ಸೆಲಬ್ರಿಟಿಗಳು ದೇವಸ್ಥಾನಕ್ಕಷ್ಟೇ ಅಲ್ಲ, ಎಲ್ಲಿಯೇ ಹೋದರೂ ಅಭಿಮಾನಿಗಳು ಮುತ್ತಿಕೊಳ್ಳುವುದು ಮಾಮೂಲು. ಹೀಗಾಗಿಯೇ ಸಾಮಾನ್ಯವಾಗಿ ಸೆಲಬ್ರಿಟಿಗಳು ದೇವಸ್ಥಾನಗಳಿಗೆ ಹೋದಾಗ ಸ್ವಲ್ಪ ಮುಂಜಾಗ್ರತೆ ವಹಿಸಿ, ಪೂರ್ವ ಸಿದ್ಧತೆ ಮಾಡಿಕೊಂಡೇ ಬರುತ್ತಾರೆ. ಹೀಗೆ ಬಂದವರು ಹಾಗೆ ಮರೆಯಾಗಿಬಿಡುತ್ತಾರೆ. ಆದರೆ, ಹರಿಪ್ರಿಯಾ ಹಾಗಲ್ಲ.
ಹರಿಪ್ರಿಯಾ ತಿರುಪತಿ ತಿಮ್ಮಪ್ಪನದ ಭಕ್ತೆ. ಸಾಮಾನ್ಯವಾಗಿ ಸೆಲಬ್ರಿಟಿಗಳು ತಿರುಪತಿಗೆ ಹೋದರೆ ವಿಐಪಿ ದರ್ಶನಕ್ಕೆ ಹೋಗ್ತಾರೆಯೇ ಹೊರತು, ಬೆಟ್ಟ ಹತ್ತುವ ಸಾಹಸ ಮಾಡುವುದಿಲ್ಲ. ಆದರೆ, ಹರಿಪ್ರಿಯಾ 11 ಕಿ.ಮೀ. ಬೆಟ್ಟವನ್ನು ಹತ್ತಿ, 3550 ಮೆಟ್ಟಿಲುಗಳನ್ನೇರಿ ತಿರುಪತಿ ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ. ಮುಂಜಾನೆಯ ಚುಮು ಚುಮು ಚಳಿಯಲ್ಲೇ ಬೆಟ್ಟ ಹತ್ತಿ ದರ್ಶನ ಮುಗಿಸಿಕೊಂಡು ವಾಪಸ್ ಬಂದಿದ್ದಾರೆ.
ಸದ್ಯಕ್ಕೆ ತೆಲುಗಿನಲ್ಲಿ ಹರಿಪ್ರಿಯಾ ಅಭಿನಯದ ಜೈಸಿಂಹ ಚಿತ್ರ ಭರ್ಜರಿಯಾಗಿ ಓಡುತ್ತಿದ್ದರೆ, ಕನ್ನಡದಲ್ಲಿ ಸಂಹಾರ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.