ಒಂದೊಂದು ಪದದ ಅರ್ಥವನ್ನೂ ಜಯಂತ್ ಕಾಯ್ಕಿಣಿ ಬಿಡಿಸಿ ಬಿಡಿಸಿ ಹೇಳಿದ್ದಾರೆ ಎಂದಿದ್ದರು ಯೋಗರಾಜ್ ಭಟ್. ಭಟ್ಟರು ಹಾಗೇಕೆ ಹೇಳಿದರು ಎಂದು ತಲೆ ತುರಿಸಿಕೊಂಡವರಿಗೆ ಗಾಳಿಪಟ 2 ಚಿತ್ರದ ಈ ಹಾಡು ಉತ್ತರ ನೀಡಿದೆ. ಜಯಂತ್ ಕಾಯ್ಕಿಣಿ ಪ್ರೇಮಸುಧೆಯನ್ನೇ ಹರಿಸಿದ್ದಾರೆ.
ಆಡದ ಮಾತನ್ನೆಲ್ಲ ಕದ್ದು ಕೇಳು..
ಅದನ್ನು ನನಗೆ ಹೇಳದೆ ಒದ್ದಾಡುವಂತೆ ಮಾಡು
ಮುಂಗೋಪದಿಂದ ಒದ್ದಾಡುವಂತೆ ಮಾಡು..
ನಾನು ಓದದ ಪುಸ್ತಕ.. ಎದೆಗೊತ್ತಿಕೊಳ್ಳುವೆಯಾ..
ಈ ಪುಸ್ತಕದ ಪ್ರತಿ ಸಾಲಿಗೂ ಬಿಸಿಯುಸಿರು ನೀಡಿ ಕಥೆಯಾಗಿಸು..
ಈ ಅರ್ಥದ ಸಾಲುಗಳನ್ನು ಅರೆದು..ಅರೆದು..ಸೋಸಿ ಬರೆದಿದ್ದಾರೆ ಪ್ರೇಮಿಗಳಿಗಾಗಿ.. ಪ್ರೇಮಿಗಳ ಹೃದಯಕ್ಕಾಗಿ. ಕಾಯ್ಕಿಣಿಯವರ ಪದಗಳನ್ನು ಅಷ್ಟೇ ಸಮರ್ಥವಾಗಿ ಎದೆಗೆ ದಾಟಿಸಿರೋದು ಸೋನು ನಿಗಮ್ ಅವರ ಕಂಠ ಮತ್ತು ಅರ್ಜುನ್ ಜನ್ಯಾ ಅವರ ಸಂಗೀತ.
ರಮೇಶ್ ರೆಡ್ಡಿ ನಿರ್ಮಾಣದ ಚಿತ್ರದಲ್ಲಿ ಗಣೇಶ್, ವೈಭವಿ ಶಾಂಡಿಲ್ಯ, ದಿಗಂತ್, ಶರ್ಮಿಳಾ ಮಾಂಡ್ರೆ, ಪವನ್ ಕುಮಾರ್, ಅನಂತ್ ನಾಗ್, ಬುಲೆಟ್ ಪ್ರಕಾಶ್ ನಟಿಸಿದ್ದಾರೆ. ಗಾಳಿಪಟ 2 ಆಗಸ್ಟ್ 12ಕ್ಕೆ ರಿಲೀಸ್ ಆಗುತ್ತಿದೆ.