` makara sankranthi, - chitraloka.com | Kannada Movie News, Reviews | Image

makara sankranthi,

  • ಅಬ್ಬಾ.. ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ತು. ಪೊಗರು ಯಾವಾಗ..?

    pogaru to release on makara sankranthi

    ಪೊಗರು ರಿಲೀಸ್ ಯಾವಾಗ..? ಈ ಪ್ರಶ್ನೆ ಪೊಗರು ಶುರುವಾದಾಗಿನಿಂದಲೂ ಇತ್ತು. ಈಗಲೂ ಇದೆ. ಪೊಗರು ಶುರುವಾದ ಕೂಡಲೇ ಅಭಿಮಾನಿಗಳು ಧ್ರುವ ಸರ್ಜಾಗೆ ಒಂದು ಷರತ್ತು ಹಾಕಿದ್ದರು. ವಿಳಂಬ ಮಾಡಬೇಡಿ ಎಂದು ಪ್ರೀತಿಯಿಂದ ಒತ್ತಾಯಿಸಿದ್ದರು. ಖಂಡಿತಾ ಎಂದು ಮಾತು ಕೊಟ್ಟಿದ್ದ ಧ್ರುವ, ಅದನ್ನು ಈಡೇರಿಸಲಿಲ್ಲ. ಈಗ ರಿಲೀಸ್ ಆಗೋಕೆ ಸಮಯ ಕೂಡಿ ಬಂದಿದೆ.

    ಧ್ರುವ ಸರ್ಜಾ ಮದುವೆ ಸಂಭ್ರಮದ ನಡುವೆಯೇ ಪೊಗರು ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಏನೆಂದರೆ ಸಿನಿಮಾ ಡಿಸೆಂಬರಿನಲ್ಲೂ ಬರಲ್ಲ. ಬರೋದು ಜನವರಿಗೆ. ಅದೂ ಸಂಕ್ರಾAತಿಗೆ.

    ಡಿಸೆAಬರ್‌ನಲ್ಲಿ ಆಡಿಯೋ ರಿಲೀಸ್ ನಡೆಯಲಿದ್ದು, ಸಂಕ್ರಾAತಿ ಕಾಣಿಕೆಯಾಗಿ ಸಿನಿಮಾ ತೆರೆ ಕಾಣಲಿದೆ. ಸ್ವತಃ ನಿರ್ದೇಶಕ ನಂದ ಕಿಶೋರ್ ಈ ಮಾತು ಹೇಳಿರೋದ್ರಿಂತ ನಂಬಿಕೆ ಇಡಬಹುದು.

  • ಗೋಮಾತೆಯ ಜೊತೆ ಕಿಚ್ಚು ಹಾಯಿಸಿದ ದರ್ಶನ್

    darshan's sankranthi kichchu with bullocks

    ದರ್ಶನ್‍ಗೆ ಪ್ರಾಣಿಗಳು ಅದರಲ್ಲೂ ಹಸುಗಳೆಂದರೆ ಅದೆಷ್ಟು ಪ್ರೀತಿ ಅನ್ನೋದು ಗೊತ್ತಿಲ್ಲದ ವಿಷಯವೇನೂ ಅಲ್ಲ. ಒಂದು ಕಾಲದಲ್ಲಿ ಹಾಲು ಮಾರಿಯೇ ಜೀವನ ನಡೆಸಿದ್ದೆ ಎಂದು ಸದಾ ನೆನಪಿಸಿಕೊಳ್ಳುವ ದರ್ಶನ್‍ಗೆ, ಹಸುಗಳೆಂದರೆ ಅಕ್ಷರಶಃ ಗೋಮಾತೆಯೇ. ಇಂದಿಗೂ ಹಾಲು ಕರೆಯಲು ಕುಳಿತರೆ ಎಂಥ ಗೌಳಿಗನಿಗೂ ಸವಾಲು ಹಾಕಬಲ್ಲಷ್ಟು ವೇಗವಾಗಿ ಹಾಲು ಕರೆಯಬಲ್ಲರು ದರ್ಶನ್.

    ಇನ್ನು ಸಂಕ್ರಾಂತಿ ಎಂದರೆ ಸುಗ್ಗಿ ಹಬ್ಬ. ಈ ಹಬ್ಬದಲ್ಲಿ ಹಸುಗಳನ್ನು ಕಿಚ್ಚು ಹಾಯಿಸುವುದು ವಾಡಿಕೆ. ಹೊಸ ಲ್ಯಾಂಬೊರ್ಗಿನಿ ಖರೀದಿಸಿ ಮೈಸೂರಿನ ಫಾರ್ಮ್ ಹೌಸ್‍ಗೆ ಹೋದ ದರ್ಶನ್, ಅಲ್ಲಿ ಹಸುಗಳನ್ನು ಕಿಚ್ಚು ಹಾಯಿಸಿದ್ದಾರೆ. ಎರಡು ಎತ್ತುಗಳನ್ನು ಸಿಂಗಾರ ಮಾಡಿ, ಪೂಜಿಸಿ ಎತ್ತುಗಳ ಜೊತೆಯಲ್ಲೇ ಕಿಚ್ಚು ಹಾದಿದ್ದಾರೆ ದರ್ಶನ್.

  • ಸಂಕ್ರಾಂತಿಗೆ  ಕನ್ನಡ ಚಿತ್ರಗಳೇ ಚಿತ್ರಮಂದಿರಗಳಿಂದ ಔಟ್

    ಸಂಕ್ರಾಂತಿಗೆ  ಕನ್ನಡ ಚಿತ್ರಗಳೇ ಚಿತ್ರಮಂದಿರಗಳಿಂದ ಔಟ್

    ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಕನ್ನಡ ಚಿತ್ರಗಳೇ ಚಿತ್ರಮಂದಿರ ಸಿಗದೆ ಒದ್ದಾಡುತ್ತಿವೆ. ಇದು ಪ್ರತಿ ಬಾರಿಯೂ ವಿಚಿತ್ರದಂತೆ ಕಾಣುತ್ತಿರುವ ಸತ್ಯವೂ ಹೌದು. ಬೇರೆ ಬೇರೆ ಭಾಷೆಗಳ ದೊಡ್ಡ ದೊಡ್ಡ ಸ್ಟಾರ್ ಚಿತ್ರಗಳು ಬಂದಾಗ ಮೊದಲಿಗೆ ಪೆಟ್ಟು ತಿನ್ನುವುದೇ ಕನ್ನಡದ ಚಿತ್ರಗಳು. ಈ ಬಾರಿಯೂ ಹಾಗೆಯೇ ಆಗುತ್ತಿದೆ. ಈ ಸಂಕ್ರಾಂತಿಗೆ ಬೆಂಗಳೂರಿನಲ್ಲಿ ಕನ್ನಡ ಚಿತ್ರಗಳ ಶೋಗಳನ್ನೇ ಮುಲಾಜಿಲ್ಲದೆ ಕಿತ್ತು ಹಾಕಲಾಗಿದೆ. ಇದ್ದುದರಲ್ಲಿ ಫೈಟ್ ಕೊಡುತ್ತಿರುವ ಏಕೈಕ ಸಿನಿಮಾ ವೇದ.

    ತಮಿಳಿನ ವಾರಿಸು ಚಿತ್ರಕ್ಕೆ 760 ಹಾಗೂ ತುನಿವು ಚಿತ್ರಕ್ಕೆ 525 ಶೋ ನೀಡಲಾಗಿದೆ. ಒಂದು ವಿಜಯ್ ಚಿತ್ರವಾದ್ರೆ, ಮತ್ತೊಂದು ಅಜಿತ್ ಸಿನಿಮಾ. ಇದು ಬೆಂಗಳೂರಿನ ಶೋಗಳ ಲೆಕ್ಕ. ಇಬ್ಬರೂ ತಮಿಳು ಸೂಪರ್ ಸ್ಟಾರ್ ನಟರು. ಇಡೀ ರಾಜ್ಯದ ಥಿಯೇಟರುಗಳ ಲೆಕ್ಕಕ್ಕೆ ಬಂದರೆ ವಾರಿಸುಗೆ 150ಕ್ಕೂ ಹೆಚ್ಚು ಹಾಗೂ ತುನಿವುಗೆ 100ಕ್ಕೂ ಹೆಚ್ಚು ಥಿಯೇಟರ್ಸ್ ಸಿಕ್ಕಿವೆ.

    ಇನ್ನು ತೆಲುಗಿನ ಚಿರಂಜೀವಿ ಮತ್ತು ಬಾಲಕೃಷ್ಣ ಚಿತ್ರಗಳದ್ದೂ ಇದೇ ಕಥೆ. ಚಿರಂಜೀವಿ ಮತ್ತು ರವಿತೇಜ ಕಾಂಬಿನೇಷನ್ನಿನ ವಾಲ್ತೇರು ವೀರಯ್ಯ ಚಿತ್ರಕ್ಕೆ 150+ ಥಿಯೇಟರ್ಸ್ ಸಿಕ್ಕಿದ್ದರೆ, ಇದೇ ಮೊದಲ ಬಾರಿ ಬಾಲಕೃಷ್ಣ, ದುನಿಯಾ ವಿಜಯ್ ಅಭಿನಯದ ವೀರಸಿಂಹರೆಡ್ಡಿ ಚಿತ್ರ ಕೂಡಾ 150ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಬಿಡುಗಡೆಯಾಗುತ್ತಿದೆ.

    ಇವುಗಳ ಮಧ್ಯೆ ಗಟ್ಟಿಯಾಗಿ ನಿಂತಿರುವುದು ವೇದ ಮಾತ್ರ. ಬೆಂಗಳೂರಿನಲ್ಲಿ 30ಕ್ಕೂ ಹೆಚ್ಚು ಸ್ಕ್ರೀನ್ ವೇದ ಚಿತ್ರಕ್ಕೆ ಸಿಕ್ಕಿವೆ. ಉಳಿದಂತೆ ಯಾವ ಚಿತ್ರಗಳೂ ಒಂದಂಕಿಗಿಂತ ಹೆಚ್ಚು ಶೋಗಳನ್ನು ಪಡೆದುಕೊಂಡಿಲ್ಲ.