` prema baraha, - chitraloka.com | Kannada Movie News, Reviews | Image

prema baraha,

 • Arjun Sarja Says He Overreacted

  arjun sarja image

  Actor-director Arjun Sarja says he had overreacted regarding the review of 'Prema Baraha' and doesn't want to react about it.

  Earlier, there was news that Arjun was upset about reviews and ranking for his 'Prema Baraha'. Arjun had even said that he was upset, but didn't prolong it further. On Saturday, during the success meet of the film, the actor that he was upset, but should not have overreacted regarding the reviews.

  'I was upset about the reviews. I have not made a cheap film. But the kind of reaction and reviews from one section of the media was really saddening, But I should not have overreacted regarding the news' said Arjun Sarja.

 • Arjun Sarja Vs Chiru Sarja

  its arjun sarja vs chiru sarja

  It is an all-family fight on February 9. While Arjun Sarja directed Prema Baraha starring Chandan and Aishwarya Arjun is releasing on that day, his nephew Chiranjeevi Sarja's action film Samhara is also set to release the same day.

  In a strange coincidence Chiru has also acted in a song in Prema Baraha in a guest role. Two films with three members of the same family is releasing and clashing at the box office. Arjun Sarja has returned to direction with his ambitious film in which he is trying to establish his daughter. Samhara is also important for Chiru as he needs to get his footing as an action star.

   

 • Six Films To Release Tomorrow

  six films to release this friday

  Last week eight films were released and none of the films were successful to woo the audience. Meanwhile, six films are all set to release release this week.

  Chiranjeevi Sarja's 'Samhaara', Arjun Sarja directorial 'Prema Baraha', 'Raghuveera', 'Naanu Lover of Jaanu', 'Amalu' and 'Real Real' are the films that are getting released this week.

  Off the six, only 'Samhaara' and 'Prema Baraha' have created expectation among the audience. Which among the six will be successful to woo the audience is yet to be seen.

   

   

 • ಚಮಕ್ 100.. ಪ್ರೇಮಬರಹ 50

  two films two milestones

  ಕನ್ನಡ ಚಿತ್ರರಂಗಕ್ಕೆ ಇದು ಶುಭ ಸುದ್ದಿ. ಸಿಂಪಲ್ ಸುನಿ ನಿರ್ದೇಶನದ ಗಣೇಶ್, ರಶ್ಮಿಕಾ ಅಭಿನಯದ ಚಮಕ್ ಚಿತ್ರ 100 ದಿನ ಪೂರೈಸಿದೆ. 30ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 50 ದಿನ ಪ್ರದರ್ಶನ ಕಂಡಿದ್ದ ಚಮಕ್, ಮಲ್ಟಿಪ್ಲೆಕ್ಸ್ ಹಾಗೂ ಹಲವು ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಿಸಿದೆ. ಈಗಲೂ 10 ಚಿತ್ರಮಂದಿರಗಳಲ್ಲಿ ಚಮಕ್ ಪ್ರದರ್ಶನ ಕಾಣುತ್ತಿದೆ. ಚಮಕ್‍ನ ಗೆಲುವು ಇಡೀ ಚಿತ್ರತಂಡದ ಗೆಲುವು ಎಂದು ಖುಷಿ ಹಂಚಿಕೊಂಡಿದ್ದಾರೆ ಗಣೇಶ್.

  ಇನ್ನು ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಅಭಿನಯದ ಮೊದಲ ಸಿನಿಮಾ ಪ್ರೇಮಬರಹ ಕೂಡಾ 50 ದಿನ ಪೂರೈಸಿರುವುದು ವಿಶೇಷ. ಪ್ರೇಮಕಥೆ ಹಾಗೂ ಯೋಧರ ತ್ಯಾಗದ ಕಥೆ ಇದ್ದ ಪ್ರೇಮಬರಹ ಕೂಡಾ 50 ದಿನ ಪೂರೈಸಿದ್ದು, ಸರ್ಜಾ ಪುತ್ರಿಗೆ ಮೊದಲ ಗೆಲುವು ಸಿಕ್ಕಿದೆ.

 • ಪ್ರೇಮ ಬರಹ ಚಿತ್ರಕ್ಕೆ ಸಾಧು ಕೋಕಿಲ  ಮೆಚ್ಚುಗೆ

  sadhu kokila impressed with prema baraha

  ಪ್ರೇಮ ಬರಹ, ಅರ್ಜುನ್ ಸರ್ಜಾ ನಿರ್ದೇಶನದ, ಅರ್ಜುನ್ ಸರ್ಜಾ ಮಗಳು ಐಶ್ವರ್ಯಾ ಸರ್ಜಾ ಅಭಿನಯದ ಚಿತ್ರ. ಮೇಲ್ನೋಟಕ್ಕೆ ಲವ್‍ಸ್ಟೋರಿ ಎನ್ನಿಸಿದರೂ, ಚಿತ್ರದ ಫೀಲ್ ಬೇರೆಯೇ ಇದೆ. ಖಂಡಿತಾ ಇದು ಮಾಮೂಲಿ ಸಿನಿಮಾ ಅಲ್ಲ. ಇದು ಸಂಗೀತ ನಿರ್ದೇಶಕ ಸಾಧು ಕೋಕಿಲ, ಪ್ರೇಮಬರಹಕ್ಕೆ ನೀಡಿರುವ ಮೆಚ್ಚುಗೆ.

  ಕಾಮಿಡಿಯನ್ ಆಗಿ ಬ್ಯುಸಿಯಾಗಿರುವ ಸಾಧು ಅವರ ಹಿನ್ನೆಲೆ ಸಂಗೀತಕ್ಕೆ ಚಿತ್ರರಂಗದಲ್ಲಿ ತುಂಬಾನೇ ಬೇಡಿಕೆ ಇದೆ. ಅವರು ಕನ್ನಡದ ದಿ ಬೆಸ್ಟ್ ಹಿನ್ನೆಲೆ ಸಂಗೀತ ನಿರ್ದೇಶಕರೂ ಹೌದು. ಅಂಥಾ ಸಂಗೀತ ನಿರ್ದೇಶಕರಿಗೂ ರೀ-ರೆಕಾರ್ಡಿಂಗ್‍ಗೆ ಕುಳಿತ ತಕ್ಷಣ ಇದು ಮಾಮೂಲಿ ಸಿನಿಮಾ ಅಲ್ಲ ಅನ್ನಿಸೋಕೆ ಶುರುವಾಗಿದೆ. ಅದು ಸಾಧು ಅವರ ಕೈಗೆ ಬರುವ ಮುನ್ನ, ಮೂರು ಜನ ಟ್ರೈ ಮಾಡಿ ಬಿಟ್ಟುಹೋಗಿದ್ದ ಸಿನಿಮಾ. ಅದನ್ನು ಚಾಲೆಂಜ್ ಆಗಿಯೇ ಸ್ವೀಕರಿಸಿದ ಸಾಧು, ಪ್ರತಿ ದೃಶ್ಯವನ್ನೂ ಇಷ್ಟಪಟ್ಟು ಸಂಗೀತ ಕೊಟ್ಟಿದ್ದೇನೆ. ಅರ್ಜುನ್ ತಮಗೆ ಸರಿ ಎನ್ನಿಸುವ ತನಕ, ಬಿಡುವುದೇ ಇಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ, ನಾನು ಹಿನ್ನೆಲೆ ಸಂಗೀತ ನೀಡಿರುವ ಚಿತ್ರಗಳಲ್ಲಿ ಇದು ಒಂದು ಬೆಸ್ಟ್ ಸಿನಿಮಾ ಎಂದಿದ್ದಾರೆ.

  ಅಂದಹಾಗೆ ಚಿತ್ರಕ್ಕೆ ಸಂಗೀತ ನಿರ್ದೇಶನ ಜೆಸ್ಸಿ ಗಿಫ್ಟ್ ಅವರದ್ದು. ಹಿನ್ನೆಲೆ ಸಂಗೀತದ ಹೊಣೆಯಷ್ಟೇ ಸಾಧು ಕೋಕಿಲ ಅವರದ್ದು. ಚಿತ್ರದ ಹಾಡುಗಳು ಜನಪ್ರಿಯವಾಗುತ್ತಿವೆ. ಸಿನಿಮಾ ಇದೇ ವಾರ ತೆರೆ ಕಾಣುತ್ತಿದೆ.

   

 • ಪ್ರೇಮ ಬರಹ.. ಸುದೀಪ್ ಕಂಡಂತೆ..

  sudeep reviews aishwarya prema baraha

  `ಪ್ರೇಮ ಬರಹ' ಅರ್ಜುನ್ ಸರ್ಜಾ ಪುತ್ರ ಐಶ್ವರ್ಯಾ ಅಭಿನಯದ ಮೊದಲ ಚಿತ್ರ. ಚಂದನ್ ನಾಯಕರಾಗಿರುವ ಈ ಚಿತ್ರಕ್ಕೆ ಅರ್ಜುನ್ ಸರ್ಜಾ ನಿರ್ದೇಶಕ. ಸಿನಿಮಾ ನೋಡಿದ ಪ್ರೇಕ್ಷಕರು, ಚಿತ್ರಕ್ಕೆ ಫುಲ್ ಮಾಕ್ರ್ಸ್ ಕೊಟ್ಟಿದ್ದಾರೆ. ಒಬ್ಬೊಬ್ಬರ ವಿಮರ್ಶೆ ಒಂದೊಂದ್ ಥರಾ. `ಪ್ರೇಮ ಬರಹ' ಸಿನಿಮಾವನ್ನು ನೋಡಿದ ಕಿಚ್ಚ ಸುದೀಪ್ ಕೂಡಾ ಚಿತ್ರವನ್ನು ಮನಸಾರೆ ಮೆಚ್ಚಿದ್ದಾರೆ.

  ಪ್ರೇಮಬರಹ ಚಿತ್ರದಲ್ಲಿ ಜೀವನ ಮತ್ತು ಪ್ರೀತಿಯನ್ನು ಅದ್ಭುತವಾಗಿ ಸೆರೆಹಿಡಿಯಲಾಗಿದೆ. ಎರಡನ್ನೂ ಒಂದಕ್ಕೊಂದು ಬೆಸೆದಿರುವುದು ಎಂಥವರಿಗೂ ಇಷ್ಟವಾಗುತ್ತೆ. ಇಬ್ಬರು ಪ್ರೇಮಿಗಳು ಮತ್ತು ಸೈನಿಕರ ಹೋರಾಟದ ಬದುಕನ್ನು ಪ್ರೇಮಕಥೆಯೊಂದಿಗೆ ಬೆಸುಗೆ ಹಾಕುವ ಸವಾಲು ಇಷ್ಟವಾಗುತ್ತೆ.

  ಐಶ್ವರ್ಯಾ ಸರ್ಜಾ, ತಮ್ಮ ಪ್ರತಿಭೆಯಿಂದಲೇ ಬೆರಗು ಮೂಡಿಸುತ್ತಾರೆ. ಚಂದನ್ ಕೂಡಾ ಇಷ್ಟವಾಗುತ್ತಾರೆ. ಚಿತ್ರದಲ್ಲಿ ವ್ಹಾವ್ ಎನ್ನಿಸುವಂತ ದೃಶ್ಯಗಳಿವೆ. ಒಟ್ಟಾರೆ ಸಿನಿಮಾ ವಂಡರ್‍ಫುಲ್.

  ಇದು ಸುದೀಪ್ ನೀಡಿರುವ ಚಿತ್ರದ ವಿಮರ್ಶೆ. ಪ್ರೇಮಬರಹಕ್ಕೆ ಈಗಾಗಲೇ ಪ್ರೇಕ್ಷಕರ ಆಶೀರ್ವಾದ ಸಿಕ್ಕಿದೆ. ಥಿಯೇಟರುಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಚಿತ್ರ, ಉತ್ತಮ ಗಳಿಕೆಯನ್ನೂ ಮಾಡುತ್ತಿದೆ.

   

 • ಪ್ರೇಮ ಬರಹದಲ್ಲಿ ವಿಜಯನಾರಸಿಂಹ ಗೀತೆ..!

  vijay narasimha's lyrics in prema baraha

  ಭಾದ್ರಪದ ಶುಕ್ಲದ ಚೌತಿಯಂದು../ ಚಂದಿರನ ನೋಡಿದರೆ ಅಪವಾದ ತಪ್ಪದು../ ಗಜಮುಖನೆ ಗಣಮುಖನೆ ನಿನಗೆ ವಂದನೆ.. /ಕಾಪಾಡು ಶ್ರೀಸತ್ಯನಾರಾಯಣ../ ಈ ದೇಹದಿಂದ ದೂರನಾದೆ ಏಕೆ ಆತ್ಮನೆ../ ಸಕಲ ಕಾರ್ಯಕಾರಣೆಗೆ ಸಾಷ್ಟಾಂಗ ವಂದನೆ../ ನೀ ನಡೆವ ದಾರಿಯಲ್ಲಿ ನಗೆ ಹೂವು ಬಾಡದಿರಲಿ../ ಪಂಚಮವೇದ ಪ್ರೇಮದ ನಾದ../ಬಾರೆ ಬಾರೆ ಚಂದದ ಚೆಲುವಿನ ತಾರೆ../ ವಿರಹಾ ನೂರು ನೂರು ತರಹ../ ಪ್ರೀತಿನೇ ಆ ದ್ಯಾವ್ರು ತಂದಾ ಆಸ್ತಿ ನಮ್ಮ ಪಾಲಿಗೆ../ ಭಾರತ ಭೂಶಿರ ಮಂದಿರ ಸುಂದರಿ../ ಆ ದೇವರೆ ನುಡಿದಾ ಮೊದಲ ನುಡಿ ಪ್ರೇಮ.. ಪ್ರೇಮ.. ಪ್ರೇಮವೆಂಬಾ ಹೊನ್ನುಡಿ/ ಈ ಸಂಭಾಷಣೆ.. ನಮ್ಮ ಈ ಪ್ರೇಮ ಸಂಭಾಷಣೆ../ ಹದಿನಾಲ್ಕು ವರುಷ ವನವಾಸದಿಂದ ಮರಳಿ ಬಂದಳು ಸೀತೆ../ ಆಸೆಯ ಭಾವ ಒಲವಿನ ಜೀವ../ ನೋಡು ಬಾ ನೋಡು ಬಾ ನಮ್ಮೂರ../ ನೀನೇ ಸಾಕಿದಾ ಗಿಣಿ.. 

  ಒಂದಾ..ಎರಡಾ.. ವಿಜಯ ನಾರಸಿಂಹ ಬರೆದ ಎಲ್ಲ ಗೀತೆಗಳನ್ನೂ ಬಿಡಿ, ಅಮರಗೀತೆಗಳನ್ನಷ್ಟೇ ಹಿಡಿದು ಕುಳಿತರೆ ಪುಟಗಳು ತುಂಬಿ ಹೋಗುತ್ತವೆ. ಡಾ.ರಾಜ್ ಚಿತ್ರಗಳಲ್ಲಿ, ಪುಟ್ಟಣ್ಣ, ಸಿದ್ದಲಿಂಗಯ್ಯನವರ ಚಿತ್ರಗಳಲ್ಲಿ ವಿಜಯನಾರಸಿಂಹ ಹಾಡುಗಳು ಮುತ್ತುರತ್ನವಜ್ರಗಳಂತೆ ಕಂಗೊಳಿಸಿದ್ದವು. ಅವರು ನಿಧನರಾಗಿದ್ದು 2001ರಲ್ಲಿ. ಆ ಅದ್ಭುತ ಗೀತರಚನೆಕಾರನ ಹಾಡೊಂದು ಪ್ರೇಮಬರಹ ಚಿತ್ರದಲ್ಲಿದೆ. 

  ನಿಮಗೆಲ್ಲ ಗೊತ್ತಿರುವ ಹಾಗೆ, ಪ್ರೇಮಬರಹ, ಅರ್ಜುನ್ ಸರ್ಜಾ ಅವರ ಮಗಳ ಸಿನಿಮಾ. ಮಗಳನ್ನು ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲದಲ್ಲಿ ಲಾಂಚ್ ಮಾಡುತ್ತಿರುವ ಅರ್ಜುನ್ ಸರ್ಜಾ ಅವರಿಗೆ, ಚಿತ್ರದಲ್ಲಿ ಆಂಜನೇಯನ ಮೇಲೊಂದು ಹಾಡು ಬೇಕಿತ್ತು. ಯಾರಿಂದ ಬರೆಸುವುದು ಎಂದು ಯೋಚಿಸಿದಾಗ, ಹಿಂದೆಂದೋ ವಿಜಯ ನಾರಸಿಂಹ ಅವರು ಬರೆದಿದ್ದ ಹಾಡು ನೆನಪಾಯಿತು. ಎರಡನೇ ಯೋಚನೆಯನ್ನೇ ಮಾಡದೆ, ಆ ಹಾಡನ್ನು ಸಂಗೀತಕ್ಕೆ ಕೊಟ್ಟರು. ಅರ್ಜುನ್ ಜನ್ಯಾ ಅದ್ಭುತ ಸಂಗೀತವನ್ನೂ ಸಂಯೋಜಿಸಿದರು.

  ಆ ಹಾಡು ಪ್ರೇಮ ಬರಹ ಚಿತ್ರದಲ್ಲಿ ಮುತ್ತುರತ್ನವಜ್ರದಂತೆ ಮಿನುಗಲಿದೆ ಅನ್ನೊದು ಅರ್ಜುನ್ ಸರ್ಜಾ ಭರವಸೆ. ಆ ಹಾಡನ್ನಷ್ಟೇ  ಅಲ್ಲ, ನೀವು ಪ್ರೇಮ ಬರಹ ಚಿತ್ರದಲ್ಲಿ ಪ್ರತಾಪ್ ಚಿತ್ರದಲ್ಲಿ ಅರ್ಜುನ್ ಸರ್ಜಾ-ಸುಧಾರಾಣಿ ಮೇಲೆ ಚಿತ್ರಿತವಾಗಿದ್ದ ಪ್ರೇಮ ಬರಹ ಕೋಟಿ ತರಹ ಹಾಡನ್ನೂ ಕೇಳಬಹುದು. ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery