` rip, - chitraloka.com | Kannada Movie News, Reviews | Image

rip,

  • ಚಿರಂಜೀವಿ ಸರ್ಜಾ ಸಾವು ಹೇಗಾಯ್ತು..? ಡಾಕ್ಟರ್ ರಿಪೋರ್ಟ್ 

    chiru sarja medical sarja

    ಚಿರಂಜೀವಿ ಸರ್ಜಾ ಸಾವು ಅನಿರೀಕ್ಷಿತ ಆಘಾತ. ಏಕೆಂದರೆ ಚಿರಂಜೀವಿ ಸರ್ಜಾ ಫಿಟ್ ಆಗಿದ್ದರು. ವ್ಯಾಯಾಮ ನಿರಂತರವಾಗಿತ್ತು. ವಯಸ್ಸು ಜಸ್ಟ್ 39 ವರ್ಷ. ಹಾಗಾದರೆ ಇದ್ದಕ್ಕಿದ್ದಂತೆ ಸಾವು ಸುತ್ತಿಕೊಂಡಿದ್ದು ಹೇಗೆ..? ಡಾಕ್ಟರ್ ಕೊಟ್ಟಿರೋ ವರದಿಯ ಡೀಟೈಲ್ಸ್ ಹೀಗಿದೆ.

    ಚಿರು ಅವರನ್ನು ವೈದ್ಯರು ಆಸ್ಪತ್ರೆಗೆ ಕರೆತಂದಿದ್ದು ಮಧ್ಯಾಹ್ನ 2.20ಕ್ಕೆ. ಆಸ್ಪತ್ರೆಗೆ ಕರೆತರುವ ಹೊತ್ತಿಗೆ ಚಿರು ಅವರ ಪಲ್ಸ್ ರೇಟ್ ಡೌನ್ ಆಗಿತ್ತು. ಹೀಗಾಗಿ ಆಸ್ಪತ್ರೆಗೆ ಕರೆತಂದ ತಕ್ಷಣ ಅವರನ್ನು ಎಮರ್ಜೆನ್ಸಿ ರೂಂಗೆ ಶಿಫ್ಟ್ ಮಾಡಲಾಯ್ತು. ತಕ್ಷಣ ಅವರನ್ನು ಟ್ರಿಯೇಜ್ ಏರಿಯಾಗೆ ಶಿಫ್ಟ್ ಮಾಡಲಾಯ್ತು. ಟ್ರಿಯೇಜ್ ಏರಿಯಾ ಅಂದ್ರೆ ಏನ್ ಗೊತ್ತಾ..? ಸಿಂಪಲ್ಲಾಗ್ ಅರ್ಥ ಆಗಬೇಕು, ಆರ್ಮಿಯಲ್ಲಿ ಮೈತುಂಬಾ ಗಾಯಗೊಂಡವರನ್ನ ಒಂದು ರೂಂಗೆ ಶಿಫ್ಟ್ ಮಾಡ್ತಾರೆ. ಅಲ್ಲಿ ಒಬ್ಬ ರೋಗಿಗೆ ಏನೇನೆಲ್ಲ ಸೌಲಭ್ಯ ಕೊಡಲು ಸಾಧ್ಯವಿದೆಯೋ, ಎಲ್ಲ ಸೌಲಭ್ಯಗಳೂ ಅಲ್ಲಿರ್ತವೆ. ಇದು ಆರ್ಮಿಯಿಂದ ಬಂದಿರೋ ಪದ. ಹೀಗಾಗಿ ಹಲವು ಆಸ್ಪತ್ರೆಗಳು ಅದನ್ನು ಟ್ರಿಯೇಜ್ ಏರಿಯಾ ಎಂದೇ ಕರೆಯುತ್ತವೆ. ಅದು ಎಮರ್ಜೆನ್ಸಿ ರೂಂಗಳಲ್ಲಿ ಮಾತ್ರ ಇರುತ್ತೆ. ಅಲ್ಲಿ ಚಿಕಿತ್ಸೆ ನೀಡಲಾಯ್ತು.

    ಚಿಕಿತ್ಸೆ ವೇಳೆ ಪಲ್ಸ್ ಬಡಿತ ಹೆಚ್ಚಿಸಲು ಪ್ರಯತ್ನ ಮಾಡಲಾಯ್ತು. ಸಿಪಿಆರ್ ಬಳಸುವ ಮೂಲಕ ನಾಡಿ ಮಿಡಿತವನ್ನು ಹತೋಟಿಯಲ್ಲಿಡಲು ಪ್ರಯತ್ನ ಮಾಡಿದರೂ ಫಲಕಾರಿಯಾಗಲಿಲ್ಲ. 3 ಗಂಟೆ 48 ನಿಮಿಷದವರೆಗೂ ನಡೆದ ನಿರಂತರ ಪ್ರಯತ್ನದಲ್ಲಿ 3 ಬಾರಿ ನಾಡಿ ಮಿಡಿತ ಹೆಚ್ಚಿಸಲು ಯಶಸ್ವಿಯಾದೆವು. ಆದರೆ ಅದು ಸ್ಥಿರವಾಗಿ ನಿಲ್ಲಲಿಲ್ಲ. 3.48ಕ್ಕೆ ಚಿರಂಜೀವಿ ಸರ್ಜಾ ನಿಧನ ಎಂದು ಘೋಷಿಸಿದೆವು.

    ಇದು ಜಯನಗರ ಅಪೋಲೋ ಆಸ್ಪತ್ರೆಯ ಡಾ.ಯತೀಶ್ ಗೋವಿಂದಯ್ಯ ಅವರು ನೀಡಿರುವ ವರದಿ.

    ಚಿರುಗೆ ನಿನ್ನೆಯೇ ಎದೆನೋವು ಕಾಣಿಸಿಕೊಂಡಿತ್ತಂತೆ. ಇಸಿಜಿ ಮಾಡಿಸಿಕೊಂಡು ಬಂದಿದ್ದರಂತೆ. ಅಣ್ಣನಿಗೆ ಧ್ರುವ ಸರ್ಜಾ ಮನೆಯಿಂದ ಮಟನ್ ಮಾಡಿಸಿಕೊಂಡು ತಂದಿದ್ದರು. ಚೆನ್ನಾಗಿಯೇ ಊಟವನ್ನೂ ಮಾಡಿದ್ದ ಚಿರು, ಮಧ್ಯಾಹ್ನ ಮಾವ ಅರ್ಜುನ್ ಸರ್ಜಾ ಜೊತೆ ಮಾತನಾಡಿದ್ದರು. ಚೆನ್ನಾಗಿದ್ದೇನೆ ಎಂದು ತಿಳಿಸಿದ್ದರು. ಅಪ್ಪನ ಜೊತೆ ಯಾಕೋ ಸ್ವಲ್ಪ ಬೆವರು ಬರ್ತಿದೆ ಅಪ್ಪಾ, ಫ್ಯಾನ್ ಹಾಕಿ ಎಂದು ಫ್ಯಾನ್ ಹಾಕಿಸಿಕೊಂಡಿದ್ದರು. ಹಾಗೇ ಮಲಗಿದವರು ಮೇಲೇಳಲೇ ಇಲ್ಲ.

     

  • ಚಿರು ಕೊರೋನಾ ಟೆಸ್ಟ್ ನೆಗೆಟಿವ್

    chiru sarja's corona test report negative

    ಅನಿರೀಕ್ಷಿತವಾಗಿ ಹೃದಯಾಘಾತದಿಂದ ಮೃತಪಟ್ಟ ಚಿರಂಜೀವಿ ಸರ್ಜಾ  ಕೊರೊನಾ ಟೆಸ್ಟ್ ವರದಿ ನೆಗೆಟಿವ್ ಬಂದಿದೆ. ಕೊರೋನಾ ಅನ್ನೋ ಶಂಕೆಯಿಂದ ಟೆಸ್ಟ್ ಮಾಡಲಾಗಿತ್ತು. ಮೃತಪಟ್ಟ ಅರ್ಧ ಗಂಟೆಯ ಒಳಗೆ ಗಂಟಲಿನ ಸ್ವಾಬ್ ತೆಗೆದು ಪರೀಕ್ಷೆ ಮಾಡಲಾಗಿದ್ದು, ಸ್ವಾಬ್ ನಲ್ಲಿ ಕೋವಿಡ್ 19 ಅಂಶಗಳಿಲ್ಲ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

    ಇದೀಗ ಕೊರೊನಾ ಸ್ವ್ಯಾಬ್ ಟೆಸ್ಟ್ ನಲ್ಲಿ ನೆಗಟಿವ್ ಬಂದಿರುವ ಹಿನ್ನೆಲೆಯಲ್ಲಿ ಮೃತದೇಹವನ್ನು ಹಸ್ತಾಂತರ ಮಾಡಲಾಗಿದೆ.

    ಅಪೊಲೊ ಆಸ್ಪತ್ರೆಯ ವೈದ್ಯರಿಂದ  ಮಾಹಿತಿ ಸಿಕ್ಕಿದೆ. ನಾಳೆ ಮಧುಗಿರಿಯ ಜಕ್ಕೇನಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ.

    Related Articles :-

    ಮೇಘನಾ ಸರ್ಜಾ 6 ತಿಂಗಳ ಗರ್ಭಿಣಿ 

    ಚಿರಂಜೀವಿ ಸರ್ಜಾ ಸಾವು ಹೇಗಾಯ್ತು..? ಡಾಕ್ಟರ್ ರಿಪೋರ್ಟ್ 

    Chirranjeevi Sarja Dies Of Massive Heart Attack

     

  • ಜೀವನಯಾನ ಮುಗಿಸಿದ ಎಂ.ಎನ್. ವ್ಯಾಸರಾವ್

    veteran writer mn vyasa rao

    ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು.. ನಾಕೊಂದ್ಲ ನಾಕು, ನಾಕೆರಡ್ಲ ಎಂಟು.. ಸೇರಿದಂತೆ ಹಲವು ಮಧುರ ಗೀತೆಗಳಿಗೆ ಭಾವ ತುಂಬಿದ್ದ  ಕವಿ, ಕಥೆಗಾರ, ಕಾದಂಬರಿಕಾರ, ಸಾಹಿತಿ, ಗೀತೆ ರಚನೆಕಾರ  ಎಂ. ಎನ್‌. ವ್ಯಾಸರಾವ್‌ (73) ನಿಧನರಾಗಿದ್ದಾರೆ. ಭಾನುವಾರ ಬೆಳಗ್ಗೆ 10.30 ಸುಮಾರಿಗೆ ಹೃದಯಾಘಾತದಿಂದ ಮೃಪಟ್ಟಿದ್ದಾರೆ. 

    ಬ್ಯಾಂಕಿಂಗ್ ಕ್ಷೇತ್ರದಲ್ಲಿದ್ದ ವ್ಯಾಸರಾಔ್, ದಿಗ್ಗಜ ಪುಟ್ಟಣ್ಣ ಕಣಗಾಲ್ ಸೇರಿದಂತೆ ಹಲವು ನಿರ್ದೇಶಕರ ಜೊತೆ ಕೆಲಸ ಮಾಡಿದ್ದರು. ಜನಮಾನಸದಲ್ಲಿ ಸದಾ ಹಸಿರಾಗಿರುವ ಭಾವಗೀತೆಗಳು ವ್ಯಾಸರಾವ್ ಅವರ ಹೆಗ್ಗುರುತು. 15 ಕ್ಕೂ ಹೆಚ್ಚು ಕ್ಯಾಸೆಟ್‌ಗಳಿಗೆ ಹಾಡುಗಳನ್ನು ಹಾಗೂ 35ಕ್ಕೂ ಹೆಚ್ಚು ಧಾರಾವಾಹಿಗಳಿಗೆ ಸಾಹಿತ್ಯ ಒದಗಿಸಿರುವ ಹೆಗ್ಗಳಿಕೆ ಇವರದು. 

    ಮೈಸೂರು ಮಲ್ಲಿಗೆ, ಆಸ್ಫೋಟ, ದಂಗೆಯೆದ್ದ ಮಕ್ಕಳು, ವಾತ್ಸಲ್ಯ ಪಥ.. ಚಿತ್ರಗಳಿಗೆ ಕಥೆಗಾರರೂ ಆಗಿದ್ದ ವ್ಯಾಸರಾವ್, ರಾಜ್ಯಪ್ರಶಸ್ತಿ ಪುರಸ್ಕೃತರು. ಬೆಳ್ಳಿ ಮೂಡುವ ಮುನ್ನ, ಮಳೆಯಲ್ಲಿ ನೆನೆದ ಮರಗಳು (ಕವನ ಸಂಕಲನ), ಉತ್ತರಮುಖಿ (3 ನೀಳ್ಗತೆಗಳ ಸಂಕಲನ), ಸ್ಕಾಟ್ ಡಬಲ್ ಎಕ್ಸ್, ಅಖಿಲಾ ಮೈ ಡಾರ್ಲಿಂಗ್ (ಪತ್ತೇದಾರಿ ಕಾದಂಬರಿಗಳು) ನಿರೋಷ, ನದಿಮೂಲ (ಕಾದಂಬರಿ) ಕತ್ತಲಲ್ಲಿ ಬಂದವರು (ನಾಟಕ).. ಹಿಗೆ ಅವರು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಸಾಧನೆ ಮಾಡಿದವರು. ಚೀನೀ, ಇಂಗ್ಲಿಷ್, ಫ್ರೆಂಚ್, ಉರ್ದು, ಸಿಂಧಿ ಕೇಗಳನ್ನು ಕನ್ನಡಕ್ಕೆ ಅನುವಾದಿಸಿದ್ದ ವ್ಯಾಸರಾವ್, ಸಾಹಿತ್ಯ ಕೃಷಿಯಲ್ಲಿ ಉನ್ನತ ಸಾಧನೆ ಮಾಡಿದವರು.

    ವ್ಯಾಸರಾವ್ ನಿಧನಕ್ಕೆ ಫಿಲಂಚೇಂಬರ್ ಅಧ್ಯಕ್ಷ ಚಿನ್ನೇಗೌಡ, ಸಿಎಂ ಕುಮಾರಸ್ವಾಮಿ, ಸಚಿವೆ ಜಯಮಾಲಾ.. ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿಸದ್ದಾರೆ.

  • ತಮಿಳು ಕಾಂಚನಾ ಚಿತ್ರದ ನಟಿ ಸಾವು : ಆತ್ಮಹತ್ಯೆನಾ?

    ತಮಿಳು ಕಾಂಚನಾ ಚಿತ್ರದ ನಟಿ ಸಾವು : ಆತ್ಮಹತ್ಯೆನಾ?

    ಕಾಂಚನಾ 3 ಚಿತ್ರದಲ್ಲಿ ವಿದೇಶಿ ಹುಡುಗಿಯ ಪಾತ್ರದಲ್ಲಿ ರಾಘವ ಲಾರೆನ್ಸ್ ಎದುರು ನಟಿಸಿದ್ದ ನಟಿ ಅಲೆಕ್ಸಾಂಡ್ರಿಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಚನಾ 3 ಚಿತ್ರದಲ್ಲಿ ಒಟ್ಟು ನಾಲ್ವರು ನಾಯಕಿಯರಿದ್ದರು. ಅವರಲ್ಲಿ ಒಬ್ಬರು ಅಲೆಕ್ಸಾಂಡ್ರಿಯಾ. ರಷ್ಯಾ ಮೂಲದ ಮಾಡೆಲ್ ಆಗಿದ್ದ ಅಲೆಕ್ಸಾಂಡ್ರಿಯಾ, ಚೆನ್ನೈನಲ್ಲಿ ವಾಸವಾಗಿದ್ದರು.

    ಗೋವಾದಲ್ಲಿ ಒಂದು ಬಾಡಿಗೆ ಮನೆಯನ್ನೂ ಪಡೆದಿದ್ದ ಅಲೆಕ್ಸಾಂಡ್ರಿಯಾ, ಆ ಮನೆಯಲ್ಲೇ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. 2019ರಲ್ಲಿ ತಮಗೆ ಫೋಟೋಗ್ರಾಫರ್ ಒಬ್ಬ ಲೈಂಗಿಕ ಕಿರುಕುಳ ನೀಡಿದ್ದ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು ಅಲೆಕ್ಸಾಂಡ್ರಿಯಾ. 

  • ತಾಯಿ ಮೃತಪಟ್ಟ ಮರುದಿನವೇ ಗ್ರಾಮಾಯಣ ನಿರ್ಮಾಪಕ ಮೂರ್ತಿ ನಿಧನ

    gramayana movie producer murthy no more

    ವಿನಯ್ ರಾಜ್‍ಕುಮಾರ್ ಅಭಿನಯದ ಗ್ರಾಮಾಯಣ ಚಿತ್ರದ ನಿರ್ಮಾಪಕ ಎಸ್.ಎಲ್.ಎನ್. ಮೂರ್ತಿ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ ಕೇವಲ 39 ವರ್ಷ. ಅವರ ತಾಯಿ ಗುರುವಾರವಷ್ಟೇ ನಿಧನರಾಗಿದ್ದರು. ಶುಕ್ರವಾರ ಮೂರ್ತಿ ನಿಧನರಾಗಿದ್ದಾರೆ.

    ಬನಶಂಕರಿಯಲ್ಲಿ ವಾಸವಾಗಿದ್ದ ಮೂರ್ತಿ, ಇತ್ತೀಚೆಗಷ್ಟೇ ಹೊಸ ಮನೆ ಕಟ್ಟಿದ್ದರು. ಗೃಹ ಪ್ರವೇಶಕ್ಕೆ ಸಿದ್ಧತೆಯೂ ನಡೆದಿತ್ತು. ಹೊಸ ಮನೆಗೆ ಹೋಗುವ ಮೊದಲೇ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಮೂರ್ತಿ ಅವರಿಗೆ ಶ್ವಾಸಕೋಶದ ಸಮಸ್ಯೆಯಿತ್ತು. ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದ ಮೂರ್ತಿಯವರಿಗೆ ಡಯಾಲಿಸಿಸ್ ಮಾಡಲಾಗಿತ್ತು. ಶ್ವಾಸಕೋಶದ ಸಮಸ್ಯೆ ಇದ್ದ ಕಾರಣ, ಕೋವಿಡ್ 19 ಪರೀಕ್ಷೆ ಬಳಿಕ ಮೃತದೇಹ ಹಸ್ತಾಂತರಿಸುವುದಾಗಿ ವೈದ್ಯರು ತಿಳಿಸಿದ್ದಾರೆ.

    ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಮೂರ್ತಿ, ಜುಲೈ ನಂತರ ಗ್ರಾಮಾಯಣ ಚಿತ್ರದ ಶೂಟಿಂಗ್‍ನ್ನು ಮತ್ತೆ ಆರಂಭಿಸುವ ಯೋಜನೆಯಲ್ಲಿದ್ದರು. ಗ್ರಾಮಾಯಣ ಅಷ್ಟೇ ಅಲ್ಲ, ನವೀನ್ ಕೃಷ್ಣ ಅಭಿನಯದ ಇತ್ಯರ್ಥ ಚಿತ್ರಕ್ಕೂ ಅವರೇ ನಿರ್ಮಾಪಕ. ಆ ಚಿತ್ರ ಬಿಡುಗಡೆಗೆ ಸಿದ್ಧವಾಗಿತ್ತು.

  • ತಾಯಿಗೆ ತಕ್ಕ ಮಗ - ಅಂಬಿ ನೋಡಿದ ಕೊನೆಯ ಸಿನಿಮಾ

    thayige thakka maga was last movie watched by amabreesh

    ಸುಮಲತಾ ಅಂಬರೀಷ್ ಪ್ರಮುಖ ಪಾತ್ರದಲ್ಲಿರುವ ಶಶಾಂಕ್ ಬ್ಯಾನರ್ನ ಮೊದಲ ಸಿನಿಮಾ ತಾಯಿಗೆ ತಕ್ಕ ಮಗ. ಅದು ಅಂಬರೀಷ್ ನೋಡಿದ ಕೊನೆಯ ಸಿನಿಮಾ. ಅಜೇಯ್ ರಾವ್ ಅವರಿಗೆ ಇದು 25ನೇ ಸಿನಿಮಾ. ಚಿತ್ರವನ್ನು ನೋಡಿ ಬಂದ ಅಂಬರೀಷ್, ತಮ್ಮ ಪತ್ನಿ ಸುಮಲತಾ ಅವರ ಅಭಿನಯವನ್ನು ಮನಸಾರೆ ಹೊಗಳಿದ್ದರು.

    ಬಹುಶಃ ಮೀಡಿಯಾಗಳ ಎದುರು ಅಂಬರೀಷ್ ಕಾಣಿಸಿಕೊಂಡಿದ್ದು ಅದೇ ಕೊನೆ. ಆ ದಿನವೂ ಕೂಡಾ ಅಂಬರೀಷ್ ಚೆನ್ನಾಗಿಯೇ ಇದ್ದರು. ಕೆಲವೇ ದಿನಗಳಲ್ಲಿ ವಿಧಿ ಕ್ರೂರ ಆಟ ತೋರಿಸಿಬಿಟ್ಟಿತ್ತು.

  • ತ್ರಿಮೂರ್ತಿ ರಾಜೇಂದ್ರನ್ ನಿಧನ

    trimurthy fame director

    ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಿರ್ದೇಶಕ ಸಿ.ವಿ.ರಾಜೇಂದ್ರನ್ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಸಿ.ವಿ.ರಾಜೇಂದ್ರನ್ 80ರ ದಶಕದ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾಗಿದ್ದರು. ಡಾ.ರಾಜ್‍ಕುಮಾರ್, ಶಿವಾಜಿ ಗಣೇಶನ್, ಕಮಲಹಾಸನ್, ವಿಷ್ಣುವರ್ಧನ್, ಶಂಕರ್‍ನಾಗ್, ಅಂಬರೀಷ್, ರವಿಚಂದ್ರನ್, ಪ್ರಭು ಸೇರಿದಂತೆ.. ಆಗಿನ ಕಾಲದ ಬಹುತೇಕ ಸ್ಟಾರ್‍ಗಳ ಚಿತ್ರ ನಿರ್ದೇಶಿಸಿದ್ದವರು ರಾಜೇಂದ್ರನ್.

    ಕನ್ನಡದಲ್ಲಿ ತ್ರಿಮೂರ್ತಿ ಸಿ.ವಿ.ರಾಜೇಂದ್ರನ್ ನಿರ್ದೇಶನದ ಮೊದಲ ಚಿತ್ರ. ಸಿಂಗಾಪೂರ್‍ನಲ್ಲಿ ರಾಜಾಕುಳ್ಳ, ಗಲಾಟೆ ಸಂಸಾರ, ಕಿಟ್ಟುಪುಟ್ಟು, ಪ್ರೇಮ ಮತ್ಸರ, ನಾನೇ ರಾಜ, ಪ್ರೀತಿ ಮಾಡು ತಮಾಷೆ ನೋಡು, ಅಳಿಯ ದೇವರು, ಕಮಲಾ, ಉಷಾ, ಸ್ವಯಂವರ, ಘರ್ಜನೆ.. ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದ್ದರು.

    ತಮಿಳುನಾಡಿನಲ್ಲಿಯೇ ನೆಲೆಸಿದ್ದ ಸಿ.ವಿ.ರಾಜೇಂದ್ರನ್ ಅವರಿಂದ ಕನ್ನಡದಲ್ಲಿ ಹೆಚ್ಚು ಚಿತ್ರ ನಿರ್ದೇಶನ ಮಾಡಿಸಿದ ಹಿರಿಮೆ ದ್ವಾರಕೀಶ್ ಅವರದ್ದು.

    Related Articles :-

    CV Rajendran Dead

     

  • ನಟ, ನಿರ್ದೇಶಕ, ನಿರ್ಮಾಪಕ ಕಾಶೀನಾಥ್ ಇನ್ನಿಲ್ಲ

    kashinath no more

    ಕನ್ನಡ ಚಿತ್ರರಂಗದ ಹೆಸರಾಂತ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಕಾಶೀನಾಥ್ ನಿಧನರಾಗಿದ್ದಾರೆ. ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಕಾಶೀನಾಥ್, ಬೆಂಗಳೂರಿನ ಶ್ರೀಶಂಕರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಎರಡು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಶೀನಾಥ್, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

    ಉಡುಪಿ ಜಿಲ್ಲೆಯ ಕುಂದಾಪುರದವರಾದ ಕಾಶೀನಾಥ್, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅಪರಿಚಿತ ಚಿತ್ರದಿಂದ ಶುರುವಾದ ಅವರ ಸಿನಿ ಪಯಣ, 3 ದಶಕಗಳಿಗೂ ಹೆಚ್ಚು ಕಾಲ ನಿರಂತರವಾಗಿ ನಡೆದುಕೊಂಡು ಬಂದಿತ್ತು. ಕಳೆದ ವರ್ಷ ಬಿಡುಗಡೆಯಾಗಿದ್ದ ಚೌಕ, ಕಾಶೀನಾಥ್ ಅಭಿನಯದ ಕೊನೆಯ ಸಿನಿಮಾ. 

    ನಟರಾಗಿ, ನಿರ್ದೇಶಕರಾಗಿ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ಗುರುತಿಸಿಕೊಂಡಿದ್ದ ಕಾಶೀನಾಥ್, ಕನ್ನಡ ಚಿತ್ರರಂಗದ ಗುರು ಎಂದೇ ಖ್ಯಾತರಾಗಿದ್ದರು. ಶಂಕರ್‍ನಾಗ್ ನಂತರ, ಅತೀ ಹೆಚ್ಚು ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಕಾಶೀನಾಥ್ ಅವರದ್ದು. ಉಪೇಂದ್ರ, ವಿ.ಮನೋಹರ್, ಸುನಿಲ್ ಕುಮಾರ್ ದೇಸಾಯಿ, ಸಾಧು ಕೋಕಿಲಾ ಸೇರಿದಂತೆ ಅದೆಷ್ಟು ಪ್ರತಿಭೆಗಳನ್ನು ಚಿತ್ರರಂಗಕ್ಕೆ ತಂದರೋ.. ಅವರೆಲ್ಲರೂ ಚಿತ್ರರಂಗದಲ್ಲಿ ಬೆಳಗುತ್ತಿರುವುದು ವಿಶೇಷ.

    Kashinath Movie Gallery - Click Link 

    Related Articles :-

    Kashinath No More

  • ನಟ, ನಿರ್ಮಾಪಕ ಶಿವರಾಂ ಇನ್ನಿಲ್ಲ 

    ನಟ, ನಿರ್ಮಾಪಕ ಶಿವರಾಂ ಇನ್ನಿಲ್ಲ 

    ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ಶಿವರಾಂ ನಿಧನರಾಗಿದ್ದಾರೆ. ಬೆಂಗಳೂರಿನ ಪ್ರಶಾಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿವರಾಂ, ಮೆದುಳು ನಿಷ್ಕ್ರಿಯಗೊಂಡು ವಿಧಿವಶರಾಗಿದ್ದಾರೆ. 4 ದಿನಗಳ ಹಿಂದೆ ಅವರಿಗೆ ಅಪಘಾತವಾಗಿತ್ತು. ಬೆನ್ನಲ್ಲೇ ಅಯ್ಯಪ್ಪ ಸ್ವಾಮಿ ಪೂಜೆ ವೇಳೆ ಕುಸಿದುಬಿದ್ದು, ತಲೆಗೆ ತೀವ್ರ ಪೆಟ್ಟಾಗಿತ್ತು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಹೀಗಾಗಿ ಶಸ್ತ್ರಚಿಕಿತ್ಸೆ ಸಾಧ್ಯವಾಗಲಿಲ್ಲ. 

    ಕನ್ನಡ ಚಿತ್ರರಂಗದಲ್ಲಿ ಶಿವರಾಂ ಕೇವಲ ನಟರಷ್ಟೇ ಆಗಿರಲಿಲ್ಲ. ನಿರ್ಮಾಪಕರೂ ಆಗಿದ್ದರು. ರಾ.ಶಿ.ಬ್ರದರ್ಸ್ ಸಂಸ್ಥೆಯಲ್ಲಿ ಗೆಜ್ಜೆಪೂಜೆ, ಉಪಾಸನೆ, ನಾನೊಬ್ಬ ಕಳ್ಳ, ಡ್ರೈವರ್ ಹನುಮಂತು, ಬಹಳ ಚೆನ್ನಾಗಿದೆ ಚಿತ್ರಗಳನ್ನು ನಿರ್ಮಿಸಿ ಗೆದ್ದಿದ್ದರು. ತಮಿಳು, ಹಿಂದಿಯಲ್ಲೂ ಸಿನಿಮಾ ಮಾಡಿದ್ದರು. ಸಿಂಗೀತಂ ಶ್ರೀನಿವಾಸರಾವ್, ಕೆಎಸ್ಎಲ್ ಸ್ವಾಮಿ, ಗೀತಪ್ರಿಯ ಮೊದಲಾದ ಹಿರಿಯ ನಿರ್ದೇಶಕರ ಜೊತೆ ಸಹಾಯಕ ನಿರ್ದೇಶಕರಾಗಿದ್ದರು.  ಹೃದಯ ಸಂಗಮ ಚಿತ್ರವನ್ನು ನಿರ್ದೇಶಿಸಿದ್ದರು. ಚಿತ್ರೋದ್ಯಮದ ಎಲ್ಲ ವಿಭಾಗಗಳಲ್ಲೂ ಕೆಲಸ ಮಾಡಿದ ಅನುಭವವಿತ್ತು.

    ಶರಪಂಜರ, ಬೆಳ್ಳಿಮೋಡ, ಗುರು ಶಿಷ್ಯರು, ಬನಶಂಕರಿ, ಶುಭಮಂಗಳ, ಎಡಕಲ್ಲು ಗುಡ್ಡದ ಮೇಲೆ, ಹೊಂಬಿಸಿಲು, ಹೊಸಬೆಳಕು, ಶ್ರಾವಣ ಬಂತು, ಹಾಲು ಜೇನು, ಸಿಂಹದ ಮರಿ ಸೈನ್ಯ, ಮಕ್ಕಳ ಸೈನ್ಯ, ಲಗ್ನ ಪತ್ರಿಕೆ, ಬಂಗಾರದ ಪಂಜರ, ನಾ ಮೆಚ್ಚಿದ ಹುಡುಗ, ನಾಗರಹೊಳೆ, ಗೀತಾ, ಟೋನಿ, ಎರಡು ನಕ್ಷತ್ರಗಳು, ಯಜಮಾನ, ಸಿಂಹಾದ್ರಿಯ ಸಿಂಹ, ಧರ್ಮದೊರೈ(ತಮಿಳು) ಹೀಗೆ ನಟಿಸಿದ ಚಿತ್ರಗಳು ನೂರಾರು.  ಡಾ.ರಾಜ್, ವಿಷ್ಣುವರ್ಧನ್, ಅಂಬರೀಷ್, ಶಿವಣ್ಣ ಸೇರಿದಂತೆ ಹಲವು ಕಲಾವಿದರ ಜೊತೆ ನಟಿಸಿದ್ದರು.

  • ನವರಂಗ್ ಥಿಯೇಟರ್ ಮಾಲೀಕ ಕೆಸಿಎಣ್ ಮೋಹನ್ ನಿಧನ

    ನವರಂಗ್ ಥಿಯೇಟರ್ ಮಾಲೀಕ ಕೆಸಿಎಣ್ ಮೋಹನ್ ನಿಧನ

    ಬೆಂಗಳೂರಿನ ಐಕಾನ್ ಎನಿಸಿಕೊಂಡಿದ್ದ, ಲ್ಯಾಂಡ್ ಮಾರ್ಕ್ ಆಗಿದ್ದ ನವರಂಗ್ ಥಿಯೇಟರಿನ ಮಾಲೀಕ, ಖ್ಯಾತ ಸಿನಿಮಾ ನಿರ್ಮಾಪಕ, ಪ್ರದರ್ಶಕ ಕೆಸಿಎನ್ ಮೋಹನ್ ವಿಧಿವಶರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಕೆಸಿಎನ್ ಮೋಹನ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೋಹನ್ ನಿಧನರಾಗಿದ್ದಾರೆ.

    ಕೆಲ ದಿನಗಳ ಹಿಂದೆಯೂ ಮೋಹನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ಹುಷಾರಾಗಿ ಮನೆಗೆ ಬಂದಿದ್ದವರಿಗೆ ಎರಡು ದಿನಗಳ ಹಿಂದೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಹೀಗಾಗಿ ಮತ್ತೆ ಆಸ್ಪತ್ರೆ ಸೇರಿದ್ದ ಮೋಹನ್ ಅವರು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

    ಕೆಸಿಎನ್ ಕುಟುಂಬ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೆಜ್ಜೆ ಗುರುತು ಮೂಡಿಸಿದ್ದ ಕುಟುಂಬ. ಕೆಸಿಎನ್‌ ಗೌಡರು ಮೊದಲಿಗೆ ಚಿತ್ರ ನಿರ್ಮಾಣ ಆರಂಭಿಸಿದರು. ಆನಂತರ ಅವರ ಮಕ್ಕಳಾದ ಕೆಸಿಎನ್‌ ಚಂದ್ರಶೇಖರ್ ಮತ್ತು ಕೆಸಿಎನ್ ಮೋಹನ್ ಅದನ್ನು ಮುಂದುವರೆಸಿದರು. ಕೆಸಿಎನ್ ಮೋಹನ್ ಭಲೇ ಚತುರ, ರಾಮರಾಜ್ಯದಲ್ಲಿ ರಾಕ್ಷಸರು, ಜಯಸಿಂಹ, ಧರ್ಮಯುದ್ಧ, ಅಂತಿಮ ತೀರ್ಪು ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡಿದರು. ವಿತರಣೆಯನ್ನೂ ಮಾಡಿದರು. ರಾಜ್ಯದ ಹಲವು ಚಿತ್ರಮಂದಿರಗಳ ಮಾಲೀಕರಾಗಿದ್ದರೂ ಅವರು ನವರಂಗ್ ಥಿಯೇಟರ್ ಮಾಲೀಕರಾಗಿ ಪ್ರಸಿದ್ಧರಾಗಿದ್ದರು. ಕನ್ನಡದ ಕ್ಲಾಸಿಕ್ ಕಸ್ತೂರಿ ನಿವಾಸ ಸಿನಿಮಾಗೆ ಕಲರ್ ರೂಪ ಕೊಟ್ಟಿದ್ದರು.

    ಕೆಸಿಎನ್‌ ಮೋಹನ್ ಅವರ ಪತ್ನಿ ಪೂರ್ಣಿಮಾ ಮೋಹನ್ ಅವರು 'ಜೂಲಿ' ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡಿದ್ದರು. ನಟಿ ರಮ್ಯಾ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದರು. ವಿಶೇಷವೆಂದರೆ, ಪೂರ್ಣಿಮಾ ಮೋಹನ್ ಅವರೇ ಈ ಸಿನಿಮಾಗೆ ನಿರ್ದೇಶನ ಮಾಡಿದ್ದರು. ಪತ್ನಿಯ ಸಿನಿಮಾವನ್ನು ಕೆಸಿಎನ್‌ ಮೋಹನ್ ನಿರ್ಮಿಸಿದ್ದರು. 2017ರಲ್ಲಿ ಪತ್ನಿ ಪೂರ್ಣಿಮಾ ನಿಧನದ ನಂತರ ಒಂಟಿಯಾಗಿದ್ದರು.

  • ಪತ್ರಕರ್ತ.. ಕಾದಂಬರಿಕಾರ.. ಕಥೆಗಾರ.. ನಟ.. ರವಿ ಬೆಳಗೆರೆ ಇನ್ನಿಲ್ಲ

    Senior Journalist Ravi Belegere No More

    ಹಾಯ್ ಬೆಂಗಳೂರು.. ಒಂದಾನೊಂದು ಕಾಲದಲ್ಲಿ ಕರ್ನಾಟಕ ಪತ್ರಿಕೋದ್ಯಮದಲ್ಲಿ ಸಂಚಲನ ಮೂಡಿಸಿದ್ದ ಪತ್ರಿಕೆ. ಆ ಪತ್ರಿಕೆಯ ಸೃಷ್ಟಿಕರ್ತ ರವಿ ಬೆಳಗೆರೆ. ಪತ್ರಿಕೆಯ ಯಶಸ್ಸಿನ ಜೊತೆ ಜೊತೆಯಲ್ಲಿಯೇ ರವಿ ಬೆಳಗೆರೆ ವಿವಿಧ ರಂಗಗಳಿಗೂ ಕಾಲಿಟ್ಟರು. ಪತ್ರಕರ್ತನಾಗುವ ಮುನ್ನವೇ ಸಣ್ಣ ಕಥೆಗಳನ್ನು ಅದ್ಭುತವಾಗಿ ಬರೆಯುತ್ತಿದ್ದ ರವಿ, ಕಾದಂಬರಿಗಳಿಗೂ ಕೈ ಹಾಕಿದರು. ಚೆಂದದ ಬರವಣಿಗೆಯ ಜೊತೆ ಜೊತೆಗೆ ಅನುವಾದಗಳಲ್ಲೂ ಹೆಸರು ಮಾಡಿದರು. ಟಿವಿ ಲೋಕಕ್ಕೂ ಕಾಲಿಟ್ಟರು. ಸಿನಿಮಾಗಳಲ್ಲೂ ನಟಿಸಿದರು. ಶಾಲೆಯನ್ನೂ ಕಟ್ಟಿದ್ದರು. ಹೀಗೆ.. ಕಣ್ಣಿಗೆ ಕಂಡ.. ಇಷ್ಟವಾದ ಎಲ್ಲ ರಂಗಗಳಲ್ಲೂ ಕೈ ಆಡಿಸಿದವರು ರವಿ ಬೆಳಗೆರೆ.

    ಹಾಯ್ ಬೆಂಗಳೂರು, ಓ ಮನಸೇ.. ರವಿ ಬೆಳಗೆರೆಯವರ ಎರಡು ಪ್ರಸಿದ್ಧ ಪತ್ರಿಕೆಗಳು. ಹೇಳಿ ಹೋಗು ಕಾರಣ, ಮಾಂಡೋವಿ, ದಿ ಕಂಪೆನಿ ಆಫ್ ವುಮೆನ್, ಪಾಪಿಗಳ ಲೋಕದಲ್ಲಿ, ಒಮರ್ಟಾ, ಸೀರಿಯಲ್ ಕಿಲ್ಲರ್ ರವೀಂದ್ರ ಪ್ರಸಾದ್, ಭೀಮಾ ತೀರದ ಹಂತಕರು, ನೀ ಹೀಂಗ ನೋಡಬ್ಯಾಡ ನನ್ನ, ಇಂದಿರೆಯ ಮಗ ಸಂಜಯ, ಗೋಲಿಬಾರ್, ನಕ್ಷತ್ರ ಜಾರಿದಾಗ, ಖಾಸ್‍ಬಾತ್, ಲವ್‍ಲವಿಕೆ, ಆಟಗಾತಿ, ಸರ್ಪ ಸಂಬಂಧ, ಹಿಮಾಲಯನ್ ಬ್ಲಂಡರ್, 17 ದಿನಗಳ ಕಾರ್ಗಿಲ್ ಯುದ್ಧ, ಟೈಂ ಪಾಸ್, ಪಾಪದ ಹೂವು ಪೂಲನ್, ಬಾಟಂ ಐಟಂ, ರಾಜ ರಹಸ್ಯ, ಗಾಂಧಿ ಹತ್ಯೆ ಮತ್ತು ಗೋಡ್ಸೆ, ಬಾಬಾ ಬೆಡ್‍ರೂಂ ಹತ್ಯಾಕಾಂಡ, ಹಂತಕಿ ಐ ಲವ್ ಯೂ, ರೇಷ್ಮೆ ರುಮಾಲು, ದಂಗೆಯ ದಿನಗಳು, ಡಿ ಕಂಪೆನಿ, ನೀನಾ ಪಾಕಿಸ್ತಾನ, ಅವನೊಬ್ಬನಿದ್ದ ಗೋಡ್ಸೆ, ಮೇಜರ್ ಸಂದೀಪ್ ಹತ್ಯೆ, ಕಾಮರಾಜ ಮಾರ್ಗ, ಹಿಮಾಗ್ನಿ.. ಹೀಗೆ ಬರೆದ ಕಾದಂಬರಿಗಳು, ಅನುವಾದಗಳ ಸಂಖ್ಯೆ ಅಗಾಧ.

    ಈಟಿವಿಗೆ ಕ್ರೈಂ ಡೈರಿ ಮತ್ತು ಎಂದೂ ಮರೆಯದ ಹಾಡುಗಳ ನಿರೂಪಣೆ ಮೂಲಕವೂ ಜನಪ್ರಿಯರಾದ ರವಿ ಬೆಳಗೆರೆ, ಕೆಲವು ಸಿನಿಮಾಗಳಲ್ಲೂ ನಟಿಸಿದರು. ಗಂಡ ಹೆಂಡತಿ, ಮಾದೇಶ, ವಾರಸ್ದಾರ ಅವರು ನಟಿಸಿದ ಕೆಲ ಸಿನಿಮಾಗಳು. ಪ್ರಾರ್ಥನಾ, ರವಿ ಬೆಳಗೆರೆ ಇಷ್ಟ ಪಟ್ಟು ಕಟ್ಟಿದ ಶಾಲೆ.

    ಇವೆಲ್ಲ ಸಾಧನೆ, ಕೀರ್ತಿಗಳೊಂದಿಗೆ ಪ್ರತಿದಿನವೂ ವಿವಾದಗಳನ್ನು ಅಂಟಿಕೊಂಡೇ ಬದುಕಿದ್ದ ರವಿ ಬೆಳಗೆರೆ ರಾತ್ರಿ 12.15ರ ಸುಮಾರಿಗೆ ನಿಧನರಾಗಿದ್ದಾರೆ. ರವಿ ಬೆಳಗೆರೆ ಅಂತ್ಯಕ್ರಿಯೆ ಬನಶಂಕರಿ ಚಿತಾಗಾರದಲ್ಲಿ ನೆರವೇರಲಿದೆ.

  • ಪದ್ಮಭೂಷಣ ವಾಣಿ ಜಯರಾಂ ನಿಧನ

    ಪದ್ಮಭೂಷಣ ವಾಣಿ ಜಯರಾಂ ನಿಧನ

    ಇತ್ತೀಚೆಗಷ್ಟೇ ಪದ್ಮಭೂಷಣ ಪುರಸ್ಕಾರಕ್ಕೆ ಪಾತ್ರರಾಗಿದ್ದ ಖ್ಯಾತ ಗಾಯಕಿ ವಾಣಿ ಜಯರಾಂ (78) ನಿಧನರಾಗಿದ್ದಾರೆ. ಚೆನ್ನೈನ ನುಂಗಂಬಾಕ್ಕಂನ ಹಡ್ಡೋಸ್ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ಅವರ ಹಣೆಗೆ ಗಾಯವಾಗಿದ್ದು, ಇದೊಂದು ನಿಗೂಢ ಸಾವು ಎಂದು ಬಣ್ಣಿಸಲಾಗುತ್ತಿದೆ.ಸಾವಿನ ಕಾರಣ ಗಾಯದ ಕಾರಣಕ್ಕಾಗಿ ನಿಗೂಢವಾಗಿಯೇ ಉಳಿದಿದೆ.

    ಕನ್ನಡ ಸೇರಿದಂತೆ ಅನೇಕ ಭಾಷೆಗಳ ಚಿತ್ರಗಳಿಗೆ ಹಾಡಿದ ಹೆಗ್ಗಳಿಕೆ ಇವರದ್ದು. 1974ರಲ್ಲಿ ಪೋಷ್ಸುಮಂಗಲಿ ಚಿತ್ರದ ಮೂಲಕ ಗಾಯಕಿಯಾಗಿ ಸಿನಿಮಾ ರಂಗ ಪ್ರವೇಶಿಸಿದ್ದ ವಾಣಿ ಜಯರಾಂ, 10000ಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ. ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಕೂಡ ಬಂದಿದೆ. 

    ತಮಿಳುನಾಡಿನವರಾದರೂ ಎಲ್ಲ ಭಾಷೆಗಳಲ್ಲೂ ಖ್ಯಾತಿ ಗಳಿಸಿದ್ದ ವಾಣಿ ಜಯರಾಂ, ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಓಡಿಯಾ, ಗುಜರಾತಿ, ಬಂಗಾಳಿ ಸೇರಿದಂತೆ ನಾನಾ ಭಾಷೆಗಳ ಸಿನಿಮಾಗಳಿಗೆ ಹಾಡಿದ ಹೆಗ್ಗಳಿಕೆ ಇವರದ್ದು. ಕನ್ನಡದಲ್ಲಿಯೂ ಸಾವಿರಕ್ಕೂ ಹೆಚ್ಚು ಗೀತೆಗಳಿಗೆ ಧ್ವನಿ ನೀಡಿದ್ದಾರೆ. ಕನ್ನಡದಲ್ಲಿ ಪುಟ್ಟಣ್ಣ ಕಣಗಾಲ್ ಚಿತ್ರಗಳಿಗೆ ಹೆಚ್ಚು ಹಾಡಿದ್ದವರು.

    ಮೂಡಣದಾ ರವಿ, ಮೂಡಲು ಮಮತೆಯಲಿ..

    ಭಾವವೆಂಬ ಹೂವು ಅರಳಿ, ಗಾನವೆಂಬ ಗಂಧ ಚೆಲ್ಲಿ, ರಾಗವೆಂಬ ಜೇನ ಹೊನಲು ತುಂಬಿ ಹರಿಯಲಿ..

    ನಗು ನೀ ನಗು, ಕಿರು ನಗೆ ನಗು..

    ಈ ಶತಮಾನದ ಮಾದರಿ ಹೆಣ್ಣು..

    ದಾರಿ ಕಾಣದಾಗಿದೆ ರಾಘವೇಂದ್ರನೆ..

    ಸವಿ ನೆನಪುಗಳು ಬೇಕು ಸವಿಯಲೀ ಬದುಕು’..

    ಆ ದೇವರೆ ನುಡಿದ ಮೊದಲ ನುಡಿ..

    ಬಂದಿದೆ ಬದುಕಿನ ಬಂಗಾರದಾ ದಿನ..

    ಜೀವನ ಸಂಜೀವನ..

    ಹಾಡು ಹಳೆಯದಾದರೇನು ಭಾವ ನವ ನವೀನ…

    ಸದಾ ಕಣ್ಣಲಿ ಒಲವಿನಾ  ಕವಿತೆ ಹಾಡುವೆ..

    ಪ್ರಿಯತಮಾ... ಕರುಣೆಯಾ ತೋರೆಯಾ..

    ಬೆಸುಗೆ... ಬೆಸುಗೆ... ಜೀವನವೆಲ್ಲಾ ಸುಂದರ ಬೆಸುಗೆ..

    ಕನಸಲೂ ನೀನೆ ಮನಸಲೂ ನೀನೆ...

    ನಾ ನಿನ್ನ ಮರೆಯಲಾರೆ..

    ಶುಭಮಂಗಳ ಸುಮುಹೂರ್ತವೇ..

    ತೆರೆದಿದೆ ಮನೆ ಓ ಬಾ ಅತಿಥಿ..

    ಮಧುರಂ, ವದನಂ ಮಧುರಂ…

    ನನ್ನೆದೆ ವೀಣೆಯು ಮಿಡಿಯುವುದು..

    ದೇವ ಮಂದಿರದಲ್ಲಿ ದೇವರು ಕಾಣಲೇ ಇಲ್ಲ….

    ವಾಣಿ ಜಯರಾಂ ಅವರ ಖ್ಯಾತ ಹಾಡುಗಳನ್ನು ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ. ಇತ್ತೀಚೆಗಷ್ಟೇ ನಿಧನರಾದ ಕೆ.ವಿಶ್ವನಾಥ್ ಅವರ ಶಂಕರಾಭರಣಂ ಕೂಡಾ ಹಿನ್ನೆಲೆ ಗಾಯನ ಇವರದ್ದೇ..

    ವಾಣಿ ಜಯರಾಂ ಗಝಲ್,  ಭಜನ್,  ಭಕ್ತಿಗೀತೆಗಳ ಗಾಯನದಲ್ಲೂ ಮುಂಚೂಣಿಯಲ್ಲಿದ್ದಾರೆ.  ಮಲಯಾಳಂ, ತಮಿಳು, ಹಿಂದಿ ಭಾಷೆಗಳಲ್ಲಿ ಅವರ ಕವನ ಸಂಕಲನಗಳು ಪ್ರಕಟವಾಗಿವೆ.  'ಪಂಡಿತ್ ಬಿರ್ಜು ಮಹಾರಾಜ್'ರೊಂದಿಗೆ ಸೇರಿ  ಗೀತ ಗೋವಿಂದವನ್ನು ಕಥಕ್‌ಗೆ ಅಳವಡಿಸಿರುವುದು ಅವರ ಗಮನಾರ್ಹ ಸಾಧನೆ.  ಚೆನ್ನೈ ನಗರದಲ್ಲಿ ಇವರು ನಡೆಸುತ್ತಿದ್ದ 'ಸಂಗೀತ ಸಂಶೋಧನಾ ಕೇಂದ್ರ' ವರ್ಷವಿಡೀ 'ರಸಗ್ರಹಣ ಶಿಬಿರ' ಮತ್ತು 'ವಿಚಾರ ಸಂಕೀರ್ಣ'ಗಳನ್ನು ಏರ್ಪಡಿಸುತ್ತದೆ. ಶಾಲಾ ಮಕ್ಕಳಿಗಾಗಿ ವಿಶೇಷ ಶಿಬಿರಗಳಿವೆ.  ಸಂಗೀತದಿಂದ ಕ್ಯಾನ್ಸರ್ ರೋಗಿಗಳ ನೋವು ನಿವಾರಿಸುವ ಕುರಿತು  ಸಹಾ ಶಿಬಿರಗಳನ್ನು ಆಯೋಜಿಸಿದ್ದಾರೆ. ಸಂಗೀತ ಮೌಲ್ಯಗಳ ಕುರಿತ ವಿದ್ವತ್ಪೂರ್ಣ ಉಪನ್ಯಾಸಗಳಿಗೆ ಸಹಾ ಅವರು ಪ್ರಸಿದ್ಧಿ ಪಡೆದಿದ್ದಾರೆ.

    ತಮಿಳಿನಲ್ಲಿ ‘ಅಪೂರ್ವ ರಾಗಂಗಳ್’, ‘ತೆಲುಗಿನಲ್ಲಿ ಶಂಕರಾಭರಣಂ’, ‘ಸ್ವಾತಿ ಕಿರಣಂ’ ಚಿತ್ರಗಳಲ್ಲಿನ ಹಿನ್ನಲೆಗಾಯನಕ್ಕೆ ರಾಷ್ಟ್ರಪ್ರಶಸ್ತಿ, ಹಲವಾರು ರಾಜ್ಯಗಳ ಶ್ರೇಷ್ಠ ಗಾಯಕಿ ಪ್ರಶಸ್ತಿ, ಸಂಗೀತ ಸಂಮಾನ್, ಹಿಂದಿ ಭಾಷೆಯನ್ನೊಳಗೊಂಡಂತೆ ಹಲವು ಭಾಷೆಗಳ ಚಿತ್ರಗಳ ಗಾಯನಕ್ಕಾಗಿ ಫಿಲಂ ಫೇರ್ ಪ್ರಶಸ್ತಿಗಳನ್ನೂ ಪಡೆದಿದ್ದಾರೆ.

  • ಬಪ್ಪಿ ಲಹರಿ ಕನ್ನಡದಲ್ಲಿ ಸಂಗೀತ ನೀಡಿದ ಚಿತ್ರಗಳು..

    ಬಪ್ಪಿ ಲಹರಿ ಕನ್ನಡದಲ್ಲಿ ಸಂಗೀತ ನೀಡಿದ ಚಿತ್ರಗಳು..

    ಬಪ್ಪಿ ಲಹರಿ. ಹಿಂದಿಯವರಿಗೆ ಈತ ಸ್ಟಾರ್ ಎನಿಸಿದ್ದು ಐ ಆ್ಯಮ್ ಎ ಡಿಸ್ಕೋ ಡಾನ್ಸರ್ ಹಾಡಿನಿಂದ.. ಆಮೇಲಿನದ್ದು ಇತಿಹಾಸ. ಮೈತುಂಬಾ ಬಂಗಾರ ಹಾಕಿಕೊಂಡಿರುತ್ತಿದ್ದ ಬಪ್ಪಿ ಲಹರಿ, ಚಿನ್ನವೆಂದರೆ ಏನೋ ಮೋಹ. ಹೊಸ ಪ್ರತಿಭೆಗಳ ಹಾಡುಗಾರಿಕೆ ಇಷ್ಟವಾದಾಗ ಹಿಂದಿನ ಕಾಲದ ರಾಜರಂತೆ ಕೊರಳಲ್ಲಿದ್ದ ಸರಗಳನ್ನೇ ತೆಗೆದುಕೊಟ್ಟ ಉದಾಹರಣೆಗಳೂ ಇವೆ. ಇಂತಹ ಬಪ್ಪಿ ಲಹರಿ ಕನ್ನಡದಲ್ಲಿ ಸಂಗೀತ ನಿರ್ದೇಶಕರಾಗಿಯೇ ಹೆಚ್ಚು ಪರಿಚಿತ.

    ಬಪ್ಪಿ ಲಹರಿಯವರನ್ನು ಕನ್ನಡಕ್ಕೆ ತಂದವರು ಕುಳ್ಳ ದ್ವಾರಕೀಶ್. ಆಫ್ರಿಕಾದಲ್ಲಿ ಶೀಲ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಬಂದ ಬಪ್ಪಿ,

    ಶೀಲಾ ಶೀಲಾ ಶೀಲಾ.. ಎಂಬ ಟೈಟಲ್ ಸಾಂಗ್ ಶೀಲ ಓ ಮೈ ಶೀಲ.. ರೊಮ್ಯಾಂಟಿಕ್ ಸಾಂಗ್ ಮೂಲಕ ರೋಮಾಂಚನ ಹುಟ್ಟಿಸಿದರು.

    ವಿಷ್ಣುವರ್ಧನ್ ಅಭಿನಯದ ಕೃಷ್ಣಾ ನೀ ಬೇಗನೆ ಬಾರೋ ಚಿತ್ರದ

    ಆಲಾರೇ ಆಲಾರೆ.. ಮುಕುಂದ ಮುರಾರೇ..

    ಮಮ್ಮಿ ಮಮ್ಮಿ ಮಮ್ಮಿ.. ನನ್ನ ಮುದ್ದು ಮಮ್ಮಿ..

    ಮಮ್ಮಯ್ಯಾ ಮಮ್ಮಯ್ಯಾ..

    ವಿಷ್ಣು ಅಭಿನಯದ ಇನ್ನೊಂದು ಚಿತ್ರ ಪೊಲೀಸ್ ಮತ್ತು ದಾದಾ ಚಿತ್ರದ

    ನಾನು ಗರಂ ಗರಂ.. ನೀನು ಗರಂ ಗರಂ..

    ನನ್ನ ಮನದಲಿ ಆತುರಾ.. ನಿನ್ನ ಮನದಲಿ ಕಾತುರಾ..

    ಹಾಡುಗಳೂ ಹಿಟ್ ಆಗಿದ್ದವು.

    ಕಡೆಯದಾಗಿ ನೀನಾಸಂ ಸತೀಶ್ ಅವರ ಲವ್ ಇನ್ ಮಂಡ್ಯ ಚಿತ್ರದಲ್ಲಿ ಹಾಡಿದ್ದರು. ಅದೂ ಸೂಪರ್ ಹಿಟ್ ಆಗಿತ್ತು. ಅನೂಪ್ ಸಿಳೀನ್ ನಿರ್ದೇಶನದಲ್ಲಿ ಹಾಡಿದ್ದ

    ಕರೆಂಟು ಹೋದ ಟೈಮಲಿ ಹುಡುಗೀ ಇದ್ಲು ಮಗ್ಲಲಿ.. ಹಾಡು ಥ್ರಿಲ್ ಕೊಟ್ಟಿತ್ತು.

  • ಬುಲೆಟ್ ಪ್ರಕಾಶ್ ನಿಧನ

    bullet prakash no more

    ಸ್ಯಾಂಡಲ್ ವುಡ್ ಹಾಸ್ಯ ನಟ ಬುಲೆಟ್ ಪ್ರಕಾಶ್ ನಿಧನರಾಗಿದ್ದಾರೆ. ಅವರ ಆರೋಗ್ಯ ಸ್ಥಿತಿ ಅತ್ಯಂತ ಗಂಭಿರವಾಗಿತ್ತು. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಆಸ್ಪತ್ರೆ ಸೇರಿದ್ದ ಬುಲೆಟ್ ಪ್ರಕಾಶ್ ಅವರಿಗೆ ಕಿಡ್ನಿ ವೈಫಲ್ಯ, ಉಸಿರಾಟ ಸಮಸ್ಯೆಯೂ ಸೇರಿ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಪೋರ್ಟಿಸ್ ಆಸ್ಪತ್ರೆಯಲ್ಲಿ ಕಳೆದ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಬುಲೆಟ್ ಪ್ರಕಾಶ್ ವಿಧಿವಶರಾಗಿದ್ದಾರೆ. 

    2 ವರ್ಷಗಳ ಹಿಂದೆ ಆಪರೇಷನ್ ಮಾಡಿಸಿಕೊಂಡ ನಂತರ ಬುಲೆಟ್ ಪ್ರಕಾಶ್ ಸಣ್ಣಗಾದರಾದರೂ, ಚೇತರಿಸಿಕೊಳ್ಳಲೇ ಇಲ್ಲ. ಭಾರೀ ದೇಹ ಹೊಂದಿದ್ದ ಬುಲೆಟ್ ಪ್ರಕಾಶ್ ಸಣ್ಣಗಾಗಲು ಮಾಡಿಸಿಕೊಂಡ ಬೇರಿಯಾಟ್ರಿಕ್ ಸರ್ಜರಿ, ಅವರ ದೇಹ ವ್ಯವಸ್ಥೆಯನ್ನೇ ಅಸ್ತವ್ಯಸ್ತಗೊಳಿಸಿತ್ತು. 

    ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಸ್ಯನಟನಾಗಿ ಮಿಂಚಿದ್ದ ಬುಲೆಟ್ ಪ್ರಕಾಶ್ ಅವರಿಗೆ 44 ವರ್ಷವಷ್ಟೇ ವಯಸ್ಸು. ಏಪ್ರಿಲ್ 2ರಂದು ಅವರ ಹುಟ್ಟುಹಬ್ಬವಿತ್ತು. ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ ಇನ್ನೂ ಕೆಲವರು ಪ್ರಕಾಶ್ ಹೆಸರಿನ ಕಲಾವಿದರಿದ್ದರು. ಆಗ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸುತ್ತಿದ್ದ ಕಾರಣಕ್ಕೆ, ಬುಲೆಟ್ ಪ್ರಕಾಶ್ ಎಂದೇ ನಾಮಕರಣ ಮಾಡಲಾಯ್ತು. ಶಿವಣ್ಣ, ಸುದೀಪ್, ಪುನೀತ್, ಗಣೇಶ್, ದುನಿಯಾ ವಿಜಿ, ಪ್ರೇಮ್ ಸೇರಿದಂತೆ ಕನ್ನಡದ ಬಹುತೇಕ ಎಲ್ಲ ಸ್ಟಾರ್ ನಟರ ಜೊತೆಯಲ್ಲೂ ನಟಿಸಿದ್ದರು ಬುಲೆಟ್ ಪ್ರಕಾಶ್. ದರ್ಶನ್ ಜೊತೆ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಐತಲಕ್ಕಡಿ ಚಿತ್ರದಲ್ಲಿ ರಂಗಾಯಣ ರಘು ಜೊತೆ ಹೀರೋ ಆಗಿಯೂ ನಟಿಸಿದ್ದ ಬುಲೆಟ್ ಪ್ರಕಾಶ್, ಪತ್ನಿ ಮತ್ತು ಮಗ ರಕ್ಷಕ್ನನ್ನು ಅಗಲಿದ್ದಾರೆ. ಆಪರೇಷನ್ ನಂತರ ಸಿನಿಮಾದಲ್ಲಿ ಅವಕಾಶ ಸಿಗದೆ ಮಾನಸಿಕ ಖಿನ್ನತೆಗೂ ಗುರಿಯಾಗಿದ್ದ ಬುಲೆಟ್ ಪ್ರಕಾಶ್ ಇನ್ನು ನೆನಪು ಮಾತ್ರ.

    Also Read :-

    Actor Bullet Prakash Hospitalized, Condition Critical

  • ಮನ್ ದೀಪ್ ರಾಯ್ ಮತ್ತು ನಾಗ್ ಕುಟುಂಬ

    ಮನ್ ದೀಪ್ ರಾಯ್ ಮತ್ತು ನಾಗ್ ಕುಟುಂಬ

    ಮನ್ ದೀಪ್ ರಾಯ್. ಇವರು ನಟಿಸಿದ ಚಿತ್ರಗಳ ಸಂಖ್ಯೆ ಅವರೇ ಹೇಳಿಕೊಂಡಿದ್ದಂತೆ ಸಾವಿರಕ್ಕೂ ಹೆಚ್ಚು. ಬೆಂಗಳೂರಿನ ಕಾವಲ್ ಭೈರಸಂದ್ರದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಮೃತಪಟ್ಟಾಗ ಅವರ ವಯಸ್ಸಿನ್ನೂ 73. ಆರೋಗ್ಯವಾಗಿಯೇ ಇದ್ದ ಮನ್ ದೀಪ್ ರಾಯ್ ಅವರಿಗೆ ಇದೇ ತಿಂಗಳು ಒಮ್ಮೆ ಹೃದಯಾಘಾತವಾಗಿತ್ತು. 9ನೇ ವಯಸ್ಸಿಗೆ ರಂಗಭೂಮಿ ಪ್ರವೇಶ ಮಾಡಿದ ರಾಯ್, ಶಂಕರ್ ನಾಗ್ ಗರಡಿಯ ಹುಡುಗ. ಅನಂತ್ ನಾಗ್ ಅವರೇ ಮನ್ ದೀಪ್ ರಾಯ್ ಶಂಕರನಂತೆಯೇ ಇವನೂ ನನಗೆ ಇನ್ನೊಬ್ಬ ತಮ್ಮ ಎನ್ನುತ್ತಿದ್ದರು.

    ಡಾ.ರಾಜ್, ಶಂಕರ್, ಅನಂತ್, ವಿಷ್ಣು, ಅಂಬಿ, ಪ್ರಭಾಕರ್ ಅವರಿಂದ ಶುರುವಾದ ಜರ್ನಿ ಶಿವಣ್ಣ, ರವಿಚಂದ್ರನ್.. ನಂತರ ಈಗಿನ ಜನರೇಷನ್ ನಾಯಕರ ಜೊತೆಯಲ್ಲಿಯೂ ಮುಂದುವರೆದಿತ್ತು. ಮುಂಬಯಿನವರಾದ ಮನ್ ದೀಪ್ ರಾಯ್ ಅವರಿಗೆ ಕನ್ನಡ ಚೆನ್ನಾಗಿತ್ತಾದರೂ, ದೊಡ್ಡ ದೊಡ್ಡ ಪಾತ್ರಗಳು ಸಿಗಲಿಲ್ಲ ಎಂಬುದು ಕೂಡಾ ಅಷ್ಟೇ ಸತ್ಯ. ಆದರೆ ಸಿಕ್ಕ ಪಾತ್ರಗಳಲ್ಲಿಯೇ ಛಾಪು ಒತ್ತಿದ ಕಲಾವಿದ ರಾಯ್. ಚಿತ್ರರಂಗಕ್ಕೆ ಬರುವ ಮುನ್ನ ಐಬಿಎಂ, ಟಿಸಿಎಸ್`ಗಳಲ್ಲಿ ಕೆಲಸ ಮಾಡುತ್ತಿದ್ದರು. ಮಿಂಚಿನ ಓಡ ಅವರ ಮೊದಲ ಚಿತ್ರ.

    ಆಕಸ್ಮಿಕ, ಅಂತಿಮ ಘಟ್ಟ, ಚಲಿಸುವ ಮೋಡಗಳು, ಅಪೂರ್ವ ಸಂಗಮ, ಅಯ್ಯ, ಆಸೆಗೊಬ್ಬ ಮೀಸೆಗೊಬ್ಬ, ಆಪ್ತರಕ್ಷಕ, ಗಜಪತಿ ಗರ್ವಭಂಗ, ಪ್ರೀತ್ಸೋದ್ ತಪ್ಪಾ, ಏಳು ಸುತ್ತಿನ ಕೋಟೆ, ಬಾಡದ ಹೂವು, ರಾಜಕುಮಾರ.. ಹೀಗೆ ನಟಿಸಿದ್ದ ಚಿತ್ರಗಳು ಅಜರಾಮರ. ಪುಷ್ಪಕ ವಿಮಾನ ಚಿತ್ರ ಅವರಿಗೆ ಭಾರಿ ಹೆಸರು ತಂದುಕೊಟ್ಟ ಚಿತ್ರ. ಬೆಳದಿಂಗಳ ಬಾಲೆಯ ಆ ಮೂಗು.. ಆ ಮೂಗು.. ಡೈಲಾಗ್ ಕೇಳಿದವರ ತುಟಿ ಇವತ್ತಿಗೂ ಅರಳುತ್ತದೆ.

    ಮುಂಬೈನಲ್ಲೇ ಹುಟ್ಟಿ ಬೆಳೆದಿದ್ದ ಮನ್ ದೀಪ್ ರಾಯ್ ಅವರಿಗೆ ಮಿಂಚಿನ  ಓಟ ಚಿತ್ರ ಮಾಡಿದಾಗ ಕನ್ನಡ ಬರುತ್ತಿರಲಿಲ್ಲ. ಆದರೆ ಆಮೇಲೆ ಕನ್ನಡವನ್ನು ಇಷ್ಟಪಟ್ಟು ಕಲಿತ ರಾಯ್ ಕನ್ನಡವನ್ನು ಅನ್ನದ ಭಾಷೆಯಾಗಿಸಿಕೊಂರು. ಮುಮ್ಮೂಟಿ, ಮೋಹನ್ ಲಾಲ್ ಮಲಯಾಳಂನಲ್ಲಿಯೂ ನಟಿಸಿದ್ದ ಮನ್ ದೀಪ್ ರಾಯ್, ಕಿರುತೆರೆಯ ಧಾರಾವಾಹಿಗಳು ಹೆಜ್ಜೆ ಗುರುತು ಮೂಡಿಸಿದರು. ಅವರಿಗೆ ಒಬ್ಬಳೇ ಮಗಳು. ಆಕ್ಷತಾ ರಾಯ್.

  • ಮಿಮಿಕ್ರಿ ರಾಜಗೋಪಾಲ್ ನಿಧನ

    mimickery rajgopal no more

    ಕಳೆದ 4 ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಹಾಸ್ಯನಟರಾಗಿ ಗುರುತಿಸಿಕೊಂಡಿದ್ದ ಕಲಾವಿದ ಮಿಮಿಕ್ರಿ ರಾಜಗೋಪಾಲ್ ವಿಧಿವಶರಾಗಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು. ಕೊರೊನಾ ಶುರುವಾದಾಗಿನಿಂತ ಆಗುತ್ತಿರುವ ಸರಣಿ ಸಾವುಗಳಿಗೆ ಮಿಮಿಕ್ರಿ ರಾಜಗೋಪಾಲ್ ನಿಧನ ಹೊಸ ಸೇರ್ಪಡೆ. ಕೆಂಗೇರಿಯಲ್ಲಿರುವ ತಮ್ಮ ನಿವಾಸದಲ್ಲಿ ರಾಜಗೋಪಾಲ್ ಕೊನೆಯುಸಿರೆಳೆದಿದ್ದಾರೆ. ಕೆಂಗೇರಿ ಬಳಿ ಸರ್ಕಾರವೇ ನಿರ್ಮಿಸಿದ್ದ ಬಿಡಿಎ ವಸತಿಗೃಹದಲ್ಲಿ ವಾಸವಾಗಿದ್ದ ರಾಜಗೋಪಾಲ್, ಅಸ್ತಮಾ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು.

    ಮಿಮಿಕ್ರಿ ಮೂಲಕವೇ ಗುರುತಿಸಿಕೊಂಡಿದ್ದ ರಾಜಗೋಪಾಲ್ ಕಲ್ಪನಾ ಅವರ ವಾಯ್ಸ್‍ನ್ನು ಅದ್ಭುತವಾಗಿ ಅನುಕರಿಸುತ್ತಿದ್ದರು. ಅಂಬರೀಷ್, ವಿಷ್ಣುವರ್ಧನ್, ಪ್ರಭಾಕರ್ ಸೇರಿದಂತೆ ಹಲವರ ಚಿತ್ರಗಳಲ್ಲಿ ನಟಿಸಿದ್ದ ಮಿಮಿಕ್ರಿ ರಾಜಗೋಪಾಲ್, ಸಾಯಿಪ್ರಕಾಶ್ ಚಿತ್ರಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದರು. 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರೂ, ಆರ್ಥಿಕವಾಗಿ ಪ್ರಬಲರಾಗಿಯೇನೂ ಇರಲಿಲ್ಲ.

  • ಮೈಕೇಲ್ ಮಧು ನಿಧನ

    micheal madhus last journey

    ಮೈಕೇಲ್ ಮಧು. ನೆನಪಿದೆ ಅಲ್ವಾ..? ಸೂರ್ಯವಂಶದಲ್ಲಿ ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು ಯೂನಿಫಾರ್ಮ್ ದಾನ ಮಾಡೋದು ಇವರಿಗೇನೇ.. ಸ್ನೇಹಲೋಕ, ಎ, ಎಕೆ 47, ಮಿನುಗುತಾರೆ.. ಮುಂತಾದ ಹಲವು ಚಿತ್ರಗಳಲ್ಲಿ ನಟಿಸಿದ್ದ ಮೈಕೆಲ್ ಮಧು, ಕಾಶಿನಾಥ್ ಗ್ಯಾಂಗ್‍ನವರು. ಕಾಶಿನಾಥ್ ಚಿತ್ರಗಳಲ್ಲಿ ಮಧು ಅವರಿಗೊಂದು ಪಾತ್ರ ಖಾಯಂ ಇರುತ್ತಿತ್ತು.

    ನೋಡೋಕೆ ಕಪ್ಪು ಬಣ್ಣ. ಒಳ್ಳೆಯ ಡ್ಯಾನ್ಸರ್ ಆಗಿದ್ದ ಮಧು, ಮೈಕೆಲ್ ಜಾಕ್ಸನ್ ಅವರಂತೆ ಡಾನ್ಸ್ ಮಾಡ್ತಾರೆ ಅನ್ನೋ ಕಾರಣಕ್ಕೆ ಮೈಕೆಲ್ ಮಧು ಆಗಿದ್ದರು. ಆದರೆ.. ಕೊನೆಯವರೆಗೂ ಅವರಿಗೆ ತಮ್ಮ ನೃತ್ಯ ಪ್ರತಿಭೆ ತೋರಿಸುವ ಅವಕಾಶ ಸಿಕ್ಕಲೇ ಇಲ್ಲ.

    55 ವರ್ಷ ವಯಸ್ಸಾಗಿದ್ದ ಮಧು, ಹನುಮಂತ ನಗರದಲ್ಲಿವಾಸವಿದ್ದರು. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಹೃದಯಾಘಾತಕ್ಕೊಳಗಾದ ಮೈಕೆಲ್ ಮಧು ಅವರನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸುವಷ್ಟರಲ್ಲಿ ಉಸಿರು ನಿಂತಿದೆ.

  • ಮೊತ್ತ ಮೊದಲ ಬಾರಿಗೆ ಕೊಟ್ಟ ಮಾತು ತಪ್ಪಿದ ಎಸ್‍ಪಿಬಿ

    SPB Broke Promise For The First Time

    ಎಸ್‍ಪಿ ಬಾಲಸುಬ್ರಹ್ಮಣ್ಯಂ ಇನ್ನಿಲ್ಲ. ವೃತ್ತಿಜೀವನದಲ್ಲಿ ಅದು ವೈಯಕ್ತಿಕವೇ ಆಗಲಿ, ವೃತ್ತಿಪರವೇ ಆಗಿರಲಿ.. ಎಸ್‍ಪಿಬಿ ಎಂದಿಗೂ ಕೊಟ್ಟ ಮಾತು ತಪ್ಪಿದವರಲ್ಲ. ಆದರೆ ಇದೇ ಮೊದಲ ಬಾರಿ ಎಸ್‍ಪಿಬಿ ಕೊಟ್ಟ ಮಾತು ತಪ್ಪಿ ನಡೆದಿದ್ದಾರೆ.

    ಆಗಸ್ಟ್ 5ರಂದು ಕೊರೊನಾ ಸೋಂಕಿನಿಂದಾಗಿ ಆಸ್ಪತ್ರೆ ಸೇರಿದ್ದ ಬಾಲಸುಬ್ರಹ್ಮಣ್ಯಂ ಆ ದಿನ ತಾವು ಸೋಂಕಿನಿಂದ ಗುಣಮುಖನಾಗಿ ಬರುತ್ತೇನೆ. ಕೊರೊನಾ ಭಯಪಡುವ ಕಾಯಿಲೆಯೇನೂ ಅಲ್ಲ ಎಂದಿದ್ದರು. ಅಫ್‍ಕೋರ್ಸ್, ಕೊರೊನಾವನ್ನೇನೋ ಎಸ್‍ಪಿಬಿ ಸೋಲಿಸಿಬಿಟ್ಟರು. ಆದರೆ.. ಶ್ವಾಸಕೋಶದ ತೊಂದರೆಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ.

    ಎಸ್‍ಪಿಬಿ ಅವರಿಗೆ ಇಸಿಎಂಒ ಚಿಕಿತ್ಸೆ ನೀಡಲಾಗುತ್ತಿತ್ತು. ಆ ಚಿಕಿತ್ಸೆಯಲ್ಲಿ ಎಸ್‍ಪಿಬಿ ಅವರ ಮೂಳೆಗಳಿಂದ ಮಜ್ಜೆಯನ್ನು ತೆಗೆದು ಚಿಕಿತ್ಸೆ ನೀಡಬೇಕಿತ್ತು. ವೈದ್ಯರು ಮೊದಲೇ ಎಚ್ಚರಿಕೆ ನೀಡಿದ್ದರು. ಅಕಸ್ಮಾತ್ ಆ ವೇಳೆ ಮಜ್ಜೆಯ ಬದಲು ರಕ್ತ ಬಂದರೆ ಉಳಿಸೋಕೆ ಸಾಧ್ಯವಿಲ್ಲ ಎಂದಿದ್ದರು. ಕುಟುಂಬಸ್ಥರ ಬಳಿಯೂ ಅನ್ಯ ಮಾರ್ಗ ಇರಲಿಲ್ಲ. ಹೀಗಾಗಿ ಆ ಚಿಕಿತ್ಸೆಗೆ ಒಪ್ಪಿಗೆ ನೀಡಿದ್ದರು.

    ಕೋಟ್ಯಂತರ ಹೃದಯಗಳ ಪ್ರಾರ್ಥನೆ ಫಲಿಸಲಿಲ್ಲ. ಚಿಕಿತ್ಸೆಯಲ್ಲಿ ಮೂಳೆಯೊಳಗೆ ಮಜ್ಜೆಯನ್ನು ತೆಗೆಯಲು ಪ್ರಯತ್ನಿಸಿದಾಗ ಮಜ್ಜೆ ಬರಲಿಲ್ಲ. ಬಂದಿದ್ದು ರಕ್ತ. ಹೀಗಾಗಿ ಎಸ್‍ಪಿಬಿ ಅವರನ್ನು ಉಳಿಸಿಕೊಳ್ಳುವ ಕೊನೆಯ ಪ್ರಯತ್ನವೂ ವಿಫಲವಾಗಿ ಹೋಯ್ತು.

    ವಾಪಸ್ ಬರುತ್ತೇನೆ. ಅಭಿಮಾನಿಗಳೇ ಆತಂಕ ಪಡುವ ಅಗತ್ಯ ಇಲ್ಲ ಎಂದಿದ್ದ ಎಸ್‍ಪಿಬಿ, ವಾಪಸ್ ಬರಲೇ ಇಲ್ಲ. ಅಷ್ಟೇ ಅಲ್ಲ, ಸರಿರಾತ್ರಿಯಾದರೂ ಸರಿ, ಇಳಯರಾಜ ಕರೆದರೆ ಓಡೋಡಿ ಹೋಗುತ್ತಿದ್ದ ಎಸ್‍ಪಿಬಿ, ಇದೇ ಮೊದಲ ಬಾರಿಗೆ ಇಳಯರಾಜ ಕರೆದಾಗಲೂ ಎದ್ದೇಳಲಿಲ್ಲ. ಎಸ್‍ಪಿಬಿ ಮೊತ್ತ ಮೊದಲ ಬಾರಿಗೆ ಕೊಟ್ಟ ಮಾತು ತಪ್ಪಿಬಿಟ್ಟರು.

  • ಯಾರಿಗೂ ಹೇಳದೇ ಹೋದರು ಸದಾಶಿವ ಬ್ರಹ್ಮಾವರ್

    veteran actor bramhavar no more

    ಅಸಹಾಯಕ ಅಜ್ಜ, ನಿಷ್ಟಾವಂತ ಮನೆ ಆಳು, ದೇವರ ಪೂಜಾರಿ, ಸ್ವಾತಂತ್ರ್ಯ ಹೋರಾಟಗಾರ, ವೃತ್ತಿ ನಿಷ್ಠ ಮೇಷ್ಟ್ರು, ಪ್ರಾಮಾಣಿಕ ಅಪ್ಪ... ಇಂತಹ ರೋಲ್‍ಮಾಡೆಲ್ ಪಾತ್ರಗಳಿಗೆ ಜೀವ ತುಂಬಿದ್ದ ಸದಾಶಿವ ಬ್ರಹ್ಮಾವರ್, ಯಾರಿಗೂ ಹೇಳದೆಯೇ ಹೋಗಿಬಿಟ್ಟಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಬ್ರಹ್ಮಾವರ್, ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರ ಬಯಕೆಯಂತೆಯೇ, ಅವರ ಕುಟುಂಬಸ್ಥರು ಯಾರಿಗೂ ತಿಳಿಸದೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ತಮ್ಮ ಸಾವಿನ ಸುದ್ದಿ, ತಮ್ಮ ಕುಟುಂಬದವರ ಹೊರತು ಯಾರಿಗೂ ಹೇಳಬಾರದು ಎಂದು ಹೇಳಿದ್ದರಂತೆ ಬ್ರಹ್ಮಾವರ್. ಹೀಗಾಗಿ ಅಂತ್ಯಕ್ರಿಯೆಯನ್ನು ಅವರ ಕುಟುಂಬದವರು ಮಾತ್ರವೇ ನೆರವೇರಿಸಿದ್ದಾರೆ.

    400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಬ್ರಹ್ಮಾವರ್, ಡಾ.ರಾಜ್, ವಿಷ್ಣು, ಅಂಬಿ, ರವಿಚಂದ್ರನ್, ಶಿವರಾಜ್‍ಕುಮಾರ್ ಸೇರಿದಂತೆ ಮೂರು ತಲೆಮಾರಿನ ಸ್ಟಾರ್‍ಗಳೊಂದಿಗೆ ನಟಿಸಿದ್ದ ಹಿರಿಯ ಕಲಾವಿದ. 90 ವರ್ಷ ವಯಸ್ಸು ದಾಟಿದ್ದ ಬ್ರಹ್ಮಾವರ್, ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದರು.

    ಕೊನೆಗಾಲದಲ್ಲಿ ಮಕ್ಕಳಿಂದ ದೂರವಾಗಿದ್ದ ಬ್ರಹ್ಮಾವರ್ ಅವರಿಗೆ ನೆರವು ನೀಡಲು ಶಿವರಾಜ್‍ಕುಮಾರ್, ಸುದೀಪ್ ಮುಂದಾಗಿದ್ದರಾದರೂ, ಸ್ವಾಭಿಮಾನಿ ಬ್ರಹ್ಮಾವರ್ ಅದನ್ನು ನಿರಾಕರಿಸಿದ್ದರು. ಅಭಿಮಾನಿಗಳು ಕೊಡಲು ಬಂದಿದ್ದ ನೆರವನ್ನೂ ದೂರ ತಳ್ಳಿದ್ದರು. ಟೆಕ್ನಿಷಿಯನ್ ದೇವದತ್ತ, ಆಸರೆ ನೀಡಿದ್ದರು. ಅವರಿಂದಲೂ ದೂರವಾಗಿದ್ದ ಬ್ರಹ್ಮಾವರ್, ಮಕ್ಕಳೊಂದಿಗೇ ಹೊಂದಿಕೊಂಡಿದ್ದರು. 

    ಸಿನಿಮಾಗಳಲ್ಲಿ ಹೇಗೆ ಅಸಹಾಯಕರಾದರೂ ಪ್ರಾಮಾಣಿಕ, ಸ್ವಾಭಿಮಾನದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರೋ, ನಿಜಜೀವನದಲ್ಲಿಯೂ ಹಾಗೆಯೇ ಬದುಕಿ ಎಲ್ಲರನ್ನೂ ಅಗಲಿದ್ದಾರೆ ಬ್ರಹ್ಮಾವರ್.

  • ರಾಜ್ ಕೊಟ್ಟ ಜವಾಬ್ದಾರಿ ಮುಗಿಸಿದರೂ.. ಅವರ ಆಸೆ ಹಾಗೆಯೇ ಉಳಿಯಿತು..

    ambi fullfills dr raj's dream

    ಕಲಾವಿದರ ಸಂಘಕ್ಕೊಂದು ಕಟ್ಟಡ ಬೇಕು. ಅದು ಡಾ.ರಾಜ್ಕುಮಾರ್ ಅವರ ಕನಸು. ತಮ್ಮ ಕನಸನ್ನು ನನಸು ಮಾಡುವ ಹೊಣೆಯನ್ನು ಅವರು ಅಂಬಿಗೆ ವಹಿಸಿದ್ದರು. ಕೆಲವೇ ತಿಂಗಳ ಹಿಂದೆ ಕಲಾವಿದರ ಸಂಘದ ಕಟ್ಟಡ ಉದ್ಘಾಟನೆಗೊಂಡಿತ್ತು. ಭಾರತೀಯ ಚಿತ್ರರಂಗದ ಸ್ಟಾರ್ಗಳನ್ನೆಲ್ಲ ಕರೆಸಿಕೊಂಡು ಕಟ್ಟಡ ತೋರಿಸಿ ಸಂಭ್ರಮಿಸಿದ್ದರು ಅಂಬಿ.

    ಅದರ ಜೊತೆಗೆ ಅಂಬರೀಷ್ ಅವರ ಕನಸು ಇನ್ನೊಂದಿತ್ತು. ಆ ಕಟ್ಟಡಕ್ಕೆ ಡಾ.ರಾಜ್ಕುಮಾರ್ ಭವನ ಎಂದು ಹೆಸರಿಡಬೇಕು ಎನ್ನುವ ಕನಸು ಕಂಡಿದ್ದರು ಅಂಬಿ. ಅದು ನವೆಂಬರ್ 25ರಂದು ನನಸಾಗಬೇಕಿತ್ತು. ನಾಮ ಫಲಕ ಸಿದ್ಧವಾಗಿತ್ತು. ಎಲ್ಲವೂ ಸಿದ್ಧವಾಗಿರುವಾಗಲೇ ಇಹಲೋಕ ತ್ಯಜಿಸಿ ನಡೆದುಬಿಟ್ಟರು ಅಂಬರೀಷ್.