ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಭಿಮಾನಿಗಳ ಪಾಲಿನ ಪ್ರೀತಿಯ ದಾಸ. ಅಭಿಮಾನಿಗಳಿಗಾಗಿ ಸದಾ ಮಿಡಿಯುವ ದರ್ಶನ್, ಮತ್ತೊಮ್ಮೆ ಅದನ್ನು ಸಾಬೀತು ಮಾಡಿದ್ದಾರೆ. ಇತ್ತೀಚಿಗಷ್ಟೇ ಮಗ ವಿನೀಶ್ ಹುಟ್ಟುಹಬ್ಬದ ಹಿಂದಿನ ದರ್ಶನ್ ಒಂದು ಪೋಸ್ಟ್ ಮಾಡಿದ್ದರು. ನೆನಪಿರಬೇಕಲ್ಲ. ವಾಹನ ಚಲಾಯಿಸುವಾಗ ಹುಷಾರು ಎಂದು ಮನವಿ ಮಾಡಿದ್ದರು. ಅದಕ್ಕೆ ಕಾರಣವೂ ಇತ್ತು. ಕಳೆದ ವರ್ಷ ವಿನೀಶ್ ಹುಟ್ಟುಹಬ್ಬಕ್ಕೆಂದು ಬಂದಿದ್ದ ರಾಕೇಶ್ ಎಂಬ ಅಭಿಮಾನಿ, ವಾಪಸ್ ಹೋಗುವಾಗ ಅಪಘಾತದಲ್ಲಿ ಮೃತಪಟ್ಟಿದ್ದರು.
ಈ ಬಾರಿಯ ಹುಟ್ಟುಹಬ್ಬಕ್ಕೆ ರಾಕೇಶ್ ಕುಟುಂಬದವರನ್ನು ಮನೆಗೆ ಕರೆಸಿಕೊಂಡಿದ್ದ ದರ್ಶನ್, ಅವರ ಮನೆ ಮಗನಾಗಿದ್ದಾರೆ. ರಾಕೇಶ್ ಅಪ್ಪ ನರಸಿಂಹಯ್ಯ, ತಾಯಿ ಗಂಗಮ್ಮರನ್ನು ಕರೆಸಿಕೊಂಡ ದರ್ಶನ್,
ರಾಕೇಶ್ ಅವರ ಮೂವರು ಸೋದರಿಯ ಮದುವೆಯ ದೊಡ್ಡ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ರಾಕೇಶ್ ಅವರಿಗೆ ಕೀರ್ತನಾ, ನಾಗವೇಣಿ ಎಂಬ ಸೋದರಿಯರಿದ್ದು, ಅವರ ಮದುವೆ ಖರ್ಚಿಗೆ ಏನೇ ಖರ್ಚಿದ್ದರೂ ನನ್ನನ್ನು ಬಂದು ಕೇಳಿ, ನಾನು ಸಹಾಯ ಮಾಡ್ತೀನಿ ಅಂತ ದರ್ಶನ್ ಭರವಸೆ ನೀಡಿದ್ದಾರೆ. ರಾಕೇಶ್ ಮೃತಪಟ್ಟಾಗ ಅವರ ಕುಟುಂಬಕ್ಕೆ 2 ಲಕ್ಷ ರೂ. ಸಹಾಯ ಮಾಡಿದ್ದರಂತೆ.