` tej raj, - chitraloka.com | Kannada Movie News, Reviews | Image

tej raj,

  • ಚರಣ್‍ರಾಜ್ ಪುತ್ರ ಚಿತ್ರರಂಗಕ್ಕೆ..!

    charan raj to launch his son

    ಮುಗಿಲ ಮಲ್ಲಿಗೆಯೋ.. ಎನ್ನುತ್ತಾ ಚಿತ್ರರಂಗಕ್ಕೆ ಬಂದ ಚರಣ್‍ರಾಜ್, ಒಂದು ಕಾಲಕ್ಕೆ ಕನ್ನಡ ಚಿತ್ರರಂಗಕ್ಕೆ ಮುಗಿಲ ಮಲ್ಲಿಗೆಯೇ ಆಗಿದ್ದ ಕಲಾವಿದ. ತಮಿಳು, ಕನ್ನಡ ಚಿತ್ರರಂಗದಲ್ಲಿ ಒಂದು ಕಾಲಕ್ಕೆ ದೊಡ್ಡ ಸ್ಟಾರ್ ನಟ. ನಾಯಕರಾಗಿ, ಖಳನಾಯಕರಾಗಿ, ಪೋಷಕ ನಟರಾಗಿ ಮಿಂಚಿರುವ ಚರಣ್‍ರಾಜ್, ರಥಾವರ ಚಿತ್ರದ ನಂತರ ಬೇರೆ ಸಿನಿಮಾದಲ್ಲಿ ನಟಿಸಿರಲಿಲ್ಲ.

    ಈಗ ಮಗನನ್ನು ಕರೆದುಕೊಂಡು ಚಿತ್ರರಂಗಕ್ಕೆ ಬರುತ್ತಿದ್ದಾರೆ ಚರಣ್‍ರಾಜ್. ಈ ಬಾರಿ ನಟರಾಗಿ ಅಲ್ಲ, ನಿರ್ದೇಶಕರಾಗಿ. ಅವರ ನಿರ್ದೇಶನದ ಮೊದಲ ಚಿತ್ರದಲ್ಲಿ ಅವರ ಮಗ ತೇಜ್‍ಗೂ ಒಂದು ಪಾತ್ರವಿದೆ. ಪುಟ್ಟದೊಂದು ಪಾತ್ರ ಹಾಗೂ ಹಾಡಿನಲ್ಲಿ ತೇಜ್ ಕಾಣಿಸಿಕೊಳ್ಳಲಿದ್ದಾರೆ.

    ಕ್ರೈಂ, ಥ್ರಿಲ್ಲರ್ ಕಥೆಯೊಂದನ್ನು ಸಿದ್ಧ ಮಾಡಿಕೊಂಡು ಬರುತ್ತಿರುವ ಚರಣ್‍ರಾಜ್, ಏಪ್ರಿಲ್ 27ರಂದು ತಮ್ಮ ಚಿತ್ರ ಆರಂಭಿಸಲಿದ್ದಾರೆ.ಏಕೆಂದರೆ, ಅಂದು ಅವರ ಹುಟ್ಟುಹಬ್ಬ.