳುಕುವ ಒಂದು ಮಜಾ ಸ್ಟೋರಿ ಹೇಳಿದ್ದಾರೆ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಆದಿ ಲಕ್ಷ್ಮೀ ಪುರಾಣ ಚಿತ್ರ ಈಗ ಥಿಯೇಟರುಗಳಲ್ಲಿದೆ. ನೋಡಿ.. ಮಜಾ ಮಾಡಿ..

  • ನಾಗತಿಹಳ್ಳಿ ಚಿತ್ರದಲ್ಲಿ ನಿರೂಪ್ ಭಂಡಾರಿ, ಶಾನ್ವಿ

    ನಾಗತಿಹಳ್ಳಿ ಚಿತ್ರದಲ್ಲಿ ನಿರೂಪ್ ಭಂಡಾರಿ, ಶಾನ್ವಿ

    ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಚಿತ್ರದಲ್ಲಿ ನಿರೂಪ್ ಭಂಡಾರಿ ಹಾಗೂ ಶಾನ್ವಿ ಶ್ರೀವಾಸ್ತವ್ ನಟಿಸುತ್ತಿದ್ದಾರೆ. ಇಂಡಿಯಾ ವರ್ಸಸ್ ಇಂಗ್ಲೆಂಡ್ ನಂತರ ನಾಗತಿಹಳ್ಳಿ ನಿರ್ದೇಶಿಸುತ್ತಿರುವ ಚಿತ್ರವಿದು. ಚಿತ್ರಕ್ಕಿನ್ನೂ ನಾಮಕರಣ ಮಾಡಿಲ್ಲ. ರಂಗಿತರಂಗ, ವಿಕ್ರಾಂತ್ ರೋಣ ಚಿತ್ರಗಳಲ್ಲಿ ವ್ಹಾವ್ ಎನ್ನಿಸುವಂತೆ ನಟಿಸಿದ್ದ ನಿರೂಪ್ ಭಂಡಾರಿ, ಕಥೆ ಆಧರಿಸಿದ ಚಿತ್ರಗಳಿಗೆ ಮಹತ್ವ ಕೊಟ್ಟವರು.

    ನಾಗತಿಹಳ್ಳಿ ಚಿತ್ರಗಳಲ್ಲಿ ನಟಿಸುವುದೇ ಒಂದು ಖುಷಿ. ಈ ಚಿತ್ರದಲ್ಲಿಯೂ ಕಥೆ ಅದ್ಭುತವಾಗಿದೆ. ಅಮೆರಿಕಾ ಅಮೆರಿಕಾ ಮಾದರಿಯ ಭಾವನಾತ್ಮಕ ದೃಶ್ಯಗಳಿವೆ. ಮೊದಲು ಕರ್ನಾಟಕದಲ್ಲಿಯೇ ಚಿತ್ರೀಕರಣವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ ನಿರೂಪ್ ಭಂಡಾರಿ.

    ಇನ್ನು ಶಾನ್ವಿ ಶ್ರೀವಾಸ್ತವ್ ಅವರಿಗೂ ಅಷ್ಟೆ. ನಾಗತಿಹಳ್ಳಿ ಚಿತ್ರ ಎಂದ ಕೂಡಲೇ ಮರುಮಾತನಾಡದೆ ಒಪ್ಪಿಕೊಂಡಿದ್ದಾರೆ.

    ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ದೊಡ್ಡ ಮಟ್ಟದ ಹಿಟ್ ಬೇಕಾಗಿದೆ. ನಾಗತಿಹಳ್ಳಿಯವರ ಕೊನೆಯ ಹಿಟ್ ಚಿತ್ರ ಯಾವುದು ಎಂದರೆ 2005ರಲ್ಲಿ ಬಂದಿದ್ದ ಅಮೃತಧಾರೆಯನ್ನೇ ಹೇಳಬೇಕು. ಅದಾದ ಮೇಲೆ ಅವರು 6 ಚಿತ್ರಗಳನ್ನು ನಿರ್ದೇಶಿಸಿದ್ದಾರಾದರೂ ಹಿಟ್ ಸಿಕ್ಕಿಲ್ಲ. ಹೀಗಾಗಿ ನಾಗತಿಹಳ್ಳಿ ಚಂದ್ರಶೇಖರ್ ಕೂಡಾ ದೊಡ್ಡ ಹಿಟ್ ನಿರೀಕ್ಷೆಯಲ್ಲಿದ್ದಾರೆ.

  • ವಿಕ್ಟರಿ ರೋಣ : 100 ಕೋಟಿ ಕ್ಲಬ್`ಗೆ ವರ್ಷದ 4ನೇ ಕನ್ನಡ ಸಿನಿಮಾ

    ವಿಕ್ಟರಿ ರೋಣ : 100 ಕೋಟಿ ಕ್ಲಬ್`ಗೆ ವರ್ಷದ 4ನೇ ಕನ್ನಡ ಸಿನಿಮಾ

    ವಿಕ್ರಾಂತ್ ರೋಣ ಚಿತ್ರದ ಟೈಟಲ್ ಬದಲಿಸಬಹುದು. ಏಕೆಂದರೆ ವಿಕ್ಟರಿ ಬಾರಿಸಿರೋ ಚಿತ್ರ ವಿಕ್ಟರಿ ರೋಣ. ಅಂದಹಾಗೆ ಈ ವರ್ಷದಲ್ಲಿ 100 ಕೋಟಿ ಕ್ಲಬ್ ಸೇರಿರುವ 4ನೇ ಕನ್ನಡ ಸಿನಿಮಾ ಆಗಿ ಹೊರಹೊಮ್ಮಿದೆ ವಿಕ್ರಾಂತ್ ರೋಣ. ವಿಕ್ಟರಿ ರೋಣ.

    ರಣಬೀರ್ ಕಪೂರ್, ಶ್ರದ್ಧಾ ಕಪೂರ್, ಅರ್ಜುನ್ ಕಪೂರ್,  ಜಾನ್ ಅಬ್ರಹಾಂತ್ ನಟಿಸಿರೋ ಶಂಷೇರಾ, ಏಕ್ ವಿಲನ್ ನಂತಹ ಚಿತ್ರಗಳನ್ನೆಲ್ಲ ಸೈಡಿಗೆ ಹೊಡೆದು ನುಗ್ಗುತ್ತಿರೋದು ವಿಕ್ಟರಿ ರೋಣ. ಈ ವಾರದ ಅಂತ್ಯಕ್ಕೆ 150 ಕೋಟಿ ಕ್ಲಬ್ ಸೇರುವ ಸಾಧ್ಯತೆಗಳಿವೆ.

    ಅಂದಹಾಗೆ  ಈ ವರ್ಷ 100 ಕೋಟಿ ಕ್ಲಬ್ ಓಪನ್ ಮಾಡಿದ ಮೊದಲ ಕನ್ನಡ ಸಿನಿಮಾ ಜೇಮ್ಸ್.

    ನಂತರ ಕೆಜಿಎಫ್ ಚಾಪ್ಟರ್ 2, ಸಾವಿರ ಕೋಟಿ ಕ್ಲಬ್ ಓಪನ್ ಮಾಡಿತು.

    ಅದಾದ ನಂತರ 777 ಚಾರ್ಲಿ ಕೂಡಾ 150 ಕೋಟಿ ಬಿಸಿನೆಸ್ ಮಾಡಿತು.

    ಈಗ ಕಿಚ್ಚ ಸುದೀಪ್ ಅವರ ವಿಕ್ಟರಿ ರೋಣ ಈ ಗುರಿ ಮುಟ್ಟಿದೆ.

  • ವಿಕ್ರಾಂತ್ ರೋಣ ಹೀರೋಗಳು ಇವರೇ..

    ವಿಕ್ರಾಂತ್ ರೋಣ ಹೀರೋಗಳು ಇವರೇ..

    ವಿಕ್ರಾಂತ್ ರೋಣ ರಿಲೀಸ್ ಆಗಿದ್ದಾಯ್ತು. ಪ್ರೇಕ್ಷಕರು ಕಣ್ತುಂಬಿಕೊಂಡಿದ್ದೂ ಆಯ್ತು. ಕಿಚ್ಚ ಸುದೀಪ್ ಹೀರೋ. ನಿರೂಪ್ ಭಂಡಾರಿ ಮತ್ತು ಕಿಚ್ಚನ ಹೊಡೆದಾಟ ಸಖತ್ತಾಗಿದೆ. ಜಾಕ್ವೆಲಿನ್ ಗ್ಲಾಮರ್ರು.. ಟೆಂಪರೇಚರ್ ಹೆಚ್ಚಿಸುವಲ್ಲಿ ಗೆದ್ದಿದೆ. ಹೆಣ್ಣು ಮಕ್ಕಳಿದ್ದವರಿಗೆ ಸಿನಿಮಾ ಇಷ್ಟವಾಗುತ್ತೆ. ಸಿನಿಮಾ ನೋಡುವವರಿಗೆ ಫುಲ್ ಮೀಲ್ಸ್. ಪೈಸಾ ವಸೂಲ್. ಇದೆಲ್ಲದರ ಮಧ್ಯೆ ಚಿತ್ರದ ಹೀರೋಗಳು ಯಾರ್ ಯಾರು ಎಂದು ನೋಡಿದರೆ.. ಪಟ್ಟಿ ಸ್ವಲ್ಪ ದೊಡ್ಡದೇ ಇದೆ.

    ಚಿತ್ರದ ಗ್ರಾಫಿಕ್ಸ್ ಅದ್ಭುತವಾಗಿದೆ. ನಿರ್ಮಲ್ ಕುಮಾರ್ ಇದರ ಉಸ್ತುವಾರಿ ವಹಿಸಿಕೊಂಡಿದ್ದವರು.

    ಈ ಗ್ರಾಫಿಕ್ಸ್‍ಗೆ ಸರಿಯಾದ ಸೆಟ್ ಸಪೋರ್ಟ್ ಸಿಕ್ಕದೇ ಹೋದರೆ ತಾಳಮೇಳವೇ ತಪ್ಪಿಹೋಗುತ್ತಿತ್ತು. ಚಿತ್ರದ ಬಹುತೇಕ ಚಿತ್ರೀಕರಣವಾಗಿರೋದು ಸೆಟ್‍ನಲ್ಲಿ. ಆ ಸೆಟ್‍ನ ಸೃಷ್ಟಿಕರ್ತ ಶಿವಕುಮಾರ್.

    ಸೆಟ್‍ನಲ್ಲಿಯೇ ಬಹುತೇಕ ಸಿನಿಮಾ ಚಿತ್ರೀಕರಣವಾದರೂ ಒಂದೊಂದು ದೃಶ್ಯವೂ ಅದ್ಭುತ ಎನ್ನುವಂತೆ ಸೆರೆ ಹಿಡಿದು ದೃಶ್ಯಕಾವ್ಯ ಸೃಷ್ಟಿಸಿರೋದು ವಿಲಿಯಂ ಡೇವಿಡ್.

    ಆಶಿಕ್ ಕುಸುಗಳ್ಳಿ ಇಡೀ ಚಿತ್ರದ ಎಡಿಟಿಂಗ್ ಮತ್ತು ಕಲರಿಂಗ್ ನೋಡಿಕೊಂಡಿದ್ದಾರೆ. ಚಿಕ್ಕ ಚಿಕ್ಕ ಅಂಶವನ್ನೂ ಗುರುತಿಸಿದ್ದಾರೆ.

    ಇವೆಲ್ಲವೂ ಸರಿಯಾಗಿದ್ದಾಗ ಬಿಜಿಎಂ ಕೆಟ್ಟರೆ ಸಕಲವೂ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆಯೇ. ಆದರೆ.. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಇಡೀ ಚಿತ್ರದ ತೂಕವನ್ನು ಹೆಚ್ಚಿಸಿದೆ. ಚಿತ್ರದೊಂದಿಗೇ ಕ್ಯಾರಿ ಆಗುವ ಮ್ಯೂಸಿಕ್ ಪ್ರೇಕ್ಷಕರನ್ನು ನೆತ್ತರ ಪರ್ಬದ ಲೋಕಕ್ಕೆ ನೇರವಾಗಿ ಕೊಂಡೊಯ್ದು ಕೂರಿಸಿ ಬಿಡುತ್ತದೆ.

    ಇವೆಲ್ಲದಕ್ಕೂ ಒಂದು ಕೊಂಡಿಯಾಗಿ ಕುಳಿತು.. ಕನಸು ಕಂಡು.. ಆ ಕನಸು ನನಸಾಗುವ ತಂಡವನ್ನು ರೂಪಿಸಿರುವುದು ಅನೂಪ್ ಭಂಡಾರಿ.

    ಅನೂಪ್ ಭಂಡಾರಿಯ ಎಲ್ಲ ಕನಸುಗಳಿಗೆ ತನುಮನ ಹಾಗೂ ವಿಶೇಷವಾಗಿ ಧನ ನೀಡಿರುವ ಜಾಕ್ ಮಂಜು ಚಿತ್ರದ ರಿಯಲ್ ಹೀರೋ.

    ಈ ಎಲ್ಲ ಹೀರೋಗಳೂ ಒಟ್ಟಾಗಿ ಕೆಲಸ ಮಾಡಿದ ಪ್ರತಿಫಲ ವಿಕ್ರಾಂತ್ ರೋಣ. ಒಂದು ಸಿನಿಮಾವನ್ನು ಯಾರೋ ಒಬ್ಬರು ಗೆಲ್ಲಿಸೋಕೆ ಆಗಲ್ಲ.. ಅದೊಂದು ಟೀಂ ವರ್ಕ್ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ ವಿಕ್ರಾಂತ್ ರೋಣ ಟೀಂ.

  • ವಿಕ್ರಾಂತ್ ರೋಣನ ಹೊಸ ಬಿಸಿನೆಸ್ ಪ್ಲಾನ್

    ವಿಕ್ರಾಂತ್ ರೋಣನ ಹೊಸ ಬಿಸಿನೆಸ್ ಪ್ಲಾನ್

    ಒಂದು ಕಡೆ ವಿಕ್ರಾಂತ್ ರೋಣ ಸಿನಿಮಾ ದೇಶದಾದ್ಯಂತ ಸಂಚಲನ ಸೃಷ್ಟಿಸುತ್ತಿದೆ. ಇದೇ ಮೊದಲ ಬಾರಿಗೆ ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತಿರೋ ಕನ್ನಡದ ಸಿನಿಮಾ ವಿಕ್ರಾಂತ್ ರೋಣ. ರಕ್ಕಮ್ಮ ಹಾಡಿನ ಕ್ರೇಜ್ ಒಂದು ಕಡೆಯಾದರೆ, ಉಳಿದ ಹಾಡುಗಳ ಕಿಚ್ಚು ಮತ್ತೊಂದು ಕಡೆ. ಸುದೀಪ್ ಮತ್ತು ಅನೂಪ್ ಭಂಡಾರಿ ಕಾಂಬಿನೇಷನ್`ನ ಸಿನಿಮಾ ಅಮಿತಾಭ್ ಬಚ್ಚನ್ ಸೇರಿದಂತೆ ಸ್ಟಾರ್ ನಟರನ್ನೆಲ್ಲ ಸೆಳೆಯುವಲ್ಲಿ ಗೆದ್ದಿದೆ. ಇದರ ಮಧ್ಯೆಯೇ ಕಿಚ್ಚ ಹೊಸ ಬಿಸಿನೆಸ್ ಆರಂಭಿಸುವ ಉತ್ಸಾಹ ತೋರಿಸಿದ್ದಾರೆ. ಇದು ಸಿನಿಮಾಗೆ ಸಂಬಂಧಿಸಿದ್ದಲ್ಲ. ಸಿನಿಮಾ ಹೊರತಾದ ಅಡುಗೆಗೆ ಸಂಬಂಧಿಸಿದ್ದು.

    ಕಿಚ್ಚ ಸುದೀಪ್ ಅವರ ಕ್ವಾಲಿಟಿಗಳಲ್ಲಿ ಇನ್ನೊಂದು.. ಸುದೀಪ್ ಒಳ್ಳೆಯ ಅಡುಗೆ ಭಟ್ಟ. ಮನೆಗೆ ಹೋದವರಿಗೆ ಪ್ರೀತಿಯಿಂದ ಅಡುಗೆ ಮಾಡಿ ಬಡಿಸುವುದು ಎಂದರೆ ಸುದೀಪ್‍ಗೆ ವಿಶೇಷ ಸಂಭ್ರಮ. ಆ ಸಂಭ್ರಮವೇ ಈಗ ಬಿಸಿನೆಸ್ ಆಗುತ್ತಿದೆ.

    ಕಾಫಿ & ಬನ್ಸ್ ಇನ್ನೋವೇಷನ್ಸ್ ಅನ್ನೋ ಹೋಟೆಲ್, ರೆಸ್ಟೋರೆಂಟ್ ಉದ್ಯಮ ಆರಂಭಿಸುತ್ತಿದ್ದಾರೆ ಸುದೀಪ್. ಈ ಉದ್ದಿಮೆಗೆ ಎಂದಿನಂತೆ ಸಾಥ್ ಕೊಟ್ಟಿರುವುದು ಪ್ರಿಯಾ ಸುದೀಪ್.

    ಅಪ್ಪ ಹೋಟೆಲ್ ಉದ್ಯಮಿ. ಅವರಂತೆ ಸರೋವರದಂತಾ ದೊಡ್ಡ ಸಂಸ್ಥೆ ಕಟ್ಟುತ್ತೇನೆಯೋ ಇಲ್ಲವೋ ಗೊತ್ತಿಲ್ಲ. ಒಂದಂತೂ ನಿಜ. ಅದರಲ್ಲಿ ಸ್ವಲ್ಪವನ್ನಾದರೂ ಸಾಧಿಸಬಲ್ಲೆ. ಈ ಸಂಸ್ಥೆಯ ಅಡಿಯಲ್ಲಿ ಹೋಟೆಲ್, ಕೆಫೆ, ರೆಸ್ಟೋರೆಂಟ್ ಶುರು ಮಾಡಲಿದ್ದೇವೆ ಎಂದಿದ್ದಾರೆ ಸುದೀಪ್. ಸಂಸ್ಥೆಯ ಚೇರ್ಮನ್ ಪ್ರಿಯಾ ಸುದೀಪ್.

    ಇದು ಸುದೀಪ್ ಅವರದ್ದೇ ಐಡಿಯಾ. ಹೆಸರೂ ಅವರದ್ದೇ ಸೆಲೆಕ್ಷನ್. 26 ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲೇ ಇದ್ದಾರೆ. ಸಿನಿಮಾ, ಕ್ರಿಕೆಟ್, ಹೋಟೆಲ್ ಅವರ ಇಷ್ಟವಾದ ಪ್ಯಾಷನ್ ಎಂದಿದ್ದಾರೆ ಪ್ರಿಯಾ.

    ಹಾಗಂತ ಸುದೀಪ್ ಸಿನಿಮಾದಿಂದ ದೂರವಾಗುತ್ತಾರೆ ಎಂದಲ್ಲ. ಕೆಫೆ ಬಿಸಿನೆಸ್ ಪ್ರಿಯಾ ಅವರದ್ದಾದರೆ, ಸಿನಿಮಾ ಸುದೀಪ್ ಅವರದ್ದೇ.  ಪ್ರಿಯಾ ಸುದೀಪ್ ಅವರಿಗೆ ವ್ಯವಹಾರ ಚೆನ್ನಾಗಿಯೇ ಗೊತ್ತಿದೆ. ಹೀಗಾಗಿ ಸುದೀಪ್ ಅವರ ಬೆನ್ನ ಹಿಂದಿನ ಶಕ್ತಿಯಾಗಿರೋ ಪ್ರಿಯಾ ಸುದೀಪ್ ತಾವು ಬಿಸಿನೆಸ್ ನೋಡಿಕೊಂಡು ಸುದೀಪ್ ಅವರನ್ನು ಸಂಪೂರ್ಣ ಚಿತ್ರರಂಗಕ್ಕೆ ಬಿಡಲಿದ್ದಾರೆ.

    ಇದೆಲ್ಲದರ ಮಧ್ಯೆ ಸುದೀಪ್ ವಿಕ್ರಾಂತ್ ರೋಣ ಚಿತ್ರದ ಪ್ರಚಾರದಲ್ಲಿ ಬ್ಯುಸಿ. ಇದರ ಅಂಗವಾಗಿ ಜುಲೈ 25ಕ್ಕೆ ಕಿಚ್ಚವರ್ಸ್ ಲಾಂಚ್ ಆಗುತ್ತಿದೆ.