` orange, - chitraloka.com | Kannada Movie News, Reviews | Image

orange,

  • `ಆರೆಂಜ್'ಧಾರಿಯಾಗಲಿದ್ದಾರೆ ಗಣೇಶ್ 

    ganesh's next is orange

    ಚಮಕ್ ನಂತರ ಗಣೇಶ್ ಮುಂದಿನ ಚಿತ್ರ ಯಾವುದು ಎಂಬ ಸಸ್ಪೆನ್ಸ್‍ಗೆ ಈಗ ಉತ್ತರ ಸಿಕ್ಕಿದೆ. ಪ್ರಶಾಂತ್ ರಾಜ್ ನಿರ್ದೇಶನದ ಆರೆಂಜ್ ಚಿತ್ರ ಸೆಟ್ ಏರಲು ಸಿದ್ಧವಾಗಿದೆ. ಫೆ.11ರಂದು ಗಣೇಶ್ ಪಾಲಿಗೆ ವಿಶೇಷ ದಿನ. ಆ ದಿನ ಗಣೇಶ್ ಮದುವೆಯ 10ನೇ ವಾರ್ಷಿಕೋತ್ಸವ.  ಆ ದಿನವೇ ಚಿತ್ರದ ಮುಹೂರ್ತ ನಡೆಸಲು ನಿರ್ದೇಶಕ ಪ್ರಶಾಂತ್ ರಾಜ್ ಸಿದ್ಧತೆ ನಡೆಸಿದ್ದಾರೆ.

    `ಝೂಮ್' ಚಿತ್ರದಲ್ಲಿ ಗಣೇಶ್ ಹೇರ್‍ಸ್ಟೈಲ್ ಬದಲಿಸಿದ್ದ ಪ್ರಶಾಂತ್ ರಾಜ್, ಈ ಚಿತ್ರದಲ್ಲಿ ಗಣೇಶ್‍ರನ್ನು ಇನ್ನಷ್ಟು ಸ್ಟೈಲಿಷ್ ಹಾಗೂ ರೊಮ್ಯಾಂಟಿಕ್ ಆಗಿ ತೋರಿಸಲಿದ್ದಾರೆ. ನಾಯಕಿ ಹಾಗೂ ಸಂಗೀತ ನಿರ್ದೇಶಕರ ಆಯ್ಕೆ ಅಂತಿಮವಾಗಿಲ್ಲ. ಉಳಿದಂತೆ ಕಥೆ, ಚಿತ್ರಕಥೆ, ಸಂಭಾಷನೆ, ಕ್ಯಾಮೆರಾ ಎಲ್ಲವನ್ನೂ ಫೈನಲ್ ಮಾಡಿದ್ದಾರೆ ಪ್ರಶಾಂತ್ ರಾಜ್.

     

  • 'Orange' Launched On Ganesh's Wedding Anniversary

    orange launched

    Ganesh starrer 'Orange' was launched on Sunday in Bangalore. One of the highlights of the launch is, the film was launched on the 10th wedding anniversary of Ganesh and Shilpa.

    The shooting for the film will start soon and before that, a photo shoot will be held soon. Ganesh will be seen in a different getup in this film. The heroine of the film is yet to be finalised soon.

    'Orange' is being written and directed by Prashanth Raj. 'Bahaddur' Chethan and Nataraj are writing the songs for the film. The heroine and the music director are yet to be finalized.

     

     

  • 'Orange' Team Back From Ramoji Film City

    orange team back from ramoji film city

    The team of Ganesh starrer 'Orange' is back from Ramoji Film City after shooting a song and a few scenes

    The shooting for 'Orange' was held at the Ramoji Film City in Hyderabad in the last few days. A song as well as some scenes were shot there. Ganesh, Sadhu Kokila, Avinash, Rangayana Raghu and others participated in the shooting of the film.

    'Orange' is being written and directed by Prashanth Raj. 'Bahaddur' Chethan and Nataraj are writing the songs for the film. S S Thaman is the music director, while Santhosh Rai Pathaje is the cameraman.  Priya Anand who had acted in Puneeth Rajakumar's 'Rajakumara' is the heroine.

     

  • 'Orange' To launch On Ganesh's Wedding Anniversary

    ganesh in orange

    Ganesh starrer 'Chamak' which was released in the last week of December last year has completed a successful 25 day run. Meanwhile, Ganesh's new film is all set to be launched on the 11th of February.

    One of the highlights of the launch is, the film will be launched on the 10th wedding anniversary of Ganesh and Shilpa. The team has released the working poster design and a photo shoot will be held soon. Ganesh will be seen in a different getup in this film.

    'Orange' is being written and directed by Prashanth Raj. 'Bahaddur' Chethan and Nataraj are writing the songs for the film. The heroine and the music director are yet to be finalised.

  • First Official Poster Of 'Orange' Released

    first official poster of orange released

    The team of Ganesh starrer 'Orange' had announced that the teaser of the film will be released today (May 15th). However, due to some technical reasons the teaser has not be released. Instead, director Prashanth Raj has released the first official poster of the film.

    The shooting for 'Orange' is almost completed and except for some songs and  the team intends to complete the shooting of the film soon and release it.

    'Orange' is being written and directed by Prashanth Raj. 'Bahaddur' Chethan and Nataraj are writing the songs for the film. S S Thaman is the music director, while Santhosh Rai Pathaje is the cameraman.  Priya Anand  is the heroine, while Sadhu Kokila, Avinash, Rangayana Raghu and others play prominent roles in the film.

  • Orange Movie Review - Chitraloka Rating 3.5/5

    orange movie review

    With a name like Orange what do you expect in a film? Lots of fun of course. And that is what director Prashant Raj, Golden Star Ganesh and the rest of the team provides. Orange is a juicy entertainer that was made to provide laughs and it succeeds completely. 

    Santhosh is wrongly convicted for a theft and spends time in jail. On his release he finds himself imprisoned in another kind of jail. Due to mistaken identity he has to play the role of a liver to Radha whose father is the village head. Radha is actually in love with another person. The villain also wants to marry Radha. Out of all this conflicting situation arises the comedy film Orange. 

    Ganesh and Priya Anand in the lead roles play their roles to perfection. There is also a very good supporting cast that includes Avinash, Sadhu Kokila and Devgill. Orange has a huge cast that is properly utilised by the director. The story takes several twists and turns for entertainment. 

    The director blends the romance story with comedy and family drama and creates a unique film that is worth every penny you pay for. Very good locales, beautiful songs add to the film's value. The cinematography is eye pleasing and editing is perfect. Technically it is a sound film that is made for fans of commercial films. 

    Orange is one of the better films of the year and Ganesh and Prashant Raj score full marks for it. Go to the theatres to get entertained.

  • Priya Anand Is The Heroine Of 'Orange'

    priya anand ropes for orange

    Actress Priya Anand has been roped in as the heroine for Ganesh starrer 'Orange'. The shooting for the film has already been started and Priya will be joining the sets soon.

    Ganesh starrer 'Orange' was launched on the 10th wedding anniversary of Ganesh and Shilpa. But the heroine of the film was not yet finalized. Priya Anand who had acted in Puneeth Rajakumar's 'Rajakumara' has finally been roped in as the heroine.

    'Orange' is being written and directed by Prashanth Raj. 'Bahaddur' Chethan and Nataraj are writing the songs for the film. S S Thaman is the music director, while Santhosh Rai Pathaje is the cameraman.

  • Team of 'Orange' Heads To Europe For A song shooting

    orange team goes to europe

    The teaser of Ganesh starrer 'Orange' being directed by Prashanth Raj was released on Ganesh's birthday. The shooting for the film is almost complete except for songs and the team has headed to Europe for the songs shooting.

    The team of 'Orange' comprising Ganesh, Priya Anand, director Prashanth Raj recently left for Europe to shoot songs in some exotic locations. The team will be back by the 20th of this month.

    'Orange' is being written and directed by Prashanth Raj. 'Bahaddur' Chethan and Nataraj have written the songs for the film. S S Thaman is the music director, while Santhosh Rai Pathaje is the cameraman.  Priya Anand  is the heroine, while Sadhu Kokila, Avinash, Rangayana Raghu and others play prominent roles in the film.

     

  • Teaser Of 'Orange' On Ganesh's Birthday

    teser of orange in ganesh''s birthday

    The team of Ganesh starrer 'Orange' had announced that the teaser of the film will be released on May 15th. However, due to some technical reasons the teaser could not be released. Instead, director Prashanth Raj released the first official poster of the film.

    Now the teaser of the film is ready and is all set to be released for Ganesh's birthday on Monday (July 02nd). The team is planning to release the teaser midnight during the birthday celebrations of Ganesh.

    'Orange' is being written and directed by Prashanth Raj. 'Bahaddur' Chethan and Nataraj are writing the songs for the film. S S Thaman is the music director, while Santhosh Rai Pathaje is the cameraman.  Priya Anand  is the heroine, while Sadhu Kokila, Avinash, Rangayana Raghu and others play prominent roles in the film.

     

  • ಆರೆಂಜ್ ಆರಂಭ

    orange movie starts

    ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪ್ರಶಾಂತ್ ರಾಜ್ ಮತ್ತೊಮ್ಮೆ ಒಂದಾಗಿದ್ದಾರೆ. ಚಮಕ್ ಯಶಸ್ಸಿನ ಝೂಮ್‍ನಲ್ಲಿರುವ ಗಣೇಶ್‍ಗೆ, ಪ್ರಶಾಂತ್ ರಾಜ್ ಜೊತೆ ಇದು 2ನೇ ಚಿತ್ರ. ಸಿನಿಮಾಗೆ ಗಣೇಶ್ ಅವರ ವಿವಾಹ ವಾರ್ಷಿಕೋತ್ಸವದ 10ನೇ ವರ್ಷಾಚರಣೆಯಂದೇ ಮುಹೂರ್ತ ಮಾಡಿರುವುದು ವಿಶೇಷ.

    ರಾಜರಾಜೇಶ್ವರಿ ನಗರದ ದೇವಸ್ಥಾನದಲ್ಲಿ ನಡೆದ ಮುಹೂರ್ತದಲ್ಲಿ ಚಿತ್ರದ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ ಚಿತ್ರತಂಡ. ಚಿತ್ರಕ್ಕೆ ತಂತ್ರಜ್ಞರ ಆಯ್ಕೆಯಷ್ಟೇ ಅಗಿದ್ದು, ಉಳಿದ ಕಲಾವಿದರ ಆಯ್ಕೆ ಅಂತಿಮ ಹಂತದಲ್ಲಿದೆ. 

    ಅಂದಹಾಗೆ ಗಣೇಶ್-ಶಿಲ್ಪಾ ವಿವಾಹ ವಾರ್ಷಿಕೋತ್ಸವಕ್ಕೆ ಗಣೇಶ್ ಅವರ ಖುಷಿಗೆ ಇನ್ನೂ ಒಂದು ಕಾರಣವಿತ್ತು. ಗಣೇಶ್ ಅವರ ಮಗಳು ತಮ್ಮ ಕೈಯ್ಯಾರೆ ರೂಪಿಸಿದ ಗ್ರೀಟಿಂಗ್‍ವೊಂದನ್ನು ತಂದೆ,ತಾಯಿಗೆ ಉಡುಗೊರೆಯಾಗಿ ನೀಡಿದ್ದು ಎಲ್ಲರ ಗಮನ ಸೆಳೆಯಿತು.

     

  • ಆರೆಂಜ್ ಕೂಡಾ ರಾಜಕುಮಾರನಂತೆ ಹಿಟ್ ಆಗಲಿದೆ  - ರಾಜಕುಮಾರಿ ಪ್ರಿಯಾ ಹೇಳ್ತಾರೆ ನೋಡಿ

    orange will be hit like rajakaumara

    ಆರೆಂಜ್. ರಾಜಕುಮಾರಿ ಪ್ರಿಯಾ ಆನಂದ್ ನಟಿಸಿರುವ 2ನೇ ಕನ್ನಡ ಸಿನಿಮಾ. ಈ ಚಿತ್ರದಲ್ಲಿ ಪ್ರಿಯಾ ಅಪ್ಪಟ ಮನೆ ಮಗಳು ಹಾಗೂ ಗ್ಲಾಮರ್ ಗೊಂಬೆ. ಎರಡೂ ರೀತಿಯಲ್ಲಿ ಕಾಣಿಸಿಕೊಳ್ತಾರೆ.

    `ಕನ್ನಡದಲ್ಲಿ ಕಥೆ ಚೆನ್ನಾಗಿರುತ್ತೆ. ಹೀಗಾಗಿಯೇ ನಾನು ಕನ್ನಡ ಚಿತ್ರಗಳನ್ನು ಒಪ್ಪಿಕೊಳ್ತೇನೆ. ಆರೆಂಜ್‍ನಲ್ಲೂ ಅಷ್ಟೆ, ಸುಂದರ ಮತ್ತು ಅರ್ಥಪೂರ್ಣ ಕತೆ ಇದೆ. ಆರೆಂಜ್ ಕೂಡಾ ರಾಜಕುಮಾರನಂತೆಯೇ ಹಿಟ್ ಆಗಲಿದೆ' ಇದು ಪ್ರಿಯಾ ಆನಂದ್ ನಿರೀಕ್ಷೆ.

    ಚಿತ್ರದ ಟೈಟಲ್ ಆರೆಂಜ್‍ಗೂ, ನಾಯಕಿಗೂ ಸಿಕ್ಕಾಪಟ್ಟೆ ಸಂಬಂಧವಿದೆ. ಅದೇನು ಅನ್ನೋದನ್ನ ಚಿತ್ರದಲ್ಲಿಯೇ ನೋಡಿ ಅಂತಾರೆ ಪ್ರಿಯಾ ಆನಂದ್. ಗಣೇಶ್ ಮತ್ತು ಪ್ರಶಾಂತ್ ರಾಜ್ ಜೋಡಿ ಮತ್ತೊಮ್ಮೆ ಝೂಮ್ ಮ್ಯಾಜಿಕ್ ಮಾಡುವ ಉತ್ಸಾಹದಲ್ಲಿದೆ.

  • ಆರೆಂಜ್ ಟ್ರೇಲರ್‍ಗೆ ಇಂದು ಮುಹೂರ್ತ

    ganesh's orange trailer today

    ಆರೆಂಜ್. ಗೋಲ್ಡನ್ ಸ್ಟಾರ್ ಗಣೇಶ್, ರಾಜಕುಮಾರಿ ಪ್ರಿಯಾ ಆನಂದ್ ನಟಿಸಿರುವ ಚಿತ್ರ, ಇದೇ ವಾರ ಬಿಡುಗಡೆಯಾಗುತ್ತಿದೆ. ಪ್ರಶಾಂತ್ ರಾಜ್ ನಿರ್ದೇಶನದ ಚಿತ್ರದ ಟ್ರೇಲರ್ ಬಿಡುಗಡೆ ಇದೇ ಶನಿವಾರ ಆಗಬೇಕಿತ್ತು. ಆ ದಿನ ಮಂಡ್ಯದಲ್ಲಿ ನಡೆದ ಬಸ್ ದುರಂತದಿಂದಾಗಿ ಟ್ರೇಲರ್ ಬಿಡುಗಡೆ ಮುಂದೂಡಲಾಗಿತ್ತ

    ಬೆನ್ನಲ್ಲೇ ಇಡೀ ಚಿತ್ರರಂಗವನ್ನು ಅಂಬರೀಷ್ ನಿಧನದ ಬೆಚ್ಚಿ ಬೀಳಿಸಿತು. ಈಗ ಟ್ರೇಲರ್ ಬಿಡುಗಡೆಗೆ ಚಿತ್ರತಂಡ ಮುಂದಾಗಿದೆ.

    ಎಸ್.ಎಸ್.ತಮನ್ ನಿರ್ದೇಶನದ ಹಾಡುಗಳು ಈಗಾಗಲೇ ಜನಪ್ರಿಯವಾಗಿವೆ. ಅಂಬಿ ನಿಧನದ ಹಿನ್ನೆಲೆಯಲ್ಲಿ ಟ್ರೇಲರ್ ಬಿಡುಗಡೆಯನ್ನು ಸರಳವಾಗಿ ನಡೆಸಲು ನಿರ್ಧರಿಸಿದೆ ಆರೆಂಜ್ ಚಿತ್ರತಂಡ.

  • ಎಂಗೇಜ್ ಹುಡ್ಗೀರ್ ಹಿಂದೆ ಬೀಳೋ ಗಣೇಶ್ ಪಾಡು

    orange is typical ganesh style movie

    ಎಂಗೇಜ್‍ಮೆಂಟ್ ಆದ ಹುಡುಗಿಯನ್ನು ನೋಡೋದು, ಇಷ್ಟಪಡೋದು ಗೋಲ್ಡನ್ ಸ್ಟಾರ್ ಗಣೇಶ್ ಟ್ರೇಡ್‍ಮಾರ್ಕ್ ಆಗಿಬಿಟ್ಟಿದೆ. ಸುಮ್ಮನೆ ನೆನಪಿಸಿಕೊಳ್ಳಿ, ಮುಂಗಾರು ಮಳೆ - ಎಂಗೇಜ್‍ಮೆಂಟ್ ಆಗಿದ್ದ ನಂದಿನಿ ಪೂಜಾ ಗಾಂಧಿ ಮೇಲೆ ಲವ್ವು. ಹುಡುಗಾಟ -

    ಗಣೇಶ್‍ನ ಇಷ್ಟ ಪಡೋ ಹೊತ್ತಿಗೆ ರೇಖಾಗೆ ಇನ್ನೊಂದು ಲವ್ವಾಗಿರುತ್ತೆ.ಗಾಳಿಪಟ - ಗಣಿ ಲವ್ ಮಾಡೋ ಡೈಸಿ ಬೋಪಣ್ಣ ಅವರದ್ದು ವಿಧವೆಯ ಪಾತ್ರಅರಮನೆ - ಗಣೇಶ್‍ಗೆ ಹೀರೋಯಿನ್ ಸಿಗೋದೇ ಇಲ್ಲಶ್ರಾವಣಿ ಸುಬ್ರಹ್ಮಣ್ಯ - ಅಮೂಲ್ಯ ಗಣೇಶ್‍ಗೆ ಸಿಕ್ಕೊದೇ ಲವ್ವರ್ ಜೊತೆ ಓಡಿ ಬಂದಾಗ..ಮಳೆಯಲಿ ಜೊತೆಯಲಿ - ಅವರೇ ನಿರ್ದೇಶಿಸಿದ ಚಿತ್ರದಲ್ಲೂ ಅಷ್ಟೆ.. ನೋ ಚೇಂಜ್ ಸರ್ಕಸ್, ಉಲ್ಲಾಸ ಉತ್ಸಾಹ, ಮಳೆಯಲಿ ಜೊತೆಯಲಿ, ಏನೋ ಒಂಥರಾ, ಮದುವೆ, ದಿಲ್ ರಂಗೀಲಾ, ಖುಷಿ ಖುಷಿಯಾಗಿ, ಮುಗುಳುನಗೆ .. ಹೀಗೆ ಗಣೇಶ್ ಚಿತ್ರಗಳಲ್ಲಿ ಅವರ ಪಾತ್ರದ ಸ್ಟೈಲೇ ಹಾಗೆ..

    ಆರೆಂಜ್ ಚಿತ್ರದಲ್ಲೂ ಹಾಗೇ.. ಹೀರೋಯಿನ್ ಚೆಲುವೆ ಪ್ರಿಯಾ ಆನಂದ್. ಈ ರಾಜಕುಮಾರಿಗೂ ಚಿತ್ರದಲ್ಲಿ ಆಗಲೇ ಎಂಗೇಜ್‍ಮೆಂಟ್ ಆಗಿ, ಆರೆಂಜ್‍ನಿಂದ ಏನೇನೋ ಆಗಿ.. ಲವ್ವಾಗುತ್ತೆ. ಪ್ರಶಾಂತ್ ರಾಜ್ ಕಾಮಿಡಿ ಲವ್ ಸ್ಟೋರಿ ಹೇಳಿದ್ದಾರೆ. ಜಸ್ಟ್ ಎಂಜಾಯ್.

  • ಗೋಲ್ಡನ್ ಸ್ಟಾರ್ ಗೆ ಮತ್ತೊಮ್ಮೆ ಮಗಧೀರನ ವಿಲನ್

    orange film shooting completed

    ಗಣೇಶ್ ಅಭಿನಯದ ಆರೆಂಜ್ ಸಿನಿಮಾ ಶೂಟಿಂಗ್ ಮುಗಿಯುತ್ತಿರುವಂತೆಯೇ ಚಿತ್ರದ ವಿಲನ್ ಯಾರು ಅನ್ನೋ ಸೀಕ್ರೆಟ್ ಕೂಡಾ ಬಯಲಾಗಿದೆ. ಮಗಧೀರ ಚಿತ್ರದ ಖಳ ದೇವ್‍ಗಿಲ್, ಇಲ್ಲಿ ಗಣೇಶ್‍ಗೆ ವಿಲನ್ ಆಗಿದ್ದಾರೆ. ಝೂಮ್ ಚಿತ್ರದಲ್ಲೂ ನಟಿಸಿದ್ದ ದೇವ್‍ಗಿಲ್‍ಗೆ ಇದು ಗಣೇಶ್ ಎದುರು 2ನೇ ಸಿನಿಮಾ.

    ರಾಜಕುಮಾರ ಖ್ಯಾತಿಯ ಪ್ರಿಯಾ ಆನಂದ್, ಗಣೇಶ್‍ಗೆ ನಾಯಕಿ. ಇದು ಲವ್ ಕಂ ಆ್ಯಕ್ಷನ್ ಸಿನಿಮಾ. ಗಣೇಶ್ ಅವರದ್ದು ಇಲ್ಲಿ ರಾಬಿನ್ ಹುಡ್ ಶೈಲಿಯ ಪಾತ್ರವಂತೆ. ಪ್ರಶಾಂತ್ ರಾಜ್, ಈ ಚಿತ್ರದ ಮೂಲಕ ಗಣೇಶ್ ಇಮೇಜ್‍ನ್ನೇ ಬದಲಿಸಲಿದ್ದಾರಾ..?-- 

  • ಗೋಲ್ಡನ್ ಸ್ಟಾರ್‍ಗೆ ರಾಜಕುಮಾರಿ

    priya anand for orange

    ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪ್ರಶಾಂತ್ ರಾಜ್ ಕಾಂಬಿನೇಷನ್‍ನ ಆರೆಂಜ್ ಚಿತ್ರಕ್ಕೆ ನಾಯಕಿಯಾಗಿ ರಾಜಕುಮಾರಿಯೇ ಸಿಕ್ಕಿದ್ದಾಳೆ. ಈ ರಾಜಕುಮಾರಿ ಬೇರ್ಯಾರೂ ಅಲ್ಲ. `ರಾಜಕುಮಾರ'ನ ನಾಯಕಿ ಪ್ರಿಯಾ ಆನಂದ್.

    ಚಿತ್ರದ ಕಥೆಗೆ ಪ್ರಿಯಾ ಆನಂದ್ ಸೂಕ್ತ ಎನಿಸಿತು. ಅವರಿಗೆ ಕಥೆ ಹೇಳಿದೆವು. ಅವರಂತೂ ತಮ್ಮ ಪಾತ್ರದ ಬಗ್ಗೆ ಎಕ್ಸೈಟ್ ಆಗಿ ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ ನಿರ್ದೇಶಕ ಪ್ರಶಾಂತ್ ರಾಜ್.

    ಚಿತ್ರದಲ್ಲಿ ನಾಯಕಿಯ ಪಾತ್ರ, ಸಂಪತ್ತಿಗೆ ಸವಾಲ್ ಮಂಜುಳಾ ಅವರನ್ನು ನೆನಪಿಸುತ್ತಂತೆ. ಅಲ್ಲಿಗೆ ರಾಜಕುಮಾರನ ರಾಜಕುಮಾರಿ, ಗಣೇಶ್ ಪಾಲಿನ ದುರ್ಗೆಯಾಗುತ್ತಿದ್ದಾರೆ.

     

  • ಡಿ.7ಕ್ಕೆ ಗೋಲ್ಡನ್ ಸ್ಟಾರ್ V/s ಹ್ಯಾಟ್ರಿಕ್ ಹೀರೋ

    shivanna's kavachan and ganesh;s orange to clash on same day

    2019ರ ಡಿಸೆಂಬರ್ ಸ್ಟಾರ್ ವಾರ್‍ಗೆ ಸಾಕ್ಷಿಯಾಗುತ್ತಾ..? ಅಂಥಾದ್ದೊಂದು ಲೆಕ್ಕಾಚಾರ, ನಿರೀಕ್ಷೆಗಳು ಗರಿಗೆದರುತ್ತಿವೆ. ಡಿಸೆಂಬರ್ 21ಕ್ಕೆ ಕೆಜಿಎಫ್ ರಿಲೀಸ್ ಆಗುತ್ತಿದ್ದು, ಅದೇ ದಿನ ಉಪೇಂದ್ರ-ರಚಿತಾ ರಾಮ್-ಎ.ಪಿ.ಅರ್ಜುನ್ ಕಾಂಬಿನೇಷನ್‍ನ ಐ ಲವ್ ಯು ತೆರೆ ಕಾಣುವ ಸಾಧ್ಯತೆ ಇದೆ. ಹೀಗಿರುವಾಗಲೇ ಅದಕ್ಕೂ ಮೊದಲು ಡಿಸೆಂಬರ್ 7ಕ್ಕೆ ಶಿವಣ್ಣ ಮತ್ತು ಗಣೇಶ್ ಚಿತ್ರಗಳು ಮುಖಾಮುಖಿಯಾಗಲಿವೆ.

    ಡಿಸೆಂಬರ್ 7ಕ್ಕೆ ಗಣೇಶ್ ಅಭಿನಯದ ಆರೆಂಜ್ ರಿಲೀಸ್ ಆಗುತ್ತಿದೆ. ಅದೇ ದಿನ ಶಿವರಾಜ್‍ಕುಮಾರ್ ಅಭಿನಯದ ಕವಚ ಚಿತ್ರವೂ ರಿಲೀಸ್ ಆಗುವ ಸಾಧ್ಯತೆ ಇದೆ.

    ಆರೆಂಜ್, ಪ್ರಶಾಂತ್ ರಾಜ್ ನಿರ್ದೇಶನದ ಸಿನಿಮಾ. ರಾಜಕುಮಾರಿ ಪ್ರಿಯಾ ಆನಂದ್ ನಾಯಕಿ. ಜೂಮ್ ಚಿತ್ರದ ನಂತರ ಗಣೇಶ್-ಪ್ರಶಾಂತ್ ರಾಜ್ ಒಂದಾಗಿರುವ ಸಿನಿಮಾ ಇದು.

    ಇನ್ನು ಕವಚ, ಮಲಯಾಳಂನ ಒಪ್ಪಂ ಚಿತ್ರದ ರೀಮೇಕ್. ಹಲವು ವರ್ಷಗಳ ನಂತರ ಶಿವಣ್ಣ ಇಷ್ಟಪಟ್ಟು ನಟಿಸಿರುವ ರೀಮೇಕ್ ಸಿನಿಮಾ. ಇಶಾ ಕೊಪ್ಪಿಕರ್ ನಾಯಕಿಯಾಗಿರುವ ಈ ಚಿತ್ರದಲ್ಲಿ ಶಿವಣ್ಣ, ಅಂಧನಾಗಿ ನಟಿಸಿದ್ದಾರೆ. 

    ಇಬ್ಬರು ಸ್ಟಾರ್‍ಗಳ ಸಿನಿಮಾ ಒಂದೇ ದಿನ ಬಂದರೆ, ಡಿಸೆಂಬರ್ 7 ಧಮಾಕಾ ಸೃಷ್ಟಿಸಲಿದೆ.

  • ಮಗಧೀರ ವಿಲನ್ ಎದುರು ಗಣೇಶ್ ಖದರ್

    ganesh fights with magadheera villain dev gill

    ಆರೆಂಜ್ ಚಿತ್ರದಲ್ಲಿ ಗಣೇಶ್ ಎದುರು ನಾಯಕಿಯಾಗಿರುವುದು ಪ್ರಿಯಾ ಆನಂದ್. ಖಳನಾಯಕನಾಗಿರುವುದು ದೇವ್‍ಗಿಲ್. ಮಗಧೀರ ಚಿತ್ರದಲ್ಲಿ ಹೀರೋನಷ್ಟೇ ಭಯಂಕರವಾಗಿ ಅಬ್ಬರಿಸಿದ್ದ ದೇವ್‍ಗಿಲ್, ಈ ಚಿತ್ರದಲ್ಲಿ ಗಣೇಶ್ ಎದುರು ಘರ್ಜಿಸಿದ್ದಾರೆ.

    ಆರೆಂಜ್‍ನಲ್ಲಿ ಗಣೇಶ್‍ಗೆ ಮಾಸ್ ಲುಕ್ ಇದೆ. ಗಣೇಶ್ ಮತ್ತು ದೇವ್‍ಗಿಲ್ ಮಧ್ಯೆ ಪವರ್‍ಫುಲ್ ಫೈಟ್ ಕೂಡಾ ಇದೆ. ಸಾಹಸ ಸನ್ನಿವೇಶವನ್ನು ಪ್ರಶಾಂತ್ ರಾಜ್ ಸ್ಪೆಷಲ್ಲಾಗಿ ಚಿತ್ರೀಕರಿಸಿದ್ದಾರೆ. ಜೂಮ್ ನಂತರ ಜೊತೆಯಾಗಿರುವ ಗಣೇಶ್-ಪ್ರಶಾಂತ್ ರಾಜ್ ಜೋಡಿ, ಮತ್ತೊಂದು ಮ್ಯಾಜಿಕ್‍ಗೆ ರೆಡಿಯಾಗುತ್ತಿದೆ.

  • ಯಾರೊ ಯಾರೋ ಎಂದ ಚೆಲುವೆಗೆ ಗಣೇಶ್ ಏನಂದ್ರು..?

    orange releasing on dec 7th

    ಯಾರೋ ಯಾರೋ.. ಯಾರೋ.. ನೀನು.. ನಂಗೆ ನೀನು ಯಾರು..

    ಹೇಳು ಹೇಳು ಹೇಳು.. ನೀನೇ ನಂಗೆ ಚೂರು..

    ಇದು ಆರೆಂಜ್ ಚಿತ್ರದ ಗೀತೆಯ ಸಾಲು. ರಾಜಕುಮಾರಿ ಪ್ರಿಯಾ ಆನಂದ್, ಈ ಚಿತ್ರದಲ್ಲಿ ಚೆಲುವ ಗಣೇಶ್‍ಗೆ ಹಾಡುವ ಹಾಡಿದು. ಚೆಲುವೆಯ ಕಣ್ಣೋಟಕ್ಕೆ ಗಣೇಶ್ ಏನ್ ಹೇಳಿದ್ರು ಅನ್ನೋದನ್ನ ಸಿನಿಮಾದಲ್ಲೇ ನೋಡಬೇಕು. ಡಿಸೆಂಬರ್ ಮೊದಲ ವಾರದಲ್ಲಿ ರಿಲೀಸ್ ಆಗುತ್ತಿರುವ ಆರೆಂಜ್‍ಗೆ ಪ್ರಶಾಂತ್ ರಾಜ್ ನಿರ್ದೇಶನವಿದೆ. 

    ಜೂಮ್ ಚಿತ್ರದಲ್ಲಿ ಮೋಡಿ ಮಾಡಿದ್ದ ಜೋಡಿ, ಆರೆಂಜ್‍ನಲ್ಲಿ ಮತ್ತೆ ಒಂದಾಗಿದೆ. ರಿಲೀಸ್ ಡೇಟ್ ಘೋಷಿಸಿ ಟ್ರೇಲರ್ ರಿಲೀಸ್ ಮಾಡಲು ಸಿದ್ಧತೆ ನಡೆಸಿರುವ ಚಿತ್ರತಂಡ, ಕೆಲವೇ ದಿನಗಳಲ್ಲಿ ಟ್ರೇಲರ್ ಬಿಡುತ್ತಿದೆ. ಎಸ್.ಎಸ್.ತಮನ್ ಸಂಗೀತ ನಿರ್ದೇಶನದ ಹಾಡುಗಳು ಸದ್ದು ಮಾಡುತ್ತಿದ್ದು, ಅಬ್ಬರಕ್ಕಿಂತ ಹೆಚ್ಚಾಗಿ  ಮೆಲೋಡಿ ಹಾಡುಗಳಿವೆ. ಖೈದಿಯ ವೇಷದಲ್ಲಿ ಗಣೇಶ್‍ರ ಫಸ್ಟ್ ಲುಕ್ ಕೊಟ್ಟಿದ್ದ ಪ್ರಶಾಂತ್ ರಾಜ್, ಟ್ರೇಲರ್‍ನಲ್ಲಿ ಏನು ಸ್ಪೆಷಲ್ ಕೊಡ್ತಾರೆ. ಜಸ್ಟ್ ವೇಯ್ಟ್

  • ರೆಂಜ್.. ಪೈಸಾ ವಸೂಲ್ 

    orange is total paisa vasool movie

    ಆರೆಂಜ್. ಪ್ರಶಾಂತ್ ರಾಜ್ ನಿರ್ದೇಶನದ ಈ ಸಿನಿಮಾ ಪಕ್ಕಾ ಪೈಸಾ ವಸೂಲ್ ಚಿತ್ರ. ನೋಡುವ ಪ್ರೇಕ್ಷಕರು ಕೊಟ್ಟ ಹಣಕ್ಕೆ ಮೋಸವಿಲ್ಲ, ಪಕ್ಕಾ ಎಂಟರ್‍ಟೈನರ್ ಎಂದು ಭರವಸೆ ಕೊಡ್ತಾರೆ ನಿರ್ದೇಶಕ ಪ್ರಶಾಂತ್ ರಾಜ್. ಅಷ್ಟೇ ಅಲ್ಲ, ಚಿತ್ರದ ನಿರ್ಮಾಪಕರಿಗೂ ಆಗಲೇ ಚಿತ್ರದ ಪೈಸಾ ವಸೂಲ್ ಆಗಿ ಹೋಗಿದೆಯಂತೆ. ಚಿತ್ರವನ್ನು ಆಮೇಜಾನ್‍ನವರು ಉತ್ತಮ ಮೊತ್ತಕ್ಕೆ ಖರೀದಿಸಿದ್ದು, ಬಿಡಗಡೆಗೆ ಮುನ್ನವೇ ನಿರ್ಮಾಪಕರು ಸೇಫ್ ಝೋನ್‍ನಲ್ಲಿದ್ದಾರಂತೆ.

    ನಾಳೆ ಸಿನಿಮಾ ರಾಜ್ಯಾದ್ಯಂತ ತೆರೆ ಕಾಣುತ್ತಿದ್ದು, ನಂತರ ವಿದೇಶದಲ್ಲೂ ರಿಲೀಸ್ ಮಾಡುವ ಯೋಚನೆ ಚಿತ್ರತಂಡಕ್ಕಿದೆ. ಇಡೀ ಸಿನಿಮಾದಲ್ಲಿ ಪಾತ್ರಧಾರಿಗಳು ಸೀರಿಯಸ್ಸಾಗಿದ್ದರೂ, ನೋಡುವವರು ನಗುತ್ತಿರುತ್ತಾರೆ. ಅಷ್ಟರಮಟ್ಟಿಗೆ ಚಿತ್ರಕಥೆ ಕಲರ್‍ಫುಲ್ಲಾಗಿದೆ ಅಂತಾರೆ ಗಣೇಶ್.

    ಪ್ರಿಯಾ ಆನಂದ್-ಗಣೇಶ್ ಜೋಡಿ, ಕನ್ನಡ ಚಿತ್ರರಂಗದ ಸೂಪರ್ ಹಿಟ್ ಜೋಡಿಯಾಗಲಿದೆ ಎನ್ನುವ ಭರವಸೆ ಪ್ರಶಾಂತ್ ರಾಜ್ ಅವರದ್ದು.

  • ಲಕ್ಕಿ ಡಿಸೆಂಬರ್‍ನಲ್ಲಿ ಗೋಲ್ಡನ್ ಸ್ಟಾರ್ ಲಕ್ ಪರೀಕ್ಷೆ

    golden star ganesh' lucky december

    ಗೋಲ್ಡನ್ ಸ್ಟಾರ್ ಗಣೇಶ್‍ಗೂ, ಡಿಸೆಂಬರ್‍ಗೂ ಅದೃಷ್ಟದ ನಂಟು. ಡಿಸೆಂಬರ್‍ನಲ್ಲಿ ರಿಲೀಸ್ ಆಗಿರುವ ಅವರ ಸಿನಿಮಾಗಳು ಗೆದ್ದಿರುವುದೇ ಹೆಚ್ಚು. ಮುಂಗಾರು ಮಳೆ, ಜೊತೆ ಜೊತೆಯಲಿ, ಚಮಕ್.. ಇದಕ್ಕೆ ಅತ್ಯುತ್ತಮ ಉದಾಹರಣೆ. ಹೀಗಾಗಿಯೇ ಆರೆಂಜ್ ಚಿತ್ರ ಡಿಸೆಂಬರ್‍ಗಾಗಿ ಕಾದು ತೆರೆಗೆ ಬರುತ್ತಿದೆ.

    ಜೂಮ್‍ನಲ್ಲಿ ಸಕ್ಸಸ್ ಕಂಡಿದ್ದ ಪ್ರಶಾಂತ್ ರಾಜ್-ಗಣೇಶ್ ಜೋಡಿ, ಆರೆಂಜ್‍ನಲ್ಲಿ ಮತ್ತೊಮ್ಮೆ ಗೆಲುವಿನ ಅದೃಷ್ಟ ಪರೀಕ್ಷೆಗಿಳಿದಿದೆ. ರಾಜಕುಮಾರ ಚಿತ್ರದ ನಾಯಕಿ ಪ್ರಿಯಾ ಆನಂದ್‍ಗೆ ಇದು ಕನ್ನಡದಲ್ಲಿ 2ನೇ ಸಿನಿಮಾ. ಒಂಥರಾ ಲಕ್ಕಿ ಜೋಡಿಗಳ ಸಂಗಮ ಆರೆಂಜ್ ಎನ್ನಬಹುದು. ಡಿಸೆಂಬರ್  7ಕ್ಕೆ ಸಿನಿಮಾ ತೆರೆ ಮೇಲೆ ಬರಲಿದೆ.